Friday, February 12, 2021

ಧ್ವನಿ ಮುದ್ರಿಕೆ ಬಿಡುಗಡೆ

 

ಶರಣು ದಿನಚರಿ

 ಶರಣು ದಿನಚರಿ


ಶರಣು ವಿಶ್ವವಚನ ಫೌಂಡೇಷನ್ ಎಂಬ ಅಂತರಾಷ್ಟ್ರೀಯ ಸಂಸ್ಥೆಯನ್ನು 15 ಜನವರಿ 2016 ರಂದು ಶರಣು ದಿನಚರಿ ಹಾಗೂ ಶರಣು ಸಿ.ಡಿ ಯನ್ನು ಸಿದ್ಧಗಂಗಾಮಠದ ಶ್ರೀ ಶಿವಕುಮಾರಮಹಾಸ್ವಾಮಿಗಳು ಲೋಕಾರ್ಪಣೆ ಮಾಡುವುದರ ಮುಖಾಂತರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ  ತುಮಕೂರಿನ ಶ್ರೀ ಸಿದ್ಧಗಂಗಾಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ಧಗಂಗಾಮಹಸ್ವಾಮಿಗಳು ಕನಕಪುರ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಬೆಂಗಳೂರಿನ  ಬೇಲಿಮಠದ ಶ್ರೀ ಶಿವರುದ್ರಮಹಾಸ್ವಾಮಿಗಳು, ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕರಾದ ವಚನಕುಮಾರಸ್ವಾಮಿ, ನಿರ್ದೇಶಕರಾದ ರೂಪಕುಮಾರಸ್ವಾಮಿ, ಕನ್ನಡ ಚಳುವಳಿ ಮುಖಂಡರಾದ ಪಾಲನೇತ್ರ, ಕಣ್ಣೂರು ಕುಮಾರಸ್ವಾಮಿ,ವೀರಭದ್ರಯ್ಯ,ಐದು ಸಾವಿರಕ್ಕೂ ಹೆಚ್ಚು ಭಕ್ತವೃಂದ ಉಪಸ್ಥಿತರಿದ್ದರು
--------------------------------------------------------------------------------------------------------------


 ಶರಣು ವಿಶ್ವವಚನ ಫೌಂಡೇಶನ್ ಹೊರತಂದಿರುವ ಶರಣು ದಿನಚರಿಯನ್ನು ಸುತ್ತೂರು ಮಠದಲ್ಲಿ  27 ನವೆಂಬರ್ 2016 ರಂದು  ಸುತ್ತೂರು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರಮಹಾಸ್ವಾಮಿಗಳು ಮತ್ತು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್, ಸಂಸದ ಧ್ರುವನರಾಯಣ್, ಮಾಜಿ ಸಚಿವ ಎಂ.ಶಿವಣ್ಣ, ರಾಮದಾಸ್ ಪ್ರೊ. ಮಲ್ಲಿಕಾರ್ಜುನಪ್ಪ, ಮಾಜಿ ಸಚಿವ ವಿಶ್ವನಾಥ್, ವಿದ್ಯಾಪೀಠ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕರಾದ ವಚನಕುಮಾರಸ್ವಾಮಿ, ನಿರ್ದೇಶಕರಾದ ರೂಪಕುಮಾರಸ್ವಾಮಿ   ಉಪಸ್ಥಿತರಿದ್ದರು.
--------------------------------------------------------------------------------------------------------------------

ಶರಣು ವಿಶ್ವವಚನ ಫೌಂಡೇಶನ್  ನಂಜನಗೂಡು ತಾಲ್ಲೂಕಿನ ದೇವನೂರಿನ ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ಮಠದ ಆವರಣದಲ್ಲಿ 2018ರ ಶರಣು ದಿನಚರಿ ಬಿಡುಗಡೆಯನ್ನು ದೇವನೂರು ಮಠದ  ಮಹಾಂತಸ್ವಾಮಿಗಳು ಬಿಡುಗಡೆ ಮಾಡಿದರು.  ಕಾರ್ಯಕ್ರಮದಲ್ಲಿ ಬಿಡಗಲು ಪಡವಲು ವಿರಕ್ತ ಮಠದ ಮಹದೇವಸ್ವಾಮೀಜಿ, ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ, ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಮೈಸೂರು ಜಿಲ್ಲಾ ವೀರಶೈವ ಮಹಸಭಾದ ಅಧ್ಯಕ್ಷ ಹಿನ್ಕಲ್ ಬಸವರಾಜು, ಗುರುಮಲ್ಲೇಶ್ವರ ಸೇವಾ ಸಮಿತಿ ಅಧ್ಯಕ್ಷ ಡಿ.ಎಸ್.ಸದಾಶಿವಮೂರ್ತಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಎನ್. ಶ್ರೀಕಂಠಮೂರ್ತಿ, ಚಾಮರಾಜನಗರ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಸಿ.ರಾಜಶೇಖರಮೂರ್ತಿ, ಮಂಡ್ಯ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಎನ್. ಮಹದೇವಪ್ಪ, ಅನುರಾಗ ಸೇವಾಟ್ರಸ್ಠ್‍ನ ಸೋಮಶೇಖರಮೂರ್ತಿ, ಲೇಖಕ ನಗರ್ಲೆ ಶಿವಕುಮಾರ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಗೌರವ ಕಾರ್ಯzರ್ಶಿ ಪಂಪಾಪತಿ, ಪೂರ್ಣಿಮಾ ನಾಗೇಂದ್ರ, ಪ್ರೇಮ ಪ್ರಭುಸ್ವಾಮಿ ಉಪಸ್ಥಿತರಿದ್ದರು.
ಮೈಸೂರು: ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದ ಶರಣ ಧರ್ಮ ಶ್ರೇಷ್ಠವಾದುದು ಎಂದು ನಂಜನಗೂಡು ತಾಲ್ಲೂಕಿನ ದೇವನೂರಿನ ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ಮಠದ   ಮಹಾಂತಸ್ವಾಮಿಗಳು ಹೇಳಿದರು. ಮನದ ಮಲಿನತೆಯನ್ನು ಹೋಗಲಾಡಿಸಿ ಸುಸಂಸ್ಕøತ ವ್ಯಕ್ತಿತ್ವಕ್ಕೆ ಕಾರಣವಾಗುವ ಶರಣರ ವಚನಗಳನ್ನು ಶರಣು ದಿನಚರಿಯ ಮುಖಾಂತರ ಜನಮಾನಸಕ್ಕೆ ತಲುಪಿಸುತ್ತಿರುವ ಶರಣು ವಿಶ್ವವಚನ ಫೌಂಡೇಷನ್ ಕಾರ್ಯ ಶ್ಲಾಘನೀಯವಾದುದು. ನುಡಿದಂತೆ ನಡೆದ ಶರಣರ ವಚನಗಳನ್ನು ನಾವು ಪ್ರತಿನಿತ್ಯ ಅಧ್ಯಯನ ಮಾಡುವುದರ ಜೊತೆಗೆ ಅವುಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮುಖಾಂತರ ಸಂಸ್ಕಾರವಂತರಾಗಲು ಪ್ರಯತ್ನಿಸಬೇಕು. ಗುರುಮಲ್ಲೇಶ್ವರರು ಶರಣರ ಹಾದಿಯಲ್ಲಿ ನಡೆದು ದೇವನೂರು ಕ್ಷೇತ್ರವನ್ನು ಪವಿತ್ರ ಮಾಡಿದರು. ಈ ಕ್ಷೇತ್ರವನ್ನು ಸ್ಪರ್ಶಿಸುವುದರಿಂದ ಮೌಲ್ಯಯುತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು  ಎಂದರು. ಬಿಡಗಲು ಪಡವಲು ವಿರಕ್ತ ಮಠದ ಮಹದೇವಸ್ವಾಮೀಜಿ ಮಾತನಾಡಿ ಎಲ್ಲಾ ಧರ್ಮಗಳಿಗಿಂತ ಶರಣ ಧರ್ಮ ದೊಡ್ಡದು. ಶರಣರು ಸರ್ವರನ್ನು ನಮ್ಮವರೆಂದು ಅಪ್ಪಿಕೊಂಡರು. ನಾವು ಇತರೆ ಧರ್ಮಗಳನ್ನೂ ಕೂಡ ಗೌರವಿಸಿ ಆ ಧರ್ಮಗಳ ಉತ್ತಮ ಸಾರವನ್ನು  ತಿಳಿಯಬೇಕು. ಶರಣ ಧರ್ಮ ಎಲ್ಲಾ ಧರ್ಮಗಳ ಸಾರ ಒಳಗೊಂಡಿರುವುದರಿಂದ ವಿಶ್ವಧರ್ಮವಾಗುವ ಅರ್ಹತೆಯನ್ನು ಹೊಂದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಮಲೆಯೂರು ಗುರುಸ್ವಾಮಿ ಶರಣ ಸಾಹಿತ್ಯ ಮತ್ತು ಸಂದೇಶ ಎಂದೆಂದಿಗೂ ಪ್ರಸ್ತುತ. ಶರಣ ತತ್ವವನ್ನು ಗುರುಮಲ್ಲೇಶ್ವರರು ಅಳವಡಿಸಿಕೊಂಡು ಜನಮಾನಸದಲ್ಲಿ ಹಚ್ಚಹಸಿರಾಗಿ ಉಳಿದಿದ್ದಾರೆ. ದೇವನೂರು ಗ್ರಾಮ ಸರ್ವಧರ್ಮದ ಅನೇಕ ಕಲೆಗಳ ಗ್ರಾಮವಾಗಿತ್ತು ಇದಕ್ಕೆ ಸಾಕ್ಷಿಯಾಗಿ ಅನೇಕ ಮನೆತನಗಳ ಹೆಸರು ಧರ್ಮ ಮತ್ತು ಕಲೆಗಳ ಹೆಸರುಗಳನ್ನು ಒಳಗೊಂಡಿರುವುದನ್ನು ಇಂದು ನೋಡುತ್ತಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್‍ನ ದತ್ತಿದಾನಿಗಳು ಹಾಗೂ ಅಜೀವ ಸದಸ್ಯರಿಗೆ ಶರಣು ದಿನಚರಿ ನೀಡಿ ಗೌರವಿಸಲಾಯಿತು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಮೈಸೂರು ಜಿಲ್ಲಾ ವೀರಶೈವ ಮಹಸಭಾದ ಅಧ್ಯಕ್ಷ ಹಿನ್ಕಲ್ ಬಸವರಾಜು, ಗುರುಮಲ್ಲೇಶ್ವರ ಸೇವಾ ಸಮಿತಿ ಅಧ್ಯಕ್ಷ ಡಿ.ಎಸ್.ಸದಾಶಿವಮೂರ್ತಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಎನ್. ಶ್ರೀಕಂಠಮೂರ್ತಿ, ಚಾಮರಾಜನಗರ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಸಿ.ರಾಜಶೇಖರಮೂರ್ತಿ, ಮಂಡ್ಯ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಎನ್. ಮಹದೇವಪ್ಪ, ಅನುರಾಗ ಸೇವಾಟ್ರಸ್ಠ್‍ನ ಸೋಮಶೇಖರಮೂರ್ತಿ, ಲೇಖಕ ನಗರ್ಲೆ ಶಿವಕುಮಾರ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಗೌರವ ಕಾರ್ಯzರ್ಶಿ ಪಂಪಾಪತಿ, ಪೂರ್ಣಿಮಾ ನಾಗೇಂದ್ರ, ಪ್ರೇಮ ಪ್ರಭುಸ್ವಾಮಿ ಉಪಸ್ಥಿತರಿದ್ದರು.

