ಡಾ. ವಚನಕುಮಾರಸ್ವಾಮಿ ಮತ್ತು ಶ್ರೀಮತಿ ರೂಪ ವಚನಕುಮಾರಸ್ವಾಮಿಯವರಥಟ್ಅಂತ ಹೇಳಿಈ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿದೆ.ಆ ಕಾರ್ಯಕ್ರಮದ ರೂಪವೆ ಹೊತ್ತಿಗೆ ಆಗಿ ಹೊರ ಬರುತ್ತಿರುವದು ಅತ್ಯಂತ ಸಂತೋಷದ ವಿಷಯ. ಇದೊಂದು ವಚನ ಸಾಹಿತ್ಯ ಕುರಿತು ಅತ್ಯಂತ ಪ್ರ
ಮುಖವಾದ ಮತ್ತು ಸಂಶೋಧನಾತ್ಮಕ ಕೃತಿಯಾಗಿದೆ. ಈ ತರಹದ ಕೃತಿಗಳು ಕನ್ನಡದಲ್ಲಿ ಇಲ್ಲ ಎಂದರೂ ತಪ್ಪಿಲ್ಲ. ಏಕೆಂದರೆ ಎಲ್ಲೊ ಪ್ರಾಸಂಗಿಕವಾಗಿ ಬಸವಾದಿ ಶರಣರ ಸಂಬಂಧಿಸಿದ ಪ್ರಶ್ನೆಗಳನ್ನು ನೋಡುತ್ತೇವೆ. ಆದರೆ ಶರಣರಿಗಾಗಿಯೆ ಅವರ ತತ್ವ ಸಿದ್ಧಾಂತಗಳಿಗಾಗಿಯೆ ಮೀಸಲಾಗಿರುವ ಕೃತಿ ಇದಾಗಿರುವದರಿಂದ ಆ ಶರಣ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ವಿಷಯಗಳಿಗೆ ಉತ್ತರವಾಗಿದೆ. ಓದಲು , ನೆನಪಿಟ್ಟುಕೊಳ್ಳಲು ಮತ್ತು ಎಲ್ಲದಕ್ಕೂ ಹೆಚ್ಚಾಗಿ ಬಸವಾದಿ ಪ್ರಮಥರ ಕುರಿತು ಪ್ರಸಾರ ಮಾಡುವ ಇಂತಹ ಕಾರ್ಯ ಕೈಕೊಂಡ ಶ್ರೀ ವಚನಕುಮಾರಸ್ವಾಮಿ ಮತ್ತು ಶ್ರೀಮತಿ ರೂಪಾ ವಚನಕುಮಾರಸ್ವಾಮಿ ಇರ್ವ ದಂಪತಿಗಳು ಅಭಿನಂದನಾರ್ಹರು.
ಡಾ. ನೀಲಾಂಬಿಕ ಪಾಟೀಲ, ಕಲಬುರಗಿ
ವಚನ ಸಾಹಿತ್ಯದ ರಸಪ್ರಶ್ನೆಗಳು ಎಂಬ ಈ ವಿನೂತನ ಹೊತ್ತಿಗೆಯು ಶರಣಾನುಯಾಯಿ ಕುಮಾರಸ್ವಾಮಿಯವರ ಪ್ರಾಯೋಗಿಕ ಹಾಗು ಸೃಜನಶೀಲ ಮನಸ್ಸಿನ ಫಲಶೃತಿ. ವಚನ ಸಾಹಿತ್ಯವನ್ನು ನಾವು ಇಂದಿನ ಮಕ್ಕಳು ಹಾಗು ಯುವಕರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಹಲವು ಮಾಧ್ಯಮಗಳ ಬಳಕೆಯ ಅಗತ್ಯವಿದೆ. ರಸಪ್ರಶ್ನೆಯ ಮಾಧ್ಯಮವು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ಅನ್ನ ಅನಿಸಿಕೆ. ಇಡೀ ಶರಣ ಸಾಹಿತ್ಯ ಹಾಗು ಶರಣರ ಕುರಿತ ಅನೇಕ ಸಂಗತಿಗಳು ಈ ಹೊತ್ತಿಗೆಯಲ್ಲಿ ಕಾಣಸಿಗುತ್ತವೆ. ಈ ತರಹದ ಪ್ರಯೋಗಾತ್ಮಕ ಪ್ರಯತ್ನಗಳು ಕುಮಾರಸ್ವಾಮಿಯವರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಮಾಡಲಿ ಹಾಗು ಓದುಗರು ಇದರ ಪ್ರಯೋಜನ ಪಡೆಯಲಿ ಎಂದು ಆಶಿಸುತ್ತೇನೆ.
~ ಡಾ. ಜೆ ಎಸ್ ಪಾಟೀಲ.
