Tuesday, April 27, 2021

ಉತ್ತಮ ನುಡಿಗಳು

 .. *🌷ಶ್ರೀವಾಣಿ 28-4-2021🌷* ..

*╰═❂══✺༺☬༻✺══❂═╯*


ಒಂದು ಎಲೆ ಮೇಲೆ ಇಬ್ಬನಿ ಕುಳಿತಿತ್ತು. ಅಲ್ಲಿಗೆ ಒಬ್ಬ ಬಂದ, ಆತ ಇಬ್ಬನಿಯನ್ನು ಕೇಳಿದ, "ಅಲ್ಲೋ... ಒಬ್ಬನೇ ಕುಳಿತ್ತಿದ್ದೀಯಲ್ಲ ಇನ್ನೊಂದು ಕ್ಷಣದಲ್ಲಿ ಗಾಳಿ ಬಂದರೆ ನೆಲಕ್ಕೆ ಬಿದ್ದು ಹೋಗುತ್ತೀಯಲ್ಲ!" ಎಂದನು.


ಇಬ್ಬನಿ ಹೇಳಿತು, "ನಾನು ಏಕೆ ಕುಳಿತಿದ್ದೇನೆ ಗೊತ್ತೆ? ಆಕಾಶಕ್ಕೆ ಹೋಗಬೇಕು ಅದಕ್ಕೆ ಕುಳಿತಿದ್ದೇನೆ. ಅದು ನನ್ನ ಕನಸು" ಎಂದಿತು.


ಈತನಿಗೆ ನಗು ಬಂತು "ನಿನ್ನದು ಹುಚ್ಚು ಕನಸು. ಕಾಲಿರುವ ನನಗೇ ಆಗುವುದಿಲ್ಲ, ಇನ್ನು ನೀನು ಹೇಗೆ ಮೇಲಕ್ಕೆ  ಹೋಗುತ್ತೀಯಾ?" ಎಂದನು.


ಅದಕ್ಕೆ ಇಬ್ಬನಿ ಹೇಳಿತು, "ನಾನು ಆಕಾಶಕ್ಕೆ ಏರುವವನೇ, ನಿರ್ಧಾರ ಮಾಡಿದ್ದೇನೆ. ಇನ್ನು ಅರ್ಧ ತಾಸು ನೀನು ಇಲ್ಲೇ ಇದ್ದು ನೋಡು." ಎಂದಿತು.


ಕೆಲವೇ ಕ್ಷಣಗಳಲ್ಲಿ ಸೂರ್ಯನ ಕಿರಣಗಳು ಇಬ್ಬನಿ ಮೇಲೆ ಬಿದ್ದವು. ಕಿರಣಗಳು ಇಬ್ಬನಿಯನ್ನು ಕುಡಿಯಲು ಶುರು ಮಾಡಿದವು. ಬಿಂದು ಕಿರಣಗಳ ಮೂಲಕ ಮೇಲಕ್ಕೆ ಏರಿತು. 


ಇಬ್ಬನಿ ಹೇಳಿತು, "ಮನುಷ್ಯನೇ ನೋಡು ನಾನು ಹೇಗೆ ಮೇಲಕ್ಕೆ ಏರಿದೆ! ಒಂದು ವೇಳೆ ನೀನು ನನ್ನ ಕುಡಿದಿದ್ದರೂ ನಿನ್ನ ಬೆವರಿನ ಮೂಲಕ ಮೇಲೆ ಏರುತ್ತಿದ್ದೆ" ಎಂದಿತು.

*ಇಷ್ಟು ನಿರ್ಧಾರ ಬದುಕಿನಲ್ಲಿ ಇರಬೇಕು.*


ಇದು ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ ಪ್ರವಚನ ಮಾಲಿಕೆಯಿಂದ.


*http://YouTube.com/c/JnanayogashramaVijayapura*


*༺☬꧁*🙏🙏🙏 *꧂☬༻*


.. *🌷ಶ್ರೀವಾಣಿ 7-5-2021🌷* ..

*╰═❂══✺༺☬༻✺══❂═╯*


ಒಂದು ದಿನ ಒಬ್ಬ ವ್ಯಕ್ತಿಯು ಒಂದು ಎತ್ತರದ ಬೆಟ್ಟವನೇರಿದ, ಅಲ್ಲಿ ನಿಂತು ನೋಡಿದ, ಸುತ್ತಮುತ್ತ ಎಲ್ಲಿಯೂ ಅಷ್ಟು ಎತ್ತರದ ಬೆಟ್ಟವಿರಲಿಲ್ಲ. ತಕ್ಷಣ ನನ್ನಷ್ಟು ಎತ್ತರ ಏರಿದವರು ಯಾರೂ ಇಲ್ಲವೆಂದು ಬೀಗಿದ. ಅಷ್ಟರಲ್ಲಿ ಅವನ ತೆಲೆಯ ಮೇಲೊಂದು ಹಕ್ಕಿ ಬಂದು ಕುಳಿತು ಹೇಳಿತು

 *"ನಿನ್ನಷ್ಟು ಎತ್ತರ ನೀನೇ! ಆದರೆ ನಿನಗಿಂತ ಎತ್ತರ ನಾನೇ"* 

ಆಶ್ಚರ್ಯಚಕಿತನಾದ ವ್ಯಕ್ತಿ ಕೇಳಿದ, "ನೀನು ಇಲ್ಲಿ ಯಾವಾಗ ಬಂದೆ?" 

ಹಕ್ಕಿ ಹೇಳಿತು, "ನೀನು ಇಂದೇ ಬಂದಿರುವೆ ನಾವು ದಿನಾಲು ಬರುತ್ತೇವೆ".


ಹಕ್ಕಿಯ ಈ ಮಾತು ಕೇಳುವುದೇ ತಡ ಆ ವ್ಯಕ್ತಿಯ ಹಮ್ಮೆಲ್ಲವೂ ಬಿಸಿಲಿಗೊಡ್ಡಿದ ಮಂಜಿನಂತೆ ಕರಗಿ ಹೋಗಿತ್ತು. 


ಆ ವ್ಯಕ್ತಿಯು ಅಷ್ಟು ಎತ್ತರ ಏರುವುದಕ್ಕೆ ಬೆಟ್ಟವೇ ಆಧಾರ ಎಂಬುದನ್ನು ಮರೆತ್ತಿದ್ದ. ಮಾನವನ ಸ್ವಭಾವವೇ ವಿಚಿತ್ರ ಎಷ್ಟೋ ಜನರು ತಾವು ವಿಶ್ವಸುಂದರರು, ವಿಶ್ವಸುಂದರಿಯರು ಎಂದು ಭಾವಿಸುತ್ತಾರೆ. ಆದರೆ ತಮ್ಮ ಸೌಂದರ್ಯಕ್ಕೆ ಶಕ್ತಿಗೆ *ಎಲ್ಲದಕ್ಕೂ ವಿಶ್ವವೇ ಆಧಾರ* ಎಂಬುದನ್ನು ಮರೆಯುತ್ತಾರೆ ಇದೆಂಥ ಭ್ರಮೆ!


 

ಇದು ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ ಪ್ರವಚನ ಮಾಲಿಕೆಯಿಂದ.


*http://YouTube.com/c/JnanayogashramaVijayapura*


*༺☬꧁*🙏🙏🙏 *꧂☬༻*