Saturday, December 19, 2020

ಸಾಕ್ಷ್ಯ ಚಿತ್ರ

 

ವಿಜಯಕರ್ನಾಟಕ ಪತ್ರಿಕೆಯಲ್ಲಿ


ಮೈಸೂರು ಮಿತ್ರ ಪತ್ರಿಕೆಯಲ್ಲಿ





Saturday, December 12, 2020

ರೂಪ ಕುಮಾರಸ್ವಾಮಿ ಪರಿಚಯ

  












ರೂಪ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್


ಶ್ರೀಮತಿ ರೂಪಕುಮಾರಸ್ವಾಮಿಯವರು ಬೆಂಗಳೂರಿನಲ್ಲಿ ಶ್ರೀಮತಿ ನಾಗರತ್ನ ಮತ್ತು ಶ್ರೀ ಬಸವರಾಜುರವರ ಸುಪುತ್ರಿಯಾಗಿ 8.1.1985ರಲ್ಲಿ ಬೆಂಗಳೂರಿನ ಉದಯನಗರದಲ್ಲಿ ಜನಿಸಿದರು. ಬೆಂಗಳೂರಿನ ಇಂದಿರಾನಗರದ ಐ.ಎನ್.ಪಿ.ಎಸ್ ಸಂಸ್ಥೆಯಲ್ಲಿ ಪ್ರಾಥಮಿಕ, ಪ್ರಾಢ  ಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಮುಗಿಸಿ, ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಚಾಮನಹಳ್ಳಿ ಹುಂಡಿ ಗ್ರಾಮದ ಡಾ. ವಚನಕುಮಾರಸ್ವಾಮಿಯವರನ್ನು ವಿವಾಹವಾಗುತ್ತಾರೆ. ನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ಆಂಗ್ಲ ವಿಷಯದಲ್ಲಿ ಎಂ.ಎ., ಸ್ನಾತಕೋತ್ತರ ಪದವಿ ಪಡೆದು ಮೈಸೂರು ಮತ್ತು ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ, ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಪತಿಯವರೊಡಗೂಡಿ ಶರಣು ವಿಶ್ವವಚನ ಫೌಂಡೇಷನ್ ಎಂಬ ಅಂತರಾಷ್ಟ್ರೀಯ ಸಂಸ್ಥೆ ಸ್ಥಾಪಿಸಿ, ಅದರ ಮುಖಾಂತರ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸಲು ಶಾಲೆಗಳೆಡೆಗೆ ವಚನಗಳ ನಡಿಗೆ, ವಚನಗ್ರಾಮ, ಸಸ್ಯೋತ್ಸವ,ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ, ಅನಾಥಾಶ್ರಮಗಳೆಡೆಗೆ ವಚನಗಳ ನಡಿಗೆ, ಕಾಲೇಜಿನೆಡೆಗೆ ವಚನಗಳ ನಡಿಗೆ ಮುಂತಾದ ಹತ್ತು ಹಲವು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಹದಿನೈದು ದೇಶ ಹಾಗೂ ಹತ್ತು ರಾಜ್ಯಗಳಿಗೆ ಶರಣ ಸಾಹಿತ್ಯವನ್ನು ಅಂತರ್ಜಾಲದ ಮೂಲಕ ತಲುಪಿಸುತ್ತಿದ್ದಾರೆ. ಇದುವರೆಗೆ ನೂರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿರುತ್ತಾರೆ. ಇದುವರೆಗೆ ದೇವನೂರು ಶ್ರೀ ಗುರುಮಲ್ಲೇಶ್ವರರು, ಗದ್ಧಿಗೆ ಶ್ರೀ ಕೆಂಡಗಣ್ಣಸ್ವಾಮಿಗಳು ಮತ್ತು ಶ್ರೀ ಮಲೆ ಮಹದೇಶ್ವರರ ಸಾಕ್ಷ್ಯಚಿತ್ರ ಹೊರತಂದಿದ್ದು ಲಕ್ಷಾಂತರ ಜನರಿಗೆ ಶರಣರ ಜೀವನ ಚರಿತ್ರೆ ತರಲು ಕಾರಣರಾಗಿರುತ್ತಾರೆ. ಅಮೇರಿಕಾದ ವಿ.ಎಸ್.ಎನ್.ಎ ನಡೆಸಿದ ವಿಶ್ವ ಬಸವಜಯಂತಿ ಕಾಯಕ್ರಮದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ THE PIONEER OF THE ERA BASAVANNA ಎಂಬ ಸಾಕ್ಷ್ಯಚಿತ್ರವನ್ನು ಆಂಗ್ಲಭಾಷೆಯಲ್ಲಿ ನೀಡಿರುತ್ತಾರೆ.


ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು

ವಚನ ಜ್ಞಾನೋದಯ

ಕರುನಾಡಿನ ಪುಣ್ಯಸ್ತ್ರೀಯರು

ಬಸವಭಾನು

ಕೃತಿಗಳನ್ನು ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಇವರ ಸೇವೆಯನ್ನು ಗುರುತಿಸಿ  ಕೂಡಲ ಸಂಗಮ ಕ್ಷೇತ್ರದ ಜಗದ್ಗುರು ಲಿಂಗೈಕ್ಯ ಪೂಜ್ಯ ಮಾತೆ ಮಹಾದೇವಿಯವರು ‘ಶರಣ ಸೇವಾರತ್ನ’ ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿರುತ್ತಾರೆ. 

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಸರಗೂರಿನ ಹೊಸಮಠದಿಂದ ಕಾಯಕರತ್ನ ಎಂಬ ಪ್ರಶಸ್ತಿ ನೀಡಿರುತ್ತಾರೆ.

ಅಲ್ಲದೆ ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿರುತ್ತವೆ. 

ರೂಪ ಕುಮಾರಸ್ವಾಮಿಯವರ ವಚನ ಜ್ಞಾನೋದಯ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮೈಸೂರಿನ ಹಿರಿಯ  ಸಾಹಿತಿಗಳಾದ ಸಿ.ಪಿ.ಕೆ ರವರು ವಚನ ರೂಪಾ ಎಂದೇ ತಮ್ಮ ಹೆಸರು ಪ್ರಚಲಿತವಾಗಲಿ ಎಂದು ಹರಸಿರುತ್ತಾರೆ. 