ಹನ್ನೆರಡನೆ ಶತಮಾನದಿಂದಲೂ ಏನೆಲ್ಲಾ ಅಡೆತಡೆ ಗಳು ಎದುರಾದರೂ ಎಲ್ಲವನ್ನೂ ಇಕ್ಕಿ ಮೆಟ್ಟಿ ೨೧ ನೇ ಶತಮಾನದ ವರೆಗೂ ಉಳಿದು ಬೆಳೆದು ಬರುವಲ್ಲಿ ನೂರಾರು ಶರಣರು, ಸಾವಿರಾರು ಶರಣರ ಅನುಯಾಯಿಗಳು, ಲಕ್ಷಾಂತರ ಅಭಿಮಾನಿಗಳು ಬಸವಾದಿ ಪ್ರಮಥರು ರಚಿಸಿದ ವಚನಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪೋಷಿಸುತ್ತಾ ಬಂದಿದ್ದಾರೆ. ಅಂತಹ ಮೇರು ವ್ಯಕ್ತಿತ್ವದ ಶರಣ ಶರಣೆಯರ ಪಂಕ್ತಿಯಲ್ಲಿ ಈ ಶತಮಾನದ ಈ ದಶಕದಲ್ಲಿ ಮುಂಚೂಣಿಯಲ್ಲಿ ನಿಂತು ಸತಿ ಪತಿ ಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂಬ ಶರಣರ ಸೂಳ್ನುಡಿಯನ್ನು ಬದುಕಿನ ಉಸಿರಾಗಿಸಿಕೊಂಡು, ವಚನ ಪ್ರಸಾರ ಹಾಗೂ ಪ್ರಚಾರ ಮಾಡಿಕೊಂಡು ಬರುತ್ತಿರುವ ಶರಣ ಡಾ.ಕುಮಾರಸ್ವಾಮಿ ಹಾಗೂ ಶರಣೆ ರೂಪ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
ವೃತ್ತಿಯಲ್ಲಿ ಶಾಲಾ ಶಿಕ್ಷಕರಾಗಿರುವ ಡಾ. ಕುಮಾರ ಸ್ವಾಮಿ ಅವರು ಪ್ರವೃತ್ತಿಯಲ್ಲಿ ವಚನಾಮೃತ ಧಾರೆಯ ಮೂಲಕ ಸಮಾಜದ ಶಿಕ್ಷಕರಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವುದು ಇತರರಿಗೆ ಸ್ಫೂರ್ತಿ ಮತ್ತು ಪ್ರೆರಕದಾಯಿಯಾಗಿದೆ.
ಕನ್ನಡ ಭಾಷೆ ಸಾಹಿತ್ಯಗಳಿಗೆ ಹೊಸ ಶಕ್ತಿ ಮತ್ತು ಅಭಿವ್ಯಕ್ತಿಯನ್ನು ತಂದು ಕೊಟ್ಟ ವಚನ ಸಾಹಿತ್ಯ ಚಳುವಳಿ ಇಂದಿಗೂ ಅತ್ಯಂತ ಪ್ರಸ್ತುತ ಎಂಬುದಕ್ಕೆ ಸಾಕ್ಷಿಯಾಗಿ ಶರಣ ಡಾ.ಕುಮಾರಸ್ವಾಮಿ ಹಾಗೂ ಶರಣೆ ರೂಪ ಅವರ ಪರಿಶ್ರಮ ಮತ್ತು ಶ್ರದ್ಧೆಗಳಿಂದ ಶರಣ ಸೌರಭ ಕೃತಿಯು ಹೊರಬಂದಿದೆ. ಅದರಲ್ಲಿ ೧೩೬ ಶಿವ ಶರಣರ ೩೩ ಶಿವ ಶರಣೆಯರ ವಚನಗಳನ್ನು ಒಳಗೊಂಡಿದ್ದು, ಅವುಗಳನ್ನು ಸಂಕಲಿಸಿ, ಅವುಗಳ ಅರ್ಥ , ತಾತ್ಪರ್ಯ ಗಳ ಜೊತೆಗೆ ಶರಣ ಶರಣೆಯರ ಜೀವನ ವಿವರಗಳನ್ನು ಬಹಳ ಅರ್ಥವತ್ತಾಗಿ ನಿರೂಪಿಸಲಾಗಿದೆ. ಇದರಿಂದ ವಚನವನ್ನು ಓದುಗರಿಗೆ ಹಾಗೂ ಅರ್ಥೈಸುವವರಿಗೆ ಬಹಳ ನೆರವಾಗುತ್ತದೆ.
ವಚನ ಸಾಹಿತ್ಯವನ್ನು ಮನೆ ಮನೆಗಳಿಗೆ ಮನ ಮನಗಳಿಗೆ ಮುಟ್ಟಿಸುವ ಇಂತಹ ಮಾದರಿ ಕೆಲಸವನ್ನು ಮಾಡುತ್ತಿರುವ ಶರಣ ದಂಪತಿಗಳಿಗಿಬ್ಬರಿಗೂ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳು.
