ಶರಣು ದಿನಚರಿ
ಶರಣು ವಿಶ್ವವಚನ ಫೌಂಡೇಷನ್ ಎಂಬ ಅಂತರಾಷ್ಟ್ರೀಯ ಸಂಸ್ಥೆಯನ್ನು 15 ಜನವರಿ 2016 ರಂದು ಶರಣು ದಿನಚರಿ ಹಾಗೂ ಶರಣು ಸಿ.ಡಿ ಯನ್ನು ಸಿದ್ಧಗಂಗಾಮಠದ ಶ್ರೀ ಶಿವಕುಮಾರಮಹಾಸ್ವಾಮಿಗಳು ಲೋಕಾರ್ಪಣೆ ಮಾಡುವುದರ ಮುಖಾಂತರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀ ಸಿದ್ಧಗಂಗಾಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ಧಗಂಗಾಮಹಸ್ವಾಮಿಗಳು ಕನಕಪುರ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಬೆಂಗಳೂರಿನ ಬೇಲಿಮಠದ ಶ್ರೀ ಶಿವರುದ್ರಮಹಾಸ್ವಾಮಿಗಳು, ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕರಾದ ವಚನಕುಮಾರಸ್ವಾಮಿ, ನಿರ್ದೇಶಕರಾದ ರೂಪಕುಮಾರಸ್ವಾಮಿ, ಕನ್ನಡ ಚಳುವಳಿ ಮುಖಂಡರಾದ ಪಾಲನೇತ್ರ, ಕಣ್ಣೂರು ಕುಮಾರಸ್ವಾಮಿ,ವೀರಭದ್ರಯ್ಯ,ಐದು ಸಾವಿರಕ್ಕೂ ಹೆಚ್ಚು ಭಕ್ತವೃಂದ ಉಪಸ್ಥಿತರಿದ್ದರು
--------------------------------------------------------------------------------------------------------------
ಶರಣು ವಿಶ್ವವಚನ ಫೌಂಡೇಶನ್ ಹೊರತಂದಿರುವ ಶರಣು ದಿನಚರಿಯನ್ನು ಸುತ್ತೂರು ಮಠದಲ್ಲಿ 27 ನವೆಂಬರ್ 2016 ರಂದು ಸುತ್ತೂರು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರಮಹಾಸ್ವಾಮಿಗಳು ಮತ್ತು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್, ಸಂಸದ ಧ್ರುವನರಾಯಣ್, ಮಾಜಿ ಸಚಿವ ಎಂ.ಶಿವಣ್ಣ, ರಾಮದಾಸ್ ಪ್ರೊ. ಮಲ್ಲಿಕಾರ್ಜುನಪ್ಪ, ಮಾಜಿ ಸಚಿವ ವಿಶ್ವನಾಥ್, ವಿದ್ಯಾಪೀಠ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕರಾದ ವಚನಕುಮಾರಸ್ವಾಮಿ, ನಿರ್ದೇಶಕರಾದ ರೂಪಕುಮಾರಸ್ವಾಮಿ ಉಪಸ್ಥಿತರಿದ್ದರು.
--------------------------------------------------------------------------------------------------------------------
ಶರಣು ವಿಶ್ವವಚನ ಫೌಂಡೇಶನ್ ನಂಜನಗೂಡು ತಾಲ್ಲೂಕಿನ ದೇವನೂರಿನ ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ಮಠದ ಆವರಣದಲ್ಲಿ 2018ರ ಶರಣು ದಿನಚರಿ ಬಿಡುಗಡೆಯನ್ನು ದೇವನೂರು ಮಠದ ಮಹಾಂತಸ್ವಾಮಿಗಳು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಬಿಡಗಲು ಪಡವಲು ವಿರಕ್ತ ಮಠದ ಮಹದೇವಸ್ವಾಮೀಜಿ, ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ, ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಮೈಸೂರು ಜಿಲ್ಲಾ ವೀರಶೈವ ಮಹಸಭಾದ ಅಧ್ಯಕ್ಷ ಹಿನ್ಕಲ್ ಬಸವರಾಜು, ಗುರುಮಲ್ಲೇಶ್ವರ ಸೇವಾ ಸಮಿತಿ ಅಧ್ಯಕ್ಷ ಡಿ.ಎಸ್.ಸದಾಶಿವಮೂರ್ತಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಎನ್. ಶ್ರೀಕಂಠಮೂರ್ತಿ, ಚಾಮರಾಜನಗರ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಸಿ.ರಾಜಶೇಖರಮೂರ್ತಿ, ಮಂಡ್ಯ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಎನ್. ಮಹದೇವಪ್ಪ, ಅನುರಾಗ ಸೇವಾಟ್ರಸ್ಠ್‍ನ ಸೋಮಶೇಖರಮೂರ್ತಿ, ಲೇಖಕ ನಗರ್ಲೆ ಶಿವಕುಮಾರ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಗೌರವ ಕಾರ್ಯzರ್ಶಿ ಪಂಪಾಪತಿ, ಪೂರ್ಣಿಮಾ ನಾಗೇಂದ್ರ, ಪ್ರೇಮ ಪ್ರಭುಸ್ವಾಮಿ ಉಪಸ್ಥಿತರಿದ್ದರು.
