Saturday, November 11, 2023

ಕುವೆಂಪು ವೈಚಾರಿಕತೆ

 ಇಂದು ಕುವೆಂಪು ಇಲ್ಲವಾದ ದಿನ... 

____________

1931 ರಲ್ಲಿ ಕುವೆಂಪುರವರು ಶ್ರೀರಂಗಪಟ್ಟಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ 'ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ' ಎಂಬ ಉಪನ್ಯಾಸ ನೀಡಿದ್ದರು. ಈ ಉಪನ್ಯಾಸ ಕುರಿತು ದೇವುಡು ನರಸಿಂಹಶಾಸ್ತ್ರಿಗಳು ಸರ್ಕಾರಕ್ಕೆ ದೂರು ಸಲ್ಲಿಸಿದರು. ಕುವೆಂಪು ಒಬ್ಬ ಸರ್ಕಾರಿ ನೌಕರನಾಗಿದ್ದು (ಆಗ ಕುವೆಂಪು ಉಪನ್ಯಾಸಕರಾಗಿದ್ದರು) ಯುವಜನತೆಯನ್ನು ಧರ್ಮದ ವಿಷಯದಲ್ಲಿ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂಬುದು ದೇವುಡು ಆರೋಪವಾಗಿತ್ತು. ಇಂತಹ ಅವಕಾಶಕ್ಕೆ ಕಾಯುತ್ತಿದ್ದ ಅನೇಕರು “ಗರಿಕೆ ಹುಲ್ಲುಗಳು ಗೂಟವಾದವು” ಎಂಬಂತೆ ಕುವೆಂಪು ಮೇಲೆ ತಿರುಗಿಬಿದ್ದರು. ಆದರೆ, ಕುವೆಂಪುರವರು ತಮ್ಮ ವಿರುದ್ಧ ಕೇಳಿ ಬಂದ ಯಾವ ಆರೋಪ, ಟೀಕೆ ಟಿಪ್ಪಣಿ ಮತ್ತು  ಬೈಗುಳಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಂತಿಮವಾಗಿ ಸರ್ಕಾರವು ಟಿ.ಎಸ್. ವೆಂಕಣ್ಣಯವರನ್ನು ಈ ವಿಷಯ ಕುರಿತಂತೆ ತನಿಖೆಗೆ ನೇಮಕ ಮಾಡಿ, ವರದಿ ಸಲ್ಲಿಸುವಂತೆ ಸೂಚಿಸಿತು. ಸರ್ಕಾರಕ್ಕೆ ಕುವೆಂಪು ಮಾಡಿದ್ದ ಉಪನ್ಯಾಸ ಕುರಿತು ಒಂದು ಸಾಲಿನ ಅಥವಾ ಒಂದು ವಾಕ್ಯದ ವರದಿಯನ್ನು ವೆಂಕಣ್ಣಯ್ಯ ಸಲ್ಲಿಸಿದರು. ಅವರ ವರದಿಯ ಸಾರಾಂಶ ಹೀಗಿತ್ತು. "ನಾನು ನನ್ನ ಮಗನಿಗೆ ಇದಕ್ಕಿಂತ ಒಳ್ಳೆಯ ಉಪದೇಶ ನೀಡಲಾರೆ..!”


ನಂತರ ಗಲಾಟೆ ತಣ್ಣಗಾಯಿತು.


ವಿವಾದವೆಲ್ಲವೂ ಮುಗಿದ ನಂತರ ಕುವೆಂಪು ಶಿಷ್ಯರು ಒಮ್ಮೆ ಕುವೆಂಪು ಅವರನ್ನು ಕೇಳಿದರು. "ಸಾರ್ ನೀವು ಇಷ್ಟೆಲ್ಲಾ ಗಲಾಟೆಯಾದರೂ ಸಹ ಏಕೆ ಮೌನವಾಗಿದ್ದಿರಿ?" ಇದಕ್ಕೆ ಕುವೆಂಪು ನೀಡಿದ ಉತ್ತರ ಹೀಗಿತ್ತು:


"ನೋಡ್ರಯ್ಯಾ, ನನ್ನ ವಿರುದ್ಧ ಸೆಣಸಾಡಲಿಕ್ಕೆ ಅಥವಾ ಕುಸ್ತಿಯಾಡಲಿಕ್ಕೆ ಬರುವ ವ್ಯಕ್ತಿ ಯಾವ ಜಾತಿಯವನು, ಅವನ ವಯಸ್ಸೆಷ್ಟು, ಅವನು ಪಂಡಿತನೆ? ಪುರುಷೋತ್ತಮನೆ? ಇವು ನನಗೆ ಮುಖ್ಯವಲ್ಲ. ನಾನು ಅಖಾಡಕ್ಕೆ ಇಳಿಯಬೇಕಾದರೆ, ನನ್ನ ಎದುರಾಳಿಗೆ ಕನಿಷ್ಟ ಸೊಂಟದ ಮೇಲೆ ಒಂದು ಲಂಗೋಟಿ ಇರಬೇಕು. ಅದೇ ಇಲ್ಲದೆ ಬೆತ್ತಲೆ ನಿಂತು ಕುಸ್ತಿಗೆ ಕರೆಯುವನ ಜೊತೆ ನಾನು ಹೋರಾಡಲಾರೆ..!"


ಅಂದು ಕುವೆಂಪು ನೀಡಿದ್ದ ಹೇಳಿಕೆಯಲ್ಲಿ ಅಂತಹ ಘನತೆಯಿತ್ತು. ಕುವೆಂಪುರವರ ಪ್ರಖರ ವೈಚಾರಿಕತೆಯ ಜೊತೆಗೆ ಇಂತಹ ವಿವೇಕ ಮತ್ತು ತಾಳ್ಮೆ ಮನನೀಯ.

#ಕುವೆಂಪುಪುಣ್ಯಸ್ಮರಣೆ 


Post Courtesy: Basu Raju

Sunday, October 15, 2023

ಕಥೆ ಹೊಸ

 ಒಬ್ಬ ಶ್ರೀಮಂತ ತನ್ನ ಮುದ್ದು ಮಗನಿಗೆ ಸಾಯುವ ಸಮಯದಲ್ಲಿ ವಿಲ್ ಪತ್ರದ ಜೊತೆ ತನ್ನ  ಪಾದರಕ್ಷೆ ಗಳನ್ನು ನೀಡಿ ಹೇಳಿದ "ವಿಲ್ ಪತ್ರದಲ್ಲಿ ನಿನಗೆ ನನ್ನೆಲ್ಲಾ ಆಸ್ತಿಯನ್ನು ಬರೆದಿದ್ದೇನೆ. ನೀನು ಸುಖವಾಗಿ ಬಾಳು ಆದರೆ ನನ್ನ ಕೊನೆಯ ಆಸೆಯೊಂದಿದೆ ಅದನ್ನು ನೆರವೇರಿಸು ಅಷ್ಟು ಸಾಕು. ಅದೇನೆಂದರೆ ನಾನು ಸತ್ತ ಮೇಲೆ ನನ್ನ ಪಾದಕ್ಕೆ ಈ ಹಳೆಯ ಚಪ್ಪಲಿಯನ್ನು ತೊಡಿಸಿ ಅಂತ್ಯ ಕ್ರಿಯೆ ನೆರವೇರಿಸು!" ಎಂದು ಹೇಳುತ್ತಾನೆ.............


ಮಗ ತನ್ನ ಕೆನ್ನೆಯ ಮೇಲೆ ಜಾರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಈ ಸಣ್ಣ ಆಸೆಯನ್ನು ನಾನು ಖಂಡಿತ ನೆರವೆರಿಸುತ್ತೇನೆ ಎಂದು ಅಪ್ಪನಿಗೆ ಮಾತು ಕೊಡುತ್ತಾನೆ. 

ತಂದೆಯು ಕೊನೆಯುಸಿರೆಳೆದ ದಿನ ವಿಧಿ ವಿಧಾನ ಕಾರ್ಯಗಳನ್ನು ಮಾಡಿದ ಪಂಡಿತರಿಗೆ ಮಗ ಅಪ್ಪನಿಗೆ ಹಳೆಯ ಚಪ್ಪಲಿ ತೊಡಿಸಲು ಕೋರುತ್ತಾನೆ. ಆದರೆ ಪಂಡಿತರು ಸಾಧ್ಯವೇ ಇಲ್ಲ ಇದು ನಮ್ಮ ಅಂತ್ಯಕ್ರಿಯೆ ಸಂಪ್ರದಾಯದಲ್ಲೇ ಇಲ್ಲವೆಂದು ನಿರಾಕರಿಸುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರು ಆ ಶ್ರೀಮಂತ ವ್ಯಕ್ತಿಗೆ ಹಳೆಯ ಚಪ್ಪಲಿ ತೊಡಿಸಲು ಸಾಧ್ಯವೇ ಆಗುವುದಿಲ್ಲ!.......... 


ಈ ವಿಚಾರವಾಗಿ ಸಂಬಂಧಿಕರು, ಊರಿನ ಹಿರಿಯ ಮುಖಂಡರು ಬುದ್ಧಿವಂತರು  ಇತರೆ  ಎಲ್ಲರೂ ಸೇರಿ ಈ ವಿಷಯದ ಕುರಿತು ಚರ್ಚಿಸುತ್ತಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಓಡೋಡಿ ಬಂದ ಆ ಶ್ರೀಮಂತನ ಸ್ನೇಹಿತ ಮಗನಿಗೆ ಪತ್ರ ನೀಡಿ ಹೇಳುತ್ತಾನೆ "ನಿಮ್ಮ ತಂದೆಯವರು ಕೆಲ ದಿನಗಳ ಹಿಂದೆ ನನ್ನನ್ನು ಕರೆದು ಈ ಪತ್ರವನ್ನು ನನ್ನ ಮಗನಿಗೆ ನನ್ನ ಅಂತ್ಯ ಸಂಸ್ಕಾರದ ಕೊನೆಗಳಿಗೆಯಲ್ಲಿ ನೀಡಲು ತಿಳಿಸಿದ್ದರು" ಎಂದು ಹೇಳುತ್ತಾನೆ..........


ತುಂಬಾ ಕೂತುಹಲದಿಂದ ಆ ಪತ್ರವನ್ನು ತೆರೆದು ನೋಡಿದಾಗ ಅವರ ತಂದೆ ಬರೆದಿರುತ್ತಾರೆ......


 "ಪ್ರಿಯ ಪುತ್ರನೇ ನೋಡಿದೆಯಾ? ದೊಡ್ಡ ಫ್ಯಾಕ್ಟರಿ ಭವ್ಯ ಬಂಗಲೆ ಕಾರು ಚಿನ್ನ ಒಡವೆ ಫಾರಂ ಹೌಸ್ ಇದೆಲ್ಲರ ಒಡೆಯನಾಗಿದ್ದರೂ ನಾನು ಒಂದು ಜೊತೆ ಹಳೆಯ ಚಪ್ಪಲಿಯನ್ನು ಕೂಡ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಇಷ್ಟೇ ಬದುಕಿನ ಸತ್ಯ! ನಿನಗೂ ಒಂದು ದಿನ ಸಾವು ಹತ್ತಿರವಾಗುತ್ತದೆ ನೀನು ಕೇವಲ ಬಿಳಿ ಬಟ್ಟೆಯಲ್ಲಿ ಇಹಲೋಕ ತ್ಯಜಿಸಬೇಕು ಈಗಲೇ ಎಚ್ಚರಗೊಳ್ಳು ದುಡ್ಡಿಗಾಗಿ ಯಾರನ್ನು ನೋಯಿಸಬೇಡ ಪೀಡಿಸಬೇಡ ಅನ್ಯಾಯ ಮತ್ತು ಅಧರ್ಮದಿಂದ ಹಣ ಸಂಪಾದನೆ ಮಾಡಬೇಡ ನೀನು ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ನಿರ್ಗತಿಕರಿಗೆ ಇಲ್ಲದವರಿಗೆ ದಾನ ಮಾಡು ಸತ್ಕಾರ್ಯಗಳಿಗೆ ಹಣವನ್ನು ಬಳಸು ಸತ್ತಾಗ ನಿನ್ನ ಹಿಂದೆ ಬರುವುದು ನಿನ್ನ ಕರ್ಮಗಳು ಮಾತ್ರ! ಎಂದು ಪತ್ರ ಮುಗಿಸುತ್ತಾನೆ.........

 ‌    ‌    ‌                                                                                                                     ಈ ಪತ್ರ ಓದುತ್ತಾ ಕಣ್ಣುಗಳು ತುಂಬಿ ಬಂದವು‌. ಮನುಷ್ಯ ಎಷ್ಟೇ ಗಳಿಸಿದರು ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ಏನೇ ಆಗಿದ್ದರೂ ಏಕಿಷ್ಟು ಅಹಂಕಾರ, ನೀಚತನ ಕ್ರೂರತನ ಅಂತ ಯೋಚಿಸುತ್ತಿದ್ದೆ ನನ್ನ ಮೊಬೈಲ್ ರಿಂಗ್ ಆಗುತ್ತಿತ್ತು ಅದರಲ್ಲಿ........ 


"ಒಳಿತು ಮಾಡು ಮನುಸ... ನೀ ಇರೋದು ಮೂರು ದಿವಸ".....

"ಉಸಿರು ನಿಂತ ಮ್ಯಾಗೆ..... ನಿನ್ನ ಹೆಸರು ಹೇಳುತಾರ....ಹೆಣ ಅನ್ನುತ್ತಾರ.....ಮಣ್ಣಾಗ ಹೂಳುತಾರ"... 


ಹಾಡು ಮತ್ತಷ್ಟು ಬದುಕಿನ ವಾಸ್ತವದ ಬಗ್ಗೆ ಎಚ್ಚರಿಸಿದಂತಿತ್ತು.............‌‌.🔥🙏

Saturday, September 23, 2023

ಥಟ್ ಅಂತ ಉತ್ತರಿಸಿ ಅಭಿಪ್ರಾಯ

 ಡಾ. ವಚನಕುಮಾರಸ್ವಾಮಿ ಮತ್ತು ಶ್ರೀಮತಿ ರೂಪ ವಚನಕುಮಾರಸ್ವಾಮಿಯವರಥಟ್ಅಂತ ಹೇಳಿಈ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿದೆ.ಆ ಕಾರ್ಯಕ್ರಮದ ರೂಪವೆ ಹೊತ್ತಿಗೆ ಆಗಿ ಹೊರ ಬರುತ್ತಿರುವದು ಅತ್ಯಂತ ಸಂತೋಷದ ವಿಷಯ. ಇದೊಂದು  ವಚನ ಸಾಹಿತ್ಯ ಕುರಿತು ಅತ್ಯಂತ ಪ್ರ




ಮುಖವಾದ ಮತ್ತು ಸಂಶೋಧನಾತ್ಮಕ ಕೃತಿಯಾಗಿದೆ. ಈ ತರಹದ ಕೃತಿಗಳು ಕನ್ನಡದಲ್ಲಿ ಇಲ್ಲ ಎಂದರೂ ತಪ್ಪಿಲ್ಲ. ಏಕೆಂದರೆ ಎಲ್ಲೊ  ಪ್ರಾಸಂಗಿಕವಾಗಿ  ಬಸವಾದಿ ಶರಣರ ಸಂಬಂಧಿಸಿದ  ಪ್ರಶ್ನೆಗಳನ್ನು  ನೋಡುತ್ತೇವೆ. ಆದರೆ ಶರಣರಿಗಾಗಿಯೆ ಅವರ ತತ್ವ  ಸಿದ್ಧಾಂತಗಳಿಗಾಗಿಯೆ ಮೀಸಲಾಗಿರುವ ಕೃತಿ ಇದಾಗಿರುವದರಿಂದ ಆ ಶರಣ ಸಾಹಿತ್ಯ  ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ವಿಷಯಗಳಿಗೆ  ಉತ್ತರವಾಗಿದೆ. ಓದಲು , ನೆನಪಿಟ್ಟುಕೊಳ್ಳಲು ಮತ್ತು ಎಲ್ಲದಕ್ಕೂ  ಹೆಚ್ಚಾಗಿ  ಬಸವಾದಿ ಪ್ರಮಥರ ಕುರಿತು ಪ್ರಸಾರ ಮಾಡುವ ಇಂತಹ ಕಾರ್ಯ ಕೈಕೊಂಡ  ಶ್ರೀ ವಚನಕುಮಾರಸ್ವಾಮಿ ಮತ್ತು ಶ್ರೀಮತಿ  ರೂಪಾ ವಚನಕುಮಾರಸ್ವಾಮಿ ಇರ್ವ  ದಂಪತಿಗಳು ಅಭಿನಂದನಾರ್ಹರು.

ಡಾ. ನೀಲಾಂಬಿಕ ಪಾಟೀಲ, ಕಲಬುರಗಿ


ವಚನ ಸಾಹಿತ್ಯದ ರಸಪ್ರಶ್ನೆಗಳು ಎಂಬ ಈ ವಿನೂತನ ಹೊತ್ತಿಗೆಯು ಶರಣಾನುಯಾಯಿ ಕುಮಾರಸ್ವಾಮಿಯವರ ಪ್ರಾಯೋಗಿಕ ಹಾಗು ಸೃಜನಶೀಲ ಮನಸ್ಸಿನ ಫಲಶೃತಿ. ವಚನ ಸಾಹಿತ್ಯವನ್ನು ನಾವು ಇಂದಿನ ಮಕ್ಕಳು ಹಾಗು ಯುವಕರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಹಲವು ಮಾಧ್ಯಮಗಳ ಬಳಕೆಯ ಅಗತ್ಯವಿದೆ. ರಸಪ್ರಶ್ನೆಯ ಮಾಧ್ಯಮವು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ಅನ್ನ ಅನಿಸಿಕೆ. ಇಡೀ ಶರಣ ಸಾಹಿತ್ಯ ಹಾಗು ಶರಣರ ಕುರಿತ ಅನೇಕ ಸಂಗತಿಗಳು ಈ ಹೊತ್ತಿಗೆಯಲ್ಲಿ ಕಾಣಸಿಗುತ್ತವೆ. ಈ ತರಹದ ಪ್ರಯೋಗಾತ್ಮಕ ಪ್ರಯತ್ನಗಳು ಕುಮಾರಸ್ವಾಮಿಯವರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಮಾಡಲಿ ಹಾಗು ಓದುಗರು ಇದರ ಪ್ರಯೋಜನ ಪಡೆಯಲಿ ಎಂದು ಆಶಿಸುತ್ತೇನೆ.

~ ಡಾ. ಜೆ ಎಸ್ ಪಾಟೀಲ.


ಹನ್ನೆರಡನೆ ಶತಮಾನದಿಂದಲೂ ಏನೆಲ್ಲಾ ಅಡೆತಡೆ ಗಳು ಎದುರಾದರೂ ಎಲ್ಲವನ್ನೂ ಇಕ್ಕಿ ಮೆಟ್ಟಿ ೨೧ ನೇ ಶತಮಾನದ ವರೆಗೂ ಉಳಿದು ಬೆಳೆದು ಬರುವಲ್ಲಿ ನೂರಾರು ಶರಣರು, ಸಾವಿರಾರು ಶರಣರ ಅನುಯಾಯಿಗಳು, ಲಕ್ಷಾಂತರ ಅಭಿಮಾನಿಗಳು ಬಸವಾದಿ ಪ್ರಮಥರು ರಚಿಸಿದ ವಚನಗಳನ್ನು  ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪೋಷಿಸುತ್ತಾ ಬಂದಿದ್ದಾರೆ. ಅಂತಹ ಮೇರು ವ್ಯಕ್ತಿತ್ವದ ಶರಣ ಶರಣೆಯರ ಪಂಕ್ತಿಯಲ್ಲಿ ಈ ಶತಮಾನದ ಈ ದಶಕದಲ್ಲಿ ಮುಂಚೂಣಿಯಲ್ಲಿ ನಿಂತು ಸತಿ ಪತಿ ಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂಬ ಶರಣರ ಸೂಳ್ನುಡಿಯನ್ನು ಬದುಕಿನ ಉಸಿರಾಗಿಸಿಕೊಂಡು, ವಚನ ಪ್ರಸಾರ ಹಾಗೂ ಪ್ರಚಾರ  ಮಾಡಿಕೊಂಡು   ಬರುತ್ತಿರುವ ಶರಣ ಡಾ.ಕುಮಾರಸ್ವಾಮಿ ಹಾಗೂ ಶರಣೆ ರೂಪ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. 

ವೃತ್ತಿಯಲ್ಲಿ ಶಾಲಾ ಶಿಕ್ಷಕರಾಗಿರುವ ಡಾ. ಕುಮಾರ ಸ್ವಾಮಿ ಅವರು ಪ್ರವೃತ್ತಿಯಲ್ಲಿ ವಚನಾಮೃತ ಧಾರೆಯ ಮೂಲಕ  ಸಮಾಜದ ಶಿಕ್ಷಕರಾಗಿ  ತಮ್ಮನ್ನು ಸಮರ್ಪಿಸಿಕೊಂಡಿರುವುದು ಇತರರಿಗೆ ಸ್ಫೂರ್ತಿ ಮತ್ತು ಪ್ರೆರಕದಾಯಿಯಾಗಿದೆ.  

ಕನ್ನಡ ಭಾಷೆ ಸಾಹಿತ್ಯಗಳಿಗೆ ಹೊಸ ಶಕ್ತಿ ಮತ್ತು ಅಭಿವ್ಯಕ್ತಿಯನ್ನು ತಂದು ಕೊಟ್ಟ ವಚನ ಸಾಹಿತ್ಯ ಚಳುವಳಿ ಇಂದಿಗೂ  ಅತ್ಯಂತ ಪ್ರಸ್ತುತ ಎಂಬುದಕ್ಕೆ ಸಾಕ್ಷಿಯಾಗಿ  ಶರಣ ಡಾ.ಕುಮಾರಸ್ವಾಮಿ ಹಾಗೂ ಶರಣೆ ರೂಪ ಅವರ ಪರಿಶ್ರಮ ಮತ್ತು ಶ್ರದ್ಧೆಗಳಿಂದ ಶರಣ ಸೌರಭ ಕೃತಿಯು ಹೊರಬಂದಿದೆ.  ಅದರಲ್ಲಿ  ೧೩೬ ಶಿವ ಶರಣರ ೩೩  ಶಿವ ಶರಣೆಯರ ವಚನಗಳನ್ನು ಒಳಗೊಂಡಿದ್ದು, ಅವುಗಳನ್ನು ಸಂಕಲಿಸಿ, ಅವುಗಳ ಅರ್ಥ , ತಾತ್ಪರ್ಯ ಗಳ ಜೊತೆಗೆ ಶರಣ ಶರಣೆಯರ ಜೀವನ ವಿವರಗಳನ್ನು ಬಹಳ ಅರ್ಥವತ್ತಾಗಿ ನಿರೂಪಿಸಲಾಗಿದೆ.  ಇದರಿಂದ ವಚನವನ್ನು ಓದುಗರಿಗೆ ಹಾಗೂ ಅರ್ಥೈಸುವವರಿಗೆ ಬಹಳ ನೆರವಾಗುತ್ತದೆ. 

ವಚನ ಸಾಹಿತ್ಯವನ್ನು ಮನೆ ಮನೆಗಳಿಗೆ ಮನ ಮನಗಳಿಗೆ ಮುಟ್ಟಿಸುವ ಇಂತಹ ಮಾದರಿ ಕೆಲಸವನ್ನು ಮಾಡುತ್ತಿರುವ ಶರಣ ದಂಪತಿಗಳಿಗಿಬ್ಬರಿಗೂ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳು.

ಶ್ರೀ ಚಂದ್ರಶೇಖರ್ , ಅಧ್ಯಕ್ಷರು, 

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ದೆಹಲಿ ಘಟಕ, ನವದೆಹಲಿ 

 ಮತ್ತು 

ಶ್ರೀಮತಿ ಹೇಮಶ್ರೀ ಚಂದ್ರಶೇಖರ್

ಶರಣ ಸಾಹಿತ್ಯ ಪ್ರಸಾರಕರು, 


ಜಂಟಿ ನಿರ್ದೇಶಕರು

ಲೋಕಸಭೆ,

ಸಂಸತ್ ಭವನ



ಶರಣರ ವಿಚಾರಗಳನ್ನು ಪ್ರಚುರಪಡಿಸುವಲ್ಲಿ ನೀವು ಹೊಸ ದಾಖಲೆಯನ್ನೇ ನಿರ್ಮಿಸಿದ್ದೀರಿ. ವಚನಗಳನ್ನು ಹಾಡಿಸುವುದು, ವಚನಗಳ ಮೇಲೆ ರಸಪ್ರಶ್ನೆ ಕೇಳುವುದು, ಶರಣರ ಆದರ್ಶ ಬದುಕಿನ ಬಗ್ಗೆ ಉಪನ್ಯಾಸ ಮಾಡಿಸುವುದು, ಬಹುಮಾನ ಕೊಡುವುದು ಹೀಗೆ ಬೇರೆ ಬೇರೆ ವಿಧಾನಗಳ ಮೂಲಕ ಮತ್ತೆ ಶರಣಲೋಕದ ಕ್ರಾಂತಿಯ ಕಹಳೆ ಊದುತ್ತಿರುವುದು ಅಭಿನಂದನಾರ್ಹ. ಒಬ್ಬ ಮಠಾಧೀಶರು ತಮ್ಮ ಮಠದ ಮೂಲಕ ಮಾಡಬೇಕಿದ್ದ ತತ್ವಪ್ರಚಾರವನ್ಬು ಗೃಹಸ್ಥರಾಗಿ ನೀವು ಮಾಡುತ್ತಿರುವುದು ಮೆಚ್ಚಬೇಕಾದ ಕಾರ್ಯ. "ಥಟ್ ಅಂತ ಉತ್ತರಿಸಿ" ಕೃತಿ ಅರ್ಥಪೂರ್ಣವಾಗಿದ್ದು ಓದುಗರ ಕುತೂಹಲವನ್ನು ಅರಳಿಸುವಂತಾಗಲಿ ಎಂದು ಹಾರೈಸುತ್ತೇವೆ.
- ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು


ವಿಶೇಷವಾಗಿ ವಚನ ಸಾಹಿತ್ಯದ  ಕುರಿತಾದ ರಸಪ್ರಶ್ನೆಗಳಿಗೆ ಸೂಕ್ತವಾದ  ಉತ್ತರಗಳನ್ನು ತಮ್ಮ "ಥಟ್ ಅಂತ ಉತ್ತರಿಸಿ" ಎಂಬೀ ಕೃತಿಯಲ್ಲಿ ವಚನ ಕುಮಾರಸ್ವಾಮಿಯವರು ನಮಗೆ ದೊರೆಕಿಸಿಕೊಟ್ಟು, ಆ ಮೂಲಕ ಕನ್ನಡದ ಸಾರಸ್ವತ ಲೋಕದ ಜ್ಞಾನ ಕಣಜವನ್ನು ಮತ್ತಷ್ಟು ಪ್ರಪುಲ್ಲಗೊಳಿಸಿದ್ದಾರೆ..!

  ಬಸವಾದಿ ಪ್ರಮಥರೊಂದಿಗೆ ಅನೇಕ ಶ್ರೇಷ್ಠ ಆಧುನಿಕ ಶರಣರ; ಸಾಧಕರ; ಕವಿ ಸಾಹಿತಿಗಳ; ಸಿದ್ಧ ಸಂತ ಸಂಪನ್ನರ ವಿಚಾರಗಳ ಕುರಿತಾಗಿಯೂ ಈ ಸುಕೃತಿಯಲ್ಲಿ ಪ್ರಶ್ನೋತ್ತರ ಮಾಲಿಕೆಯ ರೂಪದಲ್ಲಿ ಬಹು ಅಪರೂಪದ ಸೂಕ್ಷ್ಮ ಮಾಹಿತಿಗಳನ್ನೊದಗಿಸಿ, ಕಾಡಲ್ಲ; ಮರ, ಮರವಲ್ಲ; ಬೀಜವೆಂಬಂತೆ, ಸುಜ್ಞಾನದ ಕರಿಯ ಕಿರಿಯ ಕನ್ನಡಿಯೊಳಡಗಿಸಿ ನಮಗಿಲ್ಲಿ ತೋರಿರುವ, ಅಕ್ಷರಶಃ ಅನನ್ಯವೂ ಅಪೂರ್ವವೂ ಆದ ಇಂತಹದ್ದೊಂದು ಕೃತಿಯನ್ನು ಕನ್ನಡಕ್ಕೆ ಕೊಟ್ಟಿರುವ ವಚನ ಕುಮಾರಸ್ವಾಮಿಯವರ ಅರಿವಿನ ಶ್ರಮ ನಿಜಕ್ಕೂ  ಶ್ಲಾಘನೀಯ..!

ಈ ಸತ್ಕೃತಿಯ ಕಾರಣಕ್ಕಾಗಿ, ಕನ್ನಡ ಸಾಹಿತ್ಯ ಲೋಕದ ಪರವಾಗಿ ಶ್ರೀಯುತರಿಗೆ ಆತ್ಮಪೂರ್ವಕ ಅಭಿನಂದನೆಗಳು..!


ಶರಣಾರ್ಥಿಗಳೊಂದಿಗೆ...


-ಡಾ.ಜಯಪ್ಪ ಹೊನ್ನಾಳಿ

(ಜಯಕವಿ), ಮೈಸೂರು


ಓಂ ಶ್ರೀ ಗುರುಬಸವ ಲಿಂಗಾಯ ನಮಃ .

ವಿಶ್ವ ವಚನ ಫೌಂಡೇಶನ್ ಮೈಸೂರು ಇವರು ನಡೆಸಿಕೊಡುತ್ತಿರುವ " ಥಟ್ ಅಂತ ಉತ್ತರಿಸಿ " ಎಂಬ ವಚನ ಸಾಹಿತ್ಯದ ರಸಪ್ರಶ್ನೆಗಳನ್ನು ವಿಶೇಷವಾಗಿ ತಯಾರಿಸಿ ಅಂತರ್ಜಾಲದ ಮುಖಾಂತರ ಸಾಮಾಜಿಕ ಜಾಲತಾಣಗಳ ಮುಖಾಂತರ ಇಡೀ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ  ಮನೆ ಮಾತಾಗಿದೆ.

 ಥಟ್ ಅಂತ ಉತ್ತರಿಸಿ. ರಸಪ್ರಶ್ನೆಗಳು ಬಸವಾದಿ ಪ್ರಮಥರ ಜೀವನ ಸಾಧನೆ ಅವರ ವಚನಾಂಕಿತ ಅವರ ಕಾಲ ಹಾಗೂ ವಚನಗಳ ಅನುಭಾವ. ವಚನಗಳ ಶೀರ್ಷಿಕೆ. ಹೀಗೆ ಹಲವಾರು ಹೊಸ ಹೊಸ ವಿಚಾರಗಳನ್ನು ಸಾಮಾನ್ಯ ಜ್ಞಾನದ ಮೂಲಕ ಬೆಳಕು ಚಲ್ಲವ ಈ ಕಾರ್ಯಕ್ರಮ ಜನರಿಗೆ ಮುಟ್ಟಿಸುವ ಕಾರ್ಯಕ್ರಮವನ್ನು  ಶರಣ ವಚನ ಕುಮಾರಸ್ವಾಮಿ ಹಾಗೂ ರೂಪ ಕುಮಾರಸ್ವಾಮಿ ಇವರು ಉತ್ತಮವಾಗಿ ನಡೆಸಿಕೊಡುತ್ತಿದ್ದಾರೆ ಸುಮಾರು 70ಕ್ಕೂ ಅಧಿಕ ಸರಣಿಗಳನ್ನು ನಡೆಸುವ ಮುಖಾಂತರ ಇವರ ಕಾರ್ಯ 100 ಸರಣಿಗಳನ್ನು ಮುಗಿಸಿ ಸಾವಿರವಾಗಲಿ ಇಷ್ಟೇ ಅಲ್ಲದೆ  ಬಸವಾದಿ ಪ್ರಮಥರ ವಚನ ಸಾಹಿತ್ಯದ ಪುಸ್ತಕಗಳನ್ನು ದಿನದರ್ಶಿಕೆಗಳನ್ನು ಶರಣರ ಭಾವಚಿತ್ರಗಳನ್ನು ವಚನಗಳ ಕೈಪಿಡಿಗಳನ್ನು ಹೊರತಂದಿದ್ದಾರೆ ಅಲ್ಲದೆ ಶಾಲೆ ಶಾಲೆಗಳಿಗೆ ಹೋಗಿ ಶಾಲೆಗಳಲ್ಲಿ ವಚನ ಸಾಹಿತ್ಯವನ್ನು ಬಿತ್ತುವ ಕೆಲಸ ಮಾಡಿದ್ದಾರೆ ಜೊತೆಗೆ ಬಡ ಮಕ್ಕಳಿಗೆ ಉಚಿತ ಸಮವಸ್ತ್ರ ಉಚಿತ ಪುಸ್ತಕಗಳನ್ನು ಲೇಖನ ಸಾಮಗ್ರಿಗಳನ್ನು ನೀಡುತ್ತಾ ಬಂದಿದ್ದಾರೆ ಕರ್ನಾಟಕ ರಾಜ್ಯದ್ಯಂತ ಮಠಾಧಿಪತಿಗಳು ಮಾಡಬೇಕಾದ ಕೆಲಸವನ್ನು ಅವರಿಗಿಂತ ಹೆಚ್ಚಿನ ಮುಂಚೂಣಿಯಲ್ಲಿ ಈ ಶರಣ ದಂಪತಿಗಳು ಮಾಡಿಕೊಂಡು ಬರುತ್ತಿದ್ದಾರೆ ಇವರ ಸಾಧನೆ ಬಸವಾದಿ ಪ್ರಮಥರು ಮೆಚ್ಚುವಂತಹ ಕೆಲಸವಾಗಿದೆ ಮುಂದೊಂದು ದಿನ. ಇವರ ರಸಪ್ರಶ್ನೆಗಳನ್ನು ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಮಾಹಿತಿಯ ಖಣಜವಾಗಲಿದೆ ಎಂಬುದು ನಮ್ಮ ಹಾರೈಕೆ. ಇವರಿಗೆ ಬಸವಾದಿ ಪ್ರಮಥರು ಹೆಚ್ಚಿನ ಶಕ್ತಿ ಸಾಮರ್ಥ್ಯ ಆರೋಗ್ಯ ಆಯಸ್ಸು ಯಶಸ್ಸು.ಎಲ್ಲವನ್ನು ನೀಡಿ ಇನ್ನು ಹೆಚ್ಚು ಇವರಿಂದ ಬಸವ  ಧರ್ಮ ಪ್ರಚಾರವಾಗಲಿ ಎಂದು ಶುಭ ಹಾರೈಸುತ್ತೇವೆ.

ಡಾ. ಶ್ರೀ ಜಯಬಸವಾನಂದ ಸ್ವಾಮೀಜಿ ವಿಶ್ವಧರ್ಮ ಪೀಠ ಜಯಬಸವ ತಪೋವನ ಚಿಕ್ಕಮಗಳೂರು.


*ನುಡಿದರೆ ಮುತ್ತಿನ ಹಾರದಂತಿರಬೇಕು ! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ! ನುಡಿದರೆ ಲಿಂಗ ಮೆಚ್ಚಿ ಅಹುದಹುದೇನಬೇಕು !ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ?*

ಎಂಬ ಅಣ್ಣ ಬಸವಣ್ಣನವರ ವಚನಕ್ಕೆ ಅನ್ವರ್ಥವಾಗುವಂತೆ ಡಾ. ವಚನ ಕುಮಾರಸ್ವಾಮಿ ಶರಣ ದಂಪತಿಗಳು ಸಂಪೂರ್ಣ ವಚನ ಸಾಹಿತ್ಯದ ಸಾರವನ್ನು  ಪ್ರಶ್ನೆಗಳಾಗಿಸಿ "ಥಟ್ ಅಂತ ಉತ್ತರಿಸಿ" ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನದಲ್ಲಿ ಸಾಫಲ್ಯರಾಗಿದ್ದಾರೆಂದೇ ಹೇಳಬಹುದು. ಎಲ್ಲರೂ ಮೆಚ್ಚುವಂತೆ ಪಾರದರ್ಶಕವಾಗಿ ಮಾಡಿದ ಅರವತ್ತು ಕಾರ್ಯಕ್ರಮಗಳ ವಿವರಗಳನ್ನು ಓರಣವಾಗಿಸಿ, ಮಾಣಿಕ್ಯದಂತೆ ಸದಾ ಬೆಳಕು ಚೆಲ್ಲಲು ಸ್ಥಾಯಿರೂಪದಲ್ಲಿ ಪುಸ್ತಿಕೆಯಾಗಿಸಿ ಹೊರ ತರುತ್ತಿರುವುದು ತುಂಬಾ ಸಂತೋಷದ ವಿಷಯ. ಸರ್ವಾಂಗ ಸುಂದರವಾಗಿ ಮುದ್ರಣಗೊಂಡು ಹೊರಬರುತ್ತಿರುವ ಈ ಪುಸ್ತಕದಲ್ಲಿ ಬಸವಯುಗ, ಬಸವೋತ್ತರ ಯುಗದ ಹಾಗೂ ಅಜ್ಞಾತ ವಚನಕಾರರು ಹಾಗೂ ವಚನಕಾರ್ತಿಯರ ಹೆಸರುಗಳನ್ನು ಅಂಕಿತ ನಾಮಗಳನ್ನು ಹಾಗೂ ಅವರು ಬರೆದ ವಚನಗಳ ಸಂಖ್ಯೆಗಳ ಮಾಹಿತಿಯನ್ನು ಸಹ ಮುದ್ರಿಸಲಾಗಿದೆ. ಶರಣ ಸಾಹಿತ್ಯ ಪ್ರಚಾರಕ್ಕೆ *"ಶರಣು ವಿಶ್ವವಚನ ಫೌಂಡೇಶನ್, ಮೈಸೂರು"* ಅವರಿಂದ ಕೊಡುಗೆಗಳು ಇನ್ನೂ ಹೀಗೆ ಸದಾ ಬರುತ್ತಿರಲಿ, ಶರಣ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ನುಡಿದಂತೆ ನಡೆಯುತ್ತಿರುವ ಶರಣ ದಂಪತಿಗಳಿಗೆ ಶುಭ ಹಾರೈಕೆಗಳು.


ಅಶೋಕ ಗು ಲೋಣಿ, ಕೆಜಿಎಫ್

ಕಾರ್ಯದರ್ಶಿಗಳು,

ಕೋಲಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು.


*ಶುಭ ಹಾರೈಕೆಗಳು*

-------------------------------

ಶ್ರಿ ವಚನ ಕುಮಾರ ಸ್ವಾಮಿ ಅವರು ನನಗೆ ಹಲವು  ವರ್ಷಗಳಿಂದ ಪರಿಚಯ ಅವರು ಮತ್ತು ಅವರ ಧರ್ಮ ಪತ್ನಿ ನಿರಂತರವಾಗಿ ಬಸವ ತತ್ವ ಸಿದ್ಧಾಂತಗಳನ್ನು ಪ್ರಸಾರ ಮಾಡುವ ಮೂಲಕ ಜನ ಮಾನಸಗಳಲ್ಲಿ ಶರಣರ ವಚನಗಳನ್ನು ತತ್ವ ಸಿದ್ಧಾಂತಗಳನ್ನು ಪ್ರಸಾರ ಮಾಡುತ್ತಿರುವ ಶರಣ ದಂಪತಿಗಳು .

ಇವರು ತಟ್ ಅಂತ ಹೇಳಿ ಎಂಬ ಶರಣರ ರಸ ಪ್ರಶ್ನೆ ಕಾರ್ಯಕ್ರಮ ನಿಜಕ್ಕೂ ತುಂಬಾ ಸುಂದರವಾಗಿ ಮೂಡಿ ಬರುತ್ತದೆ .

ಈಗ ಅವರು ಪುಸ್ತಕ ರೂಪದಲ್ಲಿ ತರುತ್ತಿರುವುದು ಸಂತಸದ ಸಂಗತಿ. ಅವರಿಬ್ಬರಿಗೂ ಬಸವಾದಿ ಪ್ರಮಥರ ಆಶೀರ್ವಾದ ಹರಕೆಗಳು ಇರಲಿ ಎಂದು ಆಶಿಸುತ್ತೇನೆ.

*ಡಾ ಶಶಿಕಾಂತ ಪಟ್ಟಣ* *ಅಧ್ಯಕ್ಷರು* 

*ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ*


ಸತಿಪತಿಗಳೊಂದಾದ ಭಕ್ತಿ ಹಿತವಪ್ಪುವುದು ಶಿವಂಗೆ ಎನ್ನುವ ಶರಣರ ಮಾತಿನಂತೆ 

ವಚನ ಕುಮಾರಸ್ವಾಮಿ ಹಾಗೂ  ರೂಪಾ ವಚನಕುಮಾರ ಸ್ವಾಮಿ  ದಂಪತಿಗಳು

ಮೈಸೂರು ಭಾಗದಲ್ಲಿ ಶರಣ ಸಾಹಿತ್ಯ ಪ್ರಚಾರಕರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.೧೨ನೇ ಶತಮಾನದ ಶರಣರ ಸಾಹಿತ್ಯ ಚಿಂತನೆಗಳನ್ನು ಜನಮಾನಸದಲ್ಲಿ ಹರಡಲು, ವಚನ ಸಾಹಿತ್ಯ ಓದುವಂತೆ ಪ್ರೇರೇಪಿಸಲು  ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಅದರ ಫಲವಾಗಿ ಹೊರಬಂದಿರುವ ಪುಸ್ತಕ *ಥಟ್ ಅಂತ ಹೇಳಿ*

ಇದೊಂದು ಶರಣು ಸಾಹಿತ್ಯದ ಮೇಲೆ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮ.  ಒಟ್ಟು ೬೦ ರಸ ಸ್ಪರ್ಧೆಯನ್ನು ಏರ್ಪಡಿಸಿ, ಶರಣ ಸಾಹಿತ್ಯ ಓದಲು ಪ್ರೇರೇಪಿಸಿ , ಭಾಗವಹಿಸಿದವರಿಗೆ ಬಹುಮಾನವನ್ನು ನೀಡಿ ಅಭಿನಂದಿಸುವ ಕಾರ್ಯವನ್ನು ಮಾಡಿದ್ದಾರೆ.

ಹಾಗೆ ಹಮ್ಮಿಕೊಂಡಿದ್ದ ರಚನಾತ್ಮಕ ಚಟುವಟಿಕೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ ದಾಖಲಿಸಿ, ಮುಂದಿನ ಆಸಕ್ತ ಓದುಗರಿಗೆ ನೀಡಿದ್ದಾರೆ.

 ಬಹು ಆಯ್ಕೆಯ ಪ್ರಶ್ನೆಗಳು ವೈವಿಧ್ಯತೆಯಿಂದ ಕೂಡಿವೆ.

ಚಿತ್ರ ಪ್ರಶ್ನೆಗಳು, ವ್ಯಕ್ತಿ ಚಿತ್ರಗಳು

ಶರಣರ ಸ್ಮಾರಕಗಳು ಮತ್ತು ಶರಣ ಸಾಹಿತ್ಯ ದುಡಿದ ಮಹನೀಯರು ಚಿತ್ರಗಳ ನೀಡಿ ದೃಕ್ಕ ಪರಿಚಯ ಮಾಡಿದ್ದಾರೆ. ಶರಣರ ವಚನಗಳ ವಚನಾಂಕಿತ ಮತ್ತು ದೊರೆತ ವಚನಗಳ ಸಂಖ್ಯೆ.ಹೀಗೆ ಶರಣರ ಮಾಹಿತಿಯನ್ನು ನೀಡುವ ಉಪಯುಕ್ತ ಪುಸ್ತಕ ಥಟ್ ಅಂತ ಹೇಳಿ.


ಡಾ.  ನಿರ್ಮಲ ಬಟ್ಟಲ

     ಪ್ರಾಚಾರ್ಯರು

ಮ.ನ.ರ.ಸಂಘದ ಶಿಕ್ಷಣ ಮಹಾವಿದ್ಯಾಲಯದ

ಬೆಳಗಾವಿ


12£Éà ±ÀvÀªÀiÁ£ÀzÀ°è DgÀA¨sÀªÁzÀ ªÀZÀ£À PÁæAw, PÀ£ÀßqÀ ¸Á»vÀåzÀ°è ºÉƸÀ ªÉÄʰUÀ®Äè ¸ÀȶֹvÀÄ. ¸ÁªÀiÁfPÀ, £ÉÊwPÀ, DyðPÀÀ £ÀqÀĪÀ½PÉUÉ zÁj¢Ã¥ÀªÁVgÀĪÀ F ªÀZÀ£ÀUÀ¼ÀÄ EA¢UÀÆ ¥Àæ¸ÀÄÛvÀ. AiÀiÁªÀÅzÉà ¸ÁA¥ÀæzÁ¬ÄPÀ ²PÀët«gÀzÉAiÀÄÆ  CzÀÄãvÀ ¸Á»vÀå gÀa¹zÀ F ªÀZÀ£ÀPÁgÀgÀ ¥Àæw¨sÉ C¸ÁªÀiÁ£Àå. DzÀgÉ EwÛÃa£À ¢£ÀUÀ¼À°è ªÀZÀ£ÀUÀ¼À ªÀĺÀvÀéªÀ£ÀÄß EA¢£À AiÀÄĪÀ ¦Ã½UÉUÉ w½¹PÉÆqÀĪÀÅzÀgÀ°è £ÁªÀÅ  «¥sÀ®ªÁVzÉÝêÉ. F ¤nÖ£À°è ±ÀgÀtÄ «±Àé ªÀZÀ£À ¥sËAqÉñÀ£ï£À ¸ÀA¸ÁÜ¥ÀPÀgÁzÀ ²æÃ PÀĪÀiÁgÀ¸Áé«Ä ºÁUÀÆ gÀÆ¥À PÀĪÀiÁgÀ¸Áé«ÄAiÀĪÀgÀ ±ÀæªÀÄ ¤dPÀÆÌ ±ÁèWÀ¤ÃAiÀÄ. £Ár£ÁzÀåAvÀ ªÀZÀ£ÀUÀ¼À PÀA¥À£ÀÄß ºÀgÀqÀ®Ä F ªÀZÀ£À zÀA¥ÀwUÀ¼ÀÄ C«gÀvÀªÁV ±Àæ«Ä¸ÀÄwÛzÁÝgÉ. ±Á¯ÉUÀ¼ÉqÉUÉ ªÀZÀ£ÀUÀ¼À £ÀrUÉ, UÁæªÀÄzÉqÉUÉ ªÀZÀ£ÀUÀ¼À £ÀrUÉ, ºÁUÀÆ «ªÀzÉqÉAiÀİè C¸ÀASÁåAvÀ PÁAiÀÄðPÀæªÀÄUÀ¼À£ÀÄß ¤ÃrgÀĪÀ EªÀgÀÄ £Ár£À ªÀģɪÀiÁvÁVzÁÝgÉ.

EªÀgÀ ªÀÄÄPÀÄlzÀ ªÀÄvÉÆÛAzÀÄ UÀj xÀmï CAvÀ GvÀÛj¹ ªÀZÀ£À ¸Á»vÀå gÀ¸À¥Àæ±Éß PÁAiÀÄðPÀæªÀÄ, PÀ¼ÉzÀ ªÀµÀð dÆ£ï£À°è AiÀÄÆlÆå¨ï£À°è DgÀA¨sÀªÁzÀ F D£ï ¯ÉÊ£ï QégÀhiï PÁAiÀÄðPÀæªÀÄPÉÌ C¨sÀÆvÀ¥ÀƪÀð ¥ÀævÀ¸ÀàAzÀ£É PÀAqÀħA¢vÀÄ. ¥Àæw PÁAiÀÄðPÀæªÀÄzÀ°è «ªÀzsÀ ªÀZÀ£ÀPÁgÀgÀ, CªÀgÀ ¸Á»vÀåzÀ PÀÄjvÀÄ ºÀvÀÄÛ ¥Àæ±ÉßUÀ¼À£ÀÄß PÉüÀ¯ÁVzÀÄÝ «eÉÃvÀjUÉ §ºÀĪÀiÁ£À ¤ÃqÀ¯ÁVvÀÄÛ. E¢ÃUÀ F J¯Áè ¥Àæ±ÉßUÀ¼À£ÀÄß ºÁUÀÆ GvÀÛgÀUÀ¼À£ÀÄß ¥ÀĸÀÛPÀ gÀÆ¥ÀzÀ°è ºÉÆgÀvÀgÀ¯ÁVzÉ. CAvÉAiÉÄà J¯Áè ªÀZÀ£ÀPÁgÀgÀ ºÁUÀÆ ªÀZÀ£ÀPÁwðUÀ¼À «ªÀgÀ E°èzÉ. MnÖ£À°è F PÀÈwAiÀÄ£ÀÄß ªÀZÀ£À «±ÀéPÉÆÃ±À JAzÉà PÀgÉAiÀħºÀÄzÀÄ. ¸Á»vÀåzÀ ªÉÄÃ¯É AiÀiÁªÀÅzÉà ¥ÀjÃPÉë vÉUÉzÀÄPÉÆ¼ÀÄîªÀªÀjUÉ, D¸ÀPÀÛjUÉ F ¥ÀĸÀÛPÀ CvÀÄå¥ÀAiÀÄÄPÀÛ. EAvÀºÀ ¸ÀÄAzÀgÀ ¥ÀĸÀÛPÀ ºÉÆgÀvÀgÀ®Ä ±Àæ«Ä¹zÀ ²æÃAiÀÄÄvÀ PÀĪÀiÁgÀ¸Áé«Ä ºÁUÀÆ ²æÃªÀÄw gÀÆ¥À PÀĪÀiÁgÀ¸Áé«ÄAiÀĪÀjUÉ £À£Àß «±ÉõÀ C©ü£ÀAzÀ£ÉUÀ¼ÀÄ

qÁ|| ºÉZï gÁeÉñÀéj

¤zÉÃð±ÀPÀgÀÄ

CPÀ̪ÀĺÁzÉë CzsÀåAiÀÄ£À ªÀÄvÀÄÛ ¸ÀA±ÉÆÃzsÀ£Á «¨sÁUÀ

PÀ£ÁðlPÀ gÁdå ªÀÄÄPÀÛ «±Àé«zÁ央AiÀÄ

ªÉÄʸÀÆgÀÄ


12 ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಅನುಬವ ಮಂಟಪದಿಂದ ಹಿಡಿದು, ಶರಣರ ವಚನಗಳು, ಶರಣರ ಅಂಕಿತನಾಮಗಳು ಹೀಗೆ ಹತ್ತು ಹಲವಾರು ವಿಚಾರಗಳನ್ನೊಳಗೊಂಡ ಹಾಗೂ ವಿಶ್ವಗುರು ಬಸವೇಶ್ವರರ ಸಂಪೂರ್ಣ ಮಾಹಿತಿ ಸಂಕ್ಷಿಪ್ತ ರೂಪದಲ್ಲಿ ತಿಳಿದುಕೊಳ್ಳಬಹುದಾದ "ಥಟ್ ಅಂತ ಉತ್ತರಿಸಿ" ವಚನ ಸಾಹಿತ್ಯ ರಸಪ್ರಶ್ನೆಗಳು ಪುಸ್ತಕಕ್ಕೆ ನನ್ನ ಅನಂತ ಶರಣು. ಇಂದಿನ ಥಟ್ ಅಂತ ನಡೆಸುವ ಜೀವನಶೈಲಿಗೆ ಅತ್ಯುತ್ತಮ ಪುಸ್ತಕ. 

ಶುಭಾಕಾಮನೆಗಳೊಂದಿಗೆ,

ಪ್ರಶಾಂತ್ ಕಲ್ಲೂರು

ರಾಜ್ಯಾಧ್ಯಕ್ಷರು

ವೀರಶೈವ ಲಿಂಗಾಯತ ಮಹಾ ವೇದಿಕೆ


ಶರಣು ವಿಶ್ವ ವಚನ ಫೌಂಡೇಶನ್,

ಮೈಸೂರು.

ಇದರ ಸಂಸ್ಥಾಪಕರಾದ ಶರಣ ಡಾಕ್ಟರ್ ವಚನ ಕುಮಾರಸ್ವಾಮಿ, ಮೈಸೂರು. ಇವರು ಈ ಥಟ್ ಅಂತ ಹೇಳಿ ಉತ್ತರಿಸಿ. ವಚನ ಸಾಹಿತ್ಯ ರಸ ಪ್ರಶ್ನೆಗಳು ಈ ಮಾಲಿಕೆಯ ಪುಸ್ತಕವನ್ನು ತುಂಬಾ ಆಳವಾಗಿ ಅಧ್ಯಯನ ಮಾಡಿ, ಅತ್ಯದ್ಭುತವಾಗಿ ಹೊರತಂದಿದ್ದಾರೆ. ಇದು ಇನ್ನೂ ಸ್ವಲ್ಪ ಪರಿಷ್ಕರಣೆಗೊಂಡು ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಒಂದು ಶರಣ ಸಾಹಿತ್ಯದ ಕಿರು ಪುಸ್ತಕವನ್ನು ಮಾಡಿ ಕೊಡುವುದರಲ್ಲಿ ಯಶಸ್ವಿಯಾಗಲಿ, ಎಂದು ನಾನು ತುಂಬಾ ಹೆಮ್ಮೆಯಿಂದ ಹೇಳುತ್ತೇನೆ. ಇವರ ಈ ಮಹಾನ್ ಕಾರ್ಯ ಅತ್ಯದ್ಭುತ, ಇದರಲ್ಲಿ ಸೂಕ್ತವಾದ ಚಿತ್ರಗಳನ್ನು ಬಳಸಿಕೊಂಡು, ಬಿಟ್ಟ ಸ್ಥಳಗಳನ್ನು ತುಂಬಿರಿ ಎಂದು, ಈ ರೀತಿ ತುಂಬಾ ಹಲವಾರು ವಿಧದಲ್ಲಿ ಶೈಕ್ಷಣಿಕ ಪದ್ಧತಿಯಲ್ಲಿಯೇ ತಯಾರಿಸಿದ್ದಾರೆ. ಇವರಿಗೆ ತುಂಬಾ ತುಂಬಾ ಅಭಿನಂದನೆಗಳು. ಈ ಕುರಿತು ರಾಜ್ಯದ ಘನ ಸರ್ಕಾರವು ಇವರನ್ನು ಗುರುತಿಸಿ ಬೆಂಬಲಿಸಬೇಕು ಹಾಗೂ ನಾವೆಲ್ಲರೂ ಬೆಂಬಲಿಸೋಣ.


ಶರಣು ಶರಣಾರ್ಥಿಗಳು.

πππππππππππππππππππ


✍🏻 ಶ್ರೀನಿವಾಸ್ ಭದ್ರಣ್ಣವರ.

      ಬೆಂಗಳೂರು.








Sunday, September 10, 2023

866666 ಎಂದರೇನು?

 866666 ಎಂದರೇನು?

866666 ಈ ಸಂಖ್ಯೆಯಲ್ಲಿ ಲಿಂಗಾಯತ ಧರ್ಮದ ತತ್ವಗಳನ್ನು ಸೂತ್ರಿಕರಿಸಲಾಗಿದೆ. ಇದರ ವಿವರಗಳು ಈ ಕೆಳಗಿನಂತೆ ಇವೆ.


8-ಅಷ್ಟಾವರಣ, 6-ಷಡಾಚಾರ, 6-ಷಟ್‍ಸ್ಥಲ, 6-ಷಟ್‍ಸೂತ್ರ, 6-ಷಟ್‍ಶೀಲ, 6-ಷಟ್‍ಕ್ರಿಯೆ

ಅಷ್ಟಾವರಣಗಳು - 8 :

1) ಗುರು 2) ಲಿಂಗ 3) ಜಂಗಮ 4) ವಿಭೂತಿ 5) ರುದ್ರಾಕ್ಷಿ 6) ಮಂತ್ರ 7) ಕರುಣೋದಕ 8)ಕರುಣ ಪ್ರಸಾದ


ಷಡಾಚಾರಗಳು - 6 :

1) ಬಸವಾಚಾರ 2) ಲಿಂಗಾಚಾರ 3) ಸದಾಚಾರ 4) ಶಿವಾಚಾರ 5) ಗಣಾಚಾರ 6) ಭೃತ್ಯಾಚಾರ


ಷಟ್‍ಸ್ಥಲಗಳು - 6:

1) ಭಕ್ತ 2) ಮಹೇಶ 3) ಪ್ರಸಾದಿ 4) ಪ್ರಾಣಲಿಂಗಿ 5) ಶರಣ 6) ಐಕ್ಯ


ಷಟ್‍ಸೂತ್ರಗಳು - 6:

1) ಧರ್ಮಗುರು:ಬಸವಣ್ಣ

2) ಧರ್ಮ ಸಂಹಿತೆ:ವಚನಸಾಹಿತ್ಯ

3) ಧರ್ಮ ಲಾಂಛನ:ವಿಶ್ವಾತ್ಮನ ಕುರುಹಾದ ಇಷ್ಟಲಿಂಗ

4) ಧರ್ಮ ಕ್ಷೇತ್ರ: ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮ, ಶರಣ ಭೂಮಿ ಬಸವ ಕಲ್ಯಾಣ

5) ಧರ್ಮ ಧ್ವಜ:ಷಟ್ಕೋನ ಇಷ್ಟಲಿಂಗ ಸಹಿತ ಬಸವ ಧ್ವಜ

6) ಧರ್ಮದ ಧ್ಯೇಯ:ಜಾತಿ ವರ್ಣ ವರ್ಗರಹಿತ ಧರ್ಮಸಹಿತ ಶರಣ ಸಮಾಜ ನಿರ್ಮಾಣ (ಕಲ್ಯಾಣ ರಾಜ್ಯ ನಿರ್ಮಾಣ)


ಷಟ್‍ಶೀಲಗಳು - 6:

1) ಲಿಂಗದೇವ ನಿಷ್ಠೆ 2) ಧರ್ಮ ಗುರು ನಿಷ್ಠೆ 3) ಧರ್ಮಶಾಸ್ತ್ರ ನಿಷ್ಠೆ 4) ಗಣಮೇಳ ನಿಷ್ಠೆ 5) ಕಾಯಕ-ದಾಸೋಹ ನಿಷ್ಠೆ 6) ಶರಣ ಮೇಳ ನಿಷ್ಠೆ


ಷಟ್‍ಕ್ರಿಯೆಗಳು - 6:

1) ಆಚಾರ 2) ಅರಿವು 3) ಲಿಂಗ 4) ಜಂಗಮ 5) ಪ್ರಸಾದ 6) ದಾಸೋಹ

Thursday, August 24, 2023

ಮನಮುಟ್ಟುವ ಕಥೆಗಳು

 *ನಿನ್ನೆ ನಿಧನರಾದ ಸ್ಪಂದನ ವಿಜಯರಾಘವೇಂದ್ರ ರವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ..ಪ್ರಸ್ತುತ ಈ ಕೆಳಗಿನ  ಚಿತ್ರಣ ನಮ್ಮ ಮುಂದೆ*


*ನಮ್ಮ ಹೃದಯ ಯಾವಾಗ ಬೇಕಾದ್ರೂ ಸ್ಥಬ್ದ ಆಗಬಹುದು.*💐


*ನಮ್ಮ ಪಯಣ ತುಂಬಾ ಚಿಕ್ಕದು.*


ನಾನು ಇದನ್ನು ಬೆಳಿಗ್ಗೆಯಿಂದ ಕನಿಷ್ಠ 5 ಬಾರಿ ಓದಿದ್ದೇನೆ. ಇದು ತುಂಬಾ ಸತ್ಯ ಮತ್ತು ಸುಂದರವೆನಿಸಿತು.


ಒಬ್ಬ ಮಹಿಳೆ ಬಸ್ಸನ್ನು ಹತ್ತಿದಳು. ಒಬ್ಬ ವ್ಯಕ್ತಿಯ ಪಕ್ಕದಲ್ಲಿ ಕುಳಿತಿದ್ದಳು, ಮತ್ತು ಅವಳು ತನ್ನೊಂದಿಗೆ ತಂದಿದ್ದ ಹಲವಾರು ಚೀಲಗಳು ಅವನನ್ನು ತಾಗುತ್ತಿದ್ದವು.


ಆದರೂ ಅವನು ಮೌನವಾಗಿದ್ದಾಗ, ಮಹಿಳೆ ತನ್ನ ಚೀಲಗಳು ಅಷ್ಟು ತಗುಲುತ್ತಿದ್ದರೂ  ಏಕೆ ದೂರುತ್ತಿಲ್ಲ? ಎಂದು ಆಶ್ಚರ್ಯವಾಯಿತು! ಮತ್ತು ಅವನನ್ನೇ ಕೇಳಿದಳು -ನಿಮಗೆ ಅಷ್ಟು ಕಿರಿಕಿರಿ ಆಗುತ್ತಿದ್ದರೂ ಯಾಕೆ ದೂರದೆ ಸುಮ್ಮನಿರುವಿರಿ??


ಆ ವ್ಯಕ್ತಿ ಸಣ್ಣ ಮುಗುಳ್ನಗೆಯೊಂದಿಗೆ ಉತ್ತರಿಸಿದ:

ನಮ್ಮ ಸಹ ಪ್ರಯಾಣವು ತುಂಬಾ ಚಿಕ್ಕದಾಗಿರುವುದರಿಂದ, ಅಂತಹ ಚಿಕ್ಕ ವಿಷಯದ ಬಗ್ಗೆ ಅಸಮಾಧಾನಗೊಳ್ಳುವ ಅಗತ್ಯವಿಲ್ಲ, ಏಕೆಂದರೆ ನಾನು ಮುಂದಿನ ನಿಲ್ದಾಣದಲ್ಲಿ ಇಳಿಯುತ್ತಿದ್ದೇನೆ."


 ಈ ಉತ್ತರವು ಮಹಿಳೆಯನ್ನು ತುಂಬಾ ವಿಚಲಿತಗೊಳಿಸಿತು, ಅವಳು ಆ ವ್ಯಕ್ತಿಯನ್ನು ಕ್ಷಮಿಸುವಂತೆ ಕೇಳಿದಳು ಮತ್ತು ಅವನಾಡಿದ ಮಾತುಗಳು ಸುವರ್ಣಾಕ್ಷರಗಳಲ್ಲಿ  ಬರೆದಿಟ್ಟುಕೊಳ್ಳವಂತಹುವೆಂದು ತನ್ನಲ್ಲೇ ಅಂದುಕೊಂಡಳು.


ಈ ಜಗತ್ತಿನಲ್ಲಿ ನಮ್ಮ ಸಮಯವು ತುಂಬಾ ಚಿಕ್ಕದಾಗಿದೆ ಎಂದು ನಾವು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು, ನಿಷ್ಪ್ರಯೋಜಕ ವಾದಗಳಿಂದ , ವೃಥಾ ಅಸೂಯೆಗಳಿಂದ, ಮೊಂಡು ವಾದಗಳಿಂದ, ಅಸಮಾಧಾನ ಮತ್ತು ಕೆಟ್ಟ ವರ್ತನೆಗಳಿಂದ ಸಮಯ ಮತ್ತು ಶಕ್ತಿಯ ವ್ಯರ್ಥ ಮಾಡಿಕೊಳ್ಳದಿರಿ.


ಯಾರಾದರೂ ನಿಮ್ಮ ಹೃದಯವನ್ನು  ಘಾಸಿ ಮಾಡಿದ್ದಾರೆಯೇ?  ಶಾಂತವಾಗಿರಿ.

ನಿಮ್ಮ ಪ್ರವಾಸವು ತುಂಬಾ ಚಿಕ್ಕದಾಗಿದೆ💛


ಯಾರಾದರೂ ನಿಮಗೆ ಬೆದರಿಸಿದ್ದಾರೆಯೇ, ಮೋಸ ಮಾಡಿದ್ದಾರೆಯೇ ಅಥವಾ ಅವಮಾನಿಸಿದ್ದಾರೆಯೇ? -  ಶಾಂತರಾಗಿರಿ, ಒತ್ತಡಕ್ಕೆ ಒಳಗಾಗದಿರಿ.

ಪ್ರವಾಸವು ತುಂಬಾ ಚಿಕ್ಕದಾಗಿದೆ.💛


ಯಾರಾದರೂ ನಿಮಗೆ ಇಷ್ಟವಾಗದ ಕಾಮೆಂಟ್ ಮಾಡಿದ್ದಾರೆಯೇ?

-ಶಾಂತವಾಗಿರಿ. ನಿರ್ಲಕ್ಷಿಸಿ. ಕ್ಷಮಿಸಿ, ಮತ್ತು ಅವರನ್ನು ಪ್ರೀತಿಸಿ.

ಪ್ರವಾಸವು ತುಂಬಾ ಚಿಕ್ಕದಾಗಿದೆ.💛


ಕೆಲವರು ನಮಗೆ ಏನೇ ಸಮಸ್ಯೆ ತಂದರೂ ನಾವು ಅದರ ಬಗ್ಗೆಯೇ ಯೋಚಿಸುತ್ತಿದ್ದರೆ ಅದರ ಬಗ್ಗೆಯೇ ಚಿಂತಿಸಿದರೆ ಮಾತ್ರ ಸಮಸ್ಯೆ, ನೆನಪಿರಲಿ.

ನಮ್ಮ ಪ್ರಯಾಣವು ತುಂಬಾ ಚಿಕ್ಕದಾಗಿದೆ.💛


ನಮ್ಮ ಪ್ರವಾಸದ ಉದ್ದ ಯಾರಿಗೂ ತಿಳಿದಿಲ್ಲ.  ನಾಳೆ ಏನಾಗುವುದೋ ಯಾರೂ ನೋಡಿಲ್ಲ.  ಅದು ಯಾವಾಗ ತನ್ನ ನಿಲ್ದಾಣಕ್ಕೆ ಬಂದು ಕೊನೆಗೊಳ್ಳುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ.

ನಮ್ಮ ಪಯಣ ತುಂಬಾ ಚಿಕ್ಕದಾಗಿದೆ.💛


ನಾವು ಸ್ನೇಹಿತರು ಮತ್ತು ಕುಟುಂಬವನ್ನು ಪ್ರಶಂಸಿಸೋಣ. ಅವರನ್ನು ಗೌರವಿಸೋಣ, ಪ್ರೀತಿಸೋಣ ಮತ್ತು ಕ್ಷಮಿಸುವವರಾಗಿರೋಣ. ನೆನಪಿರಲಿ,

ನಮ್ಮ ಪಯಣ  ತುಂಬಾ ಚಿಕ್ಕದು💛


ಎಲ್ಲರೊಂದಿಗೆ ಮುಕ್ತವಾಗಿ ಬೆರೆತುನಿಮ್ಮ ನಗುವನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ನೀವು ಬಯಸಿದಷ್ಟು ಸುಂದರವಾಗಿರಲು ನಿಮ್ಮ ಮಾರ್ಗವನ್ನು ಆರಿಸಿಕೊಳ್ಳಿ.

ನಮ್ಮ ಪ್ರವಾಸವು ತುಂಬಾ ಚಿಕ್ಕದಾಗಿದೆ..! 🙏..


*ಮನುಷ್ಯತ್ವದ ವಿನಂತಿ*


*ಒಬ್ಬರ ಮನವ ನೋಯಿಸಿ,

ಒಬ್ಬರ ಮನವ ಘಾತವ ಮಾಡಿ,

ಗಂಗೆಯ ಮುಳುಗಿದಡೇನಾಗುವುದಯ್ಯಾ?

ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು? ಕಲಂಕ ಬಿಡದಾಯಿತ್ತಯ್ಯಾ.

ಅದು ಕಾರಣ, ಮನವ ನೋಯಿಸದವನೆ, ಒಬ್ಬರ ಘಾತವ

ಮಾಡದವನೆ,

ಪರಮಪಾವನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.*


*ಶರಣರಾದ ಸಿದ್ಧರಾಮೇಶ್ವರರ ವಚನವನ್ನು ಸದಾ ನೆನಪಿನಲ್ಲಿಟ್ಟುಕೊಂಡು ಅದರಂತೆ ನಡೆಯೋಣ*


*ಸಂಗ್ರಹ*


*ಶರಣು ವಿಶ್ವವಚನ ಫೌಂಡೇಷನ್*


*ನಮ್ಮತನ ಹಾಳಾಗಲು ನಾವುಗಳು ಹಾಕಿಕೊಂಡ ದಾರಿಗಳು*


ಲಿಂಗಾಯತರು ಇದನ್ನು ಒಬ್ಬ ಬ್ರಾಹ್ಮಣನಿಂದ ಕೇಳಬೇಕಾದ ಪರಿಸ್ಥಿತಿ.

ತೀರಾ ನಾಚಿಕೆಗೇಡಿನ ವಿಚಾರವಲ್ಲವೆ?

ಅನ್ಯ ಧರ್ಮದವರಿಂದ ಲಿಂಗಾಯತರು ಕಲಿಯಬೇಕೆ?


*ಮಧ್ಯ ಏಷಿಯಾ ಮೂಲದ ಧಾರ್ಮಿಕ ಮೂಲಭೂತವಾದಿಗಳಾಗಿರುವ ಬ್ರಾಹ್ಮಣರು ಈ ಲೇಖನದ ಮೂಲಕ ಲಿಂಗಾಯತ ಸಮುದಾಯಕ್ಕೆ ಕಪಾಳಮೋಕ್ಷ ಮಾಡಿದ್ದಾರೆ*.


೧. *ನಿಮ್ಮ ಹಣೆಯ ಮೇಲಿನ ವಿಭೂತಿಯು ಒಂದು ಕಾಲದಲ್ಲಿ ನಿಮ್ಮ ಧರ್ಮದ ಗುರುತಾಗಿತ್ತು. ನೀವು ಖಾಲಿ ಹಣೆಯನ್ನು ಧರ್ಮಹೀನತೆಯ ಸಂಕೇತವೆಂದು ಪರಿಗಣಿಸುತ್ತೀರಿ. ಆದರೆ ಇಂದು ನೀವು ಮನೆಯಿಂದ ಹೊರಡುವ ಮೊದಲು ವಿಭೂತಿಯನ್ನು ಧರಿಸುವುದು ನಿಲ್ಲಿಸಿದ್ದೀರಿ* ಮಾತ್ರವಲ್ಲ, ನಿಮ್ಮ ಮನೆಯ *ಮಹಿಳೆಯರು ಮತ್ತು ಮಕ್ಕಳು ಫ್ಯಾಷನ್ ಮತ್ತು ಆಧುನಿಕತೆಯ ಹೆಸರಿನಲ್ಲಿ ಹಣೆಗೆ ವಿಭೂತಿ ಹಚ್ಚುವ ಸಾಂಪ್ರದಾಯವನ್ನು ಬಿಟ್ಟಿದ್ದಾರೆ.*


*ನಮ್ಮ ಬ್ರಾಹ್ಮಣ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಧಾರ್ಮಿಕ ಸಂಸ್ಕಾರವಿಲ್ಲ ಎಂದು ನೀವು ಟೀಕಿಸುತ್ತೀರಿˌ ಆದರೆ ಧಾರ್ಮಿಕ ಸಂಸ್ಕಾರವಿರುವ ನಿಮ್ಮ ಮನೆಯ ಹೆಣ್ಣು ಮಕ್ಕಳು ಲಿಂಗಧಾರಣೆ ಮಾಡುವುದಿಲ್ಲ/ಹಣೆಗೆ ವಿಭೂತಿ ಧರಿಸುವುದಿಲ್ಲ. ನಿಮ್ಮ ಮಕ್ಕಳು ಕೂಡ ಅಷ್ಟೆ. ಆದರೆ ನಮ್ಮ ಮನೆಯ ಮಕ್ಕಳು ಜನಿವಾರ ಮತ್ತು ಗಂಧ ಧರಿಸುವುದು ಮರೆಯುವುದಿಲ್ಲ. ನಾವು ನಮ್ಮ ಧರ್ಮವನ್ನು ಪಾಲಿಸುತ್ತಿದ್ದೇವೆ ಮತ್ತು ನಮ್ಮ ದೇವತೆಗಳಾಗ ತಿರುಪತಿˌ ಮಂತ್ರಾಲಯಕ್ಕೆ ನಿಮ್ಮ ಹಾಗೂ ಎಲ್ಲಾ ಸಮುದಾಯದವರೂ ಬರುವಂತೆ ಮಾಡಿದ್ದೇವೆ. ನಿಮ್ಮ ಸಮುದಾಯದ ಸ್ತ್ರೀಯರುˌ ಯುವಕರು ಹಾಗು ಮಕ್ಕಳು ನಿಮ್ಮ ಧರ್ಮವನ್ನು ಮರೆತರೆ ಅದಕ್ಕೆ ನೀವೇ ಕಾರಣರು ಹೊರತು ನಾವು ಕಾರಣವಲ್ಲ.*


೨. *ನಾವು ನಮ್ಮ ಬ್ರಾಹ್ಮಣ ಸಂಪ್ರದಾಯದಂತೆ ಲಲಿತಾ ಸಹಸ್ರನಾಮ ಪಠಣˌ ಗಾಯಿತ್ರಿ ಮಂತ್ರ ಜಪˌ ವೇದ ಪಾರಾಯಣ ತಪ್ಪದೆ ಮಾಡುತ್ತೇವೆ* *ಅದನ್ನು ನಿಮ್ಮ ಜನರೂ ಮಾಡುತ್ತಿರುವರು.* 

ಅದರಲ್ಲಿ ನಮ್ಮ ತಪ್ಪೇನಿದೆ?


*ಆದರೆ ನಾವೆಂದೂ ನಿಮ್ಮ ಆಚರಣೆಗಳನ್ನು ಮಾಡುವುದಿಲ್ಲ. ನೀವು ನಿಮ್ಮ ಸಂಪ್ರದಾಯದಂತೆ ವಚನ ಪಠಣ ಮಾಡುವದಿಲ್ಲ. ಬದಲಾಗಿ ನಮ್ಮ ಸಾಂಪ್ರದಾಯದ ಸತ್ಯನಾರಾಯಣ/ವರದಾ ಶಂಕರ ಪೂಜೆ ಮಾಡುತ್ತೀರಿ. ಅದಕ್ಕೆ ನಾವು ಜವಾಬ್ಧಾರರಲ್ಲ.*


೩. *ನಮ್ಮ ಸಮುದಾಯದಲ್ಲಿ ಮಗು ನಡೆಯಲು ಕಲಿತಾಗ ಅನ್ನ ಪ್ರಾಸನˌ ಅಕ್ಷರ ಕಲಿಕಾ ಶಾಸ್ತ್ರ ˌ ಮುಂಜಿವೆಗಳುˌ ಮುದ್ರಾ ಧಾರಣೆ ಮುಂತಾದ ಧಾರ್ಮಿಕ ಸಂಸ್ಕಾರಗಳನ್ನು ಕಲಿಸುತ್ತೇವೆ. ಆ ಮಗು ತನ್ನ ತಂದೆಯ ಕೈಬೆರಳುಗಳನ್ನು ಹಿಡಿದುಕೊಂಡು ಸಂಧ್ಯಾವಂದನೆˌ  ರಾಯರ ಗುಡಿ ದರ್ಶನ ಮಾಡುತ್ತದೆ. ಮತ್ತು ಈ ಆಚರಣೆಗಳು ತನ್ನ ಜೀವಮಾನದ ಕರ್ತವ್ಯವೆಂದು ಪರಿಗಣಿಸುತ್ತಾನೆ*


 ಆದರೆ *ನೀವು ನಿಮ್ಮ ಲಿಂಗ ದೀಕ್ಷೆˌ ಲಿಂಗಧಾರಣೆˌ ಲಿಂಗಪೂಜೆಗಳನ್ನು ಮಾಡುವುದು ನಿಲ್ಲಿಸಿದ್ದೀರಿ. ಈಗ ನಿಮ್ಮ ಮಕ್ಕಳಿಗೆ ನಿಮ್ಮ ಧರ್ಮದ ಸಂಸ್ಕಾರಗಳೆ ಇಲ್ಲ. ಅವು ಜೈ ಬಸವಣ್ಣ ಅನ್ನಬೇಕಾದವು ಜೈ ಶ್ರೀರಾಮ ಅನ್ನುತ್ತಿವೆ* *ನೀವು  ನಿಮ್ಮ ಧರ್ಮದ ಬಗ್ಗೆ ನಿಮ್ಮ ಮಕ್ಕಳಿಗೆ ತಿಳಿ ಹೇಳದೆ ನಮ್ಮ ಧರ್ಮದ ಆಚರಣೆಗಳು ಮಾಡುತ್ತಾ ಇದ್ದರೆ ಅದರಲ್ಲಿ ನಮ್ಮ ತಪ್ಪೇನಿದೆ?*


 ೪. *ಕಾನ್ವೆಂಟ್ ಶಾಲೆಗಳಲ್ಲಿ ಓದಿದ ನಂತರ ನಿಮ್ಮ ಮಕ್ಕಳು ಲಿಂಗಧಾರಣೆಯನ್ನೇ ಮರೆಯುತ್ತಾರೆ. ಆದರೆ ನಮ್ಮ ಮಕ್ಕಳು ವಿದೇಶಕ್ಕೆ ಹೋದರೂ ಗೀತಾ ಶ್ಲೋಕಗಳನ್ನು ಪಠಿಸುವˌ ಸಂಧ್ಯಾವಂದನೆ ಮಾಡುವ ಅಥವಾ ಜನಿವಾರ ಧರಿಸುವುದನ್ನು ಎಂದಿಗೂ ಮರೆಯುವುದಿಲ್ಲ* *ನಮ್ಮ ಮನೆಯಲ್ಲಿ ಒಂದು ಮಗು ನಮ್ಮ ಸಂಬಂಧಿಕರ ಮುಂದೆ ವೇದ ಪಠಣ ಮಾಡಲು ಸಾಧ್ಯವಾಗದಿದ್ದರೆ ನಾವು ನಾಚಿಕೆಪಡುತ್ತೇವೆ. ಆದರೆ ನಿಮ್ಮ ಮಗು ವಚನ ಪ್ರಾರ್ಥನೆಯನ್ನು ಮಾಡುವುದೇಯಿಲ್ಲ* *ನಮ್ಮ ಮನೆಗಳಲ್ಲಿ ಮಗು ಮಾತನಾಡಲು ಪ್ರಾರಂಭಿಸಿದಾಗ, ನಾವು ಹಿರಿಯರಿಗೆ "ರಾಮ್ ರಾಮ್" ಹೇಳಲು ಕಲಿಸುತ್ತೇವೆ.  ಆದರೆ *ನೀವು ಶರಣು ಶರಣಾರ್ಥಿಯ ಬದಲಿಗೆ ಹಲೋ, ಹಾಯ್ ಎಂದು ಹೇಳಲು ಕಲಿಸುತ್ತೀರಿ* ಹಾಗಾದರೆ ಇದಕ್ಕೆ ನಾವು ಹೇಗೆ ಹೊಣೆಯಾಗುತ್ತೇವೇ?


೫. *ನಮ್ಮ ಮಕ್ಕಳು ಕಾನ್ವೆಂಟ್‌ನಿಂದ ಹಿಂತಿರುಗಿದ ನಂತರ ಸಂಸ್ಕೃತ ಕಲಿಯುತ್ತಾರೆ ಮತ್ತು ನಮ್ಮ ಧಾರ್ಮಿಕ ಪುಸ್ತಕಗಳನ್ನು ಓದಲು ಪ್ರಾರಂಭಿಸುತ್ತಾರೆ.  *ನಿಮ್ಮ ಮಕ್ಕಳು ವಚನಗಳನ್ನು ಓದುವುದಿಲ್ಲ. ಅವರಿಗೆ ಶರಣ ಸಂಸ್ಕೃತಿ ಗೊತ್ತಿಲ್ಲ, ಅವನ ಸ್ವಂತ ಮಾತೃಭಾಷೆಯಲ್ಲಿಯೂ ಅವನು ಪರಿಣತನಲ್ಲ.*  ಇದರಲ್ಲಿ ನಮ್ಮ ತಪ್ಪೇನಿದೆ?


 ೬. *ನೀವು ನಾಗರಿಕತೆ, ಇತಿಹಾಸ, ಸಂಪ್ರದಾಯಗಳು ಇತ್ಯಾದಿ ಎಲ್ಲವನ್ನೂ ಹೊಂದಿದ್ದೀರಿ. ಆದರೆ ನೀವು ಅವುಗಳನ್ನೆಲ್ಲಾ ಕುರುಡು ಆಧುನಿಕತೆಯ ಹೆಸರಿನಲ್ಲಿ ತ್ಯಾಗ ಮಾಡಿದ್ದೀರಿ.*  ಆದರೆ *ನಾವು ಅವನ್ನು ಮರೆತಿಲ್ಲ. ಅದೇ ನಮ್ಮ ನಿಮ್ಮ ನಡುವಿನ ವ್ಯತ್ಯಾಸ. ನಿಮ್ಮ ಬೇರುಗಳೊಂದಿಗಿನ ಸಂಬಂಧವನ್ನು ನೀವು ಮುರಿದಿದ್ದೀರಿ.  ಆದರೆ ನಾವು ನಮ್ಮ ಬೇರುಗಳನ್ನು ಬಿಡಲು ಯಾವಾಗಲೂ ಬಯಸುವುದಿಲ್ಲ* ಅದರಲ್ಲಿ ನಮ್ಮ ತಪ್ಪೇನಿದೆ?


 ೭ *ಒಂದು ಸಮುದಾಯವು ತನ್ನ ಗುರುತನ್ನು ರಕ್ಷಿಸಿಕೊಳ್ಳಲು ಸ್ವಾಭಾವಿಕವಾಗಿ ಎಚ್ಚರವಾಗಿರಬೇಕು. ಆದರೆ ದುರದೃಷ್ಟವಶಾತ್ *ನೀವು ಈಗ ನಿಮ್ಮ ಧರ್ಮವನ್ನೆ ಮನವರಿಕೆ ಮಾಡಿಕೊಳ್ಳದ ದಯನೀಯ ಸ್ಥಿತಿಯಲ್ಲಿದ್ದೀರಿ.*  *ನಿಮ್ಮ ಸಂಪ್ರದಾಯಗಳನ್ನು ಮರೆತು ನೀವು ವೈದಿಕ ಸಂಪ್ರದಾಯಗಳ ದಾಸರಾಗಿದ್ದಿರಿ* *ನಿಮ್ಮ ನಾಗರಿಕತೆಯ ನಾಶದ ಭಯ ಮತ್ತು ಅಭದ್ರತೆಯ ಭಾವನೆಗೆ ನಿಜವಾದ ಕಾರಣಗಳು ಯಾವುವು ಎಂದು ಯೋಚಿಸಿ.* ಅದಕ್ಕೆ ಖಂಡಿತ ಕಾರಣ ನಾವಲ್ಲ.


೮. *ನಾವು ನಮ್ಮ ದೇವರನ್ನು ಬಿಟ್ಟು ಬೇರೆ ಧರ್ಮದ ದೇವರುಗಳಿಗೆ ಹೋಗುವುದಿಲ್ಲ. ನಾವು ನಮ್ಮ ಸಾಂಪ್ರದಾಯದಂತೆ ಮದುವೆˌ ಮುಂಜಿ ಮಾಡುತ್ತೇವೆ. ನಾವು ನಿಮ್ಮ ಧರ್ಮದ ಬಸವರಾಜˌ ಸಿದ್ದಲಿಂಗ ಮುಂತಾದ ಹೆಸರುಗಳನ್ನು ನಮ್ಮ ಮಕ್ಕಳಿಗೆ ಇಡುವುದಿಲ್ಲ* *ಆದರೆ ನೀವು ನಿಮ್ಮ ಧರ್ಮದ ದೇವರುಗಳನ್ನು ಮರೆತು ನಮ್ಮ ಧರ್ಮದ ದೇವರುಗಳನ್ನು ನಡೆದುಕೊಳ್ಳುತ್ತೀರಿ. ನಮ್ಮ ಸಾಂಪ್ರದಾಯಗಳನ್ನು ಪಾಲಿಸುತ್ತಿರಿ. ನಮ್ಮ ದೇವರ ಹೆಸರುಗಳಾದ ಶ್ರೀನಿವಾಸˌ ರಾಮˌ ಕೃಷ್ಣ ˌ ರಾಘವೇಂದ್ರ ಮುತಾದ ಹೆಸರುಗಳನ್ನು ಇಡುತ್ತೀರಿ* ಅದರಲ್ಲಿ ನಮ್ಮ ತಪ್ಪೇನಿದೆ?


೯. *ನಾವು ನಿಮ್ಮ ಧರ್ಮದ ಆಚರಣೆಗಳಾದ ಲಿಂಗಪೂಜೆ ಮುಂತಾದವುಗಳನ್ನು ಮಾಡುವುದಿಲ್ಲ* *ಆದರೆ ನೀವು ನಮ್ಮ ಸಾಂಪ್ರದಾಯಗಳಾದ ಲಕ್ಷ್ಮಿ ಪೂಜೆˌ ಗಣಪತಿ ಪೂಜೆˌ ಹೋಮ-ಹವನ ಮುಂತಾವ ವೈದಿಕ ಆಚರಣೆಗಳು ಮಾಡುತ್ತೀರಿ* ಅದರಲ್ಲಿ ನಮ್ಮ ತಪ್ಪೇನಿದೆ?


೧೦. ನಿಜವಾದ ಸಮಸ್ಯೆ ಏನೆಂದರೆ *ನಿಮ್ಮ ಸಮುದಾಯವು ಜಾಗೃತಗೊಳ್ಳಬೇಕೆಂದು ನೀವು ಬಯಸುತ್ತೀರಿ, ಆದರೆ ನೀವೇ ಆ ಸಂಪ್ರದಾಯವನ್ನು ಪಾಲಿಸುವುದಿಲ್ಲ.*    ಆದ್ದರಿಂದ *ನಿಮ್ಮ ಸ್ವಂತ ಕುಟುಂಬದ ಸದಸ್ಯರು ನಿಮ್ಮ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುವುದಿಲ್ಲ. ನಿಮ್ಮ ಸಮುದಾಯದ ಜನರಿಗೆ ನಿಮ್ಮ ಲಿಂಗಾಯತ ಧರ್ಮ ವೈದಿಕ ಧರ್ಮವನ್ನು ವಿರೋಧಿಸಿ ಹುಟ್ಟಿದ್ದು ಎನ್ನುವ ಅರಿವೆ ಇಲ್ಲ*  ಇದರಲ್ಲಿ ನಮ್ಮ ತಪ್ಪೇನಿದೆ?


೧೧. *ನೀವಾಗಲಿ ನಿಮ್ಮ ಮಠಾಧೀಶರಾಗಲಿ ನಮ್ಮ ಮಠಕ್ಕೆ ಬರಲಿ ಇಲ್ಲವೆ ನಮ್ಮ ಮನೆಗೆ ಬರಲಿ ನಾವು ಅವರೊಂದಿಗೆ ಸಹ ಪಂಕ್ತಿ ಭೋಜನ ಮಾಡುವುದಿಲ್ಲ. ಆದರೂ ನಿಮಗೆ ಸ್ವಾಭಿಮಾನ ಕಾಡುವುದಿಲ್ಲ* *ನಿಮ್ಮ ಮಠಾಧೀಶರಿಗಂತೂ ನಿಮ್ಮ ಧರ್ಮದ ಬಗ್ಗೆ ಅಭಿಮಾನವೇ ಇಲ್ಲ. ಅವರು ತಮ್ಮ ಮಠಗಳಲ್ಲಿ ನಿಮ್ಮ ಧರ್ಮದ ಸಾಂಪ್ರದಾಯ ಆಚರಿಸದೆ ನಮ್ಮ ವೈದಿಕ ಸಾಂಪ್ರದಾಯ ಆಚರಿಸುತ್ತಾರೆ.* *ನಿಮ್ಮ ಮಠಾಧೀಶರಿಗೆ ನೀವು ಇದನ್ನು ಮನವರಿಕೆ ಮಾಡಿ ಕೊಡಬೇಕು.* ಅವರ ಅಜ್ಞಾನಕ್ಕೆ ನಾವು ಹೇಗೆ ಕಾರಣ?


 ೧೨. *ಹಲವು ದಶಕಗಳಿಂದ ನಿಮ್ಮ ಲಿಂಗಾಯತ ಧರ್ಮದ ಅಸ್ಮಿತೆಯನ್ನು ನಾಶಪಡಿಸುವಲ್ಲಿ ನೀವೇ ಪೈಪೋಟಿ ನಡೆಸುತ್ತಿದ್ದೀರಿ.  ಈಗಂತೂ ಅದನ್ನೇ ಮಾಡುತ್ತಿದ್ದೀರಿ.*  ಆದರೆ *ನಾವು ನಮ್ಮ ಸಾಂಪ್ರದಾಯ, ಆಚರಣೆˌ ಉಡುಗೆˌ ನಮ್ಮ ಗುರುತನ್ನು ಉಳಿಸಿಕೊಳ್ಳುವಲ್ಲಿ ನಾವು ಈಗಲೂ ಯಶಸ್ವಿಯಾಗಿದ್ದೇವೆ. ನೀವು ನಮ್ಮನ್ನು ನೋಡಿ ಕೆಟ್ಟದಾಗಿ ಭಾವಿಸುತ್ತೀರಿ !  ನೀವು ನಮ್ಮ ಬಗ್ಗೆ ಅಸೂಯೆಪಡುತ್ತೀರಿ! ಆದರೆ *ನಿಮ್ಮ ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ನೀವು ವಿಫಲರಾಗಿದ್ದರೆ ಅದಕ್ಕೆ ಕಾರಣ ನಿಮ್ಮ ಮೂರ್ಖತನˌ ವೈಫಲ್ಯ ಮತ್ತು ನಿರ್ಲಕ್ಷ್ಯಗಳೆ ಕಾರಣ* ನಮ್ಮ ಮೇಲೆ ಏಕೆ ಕೋಪವನ್ನು ತೋರಿಸುತ್ತೀರಿ? 


೧೩. ಇತರ ಸಮುದಾಯಗಳನ್ನು ನೋಡಿ ವಿಚಲಿತರಾಗುವ ಬದಲು, *ನಿಮ್ಮ ಸಂಪ್ರದಾಯಗಳಲ್ಲಿ ನಂಬಿಕೆಯನ್ನು ಹೇಗೆ ಕಾಪಾಡಿಕೊಳ್ಳಬೇಕು, ಅವುಗಳಲ್ಲಿ ಹೇಗೆ ಹೆಮ್ಮೆ ಪಡಬೇಕು ಮತ್ತು ಎಚ್ಚರದಿಂದ ಅವುಗಳನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ನೀವು ಕಲಿಯುವುದು ಅವಶ್ಯಕ.* *ನಿಮ್ಮ ಐಡೆಂಟಿಟಿ ನೀವು ಕಾಪಾಡಿಕೊಳ್ಳುವಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ.  ಆದರೆ *ನೀವು ಅದನ್ನು ರಕ್ಷಿಸಿಕೊಳ್ಳುವ ಬದಲಿಗೆ ನಮ್ಮ ವೈದಿಕ ಸಾಂಪ್ರದಾಯಗಳ ದಾಸರಾಗಿ ನಿಮ್ಮ ಲಿಂಗಾಯತ ಸಾಂಪ್ರದಾಯಗಳನ್ನು ನಾಶಮಾಡಲು ಹೊರಟಿದ್ದೀರಿ.* 


 ೧೪. *ನಿಮ್ಮ ಧರ್ಮದ ಗುರುತಿಗಳಾದ ವಿಭೂತಿˌ ರುದ್ರಾಕ್ಷಿ ˌ ಲಿಂಗಪೂಜೆಗಳ ಬಗ್ಗೆ ಹೆಮ್ಮೆಪಡಿ. ನಮ್ಮ ವೈದಿಕ ಸಾಂಪ್ರದಾಯಗಳನ್ನು ಮರೆತು ನಿಮ್ಮ ಸಮುದಾಯದಲ್ಲಿ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ.*


೧೫. *ನೀವು ಮತ್ತು ನಿಮ್ಮ ಸಮುದಾಯ ಬುದ್ಧಿವಂತರು ಎಂದು ನೀವು ಪರಿಗಣಿಸಿದರೆ, ನಿಮ್ಮ ಬುದ್ಧಿವಂತಿಕೆಯನ್ನು ಬಳಸಿ ಮತ್ತು ಅದರ ಉಪಸ್ಥಿತಿಯನ್ನು ಪ್ರದರ್ಶಿಸಿ.**

🙏*******************🙏


👆 *ಲಿಂಗಾಯತರಿಗೆ*  *ಬ್ರಾಹ್ಮಣರಿಂದ ಇದೊಂದು ಚಾಟಿ ಏಟು* ಇದನ್ನು ಒಂದು ಪಾಠವೆಂದು ನಾವು ತಿಳಿದುಕೊಳ್ಳಬೇಕು. ಅಲ್ಲದಿದ್ದಲ್ಲಿ ನಮ್ಮ ಸರ್ವನಾಶಕ್ಕೆ ನಾವೇ ಹಾಕಿಕೊಂಡ ದಾರಿ.

Wednesday, April 5, 2023

ಕನ್ನಡದ ಮಹಿಳಾ ಸಾಹಿತ್ಯ ಲೋಕವನ್ನು ಬೆಳಗಿದ ಜಗನ್ಮಾತೆ ಅಕ್ಕಮಹಾದೇವಿ

 ಕನ್ನಡದ ಮಹಿಳಾ ಸಾಹಿತ್ಯ ಲೋಕವನ್ನು ಬೆಳಗಿದ ಜಗನ್ಮಾತೆ ಅಕ್ಕಮಹಾದೇವಿ


 ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರಿಪ್ಪತ್ತು ವಚನ
 ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ         ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಅಯ್ದು ವಚನ
  ಅಜಗಣ್ಣನ ಅಯ್ದು ವಚನಕ್ಕೆ ಕೂಡಲಚೆನ್ನಸಂಗಮದೇವಾ
  ಮಹಾದೇವಿಯಕ್ಕಗಳದೊಂದೆ ವಚನ

ಚಿನ್ಮಯಜ್ಞಾನಿ ಚನ್ನಬಸವಣ್ಣನವರ ವಚನ ಕನ್ನಡ ನಾಡಿನ ಪ್ರಥಮ ಕವಯಿತ್ರಿ ಎಂಬ ಹಿರಿಮೆಗೆ ಭಾಜನರಾದ ದಿಟ್ಟ ಹೆಜ್ಜೆ, ಧೀರ ನುಡಿಯ ಜಗನ್ಮಾತೆ ಅಕ್ಕಮಹಾದೇವಿಯವರ ಸಾಮರ್ಥ್ಯವನ್ನು ಬಿಂಬಿಸುತ್ತದೆ. ವಚನ ಸಾಹಿತ್ಯವೆಂದ ಕೂಡಲೇ ಪುರುಷರಲ್ಲಿ ಮೊದಲು ನೆನಪಾಗುವ ಹೆಸರು ಬಸವಣ್ಣನವರಾದರೆ, ಸ್ತ್ರೀಯರಲ್ಲಿ ಮೊದಲು ನೆನಪಾಗುವ ಹೆಸರು ಅಕ್ಕಮಹಾದೇವಿ. ಅರಸೊತ್ತಿಗೆಯನ್ನು ಧಿಕ್ಕರಿಸಿ, ಬ್ರಹ್ಮಚರ್ಯವನ್ನು ಪಾಲಿಸಿ ಜಗತ್ತಿನಲ್ಲಿ ಯಾವ ಹೆಣ್ಣು ಸಾಧಿಸಲಾರದ ಮಹಾಸಾಧನೆಯನ್ನು ಮಾಡಿ ವಿಶ್ವದ ಪ್ರಥಮ ಸಂಸತ್ತು ಎಂದು ಕರೆಯಲ್ಪಡುವ ಅನುಭವಮಂಟಪದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುಗಳಿಂದ ‘ವಿಶ್ವ ಸ್ತ್ರೀ ಕುಲದ ಜ್ಯೋತಿ’ ಎಂದು ಹೊಗಳಿಸಿಕೊಂಡವರು ಅಕ್ಕ. ಇವರ ಜೀವನ ದರ್ಶನವನ್ನು ಪರಿಚಯ ಮಾಡಲು ದಿನ, ತಿಂಗಳು, ವರ್ಷ ಕಳೆದರೂ ಸಾಲದು. ಆದರೂ ಸಾಸಿವೆಯಲ್ಲಿ ಸಾಗರವನ್ನು ಅಡಗಿಸುವ ಕೌಶಲ್ಯದಂತೆ ಅಕ್ಕನ ವ್ಯಕ್ತಿತ್ವದ ಸಂಕ್ಷಿಪ್ತ ಪರಿಚಯವನ್ನು “ಕನ್ನಡದ ಮಹಿಳಾ ಸಾಹಿತ್ಯ ಲೋಕವನ್ನು ಬೆಳಗಿದ ಜಗನ್ಮಾತೆ ಅಕ್ಕಮಹಾದೇವಿ” ಎಂಬ ಶೀರ್ಷಿಕೆಯಡಿಯಲ್ಲಿ ಮಾಡಿಕೊಡಲು ಪ್ರಯತ್ನಿಸುವೆ.

ಕರ್ನಾಟಕ ರಾಜ್ಯ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ತಾಲ್ಲೂಕಿನಲ್ಲಿ ‘ಉಡುಗಣಿ’ ಅಥವಾ ಉಡುತಡಿ ಪಟ್ಟಣದಲ್ಲಿ ವಾಸವಾಗಿದ್ದ ಓಂಕಾರಶೆಟ್ಟಿ ಮತ್ತು ಲಿಂಗಮ್ಮ (ನಿರ್ಮಲಶೆಟ್ಟಿ ಮತ್ತು ಸುಮತಿ)ರವರು ಯಾವಾಗಲೂ ಶಿವನ ಚಿಂತೆ ಶಿವನ ಧ್ಯಾನದಲ್ಲಿ ಕಾಲ ಕಳೆಯುತ್ತಿದ್ದರು. ಕೆಲವು ಕಾಲದ ನಂತರ ಹುಣ್ಣಿಮೆಯ ಪೂರ್ಣಚಂದ್ರನಂತೆ ದವನದ ಹುಣ್ಣಿಮೆಯ ದಿನ ಮಹಾದೇವಿ ಜನ್ಮತಾಳಿದಳು. ಅಕೆಯ ಹುಟ್ಟು ಹೆಸರು ಮಹಾದೇವಿ. ಎಳೆಯ ವಯಸ್ಸಿನಲ್ಲಿಯೇ ದೈವೀಲೀಲೆಗಳನ್ನು ಪ್ರದರ್ಶಿಸುವುದನ್ನು ದಂಪತಿಗಳಿಬ್ಬರೂ ಕಣ್ತುಂಬ ನೋಡಿ ಹರ್ಷಭರಿತರಾಗುತ್ತಾರೆ. ಉಡುತಡಿಯ ಜ್ಞಾನನಿಧಿಗಳಾಗಿದ್ದ ಶ್ರೀ ಗುರುಲಿಂಗದೇವರು ಮಹಾದೇವಿಗೆ ಶಿಕ್ಷಣ ನೀಡುತ್ತಾರೆ. ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ಪ್ರೌಢಿಮೆಯನ್ನು ಸಂಪಾದಿಸಿ ಶ್ರೀ ಗುರುಲಿಂಗದೇವರಿAದಲೇ ಲಿಂಗದೀಕ್ಷೆಯನ್ನು ಪಡೆಯುತ್ತಾಳೆ. ದೀಕ್ಷಾ ಸಂಸ್ಕಾರ ಹೊಂದಿದ ಅಕ್ಕನ ಕೊರಳಲ್ಲಿ ರುದ್ರಾಕ್ಷಿ ಮತ್ತು ಲಿಂಗ, ಮಸ್ತಕದ ಮೇಲೆ ವಿಜೃಂಭಿಸುವ ಭಸ್ಮ, ಗಂಧದ ಬೊಟ್ಟು ಈಕೆಯ ಆಭರಣಗಳು, ಉಡುತಡಿಯಲ್ಲಿರುವ ಗುರುಲಿಂಗದೇವರ ಮಠಕ್ಕೆ ಹೋಗಿ ಪ್ರವಚನ ಕೇಳುವುದು, ಊರ ಹತ್ತಿರದಲ್ಲಿಯೇ ಇದ್ದ ಮಲ್ಲಯ್ಯನ ಗುಡಿಗೆ ಹೋಗಿ ಲಿಂಗವ ಪೂಜಿಸುತ್ತಾ ಶಿವಚಿಂತೆ, ಶಿವಧ್ಯಾನದಲ್ಲಿ ಕಾಲ ಕಳೆಯುತ್ತಿರಬೇಕಾದರೆ ಆಕೆಯ ಅಂತರಾಳದಿAದ ವಚನಗಳು ನಿರರ್ಗಳವಾಗಿ ಹೊರಬೀಳಲು ಪ್ರಾರಂಭವಾದವು. ಶರಣಸತಿ-ಲಿಂಗಪತಿಯಾಗಿ ದೇವನನ್ನು ಆರಾಧಿಸುತ್ತಾ ಸಾಗಿದಂತೆ ಆಕೆಗೆ ಆಧ್ಯಾತ್ಮಿಕ ವಿರಹ ವೇದನೆ ಪ್ರಾರಂಭಿಸಿತು.
ಹುಲುಬಾಳಿನ ಹುಲ್ಲುಮೊರಡಿಯನ್ನುಳಿದು ಪರಮಾನುಭವದ ಗಿರಿಯಲ್ಲಿ ನಲಿವ ನವಿಲಾಗಿ, ಕಿರಿವಳ್ಳವನ್ನುಳಿದು ತಿಳಿವಿನ ಕೊಳದಲ್ಲಿ ತೇಲುವ ಹಂಸೆಯಾಗಿ, ಮಹತ್ತಿನ ಮಾಮರದಲ್ಲಿ ಸ್ವರಗೈವ ಕೋಗಿಲೆಯಾಗಿ, ಪರಮಾತ್ಮನೇ ಪತಿಯೆಂಬ ಪವಿತ್ರ ಸಂಕಲ್ಪದ ಪುಷ್ಪಕ್ಕೆಳೆಸುವ ಭ್ರಮರದ ರೀತಿ ವಿಹರಿಸುತ್ತಾ ಶಿವನನ್ನು ಪೂಜಿಸುತ್ತಾ ಅವನನ್ನೇ ಧ್ಯಾನಿಸುತ್ತಾ ಅವನನ್ನೇ ವರಿಸುವ ಹಂತಕ್ಕೆ ತಲುಪಿದ್ದಳು ಎಂಬುದು ಅಕ್ಕನ ಅನೇಕ ವಚನಗಳಲ್ಲಿ ಕಾಣಬಹುದು.
             ಹರನೇ ನೀನೆನಗೆ ಗಂಡನಾಗಬೇಕೆAದು
             ಅನಂತಕಾಲ ತಪಿಸಿದ್ದೆ ನೋಡಾ
             ಹಸೆಯ ಮೇಲಣ ಮಾತ ಬೆಸಗೊಳಲಟ್ಟಿದರೆ 
             ಶಶಿಧರನ ಹತ್ತಿರಕ್ಕೆ ಕಳುಹಿಸಿದರೆಮ್ಮವರು
             ಭಸ್ಮವನೇ ಹೂಸಿ ಕಂಕಣವನೇ ಕಟ್ಟಿದರು
             ಚೆನ್ನಮಲ್ಲಿಕಾರ್ಜುನಯ್ಯಾ ನನಗೆ ನೀನಾಗಬೇಕೆಂದು

ಹೀಗೆ ಅಕ್ಕ ಯೌವನಕ್ಕೆ ಬಂದಾಗ ಸಖಿಯರು ಕಾಡಿಸಿ ಪೀಡಿಸಿ ನಿನ್ನ ಪ್ರಿಯತಮ ಯಾರು ಎಂದು ಪ್ರಶ್ನಿಸಿದಾಗ ಅಕ್ಕ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ ನಾನು ಮದುವಣಿಗಿ ಎಂಬ ಉತ್ತರ ನೀಡುತ್ತಾಳೆ. ಮತ್ತೆ ಸಖಿಯರು ಪರಶಿವನನ್ನು ಅಂತರಂಗದ ಆರಾಧ್ಯದೈವನಾಗಿಸಿಕೊಂಡು ಲೌಕಿಕವಾಗಿ ಗಂಡನೊಬ್ಬನ ಕೈಹಿಡಿಯಬಹುದಲ್ಲವೇ?  ಎಂದಾಗ ಅಕ್ಕ

 ಇಹಕ್ಕೊಬ್ಬ ಗಂಡನೆ ಪರಕ್ಕೊಬ್ಬ ಗಂಡನೆ ?
 ಲೌಕಿಕಕ್ಕೊಬ್ಬ ಗಂಡನೆ ಪಾರಮಾರ್ಥಕ್ಕೊಬ್ಬ ಗಂಡನೆ ? 
 ಎನ್ನ ಗಂಡ ಚೆನ್ನಮಲ್ಲಿಕಾರ್ಜುನ ದೇವರಲ್ಲದೆ ಮಿಕ್ಕಿನ ಗಂಡರೆಲ್ಲ 
 ಮುಗಿಲ ಮರೆಯ ಬೊಂಬೆಯಂತೆ ಎನ್ನುತ್ತಾಳೆ.

  ಅಂದು ಉಡುತಡಿಯಲ್ಲಿ ಹಬ್ಬ. ಜನರಲ್ಲಿ ಉತ್ಸಾಹ ಮತ್ತು ಉಲ್ಲಾಸ ಏಕೆಂದರೆ ಕೌಶಿಕ ಮಹಾರಾಜ ‘ವೈಹಾಳಿ’ ಬರುವವನಿದ್ದಾನೆ. ಹಬ್ಬದ ಊಟವ ಮಾಡಿ ಉಬ್ಬಿದ ಉತ್ಸಾಹದಿಂದ ಹೊಸ ಬಟ್ಟೆಗಳನ್ನು ತೊಟ್ಟು ಅಕ್ಕ ಮತ್ತು ಅವಳ ಗೆಳತಿಯರು ಮನೆಯ ಉಪ್ಪರಿಗೆಯಲ್ಲಿ ನಿಂತಿದ್ದಾರೆ. ವೈಭವದ ಮೆರವಣಿಗೆಯ ಇಕ್ಕೆಲಗಳಲ್ಲಿ ಜನಸ್ತೋಮ. ಆನೆಯ ಮೇಲೆ ಕುಳಿತ ಕೌಶಿಕ ಮಹಾರಾಜ ತನ್ನ ನೋಡಲು ನೆರೆದಂತಹ ಜನಸಮೂಹಕ್ಕೆ ಪ್ರತಿವಂದಿಸಿ ಪುರದ ಉಪ್ಪರಿಗೆಗಳ ಕಡೆ ದೃಷ್ಟಿಯನ್ನು ಬೀರುತ್ತಾ ಬರುವಾಗ ಕೌಶಿಕನ ಕಣ್ಣು ಉಪ್ಪರಿಗೆಯ ಮೇಲೆ ನಿಂತಿದ್ದ ದಿವ್ಯ ಸೌಂದರ್ಯದ ಅಧಿದೇವತೆಯಾದ ಅಕ್ಕನ ಮೇಲೆ ಬೀಳುತ್ತದೆ. ಆಕೆಯ ಸೌಂದರ್ಯಕ್ಕೆ ಮಾರುಹೋಗಿ ದಿಜ್ಞೂಡನಾಗಿ ಕಾಮಾಂಧನಾಗಿ ಲಗುಬಗೆಯಿಂದ ಮೆರವಣಿಗೆ ಮುಗಿಸಿ ಅರಮನೆಗೆ ಹೋಗಿ ಅಕ್ಕನನ್ನು ಮದುವೆಯಾಗಲು ಆತನ ಹೃದಯ ಹಾತೊರೆಯುತ್ತದೆ. ವಿದೂಷಕ ವಸಂತಕನನ್ನು ಕರೆಸಿ ಮಹಡಿಯಲ್ಲಿ ಮಿಂಚಿ ಮಾಯವಾದ ಸೌಂದರ್ಯ ತರುಣಿಯನ್ನು ಮದುವೆಯಾಗ ಬಯಸಿದ್ದೇನೆ. ಆಕೆಯ ತಂದೆ ತಾಯಿ ಒಪ್ಪಿಸಿ ಆಕೆಗೆ ವಸ್ತಾçಭರಣ ನೀಡಿ ಒಪ್ಪಿಸಿ ಕರೆದುಕೊಂಡು ಬಾ ಎನ್ನುತ್ತಾನೆ. ಹೆಗ್ಗಡತಿಯರು ಮಹಾದೇವಿ ಮನೆಗೆ ಬಂದು ಅರಸನ ಅಭಿಲಾಷೆ ತಿಳಿಸಿದಾಗ ಆಕೆಯ ತಂದೆ ತಾಯಿಗಳು ಕಕ್ಕಾಬಿಕ್ಕಿಯಾಗಿ ಮುಂದುಗಾಣದಾದರು. ಏಕೆಂದರೆ ಅಕ್ಕ ಶಿವಭಕ್ತೆ. ರಾಜ ಜೈನಮತಕ್ಕೆ ಸೇರಿದವ ಭವಿ. ರಾಜಾಜ್ಞೆ ಮೀರಿದರೆ ತಲೆದಂಡವಾಗುತ್ತದೆ ಎಂದು ತಿಳಿದು ಅಕ್ಕ ಹಾಗೂ ಅಕ್ಕನ ಗುರುಗಳು ಎಲ್ಲಾ ಸಮಾಲೋಚಿಸಿದ ನಂತರ ಅಕ್ಕ ತನ್ನ ನಿರ್ಧಾರವನ್ನು ಪ್ರಕಟಿಸುತ್ತಾಳೆ.

   ತಾನು ಐದು ವಾರಗಳ ಕಾಲ ವ್ರತವನ್ನು ಆಚರಿಸುತ್ತಿದ್ದೇನೆ. ನಾನು ವಿಧಿಸುವ ಮೂರು ಷರತ್ತುಗಳಿಗೆ ರಾಜ ಬದ್ಧನಾಗಿದ್ದರೆ ಮಾತ್ರ ಅರಮನೆಗೆ ಬರುವುದಾಗಿ ತಿಳಿಸುತ್ತಾಳೆ. ಆ ಷರತ್ತುಗಳೆಂದರೆ
೧. ನಿತ್ಯ ಪೂಜಾದಿ ಆಚರಣೆಗಳಿಗೆ ಅಡ್ಡಿಯಾಗಬಾರದು.
೨. ಗುರು, ಲಿಂಗ ಮತ್ತು ಜಂಗಮ ಸೇವೆಗೆ ಅವಕಾಶ ಇರಬೇಕು.
೩. ಭವಿಯಾದ ರಾಜನು ಶಿವಭಕ್ತನಾಗಬೇಕು.

ರಾಜ ಈ ಷರತ್ತುಗಳಿಗೆ ಸಮ್ಮತಿಸಿ ಆಕೆಯನ್ನು ಅರಮನೆಗೆ ಕರೆದುಕೊಂಡು ಬನ್ನಿ ಎಂದು ಹೇಳುತ್ತಾನೆ. ಆಗ ಅಕ್ಕ ಕೌಶಿಕನ ಅರಮನೆಯನ್ನು ಪ್ರವೇಶಿಸಿ ಆತನ ಖೆಡ್ಡಾದಲ್ಲಿ ಸಿಕ್ಕಿ ತನ್ನ ಆಧ್ಯಾತ್ಮ ಜೀವನ ನೆನೆದು ಅನೇಕ ವಚನಗಳನ್ನು ನುಡಿಯುತ್ತಾಳೆ. ಕೌಶಿಕ ಮಹಾರಾಜ ಅಕ್ಕನಲ್ಲಿರುವ ಆಧ್ಯಾತ್ಮ ಭಾವನೆ ಕಡಿಮೆ ಮಾಡಿ ರಸಿಕ ಭಾವನೆ ಹುಟ್ಟಿಸಲು ಮಾಡಿದ ಪ್ರಯತ್ನಗಳೆಲ್ಲವೂ ನಿಷ್ಫಲಗೊಂಡು ಅಕ್ಕನ ಷರತ್ತುಗಳನ್ನು ಮುರಿಯತೊಡಗುತ್ತಾನೆ.

೧. ಮೊದಲನೆಯದಾಗಿ ಅಕ್ಕ ಇಷ್ಟಲಿಂಗಪೂಜೆಯಲ್ಲಿ ನಿರತಳಾಗಿರಬೇಕಾದರೆ ಧ್ಯಾನಭಂಗ ಮಾಡುತ್ತಾನೆ.
೨. ಎರಡನೆಯದಾಗಿ ಅರಮನೆಗೆ ಬಂದ ಸದ್ಗುರುಗಳಿಗೆ ಅಪಮಾನ ಮಾಡುತ್ತಾನೆ
೩. ಮೂರನೆಯದಾಗಿ ಶಿವಭಕ್ತನಾಗಲು ನಿರಾಕರಿಸುತ್ತಾನೆ.

ರಾಜ ಷರತ್ತುಗಳನ್ನು ಉಲ್ಲಂಘಿಸಿದಾಗ ಅಕ್ಕ ಅರಮನೆಯಿಂದ ಹೊರಟು ನಿಂತಾಗ ಕೌಶಿಕ ಸೀರೆಯ ಸೆರಗು ಹಿಡಿಯುತ್ತಾನೆ. ಆಗ ಅಕ್ಕ
        ಎಮ್ಮೆಗೊಂದು ಚಿಂತೆ, ಸಮ್ಮಗಾರಗೊಂದು ಚಿಂತೆ
        ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ
        ಎನಗೆ ಎನ್ನ ಚಿಂತೆ, ನಿನಗೆ ನಿನ್ನ ಕಾಮದ ಚಿಂತೆ
        ಒಲ್ಲೆ ಹೋಗು, ಸೆರಗ ಬಿಡು ಮರುಳೆ
        ಎನಗೆ ಎಮ್ಮ ಚೆನ್ನಮಲ್ಲಿಕಾರ್ಜುನದೇವರು
        ಒಲಿವರೊ ಒಲಿಯರೊ ಎಂಬ ಚಿಂತೆ

ಅಕ್ಕ ಆತನ ಕಾಮ ಜ್ವರ ಇಳಿಸಿ ‘ಚೆನ್ನಮಲ್ಲಿಕಾರ್ಜುನನ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ ಉಡುಗೆ ತೊಡುಗೆಗಳ ಹಂಗೇಕೋ ಮರುಳೇ’ ಎಂದು ವೈರಾಗ್ಯದ ಸಂಕೇತವಾಗಿ ಕಂಬಳಿ ಹೊದ್ದು ದಟ್ಟಾರಣ್ಯದ ಮಾರ್ಗವಾಗಿ ಕಲ್ಯಾಣದ ಕಡೆ ಪಯಣ ಬೆಳೆಸುತ್ತಾಳೆ.

      ಬೀದರ್ ಜಿಲ್ಲೆಯ ಕಲ್ಯಾಣವನ್ನು ಪ್ರವೇಶಿಸಲು ಅಕ್ಕ ‘ಬಂದವರ ಓಣಿ’ ಗೆ ಬರುತ್ತಾಳೆ. ಅಲ್ಲಮಪ್ರಭು ಮತ್ತು ಬಸವಣ್ಣ ಆಪ್ತಾಲೋಚನೆ ಮಾಡಿ ಅಕ್ಕನನ್ನು ಪರೀಕ್ಷಿಸಲು ಕಿನ್ನರಿ ಬೊಮ್ಮಯ್ಯನನ್ನು ಕಳಿಸುತ್ತಾರೆ. ಕಿನ್ನರಿ ಬೊಮ್ಮಯ್ಯ ಕೇಳಿದ ಪ್ರಶ್ನೆಗೆ ಅಕ್ಕ ತಕ್ಕ ಉತ್ತರ ನೀಡಿದಾಗ ಅಕ್ಕ ತನು, ಮನ, ಪ್ರಾಣ ಗುಣಗಳನ್ನು ಗೆದ್ದು ಮುಂದೆ ಹೋಗಿರುವುದನ್ನು ಅರಿತು ಬೆರಗಾಗಿ ನಾನು ಹುಲಿ ನೆಕ್ಕಿ ಬದುಕಿದೆನು ಎಂದು ಹೇಳಿ ಆಕೆಯನ್ನು ಸ್ತುತಿಸಿ ಕ್ಷಮೆ ಕೋರಿ ಶರಣಾರ್ಥಿಗಳನ್ನು  ಸಮರ್ಪಿಸುತ್ತಾನೆ. ಆಗ ಅಕ್ಕ

              
              ಎನ್ನಂತೆ ಪುಣ್ಯಗೈದವರುಂಟೆ
              ಎನ್ನಂತೆ ಭಾಗ್ಯಗೈದವರುಂಟೆ
              ಕಿನ್ನರನಂತಪ್ಪ ಸೋದರನೆನಗೆ
              ಏಳೇಳು ಜನ್ಮದಲ್ಲಿ ಶಿವಭಕ್ತರೆ ಬಂಧುಗಳೆನೆಗೆ
              ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ


     ಎಂದು ಉದ್ಘರಿಸಿ ತದನಂತರ ಅಕ್ಕ ಬಸವಣ್ಣನವರ ಮಹಾಮನೆ(ಅರಿವಿನ ಮನೆ)ಯನ್ನು ಪ್ರವೇಶಿಸಿ ವಿಶ್ವಗುರುವಿನ ಸ್ಥಾನದಲ್ಲಿ ಪ್ರಕಾಶಿಸುತ್ತಿದ್ದ ಬಸವಣ್ಣನವರನ್ನು ಕಂಡ ಕೂಡಲೇ
              

  ದೇವಲೋಕದವರಿಗೂ ಬಸವಣ್ಣನೇ ದೇವರು
  ಮರ್ತ್ಯಲೋಕದವರಿಗೂ ಬಸವಣ್ಣನೇ ದೇವರು
 ನಾಗಲೋಕದವರಿಗೂ ಬಸವಣ್ಣನೇ ದೇವರು
 ಮೇರುಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ ಬಸವಣ್ಣನೇ           ದೇವರು
  ಚೆನ್ನಮಲ್ಲಿಕಾರ್ಜುನಯ್ಯಾ ನಿಮಗೂ ಎನಗೂ
   ನಿಮ್ಮ ಶರಣರಿಗೂ ಬಸವಣ್ಣನೇ ದೇವರು


ನಾನು ಸಂಗನ ಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು ಎಂದು ಹೇಳಿ ಬಸವಣ್ಣನವರಿಗೆ ಕೃತಜ್ಞತಾಪೂರಿತ ಭಕ್ತಿ ಭಾವನೆಯಿಂದ ನಮಸ್ಕರಿಸಿ ನಂತರ ಅನುಭವಮಂಟಪದ ಕಡೆಗೆ ಹೊರಡುತ್ತಾಳೆ.

ಅನುಭವಮಂಟಪ ಜ್ಞಾನ ಪಾಂಡಿತ್ಯಗಳಿಂದ ಕೂಡಿದ ಪಂಡಿತರ ವಾದದ ಸಂತೆಯಾಗಿರದೆ ಸಜೀವ ಸಾಧಕರ ಪ್ರಯೋಗ ಕ್ಷೇತ್ರವಾಗಿ, ಸದುವಿನಯದ ಸಾಧಕರ ಸೇವಾಮಂದಿರವಾಗಿ, ಕಾಯಕಜೀವಿಗಳ ಕರುಣದ ಕೂಟವಾಗಿ, ಮಹಾಜ್ಞಾನಿಗಳ ತತ್ವಸಮ್ಮೇಳನವಾಗಿತ್ತು. ಅದರ ಅಧ್ಯಕ್ಷರಾದ ಅಲ್ಲಮಪ್ರಭುಗಳು ಶೂನ್ಯಸಿಂಹಾಸನದಲ್ಲಿ ಆಸೀನರಾಗಿದ್ದಾರೆ. ಅಕ್ಕ ಪಕ್ಕ ಸಚೇತನಾ ಶಕ್ತಿ ಬಸವಣ್ಣ, ಚಿನ್ಮಯಜ್ಞಾನಿ ಚನ್ನಬಸವಣ್ಣ, ಶರಣ ಶರಣೆಯರು ವಿಶಾಲವಾದ ಭವ್ಯಮಂಟಪದಲ್ಲಿ ಭಕ್ತಿಭಾವದಿಂದ ಕುಳಿತಿದ್ದಾರೆ. ಅಕ್ಕ ಅನುಭವಮಂಟಪ ಪ್ರವೇಶಿಸಿ ಅಲ್ಲಮಪ್ರಭುಗಳಿಗೆ ಶರಣಾರ್ಥಿಗಳನ್ನು ಸಲ್ಲಿಸಿದಾಗ ಅಲ್ಲಮರು

ಉದಮದದ ಯೌವನವನೊಳಕೊಂಡ ಸತಿ ನೀನು ಇತ್ತಲೇಕೆ ಬಂದೆಯವ್ವ?
ಸತಿಯೆಂದರೆ ಮುನಿವರು ನಮ್ಮ ಶರಣರು
ನಿನ್ನ ಪತಿಯ ಕುರುಹ ಹೇಳಿದರೆ ಬಂದು ಕುಳ್ಳಿರು ಅಲ್ಲದಡೆ ತೊಲಗು ತಾಯೆ
ನಮ್ಮ ಗುಹೇಶ್ವರನ ಶರಣರಲ್ಲಿ ಸನ್ನಿಹಿತವ ಬಯಸುವರೆ
 ನಿನ್ನ ಪತಿ ಯಾರೆಂಬುದ ಹೇಳಾ ಎಲೆ ಅವ್ವ

ಹೀಗೆ ಪ್ರಶ್ನಿಸಿದಾಗ ಅಕ್ಕ ಅನುಭಾವದ ಉತ್ತುಂಗದ  ವಚನಗಳಲ್ಲಿಯೇ ಉತ್ತರ ನೀಡುತ್ತಾಳೆ.

          ಹರನೆ ನೀನೆನಗೆ ಗಂಡನಾಗಬೇಕೆಂದು 
          ಅನಂತಕಾಲ ತಪಿಸಿದ್ದೆ ನೋಡಾ
          ಹಸೆಯ ಮೇಲಣ ಮಾತ ಬೆಸಗೊಳಲಟ್ಟಿದಡೆ
          ಶಶಿಧರನ ಹತ್ತಿರಕೆ ಕಳುಹಿಸಿದರೆಮ್ಮವರು
          ಭಸ್ಮವನೆ ಹೂಸಿ, ಕಂಕಣವನೆ ಕಟ್ಟಿದರು
          ಚೆನ್ನಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದು

ಎಂದಾಗ ಅಲ್ಲಮಪ್ರಭು ನಿನ್ನ ಮಾತಿನ ಚಮತ್ಕಾರವನ್ನು ನಮ್ಮ ಶರಣರು ಮೆಚ್ಚಲಾರರು ಮಹಾದೇವಿ. ನಿನ್ನ ಚರಿತ್ರೆಯನ್ನು ಲೋಕ ತಿಳಿಯದೆಂದು ಭಾವಿಸಬೇಡ. ಲಗ್ನವಾದ ಖೌಶಿಕನ ಮೇಲೆ ತಪ್ಪನ್ನು ಹೊರೆಸಿ ಅರಮನೆಯನ್ನು ಬಿಟ್ಟು ನಿರ್ವಾಣ ಶರೀರಿಯಾಗಿ ಹೊರಟು ಬಂದಿರುವೆ ಎಂಬ ಮಾತು ನಿಜವೇ? ಪತಿಯ ಮೇಲೆ ತಪ್ಪನ್ನು ಹೊರಿಸಿ ಬರುವ ಸತಿಧರ್ಮವನ್ನು ನಮ್ಮ ಶರಣರು ಮೆಚ್ಚಲಾರರು ಎಂದಾಗ ಅಕ್ಕ

        ಗುರುವೆ ತೆತ್ತಿಗನಾದ, ಲಿಂಗವೆ ಮದುವಣಿಗನಾದ
        ನಾನೆ ಮದುವಳಿಗೆಯಾದೆನು ಈ ಭುವನವೆಲ್ಲವರಿಯಲು
        ಅಸಂಖ್ಯಾತರೆನಗೆ ತಾಯಿತಂದೆಗಳು
        ಕೊಟ್ಟರು ಸಾದೃಶ್ಯವಪ್ಪ ವರನ ನೋಡಿ
        ಇದು ಕಾರಣ ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ
  ಮಿಕ್ಕಿನ ಲೋಕದವರೆನಗೆ ಸಂಬAಧವಿಲ್ಲಯ್ಯಾ ಪ್ರಭುವೆ.

 ಎಂದು ಹೇಳಿ ಅಕ್ಕ ನನ್ನ ಜೀವನದಲ್ಲಿ ಕೌಶಿಕನ ಪ್ರಸಂಗ ಒಂದು ದೈವಕೃಪೆಯಂತೆ ಬಂದಿತು ಎಂದು ಹೇಳಿ ಅಲ್ಲಮಪ್ರಭು ಕೇಳಿದ ಪ್ರತಿಯೊಂದು ಪ್ರಶ್ನೆಗೂ ಅನುಭಾವಿಕ ನಿಲುವಿನಲ್ಲಿ ವಚನಗಳ ಮುಖಾಂತರವೇ ಉತ್ತರ ಕೊಟ್ಟಳು. ಇದರಿಂದ ಅಕ್ಕನಿಗೆ ದಾರ್ಶನಿಕ ದಿಗ್ವಿಜಯ ಆಯಿತು. ಅನುಭವ ಮಂಟಪ ಉಸಿರು ಕಟ್ಟಿದ ಹಾಗೆ ಸ್ತಬ್ಧವಾಯಿತು. ನಿಶ್ಶಬ್ದವಾಯಿತು. ಎಲ್ಲಾ ಶರಣರು ಅಕ್ಕನ ದಿಟ್ಟ ನುಡಿಗಳಿಗೆ ತಲೆದೂಗಿದರು. ಎಲ್ಲರಿಂದ ಮೆಚ್ಚುಗೆಯ ಸಿರಿನುಡಿಗಳ ಸುರಿಮಳೆಯಾಯಿತು. ಆಗ ಅಲ್ಲಮರು ಮಹಾದೇವಿಯನ್ನು ಅಕ್ಕ ಎಂದು ಸಂಬೋಧಿಸಿ “ನೀನು ವಿಶ್ವಕುಲದ ಸ್ತ್ರೀ ಜ್ಯೋತಿ, ದಿಟ್ಟ ಹೆಜ್ಜೆ ಧೀರ ನುಡಿಯ ತಾಯಿ, ವಿನಯ ವಿಶ್ವಾಸಗಳ ರತ್ನಗಣಿ” ಎಂದು ಕೊಂಡಾಡುವರು. ಅಕ್ಕನ ಪಾಂಡಿತ್ಯಕ್ಕೆ ಅನುಭವಮಂಟಪದಲ್ಲಿ ಎಲ್ಲರೂ ತಲೆದೂಗಿದರು. 
    ಅಕ್ಕ ನಾಲ್ಕೈದು ವರ್ಷಗಳು ಮಾತ್ರ ಕಲ್ಯಾಣದಲ್ಲಿ ಇದ್ದರೂ ಅವ್ವ ನೀಲವ್ವನ ಮೋಹದ ಮಗಳಾಗಿ, ಅಪ್ಪ ಬಸವಣ್ಣರ ಸುಚಿತ್ತದ ಪುತ್ಥಳಿಯಾಗಿ, ನಿಷ್ಕಳಂಕ ಸದ್ಗುರು ಪ್ರಭುದೇವರ ಸತ್ಯದ ಸೊಸೆಯಾಗಿ, ಚಿಕ್ಕಯ್ಯಪ್ರಿಯ ಸಿದ್ಧಲಿಂಗನೊಡಹುಟ್ಟಿದವಳಾಗಿ, ಚೆನ್ನಮಲ್ಲಿಕಾರ್ಜುನನ ಅರ್ಧಾಂಗಿಯಾಗಿ ಎಲ್ಲಾ ಶರಣ ಶರಣೆಯರ ಮೆಚ್ಚುಗೆಗೆ ಪಾತ್ರವಾದಳು.  ನಂತರ ಅಕ್ಕ ಕಲ್ಯಾಣದಲ್ಲಿ ಕೆಲವು ದಿನ ಕಳೆದು ಅಲ್ಲಮಪ್ರಭುಗಳನ್ನು ಸಾಧನೆಯ ಸ್ಥಳದ ಬಗ್ಗೆ ಕೇಳಿದಾಗ ಅವರು 

       ನೀನು ನಾನು ಎಂಬ ಉಭಯಸಂಗವಳಿದು 
       ತಾನು ತಾನಾದ ತ್ರಿಕೂಟವೆಂಬ ಮಹಾಗಿರಿಯ 
       ತುಟ್ಟತುದಿಯ ಮೆಟ್ಟಿ ನೋಡಲು 
       ಬಟ್ಟಬಯಲು ಕಾಣಬಹುದು ನೋಡಾ !
       ಆ ಬಯಲ ಬೆರಸುವಡೆ ತ್ರಿಕೂಟ 
       ಗಿರಿಯೊಳಗೊಂದು ಕದಳಿಯುಂಟು ನೋಡಾ !
       ಆ ಕದಳಿಯ ತಿಳಿದು ಅಲ್ಲಿ ಒಳಹೊಕ್ಕು ನೋಡಲು 
       ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ!
       ನಡೆ ಅಲ್ಲಿಗೆ ತಾಯೆ ಗುಹೇಶ್ವರ ಲಿಂಗದಲ್ಲಿ 
       ಪರಮಪದವಿ ನಿನಗೆ ಸಯವಪ್ಪುದು ನೋಡಾ 

ಎಂದು ಹೇಳುವರು. ಅಕ್ಕನ ಕಿವಿಗೆ ಶ್ರೀಶೈಲ, ಕದಳಿ, ತ್ರಿಕೂಟ ಎಂಬ ಶಬ್ದಗಳು ತಾಕಿದಾಗ ರೋಮಾಂಚಿತಳಾದಳು. ಅಕ್ಕ ಚಿಕ್ಕಂದಿನಿAದ ಕಾಣುತ್ತಿದ್ದ ಕನಸೇ ಶ್ರೀಶೈಲ. ತ್ರಿಕೂಟ ಗಿರಿಯೊಳಗೊಂದು ಕಾಣಬಾರದ ಕದಳಿ. ಆಹಾ ಅಲ್ಲಿಗೆ ಹೋಗಲೇ ಬೇಕು. ತಡಮಾಡಕೂಡದು. ಕದಳಿಯ ಕರೆ ತ್ವರೆ ತ್ವರೆ. ಅನುಭವ ಮಂಟಪದಲ್ಲಿ ನಿರಾಶೆಯ ನೆರಳು. ಅಕ್ಕನನ್ನು ತಡೆದು ನಿಲ್ಲಿಸುರ‍್ಯಾರು? ಅಲ್ಲಮರೇ ಅನುಮತಿ ನೀಡಿದಾಗ. ಅದೊಂದು ಹೃದಯಸ್ಪರ್ಶಿಯಾದ ಸನ್ನಿವೇಶ. ಅಕ್ಕ ಶರಣೆಯರ ಸಂತೈಸಿ, ಶರಣರಿಗೆ ಶರಣು ಸಮರ್ಪಿಸಿ ಅನುಮತಿ ಪಡೆಯುತ್ತಾಳೆ. ಅಕ್ಕ ಕೆಲವೇ ವರ್ಷ ಕಲ್ಯಾಣದಲ್ಲಿದ್ದರೂ ಎಲ್ಲರಿಗೂ ತುಂಬಾ ಹತ್ತಿರದವಳಾಗಿಬಿಟ್ಟಿದ್ದರು. ಎಲ್ಲರ ಕಣ್ಣಲ್ಲೂ ನೀರು, ಕೆನ್ನೆ ತೊಯ್ದಿವೆ. ಅಗಲಿಕೆಯ ನೋವು, ಅನುಭಾವ ಜ್ಯೋತಿ ಅಗಲುವುದು ಹೇಗೆ? ಅನುಭವ ಮಂಟಪದ ಮಣಿದೀಪವಾಗಿ ಬೆಳಗಿದ ಅಕ್ಕನನ್ನು ಅಗಲುವುದು ಹೇಗೆ? ಮಹಾದೇವಿಯಕ್ಕನಿಗೂ ಕಲ್ಯಾಣದ ಶರಣರ ಬಿಟ್ಟು ಹೋಗುವಾಗ ವೇದನೆ ಉಂಟಾಯಿತು. ಆದರೂ ಹೊರಡಬೇಕು. ಕದಳಿಯ ಕರೆ ಎಳೆಯುತ್ತಲಿದೆ. ಸೆಳೆಯುತ್ತಲಿದೆ. ಅಕ್ಕ ಮೌನ ಮುರಿದು ವಾಣಿಯ ವೀಣೆಯಂತೆ ನುಡಿದಳು. ಹೊರಡುವಾಗ 

       ಹುಟ್ಟಿದೆ ಶ್ರೀ ಗುರುವಿನ ಹಸ್ತದಲ್ಲಿ
       ಬೆಳೆದೆನು ಅಸಂಖ್ಯಾತರ ಕರುಣದೊಳಗೆ
       ಭಾವವೆಂಬ ಹಾಲು, ಸುಜ್ಞಾನವೆಂಬ ತುಪ್ಪ
       ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ
       ಇಂತಪ್ಪ ತ್ರಿವಿಧಾಮೃತವನು ದಣಿಯಲೆರೆದು ಸಲಹಿದಿರೆನ್ನ
       ವಿವಾಹವ ಮಾಡಿದಿರಿ, ಸಯವಪ್ಪ ಗಂಡಂಗೆ ಕೊಟ್ಟಿರಿ
       ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ
       ಬಸವಣ್ಣ ಮೆಚ್ಚಲು ಒಗೆತನವ ಮಾಡುವೆ
       ಚೆನ್ನಮಲ್ಲಿಕಾರ್ಜುನನ ಕೈವಿಡಿದು ನಿಮ್ಮ ಮಂಡೆಗೆ 
       ಹೂವ ತಹೆನಲ್ಲದೆ ಹುಲ್ಲ ತಾರೆನು
       ಅವಧರಿಸಿ, ನಿಮ್ಮಡಿಗಳೆಲ್ಲರೂ ಮರಳಿ ಬಿಜಯಂಗೈವುದು, ಶರಣಾರ್ಥಿ

    ಎಂದು ಹೇಳಿ ಒಂದೊAದೇ ಭಾರವಾದ ಹೆಜ್ಜೆ ಇಡುತ್ತಿದ್ದಾಳೆ. ಅಲ್ಲಿರುವ ಶರಣರಿಗೆ ಮರಳಿ ಹೊರಡಲು ಯಾರಿಗೂ ಚೈತನ್ಯವಿಲ್ಲ. ಕಾಲು ಕೀಳುವ ಮನಸ್ಸಿಲ್ಲದೆ ನಿರ್ಜೀವ ವಸ್ತುಗಳಂತೆ ನಿಂತಲ್ಲಿಯೇ ನಿಂತುಬಿಟ್ಟಿದ್ದಾರೆ. ಅಕ್ಕ ಒಂದೊಂದೇ ಭಾರವಾದ ಹೆಜ್ಜೆ ಇಡುತ್ತಿದ್ದಾಳೆ. ನಿಂತವರೆಲ್ಲಾ ನಿಟ್ಟುಸಿರು ಬಿಟ್ಟು ಅಕ್ಕ ಕಾಣುವವರೆಗೂ ಹುಬ್ಬುಗೈ ಹಚ್ಚಿ ನೋಡುತ್ತಾ ನಿಂತಿದ್ದಾರೆ. ಅಕ್ಕ ಕಾಣದಾದ ಮೇಲೆ ನಿಂತಲ್ಲಿಯೇ ಕುಸಿದು ಕುಳಿತರು. ಕಲ್ಯಾಣದಲ್ಲಿ ನೀರವ ಮೌನ. ಅಕ್ಕ ಕಲ್ಯಾಣದಿಂದ ಕದಳಿಯೆಡೆಗೆ ಹೊರಡುವಾಗ ಹಸಿವು, ತೃಷೆ, ನಿದ್ರೆಗಳು ಕಾಣಿಸಿಕೊಂಡಾಗ

 ಹಸಿವೇ ನೀನು ನಿಲ್ಲು ನಿಲ್ಲು, ತೃಷೆಯೇ ನೀನು ನಿಲ್ಲು ನಿಲ್ಲು 
 ನಿದ್ರೆಯೇ ನೀನು ನಿಲ್ಲು ನಿಲ್ಲು, ಕಾಮವೇ ನೀನು ನಿಲ್ಲು ನಿಲ್ಲು
 ಕ್ರೋಧವೇ ನೀನು ನಿಲ್ಲು ನಿಲ್ಲು, ಮೋಹವೇ ನೀನು ನಿಲ್ಲು ನಿಲ್ಲು
 ಲೋಭವೇ ನೀನು ನಿಲ್ಲು ನಿಲ್ಲು, ಮದವೇ ನೀನು ನಿಲ್ಲು ನಿಲ್ಲು
 ಮಚ್ಚರವೇ ನೀನು ನಿಲ್ಲು ನಿಲ್ಲು, ಸಚರಾಚರವೇ ನೀನು ನಿಲ್ಲು ನಿಲ್ಲು
 ನಾನು ಚೆನ್ನಮಲ್ಲಿಕಾರ್ಜುನದೇವರ
  ಅವಸರದ ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ.

     ಎಂದು ಉದ್ಘಾರ ಮಾಡುತ್ತಾ ಕರ್ನಾಟಕದ ಕಲ್ಯಾಣ ಬಿಟ್ಟು ಆಂದ್ರದ ಶ್ರೀಶೈಲ ಶಿಖರದ ಹತ್ತಿರದ ಆತ್ಮಕೂರಿಗೆ ತಲುಪುತ್ತಾಳೆ. ಅಲ್ಲಿ ಸುತ್ತಮುತ್ತಲ ಬೆಟ್ಟಗಳ ಸಾಲಿನ ಹಚ್ಚ ಹಸಿರು, ಗಿಡ ಬಳ್ಳಿ ಕಂಡು ಅಕ್ಕನ ಆತ್ಮ ಆನಂದಭರಿತವಾಯಿತು. 
     ವನವೆಲ್ಲಾ ನೀನೆ ವನದೊಳಗಣ ದೇವತರುವೆಲ್ಲಾ ನೀನೆ 
     ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ 
     ಚೆನ್ನಮಲ್ಲಿಕಾರ್ಜುನ ಸರ್ವಾಂಗಭರಿತನಾಗಿ 
     ಎನಗೇಕೆ ಮುಖತೋರೆ 
   ಎಂದು ಹೇಳುತ್ತಾ ಅಣುರೇಣು ತೃಣಕಾಷ್ಠಗಳಲ್ಲೂ ತುಂಬಿರುವ ಚೆನ್ನಮಲ್ಲಿಕಾರ್ಜುನನ ಚೈತನ್ಯಕ್ಕೆ ಅಕ್ಕ ಮಾರುಹೋದಳು. ಮುಂದೆ ಭವ್ಯವಾದ ಬೆಟ್ಟದ ಸಾಲುಗಳನ್ನು ಏರುತ್ತಾ ಭೀಕರ ಕೊಳ್ಳಗಳನ್ನಿಳಿಯುತ್ತಾ ಚೆನ್ನಮಲ್ಲಿಕಾರ್ಜುನನ ನಾಮಸ್ಮರಣೆ ಮಾಡುತ್ತಾ ಸಾಗಿದಳು. 

           ಮೂಲದ್ವಾರದ ಬೇರಮೆಟ್ಟಿ, ಭೂಮಂಡಲವನ್ನೇರಿದೆ
           ಆಚಾರದ ಬೇರಹಿಡಿದು ಐಕ್ಯದ ತುದಿಯನೇರಿದೆ
           ವೈರಾಗ್ಯದ ಸೋಪಾನದಿಂದ ಶ್ರೀಗಿರಿಯನೇರಿದೆ
           ಕೈವಿಡಿದು ತೆಗೆದುಕೊಳ್ಳಾ, ಚೆನ್ನಮಲ್ಲಿಕಾರ್ಜುನಾ

   ಎಂದು ಹೇಳುತ್ತಾ ಸಾಗುತ್ತಾಳೆ. ಬಿಸಿಲಿಗೆ ದೇಹ ಬಾಡಿದರೂ ಮುಖ ಮುದುಡಿದರೂ ಸ್ವಲ್ಪವೂ ಕದಲದೆ ನಿಸರ್ಗ ಪ್ರೇಮಿಯಾದ ಅಕ್ಕ ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಕೊAಡು ಪರಮಾತ್ಮನ ಸೃಷ್ಟಿಯನ್ನು ಹೊಗಳುತ್ತಾ ಸಾಗುತ್ತಿರುವಾಗ ಅಂತಿಮವಾಗಿ ಕದಳಿಯ ವನವನ್ನು ಕಂಡಳು.

         ಕದಳಿ ಎಂಬುದು ತನು, ಕದಳಿ ಎಂಬುದು ಮನ
         ಕದಳಿ ಎಂಬುದು ವಿಷಯಂಗಳು
         ಕದಳಿ ಎಂಬುದು ಭವಘೋರಾರಣ್ಯ
         ಈ ಕದಳಿ ಎಂಬುದ ಗೆದ್ದು ತವೆ ಬದುಕಿ ಬಂದು
         ಕದಳಿಯ ಬನದಲ್ಲಿ ಭವಹರನ ಕಂಡೆನು.
         ಭವ ಗೆದ್ದು ಬಂದ ಮಗಳೆಂದು
         ಕರುಣದಿ ತೆಗೆದು ಬಿಗಿದಪ್ಪಿದಡೆ
         ಚೆನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗಿದೆನು.

  ಎಂದು ಉದ್ಘರಿಸುತ್ತಿದ್ದಂತೆ ಅಕ್ಕನಿಗೆ ಕರಣಂಗಳೆಲ್ಲವೂ ಕಳೆಯೇರಿದವು. ಅಂತಿಮವಾಗಿ ಅಕ್ಕ  ಚೆನ್ನಮಲ್ಲಿಕಾರ್ಜುನನಲ್ಲಿ ಇಂಬುಗೊಳ್ಳಲು ಹಂಬಲಿಸಿ
  ಲಿಂಗವೆನ್ನೆ ಲಿಂಗೈಕ್ಯವೆನ್ನೆ, ಸಂಗವೆನ್ನೆ, ಸಮರಸವೆನ್ನೆ
 ಆಯಿತೆನ್ನೆ ಆಗದೆನ್ನೆ, ನೀನೆನ್ನೆ ನಾನೆನ್ನೆ, ಚೆನ್ನಮಲ್ಲಿಕಾರ್ಜುನಯ್ಯಾ 
  ಲಿಂಗೈಕ್ಯವಾದ ಬಳಿಕ ಏನೂ ಎನ್ನೆ 
   ಎಂದು ಉದ್ಘರಿಸುತ್ತಿರುವಾಗ ಅಕ್ಕ ಘನ ಲಿಂಗೈಕ್ಯವಾಗಿ ಮಾತು ಮೌನವಾಗಿ, ಶಬ್ದಮುಗ್ದಳಾಗುತ್ತಾಳೆ. ಅಕ್ಕಮಹಾದೇವಿಯ ಅಂಗ ಅಳಿದು ಲಿಂಗದೊಳಗೆ ಕೂಡಿಕೊಂಡಾಗ ಹಾಲಿನಲ್ಲಿ ಹಾಲು ಸೇರಿ ಒಂದಾದAತೆ, ಲಿಂಗದೊಳಗೆ ಸಮರಸವಾದಳು. ಕೊನೆಗೂ ತಾನೊಲಿದ ಸಾವಿಲ್ಲದ ಚೆಲುವನನ್ನೇ ಕೂಡಿ ಕೇಡಿಲ್ಲದ ಪದವಿಯನ್ನು ಪಡೆದು ಕದಳಿ ಜ್ಯೋತಿಯಲ್ಲಿ ಜ್ಯೋತಿಯಾಗಿ ಪರಂಜ್ಯೋತಿಯಾದಳು. ಚಿಜ್ಯೋತಿಯಾದಳು. 
         
        ಅಕ್ಕನ ೪೩೨ ವಚನಗಳು ದೊರೆತಿದ್ದು, ವಚನಗಳಲ್ಲದೇ ಯೋಗಾಂಗತ್ರಿವಿಧಿ, ಸ್ವರವಚನ, ಸೃಷ್ಟಿಯವಚನ, ಕಾಲಜ್ಞಾನ ವಚನಗಳೆಂಬ ಲಘು ಕೃತಿಗಳನ್ನು ಬರೆದಿದ್ದಾರೆ. ಅಕ್ಕನ ಅಂತರAಗದ ದರ್ಶನವನ್ನು ಅವರ ವಚನಗಳ ಮೂಲಕ ಮಾಡಬಹುದು. 

          ಬೆಟ್ಟದ ಮೇಲೊಂದು ಮನೆಯ ಮಾಡಿ
          ಮೃಗಗಳಿಗಂಜಿದಡೆಂತ್ಯಾ?
          ಸಮುದ್ರದ ತಡಿಯಲೊಂದು ಮನೆಯ ಮಾಡಿ
          ನೊರೆತೆರೆಗಳಿಗಂಜಿದಡೆAತಯ್ಯಾ?
          ಸಂತೆಯೊಳಗೊಂದು ಮನೆಯ ಮಾಡಿ
          ಶಬ್ದಕ್ಕೆ ನಾಚಿದಡೆಂತಯ್ಯಾ?
          ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
          ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಂದೆಗಳು ಬಂದಡೆ
          ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
  ಸಾಧನೆಗೆ ತೊಡಗಿದ ವ್ಯಕ್ತಿಗಳು ಲೋಕದ ಸ್ತುತಿ ನಿಂದೆಗಳಿಗೆ ಗುರಿಯಾಗಬೇಕಾಗುತ್ತದೆ. ಲೋಕದಲ್ಲಿ ಜನರ ಹೊಗಳಿಕೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ, ಅದೊಂದು ಸಹಜ ಪ್ರಕ್ರಿಯೆ ಎಂದು ಭಾವಿಸಿ ಸಮಾಧಾನಚಿತ್ತದಿಂದ ಎದುರಿಸಲು ಈ ವಚನ ಪ್ರತಿಯೊಬ್ಬರಿಗೂ ಆತ್ಮಸ್ಥೆöÊರ್ಯ ತುಂಬುತ್ತದೆ. ನಾಮದಲ್ಲಿ ಹೆಂಗೂಸೆAಬ ಹೆಸರಾದಡೇನು ಭಾವಿಸಲು ಗಂಡುರೂಪ ಎಂಬAತೆ ವ್ಯಕ್ತಿತ್ವವನ್ನು ರೂಪಿಸಿಕೊಂಡ ಅಕ್ಕನ ಧೀಃಶಕ್ತಿ ಎಲ್ಲರಿಗೂ ಸ್ಪೂರ್ತಿಯಾಗಿದೆ. ಅವರು ರಚಿಸಿದ ವಚನಗಳು ಕನ್ನಡ ಸಾಹಿತ್ಯ ಲೋಕಕ್ಕೆ ಮಾತ್ರವಲ್ಲದೇ ವಿಶ್ವ ಸಾಹಿತ್ಯ ಲೋಕದ ಶ್ರೀಮಂತಿಕೆಗೆ ಕಾರಣವಾಗಿವೆ.
ಡಾ. ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್
#೪೩೧, ೭ನೇ ಮುಖ್ಯರಸ್ತೆ, ೧೪ ನೇ ಅಡ್ಡರಸ್ತೆ
ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - ೫೭೦೦೨೬
ಮೊ. ೯೯೦೧೧೩೭೯೪೮

vachanakumaraswamy@gmail.com




Friday, March 31, 2023

ದಾಸೋಹ ಸಿರಿ ಉದಾತ್ತ ವ್ಯಕ್ತಿತ್ವದ ದಿವ್ಯಮಾನವ ಶಿವಕುಮಾರ ಶ್ರೀ

ದಾಸೋಹ ಸಿರಿ ಉದಾತ್ತ ವ್ಯಕ್ತಿತ್ವದ ದಿವ್ಯಮಾನವ ಶಿವಕುಮಾರ ಶ್ರೀ



ಉದರ ತಣಿಸಿ ಮಿದುಳ ಬೆಳಸಿ

ಮಲಿನ ಮನದ ಮುಸುಕ ಹರಿಸಿ

ಜಾತಿಯಳಿಸಿ ಜನತೆ ಹರಸಿ

ಜ್ಯೋತಿಯಾಗಿ ಬೆಳಗುತಿದೆ ಸಿದ್ಧಗಂಗೆ

   ತುಮಕೂರಿನ ಲೇಖಕರಾದ ರಾಜಶೇಖರಯ್ಯನವರು ಸಿದ್ಧಗಂಗೆಯ ಶ್ರೀ ಶಿವಕುಮಾರಸ್ವಾಮಿಗಳ ಬಗ್ಗೆ ಬರೆದಿರುವ ಕವಿತೆ ಅಕ್ಷರಶÀಃ ಸತ್ಯವಾದದ್ದು. ಚಾಮರಾಜನಗರ ಜಿಲ್ಲೆ ಹರದನಹಳ್ಳಿಯ ಶೂನ್ಯಪೀಠ ಪರಂಪರೆಯ ಗೋಸಲಸಿಧ್ಧೇಶ್ವರರು ಸ್ಥಾಪಿಸಿದ ಸಿದ್ಧಗಂಗಾ ಮಠ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರರು, ಶ್ರೀ ಅಡವಿಸ್ವಾಮಿಗಳು, ಶ್ರೀ ಉದ್ಧಾನ ಶಿವಯೋಗಿಗಳು, ಶ್ರೀ ಮರುಳಾರಧ್ಯರಿಂದ ವಿಸ್ತರಣೆಗೊಂಡು ಶ್ರೀ ಶಿವಕುಮಾರಸ್ವಾಮಿಗಳ ಪಟ್ಟಾಧಿಕಾರದ ನಂತರ ಇಡೀ ವಿಶ್ವವೇ ಸಿದ್ಧಗಂಗೆಯನ್ನು ಕಣ್ತುಂಬಿಕೊಳ್ಳುವAತಹ ಭಕ್ತಿ ಮತ್ತು ದಾಸೋಹ ಕೇಂದ್ರವಾಗಿ ರೂಪುಗೊಂಡಿತು. ಶ್ರೀ ಸಿದ್ಧಗಂಗಾಮಠದಲ್ಲಿ ಬೆಳಗಿನ ಯುಗವನ್ನು ನಿರ್ಮಾಣ ಮಾಡಿದ ಶ್ರೀಗಳ ವ್ಯಕ್ತಿತ್ವದ ಬಗ್ಗೆ ಚಿತ್ತ ಹರಿಸೋಣ ಬನ್ನಿ.

   ಶ್ರೀ ಶಿವಕುಮಾರಸ್ವಾಮಿಗಳವರದು ಎತ್ತರದ ನಿಲುವು, ವಿಶಾಲವಾದ ಹಣೆಯಲ್ಲಿ ಸದಾ ಕಂಗೊಳಿಸುವ ವಿಭೂತಿ, ಕಾರುಣ್ಯರಸ ತುಂಬಿದ  ಹೊಳೆವ ಕಣ್ಣುಗಳು, ದಾಸೋಹ ಮತ್ತು ಸೇವೆಯನ್ನೇ ಉಸಿರು ಮತ್ತು ಧ್ಯೇಯವನ್ನಾಗಿ ಮಾಡಿಕೊಂಡು ನೂರು ವರ್ಷಗಳಿಗೂ ಹೆಚ್ಚು ಕಾಲ ಕನ್ನಡದ ನೆಲವನ್ನು ಪುಣ್ಯಭೂಮಿಯನ್ನಾಗಿ ಮಾಡಿದ ಶ್ರೀಗಳು ೧೯೦೮ ಏಪ್ರಿಲ್ ೧ ರಂದು ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು ವೀರಾಪುರ ಗ್ರಾಮದಲ್ಲಿ ಗಂಗಮ್ಮ ಮತ್ತು ಹೊನ್ನೇಗೌಡ ದಂಪತಿಗಳ ಹದಿಮೂರನೆಯ ಮಗನಾಗಿ ಜನಿಸಿ ೧೯೩೦ ಮಾರ್ಚ್ ೩ ರಂದು ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿ ೮೯ ವರ್ಷಗಳ ಸುದೀರ್ಘ ಅವಧಿಯಲ್ಲಿ ಕೋಟ್ಯಾಂತರ ಭಕ್ತರ, ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು. 

  ಜ್ಞಾನ ಎನ್ನುವುದು ಬಹಳ ಪವಿತ್ರವಾದುದು. ಶ್ರೇಷ್ಠವಾದುದು. ಅದು ಅಮೂಲ್ಯ ರತ್ನ, ಯಾರೂ ನಿಖರವಾದ ಜ್ಞಾನ ಸಂಪಾದನೆ ಮಾಡುತ್ತಾರೋ ಅವರು ನಿಜವಾದ ಜ್ಞಾನಿಯಾಗುತ್ತಾನೆ ಆತನೇ ನಿಜವಾದ ಶ್ರೀಮಂತ ಎಂದು ಹೇಳುತ್ತಿದ್ದ ಶ್ರೀಗಳು ತಮ್ಮ ಮಠದಲ್ಲಿ ಪ್ರತೀ ವರ್ಷ ಹತ್ತು ಸಾವಿರ ವಿದ್ಯಾರ್ಥಿಗಳು ಜ್ಞಾನ ಸಂಪಾದಿಸಿಕೊಳ್ಳಲು ತಂದೆ ತಾಯಿ ಇಲ್ಲದ, ನಿರ್ಗತಿಕ ಹಾಗೂ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಮತ್ತು ದಾಸೋಹ ನೀಡಿ ಆ ವಿದ್ಯಾರ್ಥಿಗಳು ವಿಶ್ವದ ನಾನಾ ದೇಶಗಳಲ್ಲಿ ನೆಲೆಸಿ ಉದ್ಯೋಗ ಪಡೆದು ನಮ್ಮ ದೇಶದ ಕೀರ್ತಿಯನ್ನು ಹರಡಲು ಕಾರಣರಾದರು. 

ಸದ್ದುಗದ್ದಲವಿಲ್ಲದ ಸಾಧನೆ ಇಲ್ಲಿ ಗದ್ದುಗೆಯೇರಿದೆ

ಕಾಯಕವೇ ಕೈಲಾಸ ಎನ್ನುವ ಮಾತು ಕೃತಿಯೊಳು ಮೂಡಿದೆ

ಕಾವಿಯುಡುಗೆಯನ್ನುಟ್ಟು ನಭವೇ ಕಿರಣ ಹಸ್ತವ ಚಾಚಿದೆ

ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ.

ಎಂಬ ರಾಷ್ಟçಕವಿ ಜಿ.ಎಸ್.ಶಿವರುದ್ರಪ್ಪನವರ ಕವಿತೆಯ ಸಾಲುಗಳು ಎಷ್ಟು ಅರ್ಥಗರ್ಭಿತವಾಗಿವೆ ಎಂಬುದನ್ನು ಮನಗಂಡರೆ ಶ್ರೀಗಳ ವ್ಯಕ್ತಿತ್ವ ಅರ್ಥವಾಗುತ್ತದೆ. ರಾಜಕೀಯ, ಸಿನಿಮಾ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದ ಯಾವುದೇ ಸಾಧಕರೂ ಕೂಡಾ ಸಿದ್ಧಗಂಗೆಗೆ ಹೋಗಿ ಶ್ರೀಗಳ ದರ್ಶನ ಮಾಡಿ ತಮ್ಮ ವಿವಿಧ ಚಟುವಟಿಕೆಗಳನ್ನು ಪ್ರಾರಂಭ ಮಾಡುತ್ತಿದ್ದರು. ದೇಶದ ಪ್ರಥಮ ಪ್ರಜೆಗಳಾದ ರಾಷ್ಟçಪತಿಗಳು ಹಾಗೂ ಪ್ರಧಾನಮಂತ್ರಿಗಳಾದಿಯಾಗಿ ಶ್ರೀಮಠಕ್ಕೆ ಬಂದು ಶ್ರೀಗಳ ದರ್ಶನಾಶೀರ್ವಾದ ಪಡೆದು ಹೋಗುತ್ತಿದ್ದರು ಎಂದರೆ ಶ್ರೀಗಳ ದಿವ್ಯಶಕ್ತಿಯ ಮಹತ್ವ ಎಲ್ಲರಿಗೂ ಅರಿವಾಗುತ್ತದೆ.

  ದಾಸೋಹಕ್ಕೆ ತುಂಬಾ ಮಹತ್ವ ನೀಡುತ್ತಿದ್ದ ಶ್ರೀಗಳು ಮಠಕ್ಕೆ ಬರುವ ಭಕ್ತರಿಗೆ ಮೊದಲು ದಾಸೋಹ ಸ್ವೀಕರಿಸಿ ನಂತರ ದರ್ಶನ ಮಾಡಿ ಎಂದು ಹೇಳುತ್ತಿದ್ದರು. ಅವರ ಮರಣವನ್ನೂ ಕೂಡಾ ಮಠದಲ್ಲಿ ದಾಸೋಹವಾದ ನಂತರ ಘೋಷಣೆ ಮಾಡಿ ಎಂದು ಕಿರಿಯ ಶ್ರೀಗಳಿಗೆ ಹೇಳಿದ್ದರು ಎಂದರೆ ದಾಸೋಹದ ಚಕ್ರವರ್ತಿಯಾಗಿದ್ದರು ಎಂಬುದನ್ನು ನಿಸ್ಸಂಶಯವಾಗಿ ತಿಳಿದುಕೊಳ್ಳಬಹುದು.

 ಭಾರತದ ದಿವಂಗತ ಮಾಜಿ ಪ್ರಧಾನಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿಯವರು ಸಿದ್ಧಗಂಗಾ ಹಲವು ಗಂಗಾಗಳ ಸಂಗಮ ಪ್ರವಾಹ. ಇಲ್ಲಿ ಕರ್ಮದ ಗಂಗಾ, ಗೌರವಗಂಗಾ ಮತ್ತು ಕಾರುಣ್ಯಗಂಗಾಗಳು ಸಮರಸಗೊಂಡು ಹರಿಯುತ್ತಿವೆ. ಜ್ಞಾನಯಜ್ಞ ನಡೆದಿದ್ದು ಶತಮಾನಗಳ ಪರ್ಯಂತ ಮುಂದುವರೆದಿದೆ. ಪೂಜ್ಯ ಶ್ರೀ ಸ್ವಾಮೀಜಿಯವರ ರೂಪದಲ್ಲಿ ಆಧ್ಯಾತ್ಮಿಕ ಶಕ್ತಿ ಶ್ರೀಮಠದ ಪರಿಸರವನ್ನೆಲ್ಲ ಕ್ರಿಯಾಶೀಲಗೊಳಿಸಿದೆ. ಸರ್ಕಾರಿ ಶಾಲೆಗಳು ಶಿಕ್ಷಣವನ್ನು ನೀಡುತ್ತವೆ ಆದರೆ ಸಂಸ್ಕಾರವನ್ನು ಕೊಡಲಾರವು. ಶಿಕ್ಷಣ ಮತ್ತು ಸಂಸ್ಕಾರ ಎರಡನ್ನೂ ಏಕಕಾಲದಲ್ಲಿ ಸಿದ್ಧಗಂಗಾ ಮಠ ನೀಡುತ್ತಿದೆ ಎಂದು ಹೇಳಿ ಉತ್ತರದಲ್ಲಿ ಗಂಗೆ ದಕ್ಷಿಣದಲ್ಲಿ ಸಿದ್ಧಗಂಗೆ ಎಂದು ತಮ್ಮ ಕವಿವಾಣಿಯಲ್ಲಿ ಹೇಳಿರುವುದು ಮಠದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. 

  ಪೂಜ್ಯ ಶ್ರೀಗಳು ಇಲ್ಲದೇ ೧೧೬ನೇ ಜಯಂತಿಯನ್ನು ಆಚರಿಸುತ್ತಿದ್ದು, ಅವರು ಬೋಧಿಸಿದ ಮೌಲ್ಯ ಶಿಕ್ಷಣವನ್ನು ಅರಿತು ನಾವು ನಡೆದದ್ದೇ ಆದರೆ ನಮ್ಮ ಇಹಲೋಕದ ಜೀವನ ಸಾರ್ಥಕವಾಗುತ್ತದೆ. 

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರ


                                           ಶರಣು ವಿಶ್ವವಚನ ಫೌಂಡೇಷನ್

#೪೩೧, ೭ನೇ ಮುಖ್ಯರಸ್ತೆ, ೧೪ ನೇ ಅಡ್ಡರಸ್ತೆ

ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - ೫೭೦೦೨೬

ಮೊ. ೯೯೦೧೧೩೭೯೪೮




Tuesday, March 28, 2023

ಸ್ತ್ರೀಯರು ಮನುಕುಲದ ಜ್ಯೋತಿಯಾಗಿ ಪ್ರಜ್ವಲಿಸಲಿ_ರೂಪ ಕುಮಾರಸ್ವಾಮಿ


 



ಮೈಸೂರು : ಸ್ತ್ರೀಯರು ಮನುಕುಲದ ಜ್ಯೋತಿಯಾಗಿ ಪ್ರಜ್ವಲಿಸಬೇಕು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಹೇಳಿದರು. ನಾದಹಂಸಿನಿ ಭಜನಾಸಂಘ ಮೈಸೂರಿನ ಜೆ.ಪಿ.ನಗರದ ಪುಟ್ಟರಾಜಗವಾಯಿ ಯೋಗಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹನ್ನೊಂದನೆಯ ವರ್ಷದ ವಾರ್ಷಿಕೋತ್ಸವ ಮತ್ತು ವಿಶ್ವ ಮಹಿಳಾದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಹೆಣ್ಣನ್ನು ಕೀಳಾಗಿ ಕಾಣುತ್ತಿದ್ದಂತಹ ಕಾಲಘಟ್ಟದಲ್ಲಿ ಹನ್ನೆರಡನೆಯ ಶತಮಾನ ಸ್ತ್ರೀಯರಿಗೆ ಪ್ರಥಮಬಾರಿಗೆ ಸ್ವಾತಂತ್ರ್ಯ ನೀಡುವುದರ ಮೂಲಕ ಮಹಿಳೆಯರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಹಾಗೂ ವೈಚಾರಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಇಪೊತ್ತೊಂದನೆಯ ಶತಮಾನದಲ್ಲಿ ಸ್ತ್ರೀಯರು ಎಲ್ಲಾ ಕ್ಷೇತ್ರಗಳಲ್ಲಿ  ಸಾಧನೆ ಮಾಡುವುದರ ಮೂಲಕ ಅಸಮಾನತೆಯನ್ನು ತೊಡೆದು ಹಾಕಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅನೇಕ ವಚನಕಾರರು ಮತ್ತು ಪುರುಷ ಕವಿಗಳು ತಮ್ಮ ವಚನಗಳಲ್ಲಿ, ಕವಿತೆಗಳಲ್ಲಿ ಮಹಿಳೆಯರನ್ನು ಕವಿತಾ ವಸ್ತುವನ್ನಾಗಿ ಮಾಡಿಕೊಂಡು ಅವರ ಕಾರ್ಯಚಟುವಟಿಕೆಗಳನ್ನು ಸ್ತುತಿಸಿದ್ದಾರೆ. ಸಿದ್ಧರಾಮೇಶ್ವರರು ಹೆಣ್ಣನ್ನು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದರೆ ಜಿ.ಎಸ್. ಶಿವರುದ್ರಪ್ಪರವರು ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ ಎಂದಿದ್ದಾರೆ. ನಾದಹಂಸಿನಿ ಭಜನಾತಂಡ ನೂರಾರು ಮಹಿಳೆಯರಿಗೆ ಉಚಿತವಾಗಿ ವಚನಗಾಯನ, ಅಡುಗೆ ತಯಾರಿಕೆ, ಬ್ಯುಟಿಷಿಯನ್ ತರಬೇತಿ, ಕಸೂತಿ ತರಬೇತಿ ನೀಡುತ್ತಿದ್ದು ಸ್ವಾವಲಂಬಿಯಾಗಲು ಕಾರಣವಾಗುತ್ತಿರುವುದು ಸಂತಸದ ವಿಷಯ ಎಂದರು. ಕಾರ್ಯಕ್ರಮದಲ್ಲಿ ನಾದಹಂಸಿನಿ ಭಜನಾ ಸಂಘದ ಅಧ್ಯಕ್ಷೆ ಉಮಾ ಮಹಾದೇವಸ್ವಾಮಿ, ಜೆ.ಪಿ.ನಗರ ೬೩ನೇ ವಾರ್ಡ್ ನಗರಪಾಲಿಕೆ ಸದಸ್ಯೆ ಶಾರದಮ್ಮ ಈಶ್ವರ್, ಸಂಸ್ಥೆಯ ನಿರ್ದೇಶಕರುಗಳಾದ ಮಂಜುಳ ಶಿವಕುಮಾರ್, ಶಿವಕುಮಾರಿ, ಶೀಲಾದೇವಿ, ಮೈನಾವತಿ ಬಸವಣ್ಣ, ಭ್ರಮರಾಂಭ, ಸುಜಯಾಂಭ, ವಿಜಯಾಂಭ, ನಂದಿನಿ, ಮಂಜುಳ ಶಶಿ ಸದಸ್ಯರುಗಳಾದ ಸುಶೀಲ ನಟರಾಜ್, ಶ್ವೇತ, ಸುಜಾತ ಪ್ರಕಾಶ್, ಕೆಂಪಮ್ಮಣ್ಣಿ, ಮಂಜುಳ ಎಸ್, ಶೋಭ, ರಾಜೇಶ್ವರಿ, ಸುನಿತಾ, ಲತಾ, ಸವಿತ, ಸುವರ್ಣ, ಶಿಲ್ಪ, ಮಮತ, ಸವಿತ, ಆಕಿಲಾ ಉಪಸ್ಥಿತರಿದ್ದರು.

Wednesday, March 8, 2023

ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ

 

ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ

(ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ?)


ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು

ತಾ ಮಾಡಿದ ಹೆಣ್ಣು ತನ್ನ ತೊಡಯನೇರಿತ್ತು

ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಗೆಯನೇರಿತ್ತು

ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು

ಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ;

ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!

ಶಿವಯೋಗಿ ಸಿದ್ಧರಾಮೇಶ್ವರರು ಈ ವಚನದಲ್ಲಿ ಹೆಣ್ಣಿನ ಹಿರಿಮೆಯನ್ನು ಕೊಂಡಾಡಿದ್ದಾರೆ. ತಾ ಮಾಡಿದ ಹೆಣ್ಣು ತನ್ನ ತಲೆಯನ್ನೇರಿ ಶಿವನಾದ. ನಾಲಗೆಯನ್ನೇರಿ ಬ್ರಹ್ಮನಾದ. ಎದೆಯಲ್ಲಿ ನೆಲೆಸಿ ನಾರಾಯಣನಾದ. ಹೆಣ್ಣನ್ನು ಕೇವಲ ಹೆಣ್ಣಾಗಿ ಮತ್ತು ರಾಕ್ಷಸಿಯಾಗಿ ನೋಡುವುದು ತಪ್ಪು. ಹೆಣ್ಣು ನಮ್ಮ ಕಣ್ಣಿಗೆ ಕಾಣುವ ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ಎಂದು ಹೆಣ್ಣಿಗೆ ದೈವ ಸ್ವರೂಪ ನೀಡಿದ್ದಾರೆ. ಈ ವಚನವನ್ನು ಅರಿತು ಪ್ರತಿಯೊಬ್ಬರೂ ಹೆಣ್ಣಿಗೆ ಮಹತ್ವದ ಸ್ಥಾನ ನೀಡಿದಾಗ ಹೆಣ್ಣಿಂದ ಜನ್ಮ ಪಡೆದು ಈ ಭುವಿಯಲ್ಲಿ ನಾವು ಜನಿಸಿರುವುದು ಸಾರ್ಥಕ ರೂಪ ಪಡೆದುಕೊಳ್ಳುತ್ತದೆ.

 ಜರ್ಮನಿಯ ಕ್ಲಾರಾ ಜೆಟ್‌ಕಿನ್ಅಂತರರಾಷ್ಟ್ರೀಯ ಮಹಿಳಾ ಸೆಕ್ರಟೇರಿಯಟ್ ಮುಖ್ಯಸ್ಥೆಯಾಗಿದ್ದ ಸಂದರ್ಭದಲ್ಲಿ ಮಾರ್ಚ್ ೮ನ್ನು ಮಹಿಳಾ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ೧೯೧೧ರಲ್ಲಿ ನಿರ್ಣಯ ಮಂಡಿಸಿದರು. ವಿವಿಧ ರಾಷ್ಟçಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಅಂದಿನಿAದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಲಾಯಿತು. ಇಂದು ೧೧೩ನೇ ಮಹಿಳಾ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

   ಪ್ರತೀ ವರ್ಷ ಮಾರ್ಚ್ ೮ ಬಂದ ಕೂಡಲೇ ಆ ದಿನ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅಂತರ್ಜಾಲದ ವಿವಿಧ ಮಾಧ್ಯಮಗಳಾದ ವಾಟ್ಸ್ಆಪ್, ಫೇಸ್‌ಬುಕ್, ಟ್ವಿಟರ್, ಇನ್ಸಾ÷್ಟಗ್ರಾಂ ಮುಂತಾದವುಗಳ ಮೂಲಕ ಶುಭಾಶಯಗಳನ್ನು ತಿಳಿಸಿ ಕೇವಲ ಆಚರಣೆಗೆ ಮಾತ್ರ ಸೀಮಿತರಾಗಿಬಿಡುತ್ತಿದ್ದೇವೆ. ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೇ ಹೆಣ್ಣಿನ ಹಿಂದಿನ ಸ್ಥಿತಿಗತಿಗಳು ಮತ್ತು ಇಂದಿನ ಪರಿಸ್ಥಿತಿಗಳನ್ನು ಅವಲೋಕಿಸಿ ಅವರ ಏಳಿಗೆಗೆ ಪ್ರತಿಯೊಬ್ಬರೂ ಅವಕಾಶ ಕಲ್ಪಿಸಿಕೊಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.

  ಕರ್ನಾಟಕದಲ್ಲಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಹೇಳುವುದಾದರೆ ಹನ್ನೆರಡನೇ ಶತಮಾನದ ಮೊದಲು ಹೆಣ್ಣಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಅವಕಾಶಗಳನ್ನು ಕಿತ್ತುಕೊಂಡು ಅವರನ್ನು ಅಸ್ಪೃಶ್ಯರ ರೀತಿ ಕಡೆಗಣಿಸಿ, ಉಸಿರುಗಟ್ಟುವ ವಾತಾವರಣವನ್ನು ನಿರ್ಮಿಸಿ ಅಬಲೆಯರನ್ನಾಗಿ ಮಾಡಲಾಗಿತ್ತು. ಹೀಗೆ ಧ್ವನಿಯಿದ್ದರೂ ನಿರ್ಜೀವ ಗೊಂಬೆಗಳಂತೆ ಬದುಕುತ್ತಿದ್ದ ಮಹಿಳೆಯರಿಗೆ ಸಾಮಾಜಿಕ ಪ್ರಜ್ಞೆ ಮೂಡಿಸಿ ಅವರಿಗೆ ಅಕ್ಷರದ ಅರಿವು ಉಂಟುಮಾಡಿ ಮುಖ್ಯವಾಹಿನಿಗೆ ತಂದವರು ಕಲ್ಯಾಣ ರಾಜ್ಯ ನಿರ್ಮಾಣದ ಅಡಿಪಾಯದ ರೂವಾರಿ ವಿಶ್ವಗುರು ಬಸವಣ್ಣನವರು. ಅವರು ರಚಿಸಿದ ಅನುಭವ ಮಂಟಪದಲ್ಲಿ ಸಾವಿರಾರು ಮಹಿಳೆಯರು ಚರ್ಚೆಯಲ್ಲಿ ಪಾಲ್ಗೊಂಡು ಅನುಭಾವಿಕ ಹಿನ್ನೆಲೆಯಲ್ಲಿ ಪುರುಷರಿಗೆ ಸಮಾನಾಗಿ ಚರ್ಚಿಸುತ್ತಿದ್ದರು. ನೂರಾರು ಮಹಿಳೆಯರು ವಚನಗಳನ್ನು ರಚಿಸಿರುವ ಸಾಧ್ಯತೆಯಿದೆ. ಆದರೆ ಅಂದು ನಡೆದ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಅನೇಕ ವಚನಕಾರರ ವಚನಗಳನ್ನು ಸುಟ್ಟು ಹಾಕಲಾಯಿತು. ಮತ್ತೆ ಕೆಲವರ ವಚನಗಳು ಕಾಲಗರ್ಭದಲ್ಲಿ ಹುದುಗಿಹೋದವು. ನಾವು ಎಷ್ಟೇ ಅನ್ಯಾಯ, ಆತ್ಮವಂಚನೆ, ಅಕ್ರಮಗಳನ್ನು ಮಾಡಿದರೂ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂಬಂತೆ ನಮಗೆ ೩೩ ಮಹಿಳಾ ವಚನಕಾರ್ತಿಯರಾದ ಅಕ್ಕಮಹಾದೇವಿ, ಅಕ್ಕಮ್ಮ, ಅಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ಕಾಳವ್ವೆ, ಮಸಣಮ್ಮ, ರೆಮ್ಮವ್ವೆ, ರೇಮಮ್ಮ, ರೇಚವ್ವೆ, ಕಾಮಮ್ಮ, ಲಕ್ಷಮ್ಮ, ಸೋಮಮ್ಮ, ಗಂಗಾಂಬಿಕೆ, ಕೇತಲದೇವಿ, ಗೊಗ್ಗವ್ವೆ, ವೀರಮ್ಮ, ದುಗ್ಗಳೆ, ನಾಗಲಾಂಬಿಕೆ, ನೀಲಮ್ಮ, ಗುಡ್ಡವ್ವೆ, ಬೊಂತಾದೇವಿ, ಮುಕ್ತಾಯಕ್ಕ, ಮೋಳಿಗೆ ಮಹಾದೇವಿ, ರಾಯಮ್ಮ, ರೇಕಮ್ಮ, ಸತ್ಯಕ್ಕ, ಸೂಳೆ ಸಂಕವ್ವೆ, ಲಿಂಗಮ್ಮ, ಗಂಗಮ್ಮ ಮುಂತಾದ ವಚನಕಾರ್ತಿಯರ  ೧೩೪೯ ವಚನಗಳು ದೊರೆತಿದ್ದು, ವಿಶ್ವಸಾಹಿತ್ಯಕ್ಕೆ ಕನ್ನಡದ ಮಹಿಳೆಯರ ಕೊಡುಗೆಯನ್ನು ಸುವರ್ಣಾಕ್ಷರಗಳಲ್ಲಿ ಬರೆಯುವಂತಾಯಿತು. ಜಗನ್ಮಾತೆ ಅಕ್ಮಹಾದೇವಿ ಕನ್ನಡದ ಮೊಟ್ಟಮೊದಲ ಕವಯತ್ರಿಯಾಗಿ ಹೊರಹೊಮ್ಮಿದಳು. ಅಲ್ಲದೇ ಪುರುಷನ ಅನಾಗರೀಕ ವರ್ತನೆಯನ್ನು ಪ್ರತಿಭಟಿಸುವ ಮೊಟ್ಟಮೊದಲ ಕನ್ನಡದ ಪ್ರತಿಭಟನಾಕಾರ್ತಿಯಾಗಿ ರೂಪುತಳೆದರು. ಅಂದಿನಿಂದ ಮಹಿಳೆಯರ ಆಂತರ್ಯದಲ್ಲಿ ಹುದುಗಿದ್ದ ಪ್ರತಿಭೆ ಪ್ರಕಾಶಿಸಲು ಪ್ರಾರಂಭಿಸಿತು. ಶರಣರು ಸ್ತ್ರೀಯರಿಗೆ ಸ್ವಾತಂತ್ರ್ಯ ಪಡೆಯಲು ಅನರ್ಹಳು ಎಂದು ಹೇಳುತ್ತಿದ್ದ ಕಾಲದಲ್ಲಿ ಅವರನ್ನು ಪುಣ್ಯಸ್ತ್ರೀ ಎಂದು ಕರೆದು ಅವರಿಗೆ ಮಹತ್ವದ ಸ್ಥಾನ ನೀಡಿದರು. 

ಮೊಲೆ ಮುಡಿ ಬಂದಡೆ ಹೆಣ್ಣೆಂಬರು

ಗಡ್ಡ ಮೀಸೆ ಬಂದಡೆ ಗಂಡೆಂಬರು 

ನಡುವೆ ಸುಳಿವ ಆತ್ಮನು 

ಹೆಣ್ಣೂ ಅಲ್ಲ. ಗಂಡೂ ಅಲ್ಲ ಕಾಣಾ ರಾಮನಾಥ. ಎಂದು ಜೇಡರ ದಾಸಿಮಯ್ಯನವರು ಹೇಳುವುದರ ಮೂಲಕ ಹೆಣ್ಣು ಮತ್ತು ಗಂಡು ಇಬ್ಬರಿಗೂ ಶಾರೀರಕ ಬದಲಾವಣೆ ಹೊರತು ಪಡಿಸಿದರೆ ಇಬ್ಬರೂ ಸಮಾನರು ಎಂಬುದನ್ನು ಪ್ರತಿಪಾದಿಸಿದರು.

  ಹನ್ನೆರಡನೆಯ ಶತಮಾನದ ನಂತರ ಕೃತಿ ರಚನೆಯ ನಿದರ್ಶನಗಳು ಕಂಡು ಬರುವುದು ಮೈಸೂರಿನ ಚಿಕ್ಕದೇವರಾಜ ಒಡೆಯರ ಕಾಲದಲ್ಲಿ. ಸಂಚಿಯ ಊಳಿಗದಲ್ಲಿದ್ದ ಸಂಚಿಯ ಹೊನ್ನಮ್ಮ ಮೈಸೂರು ಜಿಲ್ಲೆಯ ಯಳಂದೂರಿನವಳು. ಚಿಕ್ಕದೇವರಾಜರ ಪಟ್ಟದರಸಿ ದೇವರಾಜಮ್ಮಣಿಯ ಬಾಲ್ಯ ಸ್ನೇಹಿತೆಯಾಗಿದ್ದಳು. ಆಕೆ ಹದಿಬದೆಯ ಧರ್ಮ ಎಂಬ ಕೃತಿಯಲ್ಲಿ ಹೆಣ್ಣನ್ನು ಕೀಳಾಗಿ ಕಾಣುವ ಪುರುಷರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ಪೆಣ್ಣಲ್ಲವೆ ತಮ್ಮನ್ನೆಲ್ಲ ಪಡೆದ ತಾಯಿ

ಪೆಣ್ಣಲ್ಲವೆ ಪೊರೆದವಳು

ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು

ಕಣ್ಣು ಕಾಣದ ಗಾವಿಲರು. ಎಂದು ಪರಂಪರಾನುಗತವಾಗಿ ಹೆಣ್ಣಿನ ಬಗ್ಗೆ ಇದ್ದ ಕೀಳು ಭಾವನೆಯನ್ನು ಖಂಡಿಸಿದ್ದಾಳೆ.

 ಇಂದಿನ ಆಧುನಿಕ ಯುಗದಲ್ಲಿ ಮಹಿಳೆರಿಗೆ ಹೆಚ್ಚು ಸ್ವಾತಂತ್ರ ನೀಡಲಾಗಿದ್ದು, ಅವರು ರಾಜಕೀಯ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಪುರುಷ ಕವಿಗಳು ಕೂಡಾ ಮಹಿಳೆಯರ ಬಗ್ಗೆ ಕವಿತೆಗಳನ್ನು ರಚಿಸುವುದರ ಮೂಲಕ ಗೌರವವನ್ನು ನೀಡಿದ್ದಾರೆ. ಕನ್ನಡದ ಹೆಸರಾಂತ ಕವಿ ಜಿ.ಎಸ್ ಶಿವರುದ್ದರಪ್ಪರವರು

ಮನೆಮನೆಯಲಿ ದೀಪ ಮುಡಿಸಿ

ಹೊತ್ತು ಹೊತ್ತಿಗೆ ಅನ್ನ ಉಣಿಸಿ

ತಂದೆ ಮಗುವ ತಬ್ಬಿದಾಕೆ

ನಿನಗೆ ಬೇರೆ ಹೆಸರು ಬೇಕೆ?

ಸ್ತ್ರೀ ಎಂದರೆ ಅಷ್ಟೇ ಸಾಕೆ? ಕವಿತೆಯ ಈ ಸಾಲುಗಳು ಹೆಣ್ಣಿನ ಗೌರವ ಸೂಚಕವಾಗಿವೆ. 

  ಸ್ವಾತಂತ್ರ್ಯ ಹೋರಾಟದಲ್ಲಿ ಕೂಡಾ ಅನೇಕ ಕರ್ನಾಟಕದ ಮಹಿಳೆಯರು ಭಾಗವಹಿಸಿ ತ್ಯಾಗ ಮತ್ತು ಹೋರಾಟದಲ್ಲಿ ಹೆಸರುವಾಸಿಯಾಗಿರುವುದನ್ನು ಕಾಣಬಹುದು. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ಸರೋಜಿನಿ ನಾಯ್ಡು, ರಾಣಿ ಅಬ್ಬಕ್ಕದೇವಿ, ಕಮಲ ಚಟ್ಟೋಪಾಧ್ಯಾಯ ಮುಂತಾದವರ ಧೈರ್ಯ ಮತ್ತು ಸಾಹಸ ಇಂದಿನ ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ಆಧುನಿಕ ಕವಯತ್ರಿ ಲಲಿತಾ ಕೆ. ಹೊಸಪ್ಯಾಟಿರವರು ಅವ್ವ ಎಂಬ ಕವಿತೆಯಲ್ಲಿ

ಬೊಗಸೆ ತುಂಬ ಹೂವ ತಂದು

ಪಾದಕಮಲಕೆರಗುವೆ

ನಿನ್ನ ಅಡಿಗೆ ಮಣಿದು ಮತ್ತೆ

ಭಾಗ್ಯವನ್ನೆ ಬೇಡುವೆ.

ನೋವ ನಂಬಿ ನನ್ನ ನಂಬಿ 

ಹಾಲ ನೀನು ಕುಡಿಸಿದೆ

ಕಣ್ಣ ನೀರ ಒರೆಸಿ ನೀನು

ಎದೆಗವಚಿ ರಮಿಸಿದೆ. ಈ ಕವಿತೆ ತಾಯಿಯ ಮಾತೃವಾತ್ಸಲ್ಯದ ನೀತಿಯನ್ನು ಸಾರುತ್ತಿದ್ದು, ನಾವು ಆಕೆಯ ಋಣವನ್ನು ತೀರಿಸುವ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರಿಗೆ ಗೌರವ ಕೊಡಬೇಕಾಗುತ್ತದೆ.

   ಇಂದು ೨೧ನೇ ಶತಮಾನದ ಆಧುನಿಕ, ತಾಂತ್ರಿಕ ಮತ್ತು ಅಂತರ್ಜಾಲದ ಯುಗದಲ್ಲಿ ಇದ್ದೇವೆ. ಇಂದಿಗೂ ಅನೇಕ ಅನಿಷ್ಟ ಆಚರಣೆಗಳ ಮೂಲಕ ಮಹಿಳೆಯರಿಗೆ ನೋವನ್ನುಂಟುಮಾಡುತ್ತಿದ್ದೇವೆ. ಗಂಡ ತೀರಿಹೋದರೆ ಆಕೆಯ ಕುಂಕುಮ, ತಾಳಿ, ಹೂವು, ಬಳೆ ಮತ್ತು ಕಾಲುಂಗುರ ತೆಗೆದು ಆಕೆಯನ್ನು ವಿಲಕ್ಷಣ ಮಾಡುತ್ತಿದ್ದೇವೆ. ಹೆಂಡತಿ ತೀರಿ ಹೋದರೆ ಪುರುಷರು ಹೇಗೆ ಇರುತ್ತಾರೋ ಹಾಗೆಯೇ ಗಂಡ ತೀರಿ ಹೋದ ಹೆಂಗಸು ಕೂಡಾ ಮೊದಲು ಹೇಗೆ ಇದ್ದಳೋ ಅದೇ ರೀತಿ ಇರುವ ಮತ್ತು ಬದುಕುವ ಅವಕಾಶವನ್ನು ನಾವು ಸೃಷ್ಟಿಸಿಕೊಟ್ಟಿದ್ದೇ ಆದರೆ ಅದೇ ನಾವು ಹೆಣ್ಣಿಗೆ ಕೊಡುವ ಗೌರವ ಎಂದು ಭಾವಿಸುತ್ತಾ ಇಂತಹ ಅನೇಕ ಅನಿಷ್ಟ ಆಚರಣೆಗಳಿಗೆ ಇಂದೇ ತಿಲಾಂಜಲಿ ಹೇಳಿದ್ದೇ ಆದರೆ ಇಂದಿನ  ಮಹಿಳಾ ದಿನಾಚರಣೆ ಅರ್ಥಪೂರ್ಣವಾಗುತ್ತದೆ.

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್

#೪೩೧, ೭ನೇ ಮುಖ್ಯರಸ್ತೆ, ೧೪ ನೇ ಅಡ್ಡರಸ್ತೆ

ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - ೫೭೦೦೨೬

ಮೊ. ೯೯೦೧೧೩೭೯೪೮




  

  


 


Sunday, January 15, 2023

ಸಿದ್ಧೇಶ್ವರ ಶ್ರೀಗಳು

 *ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳು*


 ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಸಿ ಎರಡನೇ ವಿವೇಕಾನಂದ ಎನಿಸಿದ್ದಾರೆ. ನಡೆದಾಡುವ ದೇವರು, ಜೇಬಿಲ್ಲದ ಅಂಗಿಯ ರಾಷ್ಟ್ರ ಸಂತ ಎಂಬ ಹತ್ತು ಹಲವಾರು ನಾಮಾವಳಿಗಳಿಂದ ಜಗಪ್ರಸಿದ್ದರಾಗಿದ್ದರು, ಹಾಗೂ ಅಪಾರ ಭಕ್ತ ಸಾಗರವನ್ನು ಹೊಂದಿದ್ದರು. ಜೈನ ಧರ್ಮದಂತೆ ಆಹಾರ ಮತ್ತು ಜಲವನ್ನು ತ್ಯಾಗ ಮಾಡಿ ವೈಕುಂಠ ಏಕಾದಶಿಯಂದು ಇಚ್ಛಾಮರಣ ಹೊಂದಿದ್ದರು.


*ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು ಜನನ*

24 ಅಕ್ಟೋಬರ್ 1940

ಬಿಜ್ಜರಗಿ, ವಿಜಯಪುರ, ಕರ್ನಾಟಕ

ಮರಣ

02 ಜನವರಿ 2023

ಜ್ಞಾನಯೋಗಾಶ್ರಮ, ವಿಜಯಪುರ

ವೃತ್ತಿ

ಸ್ವಾಮೀಜಿ

ರಾಷ್ಟ್ರೀಯತೆ

ಭಾರತೀಯ


*ಜನನ*

ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1940 ಅಕ್ಟೋಬರ್ 24 ರಂದು ಜನಿಸಿದರು. ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು. ತಂದೆ ಹೆಸರು ಓಗೆಪ್ಪಗೌಡ ಸಿದ್ದಗೊಂಡ ಪಾಟೀಲ್, ತಾಯಿ ಹೆಸರು ಸಂಗಮ್ಮ ಓಗೆಪ್ಪಗೌಡ ಪಾಟೀಲ್. 


*ವಿದ್ಯಾಭ್ಯಾಸ*

ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ ಏಳನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದರು. 'ಬೆಳೆಯುವ ಪೈರು ಮೊಳಕೆಯಲ್ಲೇ' ಎಂಬಂತೆ ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು.


*ಅಧ್ಯಾತ್ಮ*

ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ,ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಮಹಾಬಲೇಶ್ವರ ಆರ್ ಕ್ಯಾಸನೂರು ಇವರ ಹೊಸ ಜ್ಞಾನ - ತತ್ವಗಳನ್ನ ಬಹುವಾಗಿ ಮೆಚ್ಚಿಕೊಂಡಿದ್ದರು


ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು. ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂತು. ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳವಾಗಿ ಮಹತ್ವ ಪಡೆಯಿತು.


*ಪ್ರವಚನ*

ನಿಸ್ವಾರ್ಥ ಸೇವೆ, ಮಮಕಾರಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಆಶ್ರಯತಾಣವಾಗಿ ಬೆಳೆಯಿತು. ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು. ಕರ್ನಾಟಕವಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಗಿ ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರು.


ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸಿದ್ದೇಶ್ವರರ ಪ್ರವಚನ ಕೇಳಿದವರು ಅದರಲ್ಲೇ ಅನುರಕ್ತರಾಗಿ ಬಿಡುತ್ತಾರೆ. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಸಹ ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ.. ಒಂದು ಗಂಟೆಯ ಅವರ ಪ್ರವಚನದುದ್ದಕ್ಕೂ ಸೇರಿದ ಅಷ್ಟು ತುಂಬು ತನ್ಮಯತೆಯಿಂದ ಕುಳಿತಿರುತ್ತಾರೆ. ಸೂಜಿಗಲ್ಲಿನಂತಹ ಸೆಳೆತ, ಅವರು ಭಾಷೆ,ಧಾಟಿ,ಪ್ರದಪ್ರಯೋಗ,ಉದಾಹಣೆಗಳ ಮೂಲಕ ಪ್ರಚಲಿತ ಸಂಗತಿಗಳನ್ನು ಸಮ್ಮಿಳಿತಗೊಳಿಸುವರು. ಜೊತೆಗೆ ಕಲ್ಲು,ಮಣ್ಣು,ಗಿಡ,ಮರ,ಹೂ,ಹಕ್ಕು,ಪಕ್ಷಿ,ಪ್ರಾಣಿಗಳಲ್ಲಿ ಜೀವಚೈತನ್ಯವಿದೆ ಎಂಬುದನ್ನು ಅವರು ವಿವರಿಸುವ ರೀತಿ ಅದ್ಬುತವಾದುದು. ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ದೇಶ್ವರರು ಮುಂದುವರಿಸಿಕೊಂಡು ಬರುತ್ತಿದ್ದರೂ ಅವರ ಯಾವ ಸಂಸ್ಥೆಗಳಿಗೂ ಆಶ್ರಮದ ಹೆಸರಾಗಲಿ, ಅವರ ಹೆಸರಾಗಲಿ ಇರುವುದಿಲ್ಲ ಎಂದರೆ ಆಶ್ಚರ್ಯವಲ್ಲವೆ? ಕೆರೆಯ ನೀರನ್ನು ಕೆರೆಗೆ ಚೆಲ್ಲಿ. ಎಂಬ ದಾಸ ವಾಣಿಯಂತೆ ನನ್ನದೇನಿದೆ,ಎಲ್ಲವೂ ಭಗವಂತನದು,ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು.ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತ ಇರುವ ಅಪರೂಪದ ಯೋಗಿಗಳು ಶ್ರೀ ಸಿದ್ದೇಶ್ವರರು.


*ಸಾಹಿತ್ಯ*

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು. ಎಂ.ಎ. ಪದವಿಯ ಅಭ್ಯಾಸದ ಸಮಯದಲ್ಲಿ ಶ್ರೀ ಸಿದ್ಧೇಶ್ವರರರು ಕೊಲ್ಹಾಪುರದಲ್ಲಿ ಶ್ರೀ ವಿಜಯ ಪಾಟೀಲರ ಮನೆಯಲ್ಲಿ ವಾಸವಿದ್ದರು. ಆ ಅವಧಿಯಲ್ಲಿಯೇ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ "ಸಿದ್ದಾಂತ ಶಿಖಾಮಣಿ "ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು.ಆಗ ಅವರಿಗೆ ಕೇವಲ 19 ವರ್ಷ ಮಾತ್ರ ಆಗಿತ್ತೆಂಬುದು ಗಮನಾರ್ಹ. ಸಿದ್ದೇಶ್ವರರ ಮಾತು ಎಂದರೆ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಬಲು ಪ್ರೀತಿ. ಆತ ಮಹಾ ಬುದ್ದಿವಂತ, ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಪರಿಜ್ಞಾನವಿದೆ. ಮುಂದೆ ಜಗತ್ತಿಗೇ ದೊಡ್ಡವನಾಗುತ್ತಾನೆ ಎಂದು ವಿಶ್ವಾಸದಿಂದ ಎಲ್ಲರೆದುರು ಹೇಳುತ್ತಿದ್ದರು. ಸ್ನಾತಕೋತ್ತರ ಪದವಿ ಪಡೆದು ವಿಜಯಪುರಕ್ಕೆ ಹಿಂದಿರುಗಿದ ನಂತರ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ, ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ವ್ಯಾಖ್ಯಾನವನ್ನು ನೀಡಿ ಅವರ ಜ್ಙಾನದಿಗಂತವನ್ನು ವಿಸೃತಗೊಳಿಸಿದರು. ಪೂಜ್ಯರು ಉಪನಿಷತ್ತುಗಳು, ಭಗವದ್ಗೀತೆ,ಯೋಗಸೂತ್ರ,ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಹೇಗೆ ಗುರು ಮುಖೇನ ಕಲಿತ ಜ್ಙಾನವನ್ನು ಬಳಸಿಕೊಂಡು ಬೋದಪ್ರದ ಪ್ರವಚನಗಳನ್ನು ನೀಡುತ್ತಿದ್ದಾರೆ. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಉಳಿಯುವಂತೆ ವಿವರಿಸುವುದೇ ಅವರ ವೈಶಿಷ್ಟ್ಯ.


ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ, ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ಧರಾದ ಶ್ರೀ ಸಿದ್ದೇಶ್ವರ ಸ್ವಾಮಿಜಿಯು ದೈವಭಕ್ತಿ ಎಂಬ ನೈಜ ಮತ್ತು ನೇರ ಉದಾಹರಣೆಯಾಗಿದೆ. ಅವರ ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರವನ್ನು ತರುತ್ತವೆ ಮತ್ತು ಅಂತಿಮವಾಗಿ ಶಾಂತಿಯುತ ಮತ್ತು ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ. ಮಾನವರು ಜೀವಾಧಾರಕರಾಗಿದ್ದು, ವಯಸ್ಸಿನ ಕೆಳಗೆ ದೈವಿಕರಾಗಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜೀವಂತ ದೇವರಿಗೆ ಹೋಲಿಸಬಹುದಾದ ಮಾನವರಲ್ಲಿ ಒಬ್ಬರು. ಅವರ ಗುಣಗಳನ್ನು ವಿವರಿಸುವಲ್ಲಿ ಪದಗಳು ಕಡಿಮೆಯಾಗಬಹುದು. ಅವರ ಅನಿಸಿಕೆಗಳನ್ನು ಅನಕ್ಷರಸ್ಥರಿಂದಲೂ ಚೆನ್ನಾಗಿ ಅರ್ಥಪೂರ್ಣವಾಗಿ ಅರ್ಥೈಸಿಕೊಳ್ಳಬಹುದು. ಅವರು ಬಹಳ ಅರ್ಥಮಾಡಿಕೊಳ್ಳುವ ಮತ್ತು ಆನಂದಿಸುವ ರೀತಿಯಲ್ಲಿ ಬಹಳ ಕಠಿಣ ವಿಷಯಗಳನ್ನು ಬೋಧಿಸುತ್ತಾರೆ. ಉತ್ತರ ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ಸ್ವಾಮೀಜಿಯವರು ವರ್ಷಾದ್ಯಂತ ಪ್ರಯಾಣಿಸಿರುವ ಸ್ಥಳಗಳಾದ್ಯಂತ ಮತ್ತು ಅವರ ವೀಡಿಯೊಗಳನ್ನು ಆನ್ಲೈನ್ನಲ್ಲಿ ಅವರು ಪ್ರಪಂಚದಾದ್ಯಂತ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ. ಅವನ ಉಪಸ್ಥಿತಿಯಲ್ಲಿ ಅವನ ಪ್ರಾಮುಖ್ಯತೆಯನ್ನು ಮಾತ್ರ ತಿಳಿಯಬಹುದಾಗಿದೆ. ಅವರು ಕರ್ನಾಟಕದ ವಿಜಯಜಪುರದ ಜ್ಞಾನ ಯೋಗಶ್ರಮದ ಸಂಸ್ಥಾಪಕರಾಗಿದ್ದಾರೆ. ತನ್ನ ಪದಗಳ ಮೂಲಕ ಮತ್ತು ಸಂತೋಷದಿಂದ ಸಾವಿರಾರು ಜನರ ಜೀವನವನ್ನು ಮಾಡುವ ಶ್ರೇಯ ಅವರಿಗೆ ಸಲ್ಲುತ್ತದೆ.


*ಉಪನ್ಯಾಸ*

ಅವರ ಉಪನ್ಯಾಸ ಸರಣಿಯ "ಬದುಕುವದು ಹೇಗೆ," ನಾವು ಹೇಗೆ ಬದುಕಬೇಕು / ದಾರಿ ಮಾಡಿಕೊಳ್ಳಬೇಕು "ಲಕ್ಷಾಂತರ ಭಾರತೀಯರನ್ನು ರೂಪಾಂತರಿಸಿದೆ. ಜೀವನದಲ್ಲಿ ಸಂತೃಪ್ತಿ ಮತ್ತು ಸಂತೋಷದ ಬಗ್ಗೆ ಪ್ರಾಯೋಗಿಕ ಪಾಠಗಳನ್ನು ಜನರು ಮೆಚ್ಚಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಲಮ ಪ್ರಭುನ ವಚನಗಳ ಮೇಲೆ ಅಧಿಕೃತ ಭಾಷಣಕಾರರಾಗಿದ್ದಾರೆ. ಅವರು ವಚನಗಳ ಬಗ್ಗೆ ಹೊಸ ಬೆಳಕನ್ನು ಎಸೆದಿದ್ದಾರೆ. ವಿಶ್ವದ ತತ್ವಜ್ಞಾನಿಗಳ ಹೋಲಿಕೆಯು ಒಂದು ನಿರ್ದಿಷ್ಟ ವಿಷಯದ ದೃಷ್ಟಿಕೋನಕ್ಕೆ ಒಳಪಡಿಸಿದಾಗ ಅವರ ಉಪನ್ಯಾಸದ ಅತ್ಯುತ್ತಮ ಹೊರಬಂದಿದೆ. ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದ್ದಾರೆ. ಲೀಡ್ನ ನೆಮ್ಮದಿಯ ಜೀವನವು ಉದಾಹರಣೆಗೆ! ತತ್ವಜ್ಞಾನಿ, ಆಲೋಚಕ ಸ್ವಾಮಿಜಿ ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರವಚನಗಳನ್ನು ವಿತರಿಸಿದ್ದಾರೆ. ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಆಧ್ಯಾತ್ಮಿಕತೆಗೆ ಮೀಸಲಿಟ್ಟಿದ್ದಾರೆ ಮತ್ತು ಭಾರತದ ಸಂತರು ಮತ್ತು ಸಿಯರ್ಸ್ ಕೃತಿಗಳ ಆಧಾರದ ಮೇಲೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವೇದಾಂತ, ಗೀತಾ, ಯೋಗಸೂತ್ರ, ವಚನಗಳ ಕುರಿತಾದ ಶ್ರೀ ಸ್ವಾಮಿಜಿಯವರ ಉಪನ್ಯಾಸಗಳು ಅವುಗಳ ಮೂಲತೆ, ಚಿಂತನೆ, ಅಭಿವ್ಯಕ್ತಿ ಮತ್ತು ಚಿಂತನೆಗಾಗಿ ಹೆಸರುವಾಸಿಯಾಗಿದೆ. ಶ್ರೀ ಸ್ವಾಮೀಜಿ ಅವರು ತಮ್ಮ ಪಂಥಜಿಯವರ "ಪಥಜಲಿಯ ಯೋಗಶಾತ್ರ" ವನ್ನು ಮಹಾನ್ ಪಾಂಡಿತ್ಯಪೂರ್ಣ ಪಾಂಡಿತ್ಯದೊಂದಿಗೆ ಸಂಪಾದಿಸಿದ್ದಾರೆ. ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರ ಸರಳತೆ, ಯೋಗದ ಮನೋಭಾವಗಳು, ಸಹಾನುಭೂತಿ, ಆಧ್ಯಾತ್ಮಿಕ ಸಮಸ್ಯೆಗಳಿಗೆ ಸೃಜನಶೀಲ ವಿಧಾನ ಮತ್ತು ಅವರ ಹೋಲಿಸಲಾಗದ ಶಾಂತ ಮತ್ತು ಸಂಯೋಜನೆ ನಿಜವಾಗಿಯೂ ಪ್ರೇಕ್ಷಕರು ಉತ್ಸಾಹದಿಂದ ಮತ್ತು ಪ್ರಬುದ್ಧರಾಗಿದ್ದಾರೆ. ಅವರ ಪ್ರವಚನವು ಅವರ ನಿಖರತೆ ಮತ್ತು ನುಗ್ಗುವಿಕೆಗೆ ಹೆಸರುವಾಸಿಯಾಗಿದೆ.


*ಜೀವನ ಶೈಲಿ*

ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದ್ದಾರೆ. ತತ್ವಜ್ಞಾನಿ, ಆಲೋಚಕ ಸ್ವಾಮಿಜಿ ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರವಚನಗಳನ್ನು ವಿತರಿಸಿದ್ದಾರೆ. ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಆಧ್ಯಾತ್ಮಿಕತೆಗೆ ಮೀಸಲಿಟ್ಟಿದ್ದಾರೆ ಮತ್ತು ಭಾರತದ ಸಂತರು ಮತ್ತು ಸಿಯರ್ಸ್ ಕೃತಿಗಳ ಆಧಾರದ ಮೇಲೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವೇದಾಂತ, ಗೀತಾ, ಯೋಗಸೂತ್ರ, ವಚನಗಳ ಕುರಿತಾದ ಶ್ರೀ ಸ್ವಾಮಿಜಿಯವರ ಉಪನ್ಯಾಸಗಳು ಅವುಗಳ ಮೂಲತೆ, ಚಿಂತನೆ, ಅಭಿವ್ಯಕ್ತಿ ಮತ್ತು ಚಿಂತನೆಗಾಗಿ ಹೆಸರುವಾಸಿಯಾಗಿದೆ. ಶ್ರೀ ಸ್ವಾಮೀಜಿ ಅವರು ತಮ್ಮ ಪಂಥಜಿಯವರ "ಪಥಜಲಿಯ ಯೋಗಶಾತ್ರ" ವನ್ನು ಮಹಾನ್ ಪಾಂಡಿತ್ಯಪೂರ್ಣ ಪಾಂಡಿತ್ಯದೊಂದಿಗೆ ಸಂಪಾದಿಸಿದ್ದಾರೆ. ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರ ಸರಳತೆ, ಬೇರ್ಪಡುವಿಕೆ, ಯೋಗದ ಮನೋಭಾವಗಳು, ಸಹಾನುಭೂತಿ, ಆಧ್ಯಾತ್ಮಿಕ ಸಮಸ್ಯೆಗಳಿಗೆ ಸೃಜನಶೀಲ ವಿಧಾನ ಮತ್ತು ಅವರ ಹೋಲಿಸಲಾಗದ ಶಾಂತ ಮತ್ತು ಸಂಯೋಜನೆ ನಿಜವಾಗಿಯೂ ಪ್ರೇಕ್ಷಕರು ಉತ್ಸಾಹದಿಂದ ಮತ್ತು ಪ್ರಬುದ್ಧರಾಗಿದ್ದಾರೆ. ಅವರ ಪ್ರವಚನವು ಅವರ ನಿಖರತೆ ಮತ್ತು ನುಗ್ಗುವಿಕೆಗೆ ಹೆಸರುವಾಸಿಯಾಗಿದೆ. ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಪರಮ ಪೂಜ್ಯ ಮಲ್ಲಯ್ಯಮಹಾ ಸ್ವಾಮೀಜಿಯವರೊಂದಿಗೆ ಅಪಾರ ಸಂಬಂಧ ಹೊಂದಿದ್ದರು. 


*ಪ್ರಶಸ್ತಿಗಳು*

ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ. ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಆದರೆ ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವ ಉದ್ದೇಶ ನನ್ನದು. ಹಾಗಾಗಿ ಪ್ರಶಸ್ತಿಗಳ ಅವಶ್ಯತೆಯು ನನಗಿಲ್ಲ. ಎಲ್ಲ ಗೌರವಾಧರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ಅನ್ಯಥಾ ಭಾವಿಸದಿರಿ ಎಂದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ


ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿತ್ತು. ಅದನ್ನೂ ಶ್ರೀಗಳು ಸ್ವೀಕರಿಸಿರಲಿಲ್ಲ. ಹೀಗೆ ತಮಗೆ ಸಂದ ಎಷ್ಟೋ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಅವರು ವಿನಮೃವಾಗಿಯೇ ನಿರಾಕರಿಸಿದ್ದಾರೆ. ಇದಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ, “ಅವರು ಆಧ್ಯಾತ್ಮ, ಆದರ್ಶ ಮತ್ತು ನೈತಿಕತೆ ಬಗ್ಗೆ ಕೇವಲ ಬೋಧನೆ ಮಾಡುವುದಷ್ಟೇ ಅಲ್ಲ. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ನುಡಿದಂತೆ ನಡೆಯುವ ಮತ್ತು ನಡೆದಂತೆಯೇ ನುಡಿಯುವ ವ್ಯಕ್ತಿತ್ವ ಅವರದು,” ಎಂದು ಸ್ವಾಮೀಜಿಯನ್ನು ಹತ್ತಿರದಿಂದ ಕಂಡಿರುವವರೊಬ್ಬರು ಹೇಳುತ್ತಾರೆ.

Saturday, January 14, 2023

ಶಿವಯೋಗಿ ಸಿದ್ಧರಾಮೇಶ್ವರ

 


ಸೊನ್ನಲಿಗೆಯನ್ನು ಭೂಕೈಲಾಸವನ್ನಾಗಿಸಿದ ಶಿವಯೋಗಿ ಸಿದ್ಧರಾಮೇಶ್ವರ


ವಚಿಸಿ ಅನುಭವಿಯಾಗದವ ಪಿಶಾಚಿಯಯ್ಯಾ

ವಚಿಸಿ ಅನುಭವಿಯಾದವ ಪಂಡಿತನಯ್ಯಾ

ವಿದ್ಯೆಯೆಂಬುದು ಅಭ್ಯಾಸಿಕನ ಕೈವಶ

ಅವಿದ್ಯೆಯೆಂಬುದು ಸರ್ವರಲ್ಲಿ ವಶ

ವಿದ್ಯಾವಿದ್ಯೆಯನರಿತು ಜಗದ್ವೇದ್ಯನಾಗಬಲ್ಲಡೆ

ಮಹಾಪಂಡಿತ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ.

ಪಾಂಡಿತ್ಯಕ್ಕಿಂತ ಅನುಭಾವಕ್ಕೆ ಮತ್ತು ಹೃದಯಶುದ್ಧಿಗೆ ಹೆಚ್ಚು ಮಹತ್ವ ನೀಡಿದ ಸಿದ್ಧರಾಮೇಶ್ವರರ ವಚನ ನಮ್ಮ ನಡಾವಳಿಗಳನ್ನು ತಿದ್ದಿಕೊಳ್ಳಲು ಒರೆಗಲ್ಲಾಗಿದೆ. ಒಂದು ಕುಗ್ರಾಮವಾಗಿದ್ದ ಸೊನ್ನಲಿಗೆಯನ್ನು ಭೂಕೈಲಾಸವನ್ನಾಗಿ ಪರಿವರ್ತಿಸುವುದರ ಮೂಲಕ ಕೇವಲ ಕನಸುಗಾರನಾಗಿರದೆ ಕರ್ತವ್ಯಶಾಲಿಯಾಗಿ ತನ್ನ ಆದರ್ಶಗಳನ್ನು ವಾಸ್ತವವಾಗಿಸಿದ ಸಿದ್ಧರಾಮೇಶ್ವರರು ಶರಣ ದಂಪತಿಗಳಾದ ಮೊರಡಿಯ ಮುದ್ದುಗೌಡ ಮತ್ತು ಸುಗ್ಗವ್ವೆ ಎಂಬ ದಂಪತಿಗಳ ಸುಪುತ್ರರಾಗಿ ಸೊನ್ನಲಿಗೆಯಲ್ಲಿ ಮಹಾರಾಷ್ಟ್ರದ ಇಂದಿನ ಸೊಲ್ಲಾಪುರ) ಜನಿಸಿದರು. ಬಾಲ್ಯದಲ್ಲಿ ತಂದೆ ತಾಯಿ ಇವರಿಗೆ ಧೂಳಿಮಾಕಾಳ ಎಂದು ಹೆಸರಿಟ್ಟರು. ದನ ಕಾಯುವ ಮುಗ್ಧ ಹುಡುಗ ಆದರ್ಶ ಶಿವಯೋಗಿಯಾದುದು ನಮಗೆ ಪವಾಡಸದೃಶದ ರೀತಿ ಗೋಚರವಾಗುತ್ತದೆ.

      ಸಿದ್ಧರಾಮೇಶ್ವರರ ಜನ್ಮಸ್ಥಳದ ಬಗ್ಗೆ ಸ್ವಲ್ಪ ಗೊಂದಲವಿದೆ. ಮಹಾರಾಷ್ಟ್ರದ ದಕ್ಷಿಣ ಪೂರ್ವದಲ್ಲಿ ಕರ್ನಾಟಕದ ಗಡಿಯಲ್ಲಿರುವ ಜಿಲ್ಲಾ ಕೇಂದ್ರವಾದ ಸೊಲ್ಲಾಪುರವೇ ಸಿದ್ಧರಾಮೇಶ್ವರರ ಜನ್ಮಸ್ಥಳ ಎಂದು ಕರೆಯಲಾಗುತ್ತಿದೆ. ಆದರೆ ಬೆಲ್ದಾಳ ಶರಣರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಸೊನ್ನಲಿಗೆ ಸಿದ್ಧರಾಮೇಶ್ವರರ ಜನ್ಮಸ್ಥಳ ಎಂದು ಅನೇಕ ಆಧಾರಗಳಿಂದ ವಾದಿಸುತ್ತಾರೆ. ಆದರೆ ಚಿದಾನಂದಮೂರ್ತಿರವರು ಇದು ಸತ್ಯಕ್ಕೆ ದೂರವಾದುದು ಎಂದು ತಿಳಿಸಿರುತ್ತಾರೆ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನಲ್ಲಿ ಕೂಡಾ ಸೊಲ್ಲಾಪುರ ಎಂಬ ಗ್ರಾಮವಿದೆ. ಮೂರು ಕಡೆ ಸಿದ್ಧರಾಮೇಶ್ವರರ ದೇವಾಲಯ ಮತ್ತು ಕೆರೆಗಳಿರುವುದನ್ನು ಕಾಣಬಹುದು.

  ಸಿದ್ಧರಾಮೇಶ್ವರರ ಬದುಕು ಮತ್ತು ವ್ಯಕ್ತಿತ್ವವನ್ನು ತಿಳಿಯಲು ಅವರು ಬರೆದಿರುವ ವಚನಗಳೇ ಮೂಲ ಆಕರವಾದರೂ ಅವರ ಬದುಕಿನ ಎಲ್ಲಾ ಸಂಗತಿಗಳನ್ನು ವಚನಗಳಿಂದ ತಿಳಿಯಲು ಸಾಧ್ಯವಿಲ್ಲ. ಏಕೆಂದರೆ ಶರಣರ ವಚನಗಳು ಅಂದಂದಿನ ಅನುಭವ ಮತ್ತು ಅನುಭಾವಗಳಿಗೆ ವಚನಕಾರರ ಮನಸ್ಸು ಹೇಗೆ ಸ್ಪಂದಿಸಿತು ಎಂಬುದಕ್ಕೆ ಅಕ್ಷರ ಮಾಧ್ಯಮದ ಮೂಲಕ ತಿಳಿಯಪಡಿಸುತ್ತದೆ. ಈ ಇತಿಮಿತಿಯಿಂದ ಯಾವುದೇ ಶರಣರ ಸಮಗ್ರ ಬದುಕಿನ ವಿವರಗಳನ್ನು ಅವರು ಬರೆದಿರುವ ವಚನಗಳಿಂದ ಗುರುತಿಸಲಾಗದು ಎಂದು ಡಾ. ಎಸ್. ವಿದ್ಯಾಶಂಕರರವರು ಹೇಳಿರುವುದು ಸರಿಯಾಗಿದೆ. 

   ಸಿದ್ಧರಾಮೇಶ್ವರರ ಜೀವನ ಚರಿತ್ರೆಯನ್ನು ಎರಡು ಹಂತಗಳಲ್ಲಿ ಗುರುತಿಸಬಹುದು. ಮೊದಲ ಹಂತ ಸೊನ್ನಲಿಗೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದುದು. ಎರಡನೇ ಹಂತ ಕಲ್ಯಾಣಕ್ಕೆ ಬಂದು ಶರಣರ ಜೊತೆ ಸೇರಿಕೊಂಡು ತಾನು ಹಿಂದೆ ಮಾಡಿದ ಲೌಕಿಕ, ಸಾಮಾಜಿಕ ಕಾರ್ಯಗಳ ಬಗೆಗೆ ಪಶ್ಚತ್ತಾಪವನ್ನು ಹೊಂದಿದುದು. ಮೊದಲನೆಯ ಹಂತ ಲೋಕೋಪಕಾರಿಯಾಗಿ, ಸರ್ವಜೀವ ದಯಾಪಾರಿಯಾಗಿದ್ದರೆ, ಎರಡನೇ ಹಂತ ಲೋಕವನ್ನು ನಿರಾಕರಿಸಿ ಅನುಭಾವವನ್ನು ಸಂಪಾದಿಸುವ ಕಡೆ ಲಕ್ಷ್ಯವಿರಿಸುವಂತಹದ್ದು.

   “ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು. ಅನುಗೊಂಬನಿತು ಕಾಯಕಂ ನಡೆಯುತ್ತಿರಬೇಕು” ಎನ್ನುತ್ತಾ ಸಿದ್ಧರಾಮೇಶ್ವರರು ತಾವೇ ಸ್ವತಃ ದುಡಿಯುತ್ತಾ, ತಮ್ಮ ಶಿಷ್ಯರನ್ನು ದುಡಿಸುತ್ತಾ ಸೊಲ್ಲಾಪುರದಲ್ಲಿ ಕೆರೆ, ತೊರೆ ಮತ್ತು ದೇಗುಲಗಳನ್ನು ನಿರ್ಮಾಣ ಮಾಡತೊಡಗಿದರು. ಕೆರೆ, ತೊರೆ, ದೇಗುಲಂಗಳ ಕಡೆಯಿಂದ ನಿಮ್ಮ ಕಂಡೆ ಎಂಬ ಸಿದ್ಧರಾಮೇಶ್ವರರ ಮಾತಿನಲ್ಲಿ ಲೋಕಕಲ್ಯಾಣದ ಸಂಕಲ್ಪವನ್ನು ಕಾಣಬಹುದು. ತ್ರಿಪುರಾಂತಕ ಕೆರೆಯ ನಿರ್ಮಾಣದ ಮೂಲಕ ಸಕಲ ಜೀವಾವಳಿಯ ಬಾಯಾರಿಕೆಯನ್ನು, ತೊರೆಯ ನಿರ್ಮಾಣದ ಮೂಲಕ ಜನರ ಹಸಿವನ್ನು ಮತ್ತು ದೇವಾಲಯದ ನಿರ್ಮಾಣದ ಮೂಲಕ ಜನರ ಮನಸ್ಸಿನಲ್ಲಿ ಭಕ್ತಿಯ ಬೀಜ ಬಿತ್ತಬಹುದು ಎಂಬುದು ಅವರ ಅಭಿಲಾಷೆಯಾಗಿತ್ತು. ಲೋಕದ ಜನರ ಕಲ್ಯಾಣ ಕಾರ್ಯದಲ್ಲಿ ನಿರತರಾಗಿದ್ದ ಸಿದ್ಧರಾಮೇಶ್ವರರು ಜನರಿಗೆ ಯಾವ ರೀತಿ ಅನಿವಾರ್ಯವಾಗಿದ್ದರು ಎಂದರೆ ಯಾರಾದರೂ ಹಾವು ಕಡಿದು ಸತ್ತರೆ, ಬೆಂಕಿಯಲ್ಲಿ ಸಿಕ್ಕಿ ಪ್ರಾಣ ಬಿಟ್ಟರೆ, ಯಾವುದಾದರೂ ಕಾಯಿಲೆಯಿಂದ ಜೀವ ಹೋದರೆ ಅವರನ್ನು ಹೊತ್ತುಕೊಂಡು ಬಂದು ಸಿದ್ಧರಾಮೇಶ್ವರರ ಮನೆಯ ಬಾಗಿಲಲ್ಲಿ ಬಿಟ್ಟು ಹೋಗುತ್ತಿದ್ದರು. ಅವರಿಗೆಲ್ಲಾ ಸಿದ್ಧರಾಮೇಶ್ವರರೇ ಸದ್ಗತಿ ಕಾಣಿಸುತ್ತಿದ್ದರು ಎಂದು ಸಿದ್ಧರಾಮೇಶ್ವರ ಚಾರಿತ್ರದಲ್ಲಿ ಉಲ್ಲೇಖವಾಗಿದೆ. ಹೀಗೆ ಸಿದ್ಧರಾಮೇಶ್ವರರು ಜನಸಾಮಾನ್ಯರ ನಡುವೆ ಅಸಾಮಾನ್ಯರಾಗಿ ಬೆಳೆಯುತ್ತಾ ಕಾಯಕ ಮತ್ತು ಸ್ಥಾವರಲಿಂಗಪೂಜೆಯಲ್ಲಿ ನಿರತರಾಗಿದ್ದರು.

     ಜ್ಞಾನ ಭಾಸ್ಕರರಾದ ಅಲ್ಲಮಪ್ರಭುಗಳು ಬಳ್ಳಿಗಾವೆಯಿಂದ ಹೊರಟು ಬನವಾಸಿಯನ್ನು ದಾಟಿ ಕಲ್ಯಾಣಕ್ಕೆ ಹೋಗುವ ಮಾರ್ಗದುದ್ದಕ್ಕೂ ಭೇಟಿಯಾದ ಶರಣರ ದಾರಿಯನ್ನು ನಿಚ್ಚಳಗೊಳಿಸಿ ಸೊನ್ನಲಿಗೆಗೆ ಬರುತ್ತಾರೆ. ಕೆರೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ, ಸಿದ್ಧರಾಮೇಶ್ವರರ ಶಿಷ್ಯರನ್ನು ಅಲ್ಲಮರು ಕೆಣಕಿ ‘ಒಡ್ಡರಾಮ’ ಎಂದು ಗೇಲಿ ಮಾಡುತ್ತಾರೆ. ಇದರಿಂದ ಸಿದ್ಧರಾಮೇಶ್ವರರಿಗೆ ಕ್ರೋಧಾಗ್ನಿ ಉಂಟಾದಾಗ ಅಲ್ಲಮಪ್ರಭುಗಳು ಶಾಂತಗೊಳಿಸಿ ಹೀಗೆ ಹೇಳುತ್ತಾರೆ.

                    ಅನ್ನವನಿಕ್ಕಿ ನನ್ನಿಯ ನುಡಿದು

                    ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆ

                    ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ

                    ಶಿವನ ನಿಜವು ಸಾಧ್ಯವಾಗದು,

  ಗುಹೇಶ್ವರನನರಿಯದ ಶರಣಂಗೆ ಆವ ಫಲವೂ ಇಲ್ಲ.

ಅಲ್ಲಮಪ್ರಭುಗಳ ಈ ವಚನದಿಂದ ಸಿದ್ಧರಾಮೇಶ್ವರರ ಮನ ತೊಯ್ದಾಡಲಾರಂಭಿಸುತ್ತದೆ. ಜನರ ಸಂತೆಯಲ್ಲಿಯೇ ಮುಳುಗಿ, ಲೌಕಿಕ ಬಂಧನಗಳಲ್ಲಿ ಸಿಲಿಕಿದ್ದ ಸಿದ್ಧರಾಮೇಶ್ವರರ ದೃಷ್ಟಿಯನ್ನು ಮತ್ತೊಂದು ಕಡೆ ಹೊರಳಿಸುತ್ತಾರೆ. 

ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ

                     ಬಲಿದು ಷಡ್ವಿಧಭಕ್ತಿಯೆಂಬ ಸೋಪಾನದಿಂದ

                     ಪರಮಾನಂದವೆಂಬ ಜಲವ ತುಂಬಿ

                     ಕೆರೆಯ ಕಟ್ಟಬಲ್ಲವರನಾರನೂ ಕಾಣೆ

          ನಾನು ಕಟ್ಟಿದ ಕೆರೆಯು ಸ್ಥಿರವಾಯಿತ್ತು ಗುಹೇಶ್ವರಾ ನಿಮ್ಮಾಣೆ.

ಅಲ್ಲಮರ ಈ ವಚನ ಸಿದ್ಧರಾಮೇಶ್ವರರನ್ನು ಮತ್ತಷ್ಟು ಚಿಂತನೆಗೆ ಹಚ್ಚುತ್ತದೆ.

ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ

                   ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ

                   ಒಡೆದು ಸಂಸಾರದ ಹೆಂಟೆಯ ಬಗಿದು

     ಬಿತ್ತಿದೆನಯ್ಯಾ ಬ್ರಹ್ಮಬೀಜವ. ಅಖಂಡಮಂಡಲವೆಂಬ ಬಾವಿ

  ಪವನವೆ ರಾಟಾಳ ಸುಷುಮ್ನನಾಳದಿಂದ ಉದಕವ ತಿದ್ದಿ

        ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ

                   ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು 

                   ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.

ಅಲ್ಲಮಪ್ರಭು ಈ ವಚನದ ಮೂಲಕ ತಾವು ನಿರ್ಮಿಸಿದ ಆಧ್ಯಾತ್ಮಿಕ ತೋಟದ ಪರಿಚಯ ಮಾಡಿಕೊಡುತ್ತಾರೆ. ಸಿದ್ಧರಾಮೇಶ್ವರರನ್ನು ತಮ್ಮ ಜೊತೆ ಕಲ್ಯಾಣಕ್ಕೆ ಕರೆದುಕೊಂಡು ಹೋಗಿ ಹೊಸ ಪ್ರಪಂಚವನ್ನು ಪರಿಚಯಿಸಿದರು. ಕಲ್ಯಾಣದ ಶರಣರ ಸಂಪರ್ಕದಿಂದ ಸ್ಥಾವರ ಪೂಜೆಗಳಲ್ಲಿ ಮುಳುಗಿದ್ದ ತಮ್ಮ ಬದುಕನ್ನು ಸಾಂಕೇತಿಕ ರೂಪಕ್ಕಿಳಿಸಿ ಜಂಗಮದ ಮಹತ್ವ ಅರಿಯುತ್ತಾರೆ. ಚೆನ್ನಬಸವಣ್ಣನವರ ಜ್ಞಾನಕ್ಕೆ ತಲೆದೂಗಿ ಅವರಿಂದ ಇಷ್ಟಲಿಂಗದೀಕ್ಷೆ ಪಡೆಯುತ್ತಾರೆ. ಬಸವಾದಿ ಪ್ರಮಥರ ಸಹವಾಸದಲ್ಲಿ ಅನುಭವಮಂಟಪದ ಚರ್ಚೆಗಳಲ್ಲಿ,  ಮಹಾಮನೆಯ ಕಾಯಕದಲ್ಲಿ ನಿರತರಾಗುತ್ತಾರೆ. ಶರಣರ ಅನುಭವ ಮಂಟಪದ ಅನುಭಾವದ ಸತ್ಯದ ಸಂಬಂಧದಿಂದಾಗಿ ವಚನಗಳನ್ನು ರಚಿಸುತ್ತಾ ಹೋಗುತ್ತಾರೆ. ಸಿದ್ಧರಾಮೇಶ್ವರರ ೧೯೬೬ ವಚನಗಳು ದೊರೆತಿವೆ.

ಅರುವತ್ತೆಂಟು ಸಾವಿರ ವಚನಂಗಳ ಹಾಡಿ ಹಾಡಿ

                    ಸೋತಿತೆನ್ನ ಮನ ನೋಡಯ್ಯಾ

    ಹಾಡುವುದೊಂದೇ ವಚನ, ನೋಡುವುದೊಂದೇ ವಚನ

                   ವಿಷಯ ಬಿಟ್ಟು, ನಿರ್ವಿಷಯನಾಗುವುದೊಂದೆ 

                   ವಚನ ಕಪಿಲಸಿದ್ಧಮಲ್ಲೇಶನಲ್ಲಿ.

 ಈ ವಚನ  ಇವರು ಅರವತ್ತೆಂಟು ಸಾವಿರ ವಚನಗಳನ್ನು ರಚಿಸಿರಬಹುದೇ ಎಂಬ ಸಂಶೋಧನೆಗೆ ಇಂಬು ನೀಡುತ್ತದೆ. ಇವರು ವಚನಗಳ ಜೊತೆಗೆ ನಾಲ್ಕು ತ್ರಿವಿಧಿಗಳನ್ನು ರಚಿಸಿರುವುದು ಕಂಡುಬರುತ್ತದೆ. ಅವುಗಳೆಂದರೆ ೧. ಬಸವಸ್ತೋತ್ರ ತ್ರಿವಿಧಿ ೨. ಮಿಶ್ರಸ್ತೋತ್ರ ತ್ರಿವಿಧಿ ೩. ಸಂಕೀರ್ಣ ತ್ರಿವಿಧಿ ೪. ಅಷ್ಟಾವರಣ ತ್ರಿವಿಧಿ. ಇವು ಬಸವಾದಿ ಶರಣರನ್ನು ಕುರಿತು ಭಾವ ತುಂಬಿ ಬರೆದ ರಚನೆಗಳಾಗಿವೆ. 

ಸೊನ್ನಲಿಗೆಯಲ್ಲಿ ಧೂಳಿಮಾಕಾಳನಾಗಿ ಜನಿಸಿ, ಶ್ರೀಶೈಲದ ಮಲ್ಲಯ್ಯನ ಮಾರ್ಗದರ್ಶನದಲ್ಲಿ ಸಿದ್ಧರಾಮನಾಗಿ, ಸೊನ್ನಲಿಗೆಯನ್ನು ಭೂಕೈಲಾಸವನ್ನಾಗಿಸಿ, ಅಲ್ಲಮಪ್ರಭುಗಳಿಂದ ಅರಿವಿನ ಕಣ್ಣು ತೆರೆದು ಕಲ್ಯಾಣ ಪ್ರವೇಶಿಸಿ ಆಧ್ಯಾತ್ಮದ ಹಾದಿ ಹಿಡಿದು ಬದುಕಿನಲ್ಲಿ ಹೊಸ ತಿರುವನ್ನು ಪಡೆದು ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣ ಉಳವಿಗೆಯ ಕಡೆ ಪಯಣ ಬೆಳೆಸಿದಾಗ ಅನುಭವಮಂಟಪದಲ್ಲಿ ಕೆಲ ಕಾಲ ಅಧ್ಯಕ್ಷರಾಗಿ ಮತ್ತೆ ಸೊನ್ನಲಿಗೆಗೆ ಹಿಂದಿರುಗಿ ತಾವೇ ನಿರ್ಮಿಸಿದ ಗೋಡೆಯಲ್ಲಿ ಬಯಲಾಗುತ್ತಾರೆ. ಇವರನ್ನು ಕುರಿತು ಸೊಡ್ಡಳ ಬಾಚರಸರು “ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳ ಸಿದ್ಧರಾಮನೊಬ್ಬನೆ ಯೋಗಿ” ಎಂದು ಹೊಗಳಿರುವುದು ಅರ್ಥಪೂರ್ಣವಾಗಿದೆ. 

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್

#೪೩೧, ೭ನೇ ಮುಖ್ಯರಸ್ತೆ, ೧೪ ನೇ ಅಡ್ಡರಸ್ತೆ

ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - ೫೭೦೦೨೬

ಮೊ. ೯೯೦೧೧೩೭೯೪೮

vachanakumaraswamy@gmail.com