ಶ್ರೀ ಚಂದ್ರಶೇಖರ್ , ಅಧ್ಯಕ್ಷರು,
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ದೆಹಲಿ ಘಟಕ, ನವದೆಹಲಿ
ಮತ್ತು
ಶ್ರೀಮತಿ ಹೇಮಶ್ರೀ ಚಂದ್ರಶೇಖರ್
ಶರಣ ಸಾಹಿತ್ಯ ಪ್ರಸಾರಕರು,
ಜಂಟಿ ನಿರ್ದೇಶಕರು
ಲೋಕಸಭೆ,
ಸಂಸತ್ ಭವನ
ವಿಶೇಷವಾಗಿ ವಚನ ಸಾಹಿತ್ಯದ ಕುರಿತಾದ ರಸಪ್ರಶ್ನೆಗಳಿಗೆ ಸೂಕ್ತವಾದ ಉತ್ತರಗಳನ್ನು ತಮ್ಮ "ಥಟ್ ಅಂತ ಉತ್ತರಿಸಿ" ಎಂಬೀ ಕೃತಿಯಲ್ಲಿ ವಚನ ಕುಮಾರಸ್ವಾಮಿಯವರು ನಮಗೆ ದೊರೆಕಿಸಿಕೊಟ್ಟು, ಆ ಮೂಲಕ ಕನ್ನಡದ ಸಾರಸ್ವತ ಲೋಕದ ಜ್ಞಾನ ಕಣಜವನ್ನು ಮತ್ತಷ್ಟು ಪ್ರಪುಲ್ಲಗೊಳಿಸಿದ್ದಾರೆ..!
ಬಸವಾದಿ ಪ್ರಮಥರೊಂದಿಗೆ ಅನೇಕ ಶ್ರೇಷ್ಠ ಆಧುನಿಕ ಶರಣರ; ಸಾಧಕರ; ಕವಿ ಸಾಹಿತಿಗಳ; ಸಿದ್ಧ ಸಂತ ಸಂಪನ್ನರ ವಿಚಾರಗಳ ಕುರಿತಾಗಿಯೂ ಈ ಸುಕೃತಿಯಲ್ಲಿ ಪ್ರಶ್ನೋತ್ತರ ಮಾಲಿಕೆಯ ರೂಪದಲ್ಲಿ ಬಹು ಅಪರೂಪದ ಸೂಕ್ಷ್ಮ ಮಾಹಿತಿಗಳನ್ನೊದಗಿಸಿ, ಕಾಡಲ್ಲ; ಮರ, ಮರವಲ್ಲ; ಬೀಜವೆಂಬಂತೆ, ಸುಜ್ಞಾನದ ಕರಿಯ ಕಿರಿಯ ಕನ್ನಡಿಯೊಳಡಗಿಸಿ ನಮಗಿಲ್ಲಿ ತೋರಿರುವ, ಅಕ್ಷರಶಃ ಅನನ್ಯವೂ ಅಪೂರ್ವವೂ ಆದ ಇಂತಹದ್ದೊಂದು ಕೃತಿಯನ್ನು ಕನ್ನಡಕ್ಕೆ ಕೊಟ್ಟಿರುವ ವಚನ ಕುಮಾರಸ್ವಾಮಿಯವರ ಅರಿವಿನ ಶ್ರಮ ನಿಜಕ್ಕೂ ಶ್ಲಾಘನೀಯ..!
ಈ ಸತ್ಕೃತಿಯ ಕಾರಣಕ್ಕಾಗಿ, ಕನ್ನಡ ಸಾಹಿತ್ಯ ಲೋಕದ ಪರವಾಗಿ ಶ್ರೀಯುತರಿಗೆ ಆತ್ಮಪೂರ್ವಕ ಅಭಿನಂದನೆಗಳು..!
ಶರಣಾರ್ಥಿಗಳೊಂದಿಗೆ...
-ಡಾ.ಜಯಪ್ಪ ಹೊನ್ನಾಳಿ
(ಜಯಕವಿ), ಮೈಸೂರು
ಓಂ ಶ್ರೀ ಗುರುಬಸವ ಲಿಂಗಾಯ ನಮಃ .
ವಿಶ್ವ ವಚನ ಫೌಂಡೇಶನ್ ಮೈಸೂರು ಇವರು ನಡೆಸಿಕೊಡುತ್ತಿರುವ " ಥಟ್ ಅಂತ ಉತ್ತರಿಸಿ " ಎಂಬ ವಚನ ಸಾಹಿತ್ಯದ ರಸಪ್ರಶ್ನೆಗಳನ್ನು ವಿಶೇಷವಾಗಿ ತಯಾರಿಸಿ ಅಂತರ್ಜಾಲದ ಮುಖಾಂತರ ಸಾಮಾಜಿಕ ಜಾಲತಾಣಗಳ ಮುಖಾಂತರ ಇಡೀ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಮನೆ ಮಾತಾಗಿದೆ.
