Sunday, December 2, 2018

ವಿಶೇಷ








ಲೋಕ ಬೆಳಗಿದ ಶಿವಯೋಗಿ ಶಿವಕುಮಾರಸ್ವಾಮಿಗಳು

ನಾ ದೇವನಲ್ಲದೆ ನೀ ದೇವನೆ?
ನೀ ದೇವನಾದಡೆ ಎನ್ನನೇಕೆ ಸಲಹೆ ?
ಆರೈದು ಒಂದು ಕುಡಿತೆ ಉದಕವನೆರೆವೆ,
ಹಸಿವಾದಾಗ ಓಗರವನ್ನಿಕ್ಕುವೆ,
ನಾ ದೇವ ಕಾಣಾ ಗುಹೇಶ್ವರಾ !
ದೇವರಿಗೆ ಸವಾಲಾಕಿರುವ ಅಲ್ಲಮಪ್ರಭುದೇವರ ವಚನ ಸಂಪೂರ್ಣವಾಗಿ ಶಿವಕುಮಾರಮಹಾಸ್ವಾಮಿಗಳಿಗೆ ಅನ್ವಯವಾಗುತ್ತದೆ. ಏಕೆಂದರೆ ಅವರು ಪ್ರತಿವರ್ಷ  ಮಠದಲ್ಲಿ ಹತ್ತುಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಮತ್ತು ದಾಸೋಹ ನೀಡಿ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿ ಮಠಕ್ಕೆ ಬಂದ ಭಕ್ತರಿಗೆ ಆಶೀರ್ವಾದ ನೀಡುವುದರ ಜೊತೆಗೆ ಪ್ರಸಾದ ಮಾಡಿಸಿ ಕಳಿಸುತ್ತಿದ್ದರು. ಅವರ ಈ ಭಾವನೆ ಸರ್ವರಲ್ಲೂ ನಡೆದಾಡುವ ದೇವರು ಎಂದು ರೂಡಿಯಲ್ಲಿ ಬರಲು ಕಾರಣವಾಯಿತು. ಪೂಜ್ಯ ಶ್ರಿÃಗಳಿಂದ ಆಶೀರ್ವಾದ ಪಡೆದು ಪ್ರಾರಂಭಿಸಿದ ಯಾವುದೇ ಕೆಲಸ ಯಶಸ್ವಿಯಾಗುತ್ತಿತ್ತು ಎಂಬುದಕ್ಕೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆಯೇ ಸಾಕ್ಷಿ. ೨೦೧೬ ರಲ್ಲಿ ಸಂಸ್ಥೆಯ ಶರಣು ದಿನಚರಿ ಬಿಡುಗಡೆ ಮಾಡುವುದರ ಮುಖಾಂತರ ಹರಸಿ ಆಶೀರ್ವದಿಸಿದರು. ಅವರ ಹಾರೈಕೆಯ ಫಲ ಇಂದು ಸಂಸ್ಥೆಯು ದೇಶ ವಿದೇಶಗಳಲ್ಲಿ ವಚನಪ್ರಸಾರ ಕಾರ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. 
ಪೂಜ್ಯ ಶ್ರಿÃಗಳಿಗೆ ವಚನಗಳ ಬಗ್ಗೆ ತುಂಬಾ ಆಸಕ್ತಿ ಪ್ರತಿದಿನ ಸಂಜೆ ನಡೆಯುತ್ತಿದ್ದ ದೈನಂದಿನ ಪ್ರಾರ್ಥನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ವಚನಗಳನ್ನು ಹೇಳಿಕೊಡುವುದರ ಮುಖಾಂತರ ವಚನದಂತೆ ನಡೆಯಲು ತಿಳಿಸುತ್ತಿದ್ದರು. ಕಳಬೇಡ, ಕೊಲಬೇಡ ಎಂಬ ಬಸವಣ್ಣನವರ ಸಪ್ತಸೂತ್ರಗಳ ವಚನದ ಬಗ್ಗೆ ಅವರು ನೀಡುತ್ತಿದ್ದ ವಿವರಣೆಯನ್ನು ಕೇಳುತ್ತಿದ್ದ ಕರ್ಣಗಳೇ ಪಾವನ. ಶ್ರಿÃ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ವಿವಿಧ ಸ್ಥರದ ಉದ್ಯೊÃಗಗಳಲ್ಲಿ ತೊಡಗಿಸಿಕೊಂಡು ಮಠದ ಕೀರ್ತಿಯನ್ನು ಬೆಳಗಿದ್ದಾರೆ.
ಜೋಳವಾಳಿಯಾನಲ್ಲ
ವೇಳೆವಾಳಿಯವ ನಾನಯ್ಯ
ಹಾಳುಗೆಟ್ಟೊÃಡುವ ಆಳು
ನಾನಲ್ಲವಯ್ಯಾ ಕೇಳು
ಕೂಡಲಸಂಗಮದೇವಾ
ಮರಣವೆ ಮಹಾನವಮಿ
ಬಸವಣ್ಣನವರ ವಚನದಂತೆ ಜೋಳವಾಳಿಯವರಾಗದೆ ಅಂದರೆ ಕೂಲಿಗಾಗಿ ದುಡಿಯದೆ ವೇಳೆವಾಳಿಯವರಾಗಿ ಅಂದರೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶಿವಕೈಂಕರ್ಯದಲ್ಲಿ ತೊಡಗಿಸಿಕೊಂಡ ಶ್ರಿÃಗಳು ಮರಣವನ್ನು ಮಹಾನವಮಿ ರೀತಿ ಸ್ವಿÃಕರಿಸಿ ಸತ್ಯನಿಷ್ಠೆಯ ಸಾಧಕನ ಸಾರ್ಥಕ ಜೀವನವನ್ನು ನಡೆಸಿದವರು.
ಲೋಕದಂತೆ ಬಾರರು, ಲೋಕದಂತೆ ಇರರು
ಲೋಕದಂತೆ ಹೋಗರು ನೋಡಯ್ಯ.
ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು
ಮುಕ್ತಿಯಂತೆ ಹೋಹರು ನೋಡಯ್ಯಾ
ಉರಿಲಿಂಗದೇವಾ ನಿಮ್ಮ ಶರಣರು
ಉಪಮಾತೀತರಾಗಿ ಉಪಮಿಸಬಾರದು 
ಎಂಬ ಉರಿಲಿಂಗದೇವರ ವಚನದಂತೆ ಲೋಕದಲ್ಲಿ ಲಕ್ಷಾಂತರ ಜನ ಹುಟ್ಟಿ, ಬದುಕಿ ಯಾವುದೇ ಸಾಧನೆ ಮಾಡದೆ ಇಹಲೋಕ ಮುಗಿಸುವುದನ್ನು ಕಾಣಬಹುದು. ಆದರೆ ಶರಣರು ಪುಣ್ಯದಂತೆ ಬಂದು, ಜ್ಞಾನದಂತೆ ಇದ್ದು, ಮುಕ್ತಿಯಂತೆ ಹೋದವರು. ಶರಣರ ಹಾದಿಯಲ್ಲಿ ನಡೆದು ಕೋಟಿಗೊಬ್ಬ ಶರಣ ಎನಿಸಿಕೊಂಡವರು ಪೂಜ್ಯ ಶ್ರಿÃಗಳು.
ವ್ಯಾಧನೊಂದು ಮೊಲನ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ, 
ನೆಲೆನಾಳ್ವನ ಹೆಣನೆಂದಡೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ !
ಮೊಲನಿಂದ ಕರಕಷ್ಠ ನರನ ಬಾಳುವೆ ! 
ಸೆಲೆ ನಂಬೊ ನಮ್ಮ ಕೂಡಲಸಂಗಮದೇವನ.
ಬಸವಣ್ಣನವರ ವಚನದ ಆಶಯದಂತೆ ಸತ್ತ ಮೊಲವನ್ನು ಯಾರಾದರೂ ಕೊಂಡುಕೊಳ್ಳುತ್ತಾರೆ. ಆದರೆ ಆಗರ್ಭ ಶ್ರಿÃಮಂತನಾಗಿದ್ದರೂ ಮನುಷ್ಯನ ಸತ್ತ ದೇಹವನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಪ್ರಾಣ ಇರುವಾಗಲೇ ಪರಶಿವನು ಮೆಚ್ಚುವಂತಹ ಕೆಲಸವನ್ನು ಮಾಡಿ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕಾಗುತ್ತದೆ. ಆ ರೀತಿ ಜೀವನವನ್ನು ಸಾರ್ಥಕಗೊಳಿಸಿಕೊಂಡ ಶಿವಕುಮಾರಮಹಾಸ್ವಾಮಿಗಳು ಬಯಲಲ್ಲಿ ಬಯಲಾಗಿದ್ದಾರೆ. ಅವರು ಬಯಲಾದರೂ ಅವರ ಸೇವೆ ಪ್ರತಿಯೊಬ್ಬರ ಮನದಾಳದಲ್ಲಿ ಅಚ್ಚಳಿಯದೇ ಉಳಿದು ಅಮರರಾಗಿದ್ದಾರೆ.
                                                                                                             ವಚನ ಕುಮಾರಸ್ವಾಮಿ
                                                                                                                   ಸಂಸ್ಥಾಪಕರು
                                                                                                 ಶರಣು ವಿಶ್ವವಚನ ಫೌಂಡೇಷನ್, ಮೈಸೂರು
======================================================================


ಮೈಸೂರು: ಪ್ರೇಮ ಮತ್ತು ಸೇವೆ ಸುವರ್ಣ ರಾಜ್ಯದ ಎರಡು ಸುವರ್ಣ ಧ್ವಾರಗಳು ಎಂದು ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಜೆ.ಎಸ್.ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದಿಂದ ಹುಣಸೂರು ತಾಲ್ಲೂಕು ಗೆಜ್ಜಯ್ಯನ ವಡ್ಡರಗುಡಿಯಲ್ಲಿ ಏರ್ಪಡಿಸಿದ್ದ ಸಮಾಜಕಾರ್ಯ ಶಿಬಿರದಲ್ಲಿ ‘ವಚನ ಸಾಹಿತ್ಯ ಮತ್ತು ಬದುಕು’ ವಿಷಯದ ಬಗ್ಗೆ  ಉಪನ್ಯಾಸ ನೀಡಿ ಮಾತನಾಡಿದ ಅವರು ವಚನಗಳು ಇಡೀ ಮನುಕುಲವನ್ನು ಸದ್ಗತಿಯೆಡೆಗೆ ಕೊಂಡೊಯ್ಯುತ್ತವೆ. ಏಕೆಂದರೆ ಶರಣರು ತಾವು ಬದುಕು ಸಾಗಿಸುತ್ತ ಅವರಿಗೆ ಆದಂತಹ ಅನುಭವಗಳು ಹಾಗೂ ಸಮಾಜದಲ್ಲಿ ಕಂಡುಬಂದಂತಹ ಮೌಡ್ಯತೆ, ಅಂಧಕಾರ, ಶೋಷಣೆ, ಅಸಮಾನತೆ, ಅಸ್ಪøಶ್ಯತೆ ಮುಂತಾವುಗಳನ್ನು ಹೋಗಲಾಡಿಸಲು ವಚನಗಳನ್ನು ರಚಿಸಿ ಅವುಗಳನ್ನು ಅನುಭವಮಂಟಪದಲ್ಲಿ ಮಂಡಿಸುತ್ತಿದ್ದರು. ತದನಂತರ ಅವು ಒಪ್ಪಿಗೆಯಾಗಿ ಇಡೀ ಮನುಕುಲಕ್ಕೆ ಬಳಕೆಯಾದವು. 242 ಕ್ಕಿಂತಲೂ ಹೆಚ್ಚಿನ ವಚನಕಾರರು 24000 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದರೆ ಅವುಗಳನ್ನು ಅಧ್ಯಯನ ಮಾಡುವುದರ ಮುಖಾಂತರ ತಾವುಗಳು ಸುಸಂಸ್ಕøತರಾಗುವುದರ ಜೊತೆಗೆ ಸುಸಂಸ್ಕøತ ಸಮಾಜವನ್ನು ಕಟ್ಟಲು ಶ್ರಮಿಸಿ ಎಂದು ಕರೆನೀಡಿದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪಕುಮಾರಸ್ವಾಮಿ ಮಾತನಾಡಿ ಮಹಿಳೆಯರು ಕೇವಲ ಮನೆಗೆ ಸೀಮಿತ ಎಂಬಂತಹ 12 ನೇ ಶತಮಾನದಲ್ಲಿ ಅಕ್ಕಮಹಾದೇವಿಯವರು ಅಂತಹ ಆಚರಣೆಗಳಿಗೆಲ್ಲಾ ತಿಲಾಂಜಲಿ ಹೇಳಿ ದಿಟ್ಟನಿರ್ದಾರ ಕೈಗೊಂಡು ಇಡೀ ಮಹಿಳಾಕುಲಕ್ಕೆ ಮಾದರಿಯಾಗಿದ್ದಾರೆ. ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದನೆಗಳಿಗೆ ಕಿವಿಗೊಡಬಾರದು ಎಂದು ಹೇಳುವುದರ ಮೂಲಕ ಇಡೀ ಮನುಕುಲಕ್ಕೆ ಜಾಗೃತಿಯ ನಾದ ಬಾರಿಸಿದರು. ಅನುಭವಮಂಟಪದಲ್ಲಿ 33 ಕ್ಕೂ ಹೆಚ್ಚು ವಚನಕಾರ್ತಿಯರಿಗೆ ಅವಕಾಶಕೊಟ್ಟಿದ್ದರು ಎಂದರೆ ಶರಣರು ಸಮಾನತೆಗೆ ಯಾವ ರೀತಿ ಆದ್ಯತೆ ಕೊಟ್ಟಿದ್ದರು ಎಂಬುದನ್ನು ಅರಿಯಬೇಕು ಎಂದರು. ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ ಸದಸ್ಯ ಬಸವರಾಜಪ್ಪ, ಗ್ರಾಮದ ಮುಖಂಡ ಕೆಂಡಗಣ್ಣಸ್ವಾಮಿ ಉಪಸ್ಥಿತರಿದ್ದರು.
=====================================================================


ಮೈಸೂರು:- ಮನೆಯನ್ನೇ ಸುಂದರ ತೋಟವನ್ನಾಗಿ ಮಾಡಿದಾಗ ದೇಶದ ಪ್ರಾಕೃತಿಕ ಸಂಪತ್ತು ಹೆಚ್ಚಾಗುತ್ತದೆ ಎಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಡಾ. ಮೃತ್ಯುಂಜಯಪ್ಪ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಮೈಸೂರಿನ ಡಾ.ಮೃತ್ಯುಂಜಯಪ್ಪರವರ ಸಮೃದ್ಧಿ ಮನೆಯಲ್ಲಿ ಏರ್ಪಡಿಸಿದ್ಧ ಅಭಿನಂದನಾ ಸಮಾರಂಭವನ್ನು ಕುರಿತು ಮಾತನಾಡಿದ ಅವರು ಒಂದು ಮಗು ಜನಿಸಿದ ಕೂಡಲೇ ಅದರ ನೆನಪಿಗೆ ಹತ್ತು ಸಸ್ಯಗಳನ್ನು ನೆಟ್ಟು ಪೋóಷಣೆ ಮಾಡಿದಾಗ ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮಾಜಿಕ ಆರೋಗ್ಯವನ್ನು ಕಾಪಾಡಿದಂತಾಗುತ್ತದೆ. ಒಂದು ಗಿಡವನ್ನು ಕಡಿಯಬೇಕಾದರೆ ಹತ್ತು ಬಾರಿ ಯೋಚಿಸಿ ಕಡಿಯಬೇಕು ಕಡಿಯುವ ಮರದ ಬದಲಾಗಿ ಹತ್ತು ಗಿಡಗಳನ್ನು ಹಾಕಿ ಸಂರಕ್ಷಿಸಿ ಪೋಷಿಸಬೇಕು ಎಂದರು. ಜೊತೆಗೆ ಅದ್ಧೂರಿ ಮದುವೆ ಮಾಡುವ ಬದಲು ಸರಳ ಮದುವೆ ಮಾಡಿ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲು ಕರೆ ನೀಡಿದರು ಮತ್ತು ಅವರ ಮೂರು ಮಕ್ಕಳು ಸಾಫ್ಟ್‍ವೇರ್ ಇಂಜನಿಯರ್ ಆಗಿದ್ದರೂ ಅವರಿಗೆ ವಚನಮಾಂಗಲ್ಯ ಮಾಡಿ ನಾನು ಆದರ್ಶಕ್ಕೆ ನಾಂದಿ ಹಾಡಿದ್ದೇನೆ ಎಂದರು. ನಂತರ ಮಾತನಾಡಿದ ಮೈಸೂರು ಆರ್ಟ ಗ್ಯಾಲರಿಯ ಶಿವಲಿಂಗಪ್ಪ ನಾವು ಬಸವಣ್ಣನವರನ್ನು ಗುರುವಾಗಿ ಸ್ವೀಕರಿಸಿ ಅವರ ವಚನಗಳನ್ನು ಪಾಲಿಸಿದಾಗ ಅತ್ಯುತ್ತಮ ಸುಸಂಸ್ಕøತರಾಗಬಹುದು ಹಾಗೂ ಇಷ್ಟಲಿಂಗದ ಜನಕ ಬಸವಣ್ಣನವರಾಗಿದ್ದು ಅವರ ನೀಡಿರುವ ಇಷ್ಟಲಿಂಗವನ್ನು ಜಾತಿಬೇದವಿಲ್ಲದೆ ಪ್ರತಿಯೊಬ್ಬರೂ ಪೂಜಿಸಿದಾಗ ಏಕಾಗ್ರತೆ ಜೊತೆಗೆ ಸಾಮಾಜಿಕ ಸಾಮರಸ್ಯವನ್ನು ಕಾಣಬಹುದು ಎಂದರು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಅವರ ಆದರ್ಶಗಳನ್ನು ನಾವು ಪಾಲಿಸಿ ನಾವು ಕೂಡ ಆ ನಿಟ್ಟಿನಲ್ಲಿ ಸಾಗಲು ಸಾಧ್ಯವಾಗುತ್ತದೆ. ಮನೆಯನ್ನೇ ಸುಂದರ ವನವನ್ನಾಗಿ ಮಾಡಿ ವಿಶ್ವದಲ್ಲಿ ವಿನಾಶದ ಅಂಚಿನಲ್ಲಿರುವ ವಿವಿಧ ಜಾತಿಯ ಸಸ್ಯಸಂಕುಲವನ್ನು ಸಂರಕ್ಷಿಸುತ್ತಿರುವ ಮೃತ್ಯುಂಜಯಪ್ಪರವರ ಶ್ರಮ ನಿಜವಾಗಿಯೂ ಸ್ತುತ್ಯಾರ್ಹವಾದುದು ಎಂದರು. ಇದೇ ಸಂದರ್ಭದಲ್ಲಿ ಬಸವಜಯಂತಿ ಕಾರ್ಯಕ್ರಮದಲ್ಲಿ ವಚನನೃತ್ಯಮಾಡಿದ ಮಹಿಳೆಯರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು ಜೊತೆಗೆ ಕೇಂದ್ರಸರ್ಕಾರದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಡಾ,ಮೃತ್ಯುಂಜಯಪ್ಪ, ವಚನಚಿತ್ರಕಲಾ ವೀರಯ್ಯದತ್ತಿ ಪ್ರಶಸ್ತಿ ಪುರಸ್ಕøತ ಶಿವಲಿಂಗಪ್ಪ, ಬಸವಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಿಂದ ಆಚರಿಸಲು ಕಾರಣಕರ್ತರಾದ ಟಿ.ಎಸ್.ಲೋಕೇಶ್ ಮತ್ತು ಸಾಹಿತಿ ನಗರ್ಲೆ ಶಿವಕುಮಾರ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷೆ ಜಯಾಗೌಡ ಮತ್ತು ಪ್ರಸನ್ನಲಕ್ಷ್ಮಿ ಕಲಾದಾರ್‍ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಶ್ರೀಕಂಠಮೂರ್ತಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಸುಧಾಮೃತ್ಯುಂಜಯಪ್ಪ, ಕಲ್ಯಾಣಿ ನಟರಾಜ್, ರಾಜೇಶ್ವರಿ ಮಹೇಶ್, ಧನ್ಯ ಸತ್ಯೇಂದ್ರಮೂರ್ತಿ, ಸುಜಾತಪ್ರಭುಸ್ವಾಮಿ, ರಾಜಶೇಖರ್, ಶ್ರೀಕಂಠಸ್ವಾಮಿ, ಸುಜಾತದುರ್ಗೇಶ್, ಪೂರ್ಣಿಮಾ, ದಿವ್ಯಚೇತನ್, ಗೀತಾಶ್ರೀಕಂಠಮೂರ್ತಿ, ಶೋಭಾರಾಣಿ, ಲತಾ, ವಿಜಯಮಂಜುನಾಥ್, ಕಾಂತಾ ಮುಂತಾದವರು ಉಪಸ್ಥಿತರಿದ್ದರು.
=====================================================================


