ಚಿತ್ರ 1 ಶರಣು ವಿಶ್ವವಚನ ಫೌಂಡೇಶನ್ ಹೆಗ್ಗಡದೇವನಕೋಟೆ ತಾಲ್ಲೂಕು ಪುರ ಗ್ರಾಮದಲ್ಲಿ ಆಯೋಜಿಸಿದ್ದ ವಚನಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ ಮನೆಮನೆಗೆ ವಚನಪುಸ್ತಕವನ್ನು ನೀಡುವುದರ ಮುಖಾಂತರ ಪುರ ಮಠದ ಶ್ರೀ ಚಂದ್ರಶೇಖರಸ್ವಾಮೀಜಿ ಉದ್ಘಾಟಿಸಿದರು.ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನಕುಮಾರಸ್ವಾಮಿ, ಬಸವಬಳಗ ಒಕ್ಕೂಟದ ಅಧ್ಯಕ್ಷ ಟಿ.ಎಸ್.ಲೋಕೇಶ್, ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಶ್ರೀಕಂಠಮೂರ್ತಿ ಇತರರು ಇದ್ದರು.
ವಚನಹಳ್ಳಿ ಹಳ್ಳಿಗಾಡಿನ ಜನರನ್ನು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಪೂರಕವಾಗಿದೆ ಎಂದು ಬಸವಬಳಗ ಒಕ್ಕೂಟದ ಅಧ್ಯಕ್ಷ ಟಿ.ಎಸ್.ಲೋಕೇಶ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ಹೆಗ್ಗಡದೇವನಕೋಟೆ ತಾಲ್ಲೂಕು ಪುರ ಗ್ರಾಮದಲ್ಲಿ ಆಯೋಜಿಸಿದ್ದ ವಚನಗ್ರಾಮ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಚನಸಂಸ್ಕಾರ ಎಂಬುದು ವಚನಪುಸ್ತಕಗಳನ್ನು ಅಧ್ಯಯನ ಮಾಡಿದರೆ ಸಿಗುತ್ತದೆ.ಅಂತಹ ಸಂಸ್ಕಾರ ಪಡೆದಂತಹವರು ನಿರ್ಮಲ ಮನಸ್ಸನ್ನು ಹೊಂದುವುದರ ಜೊತೆಗೆ ಎಲ್ಲರನ್ನೂ ಸಮಾನತೆ ಮತ್ತು ಸಹೋದರತೆ ಭಾವನೆಯಿಂದ ಕಾಣುತ್ತಾರೆ. ಆಗ ಇಡೀ ಹಳ್ಳಿಯೇ ಸುಸಂಸ್ಕøತ ಹಳ್ಳಿಯಾಗಿ ಮಾರ್ಪಾಡಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.ಸಾಹಿತಿ ನಗರ್ಲೆ ಶಿವಕುಮಾರ್ ಮಾತನಾಡಿ ಮಕ್ಕಳಲ್ಲಿ ವಚನಗಳ ಬಗ್ಗೆ ಆಸಕ್ತಿ ಚಿಕ್ಕಂದಿನಲ್ಲೇ ಚಿಗುರೊಡೆಯಲು ಈ ಕಾರ್ಯಕ್ರಮ ಸಹಕಾರಿಯಾಗಿದೆ.12 ನೇ ಶತಮಾನದ ಶರಣರ ಕಾಯಕತತ್ವ ಮತ್ತು ಏಕದೇವೋಪಾಸನೆಯನ್ನು ಮಕ್ಕಳು ಮೈಗೂಡಿಸಿಕೊಂಡಿದ್ದೇ ಆದರೆ ಏಕಾಗ್ರತೆ ಜೊತೆಗೆ ಆರ್ಥಿಕವಾಗಿ ಸಬಲರಾಗಬಹುದು. ಇಂತಹ ತತ್ವದಿಂದ ಪ್ರೇರಣೆಗೊಂಡು ಕಾಶ್ಮೀರದ ಅರಸ ಮೋಳಿಗೆ ಮಾರಯ್ಯ ತನ್ನ ಅರಸುತನಕ್ಕೆ ತಿಲಾಂಜಲಿ ಹೇಳಿ ಕಟ್ಟಿಗೆ ಕಡಿಯುವ ಕಾಯಕ ಕೈಗೊಂಡರು.ವಚನಗಳನ್ನು ಆಧ್ಯಯನ ಮಾಡಿದ್ದೇ ಆದರೆ ಎಲ್ಲರೂ ಕೂಡ ಪರಿವರ್ತನೆ ಆಗಿ ನಿಷ್ಕಲ್ಮಷ ಮನಸ್ಸು ಹೊಂದಬಹುದು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ವಚನಕುಮಾರಸ್ವಾಮಿ ಶರಣು ವಿಶ್ವವಚನ ಫೌಂಡೇಶನ್ ಪ್ರತಿಹಳ್ಳಿಯಲ್ಲಿ ಉನ್ನತವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಸತ್ಕಾರ ಮಾಡುತ್ತಿದೆ.ಇದರ ಉದ್ದೇಶ ಹಳ್ಳಿಯಲ್ಲಿನ ಎಲ್ಲಾ ಮಕ್ಕಳು ಉನ್ನತ ವ್ಯಾಸಂಗ ಮಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಾಯಕವಾಗಿದೆ. ವಚನಪ್ರಪಂಚ ಮಾಡುವ ಮೊದಲು ವಚನಹಳ್ಳಿಗಳಾಗಿ ಪರಿವರ್ತನೆ ಆಗಬೇಕಿದೆ.ಅದಕ್ಕೆ ಆ ಗ್ರಾಮದ ಪ್ರತಿ ಮನೆಮನೆಗೆ ಭೇಟಿ ನೀಡಿ ವಚನಪುಸ್ತಕಗಳನ್ನು ಕೊಟ್ಟು ವಚನಾಸಕ್ತಿ ಮೂಡಿಸಲು ವಚನಹಳ್ಳಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.ಪುರದ ಬಸವೇಶ್ವರ ಪಟ್ಟದ ಮಠದ ಚಂದ್ರಶೇಖರಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ನಂತರ ಉನ್ನತ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಾದ ಅರ್ಚನ,ವಿಜಯಕುಮಾರಿ,ಅನಿತ,ಶಾಲಿನಿ,ಜಯಕುಮಾರಿ,ಸುಷ್ಮ ಮತ್ತು ಪವಿತ್ರರವರಿಗೆ ವಚನರತ್ನ ಪ್ರಮಾಣಪತ್ರನೀಡಿ ಸನ್ಮಾನಿಸಲಾಯಿತು.ತದನಂತರ ಇಡೀ ಹಳ್ಳಿಗೆ “ವಚನಹಳ್ಳಿ” ಎಂಬ ಪ್ರಮಾಣಪತ್ರ ನೀಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಶ್ರೀಕಂಠಮೂರ್ತಿ, ನಿರ್ದೇಶಕಿ ರೂಪಕುಮಾರಸ್ವಾಮಿ,ಸುಜಾತ ದುರ್ಗೇಶ್,ಪೂರ್ಣಿಮಾ,ದಿವ್ಯಚೇತನ್,ಗೀತಾಶ್ರೀಕಂಠಮೂರ್ತಿ,ಸುನಿಲ್ ಕುಮಾರ್,ಅನಿಲ್ ಗೌಡರ್,ಶರಣಪ್ಪ,ಶ್ರೀಕಂಠಸ್ವಾಮಿ,ಶಿವರುದ್ರಪ್ಪ,ಕಸ್ತೂರಿ ಮಹೇಶ್,ನಾಗೇಶ್,ಅಂಜನ್ ಉಪಸ್ಥಿತರಿದ್ದರು.
=====================================================================
ಚಿತ್ರ:- ಶರಣು ವಿಶ್ವವಚನ ಫೌಂಡೇಶನ್ ಕೆ ಆರ್ ನಗರ ತಾಲ್ಲೂಕು ಲಾಳನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ವಚನಹಳ್ಳಿ ಕಾರ್ಯಕ್ರಮವನ್ನು ಲಾಳನಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿತಾಯಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಅನಿಲ್ ವಾಜಂತ್ರಿ, ಕಾರ್ಯದರ್ಶಿ ರತ್ನಮ್ಮ ಜಯಣ್ಣ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾದ್ಯಕ್ಷ ಪಂಪಾಪತಿ, ಉಪಾದ್ಯಕ್ಷೆ ಪ್ರೇಮಪ್ರಭುಸ್ವಾಮಿ, ಸಂಚಾಲಕಿ ಅಂಬಿಕಾ ಪ್ರಭುಶಂಕರ್, ತಾಲ್ಲೂಕು ಯುವವೀರಶೈವ ಘಟಕದ ಅಧ್ಯಕ್ಷ ರವಿಕುಮಾರ್, ಕಾವೇರಿ, ಜಯಣ್ಣ ಉಪಸ್ಥಿತರಿದ್ದರು.
ಕೆ.ಆರ್.ನಗರ:- ಪ್ರತಿಯೊಬ್ಬರ ಮನ ಮತ್ತು ಮನೆ ಬೆಳಗಲು ವಚನ ಸಾಹಿತ್ಯ ತುಂಬಾ ಅಗತ್ಯ ಎಂದು ಲಾಳನಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿತಾಯಿ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ಕೆ ಆರ್ ನಗರ ತಾಲ್ಲೂಕು ಲಾಳನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ವಚನಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮದ ಎಲ್ಲಾ ಮನೆಗಳಿಗೆ ವಚನ ಪುಸ್ತಕ ನೀಡಿ ಅವರನ್ನು ಸಂಸ್ಕಾರಯುತ ಪ್ರಜೆಗಳನ್ನಾಗಿ ರೂಪಿಸಲು ಶರಣು ವಿಶ್ವವಚನ ಫೌಂಡೇಷನ್ ಕೈಗೊಂಡಿರುವ ಕಾರ್ಯ ವಿಶೇóಷವಾದುದು ಮತ್ತು ಸ್ತುತ್ಯಾರ್ಹವಾದುದು. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಒಂದಿಲ್ಲ ಒಂದು ವಿಚಾರವನ್ನು ಮುಂದಿಟ್ಟುಕೊಂಡು ಕಲಹದಲ್ಲೇ ಮುಳುಗಿರುವುದನ್ನು ಕಾಣಬುದು. ಇಂತಹವರು ವಚನ ಸಾಹಿತ್ಯವನ್ನು ಓದುವ ಹವ್ಯಾಸವನ್ನು ರೂಢಿಸಿಕೊಂಡು ಬದುಕಿನಲ್ಲಿ ಎಲ್ಲರೂ ನಮ್ಮವರು ಎಂಬ ಭಾವನೆಯೊಂದಿಗೆ ಒಬ್ಬರಿಗೊಬ್ಬರೂ ಸಹಕಾರ ನೀಡುವ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ತದನಂತರ ವಚನ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನಕುಮಾರಸ್ವಾಮಿ ನಾವು ಹುಟ್ಟಿದಾಗಿನಿಂದ ಜೀವನದ ಕೊನೆಯ ಭಾಗದವರೆಗೂ ಹೇಗೆ ಬದುಕಬೇಕು ಎಂಬುದನ್ನು ಶರಣರು ವಚನಗಳ ಮೂಲಕ ತಿಳಿಸಿದ್ದಾರೆ. ಅಂತಹ ವಚನಗಳನ್ನು ಓದಿ ಅದರಂತೆ ನಡೆದು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಲಿ ಎಂದು ನಮ್ಮ ಸಂಸ್ಥೆವತಿಯಿಂದ ಪ್ರತಿ ಮನೆಗೆ ವಚನ ಪುಸ್ತಕಗಳನ್ನು ನೀಡಿದ್ದೇವೆ. ತಾವು ಒಂದು ವಚನವನ್ನಾದರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಕರ್ನಾಟಕದ ಪ್ರತಿ ಮನೆಯೂ ಕೂಡಾ ವಚನ ಪುಸ್ತಕ ಹೊಂದಬೇಕು ಎಂಬ ಸದಾಶಯ ನಮ್ಮದಾಗಿದ್ದು ಮುಂದಿನ ದಿನಗಳಲ್ಲಿ ವಚನಹಳ್ಳಿ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದರು. ತದನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ನಮ್ಮ ಶರಣರ ವಚನಗಳು 23 ಭಾಷೆಗೆ ತರ್ಜುಮೆಯಾದ ನಂತರ ಇಡೀ ವಿಶ್ವವೇ ವಚನಗಳ ಕಡೆ ಮುಖ ಮಾಡಿದೆ. ಇದರಿಂದ ವಚನ ಸಾಹಿತ್ಯ ಶ್ರೀಮಂತಗೊಳಿಸಿದ ನಾಡಾದ ಕರ್ನಾಟಕಕ್ಕೆ ಎಲ್ಲಾ ರೀತಿಯ ಹಿರಿಮೆ ಗರಿಮೆ ಸಲ್ಲುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸುಮಿತ್ರ ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳಲ್ಲಿ ವಚನದ ಅರಿವನ್ನು ಮೂಡಿಸಿದಾಗ ಸುಂದರ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಅರಿವನ್ನು ಉಂಟು ಮಾಡಲು ಕೈಗೊಂಡಿರುವಂತಹ ವಚನಹಳ್ಳಿ ಕಾರ್ಯಕ್ರಮ ನನ್ನ ಹೃದಯವನ್ನು ಗೆದ್ದಿದೆ ಎಂದು ಅಪಾರ ಸಂತೋಷóವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಗುರುಮಲ್ಲೇಶ್ವರ ಮಠದಲ್ಲಿ 145ನೇ ಅಮವಾಸ್ಯೆ ಮತ್ತು ಲಿಂಗೈಕ್ಯ ಎಲ್.ಎಸ್.ಪುಟ್ಟಣಯ್ಯನವರ 13 ನೇ ಪುಣ್ಯಸ್ಮರಣೆ ನಿಮಿತ್ತ ಕಾರ್ಯಕ್ರಮವನ್ನು ಆಯೋಜಿಸಿ ಪುರಸಭೆ ಅಧ್ಯಕ್ಷೆ ಹರ್ಷಲತಾ, ಪ್ರಾಂಶುಪಾಲ ವೀರಪ್ಪಾಜಿ, ಪಶುವೈದ್ಯಾಧಿಕಾರಿ ಡಾ. ಹರೀಶ್, ರಾಜ್ಯ ವೀರಶೈವ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ರಾಜಶೇಖರ್, ಗ್ರಾ.ಪಂ.ಸದಸ್ಯೆ ಹೇಮಲತಾ ಮಂಜುನಾಥ್, ಹೇಮಗಿರೀಶ್, ಸುಮಿತ್ರರವರನ್ನು ಸನ್ಮಾನಿಸಲಾಯಿತು.
ತದನಂತರ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಲಾಳನಹಳ್ಳಿ ಗ್ರಾಮವನ್ನು ವಚನಹಳ್ಳಿ ಎಂದು ಘೋಷಿಸಿ ಪ್ರಶಂಸನಾಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯೆ ಮಲ್ಲಿಕಾ ರವಿಕುಮಾರ್, ಎಸ್.ವಿ.ಪ್ರಕಾಶ್, ಬಿ.ನರಗುಂದ್, ಶ್ರೀಕಾಂತ್, ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಅನಿಲ್ ವಾಜಂತ್ರಿ, ಕಾರ್ಯದರ್ಶಿ ರತ್ನಮ್ಮ ಜಯಣ್ಣ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾದ್ಯಕ್ಷ ಪಂಪಾಪತಿ, ಉಪಾದ್ಯಕ್ಷೆ ಪ್ರೇಮಪ್ರಭುಸ್ವಾಮಿ, ಸಂಚಾಲಕಿ ಅಂಬಿಕಾ ಪ್ರಭುಶಂಕರ್, ತಾಲ್ಲೂಕು ಯುವವೀರಶೈವ ಘಟಕದ ಅಧ್ಯಕ್ಷ ರವಿಕುಮಾರ್, ಧರ್ಮಮಂಜುನಾಥ್, ವಿಶಾಲಾಕ್ಷಮ್ಮ, ಪುಟ್ಟರಾಜು, ಜಗದೀಶ್, ಲೋಕೇಶ್, ದಿನೇಶ್,ಕಾವೇರಿ, ಜಯಣ್ಣ, ಶಿವಕುಮಾರ್, ಮಹದೇವಪ್ಪ, ಮಂಜುನಾಥ್, ಸೋಮಪ್ಪ, ಗಿರೀಶ್, ಮಹೇಶ್, ಶಿವಕುಮಾರ್ ಉಪಸ್ಥಿತರಿದ್ದರು.

======================================================================
ಚಿತ್ರ ೧ :- ಶರಣು ವಿಶ್ವವಚನ ಫೌಂಡೇಶನ್ ಮತ್ತು ದೇವಲಾಪುರ ಶ್ರಿÃ ಗುರುಮಲ್ಲೆÃಶ್ವರ ದಾಸೋಹ ಮಠ ಸಹಯೋಗದೊಂದಿಗೆ ದೇವಲಾಪುರ ಶ್ರಿÃ ಗುರುಮಲ್ಲೆÃಶ್ವರ ದಾಸೋಹ ಮಠದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಮತ್ತು ವಚನಗ್ರಾಮ ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ವಚನಗ್ರಾಮ ಪ್ರಶಂಸಾಪತ್ರವನ್ನು ದೇವನೂರು ಗುರುಮಲ್ಲೆÃಶ್ವರ ದಾಸೋಹ ಮಠಾಧ್ಯಕ್ಷರಾದ ಮಹಾಂತಸ್ವಾಮಿಗಳು ಶ್ರಿÃಮಠದ ಜಡೇಸ್ವಾಮಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರಿÃಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಕಾರ್ಯದರ್ಶಿ ರತ್ನಮ್ಮ ಜಯಣ್ಣ, ಉಪಾಧ್ಯಕ್ಷ ಪುಟ್ಟಪ್ಪ, ಮಾಧ್ಯಮ ಸಂಚಾಲಕ ನಾಗೇಂದ್ರ ಉಪಸ್ಥಿತರಿದ್ದರು.
ಚಿತ್ರ ೨ :- ಶರಣು ವಿಶ್ವವಚನ ಫೌಂಡೇಶನ್ ದೇವಲಾಪುರದ ಶ್ರಿÃ ಗುರುಮಲ್ಲೆÃಶ್ವರ ದಾಸೋಹ ಮಠದಲ್ಲಿ ಆಯೋಜಿಸಿದ್ದ ವಚನಗ್ರಾಮ ಕಾರ್ಯಕ್ರಮದ ಪ್ರಯುಕ್ತ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರತಿ ಮನೆಗೆ ವಚನಪುಸ್ತಕ ನೀಡುವುದರ ಮುಖಾಂತರ ದೇವಲಾಪುರ ಶ್ರಿÃ ಗುರುಮಲ್ಲೆÃಶ್ವರ ದಾಸೋಹ ಮಠದ ಜಡೇಸ್ವಾಮಿಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರಿÃಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಕಾರ್ಯದರ್ಶಿ ರತ್ನಮ್ಮ ಜಯಣ್ಣ, ಉಪಾಧ್ಯಕ್ಷ ಪುಟ್ಟಪ್ಪ ಮಾಧ್ಯಮ ಸಂಚಾಲಕ ನಾಗೇಂದ್ರ ಉಪಸ್ಥಿತರಿದ್ದರು.
ಮೈಸೂರು: ಶರಣ ಧರ್ಮದ ತತ್ವಚಿಂತನೆಗಳನ್ನು ಭಕ್ತರ ಹೃದಯದಲ್ಲಿ ಬಿತ್ತಿ ಮನೆಗಳನ್ನೆÃ ಸಂಸ್ಕಾರದ ಕೇಂದ್ರಗಳನ್ನಾಗಿ ಮಾರ್ಪಡಿಸಿದವರು ಗುರುಮಲ್ಲೆÃಶ್ವರರು ಎಂದು ದೇವನೂರಿನ ಶ್ರಿÃ ಗುರುಮಲ್ಲೆÃಶ್ವರ ಮಹಾಸಂಸ್ಥಾನ ಮಠದ ಮಹಾಂತಸ್ವಾಮಿಗಳು ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ಮತ್ತು ದೇವಲಾಪುರ ಶ್ರಿÃ ಗುರುಮಲ್ಲೆÃಶ್ವರ ದಾಸೋಹ ಮಠ ಸಹಯೋಗದೊಂದಿಗೆ ದೇವಲಾಪುರ ಶ್ರಿÃ ಗುರುಮಲ್ಲೆÃಶ್ವರ ದಾಸೋಹ ಮಠದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಮತ್ತು ವಚನಗ್ರಾಮ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಮನದ ಮಲಿನತೆಯನ್ನು ಹೋಗಲಾಡಿಸಿ ಸುಸಂಸ್ಕೃತ ವ್ಯಕ್ತಿತ್ವಕ್ಕೆ ಕಾರಣವಾಗುವ ಶರಣರ ವಚನ ಪುಸ್ತಕಗಳನ್ನು ಗ್ರಾಮದ ಪ್ರತಿಮನೆಗೆ ನೀಡಿ ವಚನಗ್ರಾಮ ಎಂದು ಕರೆಯುವುದರ ಮೂಲಕ ಸತ್ಚಿಂತನೆಗಳನ್ನು ಜನಮಾನಸದಲ್ಲಿ ರೂಡಿಸುತ್ತಿರುವ ಶರಣು ವಿಶ್ವವಚನ ಫೌಂಡೇಷನ್ ಕಾರ್ಯ ಶ್ಲಾಘನೀಯವಾದುದು. ನುಡಿದಂತೆ ನಡೆದ ಶರಣರ ವಚನಗಳನ್ನು ನಾವು ಪ್ರತಿನಿತ್ಯ ಅಧ್ಯಯನ ಮಾಡುವುದರ ಜೊತೆಗೆ ಅವುಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮುಖಾಂತರ ಸಂಸ್ಕಾರವಂತರಾಗಲು ಪ್ರಯತ್ನಿಸಬೇಕು. ಗುರುಮಲ್ಲೆÃಶ್ವರರು ಶರಣರ ಹಾದಿಯಲ್ಲಿ ನಡೆದು ದೇವನೂರು ಕ್ಷೆÃತ್ರವನ್ನು ಪವಿತ್ರ ಮಾಡಿದರು. ಅವರ ಸ್ಮರಣೆ ಮಾಡುವುದರ ಮುಖಾಂತರ ದೇವಲಾಪುರ ಪವಿತ್ರಗ್ರಾಮವಾಗಿ ರೂಪುಗೊಂಡಿದೆ ಎಂದರು. ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿದ ದಡದಹಳ್ಳಿ ಗುರುಮಲ್ಲೆÃಶ್ವರ ಮಠದ ಷಡಕ್ಷರಿಸ್ವಾಮಿಗಳು ಅನೇಕ ಮೂಢನಂಬಿಕೆಗಳನ್ನು ನಮಗೆ ಅರಿವಿಲ್ಲದಂತೆ ಆಚರಿಸಿಕೊಂಡು ಬರುತ್ತಿದ್ದೆÃವೆ ಮೌಡ್ಯವನ್ನು ಹೋಗಲಾಡಿಸಿ ವೈಚಾರಿಕತೆ ಮೈಗೂಡಿಸಿಕೊಳ್ಳಲು ವಚನಗಳನ್ನು ಅಧ್ಯಯನ ಮಾಡಬೇಕೆಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮೌಲಾನಪೀರ್ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿ ಗುರುಮಲ್ಲೆÃಶ್ವರರ ಪ್ರಭಾವಕ್ಕೆ ಒಳಗಾಗಿ ಲಿಂಗವಂತನಾಗಿ ಪ್ರಥಮವಾಗಿ ‘ಅಲಕ್ ನಿರಂಜನ ಮಹಾಪ್ರಭು’ ಎಂದು ಭಕ್ತಿಯಿಂದ ಹರ್ಷೋದ್ಗಾರ ಮಾಡಿದನು ನಂತರ ಅದು ಅದೇ ರೀತಿ ಕರೆಯುವುದು ರೂಢಿಯಾಯಿತು ಎಂದರು. ಉಪನ್ಯಾಸ ನೀಡಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಶರಣರ ಸುಜ್ಞಾನ ಬೆಳಕಿನ ಸಂದೇಶವನ್ನು ಮನುಕುಲಕ್ಕೆ ಬಿತ್ತಿದ ಮಹಾಮಹಿಮರು ತ್ರಿವಿಧ ದಾಸೋಹಿಗಳು ಸ್ವಲೀಲ ಮಹಾತ್ಮರು ಗುರುಮಲ್ಲೆÃಶ್ವರರು ಎಂದು ತಿಳಿಸಿ ಅವರ ಜೀವನದ ವಿವಿಧ ಘಟನಾವಳಿಗಳನ್ನು ಸ್ಮರಿಸಿದರು. ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರಿÃಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಕಾರ್ಯದರ್ಶಿ ರತ್ನಮ್ಮ ಜಯಣ್ಣ, ಉಪಾಧ್ಯಕ್ಷ ಪುಟ್ಟಪ್ಪ, ಮಾಧ್ಯಮ ಸಂಚಾಲಕ ನಾಗೇಂದ್ರ ಉಪಸ್ಥಿತರಿದ್ದರು.
=====================================================================
ಚಿತ್ರ:1 ಶರಣು ವಿಶ್ವವಚನ ಫೌಂಡೇಷನ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ದೊಡ್ಡಬೂಹಳ್ಳಿಯಲ್ಲಿ ಏರ್ಪಡಿಸಿದ್ದ ವಚನಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ ಮನೆಗೆ ವಚನ ಪುಸ್ತಕ ನೀಡಿ ಆ ಗ್ರಾಮವನ್ನು ವಚನಗ್ರಾಮ ಎಂದು ಘೋಷಿಸಿ ವಚನಗ್ರಾಮ ಪ್ರಶಂಸಾಪತ್ರವನ್ನು ಶ್ರೀಮಠದ ಶಿವಪ್ಪಸ್ವಾಮಿಗಳಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕರಾದ ಕಾವೇರಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಮಳವಳ್ಳಿ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹದೇವಪ್ಪ, ಆಧುನಿಕ ವಚನಕಾರ್ತಿ ಮಲ್ಲಿಕಾ ಮಳವಳ್ಳಿ, ಮುಖ್ಯಶಿಕ್ಷಕ ಲೋಕೇಶ್, ಪತ್ರಕರ್ತ ಶಿವಕುಮಾರ್, ಮಾಧ್ಯಮ ಸಂಚಾಲಕ ನಾಗೇಂದ್ರ, ಗ್ರಾಮಸ್ಥರು ಉಪಸ್ಥಿತರಿದ್ದರು.
ಮಳವಳ್ಳಿ: ವಚನಗಳು ಕಾಯಕಪ್ರಜ್ಞೆಯನ್ನು ಮೂಡಿಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತವೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ದೊಡ್ಡಬೂಹಳ್ಳಿಯಲ್ಲಿ ಏರ್ಪಡಿಸಿದ್ದ ವಚನಗ್ರಾಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಚನಗಳು ಮನದ ಮೈಲಿಗೆಯನ್ನು ಹೋಗಲಾಡಿಸಿ ಪಂಚಾಚಾರಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರಗಳಿಗೆ ಸಂಬಂಧಿಸಿದ ವೈಜ್ಷಾನಿಕ ಅರಿವನ್ನು ಮೂಡಿಸಿ ಮಾನವನನ್ನು ಮಹಾದೇವನನ್ನಾಗಿ ಮಾಡುತ್ತವೆ. ನಾವಾಡುವ ಮಾತುಗಳು ಹಿತವಾಗಿರಬೇಕು ಹಾಗೂ ಮಿತವಾಗಿರಬೇಕು ಎಂದು ತಿಳಿಸಿ ನಾವಾಡಿದ ಮಾತಿಗೆ ಪರಶಿವನೂ ತಲೆದೂಗಿಸುವಂತಿರಬೇಕು ಎಂದು ತಿಳಿಸಿದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಗುಡಿಗೆ ಹೋಗಿ ಪೂಜಿಸುವುದು ನಿಜವಾದ ಭಕ್ತಿಯಲ್ಲ. ವಂಚನೆ ಇಲ್ಲದೆ ಜೀವನ ನಡೆಸುವುದು ನಿಜವಾದ ಭಕ್ತಿ. ಜನರ ನೈತಿಕ ಮಟ್ಟದಿಂದ ದೇಶದ ಪ್ರಗತಿ ಅಳೆಯಬೇಕೆ ಹೊರತು ಸಂಪಾದಿಸಿದ ಹಣದಿಂದಲ್ಲ. ನಮಗೆ ವಚನಗಳು ಸುಖ, ನೆಮ್ಮದಿಯನ್ನು ಉಂಟುಮಾಡಿ ಬದುಕನ್ನು ಸಾರ್ಥಕಗೊಳಿಸುತ್ತವೆ ಎಂದರು. ಕಾರ್ಯಕ್ರಮದ ಮೊದಲು ಪ್ರತಿ ಮನೆಗೆ ವಚನ ಪುಸ್ತಕ ನೀಡಿ ಆ ಗ್ರಾಮವನ್ನು ವಚನಗ್ರಾಮ ಎಂದು ಘೋಷಿಸಿ ವಚನಗ್ರಾಮ ಪ್ರಶಂಸಾಪತ್ರವನ್ನು ಶ್ರೀಮಠದ ಶಿವಪ್ಪಸ್ವಾಮಿಗಳಿಗೆ ನೀಡಲಾಯಿತು. ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಪ್ರೊಜೆಕ್ಟರ್ ಮೂಲಕ ಶರಣು ವೀಸ್ವವಚನ ಫೌಂಡೆಷನ್ ಚಟುವಟಿಕೆಗಳು ಮತ್ತು ಅನೇಕ ವಚನಗಳನ್ನು ತೋರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರೀಯ ಸಂಚಾಲಕರಾದ ಕಾವೇರಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಮಳವಳ್ಳಿ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹದೇವಪ್ಪ, ಆಧುನಿಕ ವಚನಕಾರ್ತಿ ಮಲ್ಲಿಕಾ ಮಳವಳ್ಳಿ, ಮುಖ್ಯಶಿಕ್ಷಕ ಲೋಕೇಶ್, ಪತ್ರಕರ್ತ ಶಿವಕುಮಾರ್, ಮಾಧ್ಯಮ ಸಂಚಾಲಕ ನಾಗೇಂದ್ರ, ಗ್ರಾಮಸ್ಥರು ಉಪಸ್ಥಿತರಿದ್ದರು.
====================================================================
ಚಿತ್ರ ಸುದ್ಧಿ :- ಶರಣು ವಿಶ್ವವಚನ ಫೌಂಡೇಷನ್ ಮತ್ತು ಕಸ್ತೂರಿ ಜನನಿ ಸಂಸ್ಥೆಯ ಸಹಯೋಗದೊಂದಿಗೆ ಆಲತಾಳಹುಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಚನಗ್ರಾಮ ಕಾರ್ಯಕ್ರಮದಲ್ಲಿ ಗುರುಮಲ್ಲೇಶ್ವರ ದಾಸೋಹ ಮಠದ ಗಂಗಾಧರಸ್ವಾಮಿಗಳಿಗೆ ವಚನಗ್ರಾಮ ಪ್ರಶಂಸಾಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಸ್ತೂರಿ ಜನನಿ ಸಂಸ್ಥೆ ಸಂಸ್ಥಾಪಕ ಸತೀಶ್ ಆರಾಧ್ಯ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಎಚ್.ಡಿ.ಕೋಟೆ ಅಧ್ಯಕ್ಷ ಕೆ.ಎಂ.ಮಹೇಶ್, ಗೌಡಿಕೆ ಬಸವರಾಜು, ಗ್ರಾ.ಪಂ.ಸದಸ್ಯ ಕೆಂಡಗಣ್ಣಸ್ವಾಮಿ, ಉಪಾಧ್ಯಕ್ಷ ಲೋಕೇಶ್, ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಯುವಸಮಿತಿ ಅಧ್ಯಕ್ಷ ಮಹದೇವಪ್ರಸಾದ್, ಉಪಾಧ್ಯಕ್ಷ ವೀರಭದ್ರಪ್ಪ, ಗೌಡಿಕೆ ಮಹದೇವಸ್ವಾಮಿ, ಕಸ್ತೂರಿ ಜನನಿ ಸಂಸ್ಥೆ ಖಜಾಂಚಿ ರಾಕೇಶ್ ಶರ್ಮ, ಸಿದ್ದಪ್ಪ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ತಾಲ್ಲೂಕು ಅಧ್ಯಕ್ಷ ಗಿರೀಶ್, ಕಾರ್ಯಾಧ್ಯಕ್ಷ ಪಂಪಾಪತಿ, ಉಪಾಧ್ಯಕ್ಷೆ, ಪ್ರೇಮ ಪ್ರಭುಸ್ವಾಮಿ, ಸಿದ್ದಪ್ಪ ಮತ್ತು ಗುರುಸ್ವಾಮಿ ಉಪಸ್ಥಿತರಿದ್ದರು.
ಎಚ್.ಡಿ.ಕೋಟೆ :- ಸಂಸ್ಕಾರಯುತ ಗ್ರಾಮಗಳ ನಿರ್ಮಾಣಕ್ಕೆ ವಚನಗ್ರಾಮ ಸಹಕಾರಿಯಾಗಿದೆ ಎಂದು ಕಸ್ತೂರಿ ಜನನಿ ಸಂಸ್ಥೆ ಸಂಸ್ಥಾಪಕ ಸತೀಶ್ ಆರಾಧ್ಯ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮತ್ತು ಕಸ್ತೂರಿ ಜನನಿ ಸಂಸ್ಥೆಯ ಸಹಯೋಗದೊಂದಿಗೆ ಆಲತಾಳಹುಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಚನಗ್ರಾಮ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಮಾನವನ ಬದುಕಿಗೆ ವಚನಗಳು ಸಹಾಯಕವಾಗಿದ್ದು ಅಂತಹ ವಚನ ಪುಸ್ತಕಗಳನ್ನು ಪ್ರತಿಮನೆಗೆ ಯಾವುದೇ ಧರ್ಮ, ಜಾತಿ, ಲಿಂಗಭೇದವಿಲ್ಲದೇ ಹಂಚಿ ವಚನಗ್ರಾಮ ಮಾಡಲು ಹೊರಟಿರುವ ಶರಣು ವಿಶ್ವವಚನ ಫೌಂಡೇಷನ್ ಕಾರ್ಯ ಸ್ತುತ್ಯಾರ್ಹವಾದುದು. ದ್ವೇಷ ಅಸೂಹೆಗಳನ್ನು ಹೋಗಲಾಡಿಸಿ ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುವ ಶರಣ ಸಂಸ್ಜøತಿ ಪ್ರತಿ ಗ್ರಾಮದಲ್ಲಿ ಅಳವಡಿಕೆ ಆದರೆ ನಮ್ಮ ದೇಶ ಸುಸಂಸ್ಕøತ ದೇಶವಾಗಿ ರೂಪುಗೊಳ್ಳವುದರಲ್ಲಿ ಯಾವುದೇ ಅನುಮಾನವಿಲ್ಲ ಅಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ವಚನಗಳನ್ನು ವಿಶ್ವದ ಪ್ರತಿಯೊಬ್ಬರೂ ಕಲಿಯಲು ಸಹಾಯಕವಾಗುವ ಉದ್ದೇಶದಿಂದ ಪ್ರಸ್ತುತ ವರ್ಷ 13 ಭಾಷೆಗಳನ್ನು ಒಳಗೊಂಡ ಶರಣು ದಿನಚರಿಯನ್ನು ಸಂಸ್ಥೆಯಿಂದ ಹೊರತರಲಾಗಿದೆ. ಬೇರೆ ಭಾಷೆಯವರು ಕನ್ನಡನಾಡಿನಲ್ಲಿ ಉದಯವಾದ ವಚನಗಳನ್ನು ಪ್ರೀತಿಸಿದಾಗ ಅದರ ಕೀರ್ತಿ ಪ್ರತಿಯೊಬ್ಬ ಕನ್ನಡಿಗನಿಗೂ ಸಲ್ಲುತ್ತದೆ. ತಾವೆಲ್ಲಾ ಸಹಕಾರ ನೀಡಿದರೆ ಭಾರತದ ಪ್ರತಿಯೊಂದು ಗ್ರಾಮವನ್ನು ವಚನಗ್ರಾಮ ಮಾಡಲು ಪ್ರಯತ್ನಿಸಲಾಗುವುದು ಎಂದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ವಚನ ಸಾಹಿತ್ಯ ಸಂಕುಚಿತ ಮನೋಭಾವನೆ ಹೊಂದಿರುವ ಜನರು ವಿಶಾಲ ಮನೋಭಾವನೆಯನ್ನು ಮೈಗೂಡಿಸಿಕೊಂಡು ಮೂಢನಂಬಿಕೆ, ಕಂದಾಚಾರ ಇವುಗಳನ್ನು ಹೋಗಲಾಡಿಸಿ ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ. ವಚನಗಳು ಶರಣರ ಅನುಭವದ ನುಡಿಗಳಾಗಿರುವುದರಿಂದ ಪ್ರತಿಯೊಬ್ಬರೂ ಅವುಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಮತ್ತು ಕಸ್ತೂರಿ ಜನನಿ ಸಂಸ್ಥೆ ಹೊರತಂದಿರುವ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆಲತಾಳಹುಂಡಿ ಗುರುಮಲ್ಲೇಶ್ವರ ದಾಸೋಹ ಮಠದ ಗಂಗಾಧರಸ್ವಾಮೀಜಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಎಚ್.ಡಿ.ಕೋಟೆ ಅಧ್ಯಕ್ಷ ಕೆ.ಎಂ.ಮಹೇಶ್, ಗೌಡಿಕೆ ಬಸವರಾಜು, ಗ್ರಾ.ಪಂ.ಸದಸ್ಯ ಕೆಂಡಗಣ್ಣಸ್ವಾಮಿ, ಉಪಾಧ್ಯಕ್ಷ ಲೋಕೇಶ್, ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಯುವಸಮಿತಿ ಅಧ್ಯಕ್ಷ ಮಹದೇವಪ್ರಸಾದ್, ಉಪಾಧ್ಯಕ್ಷ ಚಂದ್ರಶೇಖರ್, ಗೌಡಿಕೆ ಮಹದೇವಸ್ವಾಮಿ, ಕಸ್ತೂರಿ ಜನನಿ ಸಂಸ್ಥೆ ಖಜಾಂಚಿ ರಾಕೇಶ್ ಶರ್ಮ, ಸಿದ್ದಪ್ಪ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ತಾಲ್ಲೂಕು ಅಧ್ಯಕ್ಷ ಗಿರೀಶ್, ಕಾರ್ಯಾಧ್ಯಕ್ಷ ಪಂಪಾಪತಿ, ಉಪಾಧ್ಯಕ್ಷೆ, ಪ್ರೇಮ ಪ್ರಭುಸ್ವಾಮಿ, ಸಿದ್ದಪ್ಪ ಮತ್ತು ಗುರುಸ್ವಾಮಿ ಉಪಸ್ಥಿತರಿದ್ದರು.
====================================================================
ಮೈಸೂರು: ಗ್ರಾಮೀಣ ಜನರು ವಚನಗಳ ಆರಾಧಕರಾದರೆ ಗ್ರಾಮಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತವೆ ಎಂದು ಬರಡನಪುರ ಮಹಾಂತೇಶ್ವರಮಠದ ಪರಶಿವಮೂರ್ತಿಸ್ವಾಮೀಜಿಗಳು ಹೇಳಿದರು. ಮೈಸೂರು ತಾಲ್ಲೂಕು ದೊಡ್ಡಕಾಟೂರು ಗ್ರಾಮದಲ್ಲಿ 4ಮೇ 2019ರಂದು ತಾಲ್ಲೂಕು ಶರಣು ವಿಶ್ವವಚನ ಫೌಂಡೇಷನ್ ಘಟಕ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮತ್ತು ವಚನಗ್ರಾಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನರು ಯಾವುದೇ ವಿಚಾರದ ಬಗ್ಗೆ ಪ್ರಶ್ನೆ ಮಾಡಿ ಸತ್ಯಾಸತ್ಯತೆಯನ್ನು ಅರಿಯುವ ಮತ್ತು ವೈಚಾರಿಕತೆಯ ಕಡೆಗೆ ಮುಖಮಾಡುವತ್ತ ವಚನ ಸಾಹಿತ್ಯ ಪ್ರಭಾವ ಬೀರುತ್ತದೆ. ಇಂದು ಪ್ರತಿಮನೆಗೆ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ವಚನಪುಸ್ತಕಗಳನ್ನು ಉಚಿತವಾಗಿ ಹಂಚುವುದರ ಮುಖಾಂತರ ವಿಶ್ವಸಾಹಿತ್ಯದ ಶ್ರೀಮಂತಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ ವಚನ ಸಾಹಿತ್ಯವನ್ನು ಹಳ್ಳಿಗರು ಮನನ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಂದು ವಿಶ್ವವೇ ಬಸವಣ್ಣನವರ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಕನ್ನಡಿಗರಾದ ನಾವು ಬಸವಣ್ಣನವರ ತತ್ವವನ್ನು ಅರಿತು ಅದರಂತೆ ನಡೆಯಬೇಕಾಗಿದೆ ಎಂದರು. ಮೈಸೂರು ತಾಲ್ಲೂಕು ಶರಣು ವಿಶ್ವವಚನ ಫೌಂಡೇಶನ್ ಘಟಕ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ವಚನ ಕುಮಾರಸ್ವಾಮಿ ಪ್ರತಿ ಮನೆಗೆ ಮತ್ತು ಮನಮನಗಳಿಗೆ ವಚನಸಂದೇಶವನ್ನು ತಲುಪುವ ಉದ್ದೇಶದಿಂದ ವಚನಗ್ರಾಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. 12ನೇ ಶತಮಾನದಲ್ಲಿ ದನಗಾಹಿ ರಾಮಣ್ಣ ಕೂಡಾ ವಚನ ಸಾಹಿತ್ಯವನ್ನು ರಚಿಸಿ ಸಾಕ್ಷರನಾದ. ಅವನನ್ನು ಆದರ್ಶವಾಗಿಟುಕೊಂಡು ಎಲ್ಲಾ ಹಳ್ಳಿಗರು ಸಾಕ್ಷರರಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ನಾವೆಲ್ಲರೂ ಸಣ್ಣಪುಟ್ಟ ವಿಚಾರಗಳಿಗೆ ಕಚ್ಚಾಡದೆ ಸಹೋದರರಂತೆ ಸಹಬಾಳ್ವೆ ನಡೆಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ತಾಲ್ಲೂಕು ಅಧ್ಯಕ್ಷ ಎಸ್.ಗಿರೀಶ್, ಕಾರ್ಯಾಧ್ಯಕ್ಷ ಭ.ಪಂಪಾಪತಿ, ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಗ್ರಾ.ಪಂ.ಸದಸ್ಯ ಮಹದೇವಸ್ವಾಮಿ, ಗುಡಿಗೌಡ ಗಣಿ ಮಹದೇಸ್ವಾಮಿ, ಡೈರಿ ಅಧ್ಯಕ್ಷ ರಾಜಶೇಖರಮೂರ್ತಿ, ಮಾಜಿ ಗುಡಿಗೌಡ ಶಿವನಾಗು, ಪ್ರಭುಸ್ವಾಮಿ ಉಪಸ್ಥಿತರಿದ್ದರು.
----------------------------------------
ಎಚ್.ಡಿ.ಕೋಟೆ :- ಸಮಾಜದಲ್ಲಿ ನವಚೇತನವನ್ನು ನೀಡಲು ವಚನಗಳು ಸಹಕಾರಿಯಾಗಿವೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ್ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮತ್ತು ಕಸ್ತೂರಿ ಜನನಿ ಸಂಸ್ಥೆಯ ಸಹಯೋಗದೊಂದಿಗೆ ಸೊಳ್ಳೆಪುರ ಹಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಚನಗ್ರಾಮ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು 12ನೇ ಶತಮಾನದ ವಚನಕಾರರು ಧಾರ್ಮಿಕ, ಸಾಮಾಜಿಕ ಮತ್ತು ಸಾಹಿತ್ಯಿಕವಾಗಿ ವಚನಗಳ ಮೂಲಕ ಜಾಗೃತಿಯನ್ನು ಉಂಟುಮಾಡಿದರು. ವಚನಗಳು ಇಹ-ಪರಗಳ ಸಾಧನೆಗಳ ಕೈದೀವಿಗೆಗಳಾಗಿ ಸಾಮಾಜಿಕ ಪಿಡುಗಗಳನ್ನು ತೊಡೆದು ಸುಖೀ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿವೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಸರಳ ಹಾಗೂ ಸುಂದರ ಭಾಷೆಯಲ್ಲಿ ವಚನಗಳು ದೊರೆತಿರುವುದು ಕನ್ನಡಿಗರ ಸೌಭಾಗ್ಯ. ಅಂತಹ ವಚನಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸುಸಂಸ್ಕøತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಶರಣರು ಸಂಗ್ರಹಣ ತತ್ವಕ್ಕೆ ವಿರುದ್ಧವಾಗಿದ್ದರು ಎನ್ನುವುದಕ್ಕೆ ವಸ್ತ್ರದೊಳಗೊಂದೆಳೆಯ, ಹೊನ್ನಿನೊಳಗೊಂದೆಳೆಯ, ಇಂದಿಂಗೆ ನಾಳಿಂಗೆ ಎಂದು ಇಟ್ಟುಕೊಂಡೆನಾದಡೆ ತಲೆದಂಡ ಎನ್ನುವ ಬಸವಣ್ಣನವರ ವಚನವೇ ಸಾಕ್ಷಿಯಾಗಿದೆ. ಈ ವಚನಕ್ಕೆ ಪೂರಕವಾಗಿ ಹಾಡಿಯ ಜನರು ಅಸಂಗ್ರಹಣ ತತ್ವವನ್ನು ಅನುಸರಿಸುತ್ತಿರುವುದರಿಂದ ಸಂತೋಷವಾಗಿದ್ದಾರೆ. ಆದಿವಾಸಿ ಜನಾಂಗದ ಬಿರ್ಸಾಮುಂಡ ಅಂದು ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರಿಂದ ಭಾರತದ ಪಾರ್ಲಿಮೆಂಟ್ ಭವನದಲ್ಲಿ ಆತನ ಭಾವಚಿತ್ರ ಇಂದಿಗೂ ರಾರಾಜಿಸುತ್ತಿದೆ. ಆತನ ಹೆಸರಿನಲ್ಲಿ ರಾಂಚಿಯ ವಿಮಾನ ನಿಲ್ದಾಣವಿದೆ. ಅವರ ಆಧರ್ಶಗಳನ್ನು ಪಾಲಿಸುವುದರ ಮುಖಾಂತರ ನಾವು ಉತ್ತಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಸ್ತೂರಿ ಜನನಿ ಸಂಸ್ಥೆ ಸಂಸ್ಥಾಪಕ ಸತೀಶ್ ಆರಾಧ್ಯ, ರೋಟರಿ ಅಧ್ಯಕ್ಷ ನಾರಾಯಣ ಲಾಲ್, ವೈಲ್ಡ್ ಲೈಫ್ ಕನ್ಸರ್ವೇಟಿವ್ ಸೊಸೈಟಿ ಕ್ಷೇತ್ರಾಧಿಕಾರಿ ಗೋವಿಂದಪ್ಪ, ಎಚ್.ಡಿ.ಕೋಟೆ ತಾಲ್ಲೂಕು ಅಧ್ಯಕ್ಷ ಕಸ್ತೂರಿ ಮಹೇಶ್, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಕಾರ್ಯದರ್ಶಿ ಆನಗಟ್ಟಿ ಶಿವರುದ್ರಪ್ಪ, ಮೇಟಿಕುಪ್ಪೆ ವಿಶ್ವನಾಥ್, ರವಿಕುಮಾರ್, ವಿಜಯ್ ಕೆ.ಪಿ. ವರದರಾಜು ಉಪಸ್ಥಿತರಿದ್ದರು.
------------------------------------------------------------