Monday, September 7, 2020

ಅಂತರ್ಜಾಲದಲ್ಲಿ ಶಿಕ್ಷಕರ ದಿನಾಚರಣೆ



ವಿದ್ಯಾರ್ಥಿಗಳ ಕಲಿಕೆ ಬಗ್ಗೆ ಉತ್ಸಾಹ ತೋರಿಸುವ ಶಿಕ್ಷಕರನ್ನು ಸಮಾಜ ಸದಾ ಕಾಲ ಸ್ಮರಿಸುತ್ತದೆ ಎಂದು  ಮೈಸೂರು ಉಪನಿರ್ದೇಶಕರ ಕಛೇರಿಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ನಡೆದ ಅಂತರ್ಜಾಲದಲ್ಲಿ ಶಿಕ್ಷಕರ ದಿನಾಚರಣೆ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳೊಂದಿಗೆ ಸ್ನೇಹಜೀವಿಯಾಗಿ, ಪೋಷಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡರೆ ಅವರು ಯಾವಾಗಲೂ ಆದರ್ಶ ಶಿಕ್ಷಕರಾಗಿ ಹೊರಹೊಮ್ಮುತ್ತಾರೆ. ದಣಿವರಿಯದ ಸತ್ಯ ಶೋಧಕಿಯಾದ ಸಾವಿತ್ರಿ ಬಾಯಿ ಪುಲೆಯವರು ಸರಳಜೀವಿಯಾಗಿದ್ದು ಶಿಕ್ಷಕಿಯಾಗಿ, ಸಂಚಾಲಕಿಯಾಗಿ ಹಾಗೂ ಮುಖ್ಯೋಪಾದ್ಯಾಯಿನಿಯಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಲಕ್ಷಾಂತರ ವಿದ್ಯಾರ್ಥಿಗಳ ದಾರಿದೀಪವಾಗಿದ್ದರಿಂದ ಇಂದಿಗೂ ಕೂಡಾ ಅವರು ಎಲ್ಲರ ಜನಮಾನಸದಲ್ಲಿ ಉಳಿದಿದ್ದಾರೆ. ಅವರನ್ನು ಮಾದರಿಯನ್ನಾಗಿಟ್ಟುಕೊಂಡು ನಮ್ಮ ಶಿಕ್ಷಕ ವೃತ್ತಿಗೆ ನ್ಯಾಯ ಒದಗಿಸಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಉಪನಿರ್ದೇಶಕ ಸ್ವಾಮಿ ಜಗತ್ತಿನ ಶ್ರೇಷ್ಠ ತತ್ವಜಾÐನಿಯಾಗಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಆದರ್ಶ ಶಿಕ್ಷಕರಾಗಿ, ಭಾರತದ ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್‍ರವರು ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಪ್ರಾದ್ಯಾಪರಾಗಿ ಸೇವೆ ಸಲ್ಲಿಸಿರುವುದು ಸದಾ ಕಾಲ ಸ್ಮರಿಸುವಂತಹ ಸುಸಂದರ್ಭ ಹಾಗೂ ಅವರು ಕಲ್ಕತ್ತಾಗೆ ವರ್ಗಾವಣೆಯಾದಾಗ ಅವರನ್ನು ಬೀಳ್ಕೊಟ್ಟಂತಹ ಸಂದರ್ಭವಂತೂ ಹೃನ್ಮನಗಳಲ್ಲಿಯೂ ವರ್ಣಿಸಲಾಗದಂತಹ ಅಸಾಧಾರಣ ವ್ಯಕ್ತಿತ್ವ. ಮೈಸೂರಿನ ಶಿಷ್ಯವೃಂದದ ಬಗ್ಗೆ ರಾಧಾಕೃಷ್ಣರ್‍ರವರು ಸಭೆ ಸಮಾರಂಭಗಳಲ್ಲಿ ಪ್ರಸ್ಥಾಪಿಸಿ ಮೆಚ್ಚುಗೆ ಸೂಚಿಸುತ್ತಿದ್ದರು ಎಂದರು. ನಂತರ ಡಾ. ಪುಟ್ಟಪ್ಪ ಮುಡಿಗುಂಡ ಹಾಗೂ ಸುನಿತಾ ಅಂಗಡಿ ಕೊಡೇಕಲ್ಲ ಶಿಕ್ಷಕರ ಬಗ್ಗೆ ಕವಿತಾವಾಚನವನ್ನು ಮಾಡಿದರು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಚಂದ್ರಶೇಖರ ಕೆ.ಬಿ. ಬಸವರಾಜು ಬಿ. ಸಂಗೀತ ಕೆ. ಗುಣವತಿ ಎಂ. ಕೆ ಮನದಾಳದ ಮಾತುಗಳನ್ನು ಹಾಡುವುದರ ಮೂಲಕ ತಾವು ಸಾಗಿ ಬಂದ ಶಿಕ್ಷಕ ವೃತ್ತಿಯ ಪಯಣದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಡಾ. ಸುಮಂಗಳ ಆರ್. ಮುಖ್ಯೋಪಾದ್ಯಾಯಿನಿ ಸುಗಂಧಮ್ಮ ಜಯಪ್ಪ, ದುಬೈನ ಚಂದ್ರಶೇಖರ್ ಲಿಂಗದಹಳ್ಳಿ, ಮಸ್ಕತ್‍ನ ನಂದೀಶ್ವರ ದಾವಣಗೆರೆ, ಸರಸ್ವತಿ ರಾಮಣ್ಣ ಉಪಸ್ಥಿತರಿದ್ದರು. 

No comments:

Post a Comment