ಮೈಸೂರು: ವಿದ್ಯಾರ್ಥಿಗಳು ಲಕ್ಷ್ಮಿಪುತ್ರರಾಗದೆ ಸರಸ್ವತಿ ಪುತ್ರರಾಗಬೇಕು  ಎಂದು ಸಾಹಿತಿ ಮಲೆಯೂರು ಗುರುಸ್ವಾಮಿ ಹೇಳಿದರು. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಶಿವರಾತ್ರಿ ರಾಜೇಂದ್ರಭವನದಲ್ಲಿ ಏರ್ಪಡಿಸಿದ್ದ ಶಿವಕುಮಾರಸ್ವಾಮಿಗಳ 110 ನೇ ಜನ್ಮದಿನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ  ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಭೆಗೆ ಸೂಕ್ತ ಪುರಸ್ಕಾರ ದೊರೆತಾಗ ಅವು ಅರಳಿ ದೇಶದ ಸಂಪತ್ತಾಗುತ್ತದೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಅಭಿನಂದಿಸಿರುವುದು ಸ್ತುತ್ಯಾರ್ಹವಾದ ಕೆಲಸ ಎಂದರು. ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಸಂಸ್ಕಾರ ರೂಢಿಸಿಕೊಂಡಾಗ ಅವರ ವಿದ್ಯಾರ್ಥಿ ಜೀವನಕ್ಕೆ ಮೌಲ್ಯ ಬರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಬೇಬಿಮಠದ ತ್ರಿನೇತ್ರ ಮಹಾಂತಶಿವಯೋಗಿ ಮಹಾಸ್ವಾಮಿಗಳು ಮಾತನಾಡಿ ನಾವು ಪ್ರಥಮ ಸ್ಥಾನವನ್ನು ನಮ್ಮ ದೇಶಕ್ಕೆ ನೀಡಿ ದೇಶಪ್ರೇಮಿಗಳಾಗಬೇಕು ಇದರಿಂದ ದೇಶಭಕ್ತಿ ಇಮ್ಮಡಿಯಾಗುವುದರೊಂದಿಗೆ ದೇಶದ ಶಕ್ತಿಯಾಗಿ ಮಾರ್ಪಾಡಾಗುತ್ತೇವೆ ಎಂದರು. ಮನುಷ್ಯ ಜೀವ ಇರುವವರೆಗೆ ಮಾತ್ರ ಬೆಲೆ ಆನಂತರ ಅದಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಜೀವ ಇರುವಂತಹ ಈ ದೇಹ ಗಟ್ಟಿಯಾಗಿರುವಾಗಲೇ ಸತ್ಕಾರ್ಯ ಮಾಡಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಚನಕುಮಾರಸ್ವಾಮಿ, ಮಂಜುನಾಥ್, ಐಶ್ವರ್ಯ, ಪ್ರಭಾವತಿರವರನ್ನು ಮತ್ತು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ.ಇಂದುಮತಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಸಿ.ಡಿ.ಬಸವರಾಜು, ಮೈಸೂರು ಜಿಲ್ಲಾ ಮಹಾಸಭಾದ ಅಧ್ಯಕ್ಷ ಹಿನ್ಕಲ್ ಬಸವರಾಜು, ಬಸವಬಳಗಗಳ ಒಕ್ಕೂಟದ ಅಧ್ಯಕ್ಷ ಟಿ.ಎಸ್.ಲೋಕೇಶ್ ಪ್ರಧಾನಕಾರ್ಯದರ್ಶಿ ಕೆಂಪಣ್ಣ ಉಪಸ್ಥಿತರಿದ್ದರು
=======================================================================


avÀæ¤Ã®UÀAUÁ ªÀÄ»¼Á §¼ÀUÀ eÉ.J¸ï.J¸ï PÁ£ÀÆ£ÀÄ PÁ¯ÉÃf£À°è K¥Àðr¹zÀÝ §¸ÀªÀdAiÀÄAw,CPÀ̪ÀĺÁzÉëdAiÀÄAw ªÀÄvÀÄÛ gÉÃtÄPÁ dAiÀÄAw PÁAiÀÄðPÀæªÀÄzÀ°è  £ÉÃvÀÈvÀézÀ°è CAvÀgÀ¸ÀªÀiÁd gÀ¸À¥Àæ±Éß PÁAiÀÄðPÀæªÀÄzÀ°è «eÉÃvÀgÁzÀªÀjUÉ §ºÀĪÀiÁ£À ¤ÃqÀ¯Á¬ÄvÀÄ. PÁAiÀÄðPÀæªÀÄzÀ°è ±ÀgÀtÄ «±ÀéªÀZÀ£À ¥sËAqÉñÀ£ï ¸ÀA¸ÁÜ¥ÀPÀ ªÀZÀ£À PÀĪÀiÁgÀ¸Áé«Ä, ªÀĪÀÄvÀ ¸ÀÄgÉñï, ¤Ã¯ÁA©PÁzÉë £ÁUÀgÁeï, gÁzsÁ¤Ã®PÀAoÀ, dAiÀÄUËqÀ G¥À¹ÜvÀjzÀÝgÀÄ.
=======================================================




ªÉÄʸÀÆgÀÄ:- ±ÀQÛzsÁªÀÄzÀ°è ºÀÆUÀ¼ÀAvÉ PÀAUÉÆ½¸ÀÄwÛgÀĪÀ ªÀÄPÀ̼À£ÀÄß £ÉÆÃqÀ®Ä JgÀqÀÄ PÀtÄÚUÀ¼ÀÄ ¸Á®zÀÄ JAzÀÄ ±ÀgÀtÄ «±ÀéªÀZÀ£À ¥sËAqÉñÀ£ï ¸ÀA¸ÁÜ¥ÀPÀ ªÀZÀ£À PÀĪÀiÁgÀ¸Áé«Ä ºÉýzÀgÀÄ. ªÉÄʸÀÆj£À £ÀAd£ÀUÀÆqÀÄ gÀ¸ÉÛAiÀİègÀĪÀ ±ÀQÛzsÁªÀÄzÀ°è CjªÀ£À ªÀÄ£É ªÀÄ»¼Á §¼ÀUÀ ªÀÄvÀÄÛ PÀzÀ½ ªÉâPÉ K¥Àðr¹zÀÝ ªÀÄPÀ̼Éà PÀxÉ PÉÃ¼ÉÆÃt §¤ß JA§ PÁAiÀÄðPÀæªÀÄzÀ°è PÀxÉUÀ¼À£ÀÄß ºÉüÀÄvÁÛ ªÀiÁvÀ£ÁrzÀ CªÀgÀÄ AiÀiÁªÀÅzÉà ºÀÆ »ªÀiÁ®AiÀÄ ¥ÀªÀðvÀªÀ£ÉßÃj vÀ¥À¸ÀÄì ªÀiÁr®è, ±Á¯Á PÁ¯ÉÃdÄ ¸ÉÃj ¥ÀzÀ« ¥ÀqÉ¢®è DzÀgÉ J¯Áè ºÀÆUÀ¼ÀÄ zÉêÀvÉUÀ½UÀ¦ðvÀªÁUÀÄvÀÛªÉ PÁgÀt ºÀÆUÀ¼À ¸ËAzÀAiÀÄð¢AzÀ®è CªÀÅUÀ¼À ¥ÀjªÀļÀ¢AzÀ CAvÀºÀ ¥ÀjªÀļÀ¨sÀjvÀ ªÀåQÛUÀ¼ÁV gÀÆ¥ÀÄUÉÆ¼ÀÄîªÀvÀÛ ºÉeÉÓ ºÁPÀ®Ä ±ÀQÛzsÁªÀÄzÀ ªÀÄPÀ̼ÀÄ PÀxÉUÀ¼À°è §gÀĪÀ ªÀiË®åUÀ¼À£ÀÄß fêÀ£ÀzÀ°è C¼ÀªÀr¹PÉÆ¼Àî¨ÉÃPÀÄ JAzÀgÀÄ. §¸ÀªÀtÚ£ÀªÀgÀ ¸À¥ÀÛ¸ÀÆvÀæUÀ¼ÁzÀ PÀ¼À¨ÉÃqÀ, PÉÆ®¨ÉÃqÀ, ºÀĹAiÀÄ £ÀÄrAiÀÄ®Ä ¨ÉÃqÀ, ªÀÄĤAiÀĨÉÃqÀ, vÀ£Àß §tÂÚ¸À¨ÉÃqÀ, E¢gÀ ºÀ½AiÀÄ®Ä ¨ÉÃqÀ, C£ÀåjUÉ C¸ÀºÀå ¥ÀqÀ¨ÉÃqÀ JA§ ªÀZÀ£À ªÀiË®åªÀ£ÀÄß CjvÀgÉ J¯Áè zsÀªÀÄðzÀ ¸ÁgÀªÀ£ÀÄß CjvÀAvÁUÀÄvÀÛzÉ F ªÀiË®åªÀ£ÀÄß £ÁªÀÅ EA¢¤AzÀ¯Éà C¼ÀªÀr¹PÉÆAqÀgÉ £ÀªÀÄä fêÀ£À §AUÁgÀªÁUÀÄvÀÛzÉ JAzÀgÀÄ. UÁAiÀÄQ ±ÉéÃvÀ ªÀÄqÀ¥Áàr ªÀÄPÀ̽UÉ eÁ£À¥ÀzÀ VÃvÉUÀ¼À£ÀÄß ºÉýPÉÆqÀĪÀÅzÀgÀ eÉÆvÉUÉ D VÃvÉAiÀÄ°è §gÀĪÀ ªÀiË®åUÀ¼À£ÀÄß ªÀÄPÀ̽UÉ ºÉýPÉÆlÖgÀÄ ªÀÄvÀÄÛ PÀĪÉA¥ÀÄgÀªÀgÀ QAzÀjeÉÆÃVAiÀÄ ºÁqÀ£ÀÄß ªÀÄPÀ̽UÉ CxÉÊð¹ £ÀÄrzÀAvÉ £ÀqÉAiÀÄ¢zÀÝgÉ DUÀĪÀ C£ÁºÀÄvÀzÀ §UÉÎ w½¹zÀgÀÄ. PÁAiÀÄðPÀæªÀÄzÀ°è DAzÉÆÃ®£À ¢£À¥ÀwæPÉAiÀÄ gÁd±ÉÃRgÀPÉÆÃn, Cj«£À ªÀÄ£É ªÀÄ»¼Á§¼ÀUÀzÀ CzsÀåPÉë zsÀ£Àå¸ÀvÉåÃAzÀæªÀÄÆwð, PÀzÀ½ ªÉâPÉ CzsÀåPÉë PÀ¯Áåt £ÀlgÁdÄ, gÁeÉñÀéj ªÀİèPÁdÄð£À¥Àà, ¸ÀÄzsÁ ªÀÄÈvÀÄåAdAiÀÄ¥Àà, gÁeÉñÀéj ªÀĺÉñï,°AUÀtÚ, «dAiÀiÁ a£À߸Áé«Ä G¥À¹ÜvÀjzÀÝgÀÄ.
==============================================================

ಮೈಸೂರು:- ಹುತ್ತಕ್ಕೆ ಹಾಲು ಎರೆಯುವುದು ಮೂಢನಂಬಿಕೆಯನ್ನು ಪ್ರೋತ್ಸಾಹಿಸಿದಂತೆ ಎಂದು ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ನಗರದ ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಏರ್ಪಡಿಸಿದ್ದ ಬಸವಪಂಚಮಿಯನ್ನು ಆಚರಿಸಿ ಮಾತನಾಡಿದ ಅವರು ಹಸಿವಿನಿಂದ ಅದರಲ್ಲೂ ಹಾಲಿಲ್ಲದೆ ದೇಶದಲ್ಲಿ ಸಾವಿರಾರು ಮಕ್ಕಳು ಅಸುನೀಗುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದ್ದರೂ ಹಾವು ಹಾಲನ್ನು ಕುಡಿಯದೇ ಇದ್ದರೂ ಹುತ್ತದಲ್ಲಿ ಹಾಕಿ ವ್ಯರ್ಥ ಮಾಡುತ್ತಿದ್ದೇವೆ. ಒಂದು ವೇಳೆ ಹಾವು ಹಾಲನ್ನು ಕುಡಿದಿದ್ದೇ ಆದರೆ ಅದರ ಸಾವು ಸಂಭವಿಸುತ್ತದೆ. ಆದುದರಿಂದ ಹಾಲನ್ನು ವ್ಯರ್ಥ ಮಾಡುವ ಬದಲು ಅದನ್ನೇ ಹಸಿದ ಒಡಲುಗಳಿಗೆ, ಬಡರೋಗಿಗಳಿಗೆ ನೀಡಿದಾಗ ಅಮೂಲ್ಯ ಜೀವಗಳನ್ನು ಉಳಿಸಿದಂತಾಗುತ್ತದೆ ಅದಕ್ಕೆ ಬಸವಣ್ಣನವರು ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ, ಉಂಬ ಜಂಗಮ ಬಂದರೆ ನಡೆ ಎಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ ಎಂಬ ವಚನವನ್ನು ಜನರ ಮನಸ್ಥಿತಿಯನ್ನು ಕಂಡು ಹೇಳಿದ್ದಾರೆ. ವೈಜ್ಞಾನಿಕ ಯುಗದಲ್ಲಿರುವ ನಾವುಗಳು ಜಾಗೃತರಾಗಿ ಮುಗ್ಧ ಜನರನ್ನು ಪೊಳ್ಳು  ಜ್ಯೋತಿಷಿಗಳ ಕಿರುಕುಳದಿಂದ ರಕ್ಷಿಸುವುದು ತುಂಬಾ ಅಗತ್ಯವಾಗಿದೆ ಎಂದರು. ಶಕ್ತಿಧಾಮದ ಸಂಯೋಜಕರಾದ ಅನಂತ್ ಮಾತನಾಡಿ ತಿನ್ನುವ ಆಹಾರವನ್ನು ಅರ್ಥವಿಲ್ಲದ ಆಚರಣೆಗಳಿಂದ ವ್ಯರ್ಥ ಮಾಡದೆ ಮೂಢನಂಬಿಕೆಗಳ ವಿರುದ್ಧ ಮಕ್ಕಳಿಗೆ ಇಂದು ಜಾಗೃತಿ ಉಂಟುಮಾಡುತ್ತಿರುವ ವಿಶ್ವವಚನ ಫೌಂಡೇಶನ್ ಕಾರ್ಯ ಸ್ತುತ್ಯಾರ್ಹವಾದುದು. ಮಕ್ಕಳು ಇದರಿಂದ ಜಾಗೃತರಾಗಿ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಡಾ.ಮೃತ್ಯುಂಜಯಪ್ಪ, ಶರಣು ವಿಶ್ವವಚನ ಫೌಂಡೇಶನ್ ಜಿಲ್ಲಾಧ್ಯಕ್ಷ ಶ್ರೀಕಂಠಮೂರ್ತಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕಿ ಸುಧಾಮೃತ್ಯುಂಜಯಪ್ಪ, ಸಾಹಿತಿ ನಗರ್ಲೆ ಶಿವಕುಮಾರ್, ಅಕ್ಕಮಹಾದೇವಿ ಮರಮ್ಕಲ್, ಗೌರವ ಕಾರ್ಯದರ್ಶಿ ಪಂಪಾಪತಿ,ಉಪಾಧ್ಯಕ್ಷೆ ಪೂರ್ಣಿಮಾ, ಕಾರ್ಯದರ್ಶಿ ದಿವ್ಯಚೇತನ, ಸುಜಾತ ದುರ್ಗೇಶ್, ಅಂಜನ್, ನಂದೀಶ್, ವಚನ ಉಪಸ್ಥಿತರಿದ್ದರು.
============================================================