ಥಟ್ ಅಂತ ಉತ್ತರಿಸಿ. ರಸಪ್ರಶ್ನೆಗಳು ಬಸವಾದಿ ಪ್ರಮಥರ ಜೀವನ ಸಾಧನೆ ಅವರ ವಚನಾಂಕಿತ ಅವರ ಕಾಲ ಹಾಗೂ ವಚನಗಳ ಅನುಭಾವ. ವಚನಗಳ ಶೀರ್ಷಿಕೆ. ಹೀಗೆ ಹಲವಾರು ಹೊಸ ಹೊಸ ವಿಚಾರಗಳನ್ನು ಸಾಮಾನ್ಯ ಜ್ಞಾನದ ಮೂಲಕ ಬೆಳಕು ಚಲ್ಲವ ಈ ಕಾರ್ಯಕ್ರಮ ಜನರಿಗೆ ಮುಟ್ಟಿಸುವ ಕಾರ್ಯಕ್ರಮವನ್ನು ಶರಣ ವಚನ ಕುಮಾರಸ್ವಾಮಿ ಹಾಗೂ ರೂಪ ಕುಮಾರಸ್ವಾಮಿ ಇವರು ಉತ್ತಮವಾಗಿ ನಡೆಸಿಕೊಡುತ್ತಿದ್ದಾರೆ ಸುಮಾರು 70ಕ್ಕೂ ಅಧಿಕ ಸರಣಿಗಳನ್ನು ನಡೆಸುವ ಮುಖಾಂತರ ಇವರ ಕಾರ್ಯ 100 ಸರಣಿಗಳನ್ನು ಮುಗಿಸಿ ಸಾವಿರವಾಗಲಿ ಇಷ್ಟೇ ಅಲ್ಲದೆ ಬಸವಾದಿ ಪ್ರಮಥರ ವಚನ ಸಾಹಿತ್ಯದ ಪುಸ್ತಕಗಳನ್ನು ದಿನದರ್ಶಿಕೆಗಳನ್ನು ಶರಣರ ಭಾವಚಿತ್ರಗಳನ್ನು ವಚನಗಳ ಕೈಪಿಡಿಗಳನ್ನು ಹೊರತಂದಿದ್ದಾರೆ ಅಲ್ಲದೆ ಶಾಲೆ ಶಾಲೆಗಳಿಗೆ ಹೋಗಿ ಶಾಲೆಗಳಲ್ಲಿ ವಚನ ಸಾಹಿತ್ಯವನ್ನು ಬಿತ್ತುವ ಕೆಲಸ ಮಾಡಿದ್ದಾರೆ ಜೊತೆಗೆ ಬಡ ಮಕ್ಕಳಿಗೆ ಉಚಿತ ಸಮವಸ್ತ್ರ ಉಚಿತ ಪುಸ್ತಕಗಳನ್ನು ಲೇಖನ ಸಾಮಗ್ರಿಗಳನ್ನು ನೀಡುತ್ತಾ ಬಂದಿದ್ದಾರೆ ಕರ್ನಾಟಕ ರಾಜ್ಯದ್ಯಂತ ಮಠಾಧಿಪತಿಗಳು ಮಾಡಬೇಕಾದ ಕೆಲಸವನ್ನು ಅವರಿಗಿಂತ ಹೆಚ್ಚಿನ ಮುಂಚೂಣಿಯಲ್ಲಿ ಈ ಶರಣ ದಂಪತಿಗಳು ಮಾಡಿಕೊಂಡು ಬರುತ್ತಿದ್ದಾರೆ ಇವರ ಸಾಧನೆ ಬಸವಾದಿ ಪ್ರಮಥರು ಮೆಚ್ಚುವಂತಹ ಕೆಲಸವಾಗಿದೆ ಮುಂದೊಂದು ದಿನ. ಇವರ ರಸಪ್ರಶ್ನೆಗಳನ್ನು ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಮಾಹಿತಿಯ ಖಣಜವಾಗಲಿದೆ ಎಂಬುದು ನಮ್ಮ ಹಾರೈಕೆ. ಇವರಿಗೆ ಬಸವಾದಿ ಪ್ರಮಥರು ಹೆಚ್ಚಿನ ಶಕ್ತಿ ಸಾಮರ್ಥ್ಯ ಆರೋಗ್ಯ ಆಯಸ್ಸು ಯಶಸ್ಸು.ಎಲ್ಲವನ್ನು ನೀಡಿ ಇನ್ನು ಹೆಚ್ಚು ಇವರಿಂದ ಬಸವ ಧರ್ಮ ಪ್ರಚಾರವಾಗಲಿ ಎಂದು ಶುಭ ಹಾರೈಸುತ್ತೇವೆ.
ಡಾ. ಶ್ರೀ ಜಯಬಸವಾನಂದ ಸ್ವಾಮೀಜಿ ವಿಶ್ವಧರ್ಮ ಪೀಠ ಜಯಬಸವ ತಪೋವನ ಚಿಕ್ಕಮಗಳೂರು.