ಪ್ರಸ್ತುತ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾಗಿರುವ ಇವರಿಗೆ ಸಿ.ಕೆ ಗಿರಿಜೇಶ್ ಮತ್ತು ಸಿ.ಕೆ.ವಚನ ಎಂಬ ಮಕ್ಕಳಿದ್ದಾರೆ. ವಚನ ಸಾಹಿತ್ಯ ಪ್ರಸಾರಕ್ಕಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟಿರುವ ಇವರು ಕೋವಿಡ್‌ ಸಂದಿಗ್ಧ ಪರಿಸ್ಥಿತಿಯಲ್ಲೂ ಅಂತರ್ಜಾಲದ ಮೂಲಕ 49 ಅಂತರರಾಷ್ಷ್ರೀಯ ಅಂತರ್ಜಾಲ ಪ್ರವಚನ,  45 ಅಂತರ್ಜಾಲ ವಚನ ಮಾಧುರ್ಯ, 4 ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ಜನಮಾನಸಕ್ಕೆ ಪ್ರವಚನದ ಸವಿಯನ್ನು ಉಣಬಡಿಸಿರುತ್ತಾರೆ.

ವಿಶ್ವಮಟ್ಟದಲ್ಲಿ ವಚನ ಸಾಹಿತ್ಯವನ್ನು ಪಸರಿಸುತ್ತಿರುವ ಇವರ ಸೇವಾ ಕೈಂಕರ್ಯ ಹೀಗೆ ಸಾಗಲಿ ಎಂದು ಮನತುಂಬಿ ಹಾರೈಸುತ್ತೇವೆ.

ಶರಣು ದಿನಚರಿ 2021

                ಕನ್ನಡಪ್ರಭ ಪತ್ರಿಕೆ             



ಮೈಸೂರು ಮಿತ್ರ ಪತ್ರಿಕೆ


ವಿಜಯವಾಣಿ ಪತ್ರಿಕೆ


ಹಲೋ ಮೈಸೂರು ಪತ್ರಿಕೆ


ಆಂದೋಲನ ಪತ್ರಿಕೆ


ಕನ್ನಡಪ್ರಭ ಪತ್ರಿಕೆ


ರಾಜ್ಯಧರ್ಮ ಪತ್ರಿಕೆ




Thursday, December 10, 2020

ಶರಣು ವಿಶ್ವವಚನ ಫೌಂಡೇಷನ್‌ ಸದಸ್ಯತ್ವ

ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವ ಪಡೆದರೆ ಪ್ರತೀ ವರ್ಷ ವಚನಾಧಾರಿತ ಶರಣು ದಿನಚರಿ ಹಾಗೂ ಬಸವಭಾನು ಸಂಚಿಕೆ  ಹಾಗೂ ವಚನ ಪುಸ್ತಕಗಳನ್ನು   ರಿಜಿಸ್ಟರ್ ಪಾರ್ಸಲ್ ಮೂಲಕ ತಮ್ಮ ವಿಳಾಸಕ್ಕೆ ಕಳಿಸಲಾಗುತ್ತದೆ.

                               ಶರಣು ದಿನಚರಿ - 2021

ಶರಣು ವಿಶ್ವವಚನ ಫೌಂಡೇಷನ್ ೨೦೧೬ ರಿಂದ ವಚನಾಧಾರಿತ ಶರಣು ದಿನಚರಿಯನ್ನು ಹೊರತರುತ್ತಿದ್ದು, ಇದುವರೆಗೆ ಸಿದ್ಧಗಂಗೆ ಶ್ರೀಗಳು, ಸುತ್ತೂರು ಶ್ರೀಗಳು, ದೇವನೂರು ಶ್ರೀಗಳು, ಸಂಗಮ ತಾತ, ಶ್ರೀ ಕೆಂಡಗಣ್ಣೇಶ್ವರಸ್ವಾಮಿರವರಿಗೆ ಅರ್ಪಣೆ ಮಾಡಲಾಗಿದ್ದು, ಈ ವರ್ಷ ಶ್ರೀ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರಿಗೆ ಅರ್ಪಣೆಯಾಗಿದೆ. ೨೦೨೧ರ ಶರಣು ದಿನಚರಿಯಲ್ಲಿ ೨೫ ಶಿವಶರಣೆಯರ ಪರಿಚಯ ಹಾಗೂ ಅವರ ವಚನಗಳು, ಶರಣರ ದಿನಾಚರಣೆ ಮತ್ತು ಸಂಸ್ಮರಣೋತ್ಸವ ಹಾಗೂ ದತ್ತಿ, ಆಜೀವ ಸದಸ್ಯರ ವಿವರವನ್ನು ಅಡಕಗೊಳಿಸಲಾಗಿದ್ದು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿರವರು ಸಂಪಾದಿಸಿದ್ದಾರೆ. ಬೆಲೆ ರೂ. 150



ಬಸವಭಾನು ವಾರ್ಷಿಕ ಸಂಚಿಕೆ

ಬಸವಭಾನು ವಾರ್ಷಿಕ ಸಂಚಿಕೆಯನ್ನು ೨೦೨೦ ರಿಂದ ಹೊರತರುತ್ತಿದ್ದು, ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಒಳಗೊಂಡಿದೆ. ವಾರ್ಷಿಕ ಕಾರ್ಯಚಟುವಟಿಕೆಗಳ ವರದಿ ಮತ್ತು ಛಾಯ ಚಿತ್ರಗಳ ಸಂಚಿಕೆಯನ್ನು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ರೂಪ ಕುಮಾರಸ್ವಾಮಿಯವರು ಸಂಪಾದಿಸಿದ್ದಾರೆ. ಬೀದರ್ ಜಿಲ್ಲೆ ಭಾಲ್ಕಿ ಮಠದ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ಮತ್ತು ಕರ್ನಾಟಕ ಸರ್ಕಾರದ ವಸತಿ ಸಚಿವರಾದ ಶ್ರೀ ಸೋಮಣ್ಣರವರು ಶುಭಸಂದೇಶ ನೀಡಿದ್ದಾರೆ. ರೂ. 150





                             ಅಕ್ಕನ ನೂರೆಂಟು ವಚನಗಳು

ಕನ್ನಡದ ಮೊಟ್ಟಮೊದಲ ಮಹಿಳಾ ಕವಯತ್ರಿ ಅಕ್ಕಮಹಾದೇವಿಯವರ ಸಂಕ್ಷಿಪ್ತ ಜೀವನ ಚರಿತ್ರೆ ಹಾಗೂ ಅವರ ೧೦೮ ವಚನಗಳನ್ನು ಶರಣ ಸಂಸ್ಕೃತಿಗಳ ಆರಾಧಕರಾದ ಶ್ರೀಮತಿ ಅಕ್ಕಮಹಾದೇವಿ ಮರಮ್ಕಲ್‌ರವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಅನುಭವಮಂಟಪದಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣ ಮುಂತಾದ ಶರಣರ ನಡುವೆ ನಡೆಯುವ ಸಂಭಾಷಣೆಯನ್ನು ಕೊಡಲಾಗಿದೆ. ಬೆಲೆ ರೂ. 50