ಮೈಸೂರು:- ವಚನಗಳೆಂದರೆ ಅದು ಸಾಹಿತ್ಯವಲ್ಲ ಅವು ಆಚರಣೆ ಎಂದು ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನಕುಮಾರಸ್ವಾಮಿ ತಿಳಿಸಿದರು. ಮಹಾಲಕ್ಷ್ಮಿ ಮಹಿಳಾ ಮಂಡಳಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಮೈಸೂರಿನ ಖಿಲ್ಲೆಮೊಹಲ್ಲಾದ ರೇಣುಕಾಮಂದಿರದಲ್ಲಿ ನಡೆದ ಮಹಿಳಾ ಉತ್ಸವ, ವಚನ ಗಾಯನ ಮತ್ತು ವಚನ ಅಂತ್ಯಾಕ್ಷರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಶರಣರು ತಾವು ಜೀವನದಲ್ಲಿ ಅಳವಡಿಸಿಕೊಂಡ ಆಚರಣೆಗಳಿಗೆ ಲಿಖಿತರೂಪ ಕೊಡುತ್ತಾ ಹೋದರು ತದನಂತರ ಅವು ಜನಮಾನಸವನ್ನು ಎಚ್ಚರಿಸುವಂತಹ ವಚನ ಸಾಹಿತ್ಯವಾಗಿ ಮನುಕುಲವನ್ನು ಉದ್ಧರಿಸುವ ದೀವಿಗೆಗಳಾಗಿರುವುದನ್ನು ಕಾಣಬಹುದು. ವಚನಕಾರರು ಯಾವುದೇ ಸ್ತುತಿ, ನಿಂದನೆಗಳಿಗೆ ಕಿವಿಗೊಡದೆ ತಮ್ಮ ಸತ್ಯ, ನಿಷ್ಠೆ ಕಾಯಕದಲ್ಲಿ ನಿರತರಾಗಿ  ಇಂದಿಗೂ ಅಜರಾಮರವಾಗಿ ಉಳಿದಿದ್ದಾರೆ. ಬಸವಣ್ಣನವರು ಹೇಳುವಂತೆ ಯಾರಾದರೂ ನಮ್ಮನ್ನು ನಿಂದಿಸಿದರೆ ಅವರು ನಮ್ಮ ಪಾಪವನ್ನು ತೆಗೆದುಕೊಂಡು ಹೋಗುತ್ತಾರೆ. ಹಾಗೆಯೇ ಸ್ತುತಿಸಿದರೆ ಅವರು ನಮ್ಮ ಪುಣ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ಆಗ ನೀವು ನಿತ್ಯ ಮುಕ್ತರಾಗುತ್ತೀರಿ ಎಂದಿದ್ದಾರೆ. ಈ ವಚನವನ್ನು ನಾವು ಪಾಲಿಸಿ ಯಾವುದೇ ಸ್ತುತಿ, ನಿಂದನೆಗಳಿಗೆ ಕಿವಿಗೊಡೆದೆ ನಾವು ಮಾಡುವ ಕಾಯಕದ ಕಡೆ ಗಮನಹರಿಸಬೇಕು. ಪ್ರಥಮವಾಗಿ ವಚನವನ್ನು ಒಪ್ಪಿಕೊಂಡು ಅಪ್ಪಿಕೊಳ್ಳಿ ತದನಂತರ ಅವು ತಾವೇ ತಾವಾಗಿಯೇ ಜೀವನದಲ್ಲಿ ಅಳವಡಿಕೆಯಾಗುತ್ತವೆ ಎಂದರು. ಮಹಾಲಕ್ಷ್ಮಿ ಬಳಗದ ಅಧ್ಯಕ್ಷೆ ಗೀತಾರಾಜಶೇಖರ್ ಮಾತನಾಡಿ ಮಹಿಳೆಯರಲ್ಲಿ ವಚನ ಸಾಹಿತ್ಯವನ್ನು ಉತ್ತೇಜಿಸಿ ಅವರಲ್ಲಿ ವಚನಜಾÐನವನ್ನು ಬೆಳೆಸಲು ವಚನ ಗಾಯನ ಮತ್ತು ವಚನ ಅಂತ್ಯಾಕ್ಷರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಮಹಿಳೆಯರು ಭಾಗವಹಿಸಿ ಯಶಸ್ವಿಗೊಳಿಸಿರುವುದು ಕಾರ್ಯಕ್ರಮಕ್ಕೆ ಕಳೆ ತಂದಿತು ಎಂದರು. ವಚನ ಅಂತ್ಯಾಕ್ಷರಿ ಕಾರ್ಯಕ್ರಮವನ್ನು ಅಕ್ಕ ನೀಲಾಂಬಿಕೆರವರು ನಡೆಸಿಕೊಟ್ಟರು. ಶ್ರೀ ಶಿವರಾತ್ರೀಶ್ವರ ಅಕ್ಕನ ಬಳಗ ಪ್ರಥಮ, ಗೌರಿಶಂಕರ ಮಹಿಳಾಬಳಗ ದ್ವಿತೀಯ, ಪರಂಜ್ಯೋತಿ ಮಹಿಳಾಬಳಗ ತೃತೀಯಾ, ನೀಲಗಂಗಾ,ಮಾಹಲಕ್ಷ್ಮಿ ಮತ್ತು ಪ್ರಜ್ಞಾ ಮಹಿಳಾ ಬಳಗಗಳು ಸಮಾಧಾನಕರ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಸರ್ವಮಂಗಳ ಶಿವಶಂಕರ್,  ಜಯಾಗೌಡ, ಶಾರದಾ ಶಿವಲಿಂಗಸ್ವಾಮಿ, ರಾಧಾನೀಲಕಂಠ, ಪ್ರೇಮಲೀಲಮಲ್ಲಣ್ಣ, ಪ್ರಭುಸ್ವಾಮಿ ಉಪಸ್ಥಿತರಿದ್ದರು.
=============================================================


ಮೈಸೂರು: ಸುಸಂಸೃತ ವ್ಯಕ್ತಿಗಳ ಪ್ರಭಾವದಿಂದ ಕೆಟ್ಟ ವ್ಯಕ್ತಿಗಳು ಕೂಡ ಉತ್ತಮ ಚಾರಿತ್ರ್ಯವಂತ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂಬುದಕ್ಕೆ ವಾಲ್ಮೀಕಿ ಜೀವನವೇ ನೈಜ ಉದಾಹರಣೆ ಎಂದು ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪಕುಮಾರಸ್ವಾಮಿ ಹೇಳಿದರು. ಪಟೇಲ್ ದೇವೇಗೌಡ ಟ್ರಸ್ಟ್ ವತಿಯಿಂದ ಗೋಪಾಲಪುರದ ಸಂಜೀವಿನಿ ಶಾಲೆಯಲ್ಲಿ ಆಚರಿಸಿದ ವಾಲ್ಮೀಕಿ ಜಯಂತಿ ಮತ್ತು ಆಧ್ಯಾತ್ಮಿಕ ಚಿಂತನೆ ಕಾರ್ಯಕ್ರಮದಲ್ಲಿ ‘ವಾಲ್ಮೀಕಿ ಕುರಿತು ಚಿಂತ£’’É ಎಂಬ ಕಾರ್ಯಕ್ರಮದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು ಕಾರಣಾಂತರಗಳಿಂದ ಕ್ರೂರ ವ್ಯಕ್ತತ್ವ ರೂಢಿಸಿಕೊಂಡಿದ್ದ ರತ್ನಾಕರ ನಾರದರ ಪ್ರಭಾವದಿಂದಾಗಿ ವಾಲ್ಮೀಕಿಯಾಗಿ ಪರಿವರ್ತನೆಗೊಂಡ. ತದನಂತರ  ಶ್ರದ್ಧೆ ಮತ್ತು ಭಕ್ತಿಗಳನ್ನು ಮೈಗೂಡಿಸಿಕೊಂಡು ತನ್ನ ಅಂತರಾತ್ಮ ಪ್ರವೇಶಿಸಿ ಸಿದ್ಧಿಯನ್ನು ಸಂಪಾದಿಸಿಕೊಂಡು ರಾಮಾಯಣ ಎಂಬ ಶ್ರೇಷ್ಠ ಗ್ರಂಥವನ್ನು ಸಂಸ್ಕøತದಲ್ಲಿ ರಚಿಸಿದನು. ಈ ಗ್ರಂಥ 24000 ಶ್ಲೋಕವನ್ನು ಹೊಂದಿದ್ದು 100 ಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡಿದೆ. ಕುವೆಂಪುರವರು ಈ ಗ್ರಂಥದ ಬಗ್ಗೆ ಮಹಾಕಾವ್ಯ ಬರೆದು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟರು ಎಂದರು. ನಂತರ  ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ‘ಆಧ್ಯಾತ್ಮಿಕ ಚಿಂತನೆ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಆತ್ಮವನ್ನು ಅರಿಯುವ ವಿಧ್ಯೆಯೇ ಆಧ್ಯಾತ್ಮ, 12ನೇ ಶತಮಾನದ ವಚನಕಾರ ಬಾಲಸಂಗಯ್ಯ ಅಪ್ರಮಾಣದೇವ ತನ್ನ ವಚನದಲ್ಲಿ ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವಾ ನೋಡಾ ಎಂದು ಹೇಳುತ್ತಾರೆ ಅದರಂತೆ ನಮ್ಮನ್ನು ನಾವು ಅರಿತುಕೊಂಡು ಸಚ್ಚಾರಿತ್ರ್ಯ ವ್ಯಕ್ತಿಗಳಾಗಿ ರೂಪುಗೊಳ್ಳಲು ವಚನಗಳು ಸಹಕಾರಿಯಾಗಿವೆ. ಕಾಯಕ ತತ್ವವನ್ನು ಮೈಗೂಡಿಸಿಕೊಂಡು ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬಸವರಾಜ್ಯವಾಗುತ್ತದೆ. ಇದರಿಂದ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದರು. ಪಟೇಲ್ ದೇವೇಗೌಡ ಟ್ರಸ್ಟ್ ಅಧ್ಯಕ್ಷ ರಾಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ಒತ್ತಡದಲ್ಲಿ ಜೀವನ ಸಾಗಿಸುತ್ತಿರುವ ಜನರ ಮನಸ್ಸನ್ನು ಆದ್ಯಾತ್ಮಿಕತೆ ಕಡೆಗೆ ಸೆಳೆಯಲು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕ ಚಂದ್ರಕುಮಾರ್, ಕರಿಗೌಡ, ರಾಜಹನುಮೇಗೌಡ, ಶಿವಪ್ಪ, ಕೆಂಪೇಗೌಡ, ರಾಮಣ್ಣ ಉಪಸ್ಥಿತರಿದ್ದರು.

=======================================================================


ದೇಶ ಕಾಯುವ ಸೈನಿಕ ಮತ್ತು ಅನ್ನ ನೀಡುವ  ರೈತ ದೇಶದ ಎರಡು ಕಣ್ಣುಗಳು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪಕುಮಾರಸ್ವಾಮಿ ಹೇಳಿದರು. ನಂಜನಗೂಡು ತಾಲ್ಲೂಕು ಶ್ರೀ ಗೂರ್ಲೇಶ್ವರ ಬೆತ್ಲೇಶ್ವರ ಗದ್ದಿಗೆಯುಳ್ಳ ಗುರುಮಲ್ಲೇಶ್ವರ ದಾಸೋಹ ಮಠ, ಸೂರಳ್ಳಿಯಲ್ಲಿ ಆಯೋಜಿಸಿದ್ದ ಜಗದ್ಗುರು ಶ್ರೀ ಯಡೆಯೂರು ಸಿದ್ಧಲಿಂಗೇಶ್ವರರ ವಾರ್ಷಿಕ ಶರಣ ಸಂಸ್ಕøತಿ ಉತ್ಸವದ ಕಾರ್ಯಕ್ರಮದ ಧಾರ್ಮಿಕ ಸಭೆ ಹಾಗೂ ಕೃಷಿಕರು ಮತ್ತು ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾತನಾಡಿದ ಅವರು ಸೈನಿಕ ದೇಶ ಮೊದಲು ಉಳಿದದ್ದು ಆಮೇಲೆ ಎಂದು ದೇಶ ರಕ್ಷಣೆ ಮಾಡಿದರೆ ರೈತ ಸುಡುವ ಬಿಸಿಲು, ಸುರಿವ ಮಳೆಯನ್ನು ಲೆಕ್ಕಿಸದೆ ಲೋಕಕ್ಕೆ ಅನ್ನವನ್ನು ನೀಡುತ್ತಿದ್ದಾನೆ ಅಂತಹ ಸೈನಿಕ ಮತ್ತು ರೈತರಿಗೆ ಇಂದು ಸನ್ಮಾನ ಮಾಡುತ್ತಿರುವುದು ಪ್ರಶಂಸನೀಯವಾದ ವಿಚಾರ ಎಂದು ಹೇಳಿದರು. ಎಡೆಯೂರು ಸಿದ್ಧಲಿಂಗೇಶ್ವರರು ಕನ್ನಡ ನಾಡು ಕಂಡ ಅನುಭಾವಿ ಸಂತ ಶರಣರಲ್ಲಿ ಪ್ರಮುಖರು. 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದಿದ್ದ ವಚನ ಕ್ರಾಂತಿಯ ಕೀರ್ತಿಗೆ ಪುನಶ್ಚೇತನ ನೀಡಿದ ಇವರು 701 ವಚನ ರಚಿಸಿ ಲೋಕಸಂಚಾರ ಮಾಡಿ  ಶಿವಯೋಗ, ಶಿವಭಕ್ತಿಯನ್ನು ಪ್ರಸಾರ ಮಾಡಿದರು. ನಾವು ಶರಣರು ರಚಿಸಿದ ವಚನಗಳನ್ನು ಅಧ್ಯಯನ ಮಾಡಿದ್ದೇ ಆದರೆ ನಮ್ಮ ಬದುಕು ಬಂಗಾರವಾಗುತ್ತದೆ ಎಂದರು. ತದನಂತರ ಆಶೀರ್ವಚನ ನೀಡಿದ ಮುಡುಕನಪುರ ಹಲವಾರ ಮಠಾಧ್ಯಕ್ಷರಾದ ಷಡಕ್ಷರಿದೇಶಿಕೇಂದ್ರಸ್ವಾಮಿಗಳು ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ತೋರಿಸಲು ವಚನಗಳು ತುಂಬಾ ಸಹಕಾರಿಯಾಗಿದ್ದು ಅವುಗಳನ್ನು ಅಧ್ಯಯನ ಮಾಡಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ವ್ಯಕ್ತಿತ್ವಕ್ಕೆ ಬೆಲೆ ಬರುತ್ತದೆ. ಈ ದಿನ ಸೈನಿಕರು ಮತ್ತು ರೈತರನ್ನು ಸನ್ಮಾನಿಸಲು ಆಯೋಜಿಸಿರುವ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು ಶ್ರೀ ಮಠದದ ಶ್ರೀಗಳು ಅಭಿನಂದಾರ್ಹರು ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಇಬ್ಜಾಲ್ ಸೋಮಣ್ಣ, ಪಡಗೂರು ಪಿ.ಗಿರೀಶ್, ಗಟ್ಟವಾಡಿ ಜಿ.ಎಸ್.ರಾಜೇಶ್, ಕಾಳಿಹುಂಡಿ ಪ್ರಸನ್ನ, ಟಿ.ಸಿ.ಚನ್ನಬಸಪ್ಪ ತೇರಾಣ್ಯ, ಸುವರ್ಣ ಶಿವಾನಂದ ಬರ್ಟಳ್ಳಿ, ಕೆಬ್ಬೆಪುರ ಬಸಪ್ಪ ಹಾಗೂ ಸಾವಯವ ಕೃಷಿಕರಾದ ದೊಡ್ಡರಾಯನಪೇಟೆ ಮಹದೇವಸ್ವಾಮಿ, ಬೆಳವಾಲ ಫೌಂಡೇಷನ್ ರಾಮಕೃಷ್ಣಪ್ಪ, ಬಂದಿಗೌಡನಹಳ್ಳಿ ನಟರಾಜು, ಚಾಮರಾಜನಗರ ಶ್ರೀನಿಧಿ, ಅಭಿಲಾಷ್ ಮಾಲಂಗಿ, ಬೇಡರಪುರ ರವಿಕುಮಾರ್‍ರವರನ್ನು ಶ್ರೀ ಮಠದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದೇವನೂರು ಗುರುಮಲ್ಲೇಶ್ವರ ಮಹಾಸಂಸ್ಥಾನ ಮಠದ ಮಹಾಂತಸ್ವಾಮಿಗಳು, ಹಂಚೀಪುರ ಮಠದ ಚನ್ನಬಸವಸ್ವಾಮಿಗಳು, ಕಸುವಿನಹಳ್ಳಿ ಮಠದ ಚಂದ್ರಶೇಖರಸ್ವಾಮಿಗಳು, ನವಿಲೂರು ಮತ್ತು ಚುಂಚನಹಳ್ಳಿ ಮಠದ ಚನ್ನಬಸವಸ್ವಾಮಿಗಳು, ಸೂರಳ್ಳಿ ಮಠದ ಗಿರೀಶ್ ಸ್ವಾಮಿಗಳು, ಕುರಹಟ್ಟಿ ಸ್ವಾಮೀಜಿ, ಹಲ್ಲರೆ ಮಠದ ಸ್ವಾಮೀಜಿ, ಕುರಹಟ್ಟಿ ಮಹೇಶ್, ತಾಲ್ಲೂಕು ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷೆ ಶಶಿಕಲಾ ಗಿರೀಶ್, ಕಾರ್ಯದರ್ಶಿ ಸಂತೋಷ್  ಕುಮಾರ್ ಉಪಸ್ಥಿತರಿದ್ದರು.
-----------------------------------------------------------------------------------------------------------------------