*ನುಡಿದರೆ ಮುತ್ತಿನ ಹಾರದಂತಿರಬೇಕು ! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ! ನುಡಿದರೆ ಲಿಂಗ ಮೆಚ್ಚಿ ಅಹುದಹುದೇನಬೇಕು !ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ?*
ಎಂಬ ಅಣ್ಣ ಬಸವಣ್ಣನವರ ವಚನಕ್ಕೆ ಅನ್ವರ್ಥವಾಗುವಂತೆ ಡಾ. ವಚನ ಕುಮಾರಸ್ವಾಮಿ ಶರಣ ದಂಪತಿಗಳು ಸಂಪೂರ್ಣ ವಚನ ಸಾಹಿತ್ಯದ ಸಾರವನ್ನು ಪ್ರಶ್ನೆಗಳಾಗಿಸಿ "ಥಟ್ ಅಂತ ಉತ್ತರಿಸಿ" ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನದಲ್ಲಿ ಸಾಫಲ್ಯರಾಗಿದ್ದಾರೆಂದೇ ಹೇಳಬಹುದು. ಎಲ್ಲರೂ ಮೆಚ್ಚುವಂತೆ ಪಾರದರ್ಶಕವಾಗಿ ಮಾಡಿದ ಅರವತ್ತು ಕಾರ್ಯಕ್ರಮಗಳ ವಿವರಗಳನ್ನು ಓರಣವಾಗಿಸಿ, ಮಾಣಿಕ್ಯದಂತೆ ಸದಾ ಬೆಳಕು ಚೆಲ್ಲಲು ಸ್ಥಾಯಿರೂಪದಲ್ಲಿ ಪುಸ್ತಿಕೆಯಾಗಿಸಿ ಹೊರ ತರುತ್ತಿರುವುದು ತುಂಬಾ ಸಂತೋಷದ ವಿಷಯ. ಸರ್ವಾಂಗ ಸುಂದರವಾಗಿ ಮುದ್ರಣಗೊಂಡು ಹೊರಬರುತ್ತಿರುವ ಈ ಪುಸ್ತಕದಲ್ಲಿ ಬಸವಯುಗ, ಬಸವೋತ್ತರ ಯುಗದ ಹಾಗೂ ಅಜ್ಞಾತ ವಚನಕಾರರು ಹಾಗೂ ವಚನಕಾರ್ತಿಯರ ಹೆಸರುಗಳನ್ನು ಅಂಕಿತ ನಾಮಗಳನ್ನು ಹಾಗೂ ಅವರು ಬರೆದ ವಚನಗಳ ಸಂಖ್ಯೆಗಳ ಮಾಹಿತಿಯನ್ನು ಸಹ ಮುದ್ರಿಸಲಾಗಿದೆ. ಶರಣ ಸಾಹಿತ್ಯ ಪ್ರಚಾರಕ್ಕೆ *"ಶರಣು ವಿಶ್ವವಚನ ಫೌಂಡೇಶನ್, ಮೈಸೂರು"* ಅವರಿಂದ ಕೊಡುಗೆಗಳು ಇನ್ನೂ ಹೀಗೆ ಸದಾ ಬರುತ್ತಿರಲಿ, ಶರಣ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ನುಡಿದಂತೆ ನಡೆಯುತ್ತಿರುವ ಶರಣ ದಂಪತಿಗಳಿಗೆ ಶುಭ ಹಾರೈಕೆಗಳು.
ಅಶೋಕ ಗು ಲೋಣಿ, ಕೆಜಿಎಫ್
ಕಾರ್ಯದರ್ಶಿಗಳು,
ಕೋಲಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು.
*ಶುಭ ಹಾರೈಕೆಗಳು*
-------------------------------
ಶ್ರಿ ವಚನ ಕುಮಾರ ಸ್ವಾಮಿ ಅವರು ನನಗೆ ಹಲವು ವರ್ಷಗಳಿಂದ ಪರಿಚಯ ಅವರು ಮತ್ತು ಅವರ ಧರ್ಮ ಪತ್ನಿ ನಿರಂತರವಾಗಿ ಬಸವ ತತ್ವ ಸಿದ್ಧಾಂತಗಳನ್ನು ಪ್ರಸಾರ ಮಾಡುವ ಮೂಲಕ ಜನ ಮಾನಸಗಳಲ್ಲಿ ಶರಣರ ವಚನಗಳನ್ನು ತತ್ವ ಸಿದ್ಧಾಂತಗಳನ್ನು ಪ್ರಸಾರ ಮಾಡುತ್ತಿರುವ ಶರಣ ದಂಪತಿಗಳು .
ಇವರು ತಟ್ ಅಂತ ಹೇಳಿ ಎಂಬ ಶರಣರ ರಸ ಪ್ರಶ್ನೆ ಕಾರ್ಯಕ್ರಮ ನಿಜಕ್ಕೂ ತುಂಬಾ ಸುಂದರವಾಗಿ ಮೂಡಿ ಬರುತ್ತದೆ .
ಈಗ ಅವರು ಪುಸ್ತಕ ರೂಪದಲ್ಲಿ ತರುತ್ತಿರುವುದು ಸಂತಸದ ಸಂಗತಿ. ಅವರಿಬ್ಬರಿಗೂ ಬಸವಾದಿ ಪ್ರಮಥರ ಆಶೀರ್ವಾದ ಹರಕೆಗಳು ಇರಲಿ ಎಂದು ಆಶಿಸುತ್ತೇನೆ.
