1.ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ
ಧರೆ ಧನ ವನಿತೆಯರು ಎನ್ನವರು ತನ್ನವರೆಂದು
ಹೋರಿ ಹೋರಿ ಸಾಯುತ್ತದೆ ಜೀವ,
ಸರ್ವಕರ್ತೃ ಕೂಡಲಚೆನ್ನಸಂಗಯ್ಯನೆಂದರಿಯದೆ
ಗುಬ್ಬಿಗಳು ಬೇರೆಯವರ ಮನೆಗಳ ಕಿಟಕಿಯ ಅಡಿಭಾಗ, ಭಾಗಿಲಿನ ಮೇಲ್ಭಾಗ, ಮನೆಯ ಮೂಲೆಗಳಲ್ಲಿ ಜಾಗ ಸಿಕ್ಕರೆ ಅಲ್ಲಿ ಗೂಡು ಕಟ್ಟಿಕೊಂಡು ನಾನು ಶಾಶ್ವತವಾಗಿ ನೆಲೆಸುತ್ತೇನೆ ಎಂಬ ಭ್ರಮೆಯಲ್ಲಿರುತ್ತವೆ. ಆದರೆ ಆ ಮನೆಯ ಒಡೆಯ ಮನೆಯನ್ನು ಶುಚಿಗೊಳಿಸುವಾಗ ಗುಬ್ಬಿಯ ಗೂಡು ನಾಶವಾಗುತ್ತದೆ. ಹಾಗೆಯೇ ಮನುಷ್ಯ ತನ್ನ ಆಶ್ರಯ ತಾಣವಾದ ಭೂಮಿ, ವೈಭವದ ಜೀವನ ನಡೆಸಲು ಸಹಾಯಕವಾಗುವ ಧನ ಮತ್ತು ತನ್ನ ಇಷ್ಟಾರ್ಥಗಳನ್ನು ಪೂರೈಸುವ ಮಡದಿ ಯಾವಾಗಲೂ ನನ್ನ ಜೊತೆ ಇರುತ್ತಾರೆ ಎಂಬ ಭ್ರಮಾಲೋಕದಲ್ಲಿ ತೇಲುತ್ತಾ ಪ್ರಪಂಚದ ಪ್ರತಿಯೊಂದು ಅಣು ರೇಣು ತೃಣಕಾಷ್ಠಗಳ ಆಗುಹೋಗಿಗೆ ಕಾರಣಕರ್ತನಾದ ಪರಶಿವನನ್ನು ಮರೆತು ಕೊನೆಗೊಂದು ದಿನ ಧರೆ, ಧನ ಮತ್ತು ವನಿತೆಯರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳುತ್ತಾನೆ. ಮನುಷ್ಯ ಬದುಕಿರುವಾಗಲೇ ಕೂಡಲಚೆನ್ನಸಂಗಯ್ಯನನ್ನು ಪೂಜಿಸುವ ಸ್ವಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂಬುದು ಈ ವಚನದ ಆಶಯವಾಗಿದೆ.
------------