ನಂಜನಗೂಡು: ನುಡಿದಂತೆ ನಡೆದು ಸಾಮಾಜಿಕ ಆರೋಗ್ಯವನ್ನು ನಿರ್ಮಾಣ ಮಾಡಲು ಮಕ್ಕಳು ಕಂಕಣಬದ್ಧರಾಗಬೇಕು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ ಹೇಳಿದರು. ನಂಜನಗೂಡಿನ ಕನಕದಾಸ ವಿದ್ಯಾಸಂಸ್ಥೆಯಲ್ಲಿ ಸ್ಪಂದನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಕರುಣಾಲಯ ವತಿಯಿಂದ ಏರ್ಪಡಿಸಿದ್ದ ಮಕ್ಕಳ ಬೇಸಿಗೆ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಹಾಗೆಯೇ ಸದೃಢ ಮನಸ್ಸುಗಳು ಒಂದಾಗಿ ಸುಸಂಸ್ಕøತ ಸಮಾಜ ನಿರ್ಮಾಣ ಮಾಡಬೇಕಾದರೆ ನುಡಿದಂತೆ ನಡೆಯುವ ಮನೋವೃತ್ತಿಯನ್ನು ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಮದುವೆಯ ದಿನವೂ ಮನದಲ್ಲಿ ಹೊಳೆದ ಚಿಂತನೆ ಕಾರ್ಯರೂಪಕ್ಕೆ ಬರಲು ಪ್ರಯೋಗಶಾಲೆಯಲ್ಲಿ ಪ್ರಯೋಗ ಮಾಡಿ ಲಸಿಕೆಯನ್ನು ಕಂಡುಹಿಡಿದ ಲೂಯಿಪಾಶ್ಚರನ ಕಾರ್ಯತತ್ಪರತೆಯನ್ನು ನಾವು ರೂಢಿಸಿಕೊಂಡಾಗ ಬಸವಣ್ಣನವರ ಕಾಯಕ ತತ್ವವನ್ನು ಗೌರವಿಸಿದಂತಾಗುತ್ತದೆ. ಆತ್ಮವಿಶ್ವಾಸ ಇಂದು ಅಗತ್ಯವಾಗಿದ್ದು ಅದು ಹೆಚ್ಚಾಗುವಂತೆ ಮಾಡಲು ನಾವು ಗಾಯನ, ನೃತ್ಯ, ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ನಮ್ಮನ್ನು  ನಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸ್ಪಂದನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಕರುಣಾಲಯದ ನಿರ್ದೇಶಕಿ ಸಿಸ್ಟರ್ ಥೇರೇಸಾ ಮಸ್ಕರೇನಸ್, ಶಿಕ್ಷಕರುಗಳಾದ ವನಿತ ಹೇಮಶ್ರೀ ಮಮತ, ಜ್ಯೋತಿ, ಸುಜಾತ, ರಂಜನಿ, ಜಯಲಕ್ಷ್ಮಿ, ಕವಿತ, ಕಾವೇರಿ, ಭಾಗ್ಯ, ಸಂಜನ, ಶಿಲ್ಪ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
===================================================================
ಮೈಸೂರು:- ಬಾನು, ಭುವಿ ಇರುವ ತನಕ ಬಸವತತ್ವ ರಾರಾಜಿಸಲಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ತಿ. ನರಸೀಪುರ ತಾಲ್ಲೂಕು ಬನ್ನೂರಿನ ಈಶ್ವರ ದೇವಸ್ಥಾನದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ವೀರಶೈವ ಲಿಂಗಾಯಿತ ಸೇವಾಸಮಿತಿ ಟ್ರಸ್ಟ್ ಮತ್ತು ಬಸವಬಳಗಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ‘ಬಸವಣ್ಣನವರ ಸಾಮಾಜಿಕ ಚಿಂತನೆಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು ಬಸವಣ್ಣನವರು ಅಂತರಂಗ ಮತ್ತು ಬಹಿರಂಗ ಎರಡರಲ್ಲೂ ಒಂದೇ ರೀತಿಯ ವ್ಯಕ್ತಿತ್ವ ಹೊಂದಿರುವ ಜನರನ್ನು ಕಾಣುವ ಆಶಯದಿಂದ ತಮ್ಮ ಮಹಾಮನೆಯನ್ನೇ ಕೇಂದ್ರವನ್ನಾಗಿ ಮಾಡಿಕೊಂಡು ಜಾತಿ, ಧರ್ಮ, ಲಿಂಗಭೇದವಿಲ್ಲದೇ ಎಲ್ಲರನ್ನೂ ಸಮಾನವಾಗಿ ಕಂಡು ಗುರು,ಲಿಂಗ ಮತ್ತು ಜಂಗಮಕ್ಕೆ ಗೌರವ ನೀಡಿ ಕಲ್ಯಾಣ ರಾಜ್ಯ ಮಾಡುವಲ್ಲಿ ಪ್ರಯತ್ನ ಮಾಡಿದರು. ಇಹ-ಪರ ಸಾಧನೆಗೆ ಕೈದೀವಿಗೆಗಳಾಗಿ ಬೆಳಕು ಕೊಡುವಂತಹ ವಚನ ಸಾಹಿತ್ಯದ ಮುಖಾಂತರ ಸಾಮಾಜಿಕ ಪಿಡುಗಗಳನ್ನು ತೊಡೆದುಹಾಕಿ ಸುಂದರ ಸಮಾಜ ನಿರ್ಮಾಣ ಮಾಡಲು ಕಾರಣರಾದರು. ಅರ್ಥವಿಲ್ಲದ ಆಚರಣೆಗಳಿಂದ ದೇವರನ್ನು ಕಾಣಲು ಹಣದ ಹೊಳೆಯನ್ನೇ ಹರಿಸಬೇಕಾಗಿದ್ದ ಕಾಲದಲ್ಲಿ ದೇಹವನ್ನೇ ದೇವಾಲಯವನ್ನಾಗಿ ರೂಪಿಸಿ ಸರಳ ಆಚರಣೆಗಳ ಮುಖಾಂತರ ಕಾಯಕದಲ್ಲಿಯೇ ಕೈಲಾಸವನ್ನು ಕಾಣುವ ತತ್ವವನ್ನು ಜನರಿಗೆ ನೀಡಿದರು ಎಂದರು. ನಂತರ ಆಶೀರ್ವಚನ ನೀಡಿದ ವಾಟಾಳು ಸೂರ್ಯಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯಸ್ವಾಮಿಗಳು ಬಸವಣ್ಣನವರ ಸಪ್ತಸೂತ್ರಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಿದ್ದೇ ಆದರೆ ಸುಸಂಸ್ಕøತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು. ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಿದ್ದೇ ಆದರೆ ನಮ್ಮ ವ್ಯಕ್ತಿತ್ವಕ್ಕೆ ಮೆರಗು ಬರುತ್ತದೆ ಎಂದರು. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದ ಬಸವಯೋಗಿ ಪ್ರಭು ಶರಣರು ಶರಣರ ಸಾಮಾಜಿಕ ಕೊಡುಗೆಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ವೀರಪ್ಪ ಒಡೆಯರಹುಂಡಿ ಮಠದ ರೇಣುಕಾ ಶಿವಾಚಾರ್ಯಸ್ವಾಮಿಗಳು, ಬೆನಕನಹಳ್ಳಿ ಮಠದ ಮಹದೇವಸ್ವಾಮಿಗಳು, ಬಿಳಿಗೆರೆಹುಂಡಿ ಮಠದ ಮಹದೇವಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ನರಸೀಪುರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಶಿವಮಲ್ಲಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಚಂದ್ರಶೇಖರ್, ನಿವೃತ್ತ ಅಪರ ಆಯುಕ್ತ ಹೆಳವರಹುಂಡಿ ಸಿದ್ಧಪ್ಪ, ದಯಾನಂದಪಟೇಲ್ ಉಪಸ್ಥಿತರಿದ್ದರು.
=====================================================================


ಮೈಸೂರು:- ವಿಚಾರ ಮತ್ತು ಆಚಾರಗಳ ಸಂಗಮವೇ ವಚನಸಾಹಿತ್ಯ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಅಹಲ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಲೆಮಹದೇಶ್ವರಸ್ವಾಮಿ ಹುಲಿವಾಹನ ಮತ್ತು ಶ್ರೀ ಬಸವೇಶ್ವರ ಪುತ್ಥಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು 12 ನೇ ಶತಮಾನದ ವಚನಕಾರರು ವಿಚಾರವಂತರು ಮಾತ್ರ ಆಗಿರದೆ ಆಚಾರವಂತರು ಆಗಿದ್ದರು ಆದುದರಿಂದಲೇ ಅವರು ರಚಿಸಿದ ವಚನ ಸಾಹಿತ್ಯಕ್ಕೆ ಇಂದಿಗೂ ಮೌಲ್ಯವಿದೆ. ನಾವು ಕೇವಲ ವಿಷಯ ತಿಳಿದುಕೊಂಡರಷ್ಟೇ ಸಾಕಾಗುವುದಿಲ್ಲ ಅವುಗಳನ್ನು ಅಳವಡಿಸಿಕೊಂಡು ಸುಸಂಸ್ಕøತ ಜೀವನ ನಡೆಸಬೇಕು. ಮನುಷ್ಯ ಸತ್ತ ನಂತರ ಅವನ ದೇಹ ಸತ್ತ ಮೊಲದ ದೇಹಕ್ಕಿಂತಲೂ ಕೀಳಾಗುತ್ತದೆ ಕಾರಣ ಸತ್ತ ಮೊಲವನ್ನು ಯಾರು ಬೇಕಾದರೂ ಕೊಂಡುಕೊಳ್ಳುತ್ತಾರೆ ಆದರೆ ಸತ್ತ ಮನುಷ್ಯನ ದೇಹವನ್ನು ಯಾರೂ ಕೊಂಡುಕೊಳ್ಳುವುದಿಲ್ಲ ಆದುದರಿಂದ ಜೀವಾತ್ಮ ಇರುವವರೆಗೆ ನಾವು ಉತ್ತಮ ಕೆಲಸವನ್ನು ಮಾಡಬೇಕು ಎಂದರು. ನಂತರ ಮಾತನಾಡಿದ ಸರಗೂರು ತಾ. ಪಡುವಲು ವಿರಕ್ತ ಮಠದ ಮಹದೇವಸ್ವಾಮೀಜಿ ನಾವು ಮಾಡುವ ಕಾಯಕವನ್ನು ನ್ಯಾಯಯುತವಾಗಿ ಮಾಡಿ ಅದರಿಂದ ಬಂದ ಸಂಪಾದನೆಯ ಸ್ವಲ್ಪ ಭಾಗವನ್ನು ಸಮಾಜಮುಖಿ ಕೆಲಸಗಳಿಗೆ ವಿನಿಯೋಗಿಸಬೇಕು. ದುರ್ಮಾರ್ಗದಿಂದ ಸಂಪಾದನೆ ಮಾಡಿ ಅದನ್ನು ಹಂಚಿದರೆ ಅದರಿಂದ ಯಾವುದೇ ಲಾಭವಾಗುವುದಿಲ್ಲ. ನಾವು ಎಷ್ಟು ವರ್ಷ ಬದುಕಿದ್ದೆವು ಅನ್ನುವುದಕ್ಕಿಂತ ಇರುವಷ್ಟು ವರ್ಷ ಏನು ಮಾಡಿದ್ದೇವೆ ಎಂಬುದನ್ನು ಅರಿತು ಇಂದಿನಿಂದಲೇ ಸತ್ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕುಎಂದು ಕರೆ ನೀಡಿದರು. ಮೈಸೂರು ಕುದೇರು ಮಠದ ಗುರುಶಾಂತಸ್ವಾಮಿಗಳು ಮಾತನಾಡಿ ನಾವು ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುವುದಕ್ಕಿಂತ ತಲೆ ತುಂಬಿಸಿಕೊಳ್ಳಲು ಪ್ರಯತ್ನ ಮಾಡಬೇಕು ಏಕೆಂದರೆ ತಲೆ ತುಂಬಿಸಿಕೊಂಡರೆ ಅದು ಯಾವಾಗಲೂ ನಮ್ಮನ್ನು ಕಾಪಾಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪುರ ಶ್ರೀ ಬಸವೇಶ್ವರ ಪಟ್ಟದ ಮಠದ ಚಂದ್ರಶೇಖರಸ್ವಾಮಿಗಳು, ಅಹಲ್ಯ ಗ್ರಾಮದ ವೀರಭದ್ರಸ್ವಾಮಿಗಳು, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯದರ್ಶಿ ಪಂಪಾಪತಿ ಉಪಸ್ತಿತರಿದ್ದರು.
========================================================================



ನರಸೀಪುರ:- ರಾಷ್ಟ್ರಪಿತ ಮಹಾತ್ಮಗಾಂಧಿ ಕೂಡಾ ಬಸವಣ್ಣನವರ ಕಾಯಕತತ್ವದಿಂದ ಆಕರ್ಷಿತರಾಗಿದ್ದರು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ ಹೇಳಿದರು. ನರಸೀಪುರ ತಾಲ್ಲೂಕಿನ ಮುಡುಕುತೊರೆಯಲ್ಲಿ ರತ್ನಮ್ಮ ಮತ್ತು ಜಯಣ್ಣರವರು ಏರ್ಪಡಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ  ಉಪನ್ಯಾಸ ನೀಡಿ ಮಾತನಾಡಿದ ಅವರು ಕರ್ನಾಟಕದಲ್ಲಿ 1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದಾಗ ಬಸವಣ್ಣನವರ ಬಗ್ಗೆ ತಿಳಿದುಕೊಂಡು ಬವಣ್ಣನವರ ಎಲ್ಲಾ ತತ್ವಗಳನ್ನು ನಾನು ಪಾಲಿಸಲು ಸಾಧ್ಯವಿಲ್ಲ. ಆದರೆ ಅವರ ಕಾಯಕ ತತ್ವವನ್ನು ಮಾತ್ರ ಅಪಾರವಾಗಿ ಗೌರವಿಸುವುದಲ್ಲದೇ ಪಾಲಿಸುತ್ತೇನೆ ಎಂದರು.  ಬಸವಣ್ಣ ಜ್ಞಾನದ ಅರಿವಿಲ್ಲದ 12ನೇ ಶತಮಾನದಲ್ಲಿ ಪ್ರತಿಯೊಬ್ಬರಲ್ಲಿ ಕಾಯಕದ ಮಹತ್ವದ ಬಗ್ಗೆ ತಿಳಿಸಿ ಸ್ವಾಭಿಮಾನಿಗಳಾಗುವಂತೆ ಜಾಗೃತಿಗೊಳಿಸಿದರು. ಅಷ್ಠಾವರಣಗಳಾದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ ಪ್ರತಿಯೊಬ್ಬರಿಗೂ ಅಷ್ಟ ಆಭರಣಗಳಾಗಬೇಕು. ನಮ್ಮ ಅಂತಃಕರಣ ಒಳ್ಳೆಯ ಕೆಲಸವನ್ನು ಮಾಡು ಎಂದು ಹೇಳುತ್ತದೆ ಅದೇ ಆತ್ಮಲಿಂಗ, ಮನುಷ್ಯ ಆತ್ಮ ಹೇಳಿದಂತೆ ಕೇಳಿ ಬೇರೆಯವರನ್ನು ಗೌರವಿಸುವ ಗುಣ ಬೆಳಸಿಕೊಳ್ಳಬೇಕು ಎಂದರು. ನಮ್ಮನ್ನು ನಾಶ ಮಾಡುವ ಅರಿಷಡ್ವರ್ಗಗಳನ್ನು ನಾಶ ಮಾಡಿ ಕಾಲೋಚಿತವಾಗಿ ಕೆಲಸ ಮಾಡಿ, ಸಮಯಪ್ರಜ್ಞೆ  ಬೆಳಸಿಕೊಳ್ಳಬೇಕು ಎಂದರು. ಬಸವ ಧರ್ಮದಲ್ಲಿ ತತ್ವ ಮುಖ್ಯವೇ ಹೊರತು, ವ್ಯಕ್ತಿಯಲ್ಲ ಆದುದರಿಂದ ಇಂದು ಬಸವಧರ್ಮ ವಿಶ್ವಧರ್ಮವಾಗುವನಿಟ್ಟಿನಲ್ಲಿ ಬೆಳೆದು ನಿಂತಿದೆ ಎಂದರು. ನಂತರ ಚೌಡಳ್ಳಿ ಲಿಂಗರಾಜುರವರು ಮಾತನಾಡಿ ಬಸವತತ್ವವನ್ನು ಪಾಲಿಸುವುದರ ಮುಖಾಂತರ ಮೂಢನಂಬಿಕೆಗಳನ್ನು ಬಿಟ್ಟು ಸರಳ ಆಚರಣೆಗಳನ್ನು ಮೈಗೂಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂದರು. ಕಾರ್ಯಕ್ರಮದಲ್ಲಿ ಕಲ್ಲುಮಠದ ಚಂದ್ರಶೇಖರಸ್ವಾಮೀಜಿ, ತೋಪಿನಮಠದ ಮಲ್ಲಿಕಾರ್ಜುನಶಿವಾಚಾರ್ಯಸ್ವಾಮೀಜಿ, ಮೈಸೂರು ಗಾಂಧಿನಗರದ ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶಸ್ವಾಮೀಜಿ, ರಮ್ಮನಹಳ್ಳಿಯ ಬಸವಜ್ಞಾನಕೇಂದ್ರದ ಬಸವಲಿಂಗಮೂರ್ತಿಸ್ವಾಮೀಜಿ, ಮುಡುಕುತೊರೆ ಉರಿಲಿಂಗಪೆದ್ದಿ ಶಾಖಾ ಮಠದ ಸಿದ್ಧರಾಮಸ್ವಾಮೀಜಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಸರೋಜಮ್ಮ ನಾಗರಾಜು, ಗಂಗಾಧರಸ್ವಾಮಿ, ಶಿವರುದ್ರಪ್ಪ, ಮಲ್ಲಿಕಾರ್ಜುನಪ್ಪ, ಭಾನುಮೋಹನ್, ಹೆಗ್ಗೋಡಿಪುರ ಶಿವಕುಮಾರ್, ನಂದೀಶ್ ಲಾಲನಕೆರೆ, ರತ್ನಮ್ಮ, ಜಯಣ್ಣ ಉಪಸ್ಥಿತರಿದ್ದರು

.=======================================================================
ನರಸೀಪುರ :- ಮೈಸೂರು ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟ ಗುರುಮಲ್ಲೇಶ್ವರರ ಜೀವನ ಎಲ್ಲರಿಗೂ ಆದರ್ಶವಾಗಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ತಿ. ನರಸೀಪುರ ತಾಲ್ಲೂಕು ಹೆಳವರಹುಂಡಿ ಗ್ರಾಮದಲ್ಲಿ  ನಡೆದ ಗುರುಮಲ್ಲೇಶ್ವರ ಜಯಂತಿ ಕಾರ್ಯಕ್ರಮದಲ್ಲಿ “ಶ್ರೀ ಗುರುಮಲ್ಲೇಶ್ವರರ ವಿಚಾರಧಾರೆಗಳು” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ  ಮಾತನಾಡಿದ ಅವರು ಒಂದು ಸಲ ಗುರುಮಲ್ಲೇಶ್ವರರನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ಆಸ್ಥಾನಕ್ಕೆ ಆಹ್ವಾನಿಸಿ ಅವರ ಪಾದಪೂಜೆ ಮಾಡಿ ಗುರುಕಾಣಿಕೆಯಾಗಿ ಮುತ್ತುರತ್ನಗಳನ್ನು ನೀಡಲು ಹೋದಾಗ ಇದು ಯಾರ ದುಡಿಮೆ ಎಂದಾಗ ರಾಜ ಪ್ರಜೆಗಳ ದುಡಿಮೆ ಎಂದನು. ಅದನ್ನು ಪ್ರಜೆಗಳ ಯೋಗಕ್ಷೇಮಕ್ಕಾಗಿಯೇ ಬಳಸು ಎಂದು ಗುರುಕಾಣಿಕೆಯನ್ನು ತಿರಸ್ಕರಿಸಿ ಕಾರೆಯ ಕಾಯಿ ಕಾಡಿನ ಸೊಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ ಎಂದು ಶರಣ ನುಲಿಯ ಚಂದಯ್ಯ ಹೇಳಿದ್ದಾನೆ. ನಿನ್ನ ದುಡಿಮೆಯಿಂದ ಬಂದ ಹಣ ಮಾತ್ರ ಸ್ವೀಕರಿಸುತ್ತೇನೆ ಎಂದು ತಮ್ಮ ಮಠಕ್ಕೆ ಹೊರಡುತ್ತಾರೆ. ಮಹಾರಾಜರು ಗುರುಗಳಿಗೆ ಕಾಣಿಕೆ ಕೊಡಲಾಗಲಿಲ್ಲವಲ್ಲ ಎಂದು ನೊಂದುಕೊಂಡು ಒಂದು ದಿನ ಮಾರುವೇಷ ಧರಿಸಿಕೊಂಡು ಕಮ್ಮಾರನ ಬಳಿ ಕೆಲಸ ಪಡೆದು ದಿನಪೂರ್ತಿ ಕಬ್ಬಿಣ ಬಡಿದು ಅವನಿಂದ ಕೂಲಿ ನಾಲ್ಕಾಣೆ ಪಡೆದು ಗುರುಮಲ್ಲೇಶ್ವರರನ್ನು ಅರಮನೆಗೆ ಕರೆಯಿಸಿ ನಾಲ್ಕಾಣೆಯನ್ನು ಗುರುಕಾಣಿಕೆಯಾಗಿ ನೀಡಿದಾಗ ಸಂತೋಷದಿಂದ ಸ್ವೀಕರಿಸುತ್ತಾರೆ. ಹೀಗೆ ರಾಜನಿಗೂ ಕಾಯಕದ ಮಹತ್ವವನ್ನು ಮನದಟ್ಟು ಮಾಡಿಸಿ ಕಾಯಕದ ಹಿರಿಮೆಯನ್ನು ಎತ್ತಿ ಹಿಡಿಯುತ್ತಾರೆ ಎಂದರು.  ನಂತರ ಆಶೀರ್ವಚನ ನೀಡಿದ ದೇವನೂರು ಮಠದ ಮಹಾಂತಸ್ವಾಮಿಗಳು ಗುರುಮಲ್ಲೇಶ್ವರರ ಸ್ಮರಣೆ ಮಾಡಿದರೆ ಕೆಟ್ಟ ವ್ಯಕ್ತಿಯೂ ಕೂಡಾ ಸುಸಂಸ್ಕøತ ವ್ಯಕ್ತಿಯಾಗಿ ಮಾರ್ಪಾಡಾಗುತ್ತಾನೆ. ಪ್ರಥಮಬಾರಿಗೆ ಗುರುಮಲ್ಲೇಶ್ವರರರ ಜಯಂತಿಯನ್ನು ಹುಟ್ಟು ಹಾಕಿದ ಹೆಳವರಹುಂಡಿ ಗ್ರಾಮದ ಜನತೆಗೆ ಅಭಿನಂದನೆ ಸಲ್ಲಿಸಿದರು. ನಂತರ ಮಾತನಾಡಿದ ವಾಟಾಳು ಸೂರ್ಯಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯಸ್ವಾಮಿಗಳು ಬಸವಣ್ಣನವರ ಸಪ್ತಸೂತ್ರಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಿದ್ದೇ ಆದರೆ ಸುಸಂಸ್ಕøತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು. ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಿದ್ದೇ ಆದರೆ ನಮ್ಮ ವ್ಯಕ್ತಿತ್ವಕ್ಕೆ ಮೆರಗು ಬರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪಡೆದ ವಾಟಾಳು ಶ್ರೀಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾಡ್ರಹಳ್ಳಿ ಮಠದ ಶಾಂತಮಲ್ಲಿಕಾರ್ಜುನಸ್ವಾಮಿಗಳು, ಕುಂದೂರು ಮಠದ ಗುರುಸ್ವಾಮಿಗಳು, ವೀರಪ್ಪ ಒಡೆಯರಹುಂಡಿ ಮಠದ ರೇಣುಕಾ ಶಿವಾಚಾರ್ಯಸ್ವಾಮಿಗಳು, ಬೆನಕನಹಳ್ಳಿ ಮಠದ ಮಹದೇವಸ್ವಾಮಿಗಳು, ನೆರಗ್ಯಾತನಹಳ್ಳಿ ಮಠದ ರಾಜಶೇಖರಸ್ವಾಮಿಗಳು, ನಿವೃತ್ತ ಅಪರ ಆಯುಕ್ತ ಹೆಳವರಹುಂಡಿ ಸಿದ್ಧಪ್ಪ,  ಕರುಹಟ್ಟಿ ಮಠದ ಬಸವಪ್ರಭುಸ್ವಾಮಿಗಳು, ಸರಗೂರು ಮಠದ ಬಸವರಾಜೇಂದ್ರಸ್ವಾಮಿಗಳು, ಹೆಳವರಹುಂಡಿ ಮಠದ ಪ್ರಸಾದಸ್ವಾಮಿಗಳು, ಹಿರಿಯೂರು ಮಠದ ಮಹಾಂತಸ್ವಾಮಿಗಳು, ಸೇತುವೆ ಮಠದ ಸಹಜಾನಂದಸ್ವಾಮಿಗಳು, ಬಿಲಿಗೆರೆಹುಂಡಿಮಠದ ಗುರುಸ್ವಾಮಿಗಳು, ರಾಜಶೇಖರಸ್ವಾಮಿಗಳು, ಮಲ್ಲಪ್ಪಸ್ವಾಮಿಗಳು, ಬಸವಲಿಂಗಸ್ವಾಮಿಗಳು, ಮಹದೇವಸ್ವಾಮಿಗಳು, ನಾಗಪ್ಪಸ್ವಾಮಿಗಳು, ನಿವೃತ್ತ ಶಿಕ್ಷಕ ಸೋಮಣ್ಣ, ಕ್ಷೇತ್ರಸಂಪನ್ಮೂಲ ವ್ಯಕ್ತಿ ಎಚ್.ಎಂ. ಶಂಕರ್, ಪಿ.ನಟರಾಜು, ರಾಜಶೇಖರ್, ರಾಜೇಶ್ ಉಪಸ್ಥಿತರಿದ್ದರು.
======================================================================

