ಮಾನವನಲ್ಲಿರುವ ಚೈತನ್ಯವೇ ದೇವರು ಎಂದು ಬೆಂಗಳೂರಿನ ಹಾಸ್ಯ ಸಾಹಿತಿ ಇಂದುಮತಿ ಸಾಲಿಮಠ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ ಹದಿನೆಂಟನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ದೇವರೆಲ್ಲಿದ್ದಾನೆ ಎಂಬ ವಿಷಯ ಕುರಿತು ಪ್ರವಚನ ನೀಡಿದ ಅವರು ಶರಣರ ವಚನದಲ್ಲಿ ಬರುವ ತನ್ನ ತಾನರಿತು ತಾನಾರೆಂದು ತಿಳಿದರೆ ತಾನೇ ದೇವರು ಎಂಬ ಸಾಲು ಅಕ್ಷರಶಃ ಸತ್ಯ. ಹಾಲಿನಲ್ಲಿ ತುಪ್ಪ ಇರುವಂತೆ, ಗಾಳಿಯಲ್ಲಿ ಗಂಧ ಇರುವಂತೆ, ಹೂವಿನಲ್ಲಿ ಮಕರಂಧ ಇರುವಂತೆ ಪ್ರತಿಯೊಬ್ಬರ ಆತ್ಮದಲ್ಲಿಯೂ ದೇವನು ಇರುವನು. ಅಳುವ ಮಗುವಿನ ಕೆಂದುಟಿಯಲ್ಲಿ, ಅರಳಿದ ಹೂಗಳ ಸೌಗಂಧದಲ್ಲಿ, ಹರಿವ ನದಿಯಲಿ, ಸುರಿವ ಮಳೆಯಲಿ, ವಿವಿಧ ಬಗೆಯ ಮರ ಮತ್ತು ಪಕ್ಷಿಗಳಲ್ಲಿ ದೇವರ ಇರುವಿಕೆ ಕಂಡುಬರುತ್ತದೆ. ಅರಿತು ಹುಡುಕಿದರೆ ಪ್ರಕೃತಿಯ ಪ್ರತೀ ಅಂಶಗಳಲ್ಲಿಯೂ ದೇವಸ್ವರೂಪ ಗೋಚರವಾಗುತ್ತದೆ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಮಾತನಾಡಿ ವಚನಗಳು ಮಹಾಲಿಂಗದ ಬೆಳಕು, ಶಿವಯೋಗಕ್ಕೆ ಸಾಧನ, ಪರಮಶಾಂತಿಯ ಪ್ರಕಾಶವಾಗಿವೆ. ವಚನಪ್ರಭೆಯನ್ನು ತಲುಪಿಸಲು ಕೋವಿಡ್ನ ಸಂದಿಗ್ಧ ಪರಿಸ್ಥಿಯಲ್ಲೂ ಅಂತರ್ಜಾಲದ ಮುಖಾಂತರ ಪ್ರತಿಯೊಬ್ಬರನ್ನೂ ಒಂದೆಡೆ ಸೇರಿಸಿ ಸತ್ಸಂಗ ವಾತಾವರಣವನ್ನು ನಿರ್ಮಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮಾತೆ ಜಯದೇವಿತಾಯಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾರ್ಯದರ್ಶಿ ಅನಿತಾ ನಾಗರಾಜ್, ಕೊಪ್ಪಳ ಜಿಲ್ಲಾಧ್ಯಕ್ಷೆ ಅರುಣ ನರೇಂದ್ರ, ಮಂಡ್ಯ ಅಧ್ಯಕ್ಷ ಮಹದೇವಪ್ಪ, ಕೇಂದ್ರೀಯ ಸಂಚಾಲಕರಾದ ಸುಧಾ ಮೃತ್ಯುಂಜಯಪ್ಪ, ವಿ. ಲಿಂಗಣ್ಣ, ಹವ್ಯಾಸಿ ಗಾಯಕ ಬಸವರಾಜು, ಬಹ್ರೈನ್ ಶಿವಾನಂದ ಪಾಟೀಲ್, ಮಸ್ಕತ್ ಭೀಮ್ ನೀಲಕಂಠರಾವ್ ಹಂಗರ್ಗೆ, ನಂದೀಶ್ವರ್ ನಂದು, ಇಟಲಿಯ ಜಯಮೂರ್ತಿ, ಎಚ್. ಕೆ. ಚನ್ನಪ್ಪ, ಡಾ. ಸುಮಂಗಳ ಆರ್, ವೀರೇಶಮೂರ್ತಿ, ಸುನಿತಾ ಅಂಗಡಿ ಕೊಡೇಕಲ್, ಮಹಂತೇಶ್, ಸರಸ್ವತಿ ರಾಮಣ್ಣ, ನೀಲಾಂಬಿಕಾ ದೇವಿ ನಾಗರಾಜು, ಸುನಿತಾ ಅಂಗಡಿ ಕೊಡೇಕಲ್, ಪೂರ್ಣಿಮಾ, ಶ್ವೇತ ಅನುರಾಗ್, ಮಾರುತೇಶ್, ಜೆ. ಕವಿತ, ಅಶ್ವಿನಿ ಉಮೇಶ್, ದೀಪ ತೊಲಗಿ, ಭಾಗ್ಯ ತೆಗ್ಗಳ್ಳಿ, ಸಿದ್ಧಪ್ಪ ಬೋರಗಿ, ಶಿವಪುತ್ರಪ್ಪ, ನಾಗನಗೌಡಪಾಟೀಲ್, ವೀರೇಶಮೂರ್ತಿ, ಉಪಸ್ಥಿತರಿದ್ದರು.

No comments:
Post a Comment