*ಡಾ ಶಶಿಕಾಂತ ಪಟ್ಟಣ* *ಅಧ್ಯಕ್ಷರು*
*ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ*
ಸತಿಪತಿಗಳೊಂದಾದ ಭಕ್ತಿ ಹಿತವಪ್ಪುವುದು ಶಿವಂಗೆ ಎನ್ನುವ ಶರಣರ ಮಾತಿನಂತೆ
ವಚನ ಕುಮಾರಸ್ವಾಮಿ ಹಾಗೂ ರೂಪಾ ವಚನಕುಮಾರ ಸ್ವಾಮಿ ದಂಪತಿಗಳು
ಮೈಸೂರು ಭಾಗದಲ್ಲಿ ಶರಣ ಸಾಹಿತ್ಯ ಪ್ರಚಾರಕರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.೧೨ನೇ ಶತಮಾನದ ಶರಣರ ಸಾಹಿತ್ಯ ಚಿಂತನೆಗಳನ್ನು ಜನಮಾನಸದಲ್ಲಿ ಹರಡಲು, ವಚನ ಸಾಹಿತ್ಯ ಓದುವಂತೆ ಪ್ರೇರೇಪಿಸಲು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಅದರ ಫಲವಾಗಿ ಹೊರಬಂದಿರುವ ಪುಸ್ತಕ *ಥಟ್ ಅಂತ ಹೇಳಿ*
ಇದೊಂದು ಶರಣು ಸಾಹಿತ್ಯದ ಮೇಲೆ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮ. ಒಟ್ಟು ೬೦ ರಸ ಸ್ಪರ್ಧೆಯನ್ನು ಏರ್ಪಡಿಸಿ, ಶರಣ ಸಾಹಿತ್ಯ ಓದಲು ಪ್ರೇರೇಪಿಸಿ , ಭಾಗವಹಿಸಿದವರಿಗೆ ಬಹುಮಾನವನ್ನು ನೀಡಿ ಅಭಿನಂದಿಸುವ ಕಾರ್ಯವನ್ನು ಮಾಡಿದ್ದಾರೆ.
ಹಾಗೆ ಹಮ್ಮಿಕೊಂಡಿದ್ದ ರಚನಾತ್ಮಕ ಚಟುವಟಿಕೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ ದಾಖಲಿಸಿ, ಮುಂದಿನ ಆಸಕ್ತ ಓದುಗರಿಗೆ ನೀಡಿದ್ದಾರೆ.
ಬಹು ಆಯ್ಕೆಯ ಪ್ರಶ್ನೆಗಳು ವೈವಿಧ್ಯತೆಯಿಂದ ಕೂಡಿವೆ.
ಚಿತ್ರ ಪ್ರಶ್ನೆಗಳು, ವ್ಯಕ್ತಿ ಚಿತ್ರಗಳು
ಶರಣರ ಸ್ಮಾರಕಗಳು ಮತ್ತು ಶರಣ ಸಾಹಿತ್ಯ ದುಡಿದ ಮಹನೀಯರು ಚಿತ್ರಗಳ ನೀಡಿ ದೃಕ್ಕ ಪರಿಚಯ ಮಾಡಿದ್ದಾರೆ. ಶರಣರ ವಚನಗಳ ವಚನಾಂಕಿತ ಮತ್ತು ದೊರೆತ ವಚನಗಳ ಸಂಖ್ಯೆ.ಹೀಗೆ ಶರಣರ ಮಾಹಿತಿಯನ್ನು ನೀಡುವ ಉಪಯುಕ್ತ ಪುಸ್ತಕ ಥಟ್ ಅಂತ ಹೇಳಿ.
ಡಾ. ನಿರ್ಮಲ ಬಟ್ಟಲ
ಪ್ರಾಚಾರ್ಯರು
ಮ.ನ.ರ.ಸಂಘದ ಶಿಕ್ಷಣ ಮಹಾವಿದ್ಯಾಲಯದ
ಬೆಳಗಾವಿ
12£Éà ±ÀvÀªÀiÁ£ÀzÀ°è
DgÀA¨sÀªÁzÀ ªÀZÀ£À PÁæAw, PÀ£ÀßqÀ ¸Á»vÀåzÀ°è ºÉƸÀ ªÉÄʰUÀ®Äè ¸ÀȶֹvÀÄ.
