Monday, March 11, 2019
Friday, March 8, 2019
ಗೀತೆ ನಮನ ಸಂಗ್ರಹ ಭಾಗ - 2
51.
@@
52.
@@@@
53.
@@@@
54.
@@@@
55.
@@@@@
56.
@@@
57.
ನಾನು ಕಂಡ ದೇವರು:
ಹರಿಯುತಿರುವ ನೀರಿನಂತೆ,
ಬೆಳಗುತಿರುವ ಜ್ಯೋತಿಯಂತೆ,
ಬೀಸುವ ತಂಗಾಳಿಯಂತೆ,
ನಾನು ಕಂಡ ದೇವರು.
ಧರೆಯ ಶಿವನ ಸ್ವರೂಪದವರು,
ಚಂದ್ರನಂತೆ ಶಾಂತಿ ಪ್ರಿಯರು,
ಸೂರ್ಯನಂತೆ ಪ್ರಜ್ವಲಿಪರು,
ನಾನು ಕಂಡ ದೇವರು.
ಜಗಮೆಚ್ಚಿದ ಜಂಗಮರು,
ಸದಾನಗುವ ಶಿವಶರಣರು,
ಕಾಯಕ ಕೈಲಾಸದವರು,
ನಾನು ಕಂಡ ದೇವರು.
ಧರೆಯ ಸಿದ್ಧಿಪುರುಷರಿವರು,
ತ್ರಿವಿಧ ದಾಸೋಹದವರು,
ನಡೆದಾಡುವ ದೇವರಿವರು,
ನಾನು ಕಂಡ ದೇವರು.
- ಜಯಂತ್ ಕೆ ಗೌಡ.
@@@
58.
@@@@@
59.
@@@@@
60.
@@@@@
61.
@@@@@
62.
@@@@@
63.
@@@@@
64.
@@@@@
65.
@@@@@
66.
@@@@
67.
@@@@
67.
@@@@
68.
@@@@@
69.
@@@@
70.
@@@@
71.
@@@@
72.
@@@@@
73.
@@@@@
74.
@@@@@
75.
@@@@
76.
@@@@
77.
@@@@
78.
@@@@@
79.
@@@@
80.
@@@@
81.
@@@@
82.
@@@@
83.
@@@@
84.
@@@
85
ವಿಶ್ವ ರತ್ನ
•~~•~~•
ಅಸನ ವಸನಕೂ ವ್ಯಸನವಾಗಿದ್ದ ಕಾಲದಲಿ
ಅಜ್ಞಾನವ ಅಳಿಸಿ ಜ್ಞಾನಾರ್ಜನೆಗೆ ಗತಿಯೆಲ್ಲಿ
ಗುರುಕುಲಕೆ ಸಾಗಿ ವಿದ್ಯೆಯನೆಲ್ಲಿ ಅರಿಯಲಿ
ಎಂಬಂತಿದ್ದರು ಬಡಜನರು ನಮ್ಮ ನಾಡಿನಲಿ
ಜನಿಸಿದರು ಶಿವಣ್ಣ, ಸಾಗಿ ಶಿವಕುಮಾರರಾಗಿ
ಬಿಕ್ಕೆಯ ನೀಡಿದರೆಂದು ಮತ್ತೆ ತಂದರು ರಾಗಿ
ಜೋಳ ಧವಸ ತರಕಾರಿಗಳನು ಸ್ವತಂತ್ರವಾಗಿ
ಹಿಂದೆಯೆ ಬಂದರು ಬಡಮಕ್ಕಳು ಜತೆಗೆ ಸಾಗಿ
ಹತ್ತು ರೊಟ್ಟಿಯ ಹದಿನೈದು ಜನರೊಡಗೂಡಿ
ಮೆದ್ದವರೆ ಬಲ್ಲರು ಹಂಚಿ ತಿನ್ನುವ ಸವಿ ನೋಡಿ
ಅವನು ಇವನೆಂಬ ಭೇಧವ ತೊರೆದಿರೆ ಮೋಡಿ