.ಮೈಸೂರು:- ಜಿ.ಪಿ.ರಾಜರತ್ನಂರವರ ಕನ್ನಾಡಾಭಿಮಾನ ಎಲ್ಲಾ ಕನ್ನಡಿಗರಿಗೂ ಆದರ್ಶವಾಗಬೇಕು ಎಂದು ಮೈಸೂರು ಉತ್ತರವಲಯದ ಕ್ಷೇತ್ರಸಂಪನ್ಮೂಲವ್ಯಕ್ತಿ ಸಿ.ಎಸ್.ಕುಮಾರಸ್ವಾಮಿ ಹೇಳಿದರು. ಮೈಸೂರು ಉತ್ತರವಲಯದ ಕುಂಬಾರಕೊಪ್ಪಲು ಪ್ರೌಢಶಾಲೆಯಲ್ಲಿ ಸಾಹಿತ್ಯಸಂಘದ ಉದ್ಘಾಟನೆ ಮಾಡಿ  ಮಾತನಾಡಿದ ಅವÀರು ಜಿ.ಪಿ.ರಾಜರತ್ನಂ ತಮ್ಮ ಕವಿತೆಯಲ್ಲಿ ದೇವರೇ ಬಂದು ಕನ್ನಡ ಪದಗಳನ್ನು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರೂ ಅವನನ್ನು ಕೊಲೆಮಾಡುತ್ತೇನೆ ಹಾಗೂ ಅವನು ನನ್ನನ್ನು ನರಕಕ್ಕೆ ಕಳಿಸಿ, ನಾಲಿಗೆ ಸೀಳಿಸಿ, ಬಾಯಿ ಹೊಲಿಸಿ ಹಾಕಿದ್ರೂ ಮೂಗಿನಲ್ಲಿ ಕನ್ನಡ ಪದಗಳನ್ನು ಮಾತನಾಡುವೆ ಎಂದು ಹೇಳಿದ ಅವರ ಕನ್ನಡಾಭಿಮಾನ ಎಲ್ಲರಿಗೂ ಅನುಕರಣೀಯ ನಾವು ಯಾವುದೇ ಸಿನಿಮಾ ನಟ, ನಟಿಯರನ್ನು ಆದರ್ಶವನ್ನಾಗಿ ಇಟ್ಟುಕೊಳ್ಳದೇ ಕುವೆಂಪು, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಮುಂತಾದವರನ್ನು ಆದರ್ಶವನ್ನಾಗಿ ಇಟ್ಟುಕೊಂಡರೆ ನಾವು ಸಾಹಿತಿಗಳಾಗಿ ಮತ್ತು ರಾಷ್ಟ್ರಪ್ರೇಮಿಗಳಾಗಿ ರೂಪುಗೊಳ್ಳಬಹುದು ಎಂದು ಹೇಳಿದರು. ನಂತರ ಮಾತನಾಡಿದ ಶಾಲಾ ಮುಖ್ಯಶಿಕ್ಷಕ ವೆಂಕಟೇಶ್ ನಾವು ಸಾಹಿತ್ಯದ ಜೊತೆ ಸಂಗೀತದ ಅಭಿಮಾನವನ್ನು ಬೆಳೆಸಿಕೊಂಡು ಸಂಗೀತಗಾರರಾದರೆ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳಬಹುದು. ಶಾಲೆಯಲ್ಲಿ ರಚನೆಯಾಗಿರುವ ಸಾಹಿತ್ಯ ಸಂಘ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಹಾಯಕವಾಗಲಿ ಎಂದರು. ಇದೇ ಸಂದರ್ಭದಲ್ಲಿ ಅನೇಕ ಮಕ್ಕಳು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಕವಿತೆ ವಾಚನ ಮಾಡಿದರು.  ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ನಾಗರಾಜಪ್ಪ, ವಿಮಲಮ್ಮ, ಸುಮಿತ್ರ, ವಿಜಯಲಕ್ಷ್ಮಿ, ಶಿವಾನಂದಸ್ವಾಮಿ, ಶೈಲಜಾ, ರಾಜಶೇಖರ್ ಉಪಸ್ಥಿತರಿದ್ದರು..
======================================================================
ಮೈಸೂರು:- ಆತ್ಮವನ್ನು ಅರಿಯುವ ವಿಧ್ಯೆಯೇ ಆಧ್ಯಾತ್ಮ ಎಂದು ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ
ಕುಮಾರಸ್ವಾಮಿ ಹೇಳಿದರು. ಮೈಸೂರಿನ ಎಂ.ಎಂ.ಕೆ ಎಸ್.ಡಿ.ಎಂ ಮಹಿಳಾ ವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಕನ್ನಡ ವಚನ ಸಾಹಿತ್ಯ ಜೀವನಮೌಲ್ಯಗಳು ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಹನ್ನೆರಡನೇ ಶತಮಾನದ ವಚನಕಾರ ಬಾಲಸಂಗಯ್ಯ ಅಪ್ರಮಾಣದೇವ ತನ್ನ ವಚನದಲ್ಲಿ ಕಲ್ಲು,ಮರ,ಕಂಚು,ಹಿತ್ತಾಳೆ ಮತ್ತು ತಾಮ್ರಗಳಿಂದ ಮಾಡಿದ ದೇವರು ದೇವರಲ್ಲ. ಸೇತುಬಂಧ, ರಾಮೇಶ್ವರ, ಗೋಕರ್ಣ, ಕಾಶಿ, ಅಷ್ಟಷಷ್ಟಿ ಪುಣ್ಯಕ್ಷೇತ್ರಗಳಲ್ಲಿರುವ ದೇವರು ದೇವರಲ್ಲ. ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವಾ ನೋಡಾ ಎಂದು ಹೇಳುತ್ತಾರೆ ಅದರಂತೆ ನಮ್ಮನ್ನು ನಾವು ಅರಿತುಕೊಂಡು ಸಚ್ಚಾರಿತ್ರ್ಯ ವ್ಯಕ್ತಿಗಳಾಗಿ ರೂಪುಗೊಳ್ಳಲು ವಚನಗಳು ಸಹಕಾರಿಯಾಗಿವೆ. ಕಾಯಕ ತತ್ವವನ್ನು ಮೈಗೂಡಿಸಿಕೊಂಡು ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬಸವರಾಜ್ಯವಾಗುತ್ತದೆ. ಇದರಿಂದ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ. 242 ವಚನಕಾರರ 24000ಕ್ಕೂ ಹೆಚ್ಚು ವಚನಗಳನ್ನು ಅಧ್ಯಯನ ಮಾಡುವುದಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ನಮ್ಮ ಜೀವನ ಸಂಸ್ಕಾರಯುತವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕನ್ನಡ ಅಧ್ಯಾಪಕ ಮಾರುತಿ ಪ್ರಸನ್ನ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
====================================================================


ಮೈಸೂರು: ಎಲ್ಲಾ ಶರಣರು ಆರಾಧ್ಯದೈವನ ಹೆಸರಿನಲ್ಲಿ ಮಾಡಿದಂತಹ ಪ್ರಮಾಣವೇ ವಚನಗಳು ಎಂದು ಮೈಸೂರು ವಿಶ್ವವಿದ್ಯಾನಿಲಯದ ಶ್ರೀ ಬಸವಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಚಂದ್ರಶೇಖರಯ್ಯ ಹೇಳಿದರು. ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಂಜನಗೂಡು ದೇವೀರಮ್ಮನಹಳ್ಳಿ ಶರಣಸಂಗಮ ಮಠದಲ್ಲಿ ಆಯೋಜಿಸಿದ್ದ ವಚನಕ್ರಾಂತಿಯ ಪುನರುತ್ಥಾನ ಕಾರ್ಯಕ್ರಮದ ಒಂದು ದಿನದ ವಿಚಾರ ಸಂಕಿರಣ ಮತ್ತು ದತ್ತಿ ಉಪನ್ಯಾಸದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅನುಭವ ಮಂಟಪದಲ್ಲಿ 30 ಕ್ಕೂ ಹೆಚ್ಚು ಆದರ್ಶ ಸತಿಪತಿಗಳು ಚರ್ಚೆಯಲ್ಲಿ ಭಾಗವಹಿಸಿ ಸಮಾನತೆಗೆ ಮುನ್ನುಡಿ ಬರೆದರು ಇಲ್ಲಿನ ಚರ್ಚೆ ಎಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿತ್ತು ಅಂದರೆ ಕೆಲವು ಸಲ ಬಿಜ್ಜಳರಾಜನು ಕೂಡಾ ಚರ್ಚೆಯಲ್ಲಿ ಭಾಗವಹಿಸಿ ಅಲ್ಲಿನ ಪ್ರಮುಖವಾದ ಅಂಶಗಳನ್ನು ತನ್ನ ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿದ್ದನು. ಜಂಗಮ ಎಂದರೆ ಚಲನಶೀಲವಾದದ್ದು ಅಂತಹ ಚಲನಶೀಲತೆಯನ್ನು ಎಲ್ಲಾ ಶರಣರು ರೂಡಿಸಿಕೊಂಡು ಎಲ್ಲೆಡೆ ಶರಣ ತತ್ವವನ್ನು ಹರಡಲು ಪ್ರಯತ್ನಿಸಿದರು. ಶರಣರು ಇನ್ನು 20 ವರ್ಷ ಬದುಕಿದ್ದರೆ ರಾಜ್ಯದ ಪರಿಸ್ಥಿತಿಯೇ ಬದಲಾಗುತ್ತಿತ್ತು. ಇಂದು ಜಾಗತಿಕ ಭಾಷೆಗಳಲ್ಲಿ ವಚನಗಳು ಅನುವಾದವಾಗುತ್ತಿರುವುದು ಸಾಗರದಾಚೆಗೂ ಬಸವತತ್ವ ಹರಡಲು ಸಹಕಾರಿಯಾಗುತ್ತಿದೆ ಎಂದರು. ನಂತರ ವಚನಕಾರರ ಸಮನ್ವಯ ಕ್ರಿಯಾಲೋಚನೆಗಳು ಎಂಬ ವಿಚಾರಗೋಷ್ಠಿಯಲ್ಲಿ ಆರ್ಥಿಕ ಸಮಾನತೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಪ್ರೊ.ಡಿ.ಎಸ್.ಸದಾಶಿವಮೂರ್ತಿ ದೇಶದಲ್ಲಿನ ಪ್ರತಿಯೊಬ್ಬರ ಆದಾಯವೂ ಸಮವಿದ್ದು ಒಂದೇ ವಿಧವಾದ ಜೀವನಮಟ್ಟ ಹೊಂದಿರುವುದೇ ಆರ್ಥಿಕ ಸಮಾನತೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳುವ ಶಕ್ತಿಯನ್ನು ಹೊಂದಿದ್ದರೆ ಆಗ ದೇಶದಲ್ಲಿ ಆರ್ಥಿಕ ಸಮಾನತೆ ಎಂಬ ಪದಕ್ಕೆ ಬೆಲೆ ಬರುತ್ತದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬುದು ವಚನಕಾರರ ಆಶಯವಾಗಿದ್ದು ಆ ನಿಟ್ಟಿನಲ್ಲಿ ಕಾಯಕ ಮತ್ತು ದಾಸೋಹ ಜಾರಿಗೆ ತಂದರು ಎಂದರು. ದೇವೀರಮ್ಮನಹಳ್ಳಿ ಶರಣಸಂಗಮ ಮಠದ ಪೂಜ್ಯಶ್ರೀ  ನಾಗರಾಜಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಿದ್ದರು. ಪ್ರಥಮ ವಿಚಾರಗೋಷ್ಠಿಯಲ್ಲಿ ಲಿಂಗಸಮಾನತೆ ಎಂಬ ವಿಷಂiÀiದ ಬಗ್ಗೆ ಡಾ.ಹೆಚ್.ಟಿ.ಶೈಲಜಾ ಉಪನ್ಯಾಸ ನೀಡಿದರು. ಹಿರಿಯ ಕಲಾವಿದ ಡಾ.ಎನ್ ಎಂ.ಗಿರಿಜಾಪತಿ ಅಧ್ಯಕ್ಷತೆ ವಹಿಸಿದ್ದರು. ವಚನಕಾರರ ಪ್ರತಿಭಟನೆಯ ನೆಲೆಗಳು ಎಂಬ ವಿಚಾರಗೋಷ್ಠಿಯಲ್ಲಿ ಸರ್ವಸ್ಥಾವರಗಳ ವಿರೋಧ ಎಂಬ ವಿಷಯದ ಬಗ್ಗೆ ಸಾಹಿತಿ ನಗರ್ಲೆ ಶಿವಕುಮಾರ್ ವಿಚಾರ ಮಂಡಿಸಿದರೆ, ಮೂಢನಂಬಿಕೆ ಮತ್ತು ಶೋಷಣೆಗಳ ವಿರೋಧ ಎಂಬ ವಿಷಯದ ಬಗ್ಗೆ ಉಪನ್ಯಾಸಕ ಮು.ನಾ.ರಮೇಶ್ ವಿಷಯ ಪ್ರಸ್ತುತ ಪಡಿಸಿದರು. ಸಹಾಯಕ ಕನ್ನಡ ಪ್ರಾಧ್ಯಾಪಕಿ ಡಾ.ವಿನೋದಮ್ಮ ಮಹಿಳೆ ಮತ್ತು ಶೋಷಕರ ಪ್ರತಿರೋಧ ಎಂಬ ವಿಚಾರದ ಬಗ್ಗೆ ಮಾತನಾಡಿದರು. ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ವಚನ ವಾಚನ ಮತ್ತು ವಿಶ್ಲೇಷಣೆ ಎಂಬ ವಿಚಾರಗೋಷ್ಠಿಯಲ್ಲಿ ಸಾಹಿತಿಗಳಾದ ಡಾ.ಜಯಪ್ಪ ಹೊನ್ನಾಳಿ, ರತ್ನಹಾಲಪ್ಪಗೌಡ, ರೂಪಕುಮಾರಸ್ವಾಮಿ ವಚನ ವಾಚಿಸಿ ಅರ್ಥೈಸಿದರು. ಸಮಾರೋಪ ಸಮಾರಂಭದಲ್ಲಿ ಡಾ.ಮಳಲಿ ವಸಂತಕುಮಾರ್ ಪ್ರಜಾಧರ್ಮ ಮತ್ತು ಶರಣಧರ್ಮ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಚಂದ್ರಶೇಖರ್, ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ವಿ.ಮಹದೇವಸ್ವಾಮಿ, ಕಾರ್ಯಾಧ್ಯಕ್ಷ ಸಿ.ಎಲ್.ಬಸವರಾಜು, ವೀರಶೈವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಸಿ. ಬಸವಣ್ಣ, ತಾಲ್ಲೂಕು ಶರಣು ವಿಶ್ವವಚನ ಫೌಂಡೇಶನ್ ಅದ್ಯಕ್ಷೆ ಶಶಿಕಲಾ ಗಿರೀಶ್, ಕಾರ್ಯದರ್ಶಿ ಸಂತೋಷ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಹದೇವಪ್ರಸಾದ್, ವಚನ ಚೂಡಾಮಣಿ, ಸುಗಂಧಮ್ಮ, ಶಿವಲಿಂಗಪ್ಪ, ಭೋಗನಂಜಪ್ಪ, ಮಂಜುಳ ಮಧು, ಸೋಮಶೇಖರಮೂರ್ತಿ, ನಾಗೇಶಮೂರ್ತಿ, ನಂದಿನಿ, ಉಷಾ ಉಪಸ್ಥಿತರಿದ್ದರು.
==================================================================