¸ÁªÀiÁfPÀ, £ÉÊwPÀ, DyðPÀÀ £ÀqÀĪÀ½PÉUÉ zÁj¢Ã¥ÀªÁVgÀĪÀ F ªÀZÀ£ÀUÀ¼ÀÄ EA¢UÀÆ
¥Àæ¸ÀÄÛvÀ. AiÀiÁªÀÅzÉà ¸ÁA¥ÀæzÁ¬ÄPÀ ²PÀët«gÀzÉAiÀÄÆ CzÀÄãvÀ ¸Á»vÀå gÀa¹zÀ F ªÀZÀ£ÀPÁgÀgÀ ¥Àæw¨sÉ
C¸ÁªÀiÁ£Àå. DzÀgÉ EwÛÃa£À ¢£ÀUÀ¼À°è ªÀZÀ£ÀUÀ¼À ªÀĺÀvÀéªÀ£ÀÄß EA¢£À AiÀÄĪÀ
¦Ã½UÉUÉ w½¹PÉÆqÀĪÀÅzÀgÀ°è £ÁªÀÅ
«¥sÀ®ªÁVzÉÝêÉ. F ¤nÖ£À°è ±ÀgÀtÄ «±Àé ªÀZÀ£À ¥sËAqÉñÀ£ï£À
¸ÀA¸ÁÜ¥ÀPÀgÁzÀ ²æÃ PÀĪÀiÁgÀ¸Áé«Ä ºÁUÀÆ gÀÆ¥À PÀĪÀiÁgÀ¸Áé«ÄAiÀĪÀgÀ ±ÀæªÀÄ
¤dPÀÆÌ ±ÁèWÀ¤ÃAiÀÄ. £Ár£ÁzÀåAvÀ ªÀZÀ£ÀUÀ¼À PÀA¥À£ÀÄß ºÀgÀqÀ®Ä F ªÀZÀ£À
zÀA¥ÀwUÀ¼ÀÄ C«gÀvÀªÁV ±Àæ«Ä¸ÀÄwÛzÁÝgÉ. ±Á¯ÉUÀ¼ÉqÉUÉ ªÀZÀ£ÀUÀ¼À £ÀrUÉ,
UÁæªÀÄzÉqÉUÉ ªÀZÀ£ÀUÀ¼À £ÀrUÉ, ºÁUÀÆ «ªÀzÉqÉAiÀİè C¸ÀASÁåAvÀ
PÁAiÀÄðPÀæªÀÄUÀ¼À£ÀÄß ¤ÃrgÀĪÀ EªÀgÀÄ £Ár£À ªÀģɪÀiÁvÁVzÁÝgÉ.
EªÀgÀ ªÀÄÄPÀÄlzÀ
ªÀÄvÉÆÛAzÀÄ UÀj xÀmï CAvÀ GvÀÛj¹ ªÀZÀ£À ¸Á»vÀå gÀ¸À¥Àæ±Éß PÁAiÀÄðPÀæªÀÄ, PÀ¼ÉzÀ
ªÀµÀð dÆ£ï£À°è AiÀÄÆlÆå¨ï£À°è DgÀA¨sÀªÁzÀ F D£ï ¯ÉÊ£ï QégÀhiï PÁAiÀÄðPÀæªÀÄPÉÌ
C¨sÀÆvÀ¥ÀƪÀð ¥ÀævÀ¸ÀàAzÀ£É PÀAqÀħA¢vÀÄ. ¥Àæw PÁAiÀÄðPÀæªÀÄzÀ°è «ªÀzsÀ
ªÀZÀ£ÀPÁgÀgÀ, CªÀgÀ ¸Á»vÀåzÀ PÀÄjvÀÄ ºÀvÀÄÛ ¥Àæ±ÉßUÀ¼À£ÀÄß PÉüÀ¯ÁVzÀÄÝ
«eÉÃvÀjUÉ §ºÀĪÀiÁ£À ¤ÃqÀ¯ÁVvÀÄÛ. E¢ÃUÀ F J¯Áè ¥Àæ±ÉßUÀ¼À£ÀÄß ºÁUÀÆ
GvÀÛgÀUÀ¼À£ÀÄß ¥ÀĸÀÛPÀ gÀÆ¥ÀzÀ°è ºÉÆgÀvÀgÀ¯ÁVzÉ. CAvÉAiÉÄà J¯Áè ªÀZÀ£ÀPÁgÀgÀ
ºÁUÀÆ ªÀZÀ£ÀPÁwðUÀ¼À «ªÀgÀ E°èzÉ. MnÖ£À°è F PÀÈwAiÀÄ£ÀÄß ªÀZÀ£À «±ÀéPÉÆÃ±À
JAzÉà PÀgÉAiÀħºÀÄzÀÄ. ¸Á»vÀåzÀ ªÉÄÃ¯É AiÀiÁªÀÅzÉà ¥ÀjÃPÉë
vÉUÉzÀÄPÉÆ¼ÀÄîªÀªÀjUÉ, D¸ÀPÀÛjUÉ F ¥ÀĸÀÛPÀ CvÀÄå¥ÀAiÀÄÄPÀÛ. EAvÀºÀ ¸ÀÄAzÀgÀ
¥ÀĸÀÛPÀ ºÉÆgÀvÀgÀ®Ä ±Àæ«Ä¹zÀ ²æÃAiÀÄÄvÀ PÀĪÀiÁgÀ¸Áé«Ä ºÁUÀÆ ²æÃªÀÄw gÀÆ¥À