ಮೈಸೂರು: ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದ ಶರಣ ಧರ್ಮ ಶ್ರೇಷ್ಠವಾದುದು ಎಂದು ನಂಜನಗೂಡು ತಾಲ್ಲೂಕಿನ ದೇವನೂರಿನ ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ಮಠದ ಮಹಾಂತಸ್ವಾಮಿಗಳು ಹೇಳಿದರು. ಮನದ ಮಲಿನತೆಯನ್ನು ಹೋಗಲಾಡಿಸಿ ಸುಸಂಸ್ಕøತ ವ್ಯಕ್ತಿತ್ವಕ್ಕೆ ಕಾರಣವಾಗುವ ಶರಣರ ವಚನಗಳನ್ನು ಶರಣು ದಿನಚರಿಯ ಮುಖಾಂತರ ಜನಮಾನಸಕ್ಕೆ ತಲುಪಿಸುತ್ತಿರುವ ಶರಣು ವಿಶ್ವವಚನ ಫೌಂಡೇಷನ್ ಕಾರ್ಯ ಶ್ಲಾಘನೀಯವಾದುದು. ನುಡಿದಂತೆ ನಡೆದ ಶರಣರ ವಚನಗಳನ್ನು ನಾವು ಪ್ರತಿನಿತ್ಯ ಅಧ್ಯಯನ ಮಾಡುವುದರ ಜೊತೆಗೆ ಅವುಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮುಖಾಂತರ ಸಂಸ್ಕಾರವಂತರಾಗಲು ಪ್ರಯತ್ನಿಸಬೇಕು. ಗುರುಮಲ್ಲೇಶ್ವರರು ಶರಣರ ಹಾದಿಯಲ್ಲಿ ನಡೆದು ದೇವನೂರು ಕ್ಷೇತ್ರವನ್ನು ಪವಿತ್ರ ಮಾಡಿದರು. ಈ ಕ್ಷೇತ್ರವನ್ನು ಸ್ಪರ್ಶಿಸುವುದರಿಂದ ಮೌಲ್ಯಯುತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದರು. ಬಿಡಗಲು ಪಡವಲು ವಿರಕ್ತ ಮಠದ ಮಹದೇವಸ್ವಾಮೀಜಿ ಮಾತನಾಡಿ ಎಲ್ಲಾ ಧರ್ಮಗಳಿಗಿಂತ ಶರಣ ಧರ್ಮ ದೊಡ್ಡದು. ಶರಣರು ಸರ್ವರನ್ನು ನಮ್ಮವರೆಂದು ಅಪ್ಪಿಕೊಂಡರು. ನಾವು ಇತರೆ ಧರ್ಮಗಳನ್ನೂ ಕೂಡ ಗೌರವಿಸಿ ಆ ಧರ್ಮಗಳ ಉತ್ತಮ ಸಾರವನ್ನು ತಿಳಿಯಬೇಕು. ಶರಣ ಧರ್ಮ ಎಲ್ಲಾ ಧರ್ಮಗಳ ಸಾರ ಒಳಗೊಂಡಿರುವುದರಿಂದ ವಿಶ್ವಧರ್ಮವಾಗುವ ಅರ್ಹತೆಯನ್ನು ಹೊಂದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಮಲೆಯೂರು ಗುರುಸ್ವಾಮಿ ಶರಣ ಸಾಹಿತ್ಯ ಮತ್ತು ಸಂದೇಶ ಎಂದೆಂದಿಗೂ ಪ್ರಸ್ತುತ. ಶರಣ ತತ್ವವನ್ನು ಗುರುಮಲ್ಲೇಶ್ವರರು ಅಳವಡಿಸಿಕೊಂಡು ಜನಮಾನಸದಲ್ಲಿ ಹಚ್ಚಹಸಿರಾಗಿ ಉಳಿದಿದ್ದಾರೆ. ದೇವನೂರು ಗ್ರಾಮ ಸರ್ವಧರ್ಮದ ಅನೇಕ ಕಲೆಗಳ ಗ್ರಾಮವಾಗಿತ್ತು ಇದಕ್ಕೆ ಸಾಕ್ಷಿಯಾಗಿ ಅನೇಕ ಮನೆತನಗಳ ಹೆಸರು ಧರ್ಮ ಮತ್ತು ಕಲೆಗಳ ಹೆಸರುಗಳನ್ನು ಒಳಗೊಂಡಿರುವುದನ್ನು ಇಂದು ನೋಡುತ್ತಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್‍ನ ದತ್ತಿದಾನಿಗಳು ಹಾಗೂ ಅಜೀವ ಸದಸ್ಯರಿಗೆ ಶರಣು ದಿನಚರಿ ನೀಡಿ ಗೌರವಿಸಲಾಯಿತು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಮೈಸೂರು ಜಿಲ್ಲಾ ವೀರಶೈವ ಮಹಸಭಾದ ಅಧ್ಯಕ್ಷ ಹಿನ್ಕಲ್ ಬಸವರಾಜು, ಗುರುಮಲ್ಲೇಶ್ವರ ಸೇವಾ ಸಮಿತಿ ಅಧ್ಯಕ್ಷ ಡಿ.ಎಸ್.ಸದಾಶಿವಮೂರ್ತಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಎನ್. ಶ್ರೀಕಂಠಮೂರ್ತಿ, ಚಾಮರಾಜನಗರ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಸಿ.ರಾಜಶೇಖರಮೂರ್ತಿ, ಮಂಡ್ಯ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಎನ್. ಮಹದೇವಪ್ಪ, ಅನುರಾಗ ಸೇವಾಟ್ರಸ್ಠ್‍ನ ಸೋಮಶೇಖರಮೂರ್ತಿ, ಲೇಖಕ ನಗರ್ಲೆ ಶಿವಕುಮಾರ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಗೌರವ ಕಾರ್ಯzರ್ಶಿ ಪಂಪಾಪತಿ, ಪೂರ್ಣಿಮಾ ನಾಗೇಂದ್ರ, ಪ್ರೇಮ ಪ್ರಭುಸ್ವಾಮಿ ಉಪಸ್ಥಿತರಿದ್ದರು.
------------------------------------------------------------------------------------------------------------------------
ಮೈಸೂರು: ಲೋಕಾನುಭವ ಮತ್ತು ಶಿವಾನುಭವವದ ಸೂತ್ರವನ್ನು ಪ್ರತಿಪಾದಿಸುವ ವಚನಗಳು ರಾಷ್ಟ್ರಕ್ಕೆ ಅರ್ಪಿತವಾಗಬೇಕು ಎಂದು ಬೆಂಗಳೂರು ಬಸವಸಮಿತಿ ಅಧ್ಯಕ್ಷರಾದ ಅರವಿಂದಜತ್ತಿರವರು ಹೇಳಿದರು. ನಂಜನಗೂಡು ತಾಲ್ಲೂಕು ಮಹದೇವತಾತರವರ ಐಕ್ಯಸ್ಥಳ ಸಂಗಮ ಕ್ಷೇತ್ರದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಹೊರತಂದಿರುವ 2019ರ ಶರಣು ದಿನಚರಿ ಬಿಡುಗಡೆ ಮಾಡಿ ಮಾತನಾಡಿದ ಅವರು ವಚನಗಳು ಬಸವಪ್ರಜೆÐ, ವಚನ ಪ್ರಜ್ಞೆ ಮತ್ತು ಲಿಂಗ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ದೆಹಲಿಯ ವಿಜ್ಷಾನ ಭವನದಲ್ಲಿ ರಾಷ್ಷ್ರದ ಪ್ರಧಾನಮಂತ್ರಿ ನರೇಂದ್ರಮೋದಿಯವರೊಂದಿಗೆ ಚರ್ಚೆ ಮಾಡಿದಾಗ ಅವರು ವಚನದಲ್ಲಿರುವ ಮೌಲ್ಯಗಳನ್ನು ಅರಿತು ವಿದೇಶಕ್ಕೆ ಹೋದಾಗಲೂ ಒಂದು ವಚನವನ್ನು ಪ್ರಸ್ಥಾಪಿಸುತ್ತಿರುವುದು ವಚನಪ್ರಜ್ಞೆ ವಿಶ್ವಪ್ರಜ್ಞೆಯಾಗುತ್ತಿರುವುದಕ್ಕೆ ಸಾಕ್ಷಿ. ಇಂದು ಬಿಡುಗಡೆಯಾಗಿರುವ ಶರಣು ದಿನಚರಿಯಲ್ಲಿ ಇರುವಂತಹ ವಚನಗಳನ್ನು ಅಧ್ಯಯನ ಮಾಡಿ ಕೂಡಲಸಂಗಮದೇವ ಪದವನ್ನು ಅರ್ಥೈಸಿಕೊಂಡು ವಚನಗಳ ಪ್ರವೇಶ ಮಾಡಬೇಕು. ಇಂದು ನಾವು ತ್ರಿವೇಣಿಸಂಗಮದಲ್ಲಿ ಸೇರಿದ್ದೇವೆ ಅದಕ್ಕೆ ಪೂರಕವಾಗಿ ತನು, ಮನದ ಜೊತೆಗೆ ಘನದ ಕಡೆ ಸಾಗಬೇಕು. ತನ್ನ ತಾನರಿತು ತಾನಾರೆಂದು ತಿಳಿದೊಡೆ ತಾನೆ ದೇವರು ನೋಡಾ ಎಂಬ ಶರಣರ ಇಂಗಿತವನ್ನು ಮನದಟ್ಟುಮಾಡಿಕೊಳ್ಳಬೇಕು ಎಂದರು. ನಂತರ ಮಾತನಾಡಿದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕು ಶ್ರೀ ಓಲೆಮಠದ ಡಾ. ಅಭಿನವ ಚನ್ನಬಸವಮಹಾಸ್ವಾಮಿಗಳು ಮಾತನಾಡಿ 12ನೇ ಶತಮಾನದಲ್ಲಿ ಹಾನಗಲ್ಲಿನ ಕೆಲವು ಮನೆಗಳ ಗೋಡೆಗಳಲ್ಲಿ ವಚನಗಳ ದಾಖಲೆ ಅಡಗಿಸಿಟ್ಟು ವಚನ ಸಾಹಿತ್ಯವನ್ನು ರಕ್ಷಿಸಲಾಯಿತು. ಅಂತಹ ವಚನ ಸಾಹಿತ್ಯವನ್ನು ವಿಶ್ವವಚನ ಫೌಂಡೇಷನ್ ವಿವಿಧ ಆಯಾಮಗಳಲ್ಲಿ ವಿಶ್ವಕ್ಕೆ ಪರಿಚಯಿಸಲು ಹೊರಟಿರುವುದು ಸ್ತುತ್ಯಾರ್ಹವಾದ ವಿಚಾರವಾಗಿದೆ. ವಚನಗಳು ನಮ್ಮ ನಿತ್ಯಜೀವನದ ಬೈಬಲ್ ಆಗಬೇಕು. ಅದರಂತೆ ನುಡಿದು ನಡೆದಾಗ ನಮ್ಮ ವೈಯಕ್ತಿಕ ಅಭಿವೃದ್ದಿಯ ಜೊತೆಗೆ ದೇಶದ ಅಭಿವೃದ್ದಿಯು ಆಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುದೋಳ ತಾಲ್ಲೂಕು ಶ್ರೀ ಕಿರಿಟೇಶ್ವರ ಮಠದ ಸ್ವಾಮಿನಾಥಮಹಾಸ್ವಾಮಿಗಳು, ಚಾಮರಾಜನಗರ ಶ್ರೀ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮಿಗಳು, ಶ್ರೀ ಮಹಾದೇವತಾತ ಭಕ್ತಮಂಡಳಿಯ ಅಧ್ಯಕ್ಷರಾದ ಕೆ.ವಿ.ಮರಿಸ್ವಾಮಪ್ಪ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್‍ನ ದತ್ತಿದಾನಿಗಳು, ಆಜೀವ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
2020ರ ಶರಣು ದಿನಚರಿಯನ್ನು ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಬಿಡುಗಡೆ ಮಾಡಿದರು
2021ರ ಶರಣು ದಿನಚರಿಯನ್ನು ಖ್ಯಾತ ಅಂಕಣಕಾರ ಡಾ. ಗುಬ್ಬಿಗೂಡು ರಮೇಶ್ ಬಿಡುಗಡೆ ಮಾಡಿದರು.


No comments:
Post a Comment