ಮೈಸೂರು: ಶಿಕ್ಷಕರು ಜ್ಞಾನದ ಚಕ್ಷು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಜೆ.ಸಿ.ಐ ಮೈಸೂರು ವಿಜಯಕೇಸರಿ ಮತ್ತು ರೀಡ್ ಸಂಸ್ಥೆಯ ಸಹಯೋಗದೊಂದಿಗೆ  ಮೈಸೂರು ಐಡಿಯಲ್‍ಜಾವ ರೋಟರಿಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ 33 ಮಂದಿ ಪ್ರಾಂಶುಪಾಲರು ಹಾಗೂ ಮುಖ್ಯಶಿಕ್ಷಕರಿಗೆ ಶಿಕ್ಷಕ ಕೇಸರಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹೊಮ್ಮುವಂತೆ ಮಾಡಿ ಅವರ ಭವಿಷ್ಯವನ್ನು ರೂಪಿಸುವಲ್ಲಿ ತನ್ನಲ್ಲಿರುವ ಜ್ಞಾನವನ್ನು ಧಾರೆ ಎರೆಯುವಂತಹ ಪ್ರಾಮಾಣಿಕ ಶಿಕ್ಷಕರ ಪರಿಶ್ರಮದಿಂದ ಇಂದು ವಿಶ್ವ ಮತ್ತು ರಾಷ್ಟ್ರಮಟ್ಟದಲ್ಲಿ  ಅನೇಕ ಉನ್ನತ ಹುದ್ದೆಗಳನ್ನು ಪಡೆದಿರುವ ಪ್ರತಿಭಾನ್ವಿತರನ್ನು ಕಾಣಲು ಸಾಧ್ಯವಾಗಿದೆ. ಲಾಯರ್ ಇಲ್ಲದಿದ್ದರೆ ನ್ಯಾಯವಿಲ್ಲ, ಡಾಕ್ಟರ್ ಇಲ್ಲದಿದ್ದರೆ ಆರೋಗ್ಯವಿಲ್ಲ, ಪೊಲೀಸ್ ಇಲ್ಲದಿದ್ದರೆ ಭದ್ರತೆ ಇಲ್ಲ, ಎಂಜನಿಯರ್ ಇಲ್ಲದಿದ್ದರೆ ಟೆಕ್ನಾಲಜಿ ಇಲ್ಲ, ಆದರೆ ಶಿಕ್ಷಕರು ಇಲ್ಲದಿದ್ದರೆ ಮೇಲಿನ ಯಾರೂ ಇಲ್ಲ. ಆದುದರಿಂದ ಅಂತಹ ಗುರು ಪರಂಪರೆಯನ್ನು ಗುರುತಿಸಿ ಅವರಿಗೆ ಇಂದು ಶಿಕ್ಷಕ ಕೇಸರಿ ಎಂದು ಪ್ರಶಸ್ತಿ ನೀಡುವುದರ ಮೂಲಕ ಸಂಸ್ಥೆಯು ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ ಎಂದರು. ತದನಂತರ ಮಾತನಾಡಿದ ಸಂಸ್ಕøತಿ ಚಿಂತಕ ಮತ್ತು ಖ್ಯಾತ ಅಂಕಣಕಾರ ಡಾ.ಗುಬ್ಬಿಗೂಡು ರಮೇಶ್ ಭಾರತ ಮತ್ತು ಚೈನಾ ನಡುವೆ ನಡೆದ ಯುದ್ಧ ಸಂದರ್ಭದಲ್ಲಿ ಭಾರತದ ರಾಷ್ಟ್ರಪತಿಯಾಗಿ ನೇಮಕವಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಒತ್ತಡದಲ್ಲಿ ಭಾರತವನ್ನು ಜಾಣ್ಮೆಯಿಂದ ನಿಭಾಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಎಂತಹ ಒತ್ತಡ ಪರಿಸ್ಥಿಯನ್ನೂ ನಿಭಾಯಿಸುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಅಂತಹ ಶಿಕ್ಷಕ ವರ್ಗದವರನ್ನು ಗುರುತಿಸುವ ವಿಧಾನವನ್ನು ಈ ಸಂಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಿ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿದ ಗುರುಪರಂಪರೆಯನ್ನು ವಿಶೇಷ ರೀತಿ ಗೌರವಿಸುತ್ತಿರುವುದು ಸಂತಸದ ವಿಷಯ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ಮೂವತ್ತಮೂರು ಮಂದಿ ಪ್ರಾಂಶುಪಾಲರು ಮತ್ತು  ಮುಖ್ಯಶಿಕ್ಷಕರನ್ನು ಗುರುತಿಸಿ ಶಿಕ್ಷಕ ಕೇಸರಿ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜೆ.ಸಿ.ಐ 14ರ ವಲಯ ಅಧ್ಯಕ್ಷ ವಿಕಾಸ್ ಗೂಗ್ಲಿಯಾ, ಜೆ.ಸಿ.ಐ ಮೈಸೂರು ವಿಜಯಕೇಸರಿಯ ಅಧ್ಯಕ್ಷ ಎನ್.ಯದುನಂದನ್, ಪ್ರೋಗ್ರಾಂ ಡೈರೆಕ್ಟರ್ ನಾಗೇಂದ್ರ ಮತ್ತು ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.
====================================================================
ಮಂಡ್ಯ:- ಅಜಾÐತ ಶರಣರ ಬಗ್ಗೆ ವಿಶೇಷ ಅಧ್ಯಯನ ಮತ್ತು ಸಂಶೋಧನೆ ಅವಶ್ಯಕ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪಕುಮಾರಸ್ವಾಮಿ ಹೇಳಿದರು. ನೀಲಗಂಗಾ ಮಹಿಳಾ ಬಳಗ ಮೈಸೂರಿನ ಜೆ.ಎಸ್.ಎಸ್ ಕಾನೂನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಜಾÐತ ಶರಣರ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು 242 ಕ್ಕೂ ಹೆಚ್ಚು ಶರಣರಲ್ಲಿ ಬೆಳಕಿಗೆ ಬಾರದ 100 ಕ್ಕೂ ಹೆಚ್ಚು ಶರಣರ ಬಗ್ಗೆ ನಾವು ವಿಚಾರಸಂಕಿರಣಗಳನ್ನು ಹಮ್ಮಿಕೊಳ್ಳಬೇಕು. ವೈದ್ಯ ಸಂಗಣ್ಣ, ಸತ್ತಿಗೆ ಕಾಯಕದ ಮಾರಯ್ಯ, ಸೂಳೆ ಸಂಕವ್ವೆ, ಹೊಡೆಹುಲ್ಲ ಬಂಕಣ್ಣ, ಹೆಂಡದ ಮಾರಯ್ಯ ಇವರ ಜೀವನ ಚರಿತ್ರೆ ಮತ್ತು ಅವರು ರಚಿಸಿದ ವಚನಗಳನ್ನು ಬೆಳಕಿಗೆ ತರುವ ಕೆಲಸವನ್ನು ಮಾಡಬೇಕಿದೆ.  ಇಹ-ಪರ ಸಾಧನೆಗೆ ಕೈದೀವಿಗೆಗಳಾಗಿ ಬೆಳಕು ಕೊಡುವಂತಹ ವಚನ ಸಾಹಿತ್ಯದ ಮುಖಾಂತರ ಸಾಮಾಜಿಕ ಪಿಡುಗಗಳನ್ನು ತೊಡೆದುಹಾಕಿ ಸುಂದರ ಸಮಾಜ ನಿರ್ಮಾಣ ಮಾಡಲು ನಾವು ಪಣ ತೊಡಬೇಕು. ಅರ್ಥವಿಲ್ಲದ ಆಚರಣೆಗಳಿಂದ ದೇವರನ್ನು ಕಾಣಲು ಹಣದ ಹೊಳೆಯನ್ನೇ ಹರಿಸಬೇಕಾಗಿದ್ದ ಕಾಲದಲ್ಲಿ ದೇಹವನ್ನೇ ದೇವಾಲಯವನ್ನಾಗಿ ರೂಪಿಸಿ ಸರಳ ಆಚರಣೆಗಳ ಮುಖಾಂತರ ಕಾಯಕದಲ್ಲಿಯೇ ಕೈಲಾಸವನ್ನು ಕಾಣುವ ತತ್ವವನ್ನು ಶರಣರು ಜನರಿಗೆ ನೀಡಿದರು.  ದೇಹಕ್ಕೆ ರೋಗ ಬಂದಾಗ ದೇಹಕ್ಕೆ ಮಾತ್ರ ಔಷಧಿ ಕೊಡದೇ ಆತ್ಮಕ್ಕೂ ಔಷಧಿ ಕೊಡಬೇಕು ಎಂದರು. ನೀಲಗಂಗಾ ಮಹಿಳಾ ಬಳಗದ ಅಧ್ಯಕ್ಷೆ ಜಯಾಗೌಡ, ಸಹಕಾರ್ಯದರ್ಶಿ ಶೋಭಾ ಶಿವಾನಂದ, ನೀಲಾಂಬಿಕಾದೇವಿ ನಾಗರಾಜು, ನಾಗಮಣಿ ರಾಜಪ್ಪ, ಚೂಡಾಮಣಿ, ಗಿರಿಜಾ ಸಿದ್ದಪ್ಪಾಜಿ, ಸುದರ್ಶಿನಿ ಚಂದ್ರಪ್ಪ, ಜಯಮ್ಮ ಜಂಭುಕೇಶ, ನಾಗಸುಂದ್ರಮ್ಮ, ಭ್ರಮರಾಂಭಸ್ವಾಮಿ ಉಪಸ್ಥಿತರಿದ್ದರು.
----------------------------------------------------------------------------------------------------------------------

ಮೈಸೂರು:- ಕ್ರೀಡೆ ಪ್ರಾಮಾಣಿಕತೆಯನ್ನು ರೂಡಿಸಿಕೊಳ್ಳಲು ಸಹಾಯಕವಾಗಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ  ಹೇಳಿದರು. ನಗರದ ಎನ್.ಆರ್.ಮೊಹಲ್ಲಾದ ಲಿಟ್ಲ್‍ಜೆಮ್ಸ್ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆ ವಿವಿಧ ರೀತಿಯ ಭಾಷೆ, ಸಂಸ್ಕøತಿಗಳಿಂದ ಕೂಡಿದ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಪ್ರತಿಯೊಬ್ಬರಲ್ಲೂ ಅದು ಸುಪ್ತವಾಗಿ ಅಡಗಿರುತ್ತದೆ. ಮಕ್ಕಳಲ್ಲಿರುವ ಸುಪ್ತಪ್ರತಿಭೆಯ ಅನಾವರಣಕ್ಕೆ ವಾರ್ಷಿಕ ಕ್ರೀಡಾಕೂಟ ಸಹಕಾರಿಯಾಗಿದೆ.  ಹೂಗಳು ಹೇಗೆ ನಿಸರ್ಗದಲ್ಲಿ ಸಹಜವಾಗಿ ಅರಳುತ್ತವೆಯೋ ಅದೇ ರೀತಿ ಯಾವುದೇ ವ್ಯಕ್ತಿಯಲ್ಲಿ ಅಂತರ್ಗತವಾಗಿರುವ ಪ್ರತಿಭೆ ಅರಳಲು ಅವಕಾಶ ಬೇಕು. ಅದಕ್ಕಾಗಿಯೇ ಲಿಟ್ಲ್‍ಜೆಮ್ಸ್ ಶಾಲೆ ಇಂತಹ ವೇದಿಕೆಯನ್ನು ನಿರ್ಮಿಸಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. ಮಕ್ಕಳು ಸಾಮಾಜಿಕವಾಗಿ ಪ್ರತಿಯೊಬ್ಬರೊಡನೆ ಬೆರೆಯಲು ಇದೊಂದು ಸುವರ್ಣ ಅವಕಾಶ ಹಾಗೂ ವಿವಿಧ ಮಕ್ಕಳಲ್ಲಿರುವ  ಪ್ರತಿಭೆಯನ್ನು ಗೌರವಿಸಿ ಅವರಂತೆ ತಮ್ಮ ಪ್ರತಿಭೆ ಇರಬೇಕು ಎಂದು ಚಿಂತನಾಶೀಲರಾಗಲು ಸಹಕಾರಿಯಾಗುತ್ತದೆ ಎಂದರು. ನಂತರ ಮಾತನಾಡಿದ ಮೈಸೂರು ಉತ್ತರವಲಯದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯ ದೈಹಿಕಪರಿವೀಕ್ಷಣಾಧಿಕಾರಿ ಸಿದ್ದರಾಜು ಮಕ್ಕಳು ಸರ್ವತೋಮುಖ ಅಭಿವೃದ್ಧಿಗೆ ವಿವಿಧ ರೀತಿಯ ಜ್ಞಾನ ಸಂಪಾದಿಸಿಕೊಳ್ಳಲು ಇದು ಒಂದು ಉತ್ತಮ ಅವಕಾಶ. ಪಠ್ಯದ ಜೊತೆಗೆ ಕ್ರೀಡೆಯ ಬಗ್ಗೆ ಮಕ್ಕಳನ್ನು ಆಸಕ್ತರನ್ನಾಗಿ ಮಾಡಿದಾಗ ಅವರು ಸ್ನೇಹಜೀವಿಯಾಗಲು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಮೀನಾ ಹುಸೇನ್,  ಕಾರ್ಯದರ್ಶಿ ಸೈಯದ್ ತಲಾತ್ ಜಮಾಲ್, ಮ್ಯಾನೇಜರ್ ಮೌಲಾನಾ ತಾರೀಖ್ ಶಮೀಮ್, ಪ್ರಾಂಶುಪಾಲ ಶಿವರುದ್ರಪ್ಪ, ಉಪಪ್ರಾಂಶುಪಾಲ ಸುಹೇಲ್, ಮುಖ್ಯಶಿಕ್ಷಕಿ ಜಮೀಲುನ್ನಿಸಾ ಉಪಸ್ಥಿತರಿದ್ದರು.
=================================================================

ಚಿತ್ರಸುದ್ಧಿ:- ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರಪಾಲಿಕೆ ಪ್ರವಾಹ ಪೀಡಿತ ಪ್ರದೇಶಗಳಿಗೆ ತುರ್ತು ಅವಶ್ಯಕ ಸಾಮಗ್ರಿಗಳನ್ನು  ನೀಡುವಂತೆ ದಾನಿಗಳು ಹಾಗೂ ಸಂಘಸಂಸ್ಥೆಗಳಿಂದ ನಗರದ ಪುರಭವನದಲ್ಲಿ ಸ್ಥಾಪಿಸಿರುವ ಕೇಂದ್ರದಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಆಹಾರಸಾಮಗ್ರಿ ಮತ್ತು ಔಷಧ ಸಾಮಗ್ರಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ,  ಕೇಂದ್ರೀಯ ಸಂಚಾಲಕ ಲಿಂಗಣ್ಣ ಮತ್ತು ಮಾಧ್ಯಮ ಸಂಚಾಲಕ ನಾಗೇಂದ್ರ ಉಪಸ್ಥಿತರಿದ್ದರು.
========================================================================

ಚಿತ್ರ:- ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಾದ ಮಹೇಶ್‍ರವರನ್ನುಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಅಭಿನಂದಿಸಲಾಯಿತು. ಈಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ವಾಜಂತ್ರಿ, ಕೇಂದ್ರೀಯಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಮಾಧ್ಯಮ ಸಂಚಾಲಕನಾಗೇಂದ್ರ ಮತ್ತು ಬಸವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ ಉಪಸ್ಥಿತರಿದ್ದರು.
=====================================================================
ಸರಗೂರು :- ಬಸವಣ್ಣನವರ ವಚನಗಳಲ್ಲಿ ಕಾರ್ಲ್‍ಮಾಕ್ರ್ಸ್ ಮೀರಿಸುವ ಸಮತಾವಾದ ಇದೆ ಎಂದು ಮೈಸೂರಿನ ಹೆಸರಾಂತ ಸಾಹಿತಿ ಡಾ. ಜಯಪ್ಪ ಹೊನ್ನಾಳಿ ಹೇಳಿದರು. ತಾಲ್ಲೂಕಿನ ಬಿಡಗಲು ಗ್ರಾಮದಲ್ಲಿರುವ ಶ್ರೀ ಪಡುವಲು ವಿರಕ್ತ ಮಠದಲ್ಲಿ ನಡೆದ ಶಿವಾನುಭವ ಸಮ್ಮೇಳನ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸದಲ್ಲಿ ಶರಣರಲ್ಲಿ ಜೀವನ ಮೌಲ್ಯಗಳು ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಮಾನವೀಯ ಧರ್ಮವೇ ಶರಣ ಧರ್ಮ, ಸದ್ಗುಣಗಳ ಒಟ್ಟು ಮೊತ್ತವೇ ಮೌಲ್ಯಗಳು, ಅಂತಹ ಮಾನವೀಯ ಮೌಲ್ಯಗಳನ್ನು ಶರಣರು ಕೇವಲ ಹೇಳಲಿಲ್ಲ ಬಾಳಿ ತೋರಿಸಿದರು. ಶರಣರ ವಚನಗಳಲ್ಲಿ ಅಂತರಂಗ ಮತ್ತು ಬಹಿರಂಗ ಸಮನ್ವಯತೆಯನ್ನು ಕಾಣುತ್ತೇವೆ ಹಾಗಾಗಿ ಅವರುಗಳ ತತ್ವದಲ್ಲಿ ನಾವು ವಿಶ್ವಮಾನವ ಸಂದೇಶಗಳನ್ನು ಕಾಣುತ್ತೇವೆ ಎಂದರು. ಆಶೀರ್ವಚನ ನೀಡಿದ ನರಸೀಪುರ ತಾಲ್ಲೂಕು ಬೆನಕನಹಳ್ಳಿ ಮಠದ ಮಹದೇವಸ್ವಾಮೀಜಿ ಭಕ್ತಿ ಎಂಬುದು ಗುರುಗಳಲ್ಲಿ ತುಂಬಾ ಮುಖ್ಯವಾದದ್ದು ಅಂತಹ ಭಕ್ತಿಯ ಆಗರವಾಗಿ ಪಡುವಲು ವಿರಕ್ತ ಮಠವು ಸಾವಿರಾರು ಭಕ್ತರನ್ನು ಆಕóóರ್ಷಿಸುವುದರ ಮುಖಾಂತರ ಭಕ್ತಿಯ ಕೇಂದ್ರವಾಗಿ ಹೊರಹೊಮ್ಮುತ್ತಿರುವುದು ಸಂತಸದ ವಿಷಯ. ಮನುಷ್ಯನ ಜೀವನ ಕ್ಷಣಿಕವಾದದ್ದು ಇರುವಷ್ಟು ಅವಧಿಯಲ್ಲಿ ಅವರನ್ನು ಸಂಸ್ಕಾರದ ಕಡೆಗೆ ಕೊಂಡೊಯ್ಯಲು ಮಠಗಳು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತಿವೆ ಎಂದರು. ಮನುಗನಹಳ್ಳಿ ಗ್ರಾಮಸ್ಥರು ದಾಸೋಹ ವ್ಯವಸ್ಥೆ ಮಾಡಿದ್ದರು ಮತ್ತು ಹಿರೇಹಳ್ಳಿ ಬಸವೇಶ್ವರ ಭಜನಾ ಮಂಡಳಿಯವರು ಶಿವಭಜನೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪಡುವಲು ವಿರಕ್ತ ಮಠದ ಮಹದೇವಸ್ವಾಮೀಜಿ, ಮೈಸೂರಿನ ಕಾರ್ಯಪಾಲಕ ಅಭಿಯಂತರರಾದ ಎಚ್ ಎನ್ ಶಿವಕುಮಾರ್, ಹುಣಸೂರು ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ರಮೇಶ್ ಕುಮಾರ್ ಜಾಬಗೆರೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಚಂದ್ರಶೇಖರ್, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನಕುಮಾರಸ್ವಾಮಿ ಉಪಸ್ಥಿತರಿದ್ದರು.
====================================================================
ಮೈಸೂರು:- ಶರಣು ಶರಣಾರ್ಥಿ ಎಂಬ ಪದಗಳು ಶರಣಕ್ರಾಂತಿಗೆ ನಾಂದಿಯಾದವು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಶ್ರೀ ಆದಿಚುಂಚನಗಿರಿ ಕಾಲೇಜು ಮತ್ತು ಕಸ್ತೂರಿ ಜನನಿ ಸಂಸ್ಥೆ ಸಹಯೋಗದೊಂದಿಗೆ  ಹೆಗ್ಗಡದೇವನಕೋಟೆ ಬಿ.ಜಿ.ಎಸ್ ಸಮುದಾಯಭವನದಲ್ಲಿ ಹಮ್ಮಿಕೊಂಡಿದ್ದ ವರ್ತಮಾನಕ್ಕೂ ವಚನ ಎಂಬ ಚಿಂತನಾಗೋಷ್ಠಿಯಲ್ಲಿ ವಚನಕ್ರಾಂತಿ ತರಬಯಸಿದ ಪರ್ಯಾಯ ವ್ಯವಸ್ಥೆ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಬಸವಕಲ್ಯಾಣದಲ್ಲಿ ಬಸವಣ್ಣ ಮತ್ತು ಹರಳಯ್ಯನವರು ಸಂಧಿಸಿದಾಗ ಹರಳಯ್ಯ ಶರಣು ಬಸವಣ್ಣ ಅಂದಾಗ ಬಸವಣ್ಣನವರು ಅದಕ್ಕೆ ಪ್ರತಿಯಾಗಿ ಶರಣು ಶರಣಾರ್ಥಿ ಹರಳಯ್ಯನವರೆ ಎಂದರು. ಇದರಿಂದ ಹರಳಯ್ಯನವರು ನಾನು ಒಂದು ಸಲ ಶರಣಾರ್ಥಿ ಹೇಳಿದೆ ಆದರೆ ಬಸವಣ್ಣನವರು ಎರಡು ಸಲ ಹೇಳಿಬಿಟ್ಟರು ಎಂದು ಮನನೊಂದು ಹೆಂಡತಿ ಕಲ್ಯಾಣಮ್ಮನವರೊಂದಿಗೆ ಸಮಾಲೋಚಿಸಿ ದಂಪತಿಗಳಿಬ್ಬರ ತೊಡೆಯ ಚರ್ಮವನ್ನು ಸುಲಿದು ಪಾದುಕೆಗಳನ್ನಾಗಿ ಮಾಡಿ ಬಸವಣ್ಣನಿಗೆ ಅರ್ಪಿಸುತ್ತಾರೆ. ಬಸವಣ್ಣ ಈ ಪಾದುಕೆಗಳನ್ನು ಕೂಡಲಸಂಗಮದೇವ ಮಾತ್ರ ಧರಿಸಲು ಯೋಗ್ಯ ಎಂದು ಹೇಳಿ ಹಿಂದುರುಗಿಸುತ್ತಾರೆ. ತದನಂತರ ಮಧುವಯ್ಯ ಹರಳಯ್ಯನಿಂದ ಪಾದುಕೆಗಳನ್ನು ಕಿತ್ತು ಧರಿಸಿಕೊಂಡಾಗ ಮೈಯೆಲ್ಲಾ ಉರಿ ಕಾಣಿಸಿಕೊಂಡು ಅದರ ಪರಿಹಾರಕ್ಕೆ ಹರಳಯ್ಯ ಪಾದುಕೆ ಮಾಡಿದ ನೀರನ್ನು ಸುರಿದುಕೊಂಡಾಗ ಪರಿಹಾರವಾಗುತ್ತದೆ. ಮಧುವಯ್ಯ ಶರಣ ಧರ್ಮ ಅಪ್ಪಿಕೊಂಡು ಮಧುವಯ್ಯ ಮಗಳಿಗೂ ಹರಳಯ್ಯನ ಮಗನಿಗೂ ವಿವಾಹವಾಗುತ್ತದೆ. ಇದರಿಂದ ವರ್ಣಸಂಕುರವಾಯಿತು ಎಂದು ಬಸವಣ್ಣನವರನ್ನು ಗಡಿಪಾರು ಮಾಡಿ, ಹರಳಯ್ಯ, ಶೀಲವಂತಯ್ಯ ಮತ್ತು ಮಧುವಯ್ಯನವರಿಗೆ ಎಳೆಹೂಟೆ ಶಿಕ್ಷೆ ನೀಡುತ್ತಾರೆ. ತದನಂತರ ಕಲ್ಯಾಣಕ್ರಾಂತಿಯಾಗಿ ಶರಣರು ವಚನಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಿ ಉತ್ತರಕನ್ನಡ ಜಿಲ್ಲೆ ಉಳವಿಯಲ್ಲಿ ವಚನಗಳನ್ನು ರಕ್ಷಿಸುತ್ತಾರೆ. ಆ ವಚನಗಳ ರಕ್ಷಣೆ ಮಾಡಿದುದರಿಂದಲೇ ಇಂದು ಕರ್ನಾಟಕಕ್ಕೆ ವಿಶ್ವದಲ್ಲಿಯೇ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನವಿದೆ ಎಂದರು. ಈ ವಚನಕ್ರಾಂತಿ ಸಾಮಾಜಿಕ, ಆರ್ಥಿಕ, ರಾಜಕೀಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿತು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ದಲಿತ ವ್ಯಕ್ತಿಯಾದ ಸಂಭೋಳಿ ನಾಗಿದೇವನನ್ನು ರಕ್ಷಿಸಿ ಬಸವಣ್ಣ ಜಗಜ್ಯೋತಿಯಾದರು. ಸಮ ಸಮಾಜ ನಿರ್ಮಾಣ ಕ್ರಾಂತಿಯ ಹರಿಕಾರರಾಗಿ ಕೆಳವರ್ಗದ ಜಾತಿಗೆ ಸೇರಿದ್ದ ಹಡಪದ ಅಪ್ಪಣ್ಣನವರನ್ನು ಕಾರ್ಯದರ್ಶಿಯನ್ನಾಗಿ ಮಾಡಿಕೊಂಡು ಎಲ್ಲಾ ವರ್ಗದ ಜನರಿಗೂ ನ್ಯಾಯ ಒದಗಿಸಿದರು ಎಂದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಕಾಲೇಜಿನ ಗೌರವ ಆಡಳಿತಾಧಿಕಾರಿ ಪ್ರೊ.ಕೆ.ಪಿ.ಬಸವೇಗೌಡ, ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಚಂದ್ರಶೇಖರ್, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಕೆ.ಶಿವರಾಜು, ಕಸ್ತೂರಿ ಜನನಿ ಸಂಸ್ಥೆ ಸಂಸ್ಥಾಪಕ ಸತೀಶ್ ಆರಾಧ್ಯ, ಕಸ್ತೂರಿ ಜನನಿ ಸಂಸ್ಥೆ ಕೆ.ಎಂ.ಮಹೇಶ್, ಗಾಯಕ ಸಿದ್ದರಾಜು, ಶರಣು ವಿಶ್ವವಚನ ಫೌಂಡೇಷನ್ ಕಾರ್ಯದರ್ಶಿ ರೂಪ ಕುಮಾರಸ್ವಾಮಿ, ನರಸೀಪುರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಮಲ್ಲಪ್ಪ,  ಎಸ್.ಪಿ.ಪ್ರಕಾಶ್, ಜೆ.ಎನ್.ವೆಂಕಟೇಶ್, ಎಚ್.ಸಿ.ರವಿಗೌಡ, ಕನ್ನಡ ಪ್ರಮೋದ್, ಜಿ ನಾರಾಯಣಲಾಲ್, ಜಿ.ರವಿ, ಕೆಂಡಗಣ್ಣಸ್ವಾಮಿ, ಗೋವಿಂದರಾಜು ಉಪಸ್ಥಿತರಿದ್ದರು.
======================================================================
ಮಾತೆ ಮಹಾದೇವಿಯವರ ಕಾರ್ಯ ಸ್ತುತ್ಯಾರ್ಹವಾದುದುದು
ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆಯಾಗಿದ್ದ ಮಾತೆ ಮಹಾದೇವಿಯವರು ಬಸವಣ್ಣನವರ ಕಾರ್ಯಕ್ಷೇತ್ರವಾದ ಬಸವಕಲ್ಯಾಣದಲ್ಲಿ 111 ಅಡಿ ಬಸವ ಪುತ್ಥಳಿಯನ್ನು ನಿರ್ಮಾಣ ಮಾಡಿ, ಬಸವಣ್ಣನವರ ಐಕ್ಯ ಕ್ಷೇತ್ರವಾದ ಕೂಡಲಸಂಗಮದಲ್ಲಿ ಬಸವ ಮಹಾಮನೆಯನ್ನು ಸ್ಥಾಪಿಸಿ ಬಸವ ತತ್ವವನ್ನು ಹಳ್ಳಿ ಹಳ್ಳಿಗೂ ಪ್ರಚಾರ ಮಾಡಿ ಪ್ರತಿಯೊಬ್ಬರ ಬಾಯಲ್ಲೂ ವಚನಗಳು ಉಸಿರಾಗುವಂತೆ ಮಾಡಲು ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು. ಇವರ ಅಗಲಿಕೆ ಪ್ರತಿಯೊಬ್ಬ ಬಸವಪ್ರೇಮಿಗಳಿಗೂ ತುಂಬಲಾರದ ನಷ್ಟವಾಗಿದ್ದು, ಶರಣ ಪರಂಪರೆಯ ಮಹಾಕೊಂಡಿ ಕಳಚಿದಂತಾಗಿದೆ. ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದ ಮಾತೆಯವರು ಲಿಂಗೈಕ್ಯರಾಗಿದ್ದರೂ ಬಸವಣ್ಣನವರ ವಚನವಾದ
ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು
ಸಾವೆಂಬುದು ಸಯವಲ್ಲ
ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ
ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ
ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು
ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ,
ಉಪಮಿಸಬಲ್ಲವರ ಕಾಣೆನು
ನೆನಪಾಗುತ್ತದೆ. ಅವರ ಕಾರ್ಯಚಟುವಟಿಕೆಗಳನ್ನು ನೆನೆಯುತ್ತ ಅವರ ಮರಣವನ್ನು ಮಹಾನವಮಿಯಂತೆ ಸ್ವೀಕರಿಸೋಣ
                         
                                                                                                                    ವಚನ ಕುಮಾರಸ್ವಾಮಿ
                                                                                                                             ಸಂಸ್ಥಾಪಕರು
                                                                                                 ಶರಣು ವಿಶ್ವವಚನ ಫೌಂಡೇಷನ್, ಮೈಸೂರು
======================================================================

ಎಚ್.ಡಿ.ಕೋಟೆ :- ಕಾಯಕ ಮತ್ತು ದಾಸೋಹ ಎರಡನ್ನೂ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ದೇಶ ವಿಶ್ವಕ್ಕೆ ಮಾದರಿಯಾಗುತ್ತದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ತಾಲ್ಲೂಕಿನ ಆಲತಾಳಹುಂಡಿ ಗ್ರಾಮದ ಗುರುಮಲ್ಲೇಶ್ವರ ಮಠದಲ್ಲಿ ನಡೆದ 17 ನೇ ವರ್ಷದ ಆರಾಧನಾ ಮಹೋತ್ಸವ ಮತ್ತು ಗುರುಲಿಂಗದೇವರ 8 ನೇ ವರ್ಷದ ಗಣರಾಧನಾ ಮಹೋತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು 12 ನೇ ಶತಮಾನದಲ್ಲಿ ಬಸವಣ್ಣ ಕಲ್ಯಾಣ ರಾಜ್ಯದ ಮಂತ್ರಿಗಳಾಗಿದ್ದಾಗ ರಾಜ್ಯದ ಜನ ಅತ್ಯಂತ ಸುಖ ಸಂತೋಷದಿಂದ ಆರ್ಥಿಕ ಸದೃಢತೆ ಹೊಂದಿದ್ದರು. ಅವರು ಒಂದು ವಚನದಲ್ಲಿ  ಬೇಡುವವರಿಲ್ಲದೇ ಬಡವನಾದೆ ಎಂದು ಹೇಳುತ್ತಾರೆ. ಕಾಯಕವೇ ಕೈಲಾಸ ಎಂಬುದನ್ನು ಮನಸಾರೆ ಒಪ್ಪಿಸಿ ರಾಜ್ಯದ ಉತ್ಪಾದನೆಯನ್ನು ಇಮ್ಮಡಿಗೊಳಿಸಿ ಸದೃಢ ರಾಜ್ಯ ನಿರ್ಮಾಣ ಮಾಡಿದ ಅವರ ಆರ್ಥಿಕ ಪ್ರಜ್ಞೆ ಕೇವಲ ನಮ್ಮ ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಅನುಕರಣೀಯ ಎಂದರು. ಶರಣರ ವಚನಗಳು ಅನುಭವದ ಆಧಾರದ ಮೇಲೆ ರಚನೆಯಾಗಿದ್ದು ನಮ್ಮ ಜೀವನದಲ್ಲಿ ನಾವು ಯಾವ ಮಾರ್ಗದಲ್ಲಿ ನಡೆಯಬೇಕು ಎಂದು ಮಾರ್ಗದರ್ಶನ ಮಾಡುವ ದಾರಿದೀಪಗಳಾಗಿದ್ದು ಪ್ರತಿಯೊಬ್ಬರಲ್ಲಿಯೂ ಶಿವಚಿಂತನೆಯನ್ನು ಮೈಗೂಡಿಸಿ ಸಂಸ್ಕಾರವಂತ ವ್ಯಕ್ತಿಗಳನ್ನಾಗಿ ನಿರ್ಮಾಣ ಮಾಡಲು ಸಹಕಾರಿಯಾಗಿವೆ ಎಂದರು. ನಂತರ ಆಶೀರ್ವಚನ ನೀಡಿದ ಬೀಚನಹಳ್ಳಿ ಮಠದ ನಾಗೇಂದ್ರಸ್ವಾಮಿಗಳು ನಮ್ಮ ನಡೆನುಡಿಯನ್ನು ಅರಿತು ತಿದ್ದಿಕೊಳ್ಳಲು ಇಂತಹ ಧಾರ್ಮಿಕ ಸಭೆಗಳು ಸಹಕಾರಿಯಾಗಿದ್ದು ನಾವು ಒಬ್ಬರ ಮನವ ನೋಯಿಸದೆ ಒಬ್ಬರ ಮನವ ಘಾತವ ಮಾಡದೆ ಬದುಕಬೇಕು ಎಂದರು. ಧಾರ್ಮಿಕ ಸಭೆ ಮೊದಲು ದೇವನೂರು ಮಠದ ಮಹಾಂತಸ್ವಾಮಿಗಳವರ ಪಾದಪೂಜೆ ನೆರವೇರಿತು. ಕಾರ್ಯಕ್ರಮದಲ್ಲಿ  ಆಲತ್ತಾಳಹುಂಡಿ ಮಠದ ಗಂಗಾಧರಸ್ವಾಮಿಗಳು, ಸೂರಳ್ಳಿ ಮಠದ ಗಿರೀಶ್‍ಸ್ವಾಮಿಗಳು, ಹಲ್ಲರೆ ಮಠದ ಮಹೇಶ್‍ಸ್ವಾಮಿಗಳು, ನಾಗನಹಳ್ಳಿ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಲೋಕೇಶ್,   ಗ್ರಾ.ಪಂ.ಸದಸ್ಯ ಕೆಂಡಗಣ್ಣಸ್ವಾಮಿ, ತಾಲ್ಲೂಕು ಬಿ.ಜೆ.ಪಿ ಮಾಜಿಅಧ್ಯಕ್ಷ ಯೋಗೀಶ್ ಕುಮಾರ್, ತಾಲ್ಲೂಕು ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಕೆ.ಎಂ.ಮಹೇಶ್, ಕಾರ್ಯಾಧ್ಯಕ್ಷ ಪಂಪಾಪತಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಮಹದೇವಸ್ವಾಮಿ, ಮುತ್ತಣ್ಣ, ಮಹದೇವಪ್ಪ, ಸಿದ್ದಪ್ಪ, ಮುತ್ತಪ್ಪ, ಸೋಮಣ್ಣ, ಚಿನ್ನಪ್ಪ, ಪುಟ್ಟಪ್ಪ, ಗುರುಸ್ವಾಮಪ್ಪ, ಎ.ಎಂ.ಕುಮಾರ್, ಸುಬ್ಬಣ್ಣ, ಪ್ರಕಾಶ್, ಸಂತೋಷ್ ಇತರರು ಉಪಸ್ಥಿತರಿದ್ದರು.
=================================
ಚಿತ್ರ:- ಮಂಡ್ಯದ ಗಾಂಧಿ ಭವನದಲ್ಲಿ ಮಂಡ್ಯ ಜಿಲ್ಲಾ ಶ್ರೀ 
ಜಗಜ್ಯೋತಿ ಪತ್ತಿನ ಸೌಹಾರ್ದ ಸಹಾಕಾರಿ ನಿಯಮಿತ ಏರ್ಪಡಿಸಿದ್ದ “ಮನೆ 
ಮನೆಗೆ ಸೌಹಾರ್ದ ಬಸವಜ್ಯೋತಿ 83ನೇ ಕಾರ್ಯಕ್ರಮವನ್ನು 
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ 
ಕುಮಾರಸ್ವಾಮಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನರಸೀಪುರ 
ತಾಲ್ಲೂಕು ಮುಡಕನಪುರ ಶ್ರೀಮಠದ ಷಡಕ್ಷರಿ 
ದೇಶಿಕೇಂದ್ರಸ್ವಾಮಿಗಳು, ಮಂಡ್ಯ ಜಿಲ್ಲಾ ಶ್ರೀ ಜಗಜ್ಯೋತಿ ಪತ್ತಿನ 
ಸೌಹಾರ್ದ ಸಹಾಕಾರಿ ನಿಯಮಿತ ಅಧ್ಯಕ್ಷ ಎಸ್.ನಾಗರಾಜು, ಶರಣು 
ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ 
ರೂಪಕುಮಾರಸ್ವಾಮಿ, ಮಂಜುನಾಥ್, ಮೂರ್ತಿ, ಕೆ.ಎಲ್.ಆನಂದ್, 
ಮಹದೇವಪ್ಪ, ಪ್ರಕಾಶ್, ಎಂ.ಜೆ.ಮೃತ್ಯುಂಜಯ, ರಮ್ಯ 
ಮಹದೇವಸ್ವಾಮಿ ಉಪಸ್ಥಿತರಿದ್ದರು.
ಮಂಡ್ಯ:- ಶರಣ ಧರ್ಮ ಅಪ್ಪಿಕೊಳ್ಳಬೇಕಾದರೆ ಅಷ್ಟಾವರಣ, ಷಟ್ಸ್ಥಲ 
ಮತ್ತು ಪಂಚಾಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು 
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ 
ಕುಮಾರಸ್ವಾಮಿ ಹೇಳಿದರು. 18ಮೆ 2019ರಂದು ಮಂಡ್ಯದ ಗಾಂಧಿ ಭವನದಲ್ಲಿ 
ಮಂಡ್ಯ ಜಿಲ್ಲಾ ಶ್ರೀ ಜಗಜ್ಯೋತಿ ಪತ್ತಿನ ಸೌಹಾರ್ದ ಸಹಾಕಾರಿ ನಿಯಮಿತ 
ಏರ್ಪಡಿಸಿದ್ದ “ಮನೆ ಮನೆಗೆ ಸೌಹಾರ್ದ ಬಸವಜ್ಯೋತಿ 83ನೇ 
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು 
ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, 
ಮಂತ್ರ, ಪಾದೋದಕ, ಪ್ರಸಾದ ಮತ್ತು ಷಟ್ಸ್ಥಲಗಳಾದ ಭಕ್ತ, 
ಮಹೇಶ, ಪ್ರಸಾದ, ಪ್ರಾಣಲಿಂಗಿ, ಶರಣ, ಐಕ್ಯ ಹಾಗೂ 
ಪಂಚಚಾರಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, 
ಭೃತ್ಯಾಚಾರಗಳ ಬಗ್ಗೆ ಹಾಗೂ ಈ ವಿಷಯಗಳ ಬಗ್ಗೆ ಶರಣರು 
ಹೇಳಿರುವ ವಚನಗಳನ್ನು ಅಧ್ಯಯನ ಮಾಡಿ ಅವುಗಳನ್ನು 
ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮುಖಾಂತರ ವಚನದಂತೆ 
ನಡೆಯುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು 
ತಿಳಿಸಿದರು. ಮಂಡ್ಯ ಜಿಲ್ಲಾ ಶ್ರೀ ಜಗಜ್ಯೋತಿ ಪತ್ತಿನ ಸೌಹಾರ್ದ ಸಹಾಕಾರಿ 
ನಿಯಮಿತ ಅಧ್ಯಕ್ಷ ಎಸ್.ನಾಗರಾಜು ಮಾತನಾಡಿ ಪ್ರತಿ ತಿಂಗಳು 
ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ 
ನಡೆಯುತ್ತಿರುವವರಿಂದ ಉಪನ್ಯಾಸ ಮತ್ತು ಆಶೀರ್ವಚನ 
ಏರ್ಪಡಿಸುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ 
ಪಡೆದುಕೊಳ್ಳಬೇಕು ಎಂದರು. ಆಶೀರ್ವಚನ ನೀಡಿದ ನರಸೀಪುರ 
ತಾಲ್ಲೂಕು ಮುಡಕನಪುರ ಶ್ರೀಮಠದ ಷಡಕ್ಷರಿ ದೇಶಿಕೇಂದ್ರಸ್ವಾಮಿಗಳು ಜ್ಞಾನ ಅಂಧಕಾರವನ್ನು 
ಹೋಗಲಾಡಿಸುತ್ತದೆ. ಅಂತಹ ಸುಜಾÐನದ ಸಂಕೇತವಾದ 
ಬಸವಣ್ಣನವರ ಸಪ್ತಸೂತ್ರಗಳನ್ನು ಪ್ರತಿಯೊಬ್ಬರೂ 
ಅಳವಡಿಸಿಕೊಂಡಿದ್ದೇ ಆದರೆ ಸುಸಂಸ್ಕøತ ವ್ಯಕ್ತಿಗಳಾಗಿ 
ರೂಪುಗೊಳ್ಳಬಹುದು. ಶರಣರ ವಚನಗಳನ್ನು ನಮ್ಮ 
ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಿದ್ದೇ ಆದರೆ ನಮ್ಮ 
ವ್ಯಕ್ತಿತ್ವಕ್ಕೆ ಮೆರಗು ಬರುತ್ತದೆ ಎಂದರು. ಕಾರ್ಯಕ್ರಮದಲ್ಲಿ 
ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ 
ಕುಮಾರಸ್ವಾಮಿ, ಮಂಜುನಾಥ್, ಮೂರ್ತಿ, ಕೆ.ಎಲ್.ಆನಂದ್, 
ಮಹದೇವಪ್ಪ, ಪ್ರಕಾಶ್, ಎಂ.ಜೆ.ಮೃತ್ಯುಂಜಯ, ರಮ್ಯ 
ಮಹದೇವಸ್ವಾಮಿ ಉಪಸ್ಥಿತರಿದ್ದರು.
..........


ಮೈಸೂರು: ಉಡುತಡಿಯ ಕಿಡಿಯಾಗಿ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯದಲ್ಲಿ ಪ್ರಥಮ ಮಹಿಳಾ ಕವಿಯತ್ರಿಯಾಗಿ ಹೊರಹೊಮ್ಮಿದ ಅಕ್ಕನ ಸಾಧನೆ ವರ್ಣಿಸಲಸದಳ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಮೈಸೂರು ಮುನೇಶ್ವರನಗರದ ಬಸವಜ್ಞಾನ ಮಂದಿರದಲ್ಲಿ ಶ್ರಾವಣಮಾಸದ ಪೂಜಾನುಷ್ಠಾನ ಹಾಗೂ ವಿಶ್ವಧರ್ಮ ವಚನ ಪ್ರವಚನ ಕಾರ್ಯಕ್ರಮದಲ್ಲಿ ಅಕ್ಕನ ವಚನಗಳಲ್ಲಿ ವೈರಾಗ್ಯ ವೈವಿಧ್ಯತೆ ಕುರಿತು ಪ್ರವಚನ ನೀಡಿ ಮಾತನಾಡಿದ ಅವರು ಅಕ್ಕನ ನಡೆಶುಚಿ ನುಡಿಶುಚಿ ವಚನ ವಿಶ್ವ ಆರೋಗ್ಯ ಸಂಸ್ಥೆಯ ಧ್ಯೇಯ ವಾಕ್ಯವನ್ನು ಮೀರಿಸುವಂತಿದೆ. ಸ್ತುತಿ ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು ಎಂಬ ವಚನ ಪ್ರತಿಯೊಬ್ಬರ ಸಾಧನೆಗೂ ಅಡಿಗಲ್ಲಾಗಿದೆ. ಅಕ್ಕನ ಎಲ್ಲಾ ವಚನಗಳಲ್ಲಿ ವೈವಿಧ್ಯತೆ ಮತ್ತು ಅನೇಕ ವಚನಗಳಲ್ಲಿ ವೈರಾಗ್ಯವನ್ನು ಕಾಣಬಹುದು. ಚಿನ್ಮಯಜ್ಞಾನಿ ಚನ್ನಬಸವಣ್ಣ ಒಂದು ವಚನದಲ್ಲಿ ಸಿದ್ಧರಾಮೇಶ್ವರರಿಗೆ ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ, ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ, ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ, ಅಜಗಣ್ಣನ ಐದು ವಚನಕ್ಕೆ ಕೂಡಲ ಚೆನ್ನಸಂಗಯ್ಯನಲ್ಲಿ ಮಹಾದೇವಿಯಕ್ಕಂಗಳ ಒಂದು ವಚನ ನಿರ್ವಚನ ಎಂದು ಹೇಳಿರುವುದು ಅಕ್ಕ ಶರಣರಲ್ಲಿಯೇ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾಳೆ. ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನೊಂದಿಗೆ ನಡೆದ ಚರ್ಚೆಯಲ್ಲಿ ಧೈರ್ಯದಿಂದ ಭಾಗವಹಿಸಿ ವಿಶ್ವ ಸ್ತ್ರೀ ಕುಲದ ಜ್ಯೋತಿ ಎಂದು ಹೊಗಳಿಸಿಕೊಂಡಳು ಎಂದರು. ಬಸವಜ್ಞಾನ ಮಂದಿರದ ಪೀಠಾಧ್ಯಕ್ಷರಾದ ಡಾ. ಮಾತೆ ಬಸವಾಂಜಲಿದೇವಿ ಆಶೀರ್ವಚನ ನೀಡಿ ಚಿಕ್ಕ ವಯಸ್ಸಿನಲ್ಲಿಯೇ ಅಧಿಕಾರ, ಸಂಪತ್ತು, ವೈಭವ, ಆಡಂಬರ,  ಸಕಲ ಸುಖವನ್ನು ತ್ಯಜಿಸಿದ ಅಕ್ಕ ಅನೇಕ ಪರೀಕ್ಷೆಗಳನ್ನು ಎದುರಿಸಿ ಇಡೀ ಮಹಿಳಾ ಕುಲಕ್ಕೆ ಆದರ್ಶವಾಗಿದ್ದಾಳೆ. ಕನ್ನಡ ಸಾಹಿತ್ಯದ ಬಂಡಾಯ ಕವಯತ್ರಿಯಾಗಿ, ವಚನಗಾರ್ತಿಯಾಗಿ, ಮಹಿಳಾ ಪ್ರತಿನಿಧಿಯಾಗಿ ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಕಾರ್ಯಾಧ್ಯಕ್ಷ ಭ.ಪಂಪಾಪತಿ, ಉಪಾಧ್ಯಕ್ಷೆ ಪ್ರೇಮ ಪ್ರಭುಸ್ವಾಮಿ, ಬೇಬಿ ಗುರುಸ್ವಾಮಿ, ಚೆನ್ನಬಸಪ್ಪ ಉಪಸ್ಥಿತರಿದ್ದರು.
--------------------------------------


ಮೈಸೂರು: ಪತಿಯನ್ನು ಎಲ್ಲಾ ವಿಷಯಗಳಲ್ಲೂ ಅನುಸರಿಸಿ ಸಹಧರ್ಮಚಾರಿಣಿ ಎಂಬುದಕ್ಕೆ ಮಾದರಿಯಾಗಿ ಬಾಳಿದವಳು ಶರಣೆ ದುಗ್ಗಳೆ ಎಂದು ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಹೇಳಿದರು. ಮೈಸೂರು ಮುನೇಶ್ವರನಗರದ ಬಸವಜ್ಞಾನ ಮಂದಿರದಲ್ಲಿ ಶ್ರಾವಣಮಾಸದ ಪೂಜಾನುಷ್ಠಾನ ಹಾಗೂ ವಿಶ್ವಧರ್ಮ ವಚನ ಪ್ರವಚನ ಕಾರ್ಯಕ್ರಮದಲ್ಲಿ ಶರಣೆ ದುಗ್ಗಳೆ ಕುರಿತು ಮಾತನಾಡಿದ ಅವರು ಆದ್ಯ ವಚನಕಾರ ಜೇಡರ ದಾಸಿಮಯ್ಯನವರ ಪತ್ನಿಯಾಗಿ ಕಾಯಕನಿಷ್ಠೆ ರೂಢಿಸಿಕೊಂಡು ಬಾಳಿದರು. ಈಕೆಯ 2 ವಚನಗಳು ಸಿಕ್ಕಿದ್ದು ತನ್ನ ವಚನಗಳಲ್ಲಿ ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಮರುಳಶಂಕರದೇವ, ಅಜಗಣ್ಣ, ಸಿದ್ಧರಾಮಯ್ಯರವರ ಗುಣಗಳ ಬಗ್ಗೆ ಪ್ರಸ್ಥಾಪಿಸಿದ್ದಾಳೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂಬ ವಚನದಂತೆ ಬಾಳಿ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದಾರೆ ಎಂದರು. ಬಸವಜ್ಞಾನ ಮಂದಿರದ ಪೀಠಾಧ್ಯಕ್ಷರಾದ ಡಾ. ಮಾತೆ ಬಸವಾಂಜಲಿದೇವಿ ಆಶೀರ್ವಚನ ನೀಡಿ ದುಗ್ಗಳೆ ಭಕ್ತಿಗೆ ಹೆಸರುವಾಸಿಯಾದವಳು ಶರಣರು ಬರೆದಂತಹ ವಚನಗಳನ್ನು ನಾವು ಅಧ್ಯಯನ ಮಾಡಿದರೆ ಸಾಕು ನಾವು ತತ್ವದ ಮಾತುಗಳನ್ನಾಡಬಾರದು ಎಂದು ಆಗಿನ ಕಾಲದಲ್ಲಿಯೇ ಭಾóóóಷಣ ಬಿಗಿಯುವವರಿಗೆ ಎಚ್ಚರಿಕೆ ನೀಡಿದಳು ಎಂದರು. ಕಾರ್ಯಕ್ರಮದಲ್ಲಿ ಬಸವಜ್ಞಾನ ಮಂದಿರದ ಪೀಠಾಧ್ಯಕ್ಷರಾದ ಡಾ. ಮಾತೆ ಬಸವಾಂಜಲಿದೇವಿ, ಸಮಾಜ ಸೇವಕಿ ಶೀಲಾ ನಂದೀಶ್, ದಿವ್ಯಚೇತನ, ಪುಷ್ಪ ಕುಮಾರಸ್ವಾಮಿ, ಚಂದ್ರಕಲಾ, ಶಮಂತಾ, ಭ.ಪಂಪಾಪತಿ,  ಪ್ರೇಮ ಪ್ರಭುಸ್ವಾಮಿ, ಬೇಬಿ ಗುರುಸ್ವಾಮಿ, ಪ್ರಭುಸ್ವಾಮಿ ಉಪಸ್ಥಿತರಿದ್ದರು.
--------------------------------------------------------------


ಮೈಸೂರು: ಕನ್ನಡ ಸಾಹಿತ್ಯದ ಮಹಿಳಾ ಯುಗಕ್ಕೆ ನಾಂದಿ ಹಾಡಿದವರು ಜಗನ್ಮಾತೆ  ಅಕ್ಕಮಹಾದೇವಿ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಮೈಸೂರು ಮುನೇಶ್ವರನಗರದ ಬಸವಜ್ಞಾನ ಮಂದಿರದಲ್ಲಿ ಶ್ರಾವಣಮಾಸದ ಪೂಜಾನುಷ್ಠಾನ ಹಾಗೂ ವಿಶ್ವಧರ್ಮ ವಚನ ಪ್ರವಚನ ಕಾರ್ಯಕ್ರಮದಲ್ಲಿ ಅಕ್ಕನ ವಚನಗಳಲ್ಲಿ ಧೀಃಶಕ್ತಿ ವಿಷಯ ಕುರಿತು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಪ್ರವಚನ ನೀಡಿ ಮಾತನಾಡಿದ ಅವರು ಧೈರ್ಯಕ್ಕೆ ಮತ್ತೊಂದು ಹೆಸರೇ ಅಕ್ಕ ಆಕೆ ಉಡುತಡಿಯಲ್ಲಿ ಜನಿಸಿ ಬಾಲ್ಯದಲ್ಲಿಯೇ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿ ಎಂದುಕೊಂಡು ಎಲ್ಲರ ಮುಂದೆ ನಿಸ್ಸಂಕೋಚದಿಂದ ಹೇಳಿಕೊಂಡಳು. ಕೌಶಿಕ ಮಹಾರಾಜ ಅಕ್ಕನ ದಿವ್ಯಸಂದರ್ಯಕ್ಕೆ ಮಾರುಹೋಗಿ ಮದುವೆಯಾಗುವಂತೆ ಪೀಡಿಸುವುಕೆ ಅತಿಯಾದಾಗ ಮೂರು ಷರತ್ತು ವಿಧಿಸಿ ಮದುವೆಯಾದಳು, ರಾಜ ಆ ಷರತ್ತನ್ನು ಮುರಿದಾಗ ಅರಮನೆಯಿಂದ ಕಂಬಳಿ ಹೊದ್ದುಕೊಂಡು ಕಾಡಿನಲ್ಲೆಲ್ಲಾ ಸಂಚರಿಸಿ ಎಲ್ಲರನ್ನು ದಿಟ್ಟತನದಿಂದ ಎದುರಿಸಿ ಬಸವಕಲ್ಯಾಣವನ್ನು ಪ್ರವೇಶಿಸಿ ಅನುಭವ ಮಂಟಪದಲ್ಲಿ ಸಾಕಷ್ಟು ಕಾಲ ಚರ್ಚೆಯಲ್ಲಿ ಭಾಗವಹಿಸಿ ತದನಂತರ ಕದಳಿಗೆ ಹೋಗಿ ಐಕ್ಯಳಾಗುತ್ತಾಳೆ. ಅಕ್ಕ ವಿಶ್ವದ ಎಲ್ಲಾ ಮಹಿಳಾ ಸಂಕುಲಕ್ಕೆ ಮಾದರಿಯಾಗುತ್ತಾಳೆ ಎಂದರು. ಬಸವಜ್ಞಾನ ಮಂದಿರದ ಪೀಠಾಧ್ಯಕ್ಷರಾದ ಡಾ. ಮಾತೆ ಬಸವಾಂಜಲಿದೇವಿ ಆಶೀರ್ವಚನ ನೀಡಿ ಅರಮನೆಯ ವೈಭವದ ಸಂಪತ್ತನ್ನು ತಿರಸ್ಕರಿಸಿ ಶರಣರ ಸಂಗವೇ ನನಗೆ ಮುಖ್ಯ ಎಂದು ರಾಜ್ಯದಿಂದ ಹೊರನಡೆದ ಅಕ್ಕಮಹಾದೇವಿಯವರ ತ್ಯಾಗ ಗುಣ ಎಲ್ಲರಿಗೂ ಅನುಕರಣೀಯ ಎಂದರು. ಕಾರ್ಯಕ್ರಮದಲ್ಲಿ ಬಸವಜ್ಞಾನ ಮಂದಿರದ ಪೀಠಾಧ್ಯಕ್ಷರಾದ ಡಾ. ಮಾತೆ ಬಸವಾಂಜಲಿದೇವಿ,  ಸಿದ್ಧಲಿಂಗಸ್ವಾಮೀಜಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾರ್ಯಾಧ್ಯಕ್ಷ ಭ.ಪಂಪಾಪತಿ, ತಾಲ್ಲೂಕು ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷರಾದ ಪ್ರೇಮ ಪ್ರಭುಸ್ವಾಮಿ, ಡಾ.ಪಟ್ಟಪ್ಪ,  ಬಸವಬಳಗ ಒಕ್ಕೂಟ ಅಧ್ಯಕ್ಷೆ ಜಯಾಗೌಡ, ದಿವ್ಯಚೇತನ, ವೀರಶೈವ ಮಹಿಳಾ ಬಳಗದ ಮಾಜಿ ಅಧ್ಯಕ್ಞೆ ರಾಜೇಶ್ವರಿ ಮಹೇಶ್, ಲೀಲಾ ಪಂಪಾಪತಿ, ಪುಷ್ಪ ಕುಮಾರಸ್ವಾಮಿ, ಶೋಭರಾಣಿ, ಸುಧಾ ಕುಮಾರ್, ಭಾಗ್ಯಲಕ್ಷ್ಮಿ, À್ಪ, ಉಷಾ, ನಾಗೇಶ್, ಪ್ರಭುಸ್ವಾಮಿ, ಮಹೇಶ್, ಮಾದೇಶ್, ಸಿದ್ಧಲಿಂಗಪ್ಪ, ದೇವಮ್ಮ   ಭರತ್, ರಾಣಿ ಸಿದ್ಧಪ್ಪ, ನೀಲಾಂಬಿಕೆ ನಾಗರಾಜಪ್ಪ, ಗೀತಾ ಈಶ್ವರ್, ಕಾವೇರಿ, ಚೆನ್ನಬಸಪ್ಪ ಉಪಸ್ಥಿತರಿದ್ದರು.
---------------------------------------









No comments:

Post a Comment