------------------------------------------------------------------------------------------------------------------------





ಮೈಸೂರು: ಲೋಕಾನುಭವ ಮತ್ತು ಶಿವಾನುಭವವದ ಸೂತ್ರವನ್ನು ಪ್ರತಿಪಾದಿಸುವ ವಚನಗಳು ರಾಷ್ಟ್ರಕ್ಕೆ ಅರ್ಪಿತವಾಗಬೇಕು ಎಂದು ಬೆಂಗಳೂರು ಬಸವಸಮಿತಿ ಅಧ್ಯಕ್ಷರಾದ ಅರವಿಂದಜತ್ತಿರವರು ಹೇಳಿದರು. ನಂಜನಗೂಡು ತಾಲ್ಲೂಕು ಮಹದೇವತಾತರವರ ಐಕ್ಯಸ್ಥಳ ಸಂಗಮ ಕ್ಷೇತ್ರದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಹೊರತಂದಿರುವ 2019ರ ಶರಣು ದಿನಚರಿ ಬಿಡುಗಡೆ ಮಾಡಿ ಮಾತನಾಡಿದ ಅವರು ವಚನಗಳು ಬಸವಪ್ರಜೆÐ, ವಚನ ಪ್ರಜ್ಞೆ ಮತ್ತು ಲಿಂಗ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ದೆಹಲಿಯ ವಿಜ್ಷಾನ ಭವನದಲ್ಲಿ ರಾಷ್ಷ್ರದ ಪ್ರಧಾನಮಂತ್ರಿ ನರೇಂದ್ರಮೋದಿಯವರೊಂದಿಗೆ ಚರ್ಚೆ ಮಾಡಿದಾಗ ಅವರು ವಚನದಲ್ಲಿರುವ ಮೌಲ್ಯಗಳನ್ನು ಅರಿತು ವಿದೇಶಕ್ಕೆ ಹೋದಾಗಲೂ  ಒಂದು ವಚನವನ್ನು ಪ್ರಸ್ಥಾಪಿಸುತ್ತಿರುವುದು ವಚನಪ್ರಜ್ಞೆ ವಿಶ್ವಪ್ರಜ್ಞೆಯಾಗುತ್ತಿರುವುದಕ್ಕೆ ಸಾಕ್ಷಿ. ಇಂದು ಬಿಡುಗಡೆಯಾಗಿರುವ ಶರಣು ದಿನಚರಿಯಲ್ಲಿ ಇರುವಂತಹ ವಚನಗಳನ್ನು ಅಧ್ಯಯನ ಮಾಡಿ ಕೂಡಲಸಂಗಮದೇವ ಪದವನ್ನು ಅರ್ಥೈಸಿಕೊಂಡು ವಚನಗಳ ಪ್ರವೇಶ ಮಾಡಬೇಕು. ಇಂದು ನಾವು ತ್ರಿವೇಣಿಸಂಗಮದಲ್ಲಿ ಸೇರಿದ್ದೇವೆ ಅದಕ್ಕೆ ಪೂರಕವಾಗಿ ತನು, ಮನದ ಜೊತೆಗೆ ಘನದ ಕಡೆ ಸಾಗಬೇಕು. ತನ್ನ ತಾನರಿತು ತಾನಾರೆಂದು ತಿಳಿದೊಡೆ ತಾನೆ ದೇವರು ನೋಡಾ ಎಂಬ ಶರಣರ ಇಂಗಿತವನ್ನು ಮನದಟ್ಟುಮಾಡಿಕೊಳ್ಳಬೇಕು ಎಂದರು. ನಂತರ ಮಾತನಾಡಿದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕು ಶ್ರೀ ಓಲೆಮಠದ ಡಾ. ಅಭಿನವ ಚನ್ನಬಸವಮಹಾಸ್ವಾಮಿಗಳು ಮಾತನಾಡಿ 12ನೇ ಶತಮಾನದಲ್ಲಿ ಹಾನಗಲ್ಲಿನ ಕೆಲವು ಮನೆಗಳ ಗೋಡೆಗಳಲ್ಲಿ ವಚನಗಳ ದಾಖಲೆ ಅಡಗಿಸಿಟ್ಟು ವಚನ ಸಾಹಿತ್ಯವನ್ನು ರಕ್ಷಿಸಲಾಯಿತು. ಅಂತಹ ವಚನ ಸಾಹಿತ್ಯವನ್ನು ವಿಶ್ವವಚನ ಫೌಂಡೇಷನ್ ವಿವಿಧ ಆಯಾಮಗಳಲ್ಲಿ ವಿಶ್ವಕ್ಕೆ ಪರಿಚಯಿಸಲು ಹೊರಟಿರುವುದು ಸ್ತುತ್ಯಾರ್ಹವಾದ ವಿಚಾರವಾಗಿದೆ. ವಚನಗಳು ನಮ್ಮ ನಿತ್ಯಜೀವನದ ಬೈಬಲ್ ಆಗಬೇಕು. ಅದರಂತೆ ನುಡಿದು ನಡೆದಾಗ ನಮ್ಮ ವೈಯಕ್ತಿಕ ಅಭಿವೃದ್ದಿಯ ಜೊತೆಗೆ ದೇಶದ ಅಭಿವೃದ್ದಿಯು ಆಗುತ್ತದೆ ಎಂದರು.  ಕಾರ್ಯಕ್ರಮದಲ್ಲಿ ಮುದೋಳ ತಾಲ್ಲೂಕು ಶ್ರೀ ಕಿರಿಟೇಶ್ವರ ಮಠದ ಸ್ವಾಮಿನಾಥಮಹಾಸ್ವಾಮಿಗಳು, ಚಾಮರಾಜನಗರ ಶ್ರೀ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮಿಗಳು, ಶ್ರೀ ಮಹಾದೇವತಾತ ಭಕ್ತಮಂಡಳಿಯ ಅಧ್ಯಕ್ಷರಾದ ಕೆ.ವಿ.ಮರಿಸ್ವಾಮಪ್ಪ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್‍ನ ದತ್ತಿದಾನಿಗಳು, ಆಜೀವ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು.


2020ರ ಶರಣು ದಿನಚರಿಯನ್ನು ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಬಿಡುಗಡೆ ಮಾಡಿದರು


2021ರ ಶರಣು ದಿನಚರಿಯನ್ನು ಖ್ಯಾತ ಅಂಕಣಕಾರ ಡಾ. ಗುಬ್ಬಿಗೂಡು ರಮೇಶ್‌ ಬಿಡುಗಡೆ ಮಾಡಿದರು.


Thursday, February 4, 2021

ಆಜೀವ ಮತ್ತು ದತ್ತಿ ಸದಸ್ಯತ್ವ

ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವ ಪಡೆದರೆ ಪ್ರತೀ ವರ್ಷ ವಚನಾಧಾರಿತ ಶರಣು ದಿನಚರಿ ಹಾಗೂ ಬಸವಭಾನು ಸಂಚಿಕೆ  ಹಾಗೂ ವಚನ ಪುಸ್ತಕಗಳನ್ನು   ರಿಜಿಸ್ಟರ್ ಪಾರ್ಸಲ್ ಮೂಲಕ ತಮ್ಮ ವಿಳಾಸಕ್ಕೆ ಕಳಿಸಲಾಗುತ್ತದೆ.