ಅರವತ್ತೆಂಬುದು ಒಂಬತ್ತು ಸಾಸಿರ ದಾಟಿದೆ ಗಡಿ
ಪ್ರಭುತ್ವದ ಹಂಗು ಬೇಡವೆಮಗೆ ಶುದ್ಧ ಮನಸು
ಪರಾಂಭರಿಸಿ ದಾನಗೈದಿರೆ ನನಸಾಯ್ತು ಕನಸು
ರಾಗಿ ತಿನಿಸಿ ಯೋಗ ಕಲಿಸಿದ ಕಾಣಿಕೆ ಸೊಗಸು
ಕಾಯಕ ಕಲಿಸಿರೆ ಸಂದುದರಿಯಲಿಲ್ಲ ವಯಸ್ಸು
ಶತಕದ ಜತೆ ಹನ್ನೆರಡು ವಸಂತಗಳು ಸಂದವು
ಶಿರ ಬಾಗಿದರೂ ಬಾಗುವ ಶಿರಗಳು ಹೆಚ್ಚಾದವು
ವಿಶ್ವರತ್ನದ ಅಗಲಿಕೆಗೆ ಭಕ್ತಮನಗಳು ಪೆಚ್ಚಾದವು
ನಿಮ್ಮನನುಕರಿಸುವ ಮಠಗಳು ಹಿರಿದಾಗುವುವು
ವೈ.ಕೊ
ವೈಲೇಶ ಪಿ ಎಸ್ ಕೊಡಗು
೨೨/೨/೨೦೧೯
86
ಬಂದರು ಸಿದ್ದಗಂಗಾ ಸ್ವಾಮಿಗಳು
~~~~~~~~~~~~~~~~~~
ಬಂದರು ಸಿದ್ದಗಂಗಾ ಸ್ವಾಮಿಗಳು
ಶಿವಕುಮಾರ ಎಂಬ ನಾಮದೊಳು
ಎಣಿಸದೆ ಧರ್ಮವ ಶಾಲೆಯೊಳು
ತುಂಬುತ ವಿದ್ಯೆಯಾ ಸರ್ವರೊಳು||ಪ
ಅಸನವು ನಮದೇ ಎಂದಿಹರೂ
ವಸತಿಯ ನೀಡುತ ಕರೆದಿಹರು
ಹೊಲದಲಿ ಬೆಳೆಯಾ ತಂದಿಹರು
ಜಗದ ಶಿರೋಮಣಿ ಆಗಿಹರು||೧||
ಬಡವರ ಶಿಕ್ಷಣ ಉದ್ಘೋಷಾ
ಕಾಯಕ ಕಲಿಸುವ ಉದ್ದೇಶ
ಜೀವನ ಬಹುಮುಖಿ ಸಂದೇಶ
ಹರಸಿದ ಇವರನು ಪರಮೇಶ ||೨||
ಸನ್ಯಾಸ ಎಂಬುದೇ ಹಿರಿದಯ್ಯಾ
ಸಾಸಿರ ಮಕ್ಕಳು ನಿಮಗಯ್ಯಾ
ಪಾವನ ನಿಮ್ಮಯ ನೆನಪಯ್ಯಾ
ಕರವನು ಮುಗಿವೇ ಹರಸಯ್ಯಾ ||೩||
ವೈ.ಕೊ
ವೈಲೇಶ ಪಿ ಎಸ್ ಕೊಡಗು
೧೯/೨/೨೦೧೯
---------------------
87
ದೇವರೊಬ್ಬನೇ ನಾಮ ಹಲವು .... ಶ್ರೀ ಶ್ರೀ ಶ್ರೀ ಸಿದ್ದಗಂಗಾ ಸ್ವಾಮಿಗಳು ಕಾಯಕಯೋಗಿಯಾಗಿ, ಸರ್ವಧರ್ಮಿಯಾಗಿ ಅನ್ನ ,ಅಕ್ಷರ ಹಾಗೂ ಆಶ್ರಯ ದಾಸೋಹ ನೀಡಿ ಅಜರಾಮರಾದವರು. ಶ್ರೀಗಳು ಒಂದೊಂದು ಬಂಡೆಗಲ್ಲನ್ನು ಕಡೆದು ಸ್ಥಾಪಿಸಿದ ಸಂಸ್ಥೆ ಈಗ ದೊಡ್ಡ ಹೆಮ್ಮರವಾಗಿ ಬೆಳೆದು ವಿಶ್ವದಗಲಕ್ಕೂ ಖ್ಯಾತಿಯನ್ನು ಪಡೆದಿದೆ. ತ್ಯಾಗಮಯಿ ಶ್ರೀ ಸಿದ್ದಗಂಗಾ ಶ್ರೀಗಳು ನೀಡಿದ ದಾಸೋಹದಿಂದ, ಶಿಸ್ತು, ಸಂಯಮ, ಸಂಸ್ಕಾರಗಳ ಪಾಠಗಳಿಂದ ಹಾಗೂ ಉಣಬಡಿಸಿದ ಬಸವತತ್ವಗಳಿಂದ ಸಾಕಷ್ಟು ಅನಾಥ ಹಾಗೂ ಬಡ ಮಕ್ಕಳು ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ನೆಲೆಸಿದ್ದಾರೆ . ವಿವಿಧ ಕ್ಷೇತ್ರದ ಗಣ್ಯರು ಹಾಗೂ ಮಠಾಧೀಶರು ಶ್ರೀಗಳಿಗೆ ಸಾಕಷ್ಟು ಬಿರುದುಗಳನ್ನು ನೀಡಿ ಗೌರವಿಸಿದ್ದಾರೆ. ಅವುಗಳಲ್ಲಿ ಕೆಲವೇ ಕೆಲವುಗಳನ್ನು ನಿಮ್ಮ ಮುಂದೆ ಪ್ರಸ್ತಾಪಿಸಿದ್ದೇನೆ . 1 ಶತಮಾನದ ಸಂತ 2 ನಡೆದಾಡುವ ದೇವರು 3 ಕಾಯಕ ಯೋಗಿ 4 ತ್ರಿವಿಧ ದಾಸೋಹಿ 5 ಶೈಕ್ಷಣಿಕ ಕ್ರಾಂತಿಯ ಪ್ರೇರಕ-ಸಾಧಕ 4 ಭಾರತದ ಅನರ್ಘ್ಯ ರತ್ನ 5 ಸಿದ್ಧಿಪುರುಷ 6 ಕರ್ನಾಟಕ ರತ್ನ 7 ಜಗದೋದ್ಧಾರಕ 8 ಆಧುನಿಕ ಬಸವಣ್ಣ 9 ಪರಮ ತಪಸ್ವಿ 10 ವೀರ ವಿರಾಗಿ 11 ಜ್ಞಾನಕೋಶ 12 ಸದಾ ಹಸನ್ಮುಖಿ 13 ಸಮನ್ವಯ ಯೋಗಿ 14 ಅಂತರ್ಮುಖಿ 15 ದಿವ್ಯ ಸ್ವರೂಪಿ 16 ದಾಸೋಹ ನಿಧಿ 17 ಮಹಾನ್ ಚೇತನ 18 ವಾತ್ಸಲ್ಯ ಮೂರ್ತಿ 19 ಧೀಮಂತ ಚೇತನ 20 ಮಂಗಳಮೂರ್ತಿ 21ಸದಾ ತೇಜಸ್ವಿ 22 ಬಸವ ಕಿರಣ 23 ಸಿದ್ದಗಂಗೆಯ ಮುಕುಟಮಣಿ 24 ಸರಳ ಸಜ್ಜನಿಕೆಯ ಸಾಕಾರ ಮೂರ್ತಿ 25 ಶರಣ ಚಿಂತಕ 26 ಅಮೋಘ ವ್ಯಕ್ತಿತ್ವ 27 ಶ್ರೇಷ್ಠ ಧಾರ್ಮಿಕ ನಾಯಕ 28 ಸಾಮಾಜಿಕ ಅಭಿವೃದ್ಧಿಕಾರ 29 ಮಾರ್ಗದರ್ಶಕ 30 ಪಾವನ ಮೂರ್ತಿ 31 ಗಂಗಾ ಸಂಗಮ 32 ಅನುಗ್ರಹ ಸಮರ್ಥ 33 ಧರ್ಮ ದೀಪ 34 ಕ್ರೀಯಾ ಮೂರ್ತಿ 35 ತತ್ವರೂವಾರಿ 36 ಪಾವನಾತ್ಮ 37 ಜಂಗಮ ಶ್ರೇಷ್ಠ 38 ದೀನದಲಿತರ ದಾರಿದೀಪ 39 ದಾನ ಮಾನವ 40 ದೇವ ದೀವಿಗೆ 41 ಕನ್ನಡದ ಬುದ್ಧ 42 ವಿಶ್ವಪ್ರೇಮಿ 43 ಮಂಗಳಮೂರ್ತಿ 44 ಚಿದ್ಭಾವ ಮೂರ್ತಿ 45 ಗುರಿ ಮುಟ್ಟಿದ ಅನುಭವ ಮೂರ್ತಿ 46 ಪ್ರಸನ್ನ ಜ್ಯೋತಿ 47 ಅನುಭವದ ಸಿರಿ 48 ದೂರದರ್ಶಿ 49 ಜ್ಞಾನದೇಗುಲ 50 ಅಪ್ರತಿಮ 51 ದಣಿವರಿಯದ ಚೇತನ 52 