PÀĪÀiÁgÀ¸Áé«ÄAiÀĪÀjUÉ £À£Àß «±ÉõÀ C©ü£ÀAzÀ£ÉUÀ¼ÀÄ
qÁ|| ºÉZï gÁeÉñÀéj
¤zÉÃð±ÀPÀgÀÄ
CPÀ̪ÀĺÁzÉë
CzsÀåAiÀÄ£À ªÀÄvÀÄÛ ¸ÀA±ÉÆÃzsÀ£Á «¨sÁUÀ
PÀ£ÁðlPÀ
gÁdå ªÀÄÄPÀÛ «±Àé«zÁ央AiÀÄ
ªÉÄʸÀÆgÀÄ
12 ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಅನುಬವ ಮಂಟಪದಿಂದ ಹಿಡಿದು, ಶರಣರ ವಚನಗಳು, ಶರಣರ ಅಂಕಿತನಾಮಗಳು ಹೀಗೆ ಹತ್ತು ಹಲವಾರು ವಿಚಾರಗಳನ್ನೊಳಗೊಂಡ ಹಾಗೂ ವಿಶ್ವಗುರು ಬಸವೇಶ್ವರರ ಸಂಪೂರ್ಣ ಮಾಹಿತಿ ಸಂಕ್ಷಿಪ್ತ ರೂಪದಲ್ಲಿ ತಿಳಿದುಕೊಳ್ಳಬಹುದಾದ "ಥಟ್ ಅಂತ ಉತ್ತರಿಸಿ" ವಚನ ಸಾಹಿತ್ಯ ರಸಪ್ರಶ್ನೆಗಳು ಪುಸ್ತಕಕ್ಕೆ ನನ್ನ ಅನಂತ ಶರಣು. ಇಂದಿನ ಥಟ್ ಅಂತ ನಡೆಸುವ ಜೀವನಶೈಲಿಗೆ ಅತ್ಯುತ್ತಮ ಪುಸ್ತಕ.
ಶುಭಾಕಾಮನೆಗಳೊಂದಿಗೆ,
ಪ್ರಶಾಂತ್ ಕಲ್ಲೂರು
ರಾಜ್ಯಾಧ್ಯಕ್ಷರು
ವೀರಶೈವ ಲಿಂಗಾಯತ ಮಹಾ ವೇದಿಕೆ
ಶರಣು ವಿಶ್ವ ವಚನ ಫೌಂಡೇಶನ್,
ಮೈಸೂರು.
ಇದರ ಸಂಸ್ಥಾಪಕರಾದ ಶರಣ ಡಾಕ್ಟರ್ ವಚನ ಕುಮಾರಸ್ವಾಮಿ, ಮೈಸೂರು. ಇವರು ಈ ಥಟ್ ಅಂತ ಹೇಳಿ ಉತ್ತರಿಸಿ. ವಚನ ಸಾಹಿತ್ಯ ರಸ ಪ್ರಶ್ನೆಗಳು ಈ ಮಾಲಿಕೆಯ ಪುಸ್ತಕವನ್ನು ತುಂಬಾ ಆಳವಾಗಿ ಅಧ್ಯಯನ ಮಾಡಿ, ಅತ್ಯದ್ಭುತವಾಗಿ ಹೊರತಂದಿದ್ದಾರೆ. ಇದು ಇನ್ನೂ ಸ್ವಲ್ಪ ಪರಿಷ್ಕರಣೆಗೊಂಡು ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಒಂದು ಶರಣ ಸಾಹಿತ್ಯದ ಕಿರು ಪುಸ್ತಕವನ್ನು ಮಾಡಿ ಕೊಡುವುದರಲ್ಲಿ ಯಶಸ್ವಿಯಾಗಲಿ, ಎಂದು ನಾನು ತುಂಬಾ ಹೆಮ್ಮೆಯಿಂದ ಹೇಳುತ್ತೇನೆ. ಇವರ ಈ ಮಹಾನ್ ಕಾರ್ಯ ಅತ್ಯದ್ಭುತ, ಇದರಲ್ಲಿ ಸೂಕ್ತವಾದ ಚಿತ್ರಗಳನ್ನು ಬಳಸಿಕೊಂಡು, ಬಿಟ್ಟ ಸ್ಥಳಗಳನ್ನು ತುಂಬಿರಿ ಎಂದು, ಈ ರೀತಿ ತುಂಬಾ ಹಲವಾರು ವಿಧದಲ್ಲಿ ಶೈಕ್ಷಣಿಕ ಪದ್ಧತಿಯಲ್ಲಿಯೇ ತಯಾರಿಸಿದ್ದಾರೆ. ಇವರಿಗೆ ತುಂಬಾ ತುಂಬಾ ಅಭಿನಂದನೆಗಳು. ಈ ಕುರಿತು ರಾಜ್ಯದ ಘನ ಸರ್ಕಾರವು ಇವರನ್ನು ಗುರುತಿಸಿ ಬೆಂಬಲಿಸಬೇಕು ಹಾಗೂ ನಾವೆಲ್ಲರೂ ಬೆಂಬಲಿಸೋಣ.
ಶರಣು ಶರಣಾರ್ಥಿಗಳು.
πππππππππππππππππππ
✍🏻 ಶ್ರೀನಿವಾಸ್ ಭದ್ರಣ್ಣವರ.
ಬೆಂಗಳೂರು.
.jpg)
.jpg)
.jpg)

.jpg)
.jpg)
.jpg)