                               ಶರಣು ದಿನಚರಿ - 2021

ಶರಣು ವಿಶ್ವವಚನ ಫೌಂಡೇಷನ್ ೨೦೧೬ ರಿಂದ ವಚನಾಧಾರಿತ ಶರಣು ದಿನಚರಿಯನ್ನು ಹೊರತರುತ್ತಿದ್ದು, ಇದುವರೆಗೆ ಸಿದ್ಧಗಂಗೆ ಶ್ರೀಗಳು, ಸುತ್ತೂರು ಶ್ರೀಗಳು, ದೇವನೂರು ಶ್ರೀಗಳು, ಸಂಗಮ ತಾತ, ಶ್ರೀ ಕೆಂಡಗಣ್ಣೇಶ್ವರಸ್ವಾಮಿರವರಿಗೆ ಅರ್ಪಣೆ ಮಾಡಲಾಗಿದ್ದು, ಈ ವರ್ಷ ಶ್ರೀ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರಿಗೆ ಅರ್ಪಣೆಯಾಗಿದೆ. ೨೦೨೧ರ ಶರಣು ದಿನಚರಿಯಲ್ಲಿ ೨೫ ಶಿವಶರಣೆಯರ ಪರಿಚಯ ಹಾಗೂ ಅವರ ವಚನಗಳು, ಶರಣರ ದಿನಾಚರಣೆ ಮತ್ತು ಸಂಸ್ಮರಣೋತ್ಸವ ಹಾಗೂ ದತ್ತಿ, ಆಜೀವ ಸದಸ್ಯರ ವಿವರವನ್ನು ಅಡಕಗೊಳಿಸಲಾಗಿದ್ದು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿರವರು ಸಂಪಾದಿಸಿದ್ದಾರೆ. ಬೆಲೆ ರೂ. 150



ಬಸವಭಾನು ವಾರ್ಷಿಕ ಸಂಚಿಕೆ

ಬಸವಭಾನು ವಾರ್ಷಿಕ ಸಂಚಿಕೆಯನ್ನು ೨೦೨೦ ರಿಂದ ಹೊರತರುತ್ತಿದ್ದು, ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಒಳಗೊಂಡಿದೆ. ವಾರ್ಷಿಕ ಕಾರ್ಯಚಟುವಟಿಕೆಗಳ ವರದಿ ಮತ್ತು ಛಾಯ ಚಿತ್ರಗಳ ಸಂಚಿಕೆಯನ್ನು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ರೂಪ ಕುಮಾರಸ್ವಾಮಿಯವರು ಸಂಪಾದಿಸಿದ್ದಾರೆ. ಬೀದರ್ ಜಿಲ್ಲೆ ಭಾಲ್ಕಿ ಮಠದ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ಮತ್ತು ಕರ್ನಾಟಕ ಸರ್ಕಾರದ ವಸತಿ ಸಚಿವರಾದ ಶ್ರೀ ಸೋಮಣ್ಣರವರು ಶುಭಸಂದೇಶ ನೀಡಿದ್ದಾರೆ. ರೂ. 150





                             ಅಕ್ಕನ ನೂರೆಂಟು ವಚನಗಳು

ಕನ್ನಡದ ಮೊಟ್ಟಮೊದಲ ಮಹಿಳಾ ಕವಯತ್ರಿ ಅಕ್ಕಮಹಾದೇವಿಯವರ ಸಂಕ್ಷಿಪ್ತ ಜೀವನ ಚರಿತ್ರೆ ಹಾಗೂ ಅವರ ೧೦೮ ವಚನಗಳನ್ನು ಶರಣ ಸಂಸ್ಕೃತಿಗಳ ಆರಾಧಕರಾದ ಶ್ರೀಮತಿ ಅಕ್ಕಮಹಾದೇವಿ ಮರಮ್ಕಲ್‌ರವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಅನುಭವಮಂಟಪದಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣ ಮುಂತಾದ ಶರಣರ ನಡುವೆ ನಡೆಯುವ ಸಂಭಾಷಣೆಯನ್ನು ಕೊಡಲಾಗಿದೆ. ಬೆಲೆ ರೂ. 50




                                       


ಎತ್ತಣ ಅಲ್ಲಮ ಎತ್ತಣ ರಮಣ

ಎತ್ತಣ ಅಲ್ಲಮ ಮತ್ತು ಎತ್ತಣ ರಮಣ ಕೃತಿಯನ್ನು ಡಾ ಪ್ರಸನ್ನ ಸಂತೆಕಡೂರುರವರು ಬರೆದಿದ್ದು, ರಮಣ ಮಹರ್ಷಿಗಳಂತಹ ಪೂಜ್ಯ ಸಾಧಕರಿಗೆ ಅಲ್ಲಮಪ್ರಭುಗಳು ದಾರಿದೀಪವಾಗಿರುವುದರ ಬಗ್ಗೆ ಹಾಗೂ ರಮಣ ಮಹರ್ಷಿಗಳ ಆಂತರಿಕ ಗುರು ಅಲ್ಲಮಪ್ರಭುಗಳೇ ಎಂದು ಸಾಕ್ಷೀಕರಿಸಿರುವ ಲೇಖಕರಾದ ಡಾ. ಪ್ರಸನ್ನ ಸಂತೇಕಡೂರು ಅವರ ಪ್ರಯತ್ನ ಶ್ಲಾಘನೀಯವಾದುದು. ಕೃತಿ 92 ಪುಟಗಳನ್ನು ಒಳಗೊಂಡಿದೆ. ಬೆಲೆ ರೂ 150





                            ವಚನ ಜ್ಞಾನೋದಯ

ವಿವಿಧ ಶರಣರ 200 ವಚನಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂಪಾದಿಸಿದ್ದಾರೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ರೂಪ ಕುಮಾರಸ್ವಾಮಿ. ಕೃತಿ 138 ಪುಟ ಹೊಂದಿದ್ದು ಇದರ ಬೆಲೆ ರೂ 150


ಹಾವಿನಹಾಳ ಕಲ್ಲಯ್ಯ

12 ನೇ ಶತಮಾನದ ಶರಣರಾದ ಹಾವಿನಹಾಳ ಕಲ್ಲಯ್ಯನವರ ಜೀವನ ಚರಿತ್ರೆ ಒಳಗೊಂಡ ಪುಸ್ತಕ ಇದಾಗಿದ್ದು, ಡಾ. ಪ್ರದೀಪ್ ಕುಮಾರ್ ಹೆಬ್ರಿ ಇದರ ಲೇಖಕರು. ಒಟ್ಟು 54 ಪುಟಗಳನ್ನು ಹೊಂದಿದ್ದು ಇದರ ಬೆಲೆ ರೂ. 60


                         ಜಗನ್ಮಾತೆ ಅಕ್ಕಮಹಾದೇವಿ

ಅಕ್ಕಮಹಾದೇವಿಯವರ ಸಂಪೂರ್ಣ ಜೀವನ ಚರಿತ್ರೆ ಒಳಗೊಂಡಿರುವ ಈ ಕೃತಿಯನ್ನು ನಗರ್ಲೆ ಶಿವಕುಮಾರ ರಚಿಸಿದ್ದು, 72 ಪುಟಗಳನ್ನು ಒಳಗೊಂಡಿದ್ದು, ಇದರ ಬೆಲೆ ರೂ 100




  ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವದ ವಿವರ 
ಆಜೀವ ಸದಸ್ಯತ್ವ ರೂ 5000 
ಶಾಲೆಗಳೆಡೆಗೆ ವಚನಗಳೆಡೆಗೆ ದತ್ತಿ ರೂ 10000 
ವಚನಗ್ರಾಮ ದತ್ತಿ ರೂ 25000 

*ಸಂಸ್ಥೆಯ ಸದಸ್ಯತ್ವ ಪಡೆದರೆ 80 G ಅಡಿಯಲ್ಲಿ ತೆರಿಗೆ ವಿನಾಯಿತಿ ದೊರೆಯುತ್ತದೆ*
 

       ಆಜೀವ ಸದಸ್ಯತ್ವ ಆಜೀವ ಸದಸ್ಯತ್ವ ಪಡೆದರೆ ಜೀವನ ಪರ್ಯಂತ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಸಂಸ್ಥೆಯಿಂದ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ ಹಾಗೂ ಶರಣು ದಿನಚರಿ ಅಥವಾ ಬಸವಭಾನು ಸಂಚಿಕೆಯಲ್ಲಿ ಆಜೀವ ಸದಸ್ಯರ ಭಾವಚಿತ್ರವನ್ನು ಹಾಕಲಾಗುತ್ತದೆ. ಶರಣು ದಿನಚರಿ ಮತ್ತು ಬಸವಭಾನು ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಅಭಿನಂದಿಸಲಾಗುತ್ತದೆ.

                 ಶಾಲೆಗಳೆಡೆಗೆ ವಚನಗಳ ನಡಿಗೆ ದತ್ತಿ
 ಶಾಲೆಗಳೆಡೆಗೆ ವಚನಗಳ ನಡಿಗೆ ದತ್ತಿ ನೀಡಿದರೆ ಪ್ರತೀ ವರ್ಷ ದತ್ತಿ ಸದಸ್ಯರು ತಿಳಿಸುವ ಶಾಲೆಗಳಲ್ಲಿ ಅವರ ಹೆಸರಿನಲ್ಲಿ ವಚನ ಕಾರ್ಯಕ್ರಮ ಹಮ್ಮಿಕೊಂಡು ಶಾಲೆಗಳಲ್ಲಿ ವಚನ ಹೇಳುವ ಎಲ್ಲಾ ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣ ಪತ್ರ ಮತ್ತು ವಚನ ಪುಸ್ತಕಗಳನ್ನು ನೀಡಲಾಗುತ್ತದೆ.ಹಾಗೂ ಪ್ರತೀ ವರ್ಷ ನಡೆಯುವ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ದತ್ತಿ ನೀಡಿದ ದಂಪತಿಗಳನ್ನು ಸನ್ಮಾನಿಸಲಾಗುತ್ತದೆ.


          ವಚನಗ್ರಾಮ ದತ್ತಿ
 ವಚನಗ್ರಾಮ ದತ್ತಿ ನೀಡಿದರೆ ಜೀವನ ಪರ್ಯಂತ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಸಂಸ್ಥೆಯಿಂದ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ ಹಾಗೂ ಶರಣು ದಿನಚರಿ ಅಥವಾ ಬಸವಭಾನು ಸಂಚಿಕೆಯಲ್ಲಿ ದಂಪತಿಗಳ ಭಾವಚಿತ್ರವನ್ನು ಹಾಕಲಾಗುತ್ತದೆ. ಶರಣು ದಿನಚರಿ ಮತ್ತು ಬಸವಭಾನು ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಅಭಿನಂದಿಸಲಾಗುತ್ತದೆ. ಹಾಗೂ ಪ್ರತೀ ವರ್ಷ ದತ್ತಿ ನೀಡಿದವರು ಹೇಳುವ ಗ್ರಾಮಗಳಲ್ಲಿ ವಚನಗ್ರಾಮ ಕಾರ್ಯಕ್ರಮ ಏರ್ಪಡಿಸಿ ಗ್ರಾಮದ ಪ್ರತೀ ಮನೆಗೆ ವಚನ ಪುಸ್ತಕ ನೀಡಿ ಆ ಗ್ರಾಮದ ಮಠ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಕಾರ್ಯಕ್ರಮ ಏರ್ಪಡಿಸಿ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಏರ್ಪಡಿಸಿ ನಂತರ ಆ ಗ್ರಾಮವನ್ನು ವಚನಗ್ರಾಮ ಎಂದು ಘೋಷಿಸಲಾಗುತ್ತದೆ ನಂತರ ದತ್ತಿ ನೀಡಿದ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ.
ಸಂಸ್ಥೆಯ ಸದಸ್ಯರಾಗ ಬಯಸುವವರು ಕೆಳಗಿನ ಖಾತೆಗೆ ಹಣ ಜಮಾ ಮಾಡಿ ತಮ್ಮ ವಿಳಾಸ ಕಳಿಸಿದರೆ ವಚನ ಪುಸ್ತಕಗಳನ್ನು ಕಳಿಸಲಾಗುತ್ತದೆ. 

SHARANU VISHWA VACHANA FOUNDATION 
A/C NO. 5192000100032101 
IFSC CODE KARB0000519 
KARNATAKA BANK 
BOGADI BRANCH, MYSORE 

ಗೂಗಲ್ ಪೇ ಅಥವಾ ಪೋನ್ ಪೇ ನಂಬರ್ 
8217081644 

ಹೆಚ್ಚಿನ ಮಾಹಿತಿಗಾಗಿ ಶರಣು ವಿಶ್ವವಚನ ಫೌಂಡೇಷನ್ 
ನಂ. 431, 7ನೇ ಮುಖ್ಯರಸ್ತೆ, 14 ನೇ ಅಡ್ಡರಸ್ತೆ 
ಶಾರದಾನಗರ ರೈಲ್ವೆ ಬಡಾವಣೆ
ಬೋಗಾದಿ ಮೈಸೂರು – 570026 
ಮೊಬೈಲ್ ನಂಬರ್ 8217081644 

ತಮ್ಮ ಸದಸ್ಯತ್ವದ ವಿವರವನ್ನು ಕೆಳಗಿನ ಗೂಗಲ್ ಲಿಂಕ್ ಬಳಸಿ ಭರ್ತಿ ಮಾಡಬಹುದು. 