ಪರಮ ಪೂಜ್ಯ 53 ಸಂಕಲ್ಪ ಗಂಗೋತ್ರಿ 54 ನಡೆದಾಡುವ ದೈವ 55 ಬಡವರ ಬಂಧು 54 ಆಶಾ ಕಿರಣ 55 ಲೋಕ ಜಂಗಮ 56 ಪ್ರತ್ಯಕ್ಷ ದೇವರು 57 ಜ್ಞಾನ ಜ್ಯೋತಿ 58 ಲೋಕ ಜೀವಿ 59 ಅನಾಥ ರಕ್ಷಕ 60 ದೀನರ ಬಂಧು 61 ವಿಶ್ವದ ಪುಣ್ಯ ಪುರುಷ 62 ಅಕ್ಷರ ದಾಸೋಹಿ 63 ಆಶ್ರಯ ದಾಸೋಹಿ 64 ಅನ್ನ ದಾಸೋಹಿ 65 ವಿದ್ಯಾ ದಾಸೋಹಿ 66 ಜ್ಞಾನ ದಾಸೋಹಿ 67 ಅಕ್ಷಯ್ ನಿಧಿ 68 ಸದಾ ಸ್ಮರಣೀಯ 69 ಯುಗದ ಸಂತ 70 ಶಿಕ್ಷಣ ದಾತ 71 ದಿವ್ಯ ಶಕ್ತಿ 72 ನೈತಿಕ ಮೇರು ಶಿಖರ 73 ಪಾಂಡಿತ್ಯಪೂರ್ಣ 74 ಕ್ರಾಂತಿಪುರುಷ 75 ಬಡ ವಿದ್ಯಾರ್ಥಿಗಳ ಕಾಮಧೇನು 76 ಅನಾಥರ ತಂದೆ 77 ಮಹಾಯೋಗಿ 78 ಸಿದ್ದಗಂಗಾಶ್ರೀ 79 ಧರ್ಮಾತೀತ 80 ಪೂಜನೀಯ 81 ಶರಣ ಸಿದ್ಧರಾಮ 82 ದೈವ ರೂಪದ ದಿನಕರ 83 ಜಂಗಮ ಯೋಗಿ 84 ಮಹಾನ್ ಸಾಧಕ 85 ತ್ಯಾಗಜೀವಿ 86 ಮಹಾನ್ ವಿರಕ್ತ 87 ತ್ರಿಕರಣ ಶುದ್ಧ 88 ಆರಾಧ್ಯ ದೈವ 89 ಪದ್ಮಭೂಷಣ 90 ಜಗತ್ತು ಕಂಡ ಜ್ಞಾನ ಭಂಡಾರ 91 ಸ್ವಯಂ ಸೇವಕ 92 ಆದರ್ಶ ಪೀಠಾಧಿಪತಿ 93 ಪೂರ್ಣಾ ಧಿಕಾರಿ 94 ಅಗ್ರ ಮಠಾಧಿಪತಿ 95 ಗೌರವಾನ್ವಿತ ಅನುಯಾಯಿ 96 ಪೂಜ್ಯ ವ್ಯಕ್ತಿ 97 ಜಂಗಮ ಮೂರ್ತಿ 98 ವೀರಾಪುರದ ಪ್ರೀತಿಯ ಬಾಲಕ 99 ಗುರುಲಿಂಗ ಜಂಗಮ ಭಕ್ತ 100 ಸಾಧು ಸಂತ 101 ಸಂಸ್ಕಾರ ಜೀವಿ 102 ಮಹಿಮಾ ಮೂರ್ತಿ 103 ದಾಸೋಹ ವಿಕ್ರಮ 104 ಸರ್ವಧರ್ಮಿಯ 105 ಯೋಗ್ಯ ಉತ್ತರಾಧಿಕಾರಿ 106 ಮಾನವಿಯತೆಯ ಸಾಕಾರಮೂರ್ತಿ 107 ಏಕಮೇವಾದ್ವಿತೀಯ 108 ಅಖಂಡ ದಾಸೋಹಿ 109 ಋಜುಮಾರ್ಗದ ಪರಿಚಕ 110 ಲೋಕ ಪೂಜ್ಯ 111 ಸದಾ ತೇಜಸ್ವಿ 112 ಜಗದ ಯೋಗಿ 113 ಭಾರತೀಯ ಆಧ್ಯಾತ್ಮಿಕ ನಾಯಕ 114 ಮಾಗಡಿ ತಾಲೂಕಿನ ಹೆಮ್ಮೆಯ ಪುತ್ರ
ಶ್ರೀಮತಿ ಕರುಣ
ಬೆಂಗಳೂರು
...............................
88
"ಶತಾಯುಷಿಗೆ ಸಹಸ್ರ ನಮನಕ್ಕೆ"ನನ್ನ ಕವನ ನಮನ
ನಡೆದಾಡುವ ದೇವರು
-----------/////-----------
ಮಕ್ಕಳೇ ದೇವರು ಎಂದರು ಸಿದ್ಧಗಂಗಾಶ್ರೀಗಳು
ನುಡಿದಂತೆ ನಡೆದರು ನಡೆದಾಡುವ ದೇವರು.
ಹಸಿದ ಹೊಟ್ಟೆಗೆ ತುತ್ತು ನೀಡಿದ ಮಾತೃಸ್ವರೂಪಿ ದೇವರು
ನಡೆ ಮುಂದೆ,ನಡೆ ಮುಂದೆ ನುಗ್ಗಿ ನಡೆ ಮುಂದೆ
ನಿನ್ನೊಡನೆ ನಾನಿರುವೆನೆಂದು ದೈರ್ಯ ತುಂಬಿದ ತಂದೆ ಯಿವರು
ಮುದ್ದು ಮಕ್ಕಳ ತಿದ್ದಿ ತೀಡಿದ ಮಹಾಗುರುಗಳಿವರು
ಜಾತಿ,ಮತ ವೆಂಬ ಕಳೆ ಕಿತ್ತೊಗೆದ ಆಧುನಿಕ ಬಸವಣ್ಣರಿವರು
ಮನುಷ್ಯ ಜಾತಿ ಒಂದೇ, ಎಂದು ಸಾರಿದ ದಿವ್ಯ ಜ್ಯೋತಿ ಇವರು
ದಾಸೋಹವೇ(ಅನ್ನ,ಅಕ್ಷರ,ಆಶ್ರಯ,ಅರಿವು)ಶ್ರೀಗಳ ಉಸಿರು
ದಾಸೋಹದಿಂದ ಉಸಿರು ನೀಡಿದ ಕಲ್ಪವೃಕ್ಷ ಇವರು
ತುತ್ತು ಅನ್ನದಿಂದೆ ಉಳುವ ಯೋಗಿಯ ಶ್ರಮವಿದೆಯೆಂದರು
ಮಕ್ಕಳೇ ದೇವರು ಎಂದರು ಸಿದ್ದಗಂಗಾ ಶ್ರೀಗಳು
ನುಡಿದಂತೆ ನಡೆದರು ನಡೆದಾಡುವ ದೇವರು
ಶ್ರೀಗಂಧ ದೇಹವನು ಸದ್ದಿಲ್ಲದೆ ಕೊರಡಿನಂತೆ ಸವೆಸಿದ ಪರಮ ಪೂಜ್ಯರಿವರು
ಇಷ್ಟಲಿಂಗ,ಸಮಾಜಲಿಂಗ ಪೂಜೆ ಮಾಡಿದ ಶಿವ ಭಕ್ತರಿವರು
ಮನೆ,ಮನೆಗೂ ಶಿವಬೆಳಕು ನೀಡಿದ ಮಹಾ ತಪಸ್ವಿಗಳಿವರು
ಧರ್ಮ,ಕರ್ಮ,ಜ್ಞಾನದ ದೀಪ ಹಚ್ಚುತ ನಡೆದಾಡಿದ ಋಷಿಗಳಿವರು
ನಾಡೆಲ್ಲ ಹೇಳುತಿದೆ ಭಾರತ ಮಾತೆಯ ರತ್ನದ ಹಾರ ಇವರು
ನೋಡು,ನೋಡಿಲ್ಲಿ ಬರುವುದು ಭಕ್ತರ ದಂಡು
ಭಕ್ತರ ಮನದಲ್ಲಿ ,ಸಂತರಸಂತ ಸದಾ ಜೀವಂತವೆಂದು
ದೇವರಿಲ್ಲವೆಂದು ಕೊರಗಬೇಡ ಎಂದು
ಇರುವರು ,ಈ ಶತಮಾನ ಕಂಡ ದೇವರಿಲ್ಲಿ ಎಂದೆಂದೂ
ಮಕ್ಕಳೇ ದೇವರು ಎಂದರು ಸಿದ್ಧಗಂಗಾ ಶ್ರೀಗಳು
ನುಡಿದಂತೆ ನಡೆದರು ನಡೆದಾಡುವ ದೇವರು
ರಚನೆ
ಡಾ. ಎನ್.ಟಿ. ಅನಿಲ್
ಬೆಂಗಳೂರು
...........................
89
"ತಾಯಿಯಾದೆ ತಂದೆಯಾದೆ"
ತಾಯಿಯಾದೆ ತಂದೆಯಾದೆ
ಬಂಧುವಾದೆ ಗುರುವಾದೆ
ಯೇಸುವಾದೆ ಅಲ್ಲಾ ಆದೆ
ಬುದ್ಧನಾದೆ ದೇವರ ಮಕ್ಕಳಿಗೆ.....
ತ್ರಿವಿಧದ ದಾಸೋಹ ನಡೆಸಿದೆ ನೀ ಬಸವಣ್ಣನಾಗಿ.
ಬೇಡಲಿಲ್ಲ ಬಯಸಲಿಲ್ಲ ತನು ಮನ ಧನ ನಿನಗಾಗಿ.
ನಿಮ್ಮ ಹೆಸರು ನೆನೆವರು ಅವರವರ ಭಾವಕ್ಕಾಗಿ...
ನಿನ್ನ ಭಾಗ್ಯ ಧಾರೆ ಎರೆದೆ ಬಡ ಬಲ್ಲಿದರ ಜೀವನಕ್ಕೆ.......
ಭಕ್ತಿ ಶಕ್ತಿ ಯುಕ್ತಿ ಕಲಿಸಿ
ದೈವತ್ವದ ಪಾಠ ಪಠಿಸಿ
ಹೋಗಲಿಲ್ಲ ಎಲ್ಲೂ ನೀನು
ನಮ್ಮೊಳಗಾದೆ ಎಂದೂ ಒಂದು.
ಮಾಹಾಮಾನವನ ಆಸ್ತಿಯಂತೆ
ಅನಿಕೇತನದ ಪ್ರಾಪ್ತಿಯಾದೆ
ಚೈತನ್ಯದ ಮಹಾ ಚೇತನನಂತೆ
ಬದುಕು ಕಳೆದು ಬವಣೆ ತಿಳಿದು
ಸನ್ಮಾರ್ಗವ ತೋರಿದೆ
ಓ ಶಿವಕುಮಾರ ಸ್ವಾಮಿ ಜಿ...
ನಿಮಗೆ ಅನಂತ ವಂದನೆಗಳು.
ಸಮಾಜ ನಿಮಗೆ ಋಣಿಯಾಗಿರುಹುದು.
ನಿಮ್ಮ ಮಾರ್ಗ ಅನುಸರಿಸುತ್ತ, ಜನರ ಜೀವನದ ಭಾಗವಾಗಿರುವಿರಿ
ಎಲ್ಲರಲ್ಲೂ ನೀವು ಒಂದಾಗಿರುವಿರಿ.
ಡಾ.ಜಗನ್ನಾಥ ಕೆ ಡಾಂಗೆ
--------------------------
Subscribe to:
Posts (Atom)









































































