1
ಒಬ್ಬ ಮಗ ತನ್ನ ವಯಸ್ಸಾದ ತಂದೆಯನ್ನು ರಾತ್ರಿ ಊಟಕ್ಕಾಗಿ ಉತ್ತಮ ರೆಸ್ಟೋರೆಂಟ್ಗೆ ಕರೆದೊಯ್ದ.
ಅಪ್ಪ ನಡುಗುವ ಕೈಯಿಂದ ಊಟಮಾಡುವಾಗ ತನ್ನ ಬಟ್ಟೆಗಳ ಮೇಲೆ ಹಲವಾರು ಬಾರಿ ಆಹಾರವನ್ನು ಚೆಲ್ಲಿಕೊಂಡ. ಬಾಯಿ , ಗಲ್ಲ , ಕುತ್ತಿಗೆ ಮೇಲೆಲ್ಲಾ ಆಹಾರದ ತುಣುಕುಗಳು ಕಾಣುತ್ತಿದ್ದವು.
ರೆಸ್ಟೋರೆಂಟ್ನಲ್ಲಿ ಊಟಮಾಡಲು ಕುಳಿತಿದ್ದ ಇತರ ಜನರು ಆ ವೃದ್ಧನನ್ನು ಅಸಹ್ಯದಿಂದ ನೋಡುತ್ತಿದ್ದರು. ಆದರೆ ಅವರ ಮಗನು ಶಾಂತವಾಗಿ ಕುಳಿತು ಅಪ್ಪನೊಡನೆ ಊಟಮಾಡುತ್ತಿದ್ದ.
ಊಟವಾದನಂತರ ಮಗ ಯಾವುದೇ ಮುಜಗರ, ನಾಚಿಕೆಯಿಲ್ಲದೆ ತನ್ನ ತಂದೆಯನ್ನು ವಾಶ್ ರೂಂಗೆ ಕರೆದೊಯ್ದ.
ಅವರ ಬಾಯಿ ಮುಖ ಕುತ್ತಿಗೆಗಳಿಂದ ಆಹಾರದ ತುಣುಕುಗಳನ್ನು ಮೆಲ್ಲಗೆ ಒರಸಿ ತೆಗೆದು ಅವರ ಬಟ್ಟೆಗಳನ್ನು ತನ್ನ ಕರವಸ್ತ್ರಕ್ಕೆ ನೀರು ಹಾಕಿಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿದ.
ಅವರ ತಲೆಗೂದಲನ್ನು ಬಾಚಿ , ಕನ್ನಡಕದ ಗಾಜುಗಳನ್ನು ತೊಳೆದು ಬಟ್ಟೆಯಿಂದ ಒರಸಿ ಮತ್ತೆ ಹಾಕಿದನಂತರ ಅವರನ್ನು ಹೊರಗೆ ಕರೆತಂದ.
ರೆಸ್ಟೋರೆಂಟ್ನಲ್ಲಿ ಎಲ್ಲರೂ ಮೌನವಾಗಿ ಅವನತ್ತಲೇ ನೋಡುತ್ತಿದ್ದರು.
ಅನಂತರ ಅವನು ಬಿಲ್ ಪಾವತಿಸಿ ಅಪ್ಪನೊಂದಿಗೆ ಹೊರಗೆ ಹೊರಟನು.
ಅಲ್ಲಿ ಊಟ ಮಾಡುತ್ತಿದ್ದ ಮತ್ತೊಬ್ಬ ವೃದ್ಧರು ಅವನನ್ನು ಕರೆದು ಕೇಳಿದರು - ನೀನು ಇಲ್ಲಿ ಏನನ್ನಾದರೂ ಬಿಟ್ಟು ಹೋಗುತ್ತಿದ್ದೀಯೆಂದು ನಿನಗೆ ಅನ್ನಿಸುತ್ತಿಲ್ಲವೇ...?
ಎಂದು ಕೇಳಿದರು
ಅದಕ್ಕೆ ಅವನು ಉತ್ತರಿಸಿದ - ಇಲ್ಲ ಸರ್, ನಾನು ಏನನ್ನೂ ಬಿಟ್ಟಿಲ್ಲ ಎಲ್ಲವನ್ನೂ ತೆಗೆದುಕೊಂಡಿದ್ದೇನೆ ಎಂದನು.
ವೃದ್ಧರು ಹೇಳಿದರು - ಮಗೂ , ನೀನು ಇಲ್ಲಿ ಪ್ರತಿಯೊಬ್ಬ ಮಗನಿಗೂ ಒಂದು ಶಿಕ್ಷಣವನ್ನು ಪಾಠವನ್ನು ಮತ್ತು ಪ್ರತಿಯೊಬ್ಬ ತಂದೆಗೂ ಒಂದು ಭರವಸೆಯನ್ನು ಬಿಟ್ಟುಹೋಗುತ್ತಿರುವೆ ಎಂದರು.
ಸಾಮಾನ್ಯವಾಗಿ ನಮ್ಮಂತಹಾ ವಯಸ್ಸಾದ ಹೆತ್ತವರನ್ನು ತಮ್ಮೊಂದಿಗೆ ಹೊರಗೆ ಕರೆದೊಯ್ಯಲು ಮಕ್ಕಳು ಇಷ್ಟಪಡುವುದಿಲ್ಲ , ಮತ್ತು ಅವರು ಹೇಳುತ್ತಾರೆ - ನೀವು ಅಲ್ಲಿಗೆ ಬಂದು ಏನು ಮಾಡುತ್ತೀರಿ...?
ನಿಮಗೆ ಅಷ್ಟು ದೂರ ಬರಲು ಶಕ್ತಿಯಿಲ್ಲ, ಬಂದರೂ ಸರಿಯಾಗಿ ತಿನ್ನುವುದಿಲ್ಲ.
ನೀವು ಮನೆಯಲ್ಲೇ ಇರಿ, ಅದು ನಿಮಗೇ ಒಳ್ಳೆಯದು ಎನ್ನುತ್ತಾರೆ.
ಆದರೆ ನೀವು ಚಿಕ್ಕವರಿದ್ದಾಗ ನಿಮ್ಮ ಅಪ್ಪ ನಿಮ್ಮನ್ನು ತಮ್ಮ ಹೆಗಲಮೇಲೆ ಹೊತ್ತು , ತೋಳುಗಳಲ್ಲಿ ಅವಚಿಕೊಂಡು ಕರೆದುಕೊಂಡು ಹೋಗುತ್ತಿದ್ದರು ಎಂಬುದನ್ನು ಮರೆತುಬಿಡುತ್ತಾರೆ.
ಮಗುವಾಗಿದ್ದಾಗ ನಿಮಗೆ ಸರಿಯಾಗಿ ತಿನ್ನಲು ಸಾಧ್ಯವಾಗದಿದ್ದಾಗ, ತಂದೆತಾಯಿ ತಮ್ಮ ಕೈಯಿಂದ ನಿಮಗೆ ಆಹಾರವನ್ನು ತಿನ್ನಿಸುತ್ತಿದ್ದರು ಮತ್ತು ನಿಮ್ಮ ಬಾಯಿಂದ ಆಹಾರವು ಶರೀರ, ಬಟ್ಟೆಗಳ ಮೇಲೆ ಬಿದ್ದಾಗ, ಅವರು ನಿಮ್ಮನ್ನು ಬೈಯದೆ ಪ್ರೀತಿಯಿಂದ ಸ್ವಚ್ಛ ಗೊಳಿಸುತ್ತಿದ್ದರು.
ಹಾಗಾದರೆ ಅದೇ ಹೆತ್ತವರು ವೃದ್ಧಾಪ್ಯದಲ್ಲಿ ಮಕ್ಕಳಿಗೆ ಹೊರೆಯಾಗಿರುವುದು ಏಕೆ...?
ಪೋಷಕರು ದೇವರ ರೂಪ. ಅವರಿಗೆ ಸೇವೆ ಮಾಡಿ, ಮತ್ತು ಪ್ರೀತಿಯನ್ನು ನೀಡಿ ನೆನಪಿಡಿ , ನಿಮಗೂ ವಯಸ್ಸಾಗುತ್ತದೆ. ನೀವೂ ವೃದ್ಧರಾಗುತ್ತೀರಿ.
#ನಿಮ್ಮ_ತಂದೆತಾಯಿಯರನ್ನು_ಯಾವಾಗಲೂ_ಗೌರವಿಸಿ 🙏
2
ದಿನಕ್ಕೊಂದು ಕಥೆ
ಓದು(ವಿದ್ಯೆ) ಎಲ್ಲವನ್ನೂ ಕಲಿಸುವುದಿಲ್ಲ
ಟಿ.ಎನ್ ಶೇಷನ್ ಮಾಜಿ ಮುಖ್ಯ ಚುನಾವಣಾ ಆಯುಕ್ತ, ಒಮ್ಮೆ ಪತ್ನಿಯೊಂದಿಗೆ ವಿಹಾರಕ್ಕೆಂದು ಹೋಗುತ್ತಿದ್ದರು. ಮಾರ್ಗಮಧ್ಯದಲ್ಲಿ ರಸ್ತೆ ಬದಿಯಲ್ಲಿದ್ದ ತೋಟವೊಂದರಲ್ಲಿ ಹಕ್ಕಿಗಳ ಗೂಡುಗಳಿoದ ತುಂಬಿದ ದೊಡ್ಡ ಮಾವಿನ ಮರವನ್ನು ನೋಡಿದರು.
ಅವನ್ನು ನೋಡಿ ಮನಸೋತ ಶೇಷನ್ ಪತ್ನಿ ಒಂದೆರಡು ಗೂಡುಗಳನ್ನು ಮನೆಗೆ ತೆಗೆದುಕೊಂಡು ಹೋಗಬೇಕೆಂದುಕೊಳ್ಳುತ್ತಾರೆ. ಸಮೀಪದಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ಒಬ್ಬ ಯುವಕನನ್ನು ತಮ್ಮೊಡನೆ ಬಂದಿದ್ದ ಪೊಲೀಸ್ ಎಸ್ಕಾರ್ಟ್ನವರಿಂದ ಕರೆಸಿ ಆ ಗೂಡನ್ನು ಕೊಟ್ಟರೆ, 10 ರೂ. ಕೊಡುವೆವೆಂದು ಹೇಳಿದರು. ಅದಕ್ಕೆ ಅವನು ಒಪ್ಪದಿದ್ದಾಗ, ದರ ಹೆಚ್ಚಿಸಿ 50 ರೂಪಾಯಿ ಕೊಡುವೆನೆಂದರು ಶೇಷನ್. ಜೊತೆಗೆ ಇದ್ದ ಪೊಲೀಸರು ಕೂಡ ಆ ಗೂಡುಗಳನ್ನು ಕೊಡುವಂತೆ ಆದೇಶಿಸಿದರು.
ಆದರೂ ಹೆದರದ ಬೆದರದ ಆ ಯುವಕ ರೂ.50 ಅಲ್ಲ ನೀವು ಎಷ್ಟೇ ಕೊಟ್ಟರೂ ಆ ಗೂಡುಗಳನ್ನು ನಿಮಗೆ ನೀಡಲಾರೆ ಎಂದ. "ನೀವು ಕೊಡುವ ದುಡ್ಡಿನ ಆಸೆಗೆ ಆ ಗೂಡುಗಳನ್ನು ತೆಗೆದುಕೊಟ್ಟರೆ ಆ ಗೂಡುಗಳಲ್ಲಿರುವ ಪುಟ್ಟ ಹಕ್ಕಿ ಮರಿಗಳಿಗೆ ತೊಂದರೆಯಾಗುವುದಿಲ್ಲವೇ? ಅಲ್ಲದೆ ಆ ತಾಯಿ ಹಕ್ಕಿ ಸಂಜೆ ವಾಪಸು ಬಂದಾಗ ತನ್ನ ಮರಿಗಳನ್ನು ಕಾಣದೆ ಅದೆಷ್ಟು ತೊಳಲಬಹುದಲ್ಲವೇ?" ಎಂದ. ಇದನ್ನು ಕೇಳಿದ ಶೇಷನ್ ದಂಪತಿಗಳು ಶಾಕ್ ಆದರು.
ನನ್ನ ಸ್ಥಾನ, ನನ್ನ ಹುದ್ದೆ, ನನ್ನ ಓದು, ನನ್ನ service, ನನ್ನ ಐ.ಎ.ಎಸ್., ಎಲ್ಲವೂ ಕೂಡ ಆ ಯುವಕನ ಆ ಪುಟ್ಟ ಜೀವಿಗಳ ಬಗೆಗಿನ ಕಾಳಜಿಯ ಎದುರು ನನ್ನದು ಏನು ಅಲ್ಲ ಎನಿಸಿತು. ಮನೆಗೆ ಮರಳಿ ಬಂದ ನಂತರ ಬಹಳ ದಿನಗಳವರೆಗೂ ಈ ಘಟನೆಯ ಕುರಿತಾಗಿ ತಮ್ಮಲ್ಲಿ ಅಪರಾಧೀಭಾವ ಕಾಡುತ್ತಲೇ ಇತ್ತು.
ಮಾನವತ್ವದ ಎದುರು ಯಾವುದು ಸಮವಾಗಲಾರದು. ಮ್ಯಾನೇಜ್ಮೆಂಟ್ ಸೆಮಿನಾರ್ನಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಟಿ.ಎನ್ ಶೇಷನ್ ಹೇಳಿದ ಒಂದು ದೊಡ್ಡ ಅನುಭವದ ಮಾತು ಇದು.
3
ದಿನಕ್ಕೊಂದು ಕಥೆ
ಇರುವೆ ಕಲಿಸಿದ ಪಾಠ
ಅವರು ಹೆಸರಾಂತ ಕಾಲೇಜಿನ ಬುದ್ಧಿವಂತ ಪ್ರೊಫೆಸರ್, ಅವರಿಗೆ ಬಿಡಿಸಲಾಗದ ಒಂದು ಸಮಸ್ಯೆ ಎದುರಾಯಿತು. ಚೆನ್ನಾಗಿ ಓದುತ್ತಿದ್ದ ಅವರ ಮಗ, ವಿದ್ಯಾಭ್ಯಾಸದ ಮುಖ್ಯ ಹಂತಕ್ಕೆ ಬಂದಾಗ, ಅಲ್ಲಿ ಫೇಲ್ ಆಗಿಬಿಟ್ಟ. ಇದರಿಂದ ಆ ಹುಡುಗ ಬೇಸರಗೊಂಡು ಓದುವುದನ್ನು ನಿಲ್ಲಿಸುತ್ತಾನೆ. ತಂದೆ ಎಷ್ಟೇ ಬುದ್ಧಿವಾದ ಹೇಳಿದರೂ ಆತ ಏನನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಉತ್ಸಾಹ, ಧೈರ್ಯ ಕಳೆದುಕೊಂಡು, ಓದು ನಿಲ್ಲಿಸಿ ಏನು ಮಾಡದೆ ಕೂತುಬಿಟ್ಟ. ಬೆಳೆಯುವ ವಯಸ್ಸು ಬೆಳೆದು ಯುವಕನಾಗುತ್ತಿದ್ದಾನೆ. ಎಲ್ಲಿ ಭವಿಷ್ಯವನ್ನೇ ಹಾಳು ಮಾಡಿ ಕೊಳ್ಳುವನೋ ಎಂದು ತಂದೆಗೆ ಭಯವಾಗಿ, ಕೊನೆಗೆ ಒಬ್ಬ ಗುರುಗಳ ಬಳಿ ಮಗನನ್ನು ಕರೆದುಕೊಂಡು ಬಂದು ತಮ್ಮ ಸಮಸ್ಯೆಯನ್ನು ಹೇಳಿ ಕೊಂಡರು.
ಗುರುಗಳು ಆ ಬಾಲಕನನ್ನು ಏಳು ದಿನ ತಮ್ಮ ಬಳಿಗೆ ಕಳಿಸುವಂತೆ ಹೇಳಿದರು.
ಅದೇ ರೀತಿ ಮರುದಿನ ಹುಡುಗ ಗುರುಗಳ ಬಳಿ ಬಂದ. ಗುರುಗಳು ಆತನಿಗೆ ದೂರದ ಬೆಟ್ಟದ ಮೇಲಿರುವ ಒಂದು ದೇವಸ್ಥಾನವನ್ನು ತೋರಿಸಿ, ನೋಡು ಮಗು ಈ ದೇವಸ್ಥಾನದ ಸುತ್ತಮುತ್ತ ಒಂದು ಗಿಡ ಮರ ಹೂ ಬಳ್ಳಿಗಳು ಚಿಗುರುವುದಿಲ್ಲ. ಏಕೆಂದರೆ ಅಲ್ಲಿ ಲೆಕ್ಕವಿಲ್ಲದಷ್ಟು ಇರುವೆ ಗೂಡುಗಳಿವೆ. ಇದರಿಂದ ಗಿಡ ಮರಗಳು ಬೆಳೆಯುವುದಿಲ್ಲ. ನೀನು ಅಲ್ಲಿರುವ ಇರುವೆ ಗೂಡುಗಳನ್ನು ನಾಶ ಮಾಡಬೇಕು. ಆದರೆ, ಒಂದೇ ಒಂದು ಇರುವೆಯ ಜೀವಕ್ಕೆ ಹಾನಿಯಾಗಬಾರದು ಎಂದರು.
ಗುರುಗಳು ಹೇಳಿದಂತೆ ಆತ ಗುಡ್ಡದ ಮೇಲೆ ಹೋದ. ಒಂದು ಕೋಲನ್ನು ತೆಗೆದು ಕೊಂಡು ಇರುವೆಗಳಿಗೆ ಹಾನಿಯಾಗದಂತೆ ಗೂಡಗಳನ್ನು ಕುಟ್ಟಿ ನಾಶ ಮಾಡಿದ. ನಾಳೆ ಮತ್ತಷ್ಟು ಗೂಡು ನಾಶ ಮಾಡಬಹುದು ಹೀಗಂದು ಕೊಂಡು ಗುರುಗಳಿಗೆ ಹೇಳಿ ಮನೆಗೆ ಹೋದ. ಆ ರಾತ್ರಿ ಯೋಚಿಸಿದ. ಪಾಪ ಯಾರಿಗೂ ಹಾನಿ ಮಾಡಿದ ಇರುವೆ ಗೂಡನ್ನು ನಾಶ ಮಾಡುವುದು ಎಂದರೇನು? ಗುರುಗಳು ಯಾಕೆ ಹೀಗೆ ಹೇಳಿದರು? ಆ ಸಣ್ಣ ಜೀವಿಗಳ ಮನೆಯನ್ನು ನಾಶ ಮಾಡುವುದು ಪಾಪವಲ್ಲವೇ? ಗುರುಗಳು ಇದೆಂಥ ಕೆಲಸ ಕೊಟ್ಟಿದ್ದಾರೆ. ಇವರಿಗೆ ಬುದ್ಧಿ ಇಲ್ಲವೇ? ಇದ್ದಿದ್ದರೆ ಗೂಡನ್ನು ನಾಶ ಮಾಡುವಂಥ ಕೆಲಸ ಏಕೆ ಕೊಡುತ್ತಿದ್ದರು ನಾನು ಒಪ್ಪಬಾರದಿತ್ತು. ಹೀಗೆ ಯೋಚಿಸಿದರೂ, ಗುರುಗಳ ಮಾತಿನಂತೆ ಮರುದಿನ ಮತ್ತೆ ದೇವಾಲಯ ದ ಹತ್ತಿರ ಹೋದಾಗ, ಅವನು ಕೆಡವಿದ್ದ ಇರುವೆ ಗೂಡಿನ ಪಕ್ಕದಲ್ಲೇ ಇರುವೆಗಳು ಹೊಸದಾದ ಗೂಡನ್ನು ಕಟ್ಟಿ ಮೊದಲಿನಂತೆ ಓಡಾಡುತ್ತಿದ್ದವು.
ಆ ಹುಡುಗನಿಗೆ ಸಿಟ್ಟು ಬಂತು, ಹೊಸದಾಗಿ ಕಟ್ಟಿದ ಇರುವೆ ಗೂಡಿನ ಮೇಲೆ ಒಂದಷ್ಟು ನೀರು ತಂದು ಸುರಿದು ಗೂಡನ್ನು ಚೆಲ್ಲಾಪಿಲ್ಲಿ ಮಾಡಿದನು. ಮತ್ತೆ ಮರುದಿನ ಬಂದಾಗ ಪಕ್ಕದಲ್ಲಿ ಮತ್ತೊಂದು ಗೂಡು ಕಟ್ಟಿದ್ದವು. ಮೂರ್ನಾಲ್ಕು ದಿನ ಹೀಗೆ ಮಾಡಿದರೂ ಅವು ಮತ್ತೆ ಮತ್ತೆ ದೊಡ್ಡದಾದ ಗೂಡನ್ನು ಕಟ್ಟಿಕೊಂಡು ಎಂದಿನಂತೆಯೇ ಓಡಾಡಿಕೊಂಡಿದ್ದವು. ಸಿಟ್ಟಿನಿಂದ ಇರವೆಯ ಗೂಡನ್ನು ಕಾಲಿ ನಿಂದ ಪಚ ಪಚ ತುಳಿದು ಹಾಕಿದ. ಅವನ ಕಾಲ ಕೆಳಗೆ ಒಂದಷ್ಟು ಇರುವೆಗಳು ಸಿಕ್ಕಿ ಸತ್ತುಹೋದವು. ಅವನು ಎಷ್ಟೇ ಪ್ರಯತ್ನ ಮಾಡಿದರೂ, ಇರುವೆಗಳು, ಧೈರ್ಯ ಗೆಡದೆ ಸೋಲನ್ನೇ ತಿರಸ್ಕರಿಸಿ ಮುಂದೆ ಸಾಗಿದ್ದವು. ಎಂದೆಂದಿಗೂ ಅವುಗಳ ಗೂಡನ್ನು ನಾಶ ಮಾಡಲು ಸಾಧ್ಯವಿಲ್ಲ ಎಂಬುದು ಅವನಿಗೆ ತಿಳಿಯಿತು.
ಆರನೇ ದಿನ ಗುರುಗಳ ಬಳಿ ಬಂದು ನಡೆದದ್ದನ್ನು ಹೇಳಿದ. ಆಗ ಗುರುಗಳು,
ನೋಡಿದೆಯಾ ಮಗು, ಇರುವೆಗಳ ಮನೆಯನ್ನು ಎಷ್ಟೇ ಕೆಡವಿದರೂ, ಅವು ಸೋಲಿಗೆ ಹೆದರಲಿಲ್ಲ, ಧೈರ್ಯ ಬಿಡದೆ, ತಮ್ಮ ಸಾಮರ್ಥ್ಯ, ಉತ್ಸಾಹವನ್ನು ಕಡಿಮೆ ಮಾಡಿಕೊಳ್ಳದೆ ಮತ್ತೆ ಮತ್ತೆ ಮನೆ ಕಟ್ಟಿಕೊಂಡು ಅವು ಜೀವನವನ್ನು ಮುಂದು ವರೆಸಿವು. ನಾನು ನಿನಗೆ ಇದನ್ನೇ ಅರ್ಥ ಮಾಡಿಸಲು ಹೀಗೆ ಮಾಡಿದೆ. ಅಷ್ಟು ಚಿಕ್ಕ ಇರುವೆಗೆ ಅಂತ ಶಕ್ತಿ ಇದೆ ಅಂದರೆ, ನೀನು ಅವುಗಳಿಗಿಂತ ದೊಡ್ಡವನು ನಿನ್ನಲ್ಲಿ ಸಾಮರ್ಥ್ಯವಿದೆ, ದೇಹದಲ್ಲಿ ಶಕ್ತಿ ಇದೆ, ನಮ್ಮಿಂದ ಇದು ಆಗುವುದಿಲ್ಲ ಎಂದು ಕೊಂಡಿದ್ದನ್ನು ಧೈರ್ಯ ಗೆಡದೆ ಛಲದಿಂದ ಮಾಡಬೇಕು. ಯಾವತ್ತೂ ಸೋಲನ್ನು ಒಪ್ಪಿಕೊಳ್ಳದೆ ಇರುವೆಗಳಂತೆ ಇರಬೇಕು. ಎಡವಿದ ಬೆರಳು ಮತ್ತೆ ಎಡವುದು ಸಹಜ. ಹಾಗಂತ ಸೋತು ಅಲ್ಲಿಯೇ ನಿಲ್ಲದೆ ಮುಂದೆ ಸಾಗುತ್ತಾ ಇರಬೇಕು. ಗುರುಗಳ ಮೂಲಕ ಚಿಕ್ಕ ಇರುವೆಗಳಿಂದ ಪಾಠ ಕಲಿತ ಆ ಹುಡುಗ ಗುರುಗಳ ಆಶೀರ್ವಾದ ಪಡೆದು, ಮುಂದೆ ಧೈರ್ಯದಿಂದ ಮುನ್ನಡೆದು ಗೆಲುವನ್ನು ಪಡೆದನು.
4
ದಿನಕ್ಕೊಂದು ಕಥೆ
ಆಸ್ತಿಗಾಗಿ ತಂದೆಯ ಉಪಚಾರ ಬೇಡ
ಒಂದೂರಿನಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿಯಿದ್ದ. ಆತನ ಬಳಿ ಸಾಕಷ್ಟು ಧನ ಸಂಪತ್ತಿದ್ದರೂ, ತನ್ನ ಬಳಿಕ ಈ ಸಂಪತ್ತಿಗಾಗಿ ಮಕ್ಕಳಲ್ಲಿ ಜಗಳವಾಗದಿರಲೆಂದು ಎಲ್ಲ ಧನ ಕನಕಾದಿಗಳನ್ನು ತನ್ನ ಐವರು ಪುತ್ರರಿಗೂ ಸಮಪಾಲು ಮಾಡಿ ಹಂಚಿಕೊಟ್ಟ. ಮಕ್ಕಳು ತಮ್ಮ ತಮ್ಮ ಪಾಲು ತೆಗೆದುಕೊಂಡು ತಮ್ಮದೇ ಆದ ಮನೆಗಳಲ್ಲಿ ಆರಾಮವಾಗಿರುತ್ತಾ, ತಂದೆಯನ್ನು ಮರೆತೇ ಬಿಟ್ಟರು. ತಂದೆ ಕಂಗಾಲಾಗಿ ಬಿಟ್ಟ ಏಕೆಂದರೆ ಅವನ ಪತ್ನಿ ಮೊದಲೇ ತೀರಿ ಹೋಗಿದ್ದಳು.
ಆ ವ್ಯಾಪಾರಿಗೊಬ್ಬ ಶ್ರೀಮಂತ ರತ್ನ ವ್ಯಾಪಾರಿ ಗೆಳೆಯನಿದ್ದ. ಅವನು ತನ್ನ ಗೆಳೆಯನನ್ನು ನೋಡಲು ಬಂದಾಗ, ತಂದೆಯ ಸಂಪತ್ತು ಖಾಲಿಯಾದುದರಿಂದಾಗಿ ಅವನನ್ನು ಯಾರೂ ಪ್ರೀತಿಯಿಂದ ಕಾಣುತ್ತಿಲ್ಲವೆಂದು ತಿಳಿಯಿತು. ಆತ ನಾಳೆ ಬರುತೇನೆ ಎಂದು ಹೋದ. ಮರುದಿನ ಬರುವಾಗ ಒಂದು ಅಮೂಲ್ಯವಾದ ಪೆಟ್ಟಿಗೆಯನ್ನು ತಂದು, ತನ್ನ ಗೆಳೆಯನ ತಲೆಯ ಹತ್ತಿರ ಇಟ್ಟ. ಆಗ ಮನೆಗೆ ಆ ತಂದೆಯ ಸಣ್ಣ ಮಗನೂ ಬಂದಿದ್ದ. ಇದೇನು ಪೆಟ್ಟಿಗೆ ಎಂದು ಕೇಳಿದ. ರತ್ನ ವ್ಯಾಪಾರಿ ನುಡಿದ ಇದು ವಜ್ರ ರತ್ನಗಳ ಪೆಟ್ಟಿಗೆ ನಿಮ್ಮ ತಂದೆಯದು. ಅವನಿಗೆ ನಡೀಲಿಕ್ಕೆ ಆಗುತ್ತಿಲ್ಲ. ಆದ್ದರಿಂದ ಹಿಂದಿರುಗಿಸಿದ್ದೇನೆ ಆಗ ಮಗನು ಆ ಪೆಟ್ಟಿಗೆ ನನಗೆ ಕೊಡಿರಿ ಎಂದಾಗ, ಸಾಧ್ಯವಿಲ್ಲ. ನಿಮ್ಮ ತಂದೆಯಿದ್ದಷ್ಟು ಕಾಲ ಅವರ ತಲೆಯ ಬಳಿ ಇರುತ್ತದೆ ಎಂದು ರತ್ನ ವ್ಯಾಪಾರಿ ಹೇಳಿದ. ಆಗ ಸಣ್ಣ ಮಗ ತನ್ನ ನಾಲ್ಕು ಅಣ್ಣಂದಿರಿಗೆ ರತ್ನದ ಪೆಟ್ಟಿಗೆಯ ವಿಷಯ ತಿಳಿಸಿದ. ಎಲ್ಲರೂ ಓಡೋಡಿ ಬಂದರು. ಪ್ರೀತಿಯಿಂದ ತಂದೆಯ ಉಪಚಾರ ಸೇವೆ ಮಾಡತೊಡಗಿದರು. ಹೀಗೆ ರತ್ನ ವ್ಯಾಪಾರಿಯ ಉಪಾಯ ಫಲಿಸಿತು.
ನೀತಿ :-- ಜಗತ್ತಿನಲ್ಲಿ ಒಬ್ಬ ವ್ಯಕ್ತಿಗೆ ಇತರರಿಂದ ಬೆಂಬಲ, ನೆರವು, ಸಹಕಾರ ಸಿಗಬೇಕೆಂದಾದರೆ ಅವನಲ್ಲಿ ತನ್ನದೇ ಆದ ಆರ್ಥಿಕ ಶಕ್ತಿ, ಬೌದ್ಧಿಕ ಬಲ, ದೈಹಿಕ ಸಾಮರ್ಥ್ಯವಿರಬೇಕು. ಏನೂ ಇಲ್ಲದ ದುರ್ಬಲರನ್ನು, ಅಶಕ್ತರನ್ನು ಎಲ್ಲರೂ ತಿರಸ್ಕಾರದಿಂದ ಕಾಣುತ್ತಾರೆ. ನೀರಿನಲ್ಲಿ ಬೆಳೆಯುವ ತಾವರೆ ಹೂ ಸೂರ್ಯನನ್ನು ಗೆಳೆಯನೆಂದು ಪರಿಗಣಿಸಿದರೂ, ಅದೇ ಸೂರ್ಯನು ನೀರಿಲ್ಲದಾಗ ತಾವರೆ ಹೂವಿಗೆ ನೆರವಾಗುವುದಿಲ್ಲ.
5
ದಿನಕ್ಕೊಂದು ಕಥೆ
ದಾನ ಕೊಡುವ ವಸ್ತುವಿಗಿಂತ, ಅದರ ಹಿಂದಿನ ಭಾವನೆ ಮುಖ್ಯ
ಭಗವಾನ್ ಬುದ್ಧರು ಅನೇಕ ದಿನಗಳ ನಂತರ ಮಗಧ ದೇಶದ ರಾಜಧಾನಿಯತ್ತ ಹೊರಟರು. ಆಗ ಗ್ರಾಮೀಣ ಪ್ರದೇಶದ ಜನರು ಓಡೋಡಿ ಬಂದು ಬಗೆಬಗೆಯ ಕಾಣಿಕೆಗಳನ್ನು ತಂದರು. ಸಾಮ್ರಾಟ್ ಬಿಂಬಸಾರನಾದರೋ ಅತ್ಯಮೂಲ್ಯ ಉಡುಗೊರೆಗಳನ್ನು ತಂದೊಪ್ಪಿಸಿದ. ಆಗ ಭಗವಾನ್ ಬುದ್ಧರು ದಾನ ಸ್ವೀಕಾರ ಮಾಡಲೆಂದು ಬಲಗೈಯನ್ನೆತ್ತುತ್ತಿದ್ದರು. ಇಷ್ಟರಲ್ಲಿ ಸಾವಿರಾರು ಮಂದಿಯ ಜನಸಂದಣಿಯ ನಡುವೆ ನುಗ್ಗಿ, ಒಬ್ಬ ಮುದುಕಿ ತನ್ನ ಕಾಣಿಕೆಯನ್ನು ಕೊಡಲೆಂದು ಬಂದವಳೇ ಕೈ ಮುಗಿದು "ಹೇ ಮಹಾಪ್ರಭು, ನಾನು ಬಡವಿ, ನಿಮಗೊಪ್ಪಿಸಲು ಅರ್ಹವಾದ ವಸ್ತು ನನ್ನ ಬಳಿ ಇಲ್ಲ. ನನಗೆ ಮರದಿಂದ ಬಿದ್ದ ಒಂದು ಮಾವಿನ ಹಣ್ಣು ಸಿಕ್ಕಿತು. ಅದನ್ನೇ ನಿಮಗೆ ಅರ್ಪಿಸುತ್ತಿದ್ದೇನೆ ಅದು ಅರ್ಧ ತಿಂದ ಮಾವಿನ ಹಣ್ಣು" ಎಂದು ಮುಂದಕ್ಕೆ ಕೈ ಚಾಚಿದಳು. ಅರ್ಧ ಮಾವಿನ ಹಣ್ಣನ್ನು ಕಂಡು ಬುದ್ಧರು "ಅಮ್ಮ, ಇದರ ಉಳಿದರ್ಧ ಎಲ್ಲಿ ಹೋಯ್ತು?" ಎಂದು ಪ್ರಶ್ನಿಸಿದರು. ಆಗ ಮುದುಕಿ "ನಾನು ಮಾವಿನ ಹಣ್ಣು ತಿನ್ನುತ್ತಿರುವಾಗಲೇ ನೀವು ತೆರಳುವ ಸಮಾಚಾರ ತಿಳಿಯಿತು. ನನ್ನ ಬಳಿ ಬೇರೇನೂ ಇಲ್ಲದ್ದರಿಂದ ಇದನ್ನೇ ಅರ್ಪಿಸಲೆಂದು ಬಂದೆ" ಎಂದು ಉತ್ತರಿಸಿದಳು.
ಈ ಮಾತನ್ನು ಕೇಳಿದ ಬುದ್ಧರು ತಮ್ಮ ಆಸನದಿಂದ ಇಳಿದು ಬಂದು, ಹಣ್ಣು ಸ್ವೀಕಾರ ಮಾಡಿದರು. ಆಗ ಬಿಂಬಸಾರ "ಹೇ ಭಗವಾನ್, ನೀವು ಬಹುಮೂಲ್ಯ ಕಾಣಿಕೆಗಳನ್ನು ಕೇವಲ ಕೈಯಾಡಿಸಿ ಸ್ವೀಕಾರ ಮಾಡಿದಿರಿ. ಆದರೆ ಮುದುಕಿಯ ಅರ್ಧ ಎಂಜಲು ಹಣ್ಣನ್ನು ಸ್ವೀಕರಿಸಲು ಕೆಳಗಿಳಿದು ಬಂದಿರಿ. ಇದೇಕೆ ಹೀಗೆ?" ಎಂದು ಕೇಳಿದ. ಮುಗುಳ್ನಗುತ್ತಾ ಬುದ್ಧ "ನೀವುಗಳೆಲ್ಲ ಕೊಟ್ಟದ್ದು ನಿಮ್ಮ ಸಂಪತ್ತಿನ ಒಂದು ಸಣ್ಣ ಅಂಶ ಮಾತ್ರ! ಅದಲ್ಲದೆ ಅಹಂಕಾರದಿಂದ ದಾನ ನೀಡುತ್ತೀರಿ. ಆದರೆ ಈ ಅಜ್ಜಿ ತನ್ನ ಬಳಿ ಇದ್ದುದೆಲ್ಲವನ್ನೂ ಪ್ರೀತಿ ಪೂರ್ವಕವಾಗಿ ಒಪ್ಪಿಸಿದ್ದಾರೆ. ಇಂತಹ ನಿರ್ಮಲ ಅಂತಃಕರಣದ ಪ್ರೀತಿ ಮುಖ್ಯ. ಕಾಣಿಕೆಯ ವೌಲ್ಯವಲ್ಲ" ಎಂದರು. ಈ ಮಾತನ್ನು ಕೇಳಿ ಬಿಂಬಸಾರ ತಲೆದೂಗಿ ಬಾಗಿದ.
ನೀತಿ :-- ಇಲ್ಲಿ ಉನ್ನತ ಆದರ್ಶ ಹುದುಗಿದೆ. ಇತರರಿಗೆ, ವಿಶೇಷವಾಗಿ ಗಣ್ಯರಿಗೆ ನಾವು ಒಪ್ಪಿಸುವ ವಸ್ತುವಿಗಿಂತಲೂ, ಅದರ ಹಿನ್ನೆಲೆಯಲ್ಲಿರುವ ಭಾವನೆಗಳು ಮುಖ್ಯ. ಶುದ್ಧ ಅಂತಃಕರಣದಿಂದ ಪ್ರೀತಿ, ಸ್ನೇಹ, ಭಕ್ತಿ ಭಾವದಿಂದ ಅರ್ಪಿಸಿದ ಸಣ್ಣ ವಸ್ತುವೂ ಮಹತ್ವ ಪಡೆಯುತ್ತದೆ.
6
ದಿನಕ್ಕೊಂದು ಕಥೆ
ಸ್ಥಾನೋಪಾಸಕ ಬೇಡ, ಕಲೋಪಾಸಕರಾಗಿ.
ರಾಜನ ಆಸ್ಥಾನದಲ್ಲಿ ಒಬ್ಬ ಹಿರಿಯ ಶಿಲ್ಪಕಲಾವಿದನಿದ್ದ. ಒಂದು ದಿನ ಒಬ್ಬ ತರುಣ ಕಲಾವಿದ ಅದೇ ಆಸ್ಥಾನಕ್ಕೆ ಬಂದ. ತನ್ನ ಕಲಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರಾಜನಿಗೆ ಕೇಳಿಕೊಂಡ. ಉದಾರಿಯಾದ ರಾಜನು ಒಪ್ಪಿದ. ತರುಣ ಶಿಲ್ಪಿ ಒಂದು ಸುಂದರ ಮೂರ್ತಿಯನ್ನು ನಿರ್ಮಿಸಿದ. ಅದನ್ನು ಕಂಡು ರಾಜನಿಗೆ ಬಹಳ ಆನಂದವಾಯಿತು! “ಇಂಥ ಮೂರ್ತಿಯನ್ನು, ನನ್ನ ಆಯುಷ್ಯದಲ್ಲಿಯೇ ನೋಡಿರಲಿಲ್ಲ!” ಎಂದು ಉದ್ಗರಿಸಿದ. ಆಸ್ಥಾನದ ಹಿರಿಯ ಶಿಲ್ಪಿಗೂ ಅದು ಅದು ಮೆಚ್ಚುಗೆ ಆಯಿತು. “ಇದು ನಿಜವಾಗಿಯೂ ಸುಂದರ ಮೂರ್ತಿ!” ಎಂದ ಹಿರಿಯ ರಾಜಶಿಲ್ಪಿ.
ರಾಜನ ಆಜ್ಞೆಯಂತೆ ಮರುದಿನ ಅರಮನೆಯಲ್ಲಿ ಆ ತರುಣ ಶಿಲ್ಪಿಗೆ ಸತ್ಕಾರನಿಶ್ಚಯಿಸಿದರು. ಅದೇ ಸಂದರ್ಭದಲ್ಲಿ ರಾಜನು ಹಿರಿಯ ಶಿಲ್ಪಿಗೆ "ತಾವು ಒಪ್ಪಿದರೆ ಈ ತರುಣ ಶಿಲ್ಪಿ ತಮ್ಮ ಸ್ಥಾನಕ್ಕೆ ಬರಲಿ ಹೇಗೂ ತಮಗೆ ವಯಾಸ್ಸಾಗಿದೆ" ಎಂದು ಹೇಳಿದ. ಅದಕ್ಕೆ ಹಿರಿಯ ಶಿಲ್ಪಿ ಹಿಂದೆಮುಂದೆ ನೋಡದೆ “ಆಗಲಿ ಮಹಾಪ್ರಭು ಇಂಥ ಶ್ರೇಷ್ಠ ಶಿಲ್ಪಿ ನನ್ನ ತರುವಾಯ ತಮ್ಮ ಆಸ್ಥಾನಕ್ಕೆ ಬರುತ್ತಿರುವುದು ಹೆಮ್ಮೆಯ ವಿಷಯ!” ಆ ಶಿಲ್ಪಿಯ ಔದಾರ್ಯಕ್ಕೆ ಎಲ್ಲರೂ ಮೆಚ್ಚಿದರು.
ಹಿರಿಯ ಶಿಲ್ಪಿ ಮನೆಗೆ ಹೋಗಿ ಅಂದುಕೊಂಡ “ನಾಳೆಯಿಂದ ಆ ತರುಣನೇ ರಾಜಶಿಲ್ಪಿ. ಇನ್ನು ಮೇಲೆ ನನಗೆ ಗೌರವ, ರಾಜಭೋಗವಿಲ್ಲ. ಹೇಗಾದರೂ ಮಾಡಿ ಆ ತರುಣ ಶಿಲ್ಪಯನ್ನು ಈ ನಾಡಿನಿಂದ ಅಥವಾ ಬದುಕಿನಿಂದ ದೂರ ಸರಿಸಬೇಕು!” ಕಲ್ಲಿಗೆ ಜೀವ ತುಂಬುವ ಶಿಲ್ಪಿಯು ತರುಣ ಶಿಲ್ಪಿಯನ್ನು ಆ ರಾಜ್ಯದಿಂದ ಹೊರದೂಡಲು ಬಯಸಿದ. ಈ ವಿಷಯ ಹೇಗೋ ತರುಣ ಶಿಲ್ಪಿಗೆ ತಿಳಿಯಿತು. ಮರುದಿನ ಆತ ಹಿರಿಯ ಶಿಲ್ಪಿಗೆ ಒಂದು ಪತ್ರ ಕೊಟ್ಟು ಕಳಿಸಿದ. ತಾನಾಗಿಯೇ ಆ ರಾಜ್ಯ ಬಿಟ್ಟು ಹೊರಟು ಹೋದ. ಹಿರಿಯ ಶಿಲ್ಪಿ ಪತ್ರ ತೆಗೆದು ನೋಡಿದ. “ನಿಮಗೆ ಇಷ್ಟವಿಲ್ಲದಿದ್ದರೆ ಈ ಸ್ಥಾನ ನನಗೆ ಬೇಕಾಗಿಲ್ಲ. ಏಕೆಂದರೆ ನಾನು ಕಲೋಪಾಸಕನೇ ವಿನಾ ಸ್ಥಾನೋಪಾಸಕನಲ್ಲ ಎಂದು ಅದರಲ್ಲಿ ಬರೆಯಲಾಗಿತ್ತು. ಅದನ್ನು ನೋಡಿದ ನಂತರ ಹಿರಿಯ ಶಿಲ್ಪಿ ತನ್ನ ಬಗ್ಗೆ ತಾನೇ ಅಸಹ್ಯ ಪಟ್ಟುಕೊಂಡ. "ಒಬ್ಬ ಹಿರಿಯ ಕಲಾವಿದನಲ್ಲಿ ಇರಬೇಕಾದ ವೃತ್ತಿ ಗೌರವ ಸಹೃದಯತೆ ನನ್ನಲ್ಲಿ ಇಲ್ಲವಲ್ಲ" ಎಂದು ವ್ಯಥೆ ಪಟ್ಟ. ಕಾಲ ಮಿಂಚಿತ್ತು. ತರುಣ ಶಿಲ್ಪಿ ದೂರ, ಬಹುದೂರ ಹೋಗಿದ್ದ.
7
*ಅರ್ಥಪೂರ್ಣವಾದ ಕಥೆ ತಪ್ಪದೇ ಓದಿ*
*"ಮನಸ್ಸೆಂಬ ಅಶುದ್ಧ ಪಾತ್ರೆ"*
ಒಂದು ಸಣ್ಣ ಊರು. ಅಲ್ಲಿನ ಬಹಳಷ್ಟು ಜನ ಕೃಷಿಕರಾಗಿದ್ದರು. ಯಾವ ತರಲೆ ತಾಪತ್ರಯ ಇಲ್ಲದೆ, ಶಾಂತಿಯಿಂದ ಸಹಬಾಳ್ವೆಯಿಂದ ಜೀವನ ಮಾಡುತ್ತಿದ್ದರು. ಊರಿಗೊಬ್ಬರು ಗೌಡರು. ಅವರ ಮಾತನ್ನು ಯಾರೂ ತೆಗೆದುಹಾಕುತ್ತಿರಲಿಲ್ಲ. ಅವರ ಮಾತಿಗೆ ಅಷ್ಟೊಂದು ಬೆಲೆ ಗೌರವಗಳಿತ್ತು. ಬಹಳ ಒಳ್ಳೆಯ ಮನುಷ್ಯ ಆತ. ಆದರೆ ಅವರ ಹೆಂಡತಿ ಮಾತ್ರ ಅಹಂಕಾರದ ಸ್ವಭಾವದವಳು. ಆಕೆ ಮಾತ್ರ ಯಾರ ಬಗ್ಗೆಯೂ ಒಂದು ಒಳ್ಳೆಯ ಮಾತನ್ನು ಆಡಿದವಳಲ್ಲ, ತಾನು ಬಹಳ ಶ್ರೀಮಂತಳೆಂಬ, ದರ್ಪ, ಅಹಂಕಾರ ಅವಳಲಿತ್ತು.
ಒಂದು ಸಲ ಈ ಊರಿಗೆ ಒಬ್ಬ ಸಾಧುಗಳು ಆಗಮಿಸಿದರು. ಇವರು, ಸಿದ್ದಪುರುಷರು ಹಾಗೂ ಮಹಾಜ್ಞಾನಿಗಳೆಂದು ಜನ ಹೇಳುತ್ತಿದ್ದರು. ಊರಿನಲ್ಲಿ ಇದ್ದಷ್ಟು ದಿನವೂ ಈ ಸಾಧುಗಳ ಪ್ರವಚನ ಊರಿನ ರಾಮಮಂದಿರದಲ್ಲಿ ನಡೆಯುತ್ತಿತ್ತು. ಸಾಯಂಕಾಲದ ಅವರ ಪ್ರವಚನಕ್ಕೆ ಊರ ಜನರೆಲ್ಲರೂ ತಪ್ಪದೆ ಬರುತ್ತಿದ್ದರು. ಆದರೆ, ಈ ಗೌಡತಿ ಮಾತ್ರ ಹೋಗುತ್ತಿರಲಿಲ್ಲ. ಅವಳಿಗೆ ಹೋಗಬೇಕೆಂಬ ಆಸೆ ಇದ್ದರೂ, ಸಾಧಾರಣ ಜನರಂತೆ ಅಲ್ಲಿಗೆ ಹೋಗಿ, ಊರ ಜನರ ಜೊತೆಗೆ ಸಾಮಾನ್ಯಳಂತೆ ತಾನೂ ಕುಳಿತುಕೊಳ್ಳುವುದು ಅವಳಿಗೆ ಇಷ್ಟವಾಗುತ್ತಿರಲಿಲ್ಲ. ತಾನು ಮಹಾ ಶ್ರೀಮಂತೆ ಎಂಬ ಅಹಂಭಾವ ಅವಳಿಗೆ.
ಒಂದು ದಿನ ಗೌಡತಿಯ ಮನೆಯ ಮುಂದೆ, ಯಾರೋ, "ಭವತಿ ಭಿಕ್ಷಾಂ ದೇಹಿ, ಎಂದು ಕೂಗಿದ ಧ್ವನಿ ಕೇಳಿಸಿತು. ಇವಳು ಬಂದು ನೋಡಿದರೆ, ಆ ಮಹಾತ್ಮರೆ ಇವಳ ಮನೆಯ ಬಾಗಿಲಲ್ಲಿ ಬಂದು ಭಿಕ್ಷೆಗಾಗಿ ನಿಂತಿದ್ದಾರೆ. ಆಕೆಗೆ ಆಶ್ಚರ್ಯ ಸಂತೋಷ ಎರಡು ಒಟ್ಟಿಗೆ ಆಯಿತು. ಯಾರನ್ನು ಹೋಗಿ ನೋಡಲು ತನ್ನ ಅಹಂ ಅಡ್ಡ ನಿಲ್ಲುತ್ತಿತ್ತೊ, ಅವರೇ ಮನೆಯ ಮುಂದೆ ಬಂದು ನಿಂತಿದ್ದಾರೆ. ಒಂದು ನಿಮಿಷ ಇರಿ ಬಂದೆ, ಎಂದು ಒಳಗೆ ಹೋಗಿ ಮನೆಯಲ್ಲಿ ಸಿದ್ಧವಾಗಿದ್ದ ಆಹಾರ, ಒಳ್ಳೆಯ ಹಣ್ಣುಗಳನ್ನು ತಂದು ಸಾಧುಗಳ ಭಿಕ್ಷಾ ಪಾತ್ರೆಗೆ ಹಾಕಿ ನಮಸ್ಕರಿಸಿದಳು. ಅವರು ಆಕೆಯನ್ನು ಆಶೀರ್ವದಿಸಿ ಮುಂದೆ ನಡೆದರು. ಆಗ ಆಕೆ ಸ್ವಾಮಿ, ನನಗೆ ಭಗವಂತನ ಬಗ್ಗೆ ತಮ್ಮಿಂದ ತಿಳಿಯ ಬೇಕೆಂಬ ಆಸೆ ಇದೆ. ತಾವು ಒಳಗೆ ಬಂದು ದಯವಿಟ್ಟು ಸ್ವಲ್ಪ ಉಪದೇಶ ಮಾಡುತ್ತೀರಾ, ಎಂದು ಕೇಳಿದಳು. ಆಗ ಸಾಧುಗಳು ಕೆಲವು ಕ್ಷಣ ಅವಳನ್ನು ದಿಟ್ಟಿಸಿ ನೋಡಿ, ತಾಯಿ, ಈ ಸಮಯದಲ್ಲಿ, ಅದನ್ನೆಲ್ಲಾ ಮಾಡಲಾಗದು. ಈಗ ಸಮಯ ಬಹಳವಾಗಿ ಹೋಗಿದೆ, ನಾಳೆ ಸ್ವಲ್ಪ ಬೇಗ ಬಂದಾಗ ತಿಳಿಸುತ್ತೇನೆ ಎಂದು ಹೇಳಿ ಹೊರಟೇ ಬಿಟ್ಟರು.
ಮರುದಿನ ಈ ಹೆಂಗಸು ಮಹಾತ್ಮರು ತನ್ನ ಮನೆಗೆ ಬಂದೇ ಬರುತ್ತಾರೆಂದು ಬೇಗ ಎದ್ದು ಮನೆಯನ್ನೆಲ್ಲ ಶುಚಿಗೊಳಿಸಿ ತಾನು ಸ್ನಾನ ಮಾಡಿ, ಸಾಧುಗಳಿಗಾಗಿ ಘಮಘಮಿಸುವ ರುಚಿಕರವಾದ ಪಾಯಸವನ್ನು ಮಾಡಿದ್ದಳು. ಅದರ ಪರಿಮಳ ಮನೆಯನ್ನೆಲ್ಲಾ ತುಂಬಿತ್ತು. ಸ್ವಾಮಿಗಳ ಬರುವಿಕೆಯನ್ನೇ ನಿರೀಕ್ಷಿಸುತ್ತಾ ಬಾಗಿಲ ಬಳಿಯೇ ಕುಳಿತಿದ್ದಳು.
ಸುಮಾರು ಮಧ್ಯಾಹ್ನದ ಸಮಯದಲ್ಲಿ ಸಾಧುಗಳು, "ಭವತಿ ಭಿಕ್ಷಾಂ ದೇಹಿ", ಎನ್ನುತ್ತಾ ಭಿಕ್ಷಾ ಪಾತ್ರೆಯನ್ನು ಹಿಡಿದು ಬಂದರು. ಅವರಿಗಾಗಿ ಮಾಡಿದ ಪಾಯಸವನ್ನು ಅದಕ್ಕೆ ಸುರಿಯಬೇಕೆಂದು ಮುಂದೆ ಬಗ್ಗಿ ನೋಡಿದಾಗ, ಪಾತ್ರೆ ತುಂಬಾ ಕೊಳಕಾಗಿತ್ತು. ಅದರಲ್ಲಿ ಕಸ ಕಡ್ಡಿ ಮಣ್ಣುಗಳೆಲ್ಲಾ ಇದ್ದವು. ಇವಳು ಭಿಕ್ಷೆ ಹಾಕಲು ಹಿಂದೆ ಮುಂದೆ ನೋಡುತ್ತಿದ್ದಾಗ, ಪರ್ವಾಗಿಲ್ಲ ತಾಯಿ, ಇದರಲ್ಲೇ ಹಾಕು ಎಂದರು ಸಾಧುಗಳು. ಛೇ, ಛೇ ಇಷ್ಟು ಒಳ್ಳೆಯ ಪಾಯಸವನ್ನು ಇಂಥ ಕೊಳಕು ಪಾತ್ರೆಯಲ್ಲಿ, ಹಾಕುವುದೇ? ಅದನ್ನು ಕೊಡಿ ಸ್ವಲ್ಪ ತೊಳೆದು ತರುತ್ತೇನೆ, ಎಂದು ಅವರ ಕೈಯಿಂದ ಭಿಕ್ಷಾ ಪಾತ್ರೆ ಕಿತ್ತುಕೊಂಡು ಒಳಗೆ ಹೋಗಿ ಅದನ್ನು ಸ್ವಚ್ಛಮಾಡಿ, ಒರೆಸಿ, ಅದರ ತುಂಬಾ ಪಾಯಸವನ್ನು ಹಾಕಿ ತಂದುಕೊಟ್ಟು, ಅವರಿಗೆ ನಮಸ್ಕರಿಸಿದಳು. ಅವರು ಆ ಪಾತ್ರೆಯನ್ನು ತೆಗೆದುಕೊಂಡು ಅವಳಿಗೆ ಆಶೀರ್ವದಿಸಿ ಮುಂದೆ ಹೊರಟರು. ಗೌಡತಿ, ಅವರನ್ನು ತಡೆದು, ಗುರುಗಳೇ, ಇಂದು ನನಗೆ ಉಪದೇಶ ನೀಡುತ್ತೇನೆ ಎಂದು ಹೇಳಿದ್ದೀರಲ್ಲ? ಎಂದು ನೆನಪಿಸಿದಳು. ಆಗ ಅವರು, ಉಪದೇಶ ಆಯಿತಲ್ಲಮ್ಮ, ಎಂದರು. ಹೌದೇ, ಯಾವಾಗ ಏನು ಉಪದೇಶ ಮಾಡಿದಿರಿ? ಎಂದು ಆಶ್ಚರ್ಯದಿಂದ ಕೇಳಿದಳು. ಈಗ ತಾನೆ, ನೀನೇ ಮಾಡಿ ತೋರಿಸಿದೆಯಲ್ಲ! ಕೊಳಕು ಪಾತ್ರೆಯಲ್ಲಿ ಶುದ್ಧ ವಸ್ತುಗಳನ್ನು ಹಾಕಬಾರದೆಂದು, ಎಂದರು. ಅವಳು ಆಶ್ಚರ್ಯದಿಂದ ಅವರ ಮುಖವನ್ನೇ ನೋಡುತ್ತಿದ್ದಳು. ನಿನ್ನ ಮನಸೆಂಬ ಪಾತ್ರೆಯಲ್ಲಿ ದ್ವೇಷ, ಅಸೂಯೆ, ಅಹಂಕಾರ, ಕೋಪ ತಾಪಗಳೆಂಬ, ಕೊಳಕು ತುಂಬಿದೆ. ಅತ್ಯಂತ ಪರಿಶುದ್ಧವಾದ ಪರಮಾತ್ಮನ ಚಿಂತನೆ ಎಂಬ ಸಿಹಿ ಪಾಯಸವನ್ನು ಅದರಲ್ಲಿ ಹೇಗೆ ಸುರಿಯಲು ಸಾಧ್ಯ? ಆದ್ದರಿಂದ ನಿನ್ನ ಮನಸ್ಸೆಂಬ ಪಾತ್ರೆಯನ್ನು ಮೊದಲು ಶುದ್ಧ ಮಾಡು, ಆಗ ಭಕ್ತಿ ತಾನೆ ತಾನಾಗೇ, ಅದರಲ್ಲಿ ಇಳಿದು, ನಿನಗೆ ಭಗವಂತನ ದರ್ಶನವಾಗುತ್ತದೆ ಎಂದು ಹೇಳಿ ಅಲ್ಲಿಂದ ಮುಂದೆ ನಡೆದರು ಸಾಧುಗಳು. ಅವರ ಮಾತು ಅವಳ ಮನದೊಳಗೆ ನಾಟಿ, ದುಃಖ ಉಕ್ಕಿ ಬಂತು. ಮುಂದೆ, ತನ್ನ ಮನಸ್ಸನ್ನು ತಿದ್ದಿಕೊಳ್ಳುವ ಪ್ರಯತ್ನವನ್ನು ನಡೆಸಿದಳು.
ಸಾಧುಗಳ ಈ ಮಾತು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಕೆಲವರ ಬಾಯಲ್ಲಿ ಯಾವಾಗಲೂ ಭಗವಂತನ ನಾಮಸ್ಮರಣೆಯ ಮಾತೇ ಬರುತ್ತಿರುತ್ತದೆ. ಆದರೆ ಮನಸ್ಸಿನೊಳಗೆ ಮಾತ್ರ, ಅಸೂಯೆ, ಅಹಂಕಾರ, ದ್ವೇಷವೆಂಬ ಬರೀ ಕೊಳಕೇ ತುಂಬಿರುತ್ತದೆ. ಮೇಲೆ ಮಾತ್ರ ತಾವು, ಪರಮಾತ್ಮನ ಮಹಾ ಉಪಸಕರು / ಭಕ್ತರೆಂದು ತೋರುತ್ತಾ, ಆ ಭಗವಂತನಾಗಲೇ ಇವರಿಗೆ ದರ್ಶನಕೊಟ್ಟಿರುವಂತೆ ಮಾತನಾಡುತ್ತಿರುತ್ತಾರೆ. ತಮ್ಮ ಮನಸ್ಸಿನ ಕೊಳಕು ಇವರಿಗೆ ಕಾಣಿಸಿರುವುದೇ ಇಲ್ಲ.
ಮನುಷ್ಯನ ಮುಕ್ತಿಗೂ, ಬಂಧನಕ್ಕೂ, ಮನಸ್ಸೇ ಮೂಲ ಕಾರಣ. ನಮ್ಮ ಮನಸ್ಸನ್ನು ಶುದ್ಧವಾಗಿಟ್ಟಿ ಕೊಳ್ಳಬೇಕು. ಹಾಗಾಗಿ ನಾವು ನಮ್ಮ ಮನಸ್ಸಿನತ್ತ ಸ್ವಲ್ಪ ಗಮನ ಹರಿಸಲೇ ಬೇಕು.
**************
8
🌹ಆಪಲ್ ಸಂಸ್ಥೆಯ ಸ್ಥಾಪಕ ಸ್ಟೀವ್ ಜಾಬ್ಸ್ ಕ್ಯಾನ್ಸರ್ ರೋಗದಿಂದ ಅಕ್ಟೋಬರ್ 05,2011ರಲ್ಲಿ ನಿಧನರಾದರು.ತಾವು ಸಾಯೋ ಮುಂಚೆ ಹೇಳಿದ ಈ ಕಟ್ಟಕಡೆಯ ಮಾತು ನಮಗೆಲ್ಲರಿಗೂ "ಜೀವನ ದರ್ಶನ" ಮಾಡಿಸುತ್ತೆ.ದಯವಿಟ್ಟು ಓದಿರಿ.🌷 ================================================================
🌺ಜಗತ್ತಿನಲ್ಲೇ ಸುಪ್ರಸಿದ್ಧ APPLE ಸಂಸ್ಥೆಯನ್ನು ಹುಟ್ಟುಹಾಕಿದ ಸ್ಟೀವ್ ಜಾಬ್ಸ್ ಅವರ ಸಾಧನೆ ಮತ್ತು ಸಂಪತ್ತು ಅಪಾರ ಮತ್ತು ಅಗಾಧ.ಈ ಮನುಷ್ಯ ಯಶಸ್ಸಿಗೆ ಇನ್ನೊಂದು ಹೆಸರೇ ಎಂಬ ಹಾಗೇ ಬದುಕಿ ತೋರಿಸಿದವರು.ಇಂದು ನಾವೆಲ್ಲರೂ ಅಂಗೈ ಅಗಲದ ಸ್ಮಾರ್ಟ್ ಫೋನ್ ಬಳಸಿ ಜಗತ್ತನ್ನೇ ಅದರಲ್ಲಿ ನೋಡುತ್ತಿದ್ದೇವೇ ಎಂದರೆ,ಈ ಪುಣ್ಯಾತ್ಮನಿಂದ ಎಂಬುದು ಬಹು ಜನರಿಗೆ ಗೊತ್ತಿಲ್ಲ.ಆದರೆ ತಮ್ಮ ಸಾವಿನ ಕೊನೆಯ ದಿನಗಳಲ್ಲಿ ಸ್ಟೀವ್ ಜಾಬ್ಸ್ ಅವರ ಮನದಾಳದ ಮಾತು ಹೇಗಿತ್ತು ಎನ್ನುವುದನ್ನು ನಿಜೆಲ್ ಡಂಕನ್ ಸ್ಮಿತ್ ಎಂಬ ವ್ಯಕ್ತಿ ಫೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದರು.
ಅದನ್ನು ಓದಿದಾಗ ಜಗತ್ತನ್ನೇ ನಿಬ್ಬೆರಗಾಗಿಸಿದ ಒಬ್ಬ ಸಾಧಕನ ಅಂತರಾಳದಲ್ಲಿ ಏನಿತ್ತು ಎನ್ನುವುದು ಹೊರಜಗತ್ತಿಗೆ ಗೊತ್ತಾಯಿತು..ಹಾಗಾದಾರೇ... ಓದಿರಿ.🌹🌺🌱🌷🌼⚘🌻🌹🌻🌺🌼🌷⚘
🌹"ನಾನು ನನ್ನ ಬಿಸಿನೆಸ್ಸಿನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದೇನೆ.ಜಗತ್ತಿನ ಕಣ್ಣಿಗೆ ನನ್ನ ಜೀವನವು ಒಂದು ಯಶಸ್ಸಿನ ಯಶೋಗಾಥೆಯಂತೆ ಕಾಣುತ್ತದೆ. ಆದರೆ,ನನ್ನ ಉದ್ಯೋಗದ ಪರಿಮಿತಿಯ ಹೊರಗೆ ನನ್ನ ಬಾಳಿನಲ್ಲಿ ಅಷ್ಟೇನೂ ನಲಿವಿಲ್ಲ.ಕೊನೆಗೆ,ನನ್ನ ಸಂಪತ್ತಿನೊಂದಿಗೆ ನನ್ನ ಜೀವನವನ್ನು ಗುರುತಿಸಿಕೊಳ್ಳುವುದು ರೂಢಿಯಾಗಿಹೋಗಿದೆ.ನನ್ನ ಜೀವನದ ಕೊನೆಯ ಕ್ಷಣಗಳನ್ನು ಆಸ್ಪತ್ರೆಯ ಹಾಸಿಗೆಯ ಮೇಲೆ ಕಳೆಯುತ್ತಿರುವ ನನಗೆ,ನನ್ನ ಬಾಳಿನುದ್ದಕ್ಕೂ ನಾನು ಸಂಪತ್ತನ್ನು ಸಾಧನೆ ಎಂದುಕೊಂಡು ಬೀಗುತ್ತಿದ್ದೆನೋ,ಅವೆಲ್ಲಾ ಏನೂ ಅಲ್ಲವೇನೋ ಅನ್ನಿಸುತ್ತಿದೆ.🌺
🌷ಈ ಕತ್ತಲ ಹೊತ್ತಿನಲ್ಲಿ,ಕೃತಕ ಉಸಿರಾಟದ ಈ ಮಶೀನುಗಳಿಂದ ಬರೋ ಹಸಿರು ದೀಪ ಮತ್ತು ಗುಂಯ್ಗುಟ್ಟುವ ಸದ್ದಿನಿಂದ,ನನಗೆ ನನ್ನ ಸಾವು ನನ್ನನ್ನು ಆವರಿಸಿಕೊಳ್ಳುತ್ತಿರುವುದು ಕಾಣುತ್ತಿದೆ. ನನಗೀಗನ್ನಿಸುತ್ತಿದೆ,
ಒಬ್ಬ ಮನುಷ್ಯ ಒಮ್ಮೆ ಜೀವನಕ್ಕೆಲ್ಲಾ ಆಗುವಷ್ಟು ದುಡ್ಡು ದುಡಿದಿಟ್ಟುಕೊಂಡ ಮೇಲೆ,ಹಣದ ಸಂಪಾದನೆಗೂ ಮೀರಿದ ಸಾಧನೆಗೆ ಇಳಿಯಬೇಕು. ಹಣಕ್ಕಿಂತ ತುಂಬಾ ಮುಖ್ಯವಾದುದಾಗಿರಬೇಕು ಆ ಸಾಧನೆ.ಉದಾಹರಣೆಗೆ: ಪ್ರೇಮ ಕಥೆಗಳು,ಕಲೆ,ಬಾಲ್ಯದ ಕನಸುಗಳನ್ನು ಮೆಲುಕು ಹಾಕುವುದು.🌻
🌺ಕೇವಲ ಹಣದ ಸಂಪಾದನೆಯ ಹಿಂದೆ ಬೀಳಬೇಡಿ.ಅದರಿಂದ ನೀವೂ ನನ್ನಂತೆ ಕೆಲಸಕ್ಕೆ ಬಾರದವರಂತೆ ಆಗುತ್ತೀರಿ.ದೇವರು ನಮ್ಮೆಲ್ಲರನ್ನೂ ಯಾವುದೋ ಒಂದು ಬಗೆಯಲ್ಲಿ ಮಾಡಿದ್ದಾನೆ.ನಾವು ಒಬ್ಬರೆದೆಯಲ್ಲಿ ಇನ್ನೊಬ್ಬರ ಒಲವನ್ನು ಕಾಣಬಹುದೇ ಹೊರೆತು ನಾನು ಮಾಡಿದಂತೆ ಹೆಸರು,ದುಡ್ಡು ಇವುಗಳಿಂದ ಯಾರದೇ ಮನಸಿನಲ್ಲೂ ನೆಲೆಸಲು ಆಗುವುದಿಲ್ಲ.
ಆ ಸಂಪತ್ತನ್ನು ನಾನು ಹೋಗುವಾಗ ನನ್ನೊಡನೆ ಕೊಂಡುಹೋಗಲೂ ಆಗದು.ನಾನು ನನ್ನೊಂದಿಗೆ ಏನಾದರೂ ತೆಗೆದುಕೊಂಡು ಹೋದರೆ ಅದು ಕೇವಲ ಒಲವಿನಿಂದ ಬೆಸೆದ ನೆನಪುಗಳನ್ನು ಮಾತ್ರ.ನಮ್ಮನ್ನು ಹಿಂಬಾಲಿಸುವ ಬಹುದೊಡ್ಡ ಸಂಪತ್ತೂ ಅದೇ... ನಮ್ಮೊಡನೆ ಸದಾ ಇರುವಂಥದ್ದು.ನಮಗೆ ಶಕ್ತಿ ತುಂಬುವಂಥದ್ದು... ದಾರಿ ದೀಪವಾಗುವಂಥದ್ದು.🌷
🌺ಪ್ರೇಮವೆನ್ನುವುದು ಸಾವಿರಾರು ಮೈಲಿ ಸಾಗಬಲ್ಲದು,ಬಾಳಲ್ಲಿ ಪ್ರೇಮವನ್ನು ತುಂಬಿಕೊಂಡಾಗ ಬಂಧನಗಳಿಂದ ಮುಕ್ತಿ ಸಿಗುತ್ತದೆ.ನಿಮಗೆ ಹೋಗಬೇಕೆನಿಸಿದಲ್ಲಿ ಹೋಗಿ. ನೀವು ಸಾಧಿಸಬೇಕೆನಿಸಿದ್ದನ್ನು ಸಾಧಿಸಿ. ಎಲ್ಲವೂ ನಿಮ್ಮೊಳಗೇ ಇದೆ...
ನಿಮ್ಮ ಕೈಯ್ಯಲ್ಲೇ ಇದೆ.🌷
🌻ಈ ಜಗತ್ತಿನಲ್ಲೇ ಅತ್ಯಂತ ದುಬಾರಿ ಹಾಸಿಗೆ ಯಾವುದು ಗೊತ್ತೇ?
ಅದು ಆಸ್ಪತ್ರೆಯ ಹಾಸಿಗೆ.ನಿಮ್ಮ ಬಳಿ ಹಣವಿದ್ದರೆ ಅದರಿಂದ ನಿಮ್ಮ ಕಾರಿಗೆ ಒಬ್ಬ ಡ್ರೈವರನ್ನು ನೇಮಿಸಬಹುದು. ಆದರೆ ನಿಮ್ಮ ಅನಾರೋಗ್ಯವನ್ನು ಎರವಲು ಪಡೆಯಲು ಯಾರಾದರೂ ಮುಂದೆ ಬರುತ್ತಾರೆಯೇ...? ವಸ್ತುಗಳು ಒಮ್ಮೆ ಕಳೆದು ಹೋದರೆ ಮತ್ತೆ ಪಡೆದುಕೊಳ್ಳಬಹುದು. ಆದರೆ ಒಮ್ಮೆ ಕಳೆದುಕೊಂಡರೆ ಹಿಂಪಡೆಯಲಾಗದ್ದು ಯಾವುದಾದರೂ ಇದ್ದರೆ ಅದು "ಜೀವನ" ಮಾತ್ರ.🌱
🌹ನಾವು ಈಗ ಜೀವನದ ಯಾವುದೇ ಘಟ್ಟದಲ್ಲಿದ್ದರೂ ಮುಂದೊಂದು ದಿನ ನಮ್ಮ ಜೀವನಕ್ಕೆ ತೆರೆ ಬೀಳಲೇಬೇಕು.ನಮ್ಮೆಲ್ಲ ಆಟ ಮುಗಿಯುವ ದಿನವನ್ನು ನಾವು ಎದುರಿಸಲೇಬೇಕು.ಇದು ಶಾಸ್ವತ ಪರಮ ಸತ್ಯ.
ನಿಮ್ಮ ಮನೆಯವರ ಪ್ರೀತಿ,ಗಂಡ/ಹೆಂಡತಿಯ ಪ್ರೀತಿ,
ಗೆಳೆಯರ ಪ್ರೀತಿ ಇವೆಲ್ಲವೂ ಅಮೂಲ್ಯವಾದುವು.ಅವನ್ನು ಕಾಪಾಡಿಕೊಳ್ಳಿ.ಎಲ್ಲರೊಡನೆ ಸಜ್ಜನಿಕೆಯಿಂದ ನಡೆದುಕೊಳ್ಳಿ,ಬಂಧು-ಬಳಗ,ಬಡವ-ಬಲ್ಲಿದ ಎನ್ನದೇ ನಿಮ್ಮ ನೆರೆ-ಹೊರೆಯ ಜನರೊಂದಿಗೆ ಒಳ್ಳೆಯ ಸಂಬಂಧವಿಟ್ಟುಕೊಳ್ಳಿ.🌷 🌼🌹🌱🌷🌻🌺🌼⚘🌹🌺🌼🌺🌹🌷🌼⚘🌱🌺🌹 🌷🌻🌺🌱🌹🌻🌷((ಇಂಥ ಮಹಾನ್ ಮೇಧಾವಿಯ ಸಾವಿನ ಕೊನೆಯ ಮಾತುಗಳು ನಮ್ಮಗೆಲ್ಲ ಅರ್ಥವಾದರೆ...ನಮ್ಮ ಬದುಕು ನಿಜಕ್ಕೂ ಅರ್ಥಪೂರ್ಣ.))=((ಸಂಗ್ರಹ=ರಾಜಶೇಖರ ಎಸ್.ಬಿರಾದಾರ,((ಬಬಲೇಶ
9
ದಿನಕ್ಕೊಂದು ಕಥೆ
ಜೀವನದ ಸತ್ಯ
ಹದಿಹರೆಯದ ಹುಡುಗನೊಬ್ಬ ಆಸ್ಪತ್ರೆಗೆ ದಾಖಲಾಗಿದ್ದ. ಕಾಯಿಲೆ ವಿಷಮಹಂತಕ್ಕೆ ತಲುಪಿದ್ದರಿಂದಾಗಿ ಬದುಕುವ ಸಾಧ್ಯತೆ ಕಡಿಮೆ ಎನ್ನಲಾಗಿತ್ತು, ವೈದ್ಯರೂ ಈ ನಿಟ್ಟಿನಲ್ಲಿ ಅಸಹಾಯಕರಾಗಿದ್ದರು. ಮನೆಯವರೂ ದೇವರ ಮೇಲೆ ಭಾರಹಾಕಿ ಆತನಿಗಾಗಿ ಪ್ರಾರ್ಥಿಸುತ್ತಿದ್ದರು. ಈ ಎಲ್ಲ ಕಾರಣಗಳಿಂದಾಗಿ ಆ ಯುವಕ ದೈಹಿಕವಾಗಿ, ಮಾನಸಿಕವಾಗಿ ಕುಂದಿದ್ದ. ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದ ಕಾರಣದಿಂದಾಗಿ, ಆತನಿಗೆ ನೀಡುತ್ತಿದ್ದ ಮಾತ್ರೆ-ಔಷಧಗಳೂ ಪರಿಣಾಮ ಬೀರುತ್ತಿರಲಿಲ್ಲ. ಒಂದು ದಿನ ಅದೇ ಕನವರಿಕೆಯಲ್ಲಿ ನಿದ್ರೆಗೆ ಜಾರಿದಾಗ ಕನಸಲ್ಲಿ ದೇವರು ಕಾಣಿಸಿಕೊಂಡ.
ಭಗವಂತಾ, ನನಗೇಕೆ ಈ ದುಸ್ಥಿತಿ? ಎಂದು ಹುಡುಗ ಪ್ರಶ್ನಿಸಿದ್ದಕ್ಕೆ ದೇವರು ಸುಮ್ಮನೆ ನಕ್ಕ. "ನನಗೆ ಉತ್ತರ ಬೇಕು" ಎಂದು ಆ ಯುವಕ ಆಗ್ರಹಪಡಿಸಿದರೂ ದೇವರ ನಗು ಮುಂದುವರಿಯಿತು. "ನನಗೆ ಇನ್ನೂ ಬದುಕಬೇಕು ಎನಿಸುತ್ತಿದೆ. ನನ್ನಲ್ಲಿ ನಿನಗೆ ಕರುಣೆಯೇ ಇಲ್ಲವೇ? ನನಗೆ ಸಹಾಯ ಮಾಡುವುದಿಲ್ಲವೇ?" ಎಂದು ಪ್ರಶ್ನಿಸಿದ ಹುಡುಗ ಕೊಂಚ ಅಸಮಾಧಾನದಿಂದ. ಮೌನಮುರಿದ ಭಗವಂತ, "ಮಗೂ, ನಿನ್ನ ಬದುಕಿಗೆ ಬೇರಾರೂ ತಡೆ ಒಡ್ಡಿಲ್ಲ, ಸ್ವತಃ ಕೊರಗುವಿಕೆಗೆ ಒಡ್ಡಿಕೊಂಡಿರುವವನು ನೀನೇ. ಬದುಕಲು ನೀನೇ ಇಷ್ಟಪಡುತ್ತಿಲ್ಲ, ದಾರಿಗಳೆಲ್ಲ ಮುಚ್ಚಿಹೋದವೆಂದು ನೀನೇ ನಿರ್ಧರಿಸಿಬಿಟ್ಟಿದ್ದೀಯ. ನೀನು ಹಾಗೆ ಮಾಡಬೇಕೆಂದು ನಾನು ಎಂದಾದರೂ ಹೇಳಿದ್ದೆನಾ? ಶ್ರದ್ಧಾಪೂರ್ವಕವಾಗಿ, ಕುಂದಿಲ್ಲದ ಬದ್ಧತೆಯೊಂದಿಗೆ ನೀನು ಪ್ರಯತ್ನಪಟ್ಟರೆ ಮಾತ್ರವಷ್ಟೇ ನಾನು ನೆರವಾಗಬಲ್ಲೆ" ಎಂದ.
ಯುವಕನ ದೇಹದಲ್ಲಿ ಮಿಂಚಿನ ಸಂಚಾರವಾದಂತಾಯಿತು; ಬದುಕಲೇಬೇಕೆಂಬ ಉತ್ಕಟ ಇಚ್ಛೆ ಅವನಲ್ಲಿ ನವಚೈತನ್ಯವನ್ನು ಸ್ಪುರಿಸಿತು. ನೋಡನೋಡುತ್ತಿದ್ದಂತೆಯೇ ‘ಜಾದೂ’ ಜರುಗಿತು. ಆತ ನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸಿದ. ಮೊಗದಲ್ಲಿ ಜೀವಕಳೆ ಚಿಮ್ಮಿತು. "ನಾನೂ ಬಾಳುತ್ತೇನೆ, ಬಾಳಿ ತೋರಿಸುತ್ತೇನೆ" ಎಂಬ ಮಂತ್ರ ಅವನ ಅನುಕ್ಷಣದ ಉಸಿರಾಯಿತು. ಪರಿಣಾಮ, ಸಂಪೂರ್ಣ ಗುಣಮುಖನಾದ, ಆಯ್ದುಕೊಂಡ ಕಾರ್ಯಕ್ಷೇತ್ರದಲ್ಲೂ ಯಶಸ್ವಿಯಾದ.
ಎಷ್ಟೇ ಕಷ್ಟಕರ ಪರಿಸ್ಥಿತಿಯಿರಲಿ, ಆತ್ಮಸ್ಥೈರ್ಯಕ್ಕೆ ಸಂಚಕಾರ ತಂದುಕೊಳ್ಳದಿದ್ದರೆ ಏನನ್ನು ಬೇಕಿದ್ದರೂ ಸಾಧಿಸಬಹುದು ಎಂಬುದಕ್ಕೆ ಈ ರೂಪಕ ಸಾಕ್ಷಿ. ಕೊರಗು ಮತ್ತು ನಕಾರಾತ್ಮಕ ಯೋಚನೆಯೇ ತಲೆತುಂಬಿಕೊಂಡಿದ್ದರೆ, ಸಮರ್ಥ ಮಾತ್ರೆ-ಔಷಧಗಳೂ ಕೆಲಸ ಮಾಡುವುದಿಲ್ಲ. ಸಕಾರಾತ್ಮಕ ಚಿಂತನೆಗೆ ಒಡ್ಡಿಕೊಂಡರೆ, ಎಂಥ ಸವಾಲು-ಸಂಕಷ್ಟದ ತೀವ್ರತೆಯೂ ತಗ್ಗಿ ಸಾಧನೆಯ ಹಾದಿ ಸುಗಮಗೊಳ್ಳುತ್ತದೆ. ಅದನ್ನು ಬಿಟ್ಟು ಯುದ್ಧಕ್ಕೆ ಮೊದಲೇ ಸೋಲೊಪ್ಪಿಕೊಂಡರೆ, ಜಯ ಸಿಗುವುದಾದರೂ ಹೇಗೆ? ಕ್ರೀಡೆಯಲ್ಲಿಯೂ ಎರಡು ತಂಡಗಳವರೂ ಗೆಲ್ಲಬೇಕೆಂದೇ ಆಡುತ್ತಾರೆ. ಉತ್ತಮ ಆಟಕ್ಕೆ ಅದುವೇ ಉತ್ತೇಜನ ನೀಡುತ್ತದೆ. ಗೆಲ್ಲುವ ಭರವಸೆಯೊಂದಿಗೇ ಜೀವನಪಥದಲ್ಲಿ ಹೆಜ್ಜೆಹಾಕಬೇಕಿರುವುದು ನಮ್ಮೆಲ್ಲರ ಹೆಗಲಮೇಲಿನ ಹೊಣೆ, ಅದೇ ಬದುಕಿನ ಸತ್ಯವೂ ಹೌದು ಎಂಬುದನ್ನು ಮರೆಯದಿರೋಣ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
10
ದಿನಕ್ಕೊಂದು ಕಥೆ
ಜೀವನ್ಮುಖಿ
ಒಂದು ಪಟ್ಟಣದಲ್ಲಿ, ಬೇರೆ, ಬೇರೆ ಹುದ್ದೆಯಲ್ಲಿದ್ದು ನಿವೃತ್ತರಾದ, ಹಿರಿಯರೆಲ್ಲಾ ಸೇರಿಕೊಂಡು ಒಂದು ಸಂಘವನ್ನು ಮಾಡಿಕೊಂಡಿದ್ದರು. ಇವರ ಮಕ್ಕಳೆಲ್ಲ ದೊಡ್ಡವರಾಗಿ ಅವರವರ ಪಾಡಿಗೆ ಅವರವರ ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಹಾಗಾಗಿ ಈ ಹಿರಿಯರಿಗೆಲ್ಲಾ ತಮ್ಮ ಮಕ್ಕಳ ಜವಾಬ್ದಾರಿ ಅಷ್ಟಾಗಿ ಇರಲಿಲ್ಲ. ಇವರುಗಳ ಆರೋಗ್ಯ ಸ್ಥಿತಿ ಉತ್ತಮವಾಗಿದ್ದುದರಿಂದ, ಸುಮ್ಮನೆ ಏನೂ ಕೆಲಸವಿಲ್ಲದೆ ಕೂರುವುದರ ಬದಲು, ಸಮಾಜಕ್ಕೆ ಏನಾದರೂ ಸಹಾಯ ಮಾಡಿ, ತಾವೂ ಕೂಡ ಚಟುವಟಿಕೆಯಿಂದ ಇರಬಹುದು ಎಂದುಕೊಂಡು, ಇವರೆಲ್ಲ ಸೇರಿ ಒಂದು ಸಂಘವನ್ನು ಮಾಡಿಕೊಂಡಿದ್ದರು.
ಸಂಘಕ್ಕೆ ಒಂದು ಸ್ಥಳವನ್ನು ಗೊತ್ತು ಮಾಡಿಕೊಂಡಿದ್ದರು. ಪ್ರತಿದಿನ ಸಾಯಂಕಾಲ ಎಲ್ಲರೂ ಅಲ್ಲಿ ಸೇರಿ ಏನಾದರೂ ಚಿಂತನೆ ಮಾಡುತ್ತಿದ್ದರು. ಶಿಕ್ಷಕರಾಗಿ ನಿವೃತ್ತರಾದವರು, ಹತ್ತಿರದ ಕೊಳಗೇರಿಯಲ್ಲಿರುವ ಮಕ್ಕಳಿಗೆ ಆಗಾಗ ಪಾಠ ಹೇಳಿ ಕೊಡುವರು. ಇನ್ನೂ ಕೆಲವರು ಮನೆ,ಮನೆಗಳಿಗೆ ಹೋಗಿ, ನೈರ್ಮಲ್ಯದ ಬಗ್ಗೆ, ಮಾತನಾಡುತ್ತಾ ಮನೆ ಮುಂದೆ ಕೊಳಕು ಹಾಕದಿರುವಂತೆ, ತಿಳುವಳಿಕೆ ನೀಡುತ್ತಿದ್ದರು. ಮತ್ತೆ ಕೆಲವರು ಯಾರಿಗಾದರೂ ಕಾಯಿದೆ, ಕಾನೂನಿನ ವಿಷಯದಲ್ಲಿ, ಭೂ ವಿಚಾರದಲ್ಲಿ ಏನಾದರೂ ಮಾಹಿತಿ ಬೇಕಿದ್ದರೆ ಉಚಿತವಾಗಿ ಸಲಹೆ ನೀಡುತ್ತಿದ್ದರು. ಮಹಿಳೆಯರ ಸ್ವಸಹಾಯ ಗುಂಪುಗಳನ್ನು ಮಾಡಿಸಿ ಅವರನ್ನು ಸ್ವಾವಲಂಬಿಯಾಗುವಂತೆ ಮಾಡುತ್ತಿದ್ದರು. ಹೀಗೆ ಸಮಾಜದಲ್ಲಿ ಯಾವ ವಿಷಯದ ಬಗ್ಗೆ ಅವಶ್ಯಕತೆ, ಇತ್ತೊ, ಅವುಗಳಿಗೆ ಸಹಕಾರಿಯಾಗುವಂತೆ ಕಾರ್ಯ ನಿರ್ವಹಿಸುತ್ತಿದ್ದರು. ಇದರಿಂದ ಸಮಾಜಕ್ಕೂ ಎಷ್ಟೋ ಅನುಕೂಲವಾಗಿತ್ತು, ಹಾಗೂ ಈ ಹಿರಿಯರಿಗೂ, ತಮ್ಮ ಜೀವನದಲ್ಲಿ ಏನಾದರೂ ಒಂದು ಸಾರ್ಥಕ ಕಾರ್ಯ ಮಾಡಿದ ತೃಪ್ತಿ ದೊರಕುತ್ತಿತ್ತು.
ಹೀಗಿರುವಾಗ ಒಂದು ಸಂಜೆ ಸಂಘದ ಕಾರ್ಯದರ್ಶಿಯೊಬ್ಬರು ಸಂಘಕ್ಕೆ ಬರಲಿಲ್ಲ. ಅವರಿಗೇನೊ ತೊಂದರೆ ಆಗಿರಬೇಕೆಂದುಕೊಂಡರು ಉಳಿದ ಸದಸ್ಯರು. ಆದರೆ, ಅದರ ಮುಂದಿನ ಮೂರು ನಾಲ್ಕು ದಿನವೂ ಅವರು ಸಂಘಕ್ಕೆ ಬರಲಿಲ್ಲ. ಅವರೆಂದೂ ಈ ರೀತಿಯಾಗಿ ತಪ್ಪಿಸಿಕೊಂಡವರಲ್ಲ. ಸ್ವಲ್ಪ ತಡವಾಗಿ ಬರುವುದಿದ್ದರೂ ಹೇಳಿ ಕಳುಹಿಸುತ್ತಿದ್ದರು. ಸಂಘದ ಅಧ್ಯಕ್ಷರಿಗೆ ಚಿಂತೆಯಾಯಿತು. ಮತ್ತೊಬ್ಬ ಸದಸ್ಯರನ್ನು ಕರೆದು, ಕಾರ್ಯದರ್ಶಿ ಅವರ ಬಗ್ಗೆ ವಿಚಾರಿಸಿಕೊಂಡು ಬರಲು ಹೇಳಿದರು.
ಆ ಸದಸ್ಯರು ಮರುದಿನ ಬಂದು, ಕಾರ್ಯದರ್ಶಿಗಳ ಮಗನಿಗೆ ಬೇರೆ ಊರಿಗೆ ವರ್ಗವಾಗಿದೆ. ಅವರೆಲ್ಲ ಬೇರೆ ಊರಿಗೆ ಹೋಗಿದ್ದಾರೆ. ಕಾರ್ಯದರ್ಶಿಗಳ ಹೆಂಡತಿ ಕಾಲವಾಗಿ ಮೂರು ವರ್ಷಗಳಾಗಿವೆ. ಹೀಗಾಗಿ ಮನೆಯಲ್ಲಿ ಇವರೊಬ್ಬರೇ.ಅವರಿಗೆ ತಾವು ಒಬ್ಬರೇ ಎಂದು ಬೇಜಾರಾಗಿರಬೇಕು. ಹಾಗಾಗಿ ಇವರು ಮನೆ ಬಿಟ್ಟು ಎಲ್ಲೂ ಹೊರಗೆ ಬರುತ್ತಿಲ್ಲ. ಬಹುಶಃ ಏಕಾಂಗಿತನದಿಂದ ಅವರಿಗೆ ಖಿನ್ನತೆ ಉಂಟಾದಂತೆ ಕಾಣುತ್ತಿದೆ. ಎಂದು ಹೇಳಿದರು.
ಇದನ್ನು ಕೇಳಿದ ಅಧ್ಯಕ್ಷರು ಮರುದಿನವೇ, ಕಾರ್ಯದರ್ಶಿಗಳ ಮನೆಗೆ ಹೋದರು. ಅಧ್ಯಕ್ಷರನ್ನು ನೋಡಿ ಕಾರ್ಯದರ್ಶಿಗಳು ಗಲಿಬಿಲಿ ಗೊಂಡರು. ಅವರಿಗೆ ಸಂಘಕ್ಕೆ ಬರಲು ಮನಸ್ಸಿಲ್ಲ, ಆದರೆ ಅಧ್ಯಕ್ಷರು ಬರಲು ಹೇಳಿದರೆ ಏನು ಮಾಡುವುದೆಂಬ ಚಿಂತೆ. ಆದರೆ ಅಧ್ಯಕ್ಷರು ಯಾವ ಮಾತನ್ನೂ ಆಡಲೇ ಇಲ್ಲ. ಸುಮ್ಮನೆ ಒಳಗೆ ಬಂದು ಕುಳಿತುಕೊಂಡರು. ಚಳಿಗಾಲ ವಾಗಿದ್ದರಿಂದ, ಕಾರ್ಯದರ್ಶಿಗಳು ಒಲೆಯ ಮುಂದೆ ಕುಳಿತು, ಒಲೆಯಲ್ಲಿ ಕಟ್ಟಿಗೆ ಹಾಕಿ ಬೆಂಕಿ ಮಾಡಿ ಮೈ ಕಾಯಿಸಿಕೊಳ್ಳುತ್ತಾ ಕೂತಿದ್ದರು. ಅಧ್ಯಕ್ಷರು ಅಲ್ಲಿಯೇ ಬಂದು ಚಾಪೆಯ ಮೇಲೆ ಕುಳಿತರು. ಒಲೆಯಲ್ಲಿ ಕೆಂಡ ನಿಗಿನಿಗಿ ಉರಿಯುತ್ತಿತ್ತು. ಏನೂ ಮಾತನಾಡದೇ, ಅಧ್ಯಕ್ಷರು, ಒಲೆಯ ಹತ್ತಿರ ಬಂದು ಚಿಮ್ಮಟಿಗೆಯಿಂದ ನಿಗಿನಿಗಿ ಎಂದು ಉರಿಯುತ್ತಿದ್ದ ಒಂದು ಕೆಂಡವನ್ನು ಎಳೆದು ಒಲೆಯ ಹೊರಗೆ ಇಟ್ಟರು. ಮತ್ತೆ ಬಂದು ಕುಳಿತುಕೊಂಡು ಅದನ್ನೇ ನೋಡುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಹೊರಗೆ ಇಟ್ಟ ಕೆಂಡ ಆರಿ ಹೋಗಿ, ತಣ್ಣಗಾಗಿ, ಇದ್ದಿಲಾಯಿತು. ಅಧ್ಯಕ್ಷರು ಸರಿ ನಾನಿನ್ನು ಬರುತ್ತೇನೆ ಎಂದು ಎದ್ದು ಹೊರಟರು. ಆಗಲೂ ಸಂಘಕ್ಕೆ ಯಾಕೆ ಬರುತ್ತಿಲ್ಲ ಎಂದು ಅವರನ್ನು ಕೇಳಲಿಲ್ಲ . ಅಧ್ಯಕ್ಷರನ್ನು ಕಳುಹಿಸಲೆಂದು ಗೇಟಿನವರೆಗೆ ಬಂದ ಕಾರ್ಯದರ್ಶಿಗಳು, ಸ್ವಾಮಿ, ನಾಳೆಯಿಂದ ತಪ್ಪದೇ ಸಂಘಕ್ಕೆ ಬರುತ್ತೇನೆ. ಮಾತನಾಡದೇ, ನನಗೆ ಒಳ್ಳೆಯ ಪಾಠ ಕಲಿಸಿದ್ದೀರಿ ಎಂದರು. ಹೌದಾ, ಅಂತದ್ದೇನು ಮಾಡಿದೆ ನಾನು? ಎನ್ನುತ್ತಾ, ಹುಬ್ಬೇರಿಸಿದರು ಅಧ್ಯಕ್ಷರು.
ಹೊರಗೆ ತೆಗೆದ ಕೆಂಡ, ಒಲೆಯಲ್ಲಿ ಉಳಿದ ಕೆಂಡಗಳ ಜೊತೆಗೆ ಇದ್ದಾಗ ಪ್ರಖರತೆಯಿಂದ ಉರಿದು ಶಾಖ, ಬೆಳಕು ಕೊಡುತ್ತಿತ್ತು. ಅದು ಒಂದೇ ಬೇರೆಯಾದಾಗ ಎಲ್ಲವನ್ನು ಕಳೆದುಕೊಂಡು ಇದ್ದಿಲಾಯಿತು. ನಾನು ಕೆಂಡದ ಹಾಗೆ ಪ್ರಕಾಶದಿಂದಿರಬೇಕು, ಇದ್ದಿಲಾಗುವುದು ಬೇಡ ಎಂದು ಕಣ್ಣೀರು ತಂದುಕೊಂಡರು. ಅಧ್ಯಕ್ಷರು ಅವರ ಬೆನ್ನು ತಟ್ಟಿ ಸಮಾಧಾನ ಮಾಡಿದರು.
ವ್ಯಕ್ತಿ ಸಮಾಜ ಮುಖಿಯಾದಾಗ ಅವನ ಶಕ್ತಿ ವರ್ಧನೆಯಾಗುತ್ತದೆ ಏಕಾಂಗಿ ಆದಾಗ ಅವನಲ್ಲಿರುವ ಶಕ್ತಿ ಕುಗ್ಗಿ, ಬಲಹೀನವಾಗುತ್ತದೆ. ಯಾವುದೇ ಕಾರ್ಯಮಾಡುತ್ತಿದ್ದರೆ, ಚೈತನ್ಯ ಚಟುವಟಿಕೆಯಿಂದ ಹಿಗ್ಗುತ್ತದೆ, ಏಕಾಂಗಿಯಾಗಿ ಏನೂ ಕೆಲಸವಿಲ್ಲದೆ ಇದ್ದಾಗ, ಇರುವ ನಮ್ಮ ಶಕ್ತಿಯೂ ಕುಗ್ಗಿ ಶಕ್ತಿ ಹೀನನ್ನನ್ನಾಗಿಸುತ್ತದೆ. ನಮ್ಮ ಚೈತನ್ಯ ಎಂದೂ ಕುಗ್ಗಬಾರದು. ಇರುವಷ್ಟು ದಿನವೂ ಖುಷಿ ಖುಷಿಯಾಗಿ ಇರಬೇಕೆಂದರೆ ಯಾವುದಾದರೂ ಒಳ್ಳೆಯ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
11
ದಿನಕ್ಕೊಂದು ಕಥೆ
ಶಿಕ್ಷೆಯೆಂದರೆ ಜೀವನ ಪರಿವರ್ತನೆ
ಈ ಪ್ರಪಂಚದಲ್ಲಿ ಅನೇಕ ಜನರು ತಪ್ಪು ಮಾಡಿದಾಗ ಶಿಕ್ಷೆಗೆ ಒಳಗಾಗುವುದುಂಟು. ಶಿಕ್ಷೆಯ ಉದ್ದೇಶ ಶಿಕ್ಷಣವೇ ಆಗಿದೆ. ಒಮ್ಮೆ ತಪ್ಪು ಮಾಡಿದವನು ಮುಂದಕ್ಕೆಂದೂ ಅಂತಹ ತಪ್ಪು ಮಾಡದಿರುವಂತಹ ಶಿಕ್ಷಣ ನೀಡುವುದಕ್ಕಾಗಿ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಗಳಿವೆ. ಇದರಿಂದ ನಮ್ಮ ಸಮಾಜವನ್ನು, ಜನಜೀವನವನ್ನು ಸರಿ ಮಾರ್ಗದಲ್ಲಿ ಮುನ್ನಡೆಸುವಂತಹ ಕೆಲಸ ಸಾಧ್ಯ. ಈ ಬಗೆಯ ನ್ಯಾಯಾಂಗ ಮಹತ್ವವನ್ನು ನಿರೂಪಿಸುವ ಒಂದು ಪ್ರಸಂಗ ಇಲ್ಲಿದೆ.
ಚೀನಾ ದೇಶದಲ್ಲಿ ಒಬ್ಬ ಚಿಂತಕರ ಪ್ರಸಿದ್ಧಿಯನ್ನು ಕೇಳಿ ಅಲ್ಲಿಯ ಅರಸನು ಅವರನ್ನು ತನ್ನ ರಾಜ್ಯದ ನ್ಯಾಯಾಧೀಶರನ್ನಾಗಿ ನೇಮಕ ಮಾಡಿದನು. ಈ ನ್ಯಾಯಾಧೀಶರು ಸೂಕ್ತ ನ್ಯಾಯ ತೀರ್ಪುಗಳಿಂದಾಗಿ ಬಹು ವಿಖ್ಯಾತರಾದರು. ಅಲ್ಲಿಯ ರಾಜಧಾನಿಯಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿಯ ಬಳಿ ಸಾಕಷ್ಟು ಸಂಪತ್ತು ಇತ್ತು. ಇದೆಲ್ಲವೂ ಬಡ ಜನರ ಶೋಷಣೆಯಿಂದ ಸಂಗ್ರಹಿಸಿದ್ದು, ಅದರ ರಕ್ಷಣೆಗಾಗಿ ಬಲಿಷ್ಠ ರಕ್ಷಕರನ್ನೂ ನೇಮಿಸಿಕೊಂಡಿದ್ದ. ಹಾಗಿದ್ದರೂ ಒಮ್ಮೆ ಕಳ್ಳತನ ನಡೆದೇ ಬಿಟ್ಟಿತು ಹಾಗೂ ಕಳ್ಳನನ್ನು ಬಂಧಿಸಲಾಯಿತು.
ಈ ಕಳ್ಳನನ್ನು ಸುಪ್ರಸಿದ್ಧ ನ್ಯಾಯಾಧೀಶರೆದುರು ಹಾಜರುಪಡಿಸಿದಾಗ ಆತನು ತನ್ನ ಕಳ್ಳತನದ ಅಪರಾಧವನ್ನು ಒಪ್ಪಿಕೊಂಡದ್ದಲ್ಲದೆ, ಈ ಹಿಂದೆ ಮಾಡಿದ್ದ ಕಳ್ಳತನಗಳನ್ನೂ ಒಪ್ಪಿಕೊಂಡನು. ಆ ಕಳ್ಳನಿಗೆ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿದ ನ್ಯಾಯಾಧೀಶರು ಶ್ರೀಮಂತ ವ್ಯಾಪಾರಿಯನ್ನು ಕರೆಸಿ, ಆತನು ಧನ ಸಂಗ್ರಹ ಮಾಡಿದ ವಿಧಾನದ ಬಗ್ಗೆ ಪ್ರಶ್ನಿಸತೊಡಗಿದರು. ಆದರೆ ತನ್ನ ಗುಟ್ಟು ಬಿಡಲೊಪ್ಪದ ಆ ವ್ಯಾಪಾರಿ ಎಲ್ಲವೂ ನನ್ನ ವ್ಯಾಪಾರದ ಫಲವಾಗಿದೆ ಎಂದು ವಾದಿಸಿದನು. ಬಡವರ ಶೋಷಣೆಯ ತಪ್ಪನ್ನು ಒಪ್ಪಿಕೊಳ್ಳಲೇ ಇಲ್ಲ.
ನ್ಯಾಯಾಧೀಶರು ವ್ಯಾಪಾರಿಗೆ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಿದರು. ಸಿಟ್ಟುಗೊಂಡ ವ್ಯಾಪಾರಿ "ನೀವು ಕಳ್ಳನಿಗೆ ಒಂದು ವರ್ಷ ಶಿಕ್ಷೆ ವಿಧಿಸಿದರೆ, ನನಗೇಕೆ ಎರಡು ವರ್ಷ ವಿಧಿಸುತ್ತೀರಿ?" ಎಂದು ಪ್ರಶ್ನಿಸಿದ. ನ್ಯಾಯಾಧೀಶರು ಸಮಾಧಾನದಿಂದ "ಆ ಕಳ್ಳನು ತಪ್ಪನ್ನು ಒಪ್ಪಿಕೊಂಡನು. ಆದ್ದರಿಂದ ಅವನಲ್ಲಿ ಹೃದಯ ಪರಿವರ್ತನೆ ಸಾಧ್ಯತೆ ಇದೆ. ಆದರೆ ನೀವು ಒಪ್ಪಿಕೊಳ್ಳಲೇ ಇಲ್ಲ. ಆದ್ದರಿಂದ ಈ ಶಿಕ್ಷೆಯಿಂದ ನಿಮಗಾವ ಶಿಕ್ಷ ಣವೂ ಸಿಗಲಾರದು'" ಎಂದು ಉತ್ತರಿಸಿದಾಗ ವ್ಯಾಪಾರಿ ತಲೆ ತಗ್ಗಿಸಿದ.
ಈ ಪ್ರಪಂಚದಲ್ಲಿ ಮಾನವನು ಶಾಲಾ, ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಪಡೆಯುವ ಶಿಕ್ಷಣಕ್ಕಿಂತ ಬದುಕೆಂಬ ವಿದ್ಯಾಲಯದಲ್ಲಿ ಪಡೆಯುವ ಶಿಕ್ಷ ಣವು ಹೆಚ್ಚು ಮೌಲ್ಯಯುತವಾದುದೇ ಆಗಿದೆ. ಕಾನೂನು ಕಟ್ಟಳೆ, ರೀತಿ-ರಿವಾಜು, ನೀತಿ-ನಿಯಮಗಳನ್ನು ಮೀರಿದವರಿಗೆ ಸರಕಾರ ಇಲ್ಲವೇ ಸಮಾಜವು ನೀಡುವ ಶಿಕ್ಷೆಯೆಂದರೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು, ಭವಿಷ್ಯದಲ್ಲೆಂದೂ ಅಂತಹ ತಪ್ಪು ಮಾಡದೆ ಸಭ್ಯ ನಾಗರಿಕರಾಗಿ ಬದುಕೆಂಬ ಪ್ರೇರಣೆ ನೀಡುವ ಹಾಗ ಪರಿವರ್ತನೆ ಮಾಡುವ ಉಜ್ವಲ ಶಿಕ್ಷಣವೇ ಆಗಿದೆ. ಇಂತಹ ವ್ಯಕ್ತಿತ್ವ ಪರಿವರ್ತನೆಯ ಬಗ್ಗೆ ಅಭಿಮಾನ ಪಡಬೇಕಾಗಿದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
12
ದಿನಕ್ಕೊಂದು ಕಥೆ
ಫೋನ್ ಮಾಡೋಣ ಅಂದರೆ, ನಿನ್ನ ನಂಬರ್ ಗೊತ್ತಿರಲಿಲ್ಲ.
ಗಂಡನಿಗೆ ಒಳ್ಳೆಯ ನೌಕರಿಯಿದೆ. ಮಡಿಲಲ್ಲಿ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಒಂದಷ್ಟು ಬ್ಯಾಂಕ್ ಬ್ಯಾಲೆನ್ಸ್ ಇದೆ. ಸಾಹಿತ್ಯ, ಸಂಗೀತ, ನೃತ್ಯ… ಹೀಗೆ, ವಿವಿಧ ಕೇತ್ರಗಳಲ್ಲಿ ಆಸಕ್ತಿಯೂ ಇದೆ. ಹೀಗೆಲ್ಲ ಇದ್ದಾಗ ಗೃಹಿಣಿ ಏನು ಮಾಡ್ತಾಳೆ ಹೇಳಿ? ಹೊಸದೊಂದು ಮನೆ ಕಟ್ಟುವ, ಉದ್ಯಮ ಆರಂಭಿಸುವ, ಭವಿಷ್ಯದ ದಿನಗಳ ಕುರಿತು ಪ್ಲಾನ್ ಮಾಡುವುದರಲ್ಲಿ ಬ್ಯುಸಿ ಆಗುತ್ತಾಳೆ. ಆದರೆ, ಯಶ್ಮಿತಾ ಕೆನೆತ್ ಅಂಥವರಲ್ಲ. ಇಬ್ಬರು ಸ್ವಂತ ಮಕ್ಕಳನ್ನು ಹೊಂದಿದ ನಂತರವೂ, ಮತ್ತೂಂದು ಮಗುವನ್ನು, ಅದೂ ಅಂಗವಿಕಲ ಹೆಣ್ಣುಮಗುವನ್ನು ದತ್ತು ಪಡೆದು, ಆಕೆಯನ್ನು ಮಹಾರಾಣಿಯಂತೆ ಸಾಕುತ್ತಿದ್ದಾರೆ. ನೀವೀಗ ಓದಲಿರುವುದು ಯಶ್ಮಿತಾ ಎಂಬ ಕರುಣಾಳು ಮನಸ್ಸಿನ ಅಮ್ಮನ ಕಥೆಯನ್ನೇ.
ಯಶ್ಮಿತಾ, ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯವರು. ಪತಿ ಮತ್ತು ಮಕ್ಕಳೊಂದಿಗೆ ಈಗ ಪುಣೆಯಲ್ಲಿ ನೆಲೆಸಿದ್ದಾರೆ. “ಹೆತ್ತವರಿಗೆ ಹೆಣ್ಣು ಭಾರ’, “ಹೆಣ್ಣು ಮಗು ಹುಣ್ಣು ಇದ್ದಂತೆ’ ಎಂದೆಲ್ಲ ಯೋಚಿಸುವ ಜನರೇ ಹೆಚ್ಚಿರುವ ಈ ಸಮಾಜದಲ್ಲಿ, ಸ್ವಂತ ಮಕ್ಕಳನ್ನು ಹೊಂದಿದ ನಂತರವೂ ಹೆಣ್ಣು ಮಗುವನ್ನು ದತ್ತು ಪಡೆದದ್ದು ಯಾಕೆ? ಆ ಮಗುವಿನಿಂದ ತಮ್ಮ ಬದುಕಿನಲ್ಲಿ ಏನೇನೆಲ್ಲಾ ಬದಲಾವಣೆ ಆಯಿತು ಎಂಬುದನ್ನು ಅವರಿಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಓದಿಕೊಳ್ಳಿ.
ಅನಾಥ ಮಕ್ಕಳನ್ನು ದತ್ತು ಪಡೆದು ಸಾಕುವುದು ಬಹಳ ಶ್ರೇಷ್ಠ ಕೆಲಸ- ಇಂಥದೊಂದು ಸಾಲನ್ನು ನಾನು ಓದಿದ್ದು ಕಾಲೇಜು ದಿನಗಳಲ್ಲಿ. ಮುಂದೆ, ನಾನೂ ಒಂದು ಮಗುವನ್ನು ದತ್ತು ತಗೋಬೇಕು ಎಂಬ ನಿರ್ಧಾರ, ಅವತ್ತೇ ನನ್ನ ಜೊತೆಯಾಯ್ತು. ಮದುವೆಯಾದಾಗ, ನನ್ನ ಗಂಡನಿಗೂ ಅದನ್ನೇ ಹೇಳಿದೆ. ಈ ಮಾತಿನಿಂದ ಅವರಿಗೆ ಸಂತೋಷವಾದಂತೆ ಕಾಣಲಿಲ್ಲ. “ನೋಡುವಾ; ಒಂದು ಗಂಡು, ಒಂದು ಹೆಣ್ಣು ಮಗು ಬೇಕೂಂತ ನನ್ನಾಸೆ. ನಮಗೆ ಮಕ್ಕಳಾಗದಿದ್ರೆ ದತ್ತು ತಗೊಳ್ಳುವ’ ಅಂದರು. ಕೆಲ ದಿನಗಳ ನಂತರ, ನಾನು ಗಂಡು ಮಗುವಿನ ತಾಯಿಯಾದೆ. ಮೂರು ವರ್ಷದ ನಂತರ ಮತ್ತೆ ಗರ್ಭಿಣಿಯಾದೆ- 'ಈ ಬಾರಿ ನಮಗೆ ಹೆಣ್ಣುಮಗುವಾದರೆ ಸಾಕು' ಎಂದರು ನನ್ನ ಪತಿರಾಯ. ಒಂದು ಗಂಡು-ಒಂದು ಹೆಣ್ಣು ಮಗು ಬೇಕೆನ್ನುವುದು ಅವರ ಬಯಕೆಯಾಗಿತ್ತು ಅಂದೆನಲ್ಲವೆ? ಅಕಸ್ಮಾತ್ ಈಗ ಹೆಣ್ಣು ಮಗು ಆಗಿಬಿಟ್ಟರೆ, ಒಂದು ಮಗುವನ್ನು ದತ್ತು ಪಡೆಯಬೇಕು ಎಂಬ ಆಸೆ ಈಡೇರುವುದೇ ಇಲ್ಲ ಅನ್ನಿಸಿತು. ನಾನಾಗ ಮೌನವಾಗಿ ದೇವರನ್ನು ಪ್ರಾರ್ಥಿಸಿದೆ: ದೇವರೇ, ನನಗೆ ಈ ಬಾರಿಯೂ ಗಂಡು ಮಗುವನ್ನೇ ಕರುಣಿಸು. ಆ ಮೂಲಕ, ಹೆಣ್ಣುಮಗುವನ್ನು ದತ್ತು ಪಡೆಯಲು ಅವಕಾಶ ಕಲ್ಪಿಸು…
ದೇವರು, ನನ್ನ ಪ್ರಾರ್ಥನೆಯನ್ನು ಕೇಳಿಸಿಕೊಂಡ. ಎರಡನೆಯದೂ ಗಂಡು ಮಗು ಎಂದು ಗೊತ್ತಾದಾಗ, 'ಆಯ್ತು ನಿನ್ನ ಆಸೆಯಂತೆಯೇ ಹೆಣ್ಣು ಮಗುವೊಂದನ್ನು ದತ್ತು ಪಡೆಯೋಣ' ಎಂದು ಯಜಮಾನರು ಹೇಳಿದರು. ಕಿರಿಯ ಮಗನಿಗೆ ಒಂದು ವರ್ಷ ಆಗುತ್ತಿದ್ದಂತೆಯೇ, ಮಗುವೊಂದನ್ನು ದತ್ತು ಪಡೆಯುವ ಕೆಲಸಕ್ಕೆ ನಾವು ಚಾಲನೆ ನೀಡಿದೆವು.
ಹಾಲುಗಲ್ಲದ ಹಸುಳೆಯನ್ನು ತಂದು ಸಾಕುವುದು ಬಹಳ ರಿಸ್ಕಿ ಎಂಬುದು ಕೆಲವೇ ದಿನಗಳಲ್ಲಿ ನಮಗೂ ಅರ್ಥವಾಯಿತು. ಹಾಗಾಗಿ, 2-4 ವರ್ಷದೊಳಗಿನ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದೆವು. ಅದಕ್ಕಿಂತ ಮೊದಲು, ಹೊಸ ಸದಸ್ಯನ ಆಗಮನದ ಕುರಿತು, ನಮ್ಮ ಮಕ್ಕಳಿಗೂ ತಿಳಿಸಬೇಕಿತ್ತು. ಇಬ್ಬರ ಮನದಲ್ಲೂ, ಮೂರನೇ ಮಗುವಿಗೆ ವಿಶೇಷ ಸ್ಥಾನ ಸಿಗುವಂತೆ ನೋಡಿಕೊಳ್ಳಬೇಕಿತ್ತು. ಮಕ್ಕಳನ್ನು ಎದುರಿಗೆ ಕೂರಿಸಿಕೊಂಡು-“ಕೆಲವು ಮಕ್ಕಳಿಗೆ ಯಾವ್ಯಾವುದೋ ಕಾರಣದಿಂದ ಪೇರೆಂಟ್ಸ್ ಇರುವುದಿಲ್ಲ. ಅವರೆಲ್ಲ ಹಾಸ್ಟೆಲ್ನಲ್ಲಿ ಇರ್ತಾರೆ. ಅಂಥ ಒಂದು ಹೆಣ್ಣುಮಗುವನ್ನು ಹಾಸ್ಟೆಲ್ನಿಂದ ತಗೊಂಡು ಬರೋಣ. ಅವಳನ್ನು ನಾವೇ ಸಾಕೋಣ…ಆಗಬಹುದಾ? ಅವಳಿಗೂ ಮನೇಲಿ ಜಾಗ ಕೊಡ್ತೀರಾ? ಅವಳ ಜೊತೆ ಆಟ ಆಡಿಕೊಂಡು ಇರ್ತೀರಾ?’ ಎಂದೆಲ್ಲಾ ಕೇಳಿದೆ. ನನ್ನ ಮಕ್ಕಳು, ಸಂಭ್ರಮದಿಂದ ಒಪ್ಪಿಗೆ ಕೊಟ್ಟರು. ಅಷ್ಟೇ ಅಲ್ಲ, ಅಮ್ಮಾ, ಯಾವಾಗ ಹೊಸ ಪಾಪು ಬರ್ತದೆ? ಅವಳನ್ನು ಯಾವತ್ತು ಕರ್ಕೊಂಡು ಬರ್ತೀಯ? ಎಂದೆಲ್ಲಾ ಪ್ರಶ್ನಿಸಲು ಮುಂದಾದರು. ಮತ್ತೂಂದು ಜೀವವನ್ನು ಸ್ವಾಗತಿಸಲು ಮಕ್ಕಳು ರೆಡಿಯಾಗಿದ್ದಾರೆ ಎಂಬುದು ಖಚಿತವಾದ ಮೇಲೆ, ನನ್ನ ಉತ್ಸಾಹಕ್ಕೆ ರೆಕ್ಕೆ ಬಂದಿತು. ಮರುದಿನದಿಂದಲೇ ಅನಾಥ ಮಕ್ಕಳನ್ನು ಹೊಂದಿರುವ ಆಶ್ರಮಗಳು, ಅಲ್ಲಿರುವ ಹೆಣ್ಣು ಮಕ್ಕಳು, ಅವರ ಹಿನ್ನೆಲೆಯನ್ನು ಚೆಕ್ ಮಾಡುತ್ತಾ ಹೋದೆ. ಆಗ ಗೊತ್ತಾದ ಸಂಗತಿಯೆಂದರೆ-ಅಂಗವಿಕಲ ಮಕ್ಕಳನ್ನು ದತ್ತು ಪಡೆದವರ ಸಂಖ್ಯೆ ವಿಪರೀತ ಕಡಿಮೆಯಿತ್ತು. ಎಲ್ಲರೂ, ಚೆನ್ನಾಗಿರುವ ಮಕ್ಕಳ ಕಡೆಗೆ ಮಾತ್ರ ಗಮನ ಹರಿಸಿದರೆ, ಈ ಪಾಪದ ಮಕ್ಕಳ ಗತಿಯೇನು ಅನ್ನಿಸಿತು. ನನ್ನ ಗಂಡನೂ ಇದೇ ಮಾತು ಹೇಳಿದರು. ತಕ್ಷಣ ನಾನು-“ಒಂದು ಅಂಗವಿಕಲ ಹೆಣ್ಣು ಮಗುವನ್ನೇ ದತ್ತು ಪಡೆಯೋಣ ರೀ’ ಅಂದೆ. ಯಜಮಾನರು, ಅದಕ್ಕೂ ಒಪ್ಪಿದರು.
ಆಮೇಲೆ ನಾವು ತಡಮಾಡಲಿಲ್ಲ. ನಮ್ಮ ಹೆತ್ತವರಿಗೆ, ಬಂಧುಗಳಿಗೆ ಈ ವಿಷಯ ತಿಳಿಸಿದೆವು. ಹೆಣ್ಣು ಮಗು, ಅದೂ ಏನು? ಅಂಗವಿಕಲ ಮಗೂನ ದತ್ತು ತಗೊಳ್ತಾ ಇದೀವಿ ಅಂದಾಗ ಕೆಲವರು ಗಾಬರಿಯಾದರು. 'ಹೆಣ್ಣು ಮಗೂನ ಸಾಕುವುದು ಬಹಳ ಕಷ್ಟ. ಎರಡೆರಡು ಬಾರಿ ಯೋಚನೆ ಮಾಡಿ ಮುಂದುವರೀರಿ' ಅಂದರು. ಈ ಹೊತ್ತಿಗಾಗಲೇ-ಹೆಣ್ಣುಮಗು ಬೇಕೇ ಬೇಕು ಎಂಬ ತುಡಿತ ನಮಗೆ ಬಂದುಬಿಟ್ಟಿತ್ತು. ಹಾಗಾಗಿ, ಆಗಿದ್ದಾಗಲಿ ಅಂದುಕೊಂಡು, ನಮಗೆ ಒಪ್ಪಿಗೆಯಾಗುವಂಥ ಮಗುವಿನ ಹುಡುಕಾಟಕ್ಕೆ ಮುಂದಾದೆವು. ಕಂಪ್ಯೂಟರಿನ ಮುಂದೆ ಕೂರುವುದು, ಒಂದೊಂದೇ ಆಶ್ರಮದ, ಅಲ್ಲಿರುವ ಮಕ್ಕಳ ಚಿತ್ರ-ವಯಸ್ಸು, ಹಿನ್ನೆಲೆ ಗಮನಿಸುವುದೇ ನನ್ನ ಕೆಲಸವಾಯಿತು.
ಹೀಗೇ ಹದಿನೈದಿಪ್ಪತ್ತು ದಿನಗಳು ಕಳೆದವು. ಪ್ರತಿಯೊಂದು ಮಗುವನ್ನು ನೋಡಿದಾಗಲೂ ಮಾತಲ್ಲಿ ವಿವರಿಸಲು ಆಗದಂಥ ಫೀಲ್ ಉಂಟಾಗುತ್ತಿತ್ತು. ಅವತ್ತೂಂದು ದಿನ, ಒಂದು ಮಗುವಿನ ಫೋಟೋ ಕಾಣಿಸಿತು. ಯಾಕೋ ಕಾಣೆ: ಅಲ್ಲಿಂದ ಕಣ್ಣು ಕೀಲಿಸಲು ಮನಸ್ಸೇ ಬರಲಿಲ್ಲ. ಆ ಮಗು, ಕಂಪ್ಯೂಟರಿನ ಒಳಗಿಂದಲೇ-“ಅಮ್ಮಾ’ ಎಂದು ಕರೆದಂತೆ ಭಾಸವಾಗಿಬಿಡ್ತು. ಲವ್ ಅಟ್ ಫಸ್ಟ್ ಸೈಟ್ ಅಂತಾರಲ್ಲ: ಹಾಗೆ, ಮೊದಲ ನೋಟದಲ್ಲೇ ಆ ಮಗುವಿನ ಮುದ್ದು ನೋಟ ನನ್ನನ್ನು ಮರುಳು ಮಾಡಿತು. ತಕ್ಷಣ ಯಜಮಾನರಿಗೆ ಹೇಳಿದೆ: ನಮಗೆ ಇದೇ ಮಗು ಇರಲಿ!
2ರಿಂದ 4 ವರ್ಷದೊಳಗಿನ ಮಗುವಿಗಾಗಿ ನಾವು ಹಂಬಲಿಸಿದ್ವಿ. ಆದರೆ, ಮಗುವನ್ನು ದತ್ತು ಪಡೆಯುವುದು ಒಂದೆರಡು ದಿನದಲ್ಲಿ ಆಗುವ ಕೆಲಸವಲ್ಲ. ಅದಕ್ಕೂ ಹಲವು ನಿಯಮಗಳಿವೆ. ಕಾನೂನುಗಳಿವೆ. ಅವನ್ನೆಲ್ಲ ಪಾಲಿಸುವ ವೇಳೆಗೆ ಒಂದು ವರ್ಷವೇ ಆಗಿಬಿಡ್ತು. ಹಾಗಾಗಿ, ಮಗಳು ಮನೆಗೆ ಬಂದಾಗ, ಅವಳಿಗೆ 5 ವರ್ಷ ತುಂಬಿತ್ತು.
ದತ್ತು ತಗೊಂಡ ಮಗುವಿಗೆ ರುತ್ ಎಂದು ಹೆಸರಿಟ್ಟೆವು. ನಮ್ಮ ಮಗಳಿಗೆ, ಎಡಗಾಲಿನಲ್ಲಿ ಮಂಡಿಯ ಕೆಳಗಿನ ಭಾಗ ಇರಲಿಲ್ಲ. ಬಲಗಾಲಿನಲ್ಲಿ ಪಾದ ತಿರುಚಿಕೊಂಡಿತ್ತು. ಅಂದರೆ-ಎರಡೂ ಕಾಲುಗಳಲ್ಲಿ ತೊಂದರೆ. ಆಕೆ, ಎಲ್ಲಾ ಕೆಲಸವನ್ನೂ ಮಂಡಿಯ ಮೇಲೆ ಕೂತುಕೊಂಡೇ ಮಾಡುತ್ತಿದ್ದಳು. ಇಂಥದೊಂದು ದೈಹಿಕ ತೊಂದರೆಯ ಮಗು ಮನೆಗೆ ಬಂದಾಗ, ಉಳಿದವರು ಅವಳನ್ನು ಗೇಲಿ ಮಾಡುವ, ನಮ್ಮ ಮಧ್ಯೆ ಇವಳ್ಯಾಕೆ ಬಂದಳೋ ಎಂದು ಯೋಚಿಸುವ ಸಾಧ್ಯತೆಗಳಿರುತ್ತವೆ. ಇದನ್ನೆಲ್ಲ ಯೋಚಿಸಿ, ನನ್ನ ಮಕ್ಕಳನ್ನೂ ಎದುರು ಕೂರಿಸಿಕೊಂಡು ಹೇಳಿದೆ: “ಈಗ ಮನೆಗೆ ಬಂದಿರೋದು ದೇವರ ಮಗು. ಅವಳನ್ನು ಮುದ್ದಾಗಿ ಬೆಳೆಸಬೇಕು. ಅದು ನಮ್ಮ ಜವಾಬ್ದಾರಿ. ಅವಳು ಬಂದಿರುವುದರಿಂದ ನಿಮಗೆ ಏನೂ ಕಡಿಮೆಯಾಗಲ್ಲ. ಬದಲಿಗೆ, ಅಕ್ಕ-ತಂಗಿ, ಇಬ್ಬರ ಪ್ರೀತಿಯೂ ಸಿಗುತ್ತೆ…’ ಎಂದೆಲ್ಲ ವಿವರಿಸಿದೆ. ಪುಣ್ಯಕ್ಕೆ, ನನ್ನ ಮಕ್ಕಳು, ಎಲ್ಲವನ್ನೂ ಅರ್ಥಮಾಡಿಕೊಂಡರು.
ಅನಾಥಾಶ್ರಮ ಅಂದಮೇಲೆ, ಅವರಿಗೂ ನೂರೆಂಟು ಸಮಸ್ಯೆಗಳಿರುತ್ತವೆ. ಅದೇ ಕಾರಣದಿಂದ, ಈ ಮಗುವಿಗೆ ಆಪರೇಷನ್ ಮಾಡಿಸುವ, ಅವಳಿಗೆ ಕೃತಕ ಕಾಲು ಅಳವಡಿಸುವ ಕೆಲಸವೇ ಆಗಿರಲಿಲ್ಲ.”ಕಾಲಿಲ್ಲದ ಮಗು’ ಎಂಬ ಯೋಚನೆಯೇ ಅವಳಿಗೆ ಬಾರದಂತೆ ಬೆಳೆಸಬೇಕು ಎಂದು ಯೋಚಿಸಿದ್ದರಿಂದ, ದತ್ತು ಪಡೆಯುವ ಮೊದಲೇ ನಾನು ಹತ್ತಾರು ವೈದ್ಯರನ್ನು ಸಂಪರ್ಕಿಸಿದ್ದೆ. ಅವರಿಂದ, ಸಲಹೆಯನ್ನೂ ಪಡೆದಿದ್ದೆ. ಮಗುವನ್ನು ಬೆಳೆಸುವ ವಿಚಾರವಾಗಿ, ಮಾನಸಿಕವಾಗಿ ಸಿದ್ಧಳಾಗಿದ್ದೆ. ಮಗಳನ್ನು ಎದುರು ಕೂರಿಸಿಕೊಂಡು, ಕೃತಕ ಕಾಲಿನ ಬಳಕೆ, ಅದರಿಂದ ಇರುವ ಅನುಕೂಲವನ್ನೆಲ್ಲ ವಿವರವಾಗಿ ಹೇಳಿದ್ದೆ.
ಹಾಲುಗಲ್ಲದ ಕಂದಮ್ಮಗಳೇ ದತ್ತು ಮಕ್ಕಳಾಗಿ ಬಂದರೆ, ಪೋಷಕರ ಜೊತೆಗೆ ಬೇಗ ಹೊಂದಿಕೊಳ್ತಾರೆ. ಆದರೆ, ನಮ್ಮ ಪಾಲಿಗೆ ಸಿಕ್ಕವಳು 5 ವರ್ಷದ ಬಾಲೆ. ಅದುವರೆಗೂ ಅಪರಿಚಿತರಾಗಿದ್ದವರನ್ನ ಮಮ್ಮಿ-ಡ್ಯಾಡಿ ಅನ್ನುವುದು, ಗೊತ್ತಿಲ್ಲದ ಜಾಗವನ್ನು ನಮ್ಮ ಮನೆ ಎಂದು ಭಾವಿಸುವುದು ಅವಳಿಗೂ ಕಷ್ಟವಾಗಿತ್ತು ಅನಿಸುತ್ತೆ. ಆಕೆ ಆರಂಭದಲ್ಲಿ ನಮ್ಮಿಂದ ಒಂದು ಅಂತರ ಕಾಯ್ದುಕೊಂಡಂತೆಯೇ ಇದ್ದಳು. ಹೆಚ್ಚಿನ ಸಂದರ್ಭಗಳಲ್ಲಿ, ನನ್ನ ದೊಡ್ಡ ಮಗನನ್ನೇ ಫಾಲೋ ಮಾಡ್ತಾ ಇದ್ದಳು. ಅಂದರೆ, ಅವನು ಏನು ಮಾಡ್ತಾನೋ, ಅದನ್ನೇ ಇವಳೂ ಮಾಡ್ತಾ ಇದ್ದಳು. ಬಹುಶಃ ಭಯ ಮತ್ತು ಕೀಳರಿಮೆಯ ಕಾರಣಕ್ಕೆ ಹೀಗೆ ಮಾಡ್ತಿರಬಹುದು ಅನ್ನಿಸ್ತು. “ನೋಡೂ, ಇದು ನಿನ್ನ ಮನೆ. ನಿನಗೆ ಏನಿಷ್ಟವೋ ಅದನ್ನು ಮಾಡು. ಯಾರನ್ನೂ ಫಾಲೋ ಮಾಡಬೇಡ’ ಅಂದೆ. “ಸರಿ’ ಅನ್ನುವಂತೆ ತಲೆಯಾಡಿಸಿ ಸುಮ್ಮನಾದಳು.
ನಮಗೋ, ಹೊಸದೊಂದು ಮಗುವನ್ನು ಮನೆ ತುಂಬಿಸಿಕೊಂಡ ಸಡಗರ, ಅವಳಿಗೋ- ಬೇರೊಂದು ಜಾಗಕ್ಕೆ ದಾರಿ ತಪ್ಪಿ ಬಂದಂಥ ಗೊಂದಲ. ಅಂದರೆ- ಇಬ್ಬರಿಗೂ ಒಂದೊಂದು ಬಗೆಯ ತಳಮಳ. ಬಯಸಿ ತಂದ ಮಗುವಲ್ಲವೆ? ಅವಳನ್ನು ತಬ್ಬಿ ಮುದ್ದಾಡಬೇಕು. ಲಾಲಿ ಹಾಡಿ ಚುಕ್ಕು ತಟ್ಟಬೇಕು, ತೊಡೆಯ ಮೇಲೆ ಕೂರಿಸಿಕೊಳ್ಳಬೇಕು ಎಂದೆಲ್ಲಾ ನನಗೆ ಆಸೆಯಾಗುತ್ತಿತ್ತು. ನಾನು ಹಾಗೇನಾದರೂ ಮಾಡಲು ಮುಂದಾದರೆ, ನನ್ನ ಮಗಳು ಮುಖ ಕಿವುಚುತ್ತಿದ್ದಳು. ಏನೂ ಪ್ರತಿಕ್ರಿಯಿಸದೆ ಎದ್ದು ಹೋಗಿಬಿಡುತ್ತಿದ್ದಳು. ಆಗೆಲ್ಲಾ ಸಂಕಟ ಆಗುತ್ತಿತ್ತು. ಆದರೆ, ಒಂದು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸಮಯ ಬೇಕು. ಈ ಮನೆ, ಇಲ್ಲಿನ ಜನ, ಅವರ ಪ್ರೀತಿ, ಅದರ ಹಿಂದಿನ ಭಾವವೆಲ್ಲಾ ಅರ್ಥವಾಗಿ, ಈ ಮುದ್ದು ಮಗಳು ಆರ್ದ್ರವಾಗಿ “ಅಮ್ಮಾ’ ಎನ್ನುವಂಥ ಸಂದರ್ಭವೊಂದು ಬಂದೇ ಬರುತ್ತೆ. ತಾಳ್ಮೆಯಿಂದ ಕಾಯಬೇಕಷ್ಟೇ… ಎಂದು ನನ್ನ ಒಳ ಮನಸ್ಸು ಪಿಸುಗುಡುತ್ತಿತ್ತು.
ದಿನಗಳು ಉರುಳುತ್ತಿದ್ದವು. ಮಕ್ಕಳು ಬೆಳೆಯುತ್ತಿದ್ದರು. ಅವತ್ತೂಂದು ದಿನ, ನನ್ನ ಮಗಳು “ಅಮ್ಮಾ’ ಅಂದಳು. ಮಾತಾಡು ಕಂದಾ ಅಂದೆ. “ಅಮ್ಮನ ಪ್ರೀತಿ ವಾತ್ಸಲ್ಯಕ್ಕಾಗಿ ಎಷ್ಟೊಂದು ಹಂಬಲಿಸಿದ್ದೆ ಗೊತ್ತೇನಮ್ಮ? ಯಾಕಮ್ಮ ನೀನು ಆಶ್ರಮಕ್ಕೆ ಮೊದಲೇ ಬರಲಿಲ್ಲ. ನನಗೆ ನಿನ್ನ ಫೋನ್ ನಂಬರ್ ಗೊತ್ತಿರಲಿಲ್ಲ. ಗೊತ್ತಿದ್ದರೆ, ಖಂಡಿತ ನಿನಗೆ ಕಾಲ್ ಮಾಡಿ, ನಾನು ಇಲ್ಲಿದೀನಿ. ಬೇಗ ಬಂದು ಕರ್ಕೊಂಡು ಹೋಗಮ್ಮಾ ಅನ್ನುತ್ತಿದ್ದೆ. ಅಮ್ಮ ಬೇಕೂ, ನಂಗೆ ಅಮ್ಮ ಬೇಕೂ ಅಂತ ದಿನಾಲೂ ಹೇಳ್ತಾ, ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಆದರೆ, ನಮ್ಮ ಆಶ್ರಮ ಇಲ್ಲಿಂದ ತುಂಬಾ ದೂರ ಇತ್ತಲ್ವಾ? ಹಾಗಾಗಿ, ನಿನಗೆ ನಾನು ಅಳು, ಕೂಗು ಯಾವುದೂ ಕೇಳಿಸಿಲ್ಲ. ನಿನ್ನನ್ನು ಬಿಟ್ಟು ನಾನೆಲ್ಲೂ ಹೋಗಲ್ಲಮ್ಮ. ನಂಗೆ ನೀನು ಬೇಕು ಕಣಮ್ಮ…’ ಅಂದುಬಿಟ್ಟಳು. ದೇವರು ಪ್ರತ್ಯಕ್ಷನಾಗಿ ಮಾತಾಡಿದಾಗ ಆಗ್ತದಲ್ಲ. ಅಂಥದ್ದೊಂದು ಥ್ರಿಲ್, ಫೀಲಿಂಗ್ ನನಗೆ ಆಗಿತ್ತು. ಮಗಳು ಏನು ಮಾತಾಡ್ತಾಳೋ ಎಂಬ ಕುತೂಹಲದಿಂದ, ಬಾಗಿಲಲ್ಲೇ ನಿಂತು ಎಲ್ಲವನ್ನೂ ಕೇಳಿಸಿಕೊಂಡ ನನ್ನ ಗಂಡ, ಏನು ಹೇಳಲೂ ತೋಚದೆ ಬಿಕ್ಕಳಿಸತೊಡಗಿದರು.
ಮಗಳು ಬಂದಮೇಲೆ ನಮ್ಮ ಮನೆ ನಂದಗೋಕುಲ ಆಗಿದೆ. ಅವಳೀಗ ಯುಕೆಜಿ ಓದ್ತಾ ಇದ್ದಾಳೆ. ಗಂಡುಮಕ್ಕಳಿಗಿಂತ ಹೆಚ್ಚುಆಸೆಯಿಂದ, ಅಕ್ಕರೆಯಿಂದ ಅವಳನ್ನು ಸಾಕ್ತಾ ಇದ್ದೀವಿ. ಕೃತಕ ಕಾಲುಗಳ ಸಹಾಯದಿಂದ ನನ್ನ ಮಗಳು ಓಡಾಡುವುದಷ್ಟೇ ಅಲ್ಲ, ಜಿಗಿಯುವುದು, ಡ್ಯಾನ್ಸ್ ಮಾಡುವುದನ್ನೂ ಕಲಿತಿದ್ದಾಳೆ. ಅವಳನ್ನು ನೋಡಿದಾಗಲೆಲ್ಲ, ದೇವರು ಮಾರುವೇಷದಲ್ಲೇ ನಮ್ಮ ಜೊತೆಗಿದ್ದಾನೆ ಅನಿಸುತ್ತೆ. ಇಂಥದೊಂದು ಫೀಲ್ ತಂದುಕೊಡುವ ಮಗಳಿಗೆ ತಾಯಿಯಾಗುವ ಭಾಗ್ಯ ಎಷ್ಟು ಜನಕ್ಕಿದೆ ಹೇಳಿ.?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
13
ದಿನಕ್ಕೊಂದು ಕಥೆ
ಅವಕಾಶದಿಂದ ವಂಚಿತರಾಗಬೇಡಿ
ಒಬ್ಬ ಮನುಷ್ಯ ಸಮುದ್ರ ತೀರಕ್ಕೆ ಹೋಗಿದ್ದ.ಸ್ನಾನ ಮಾಡಿದ, ತೆರೆಗಳೊಂದಿಗೆ ಆಟವಾಡಿದ.ನಂತರ ಮಧ್ಯಾಹ್ನ ಊಟ ಮಾಡಿ ವಿಶ್ರಾಂತಿಗಾಗಿ ಸ್ಥಳ ಹುಡು ಕಾಡಿದ. ಹತ್ತಿರದಲ್ಲೆಲ್ಲೂ ಮರಗಳಿರಲಿಲ್ಲ. ಮುಂದೆ ಕೆಲವು ದೊಡ್ಡ ದೊಡ್ಡ ಬಂಡೆಗಳಿದ್ದವು. ಅವುಗಳ ಹಿಂದೆ ಬೆಟ್ಟದ ಪ್ರದೇಶ. ಈತ ಬೆಟ್ಟದ ಕಡೆಗೆ ನಡೆದ. ಅಲ್ಲಿ ಮರಗಳ ಕೆಳಗೆ ಮಲಗಿ ವಿಶ್ರಾಂತಿ ಪಡೆಯುವುದು ಅವನ ಉದ್ದೇಶ.
ಅವನಿಗೆ ಮರಗಳ ಹಿಂದೆ ಒಂದು ಗುಹೆ ಕಾಣಿಸಿತು. ಕುತೂಹಲದಿಂದ ಅಲ್ಲಿಗೆ ಹೋದ. ಅದೊಂದು ದೊಡ್ಡ ಗುಹೆ. ಸಾಕಷ್ಟು ಸ್ವಚ್ಛವಾಗಿದೆ. ಯಾರೋ ಅಲ್ಲಿ ಇದ್ದು, ಹೋದ, ಲಕ್ಷಣಗಳಿವೆ. ಯಾರೋ ಗರಿಯ ಚಾಪೆ ಯನ್ನು ಹಾಸಿ ಬಿಟ್ಟು ಹೋಗಿದ್ದಾರೆ. ಇವನು ಚಾಪೆಯ ಮೇಲೆ ಮಲಗಿ ನಿದ್ರೆಹೋದ. ಗುಹೆ ತಂಪಾಗಿತ್ತು. ಚೆನ್ನಾಗಿ ಗಾಳಿ ಬರುತ್ತಿತ್ತು. ಒಂದೆರಡು ತಾಸು ನಿದ್ರೆ ಮುಗಿಸಿ ಎದ್ದ. ಮೈ ಮುರಿದು ಹೊರಡಲು ಸಿದ್ಧನಾದ. ಹೊರಡುವ ಮುನ್ನ ಗುಹೆಯ ಮೂಲೆಯಲ್ಲಿದ್ದ ಒಂದು ಬಟ್ಟೆಯ ಚೀಲವನ್ನು ಗಮನಿಸಿದ, ಅದನ್ನೆತ್ತಿಕೊಂಡು ನೋಡಿದ. ಅದರಲ್ಲಿ ನೂರಾರು ಮಣ್ಣಿನ ಉಂಡೆಗಳು. ಪ್ರತಿಯೊಂದೂ ಸುಮಾರು ಟೆನ್ನೀಸ್ ಚೆಂಡಿನಷ್ಟು ದೊಡ್ಡದಾಗಿತ್ತು. ಬಹುಶಃ ಈ ಗುಹೆಯಲ್ಲಿ ಯಾರೋ ಕೆಲವರು ಮಕ್ಕಳನ್ನು ಕರೆದುಕೊಂಡು ಬಂದು ಉಳಿದಿರಬಹುದು. ಆಗ ಮಕ್ಕಳು ಈ ಮಣ್ಣಿನ ಉಂಡೆಗಳನ್ನು ಮಾಡಿ ಇಟ್ಟಿರ ಬಹುದೆಂದು ಊಹಿಸಿದ.
ಚೀಲವನ್ನು ಹೆಗಲಿಗೇರಿಸಿ ಮತ್ತೆ ಸಮುದ್ರದೆಡೆಗೆ ಹೊರಟ. ತೀರದಲ್ಲಿ ನೀರಿನ ಅಲೆಗಳ ಪಕ್ಕದಲ್ಲೇ ನಡೆ ಯುತ್ತಿದ್ದ. ಆಗ ಚೀಲದ ಭಾರವನ್ನು ಕಡಿಮೆ ಮಾಡ ಬೇಕೆನ್ನಿಸಿತು ಆತನಿಗೆ. ಒಂದು ಉಂಡೆಯನ್ನು ತೆಗೆದು ಶಕ್ತಿ ಪ್ರಯೋಗಿಸಿ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ನೀರಿನಲ್ಲಿ ಎಸೆದು ಬಿಟ್ಟ. ನಂತರ ಸ್ವಲ್ಪ ದೂರ ನಡೆದು ಮತ್ತೊಂದು ಉಂಡೆಯನ್ನು ಎಸೆದ ಅವನಿಗೆ ಅದೊಂದು ಬಗೆಯ ಆಟವೇ ಆಯಿತು. ಕೆಲ ಸಮಯದ ನಂತರ ಆತ ಹತ್ತಿರದ ಕಲ್ಲುಬಂಡೆ ಯೊಂದನ್ನು ಏರಿ ನಿಂತ. ಅಲ್ಲಿಂದಲೂ ಒಂದೆರಡು ಉಂಡೆಗಳನ್ನು ನೀರಿಗೆಸೆದ. ಇನ್ನು ಮೂರ್ನಾಲ್ಕು ಉಂಡೆಗಳು ಉಳಿದಿದ್ದವು. ಮತ್ತೊಂದನ್ನು ತೆಗೆದು ಎಸೆಯುವುದಕ್ಕೆ ಹೋದಾಗ ಕಾಲು ಜಾರಿತು. ಕೈಯಲ್ಲಿಯ ಉಂಡೆ ಬಂಡೆಯ ಮೇಲೆ ಬಿದ್ದು ಒಡೆಯಿತು. ಒಳಗಿನಿಂದ ಫಳ್ಳೆಂದು ಬೆಳಕು ಮಿಂಚಿತು. ಏನದು ಎಂದು ಬಗ್ಗಿನೋಡಿ ತೆಗೆದುಕೊಂಡ. ಅದೊಂದು ಹೊಳೆಹೊಳೆಯುವ ವಜ್ರ! ಅವನಿಗೆ ಆಶ್ಚರ್ಯ! ಉಳಿದೆರಡು ಉಂಡೆಗಳನ್ನು ಒಡೆದು ನೋಡಿದ. ಅವುಗಳಲ್ಲಿಯೂ ಒಂದೊಂದು ವಜ್ರ. ಅವುಗಳನ್ನು ಕಂಡು ಅವನಿಗೆ ಸಂತೋಷವಾಗ ಲಿಲ್ಲ. ಬದಲಿಗೆ ಅಳು ಬಂತು.ಕೆಳಗೆ ಕುಳಿತು ಬಿಕ್ಕಳಿಸಿ ಅತ್ತ. ಅವನ ಚೀಲದಲ್ಲಿ ನೂರಾರು ಮಣ್ಣಿನ ಉಂಡೆಗಳಲ್ಲಿ ವಜ್ರಗಳು ಕುಳಿತಿದ್ದವು. ಅವುಗಳ ಬೆಲೆ ಅರಿಯದೇ ಅವುಗಳನ್ನು ಕೇವಲ ಮಣ್ಣಿನ ಉಂಡೆಗಳೆಂದು ಬಗೆದು ನೀರಿಗೆ ಎಸೆದು ಬಿಟ್ಟಿದ್ದ! ಅವುಗಳ ಬೆಲೆ ಮೊದಲೇ ತಿಳಿದಿದ್ದರೆ ಆತ ಭಾರೀ ಶ್ರೀಮಂತನಾಗಿಬಿಡುತ್ತಿದ್ದ.
ನಮ್ಮ ಜೀವನದಲ್ಲಿ ನಮಗೆ ಬೇಕೋ, ಬೇಡವೋ ನೂರಾರು ಘಟನೆಗಳು ನಡೆಯುತ್ತವೆ. ನೂರಾರು ಜನರ ಸಂಪರ್ಕ ಬರುತ್ತದೆ.ಅವು ಪ್ರತಿಯೊಂದೂ ಮಣ್ಣಿನ ಉಂಡೆಗಳಿದ್ದಂತೆ. ಅವುಗಳನ್ನು ಹತ್ತಿರದಿಂದ ಗಮನಿಸಿದ್ದರೆ, ಪ್ರೀತಿಯಿಂದ ತಟ್ಟದಿದ್ದರೆ ಒಳಗಿನ ವಜ್ರ ಕಾಣಲಿಕ್ಕಿಲ್ಲ. ಅವನ್ನು ನಾವು ಮರೆತು ಬಿಡುತ್ತೇವೆ. ಒಳಗಿನ ವಜ್ರವನ್ನು ಕಾಣುವ ಅವಕಾಶದಿಂದ ವಂಚಿತರಾಗುತ್ತೇವೆ. ನಮ್ಮ ಸಂಪರ್ಕಕ್ಕೆ ಬಂದ ಪ್ರತಿ ವ್ಯಕ್ತಿಯೂ ಒಂದು ವಜ್ರವೆಂಬಂತೆ ಭಾವಿಸಿ ನಡೆದರೆ ಬರಿ ತಪ್ಪುಗಳನ್ನೇ ಕಾಣುವುದು ತಪ್ಪಿ ಎಲ್ಲರಲ್ಲೂ ಒಳ್ಳೆಯದನ್ನು ಕಾಣುವ ಮನೋಭಾವ ಬೆಳೆಯುತ್ತದೆ ಅಲ್ಲವೇ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
14
ದಿನಕ್ಕೊಂದು ಕಥೆ
ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು
ಯಾವುದೇ ಒಂದು ಪ್ರದೇಶದ ಜನಜೀವನವನ್ನು ನಾವು ವಿಶ್ಲೇಷಣೆಗೊಳಪಡಿಸಿದರೆ, ಅಲ್ಲಿ ಎರಡು ಪ್ರಕಾರಗಳನ್ನು ಗುರುತಿಸುತ್ತೇವೆ. ನಗರವಾಸಿಗಳು ಮತ್ತು ಗ್ರಾಮ ವಾಸಿಗಳೆಂಬುದಾಗಿ ಅವರನ್ನು ವಿಂಗಡಿಸುತ್ತೇವೆ.
ನಗರಗಳಲ್ಲಿರುವ ಜನರು ಹೆಚ್ಚು ಸುಶಿಕ್ಷಿತರು ಹಾಗೂ ಹೆಚ್ಚು ಸೌಕರ್ಯಗಳಿಂದ ಕೂಡಿದ ಜೀವನವನ್ನು ನಡೆಸುತ್ತಾರೆ. ಆಧುನಿಕ ವಿಜ್ಞಾನದ ಫಲವಾಗಿ ದೊರೆತಂಥ ಸೌಲಭ್ಯಗಳನ್ನು ಬಳಸಿ, ಸುಖಮಯವಾದ ವಾತಾವರಣದಲ್ಲಿ ಬದುಕುವುದಿಲ್ಲದೆ, ಆಧುನಿಕ ಸಂಪರ್ಕ ಮಾಧ್ಯಮಗಳಿಂದಾಗಿ ವಿಶೇಷವಾದ ಅನುಭವ ಮತ್ತು ಜ್ಞಾನವನ್ನೂ ಪಡೆದಿರುತ್ತಾರೆ.
ಆದರೆ ಗ್ರಾಮವಾಸಿಗಳು ಇಂತಹ ಸೌಕರ್ಯಗಳ ಕೊರತೆಯಿಂದಾಗಿ ಬಹಳ ಹಿಂದುಳಿದವರಾಗಿದ್ದು, ಸಾರ್ವತ್ರಿಕವಾಗಿ ತಾತ್ಸಾರಕ್ಕೆ ಗುರಿಯಾಗುತ್ತಾರೆ. ಆದರೆ ಆದರ್ಶಪ್ರಾಯರೂ, ಔದಾರ್ಯವಂತರೂ ಆದ ಜನರು ಹಳ್ಳಿಗರೊಡನೆಯೂ ಹೇಗೆ ವ್ಯವಹರಿಸುತ್ತಾರೆಂಬುದನ್ನು ಅಬ್ರಹಾಂ ಲಿಂಕನ್ನರ ನಿರ್ದಶದಿಂದ ಗುರುತಿಸಬಹುದಾಗಿದೆ.
ಅಮೆರಿಕಾ ದೇಶದ ಜನಪ್ರಿಯ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ಅಧ್ಯಕ್ಷರಾಗುವ ಮೊದಲೇ ತಮ್ಮ ಸಾರ್ವಜನಿಕ-ಸಂಪರ್ಕ, ಸಮಾಜಸೇವೆ, ಭಾಷಣ-ಕಲೆ ಮೊದಲಾದ ಗುಣಗಳಿಂದಾಗಿ ಸುಪ್ರಸಿದ್ಧರಾಗಿದ್ದರು. ಅವರನ್ನು ನಗರದ ನಾನಾ ಸಂಘ ಸಂಸ್ಥೆಗಳು ಉಪನ್ಯಾಸಕ್ಕಾಗಿ ಆಹ್ವಾನಿಸುತ್ತಿದ್ದವು ಹಾಗೂ ಅವರ ವಿದ್ವತ್-ಪೂರ್ಣ ಉಪನ್ಯಾಸಗಳನ್ನು ಕೇಳುವುದಕ್ಕಾಗಿ ಅಪಾರ ಸಂಖ್ಯೆಯಲ್ಲಿ ಜನರು ನೆರೆಯುತ್ತಿದ್ದರು.
ಒಮ್ಮೆ ಬೃಹತ್ ನಗರ ಟೌನ್ ಹಾಲಿನಲ್ಲಿ ಅವರ ಭಾಷಣ ನಡೆದಾಗ ಅವರ ಹಳ್ಳಿಯ ರೈತನೊಬ್ಬನು ಅದನ್ನು ಕೇಳಲೆಂದು ಆಗಮಿಸಿದ್ದ. ಲಿಂಕನ್ನರ ಭಾಷಣದಿಂದ ಪ್ರಭಾವಿತನಾದ ಆ ರೈತನು ಉಪನ್ಯಾಸ ಮುಕ್ತಾಯವಾಗುತ್ತಿದ್ದಂತೆಯೇ ವೇದಿಕೆಯ ಮೇಲೇರಿ ಬಿಟ್ಟ. 'ಯಾರೀತ'? ಎಂದು ಎಲ್ಲರಿಗೂ ಅಚ್ಚರಿಯೆನ್ನಿಸಿತು! ಆ ರೈತನಾದರೋ ಲಿಂಕನ್ನರ ಹೆಗಲ ಮೇಲೆ ಕೈಯಿರಿಸಿ, ಆತ್ಮೀಯತೆಯಿಂದ "ಲೋ ಅಬ್ರಹಾಂ ನಮ್ಮೂರಿನ ಹುಡುಗ ನೀನು. ಈ ಊರಿನಲ್ಲಿ ಎಷ್ಟು ದೊಡ್ಡ ಜನ ಆಗಿದ್ದೀಯಾ? ನಿನ್ನ ಉಪನ್ಯಾಸ ಕೇಳಲು ಎಷ್ಟೊಂದು ಜನ ಸೇರಿದ್ದಾರೆ! ನನಗೆ ಭಾರಿ ಅಭಿಮಾವೆನ್ನಿಸುತ್ತಿದೆ" ಎಂದು ನುಡಿದ.
ಲಿಂಕನ್ನರೂ ಬಹು ಸಂತೋಷದಿಂದ ಹಸ್ತ ಲಾಘವ ಮಾಡುತ್ತಾ "ಅರೆ ನೀವಾ? ನಮ್ಮೂರಿಂದ ನನ್ನ ಭಾಷಣ ಕೇಳಲೆಂದು ಬಂದಿರಾ? ಊರಿನಲ್ಲೆಲ್ಲ ಕ್ಷೇಮವೇ?" ಎಂದು ವಿಚಾರಿಸಿ ಇತರ ಗಣ್ಯರಿಗೆ ರೈತನನ್ನು ಪರಿಚಯಿಸಿದರು. ರೈತನೋ ಭಾರಿ ಖುಷಿಯಿಂದ, "ನನಗೆಷ್ಟು, ಗೌರವ ನೀಡಿದೆ ನೀನು!" ಎಂದು ನುಡಿದ. ಇದನ್ನು ಗಮನಿಸಿದ ಜನರು ಗಣ್ಯನೇತಾರನಾಗಿದ್ದೂ, ಹಳ್ಳಿಯ ಸಾಮಾನ್ಯ ರೈತನಿಗೆ ಮನ್ನಣೆ ನೀಡಿದ ಲಿಂಕನ್ನರ ಔದಾರ್ಯವನ್ನು ಮೆಚ್ಚಿಕೊಂಡರು.
ಎಷ್ಟೇ ಉನ್ನತ ಸ್ಥಾನವನ್ನೇರಿದವನಾಗಿದ್ದರೂ ತನ್ನ ಮೂಲಸ್ಥಾನದ ಮಹತ್ವವನ್ನು ಮರೆಯದೆ ತನ್ನ ಹಳೆಯ ಪರಿಚಿತರನ್ನೂ, ಗೆಳೆಯರನ್ನೂ ನೆನಪಿನಲ್ಲಿರಿಸಿಕೊಂಡು, ಗೌರವಾದರದಿಂದ ಕಾಣಬಲ್ಲವರು ಆದರ್ಶ ಪ್ರಾಯರೆನಿಸಿಕೊಳ್ಳುವರು. ಮಹಾತ್ಮಾ ಗಾಂಧಿಯವರು ಇಂಗ್ಲೆಂಡಿಗೆ ಹೋಗಿ "ಬಾರ್-ಎಟ್-ಲಾ" ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 'ಬ್ಯಾರಿಸ್ಟರ್' ಎನಿಸಿದ್ದರೂ, ತಮ್ಮ ಹುಟ್ಟೂರನ್ನು ಮರೆಯದೆ, ಭಾರತಕ್ಕೆ ಹಿಂದಿರುಗಿ, ತಮ್ಮ ದೇಶದ ಉದ್ಧಾರಕ್ಕಾಗಿ, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ, ಯಶಸ್ಸು ಗಳಿಸಿದರು. ಭಾರತದ "ರಾಷ್ಟ್ರಪಿತ" ರೆನಿಸಿದರು.
ಜನನಿಯೂ ಜನ್ಮಭೂಮಿಯೂ ಸ್ವರ್ಗಕ್ಕಿಂತಲೂ ಮಿಗಿಲಾದುದು ಎಂಬ ಮಾತು ಇಂತಹ ಮಹಾಪುರುಷರಿಂದಾಗಿಯೇ ಸಾರ್ಥಕವೆನ್ನಿಸಿದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
15
ದಿನಕ್ಕೊಂದು ಕಥೆ
ಅವರವರ ಜವಾಬ್ದಾರಿ ಅರಿತು ನಡೆದರೆ ಬಾಳು ಬಂಗಾರ.
ಅದೊಂದು ವಠಾರ ನೆರೆ ಮನೆಗಳಲ್ಲಿ, ಎರಡು ಸಂಸಾರವಿತ್ತು. ಒಂದು ಮನೆ ಸಂಸಾರದಲ್ಲಿ ಗಂಡ ಹೆಂಡತಿ ಸಣ್ಣ ಪುಟ್ಟ ವಿಷಯಗಳನ್ನು ಗುಡ್ಡದಷ್ಟು ಮಾಡಿ ಇಬ್ಬರಲ್ಲೂ ಮನಸ್ತಾಪ ಬೆಳೆದು ದಿನ ಬೆಳಗು ಜಗಳ ಆಡುತ್ತಿದ್ದರು. ಆದರೆ ನೆರೆಮನೆಯಲ್ಲಿರುವ ಗಂಡ ಹೆಂಡತಿ ಒಂದೇ ಒಂದು ದಿನವೂ ಜಗಳ ಆಡುವುದು ಕೇಳಲಿಲ್ಲ. ಹಾಗಾದರೆ ಅವರು ಜಗಳ ಆಡದೆ ಹೇಗಿದ್ದಾರೆ? ಎಂದು ಜಗಳ ಹೊಡೆಯುವ ಗಂಡ ಹೆಂಡತಿ ಅವರವರೇ ಯೋಚನೆ ಮಾಡುತ್ತಿದ್ದರು. ಒಂದು ದಿನ ಹೆಂಡತಿ ಹೇಳಿದಳು. ನೋಡಿ ನೆರೆ ಮನೆಯಲ್ಲಿ ಒಂದು ದಿನವೂ ಜಗಳ ಆಡುವುದಿಲ್ಲ, ಅಂದರೆ ಆಕೆಯ ಗಂಡ ಎಷ್ಟು ಒಳ್ಳೆಯವನಿರಬೇಕು. ನಿಮ್ಮ ಹಾಗೆ ಒರಟು ಮನುಷ್ಯನಲ್ಲ ಅವನು ಹೊಂದಿಕೊಂಡು ಹೋಗುತ್ತಾನೆ ಅದಕ್ಕಾಗಿ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ ಎಂದಳು. ಗಂಡ ಹೇಳಿದ, ಅವನ್ಯಾಕೆ ಸುಮ್ಮನಿರುತ್ತಾನೆ? ಅದು ಹೇಗೆ ಸಾಧ್ಯ? ಅವನ ಹೆಂಡತಿನೇ ತಾಳ್ಮೆಯಿಂದ ಇರಬಹುದು.
ಸಂಸ್ಕಾರವಂತರ ಮನೆಯವಳಿರಬೇಕು. ಎಲ್ಲಾ ಮನೆಯ ಹೆಣ್ಣು ಮಕ್ಕಳು ನಿನ್ನ ಹಾಗೆ ಜಗಳ, ಹೊಡೆಯುತ್ತಿದ್ದರೆ, ಯಾರು ಸಂಸಾರವನ್ನು ಮಾಡುತ್ತಿರಲಿಲ್ಲ ಎಂದನು. ಇದನ್ನು ಕೇಳಿ ಹೆಂಡತಿಗೆ ಸಿಟ್ಟು ಬಂದಿತು. ಸರಿ ಹಾಗಾದರೆ, ಅವಳು ಸಂಸ್ಕಾರವಂತಳೋ, ಅವನು ಒಳ್ಳೆಯವನು ನೋಡೇ ಬಿಡೋಣಂತೆ, ನೀನು ಪಕ್ಕದ ಮನೆಗೆ ಹೋಗಿ ಮರೆಯಲ್ಲಿ ನಿಂತು ಅವರು ಏನೇನು ಮಾತನಾಡಿ ಕೊಳ್ಳುತ್ತಾರೆ ನೋಡಿ ಬಾ ಎಂದಳು.
ಹೆಂಡತಿ ಹೇಳಿದ್ದನ್ನು, ಕಳ್ಳ ಬೆಕ್ಕಿನಂತೆ ಕಣ್ಣು ಮುಚ್ಚಿ ಕೇಳಿದ, ಏಕೆಂದರೆ ಅವನ ಹೆಂಡತಿಯ ಸ್ವಭಾವ ಹೇಗಿರಬಹುದು? ನೋಡಲು ಹೇಗಿರಬಹುದು ಎಂದು ನೋಡುವ ಕುತೂಹಲವೂ ಇತ್ತು. ಮರುದಿನ ಬೆಳಗ್ಗೆ ನೆರೆಮನೆಗೆ ಹೋಗಿ
ಅವರಿಬ್ಬರಿಗೂ ಗೊತ್ತಾಗದಂತೆ ಬಾಗಿಲ ಮರೆಯಲ್ಲಿ ನಿಂತನು. ಬೆಳಗಿನ ಕೆಲಸ ಎಲ್ಲರ ಮನೆಯಲ್ಲೂ ಹೆಚ್ಚು ಇರುತ್ತದೆ. ಹಾಗೆ ಇವರ ಮನೆಯಲ್ಲೂ ಗಂಡ ಹೆಂಡತಿ ಕೂಡಿ ಕೆಲಸ ಮಾಡುತ್ತಿದ್ದರು. ಹೆಂಡತಿ ಮನೆ ಗುಡಿಸಿ ನೆಲ ಒರೆಸಲು ಬಕೇಟಿನಲ್ಲಿ ನೀರು ಇಟ್ಟುಕೊಂಡು, ಅಡಿಗೆ ಮನೆಯಲ್ಲಿ ಅವಸರದ ಕೆಲಸ ಮಾಡಲು ಒಳಗೆ ಹೋದಳು. ಅದೇ ಸಮಯಕ್ಕೆ ಆಕೆಯ ಗಂಡ, ಬಚ್ಚಲು ಮನೆಯಿಂದ ಹೊರಗೆ ಬಂದವನು ತನ್ನ ಕೋಣೆಗೆ ಹೊರಟಿದ್ದನು.
ಓಡಾಡುವ ಹಾದಿಯಲ್ಲಿ ನೀರು ತುಂಬಿದ್ದ ಬಕೇಟ್ ಇಟ್ಟಿದ್ದನ್ನು ಅವನು ಗಮನಿಸಲಿಲ್ಲ. ಬಂದವನೇ ಬಕೆಟ್ ನ್ನು ಕಾಲಿನಿಂದ ಎಡವಿದನು, ಕಾಲಿಗೂ ನೋವಾಯಿತು, ಬಕೆಟಿನಲ್ಲಿದ್ದ ನೀರು ಚೆಲ್ಲಿ ಮನೆ ತುಂಬಾ ನೀರಿನ ರಾಡಿಯಾಯಿತು. ಇಷ್ಟಾಗಿಯೂ ಅವನು ಹೆಂಡತಿಗೆ ಒಂದು ಮಾತು ಬಯ್ಯಲಿಲ್ಲ.
ಅಡುಗೆ ಮನೆಯಲ್ಲಿದ್ದ ಹೆಂಡತಿ ಶಬ್ದ ಕೇಳಿ ಓಡಿ ಬಂದಳು. ಏನಾಯಿತು ಎಂದು ನೋಡಿದಳು ಗಂಡ ಎಡವಿದ್ದು ತಿಳಿಯಿತು. ಅಯ್ಯೋ ಕ್ಷಮಿಸಿ ನಾನು ಅಡಿಗೆ ಮನೆ ಅವಸರದ ಕೆಲಸದಲ್ಲಿ ತೊಡಗಿದ್ದೆ, ನೆಲ ಒರೆಸಲು ನೀರು ತುಂಬಿದ ಬಕೆಟ್ ನ್ನು, ಬೇಗ ಬರುತ್ತೇನೆ ಎಂದು ಇಲ್ಲಿ ಇಟ್ಟುಕೊಂಡಿದ್ದೆ ಹಾಗೆ ಮಾಡಬಾರದಿತ್ತು ಬಕೆಟ್ ನ್ನು ಬದಿಯಲ್ಲಿ ಇಡಬೇಕಿತ್ತು ಎಂದು ಹೇಳಿದಳು. ಅದಕ್ಕೆ ಆಕೆಯ ಗಂಡ, ಹಾಗೇನು ಇಲ್ಲ ನಿನ್ನ ತಪ್ಪು ಇದರೊಳಗೆ ಏನು ಇಲ್ಲ. ನಾನೇ ತಿಳಿದುಕೊಳ್ಳಬೇಕಿತ್ತು, ಬೆಳಗಿನ ಕೆಲಸ ಬಹಳಷ್ಟು ಇರುತ್ತದೆ ನೀನು
ಗಡಿಬಿಡಿಯಿಂದ ಎಲ್ಲವನ್ನು ಮಾಡಬೇಕು. ಬಕೇಟನ್ನು ಅಲ್ಲಿ ಇಡಬೇಕು ಇಲ್ಲಿ ಇಡಬೇಕು ಎಂಬುದನ್ನು ಯೋಚಿಸಲು ಸಮಯವಿರುವುದಿಲ್ಲ, ಒಂದೇ ಸಲಕ್ಕೆ ಅದು ಇದು ಎಂದು ಒಟ್ಟಿಗೆ ನಾಲ್ಕಾರು ಕೆಲಸಗಳನ್ನು ಮಾಡುತ್ತಿರುವೆ, ಹಾಗಾಗಿ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ನಾನೇ ನೋಡಿಕೊಂಡು ಬರಬೇಕಿತ್ತು ಎನ್ನುತ್ತಾ ಹೆಂಡತಿ ಬೇಡ ಎಂದು ಹೇಳುತ್ತಿದ್ದರೂ ಕೇಳದೆ, ತಾನು ಚೆಲ್ಲಿದ ನೀರನ್ನು ತೆಗೆದು ಒರಸಿ ಶುಚಿಗೊಳಿಸಿದನು. ಪತ್ನಿಯು ಆ ಸಮಯದಲ್ಲಿ ಶುಚಿ ರುಚಿಯಾಗಿ ಅಡುಗೆ ತಿಂಡಿಗಳನ್ನು ಮಾಡಿ ಅವನ ಆಫೀಸ್ ಡಬ್ಬಿಗಳಿಗೆ ತುಂಬಿಸಿಟ್ಟು, ಟೇಬಲ್ ಮೇಲೆ ತಿಂಡಿಗಳನ್ನು ಬಡಿಸಲು ತಯಾರಿ ಮಾಡಿದಳು. ಇಬ್ಬರು ಸಂತೋಷವಾಗಿ ನಗುನಗುತ್ತಾ ತಿಂಡಿ ತಿಂದರು.
ಬಾಗಿಲ ಮರೆಯಲ್ಲಿ ನಿಂತು ನೋಡುತ್ತಿದ್ದ ಗಂಡನಿಗೆ ಅರ್ಥವಾಯಿತು. ಮನೆಗೆ ಬಂದು ಹೆಂಡತಿಗೆ ಹೇಳಿದ, ಅವರು ಜಗಳ ಆಡದಿರುವ ರಹಸ್ಯ ಏನೆಂದರೆ, ಅವರವರ ಜವಾಬ್ದಾರಿಯನ್ನು ಅವರು ಅರಿತು ನಡೆಯುತ್ತಿದ್ದಾರೆ. ಹೀಗಾಗಿ ಗಂಡ ಹೆಂಡತಿಯರಲ್ಲಿ, ತಪ್ಪು ಒಪ್ಪಗಳ ಸಮಸ್ಯೆಯೇ ಬರುವುದಿಲ್ಲ.
ಒಬ್ಬರನ್ನೊಬ್ಬರು ಅರಿತು, ಅವರವರ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ನಿರ್ವಹಿಸಿ, ಇಬ್ಬರೂ, ಒಬ್ಬರಿಗೊಬ್ಬರ ಯೋಗ ಕ್ಷೇಮವನ್ನು ಗಮನಿಸುತ್ತಲೇ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಆದ್ದರಿಂದ ಅವರ ಸಂಸಾರದಲ್ಲಿ ಜಗಳ ಎಂದಿಗೂ ಬರುವುದಿಲ್ಲ. ಇದೇ ಸಂಸಾರದ ಸೂತ್ರ.
ನೀತಿ :-- ನಮ್ಮ ಸಂಸಾರ ಆನಂದ ಸಾಗರ, ವಿವೇಕ ಎಂಬ ದೈವವೇ ನಮಗಾಧಾರ, ಅರಿತು ನಡೆದರೆ ಬಾಳೇ ಬಂಗಾರ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
16
ದಿನಕ್ಕೊಂದು ಕಥೆ
ಅಜ್ಞಾನ ಕತ್ತಲೆ ಕಳೆದರೆ ನಿಜಾನಂದ
ಅಲ್ಲೊಂದು ಅರಣ್ಯ ಪ್ರದೇಶ. ಹೊತ್ತು ಮುಳುಗಿದರೆ ಸಾಕು, ಸುತ್ತಮುತ್ತ ಕತ್ತಲೆ ಆವರಿಸುತ್ತದೆ. ಆಗ ಅಲ್ಲಿಯ ವಾತಾವರಣ ನಿಶ್ಯಬ್ದ. ಅಲ್ಲೊಂದು ಗೂಬೆ. ಅದು ರಾತ್ರಿಯ ಹೊತ್ತು ಕಣ್ಣು ಬಿಟ್ಟಿತು. ಸುತ್ತೆಲ್ಲ ನೋಡಿತು. ಪಶುಪಕ್ಷಿ, ದನಕರು, ಜನಮನ, ಕಾಡಿಗೆ ಕಾಡೇ ಘನವಾದ ನಿದ್ರೆಯಲ್ಲಿತ್ತು.
ಗೂಬೆ, “ಈ ಪ್ರಪಂಚದಲ್ಲಿ ಎಲ್ಲರೂ ಮಲಗಿ ವ್ಯರ್ಥ ಜೀವನ ಕಳೆಯುತ್ತಿದ್ದಾರೆ. ನಾನು ಮಾತ್ರ ಎಚ್ಚರವಾಗಿದ್ದೇನೆ. ಆದ್ದರಿಂದ ಈ ಜಗತ್ತಿನಲ್ಲಿ ನಾನೇ ಏಕೈಕ ಜಾಗ್ರತ ವ್ಯಕ್ತಿ”
ಎಂದು ಕೊಂಡಿತು. ಪಾಪ ಆ ಗೂಬೆ ಹಗಲಿನಲ್ಲಿ ಕಣ್ಣು ಬಿಟ್ಟಿಲ್ಲ. ಕೋಗಿಲೆಯ ಮಧುರ ಗಾಯನ, ಗಿಳಿಯ ಸವಿನುಡಿ, ನವಿಲಿನ ನರ್ತನ, ಲಕ್ಷಾಂತರ ಪಕ್ಷಿಗಳ ಕಲರವ ಕೇಳಿಲ್ಲ. ಕತ್ತಲೆ ಪರದೆ ಸರಿಸಿಲ್ಲ. ಬೆಳಕಿನ ಲೋಕದ ಭವ್ಯತೆಯ ಅನುಭವ ಕಂಡಿಲ್ಲ. ಅದು ಅಹಂಕರಿಸದೆ ಇನ್ನೇನು ಮಾಡೀತು?.
ಅಜ್ಞಾನ ಎಂಬ ಕತ್ತಲೆಯಿಂದ ಮನುಷ್ಯನಲ್ಲಿ ರಾಗಾದಿ ಬಂಧನಗಳ ಕಳೆಯು ಹುಲುಸಾಗಿ ಬೆಳೆದಿದೆ. ಬಂಧನಭೂಮಿ ಎನ್ನಿಸಿರುವ ಈ ಅಜ್ಞಾನದ ಕತ್ತಲೆಯನ್ನು ಕಳೆದರೆ ಸಾಕು, ನಮಗಾಗಿ ಬೆಳ್ಳಂ ಬೆಳಕಿನ ಲೋಕ ಕಾಣುವುದು. ಆಗ ನನಾರೆಂಬ ಅರಿವಿನ, ನಿಜಾನಂದದ ಅನುಭವ ಆಗುವುದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
17
ದಿನಕ್ಕೊಂದು ಕಥೆ
ಸರಳ, ಸೌಜನ್ಯತೆಯಿಂದ ಎಲ್ಲರ ಹೃದಯ ಗೆಲ್ಲಬಹುದು
ಈ ಜಗತ್ತಿನಲ್ಲಿ ಸಾಧು-ಸಂತರನ್ನು ಗೌರವದಿಂದ ಕಂಡು, ಅವರಿಂದ ಪ್ರೇರಣೆ ಪಡೆಯಬೇಕು. ಅವರನ್ನು ಗೌರವಿಸುವುದರಿಂದ ನಮ್ಮ ಗೌರವವೂ ಹೆಚ್ಚುತ್ತದೆ ಎಂಬ ನಿರೀಕ್ಷೆಯಿಂದ ಕೆಲವು ದುರಭಿಮಾನಿಗಳು ಸಾಧು ಸಂತರ ಬಳಿಗೆ ತೆರಳುವ ಮತ್ತು ಗೌರವಿಸುವ ನಾಟಕವಾಡುತ್ತಾರೆ. ಅಂಥವರ ಕಣ್ತೆರೆಸುವ ಒಂದು ರೋಚಕ ಪ್ರಸಂಗ ಹೀಗಿದೆ.
ಹಿಂದಿ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಪಡೆದ ಸಂತ ಕವಿ ದಾದೂ ದಯಾಳರು ತಮ್ಮ ಸರಳತೆ ಮತ್ತು ಸಹನಶೀಲತೆಯಂತಹ ಸದ್ಗುಣಗಳಿಂದಾಗಿ ಸರ್ವತ್ರ ವಿಖ್ಯಾತರಾಗಿದ್ದರು. ಅವರ ಪ್ರಸಿದ್ಧಿಯಿಂದ ಆಕರ್ಷಿತನಾದ ಸೇನಾಧಿಕಾರಿಯೊಬ್ಬ ಕುದುರೆಯನ್ನೇರಿ ಅವರ ದರ್ಶನಕ್ಕೆಂದು ಹೊರಟ. ಸಂತ ದಾದೂ ದಯಾಳರು ನಗರದಾಚೆ ಒಂದು ಹಳ್ಳಿಯ ರಸ್ತೆ ಬದಿಯ ಆಲದ ಮರದ ಬುಡದಲ್ಲಿ ಹಳೆಯ ಹರಿದ ವಸ್ತ್ರ ತೊಟ್ಟು ಧ್ಯಾನಮಗ್ನರಾಗಿದ್ದರು.
ಅಹಂಕಾರಿಯಾದ ಸೇನಾಧಿಕಾರಿ ಅದೇ ದಾರಿಯಾಗಿ ಬಂದರೂ, ಸಾಧಾರಣ ಹರಿದ ವಸ್ತ್ರ ತೊಟ್ಟ ಸಂತರನ್ನು ಗುರುತಿಸಲು ಅಸಮರ್ಥನಾದ. ಅವನು ಕುದುರೆಯ ಬೆನ್ನ ಮೇಲೆ ಕುಳಿತಿದ್ದೇ ಜೋರಾದ ದನಿಯಲ್ಲಿ ''ಲೋ ಮುದುಕ, ನಿನಗೆ ಇಲ್ಲಿ ಸಂತ ದಾದೂ ದಯಾಳರು ಎಲ್ಲಿದ್ದಾರೆಂದು ಗೊತ್ತಿದೆಯೆ?'' ಎಂದು ಪ್ರಶ್ನಿಸಿದ. ಸಂತರು ಶಾಂತರಾಗಿ ಕುಳಿತೇ ಇದ್ದರು. ಉತ್ತರಿಸಲಿಲ್ಲ. ಆಗ ಸೇನಾಧಿಕಾರಿ ಮತ್ತೊಮ್ಮೆ ''ಲೋ ಮುದಿಯಾ, ನಿನಗೆ ಕಿವಿ ಕೇಳಿಸುವುದಿಲ್ಲವೇ? ಸಂತ ದಾದೂ ದಯಾಳರೆಲ್ಲಿರುತ್ತಾರೆ? ಆಗಿನಿಂದ ಕೇಳುತ್ತಾ ಇದ್ದೇವೆ'' ಎಂದು ಕೇಳಿದ. ಸಂತರು ಆಗಲೂ ಪ್ರತಿಕ್ರಿಯಿಸಲಿಲ್ಲ. ಮಂದ ಮುಗುಳುನಗೆಯೊಂದಿಗೆ ತಮ್ಮ ಕೆಲಸ ಮಾಡುತ್ತಿದ್ದರು.
ಈ ಮುದುಕ ಉದ್ದೇಶಪೂರ್ವಕವಾಗಿ ತನ್ನ ಪ್ರಶ್ನೆಗೆ ಉತ್ತರಿಸುತ್ತಿಲ್ಲ ಎಂದು ಸೇನಾಧಿಕಾರಿಗೆ ಅನ್ನಿಸಿ ಆತ ಗದರಿಸತೊಡಗಿದ. ಆಗಲೂ ಸಂತರು ಸುಮ್ಮನೆ ಇದ್ದುದರಿಂದ ಸೇನಾಧಿಕಾರಿ ಬೈಯುತ್ತಾ ಮುಂದೆ ಸಾಗಿದ. ಇಲ್ಲಿ ಇನ್ನೊಬ್ಬ ಸಿಕ್ಕಿದಾಗ ''ಇಲ್ಲಿ ಸಂತ ದಾದೂ ದಯಾಳರು ಎಲ್ಲಿರುತ್ತಾರೆಂದು ಗೊತ್ತೇ?,'' ಎಂದು ಕೇಳಿದ. ಆತ ''ಬನ್ನಿ, ಹಿಂದೆ ಹೋಗೋಣ,'' ಎಂದು ಸೇನಾಧಿಕಾರಿಯನ್ನು ಸಂತರ ಬಳಿಗೆ ತಲಪಿಸಿದ.
ಸ್ವಲ್ಪ ಹೊತ್ತು ಮೊದಲು ತಾನು ಬೈದಿದ್ದ ವ್ಯಕ್ತಿಯೇ ಸಂತ ದಾದೂ ದಯಾಳರು ಎಂದು ಅರಿತಾಗ ಆತ ಗಾಬರಿಯಾಗಿ ಬಿಟ್ಟ. ಪಶ್ಚಾತ್ತಾಪಗೊಂಡು ''ಮಹಾತ್ಮರೇ, ನನ್ನನ್ನು ಮನ್ನಿಸಿ. ತಮ್ಮನ್ನು ಗುರುಗಳನ್ನಾಗಿ ಸ್ವೀಕರಿಸಲು ಹೊರಟಿದ್ದೆ. ನೋಡಿ, ಶಿಷ್ಯನಾಗಲು ಹೊರಟ ನನ್ನಿಂದ ಎಂಥ ತಪ್ಪಾಯ್ತು? ನನ್ನನ್ನು ಕ್ಷ ಮಿಸಿಬಿಡಿ,'' ಎಂದು ವಿನಂತಿಸಿಕೊಂಡ.
ನಮ್ಮ ಉದ್ದೇಶ ಎಷ್ಟೇ ಹಿರಿದಾಗಿದ್ದರೂ, ಅದಕ್ಕೆ ಅನುಗುಣವಾದ ವ್ಯವಹಾರ, ಆಚರಣೆಗಳು ನಮ್ಮಲ್ಲಿ ಇಲ್ಲದಿದ್ದರೆ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವಂತೆ ಮೃದು ಹೃದಯಿಗಳು ಸ್ವೀಕರಿಸುವ ಸಂಪತ್ತು ಗಟ್ಟಿಯಾದ ಕಟು ಹೃದಯಕ್ಕೆ ಸ್ವೀಕಾರಕ್ಕೆ ಅರ್ಹವೇ? ಸರಳತೆ, ನಿರಹಂಕಾರ, ಸದಾಚಾರಗಳಂತಹ ಸದ್ಗುಣಗಳು ಉಳ್ಳವರಾಗಿ ನಾವು ಜೀವನದಲ್ಲಿ ಸಫಲರಾಗಲು ಸಾಧ್ಯ. ಸರಳತೆ ಸೌಜನ್ಯಗಳಿಂದ ನಾವು ಎಲ್ಲರ ಹೃದಯಗಳನ್ನು ಗೆಲ್ಲಬಲ್ಲೆವು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882
18
ಅಮಿತಾಬ್ ಬಚ್ಚನ್ ಹೇಳುತ್ತಾರೆ... "ನನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ನಾನು ಒಮ್ಮೆ ಏರೋಪ್ಲೇನ್ನಲ್ಲಿ ಪ್ರಯಾಣಿಸುತ್ತಿದ್ದೆ.
ನನ್ನ ಪಕ್ಕದ ಸೀಟಿನಲ್ಲಿ ಸಿಂಪಲ್ ಶರ್ಟ್ ಪ್ಯಾಂಟ್ ಹಾಕಿದ್ದ ಒಬ್ಬ ಸರಳ ಸಜ್ಜನ ವ್ಯಕ್ತಿ ಕುಳಿತಿದ್ದರು. ಅವರು ಮಧ್ಯಮ ವರ್ಗದವರಾಗಿ ಮತ್ತು ಉನ್ನತ ಶಿಕ್ಷಣ ಪಡೆದವರಾಗಿ ಕಾಣಿಸಿಕೊಂಡರು.
ಇತರ ಪ್ರಯಾಣಿಕರು ನಾನು ಯಾರೆಂದು ಗುರುತಿಸಿ ಮಾತನಾಡಿಸುತ್ತಿದ್ದರು , ಆದರೆ ಈ ಸಂಭಾವಿತ ವ್ಯಕ್ತಿಗೆ ನನ್ನ ಉಪಸ್ಥಿತಿಯ ಬಗ್ಗೆ ತಿಳಿದಿಲ್ಲ ಎಂದು ಕಾಣುತ್ತಿತ್ತು ... ಅವರು ತಮ್ಮಷ್ಟಕ್ಕೆ ಓದುತ್ತ ಕುಳಿತಿದ್ದರು, ಆವಾಗವಾಗ ಕಿಟಕಿಯಿಂದ ಹೊರಗೆ ನೋಡುತ್ತಿದ್ದರು. ಮತ್ತು ಚಹಾವನ್ನು ನೀಡಿದಾಗ ಅವರು ಅದನ್ನು ಮೌನವಾಗಿ ಸೇವಿಸುತ್ತಿದ್ದರು.
ಅವರೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿರುವಾಗ ನಾನು ಅವರನ್ನು ನೋಡಿ ನಗುತ್ತಿದ್ದೆ. ಆ ವ್ಯಕ್ತಿ ನನ್ನನ್ನು ನೋಡಿ ನಯವಾಗಿ ನಗುತ್ತಾ 'ಹಲೋ' ಎಂದರು.
ನಮ್ಮ ಸಂಭಾಷಣೆ ಪ್ರಾರಂಭವಾಯಿತು ಮತ್ತು ನಾನು ಸಿನಿಮಾ ಮತ್ತು ಚಲನಚಿತ್ರಗಳ ವಿಷಯವನ್ನು ಪ್ರಸ್ತಾಪಿಸಿ, 'ನೀವು ಚಲನಚಿತ್ರಗಳನ್ನು ನೋಡುತ್ತೀರಾ?'
ಆ ವ್ಯಕ್ತಿ, 'ಓಹ್, ಬಹಳ ಕಡಿಮೆ' ಎಂದು ಉತ್ತರಿಸಿದರು. ಹಲವು ವರ್ಷಗಳ ಹಿಂದೆ ಸಿನಿಮಾ ನೋಡಿದ್ದೆ ಎಂದರು,
ನಾನು ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದೆ.
ಆ ವ್ಯಕ್ತಿ ಉತ್ತರಿಸಿದರು.. "ಓಹ್, ಬಹಳ ಒಳ್ಳೆಯದು, ನೀವು ಏನು ಮಾಡುತ್ತೀರಿ?"
ನಾನು "ನಾನು ನಟ" ಎಂದು ಉತ್ತರಿಸಿದೆ.
ಆ ವ್ಯಕ್ತಿ ತಲೆಯಾಡಿಸಿದರು, 'ಓಹ್, ಇದು ಅದ್ಭುತವಾಗಿದೆ!' ಎಂದು ಮತ್ತೆ ಓದತೊಡಗಿದರು.
ನಾವು ಇಳಿದಾಗ, ನಾನು ಕೈಕುಲುