Sunday, December 2, 2018

ವೃದ್ಧಾಶ್ರಮಗಳೆಡೆಗೆ ವಚನಗಳ ನಡಿಗೆ


ಮಂಡ್ಯ : ಮೌಲ್ಯಯುತ ಜೀವನ ನಡೆಸಲು ಶರಣರ ವಚನಗಳು ಸಹಕಾರಿ ಎಂದು ಮಂಡ್ಯ ಜಿಲ್ಲಾ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಪ್ರಭುಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಅನ್ನಪೂರ್ಣಮ್ಮ ಕುಟುಂಬದ ದತ್ತಿ ಅಂಗವಾಗಿ ಮಂಡ್ಯದ ಕೆರಗೋಡಿನ ವೃದ್ಧಾಶ್ರಮದಲ್ಲಿ ಹಮ್ಮಿಕೊಂಡಿದ್ದ “ವೃದ್ಧಾಶ್ರಮದೆಡೆಗೆ ವಚನಗಳ ನಡಿಗೆ” ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು  ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ಕಸತುಂಬಿ, ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿದಾಗ ಮನೆಯಲ್ಲಿ ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ ಎಂಬ ಸಂದೇಹ ಬರುತ್ತದೆ ನಮ್ಮ ಮನೆ ಶುದ್ಧವಾಗಿದ್ದರೆ ಅಲ್ಲಿ ಮನೆಯೊಡೆಯನಿದ್ದಾನೆ ಎಂಬುದು ತಿಳಿಯುತ್ತದೆ ಹಾಗೆಯೇ ಮನಶುದ್ಧವಾಗಿದ್ದರೆ ಅಲ್ಲಿ ಪರಮಾತ್ಮ ನೆಲೆಗೊಳ್ಳುತ್ತಾನೆ ಆದುದರಿಂದ ಪ್ರತಿಯೊಬ್ಬರೂ ಕೂಡ ವಚನಗಳನ್ನು ಒಪ್ಪಿ ಅಪ್ಪಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಮನಶುದ್ಧವಾಗುತ್ತದೆ ಪ್ರತಿಯೊಬ್ಬರ ಮನ ಪರಿವರ್ತನೆಗೆ ಶರಣು ವಿಶ್ವವಚನ ಫೌಂಡೇಷನ್ ಕೈಗೊಂಡಿರುವ ವಿನೂತನ ಚಟುವಟಿಕೆಗಳು ಪ್ರತಿಯೊಬ್ಬರನ್ನು ಸಂಸ್ಕಾರದತ್ತ ಕೊಂಡೊಯ್ಯಲು ಸಹಕಾರಿಯಗಿದೆ ಎಂದರು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ನಾವು ಯಾವುದೇ ಕೆಲಸವನ್ನು ವಾರ, ದಿನವೆಂದು ಪರಿಗಣನೆಗೆ ತೆಗೆದುಕೊಳ್ಳದೆ ಕಾಯಕದ ಬಗ್ಗೆ ಗೌರವ ನೀಡಿ ಅದರಲ್ಲಿ ನಿರತರಾದರೆ ನಾವು ಅಬಿವೃದ್ಧಿ ಹೊಂದಲು ಸಾಧ್ಯ ಆದುದರಿಂದ ನಾವು ದಿನಶ್ರೇಷ್ಠವೆಂಬ ದುರಾಚಾರಿಯ ಮುಖವ ನೋಡಲಾಗದು ಎಂಬ ಬಸವಣ್ಣನವರ ವಚನದ ಆಶಯದಂತೆ ನಡೆದುಕೊಂಡಾಗ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ, ವಚನಗಳನ್ನು ಅರಿತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವೃದ್ಧಾಶ್ರಮಗಳ ಸಂಖ್ಯೆ ಇಳಿಮುಖವಾಗಿ ಪ್ರತಿಯೊಬ್ಬರ ಮನೆ ಮಹಾಮನೆಯಾಗುತ್ತದೆ. ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲಸಂಗಮದೇವನ ಎಂಬಂತೆ ನಾವು ವೃದ್ಧರಾದಾಗ ದೇವರನ್ನು ನೂರು ಸಲ ಬೇಡುವುದಕ್ಕಿಂತ ಯುವಕರಾಗಿದ್ದಾಗ ಕೇವಲ ಒಂದು ಸಲ ಬೇಡುವುದಕ್ಕೆ ಸಮ ಎಂದರು. ಶರಣು ವಿಶ್ವವಚನ  ಫೌಂಡೇಷನ್ ನಿರ್ದೇಶಕಿ ರೂಪಕುಮಾರಸ್ವಾಮಿ ಮಾತನಾಡಿ ವಚನಸಾಹಿತ್ಯ ವಿಶ್ವಸಾಹಿತ್ಯವನ್ನು ಶ್ರೀಮಂತ ಮಾಡಿದಂತಹ ಸಾಹಿತ್ಯ. ದೇವರನ್ನು ಗುಡಿಯಲ್ಲಿ ಹೋಗಿ ನೋಡುವುದಕ್ಕಿಂತ ತಂದೆತಾಯಿಗಳ ರೂಪದಲ್ಲಿ ನೋಡಬೇಕು. ತನ್ನ ತಾನರಿತು ತಾನಾರೆಂದು ತಿಳಿದೊಡೆ ತಾನೆ ದೇವರು ನೋಡಾ ಅಪ್ರಮಾಣ ಕೂಡಲಸಂಗಮದೇವ ಎಂಬ ಬಾಲಸಂಗಯ್ಯನವರ ವಚನದಂತೆ ನಮ್ಮನ್ನು ನಾವು ಅರಿತು ಸುಸಂಸ್ಕøತ ವ್ಯಕ್ತಿಗಳಾಗಲು ಪ್ರಯತ್ನಿಸಬೇಕು ಎಂದರು. ದತ್ತಿ ದಾನಿಗಳಾದ ಪ್ರೇಮಕುಮಾರಿ ಪ್ರಭುಸ್ವಾಮಿ, ವೃದ್ಧಾಶ್ರಮದ ಕಾರ್ಯದರ್ಶಿ ಆತ್ಮಾನಂದ, ಕಾವ್ಯಶ್ರೀ, ಅನಿಲ್ ಕುಮಾರ್ ವಜಂತ್ರಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಗೌರವ ಕಾರ್ಯದರ್ಶಿ ಪಂಪಾಪತಿ, ಮೈಸೂರು ಜಿಲ್ಲಾ ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಗಂಗಾಧರಸ್ವಾಮಿ, ಸಿದ್ಧಲಿಂಗಪ್ಪ, ದೇವಮ್ಮ, ರತ್ನ ಬಸವರಾಜು, ಗಿರಿಜೇಶ್, ವಚನ, ಕಾವ್ಯಶ್ರೀ, ಕಾವೇರಿ ಅನಿಲ್ ಕುಮಾರ್, ಉಪಸ್ಥಿತರಿದ್ದರು.
========================================================================


No comments:

Post a Comment