https://forms.gle/yCYqnXFQcTWnubAf9 

ಸದಸ್ಯತ್ವ ಪಡೆದರೆ ದೊರೆಯುವ ಪ್ರಯೋಜನಗಳು 

ಅಂತರ್ಜಾಲ ಪ್ರವಚನ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರತೀ ಭಾನುವಾರ ಗೂಗಲ್ ಮೀಟ್ ನಲ್ಲಿ ಗುರುಗಳು ಹಾಗೂ ವಚನ ಸಾಹಿತ್ಯದ ಬಗ್ಗೆ ಹೆಚ್ಚು ಜ್ಞಾನವಿರುವ ಅನುಭಾವಿಗಳಿಂದ ಪ್ರವಚನ ಇರುತ್ತದೆ ಅದನ್ನು ವೀಕ್ಷಿಸಬಹುದು ಹಾಗೂ ಆ ಕಾರ್ಯಕ್ರಮದಲ್ಲಿ ತಾವೂ ಕೂಡಾ ವಚನಗೀತೆ ಹಾಡಬಹುದು. ಸ್ವಾಗತ ಮತ್ತು ವಂದನಾರ್ಪಣೆ ಮಾಡಬಹುದು. ಇದುವರೆಗೆ 20 ಪ್ರವಚನಗಳು ಆಗಿರುತ್ತವೆ. *ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಇದುವರೆಗೆ ನಡೆದಿರುವ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನಗಳ ಪತ್ರಿಕಾ ಸುದ್ಧಿ* https://sharanuvishwa.blogspot.com/2020/08/blog-post_31.html ವಚನ ಮಾಧುರ್ಯ ಪ್ರತೀ ಗುರುವಾರ ವಚನ ಮಾಧುರ್ಯ ಕಾರ್ಯಕ್ರಮ ಇರುತ್ತದೆ. ಇದು ವಾರದಿಂದ ವಾರಕ್ಕೆ ವಿಭಿನ್ನವಾಗಿರುತ್ತದೆ ಇದುವರೆಗೆ 1. ಮಹಿಳೆಯರಿಂದ ವಚನ ಮಾಧುರ್ಯ 2. ಖ್ಯಾತ ಗಾಯಕರು ಮತ್ತು ವಿಮರ್ಶಕರಿಂದ ವಚನ ಮಾಧುರ್ಯ 3. ಚಿಣ್ಣರಿಂದ ವಚನ ಮಾಧುರ್ಯ 4. ವಿಶೇಷ ಚೇತನರಿಂದ ವಚನ ಮಾಧುರ್ಯ 5. ಮೂರು ತಲೆ ಮಾರಿನವರಿಂದ ವಚನ ಮಾಧುರ್ಯ 6. ದಂಪತಿಗಳಿಂದ ವಚನ ಮಾಧುರ್ಯ 7. ಶಿಕ್ಷಕರಿಂದ ವಚನ ಮಾಧುರ್ಯ 8. ವಚನ ನೃತ್ಯ 9. ವಿದೇಶದಲ್ಲಿರುವ ಕನ್ನಡಿಗರಿಂದ ವಚನ ಮಾಧುರ್ಯ 10. ಜನಪ್ರತಿನಿಧಿಗಳಿಂದ ವಚನ ಮಾಧುರ್ಯ 11. ವಕೀಲರಿಂದ ವಚನ ಮಾಧುರ್ಯ 12. ರೈತರಿಂದ ವಚನ ಮಾಧುರ್ಯ 13. ಆರಕ್ಷಕರಿಂದ ವಚನ ಮಾಧುರ್ಯ 14. ವೈದ್ಯರಿಂದ ವಚನ ಮಾಧುರ್ಯ ಈ ಕಾರ್ಯಕ್ರಮಗಳಲ್ಲಿ ತಾವೂ ಭಾಗಿಯಾಗಬಹುದು. ಜೊತೆಗೆ ಕಾರ್ಯಕ್ರಮದ ಒಂದು ಭಾಗವಾಗಿ ತಾವು ವಚನಗೀತೆ ಹಾಡಬಹುದು. ಸ್ವಾಗತ ಅಥವಾ ವಂದನಾರ್ಪಣೆ ಮಾಡಬಹುದು. *ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಇದುವರೆಗೆ ನಡೆದಿರುವ ವಚನ ಮಾಧುರ್ಯ ಕಾರ್ಯಕ್ರಮಗಳ ಪತ್ರಿಕಾ ವರದಿ ನೋಡಲು ಕೆಳಗಿನ ಲಿಂಕ್ ಪ್ರೆಸ್ ಮಾಡಿ* https://sharanuvishwa.blogspot.com/2020/08/blog-post_2.html ವಿವಾಹ ವಧುವರರ ವೇದಿಕೆ ಸಂಸ್ಥೆಯ ಸದಸ್ಯತ್ವ ಪಡೆದರೆ ವಧು ವರರು ಇದ್ದರೆ ಅವರು ತಮ್ಮ ಪ್ರೊಫೈಲ್ ಕಳಿಸಿದರೆ ಅದನ್ನು ನಮ್ಮ ಸಂಸ್ಥೆಯಲ್ಲಿರುವ ಇತರ ಸದಸ್ಯರಿಗೆ ಕಳಿಸಿ ವಿವಾಹವಾಗಲು ಸಹಾಯ ಮಾಡಲಾಗುತ್ತದೆ. ಇದು ಉಚಿತವಾಗಿರುತ್ತದೆ.