Monday, September 21, 2020

ಶಿವಪದರತ್ನಕೋಶ

 


ಶಿವಪದರತ್ನಕೋಶ

ಶಿವಪದ ರತ್ನಕೋಶ ಶಿವ ಧರ್ಮ ಸಂಸ್ಕೃತಿಯನ್ನು ಪರಿಚಯಿಸುವ ಬೃಹತ್ ಪದ ಭಾಂಡಾರ. ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಪದಗಳನ್ನು ಒಳಗೊಂಡಿದ್ದು, ವೀರಶೈವ ಲಿಂಗಾಯತ ಪಾರಿಭಾಷಿಕ ಪದಗಳನ್ನು ಒಳಗೊಂಡಿದೆ. ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಶುಭ ಹಾರೈಕೆ ಮಾಡಿದ್ದು, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳು ಬೆನ್ನುಡಿ ಬರೆದಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪರವರು, ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳರವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸಿ.ಟಿ.ರವಿರವರು ಸಂದೇಶ ಬರೆದಿದ್ದಾರೆ. ಡಾ.ನಂದೀಶ್ ಹಂಚೆ ಕಾರ್ಯನಿರ್ವಾಹಕ ಸಂಪಾದಕರಾಗಿದ್ದು, ಪ್ರೊ. ಜಿ.ಎಸ್.ಸಿದ್ಧಲಿಂಗಯ್ಯ, ಡಾ. ಟಿ.ವಿ.ವೆಂಕಟಾಚಲಶಾಸ್ತ್ರಿ, ಡಾ. ಎನ್.ಎಸ್.ತಾರಾನಾಥ್, ವಿದ್ವಾನ್ ಡಾ. ಎಚ್.ವಿ.ನಾಗರಾಜರಾವ್, ವಿದ್ವಾನ್ ಡಾ. ಸಿ. ಶಿವಕುಮಾರಸ್ವಾಮಿ, ಶ್ರೀ ಆರ್.ಎಸ್.ಪೂರ್ಣಾನಂದ ಸಂಪಾದಕ ಸಮಿತಿಯಲ್ಲಿದ್ದು ಕೃತಿ ರಚನೆಗೆ ಕಾರಣರಾಗಿದ್ದಾರೆ.

ಕೃತಿಯಲ್ಲಿ ಇರುವ ಕೆಲವು ಪದಗಳ ಅರ್ಥ ಇಂತಿರುತ್ತದೆ.

ಅಚೇತನಮೂರ್ತಿ : ಇಷ್ಟಲಿಂಗ, ಗುರುವು ಕೊಡುವ ಇಷ್ಟಲಿಂಗವು ಪರಶಿವನ ಕುರುಹು, ಅದು ಅಚೇತನ ಮೂರ್ತಿ, ಪರಶಿವನು ಚೇತನ ಮೂರ್ತಿ, ರೂಪಿನಲ್ಲಿ ಉಂಟೆಂದು ಹೋರುವಾಗ ಅದು ಅಚೇತನ ಮೂರ್ತಿ

ಅನುಕಲ್ಪ : ಕಲ್ಪ, ಅನುಕಲ್ಪ, ಉಪಕಲ್ಪ ಹಾಗೂ ಅಕಲ್ಪ ಎಂಬ ನಾಲ್ಕು ವಿಧ ಭಸ್ಮಗಳಲ್ಲಿ ಒಂದು. ಅರಣ್ಯದಲ್ಲಿ ಒಣಗಿದ ಹಸುವಿನ ಸಗಣಿಯನ್ನು ತಂದು ಪುಡಿ ಮಾಡಿ ಶಾಸ್ತ್ರೋಕ್ತವಾಗಿ ಸುಟ್ಟು ತಯಾರಿಸಿದ ಭಸ್ಮ

ಅಷ್ಟಶೀಲಗಳು : ಪಂಚಾಚಾರಗಳಲ್ಲಿ ಒಂದಾದ ಸದಾಚಾರಕ್ಕೆ ಸಂಬಂಧಿಸಿದ ಅಂಕುರಶೀಲ, ಉತ್ಪನ್ನಶೀಲ, ದ್ವಿದಲಶೀಲ, ಪ್ರವೃದ್ಧಶೀಲ, ಸಪ್ರಕಾಂಡಶೀಲ, ಸಶಾಖಶೀಲ, ಸಪುಷ್ಪಶೀಲ ಮತ್ತುಸಫಲಶೀಲ ಎಂಬ ಎಂಟು ಶೀಲಗಳು:  ಸಾಧಕನ ಆಧ್ಯಾತ್ಮ ಪ್ರಗತಿಯನ್ನು ಸೂಚಿಸುವ ಶೀಲಗಳು: ಇವುಗಳ ಪಾಲನೆಯಿಂದ ಇಷ್ಟವಾದ ಮಹತ್ಫಲದ ಪ್ರಾಪ್ತಿ.

ಈ ರೀತಿ ಅರ್ಥ ಹೊಂದಿರುವ ಈ ಬೃಹತ್ ಕೃತಿಯು ವಚನ ನಿರ್ವಚನ ಮಾಡಲು ತುಂಬಾ ಸಹಕಾರಿಯಾಗಿದ್ದು 896 ಪುಟಗಳನ್ನು ಹೊಂದಿದೆ. ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಹೊರತಂದಿರುವ ಇದರ ಮುಖಬೆಲೆ ರೂ 1000 ಈ ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ

9980393469

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು




No comments:

Post a Comment