                                       


ಎತ್ತಣ ಅಲ್ಲಮ ಎತ್ತಣ ರಮಣ

ಎತ್ತಣ ಅಲ್ಲಮ ಮತ್ತು ಎತ್ತಣ ರಮಣ ಕೃತಿಯನ್ನು ಡಾ ಪ್ರಸನ್ನ ಸಂತೆಕಡೂರುರವರು ಬರೆದಿದ್ದು, ರಮಣ ಮಹರ್ಷಿಗಳಂತಹ ಪೂಜ್ಯ ಸಾಧಕರಿಗೆ ಅಲ್ಲಮಪ್ರಭುಗಳು ದಾರಿದೀಪವಾಗಿರುವುದರ ಬಗ್ಗೆ ಹಾಗೂ ರಮಣ ಮಹರ್ಷಿಗಳ ಆಂತರಿಕ ಗುರು ಅಲ್ಲಮಪ್ರಭುಗಳೇ ಎಂದು ಸಾಕ್ಷೀಕರಿಸಿರುವ ಲೇಖಕರಾದ ಡಾ. ಪ್ರಸನ್ನ ಸಂತೇಕಡೂರು ಅವರ ಪ್ರಯತ್ನ ಶ್ಲಾಘನೀಯವಾದುದು. ಕೃತಿ 92 ಪುಟಗಳನ್ನು ಒಳಗೊಂಡಿದೆ. ಬೆಲೆ ರೂ 150





                            ವಚನ ಜ್ಞಾನೋದಯ

ವಿವಿಧ ಶರಣರ 200 ವಚನಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂಪಾದಿಸಿದ್ದಾರೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ರೂಪ ಕುಮಾರಸ್ವಾಮಿ. ಕೃತಿ 138 ಪುಟ ಹೊಂದಿದ್ದು ಇದರ ಬೆಲೆ ರೂ 150


ಹಾವಿನಹಾಳ ಕಲ್ಲಯ್ಯ

12 ನೇ ಶತಮಾನದ ಶರಣರಾದ ಹಾವಿನಹಾಳ ಕಲ್ಲಯ್ಯನವರ ಜೀವನ ಚರಿತ್ರೆ ಒಳಗೊಂಡ ಪುಸ್ತಕ ಇದಾಗಿದ್ದು, ಡಾ. ಪ್ರದೀಪ್ ಕುಮಾರ್ ಹೆಬ್ರಿ ಇದರ ಲೇಖಕರು. ಒಟ್ಟು 54 ಪುಟಗಳನ್ನು ಹೊಂದಿದ್ದು ಇದರ ಬೆಲೆ ರೂ. 60


                         ಜಗನ್ಮಾತೆ ಅಕ್ಕಮಹಾದೇವಿ

ಅಕ್ಕಮಹಾದೇವಿಯವರ ಸಂಪೂರ್ಣ ಜೀವನ ಚರಿತ್ರೆ ಒಳಗೊಂಡಿರುವ ಈ ಕೃತಿಯನ್ನು ನಗರ್ಲೆ ಶಿವಕುಮಾರ ರಚಿಸಿದ್ದು, 72 ಪುಟಗಳನ್ನು ಒಳಗೊಂಡಿದ್ದು, ಇದರ ಬೆಲೆ ರೂ 100



*ನಿಜಸುಖಿ ಹಡಪದ ಅಪ್ಪಣ್ಣ ಪುಸ್ತಕ*

*ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪರಾದ ಡಾ. ವಚನ ಕುಮಾರಸ್ವಾಮಿಯವರ ವಿರಚಿತ ನಿಜಸುಖಿ ಹಡಪದ ಅಪ್ಪಣ್ಣ ಕೃತಿ ಅಪ್ಪಣ್ಣನವರ ಸಂಪೂರ್ಣ ಜೀವನ ಚರಿತ್ರೆಯನ್ನು ತಿಳಿಸಿಕೊಡುವಲ್ಲಿ ಸಫಲವಾಗಿದೆ.*
*ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮೈಸೂರಿನ ಹಿರಿಯ ಸಾಹಿತಿ ಕೆ. ಅನಂತರಾಮುರವರು ಪ್ರಪಂಚದಲ್ಲಿ ಎರಡು ರೀತಿಯ ಪುಸ್ತಕಗಳು ಇರುತ್ತವೆ. ಒಂದು ಕೈ ತೊಳೆದು ಮುಟ್ಟುವ ಪುಸ್ತಕ. ಎರಡು ಪುಸ್ತಕ ಓದಿದ ನಂತರ ಕೈ ತೊಳೆಯುವುದು. ನಿಜಸುಖಿ ಹಡಪದ ಅಪ್ಪಣ್ಣ ಕೃತಿ ಕೈತೊಳೆದು ಮುಟ್ಟುವ ಪುಸ್ತಕವಾಗಿದೆ ಎಂದರು.*
*ನಿಜಸುಖಿ ಹಡಪದ ಅಪ್ಪಣ್ಣ ಕೃತಿ ಒಟ್ಟು 14 ಅಧ್ಯಾಯಗಳಿಂದ ಕೂಡಿದೆ.*
೧. ಅಪ್ಪಣ್ಣನವರ ಬಾಲ್ಯ
೨.ಕಲ್ಯಾಣದೆಡೆಗೆ ಅಪ್ಪಣ್ಣ
೩.ಅಪ್ಪಣ್ಣನವರ ಕಾಯಕ
೪.ಬಸವಣ್ಣನವರ ಆಪ್ತನಾಗಿ ಅಪ್ಪಣ್ಣ
೫.ಅಲ್ಲಮರ ಆಗಮನದ ಸನ್ನಿವೇಶ
೬.ಅನುಭವಮಂಟಪ
೭.ಕಲ್ಯಾಣಕ್ರಾಂತಿ
೮.ಅಪ್ಪಣ್ಣನವರ ಕಡೆಯ ದಿನಗಳು
೯.ವಚನ ರಚನೆ
೧೦. ವಚನ - ನಿರ್ವಚನ
೧೧. ಶರಣರ ವಚನಗಳಲ್ಲಿ ಹಡಪದ ಅಪ್ಪಣ್ಣ
೧೨. ನಿಜಮುಕ್ತೆ ಲಿಂಗಮ್ಮ
೧೩. ಅಪ್ಪಣ್ಣನವರ ಕ್ಷೇತ್ರಗಳ ಕಿರು ಪರಿಚಯ
೧೪. ಅಪ್ಪಣ್ಣನವರಿಗೆ ಸಂಬಂಧಿಸಿದ ಕ್ಷೇತ್ರಗಳ ಚಿತ್ರಗಳು
*ಒಟ್ಟು 152 ಪುಟ ಹೊಂದಿರುವ ಕೃತಿಗೆ ಹೆಸರಾಂತ ಸಾಹಿತಿಗಳಾದ ಶ್ರೀ ರಂಜಾನ್ ದರ್ಗಾರವರು ಮುನ್ನುಡಿ ಬರೆದಿದ್ದು, ಖ್ಯಾತ ಅಂಕಣಕಾರ ಡಾ. ಗುಬ್ಬಿಗೂಡು ರಮೇಶ್ ರವರು ಬೆನ್ನುಡಿ ಬರೆದಿದ್ದಾರೆ.*
*ಶ್ರೀ ರಂಜಾನ್ ದರ್ಗಾರವರು ನಿಜಸುಖಿ ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರದ ಅಪ್ಪಣ್ಣರವರು ಒಂದೇ ಎಂಬ ಲೇಖನ ಬರೆದಿದ್ದು, ಇದನ್ನು ಓದುಗರಿಗೆ ಅನುಕೂಲವಾಗಲು ಪುಸ್ತಕದ ಕೊನೆಯಲ್ಲಿ ಕೊಡಲಾಗಿದೆ.*
ಕೃತಿಯ ಬೆಲೆ ರೂ 200





  ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವದ ವಿವರ 
ಮೂರು ವರ್ಷ ರೂ 1000 
ಆರು ವರ್ಷ ರೂ 2000 
ಆಜೀವ ಸದಸ್ಯತ್ವ ರೂ 5000 
ಶಾಲೆಗಳೆಡೆಗೆ ವಚನಗಳೆಡೆಗೆ ದತ್ತಿ ರೂ 10000 
ವಚನಗ್ರಾಮ ದತ್ತಿ ರೂ 25000 

*ಸಂಸ್ಥೆಯ ಸದಸ್ಯತ್ವ ಪಡೆದರೆ 80 G ಅಡಿಯಲ್ಲಿ ತೆರಿಗೆ ವಿನಾಯಿತಿ ದೊರೆಯುತ್ತದೆ*

         ಮೂರು ವರ್ಷದ ಸದಸ್ಯತ್ವ ಮೂರು ವರ್ಷ ಸದಸ್ಯರಾದರೆ ಮೂರು ವರ್ಷಗಳವರೆಗೆ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಆ ವರ್ಷ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ.

           ಆರು ವರ್ಷದ ಸದಸ್ಯತ್ವ ಆರು ವರ್ಷ ಸದಸ್ಯತ್ವ ಪಡೆದರೆ ಆರು ವರ್ಷಗಳವರೆಗೆ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಆ ವರ್ಷ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ. 

       ಆಜೀವ ಸದಸ್ಯತ್ವ ಆಜೀವ ಸದಸ್ಯತ್ವ ಪಡೆದರೆ ಜೀವನ ಪರ್ಯಂತ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಸಂಸ್ಥೆಯಿಂದ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ ಹಾಗೂ ಶರಣು ದಿನಚರಿ ಅಥವಾ ಬಸವಭಾನು ಸಂಚಿಕೆಯಲ್ಲಿ ಆಜೀವ ಸದಸ್ಯರ ಭಾವಚಿತ್ರವನ್ನು ಹಾಕಲಾಗುತ್ತದೆ. ಶರಣು ದಿನಚರಿ ಮತ್ತು ಬಸವಭಾನು ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಅಭಿನಂದಿಸಲಾಗುತ್ತದೆ.

                 ಶಾಲೆಗಳೆಡೆಗೆ ವಚನಗಳ ನಡಿಗೆ ದತ್ತಿ
 ಶಾಲೆಗಳೆಡೆಗೆ ವಚನಗಳ ನಡಿಗೆ ದತ್ತಿ ನೀಡಿದರೆ ಪ್ರತೀ ವರ್ಷ ದತ್ತಿ ಸದಸ್ಯರು ತಿಳಿಸುವ ಶಾಲೆಗಳಲ್ಲಿ ಅವರ ಹೆಸರಿನಲ್ಲಿ ವಚನ ಕಾರ್ಯಕ್ರಮ ಹಮ್ಮಿಕೊಂಡು ಶಾಲೆಗಳಲ್ಲಿ ವಚನ ಹೇಳುವ ಎಲ್ಲಾ ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣ ಪತ್ರ ಮತ್ತು ವಚನ ಪುಸ್ತಕಗಳನ್ನು ನೀಡಲಾಗುತ್ತದೆ.ಹಾಗೂ ಪ್ರತೀ ವರ್ಷ ನಡೆಯುವ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ದತ್ತಿ ನೀಡಿದ ದಂಪತಿಗಳನ್ನು ಸನ್ಮಾನಿಸಲಾಗುತ್ತದೆ.


          ವಚನಗ್ರಾಮ ದತ್ತಿ
 ವಚನಗ್ರಾಮ ದತ್ತಿ ನೀಡಿದರೆ ಜೀವನ ಪರ್ಯಂತ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಸಂಸ್ಥೆಯಿಂದ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ ಹಾಗೂ ಶರಣು ದಿನಚರಿ ಅಥವಾ ಬಸವಭಾನು ಸಂಚಿಕೆಯಲ್ಲಿ ದಂಪತಿಗಳ ಭಾವಚಿತ್ರವನ್ನು ಹಾಕಲಾಗುತ್ತದೆ. ಶರಣು ದಿನಚರಿ ಮತ್ತು ಬಸವಭಾನು ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಅಭಿನಂದಿಸಲಾಗುತ್ತದೆ. ಹಾಗೂ ಪ್ರತೀ ವರ್ಷ ದತ್ತಿ ನೀಡಿದವರು ಹೇಳುವ ಗ್ರಾಮಗಳಲ್ಲಿ ವಚನಗ್ರಾಮ ಕಾರ್ಯಕ್ರಮ ಏರ್ಪಡಿಸಿ ಗ್ರಾಮದ ಪ್ರತೀ ಮನೆಗೆ ವಚನ ಪುಸ್ತಕ ನೀಡಿ ಆ ಗ್ರಾಮದ ಮಠ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಕಾರ್ಯಕ್ರಮ ಏರ್ಪಡಿಸಿ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಏರ್ಪಡಿಸಿ ನಂತರ ಆ ಗ್ರಾಮವನ್ನು ವಚನಗ್ರಾಮ ಎಂದು ಘೋಷಿಸಲಾಗುತ್ತದೆ ನಂತರ ದತ್ತಿ ನೀಡಿದ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ.
ಸಂಸ್ಥೆಯ ಸದಸ್ಯರಾಗ ಬಯಸುವವರು ಕೆಳಗಿನ ಖಾತೆಗೆ ಹಣ ಜಮಾ ಮಾಡಿ ತಮ್ಮ ವಿಳಾಸ ಕಳಿಸಿದರೆ ವಚನ ಪುಸ್ತಕಗಳನ್ನು ಕಳಿಸಲಾಗುತ್ತದೆ. 

SHARANU VISHWA VACHANA FOUNDATION 
A/C NO. 5192000100032101 
IFSC CODE KARB0000519 
KARNATAKA BANK 
BOGADI BRANCH, MYSORE 

ಗೂಗಲ್ ಪೇ ಅಥವಾ ಪೋನ್ ಪೇ ನಂಬರ್ 
8217081644 

ಹೆಚ್ಚಿನ ಮಾಹಿತಿಗಾಗಿ ಶರಣು ವಿಶ್ವವಚನ ಫೌಂಡೇಷನ್ 
ನಂ. 431, 7ನೇ ಮುಖ್ಯರಸ್ತೆ, 14 ನೇ ಅಡ್ಡರಸ್ತೆ 
ಶಾರದಾನಗರ ರೈಲ್ವೆ ಬಡಾವಣೆ
ಬೋಗಾದಿ ಮೈಸೂರು – 570026 
ಮೊಬೈಲ್ ನಂಬರ್ 8217081644 

ತಮ್ಮ ಸದಸ್ಯತ್ವದ ವಿವರವನ್ನು ಕೆಳಗಿನ ಗೂಗಲ್ ಲಿಂಕ್ ಬಳಸಿ ಭರ್ತಿ ಮಾಡಬಹುದು. 

https://forms.gle/yCYqnXFQcTWnubAf9 

ಸದಸ್ಯತ್ವ ಪಡೆದರೆ ದೊರೆಯುವ ಪ್ರಯೋಜನಗಳು 

ಅಂತರ್ಜಾಲ ಪ್ರವಚನ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರತೀ ಭಾನುವಾರ ಗೂಗಲ್ ಮೀಟ್ ನಲ್ಲಿ ಗುರುಗಳು ಹಾಗೂ ವಚನ ಸಾಹಿತ್ಯದ ಬಗ್ಗೆ ಹೆಚ್ಚು ಜ್ಞಾನವಿರುವ ಅನುಭಾವಿಗಳಿಂದ ಪ್ರವಚನ ಇರುತ್ತದೆ ಅದನ್ನು ವೀಕ್ಷಿಸಬಹುದು ಹಾಗೂ ಆ ಕಾರ್ಯಕ್ರಮದಲ್ಲಿ ತಾವೂ ಕೂಡಾ ವಚನಗೀತೆ ಹಾಡಬಹುದು. ಸ್ವಾಗತ ಮತ್ತು ವಂದನಾರ್ಪಣೆ ಮಾಡಬಹುದು. ಇದುವರೆಗೆ 20 ಪ್ರವಚನಗಳು ಆಗಿರುತ್ತವೆ. *ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಇದುವರೆಗೆ ನಡೆದಿರುವ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನಗಳ ಪತ್ರಿಕಾ ಸುದ್ಧಿ* https://sharanuvishwa.blogspot.com/2020/08/blog-post_31.html ವಚನ ಮಾಧುರ್ಯ ಪ್ರತೀ ಗುರುವಾರ ವಚನ ಮಾಧುರ್ಯ ಕಾರ್ಯಕ್ರಮ ಇರುತ್ತದೆ. ಇದು ವಾರದಿಂದ ವಾರಕ್ಕೆ ವಿಭಿನ್ನವಾಗಿರುತ್ತದೆ ಇದುವರೆಗೆ 1. ಮಹಿಳೆಯರಿಂದ ವಚನ ಮಾಧುರ್ಯ 2. ಖ್ಯಾತ ಗಾಯಕರು ಮತ್ತು ವಿಮರ್ಶಕರಿಂದ ವಚನ ಮಾಧುರ್ಯ 3. ಚಿಣ್ಣರಿಂದ ವಚನ ಮಾಧುರ್ಯ 4. ವಿಶೇಷ ಚೇತನರಿಂದ ವಚನ ಮಾಧುರ್ಯ 5. ಮೂರು ತಲೆ ಮಾರಿನವರಿಂದ ವಚನ ಮಾಧುರ್ಯ 6. ದಂಪತಿಗಳಿಂದ ವಚನ ಮಾಧುರ್ಯ 7. ಶಿಕ್ಷಕರಿಂದ ವಚನ ಮಾಧುರ್ಯ 8. ವಚನ ನೃತ್ಯ 9. ವಿದೇಶದಲ್ಲಿರುವ ಕನ್ನಡಿಗರಿಂದ ವಚನ ಮಾಧುರ್ಯ 10. ಜನಪ್ರತಿನಿಧಿಗಳಿಂದ ವಚನ ಮಾಧುರ್ಯ 11. ವಕೀಲರಿಂದ ವಚನ ಮಾಧುರ್ಯ 12. ರೈತರಿಂದ ವಚನ ಮಾಧುರ್ಯ 13. ಆರಕ್ಷಕರಿಂದ ವಚನ ಮಾಧುರ್ಯ 14. ವೈದ್ಯರಿಂದ ವಚನ ಮಾಧುರ್ಯ ಈ ಕಾರ್ಯಕ್ರಮಗಳಲ್ಲಿ ತಾವೂ ಭಾಗಿಯಾಗಬಹುದು. ಜೊತೆಗೆ ಕಾರ್ಯಕ್ರಮದ ಒಂದು ಭಾಗವಾಗಿ ತಾವು ವಚನಗೀತೆ ಹಾಡಬಹುದು. ಸ್ವಾಗತ ಅಥವಾ ವಂದನಾರ್ಪಣೆ ಮಾಡಬಹುದು. *ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಇದುವರೆಗೆ ನಡೆದಿರುವ ವಚನ ಮಾಧುರ್ಯ ಕಾರ್ಯಕ್ರಮಗಳ ಪತ್ರಿಕಾ ವರದಿ ನೋಡಲು ಕೆಳಗಿನ ಲಿಂಕ್ ಪ್ರೆಸ್ ಮಾಡಿ* https://sharanuvishwa.blogspot.com/2020/08/blog-post_2.html 


Wednesday, October 14, 2020

ವಚನೋತ್ಸವ

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ವಚನಾಭಿಮಾನಿಗಳನ್ನು ಬೆಳಕಿಗೆ ತರುವ ವಚನೋತ್ಸವ ಕಾರ್ಯಕ್ರಮ

Tuesday, October 13, 2020

ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವ

ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವ ಪಡೆದರೆ ಪ್ರತೀ ವರ್ಷ ವಚನಾಧಾರಿತ ಶರಣು ದಿನಚರಿ ಹಾಗೂ ಬಸವಭಾನು ಸಂಚಿಕೆಯನ್ನು ರಿಜಿಸ್ಟರ್ ಪಾರ್ಸಲ್ ಮೂಲಕ ತಮ್ಮ ವಿಳಾಸಕ್ಕೆ ಕಳಿಸಲಾಗುತ್ತದೆ. ಬಸವಭಾನು ಸಂಚಿಕೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪರವರು ಹಾಗೂ ಕನಕಪುರ ಶ್ರೀ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣಸ್ವಾಮಿಗಳು ಶುಭ ಸಂದೇಶ ನೀಡಿದ್ದು, ಖ್ಯಾತ ಸಾಹಿತಿಗಳಾದ ರಂಜಾನ್ ದರ್ಗಾ, ಡಾ. ವೀರಣ್ಣ ರಾಜೂರ, ಡಾ. ಪ್ರದೀಪ್ ಕುಮಾರ್ ಹೆಬ್ರಿ, ಪ್ರೊ. ಸಿದ್ದಣ್ಣ ಲಂಗೋಟಿ ಮುಂತಾದವರ ಲೇಖನಗಳನ್ನು ಒಳಗೊಂಡಿದ್ದು, 2019ರ ಶರಣು ವಿಶ್ವವಚನ ಫೌಂಡೇಷನ್ ಕಾರ್ಯಚಟುವಟಿಕೆಗಳು ಹಾಗೂ ದತ್ತಿ ಸದಸ್ಯರು ಮತ್ತು ಆಜೀವ ಸದಸ್ಯರ ವಿವರ ಒಳಗೊಂಡಿದೆ.
ಶರಣು ದಿನಚರಿಯಲ್ಲಿ ಪ್ರತಿ ಪುಟದಲ್ಲಿ ಶರಣರ ನುಡಿಗಡಣಗಳಿವೆ, ಶರಣರ ಶರಣೋತ್ಸವಗಳ ಮಾಹಿತಿ ಇದೆ.
ಎತ್ತಣ ಅಲ್ಲಮ ಮತ್ತು ಎತ್ತಣ ರಮಣ ಕೃತಿಯನ್ನು ಡಾ ಪ್ರಸನ್ನ ಸಂತೆಕಡೂರುರವರು ಬರೆದಿದ್ದು, ಅಲ್ಲಮ ಪ್ರಭುಗಳು ರಮಣ ಮಹರ್ಷಿಗಳ ಮೇಲೆ ಬೀರಿದ ಪ್ರಭಾವವನ್ನು ಉತ್ತಮವಾಗಿ ಬರೆದುಕೊಂಡು ಹೋಗಿದ್ದಾರೆ. ಈ ಕೃತಿ 92 ಪುಟಗಳನ್ನು ಒಳಗೊಂಡಿದೆ.
ಹನ್ನೆರಡನೆಯ ಶತಮಾನದ ಹಾವಿನಹಾಳ ಕಲ್ಲಯ್ಯರವರ ಜೀವನ ಚರಿತ್ರಯನ್ನು 54 ಪುಟಗಳಲ್ಲಿ ಡಾ. ಪ್ರದೀಪ್ ಕುಮಾರ್ ಹೆಬ್ರಿರವರು ಬರೆದಿದ್ದಾರೆ.
ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ವಚನಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ ಮನೆಗೆ ಉಚಿತವಾಗಿ ನೀಡಲು ಡಾ. ವಚನ ಕುಮಾರಸ್ವಾಮಿರವರು 25 ವಚನಕಾರರ ವಚನಗಳನ್ನು ನಿರ್ವಚನ ಮಾಡಿದ್ದಾರೆ.
ನಗರ್ಲೆ ಶಿವಕುಮಾರರವರು 84 ಪುಟಗಳಲ್ಲಿ ಬಸವಣ್ಣನವರ ಬಾಲ್ಯದಿಂದ ಐಕ್ಯದವರೆಗೆ ಉತ್ತಮವಾಗಿ ನಿರೂಪಿಸಿರುತ್ತಾರೆ.
ಸಂಸ್ಥೆಯ ಸದಸ್ಯರಾದವರಿಗೆ ಈ ಪುಸ್ತಕಗಳನ್ನು ಉಚಿತವಾಗಿ ಕಳಿಸಲಾಗುತ್ತದೆ. ಪ್ರಕಟವಾಗಲಿರುವ ಕೃತಿಗಳು ನಿಜಸುಖಿ ಹಡಪದ ಅಪ್ಪಣ್ಣ ಅಕ್ಕನ ನೂರೆಂಟು ವಚನಗಳು ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವದ ವಿವರ ಮೂರು ವರ್ಷ ರೂ 1000 ಆರು ವರ್ಷ ರೂ 2000 ಆಜೀವ ಸದಸ್ಯತ್ವ ರೂ 5000 ಶಾಲೆಗಳೆಡೆಗೆ ವಚನಗಳೆಡೆಗೆ ದತ್ತಿ ರೂ 10000 ವಚನಗ್ರಾಮ ದತ್ತಿ ರೂ 25000 ಮೂರು ವರ್ಷದ ಸದಸ್ಯತ್ವ ಮೂರು ವರ್ಷ ಸದಸ್ಯರಾದರೆ ಮೂರು ವರ್ಷಗಳವರೆಗೆ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಆ ವರ್ಷ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ. ಆರು ವರ್ಷದ ಸದಸ್ಯತ್ವ ಆರು ವರ್ಷ ಸದಸ್ಯತ್ವ ಪಡೆದರೆ ಆರು ವರ್ಷಗಳವರೆಗೆ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಆ ವರ್ಷ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ. ಆಜೀವ ಸದಸ್ಯತ್ವ ಆಜೀವ ಸದಸ್ಯತ್ವ ಪಡೆದರೆ ಜೀವನ ಪರ್ಯಂತ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಸಂಸ್ಥೆಯಿಂದ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ ಹಾಗೂ ಶರಣು ದಿನಚರಿ ಅಥವಾ ಬಸವಭಾನು ಸಂಚಿಕೆಯಲ್ಲಿ ಆಜೀವ ಸದಸ್ಯರ ಭಾವಚಿತ್ರವನ್ನು ಹಾಕಲಾಗುತ್ತದೆ. ಶರಣು ದಿನಚರಿ ಮತ್ತು ಬಸವಭಾನು ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಅಭಿನಂದಿಸಲಾಗುತ್ತದೆ.
ಶಾಲೆಗಳೆಡೆಗೆ ವಚನಗಳ ನಡಿಗೆ ದತ್ತಿ ಶಾಲೆಗಳೆಡೆಗೆ ವಚನಗಳ ನಡಿಗೆ ದತ್ತಿ ನೀಡಿದರೆ ಪ್ರತೀ ವರ್ಷ ದತ್ತಿ ಸದಸ್ಯರು ತಿಳಿಸುವ ಶಾಲೆಗಳಲ್ಲಿ ಅವರ ಹೆಸರಿನಲ್ಲಿ ವಚನ ಕಾರ್ಯಕ್ರಮ ಹಮ್ಮಿಕೊಂಡು ಶಾಲೆಗಳಲ್ಲಿ ವಚನ ಹೇಳುವ ಎಲ್ಲಾ ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣ ಪತ್ರ ಮತ್ತು ವಚನ ಪುಸ್ತಕಗಳನ್ನು ನೀಡಲಾಗುತ್ತದೆ.ಹಾಗೂ ಪ್ರತೀ ವರ್ಷ ನಡೆಯುವ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ದತ್ತಿ ನೀಡಿದ ದಂಪತಿಗಳನ್ನು ಸನ್ಮಾನಿಸಲಾಗುತ್ತದೆ.
ವಚನಗ್ರಾಮ ದತ್ತಿ ವಚನಗ್ರಾಮ ದತ್ತಿ ನೀಡಿದರೆ ಜೀವನ ಪರ್ಯಂತ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಸಂಸ್ಥೆಯಿಂದ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ ಹಾಗೂ ಶರಣು ದಿನಚರಿ ಅಥವಾ ಬಸವಭಾನು ಸಂಚಿಕೆಯಲ್ಲಿ ದಂಪತಿಗಳ ಭಾವಚಿತ್ರವನ್ನು ಹಾಕಲಾಗುತ್ತದೆ. ಶರಣು ದಿನಚರಿ ಮತ್ತು ಬಸವಭಾನು ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಅಭಿನಂದಿಸಲಾಗುತ್ತದೆ. ಹಾಗೂ ಪ್ರತೀ ವರ್ಷ ದತ್ತಿ ನೀಡಿದವರು ಹೇಳುವ ಗ್ರಾಮಗಳಲ್ಲಿ ವಚನಗ್ರಾಮ ಕಾರ್ಯಕ್ರಮ ಏರ್ಪಡಿಸಿ ಗ್ರಾಮದ ಪ್ರತೀ ಮನೆಗೆ ವಚನ ಪುಸ್ತಕ ನೀಡಿ ಆ ಗ್ರಾಮದ ಮಠ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಕಾರ್ಯಕ್ರಮ ಏರ್ಪಡಿಸಿ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಏರ್ಪಡಿಸಿ ನಂತರ ಆ ಗ್ರಾಮವನ್ನು ವಚನಗ್ರಾಮ ಎಂದು ಘೋಷಿಸಲಾಗುತ್ತದೆ ನಂತರ ದತ್ತಿ ನೀಡಿದ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ.
ಸಂಸ್ಥೆಯ ಸದಸ್ಯರಾಗ ಬಯಸುವವರು ಕೆಳಗಿನ ಖಾತೆಗೆ ಹಣ ಜಮಾ ಮಾಡಿ ತಮ್ಮ ವಿಳಾಸ ಕಳಿಸಿದರೆ ವಚನ ಪುಸ್ತಕಗಳನ್ನು ಕಳಿಸಲಾಗುತ್ತದೆ. SHARANU VISHWA VACHANA FOUNDATION A/C NO. 5192000100032101 IFSC CODE KARB0000519 KARNATAKA BANK BOGADI BRANCH, MYSORE ಗೂಗಲ್ ಪೇ ಅಥವಾ ಪೋನ್ ಪೇ ನಂಬರ್ 8217081644 ಹೆಚ್ಚಿನ ಮಾಹಿತಿಗಾಗಿ ಶರಣು ವಿಶ್ವವಚನ ಫೌಂಡೇಷನ್ ನಂ. 431, 7ನೇ ಮುಖ್ಯರಸ್ತೆ, 14 ನೇ ಅಡ್ಡರಸ್ತೆ ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ ಮೈಸೂರು – 570026 ಮೊಬೈಲ್ ನಂಬರ್ 8217081644 ತಮ್ಮ ಸದಸ್ಯತ್ವದ ವಿವರವನ್ನು ಕೆಳಗಿನ ಗೂಗಲ್ ಲಿಂಕ್ ಬಳಸಿ ಭರ್ತಿ ಮಾಡಬಹುದು. https://forms.gle/yCYqnXFQcTWnubAf9 ಸದಸ್ಯತ್ವ ಪಡೆದರೆ ದೊರೆಯುವ ಪ್ರಯೋಜನಗಳು ಅಂತರ್ಜಾಲ ಪ್ರವಚನ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರತೀ ಭಾನುವಾರ ಗೂಗಲ್ ಮೀಟ್ ನಲ್ಲಿ ಗುರುಗಳು ಹಾಗೂ ವಚನ ಸಾಹಿತ್ಯದ ಬಗ್ಗೆ ಹೆಚ್ಚು ಜ್ಞಾನವಿರುವ ಅನುಭಾವಿಗಳಿಂದ ಪ್ರವಚನ ಇರುತ್ತದೆ ಅದನ್ನು ವೀಕ್ಷಿಸಬಹುದು ಹಾಗೂ ಆ ಕಾರ್ಯಕ್ರಮದಲ್ಲಿ ತಾವೂ ಕೂಡಾ ವಚನಗೀತೆ ಹಾಡಬಹುದು. ಸ್ವಾಗತ ಮತ್ತು ವಂದನಾರ್ಪಣೆ ಮಾಡಬಹುದು. ಇದುವರೆಗೆ 20 ಪ್ರವಚನಗಳು ಆಗಿರುತ್ತವೆ. *ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಇದುವರೆಗೆ ನಡೆದಿರುವ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನಗಳ ಪತ್ರಿಕಾ ಸುದ್ಧಿ* https://sharanuvishwa.blogspot.com/2020/08/blog-post_31.html ವಚನ ಮಾಧುರ್ಯ ಪ್ರತೀ ಗುರುವಾರ ವಚನ ಮಾಧುರ್ಯ ಕಾರ್ಯಕ್ರಮ ಇರುತ್ತದೆ. ಇದು ವಾರದಿಂದ ವಾರಕ್ಕೆ ವಿಭಿನ್ನವಾಗಿರುತ್ತದೆ ಇದುವರೆಗೆ 1. ಮಹಿಳೆಯರಿಂದ ವಚನ ಮಾಧುರ್ಯ 2. ಖ್ಯಾತ ಗಾಯಕರು ಮತ್ತು ವಿಮರ್ಶಕರಿಂದ ವಚನ ಮಾಧುರ್ಯ 3. ಚಿಣ್ಣರಿಂದ ವಚನ ಮಾಧುರ್ಯ 4. ವಿಶೇಷ ಚೇತನರಿಂದ ವಚನ ಮಾಧುರ್ಯ 5. ಮೂರು ತಲೆ ಮಾರಿನವರಿಂದ ವಚನ ಮಾಧುರ್ಯ 6. ದಂಪತಿಗಳಿಂದ ವಚನ ಮಾಧುರ್ಯ 7. ಶಿಕ್ಷಕರಿಂದ ವಚನ ಮಾಧುರ್ಯ 8. ವಚನ ನೃತ್ಯ 9. ವಿದೇಶದಲ್ಲಿರುವ ಕನ್ನಡಿಗರಿಂದ ವಚನ ಮಾಧುರ್ಯ 10. ಜನಪ್ರತಿನಿಧಿಗಳಿಂದ ವಚನ ಮಾಧುರ್ಯ 11. ವಕೀಲರಿಂದ ವಚನ ಮಾಧುರ್ಯ 12. ರೈತರಿಂದ ವಚನ ಮಾಧುರ್ಯ 13. ಆರಕ್ಷಕರಿಂದ ವಚನ ಮಾಧುರ್ಯ 14. ವೈದ್ಯರಿಂದ ವಚನ ಮಾಧುರ್ಯ ಈ ಕಾರ್ಯಕ್ರಮಗಳಲ್ಲಿ ತಾವೂ ಭಾಗಿಯಾಗಬಹುದು. ಜೊತೆಗೆ ಕಾರ್ಯಕ್ರಮದ ಒಂದು ಭಾಗವಾಗಿ ತಾವು ವಚನಗೀತೆ ಹಾಡಬಹುದು. ಸ್ವಾಗತ ಅಥವಾ ವಂದನಾರ್ಪಣೆ ಮಾಡಬಹುದು. *ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಇದುವರೆಗೆ ನಡೆದಿರುವ ವಚನ ಮಾಧುರ್ಯ ಕಾರ್ಯಕ್ರಮಗಳ ಪತ್ರಿಕಾ ವರದಿ ನೋಡಲು ಕೆಳಗಿನ ಲಿಂಕ್ ಪ್ರೆಸ್ ಮಾಡಿ* https://sharanuvishwa.blogspot.com/2020/08/blog-post_2.html ವಿವಾಹ ವಧುವರರ ವೇದಿಕೆ ಸಂಸ್ಥೆಯ ಸದಸ್ಯತ್ವ ಪಡೆದರೆ ವಧು ವರರು ಇದ್ದರೆ ಅವರು ತಮ್ಮ ಪ್ರೊಫೈಲ್ ಕಳಿಸಿದರೆ ಅದನ್ನು ನಮ್ಮ ಸಂಸ್ಥೆಯಲ್ಲಿರುವ ಇತರ ಸದಸ್ಯರಿಗೆ ಕಳಿಸಿ ವಿವಾಹವಾಗಲು ಸಹಾಯ ಮಾಡಲಾಗುತ್ತದೆ. ಇದು ಉಚಿತವಾಗಿರುತ್ತದೆ.

ವಚನೋತ್ಸವ

 




Monday, October 12, 2020

ಅಂತರ್ಜಾಲದಲ್ಲಿ ಸ್ಮರಣೆ

                      ನಂಜುಂಡಸ್ವಾಮಿಯವರ ಸ್ಮರಣೆ



                       ಎಸ್ ಪಿ ಬಾಲಸುಬ್ರಹ್ಮಣ್ಯಂ ಸ್ಮರಣೆ

ಜೆ.ಎಸ್.ಮಹದೇವಪ್ರಸಾದ್ ರವರ ಸ್ಮರಣೆ








Tuesday, October 6, 2020

ನೂರಕ್ಕೂ ಹೆಚ್ಚು ಶರಣ ಶರಣೆಯರ ವಚನಗಳ ನಿರ್ವಚನ ಪುಸ್ತಕಗಳು

*ನೂರಕ್ಕೂ ಹೆಚ್ಚು ಶರಣ ಶರಣೆಯರ ವಚನಗಳ ನಿರ್ವಚನ ಪುಸ್ತಕಗಳು*



ಉರಿಲಿಂಗಪೆದ್ದಿ

ಮೋಳಿಗೆ ಮಹಾದೇವಿ

ಚಂದಿಮರಸ

ಜಗಳಗಂಟರಾಮಣ್ಣ

ಜೇಡರ ದಾಸಿಮಯ್ಯ

ಜೋದರ ಮಾಯಣ್ಣ

ಡಕ್ಕೆಯ ಬೊಮ್ಮಣ್ಣ

ಡೋಹರ ಕಕ್ಕಯ್ಯ

೩೩ ಶರಣೆಯರ ಆಯ್ದ ವಚನಗಳ ವ್ಯಾಖ್ಯಾನ

೨೩ ಶರಣರ ಆಯ್ದ ವಚನಗಳ ವ್ಯಾಖ್ಯಾನ

೨೪ ಶರಣರ ಆಯ್ದ ವಚನಗಳ ವ್ಯಾಖ್ಯಾನ

೩೦ ಶರಣರ ಆಯ್ದ ವಚನಗಳ ವ್ಯಾಖ್ಯಾನ

೯ ಶರಣರ ಆಯ್ದ ವಚನಗಳ ವ್ಯಾಖ್ಯಾನ

೧೦ ಶರಣರ ಆಯ್ದ ವಚನಗಳ ವ್ಯಾಖ್ಯಾನ


ಹೀಗೆ ವಿವಿಧ ಶರಣರ ವಚನಗಳ ವ್ಯಾಖ್ಯಾನಗಳನ್ನು ಒಳಗೊಂಡ 9 ಪುಸ್ತಕಗಳು ವಚನಗಳ ಭಾವಾರ್ಥವನ್ನು ತಿಳಿಸಲು ಸಫಲವಾಗಿದ್ದು, ಸಾಂದರ್ಭಿಕ ಕಥೆಗಳು, ಕಠಿಣ ಶಬ್ದಗಳು, ವಿಶೇಷ ಪದಸೂಚಿ, ವಚನಗಳ ಆಕಾರಾದಿ ಒಳಗೊಂಡಿದೆ.


ಜೆ.ಎಸ್.ಎಸ್. ಸಂಸ್ಥೆ ಪ್ರಕಾಶನದ ಈ ಪುಸ್ತಕಗಳು ತಮಗೆ ಬೇಕಾದಲ್ಲಿ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ.

9980393469


ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು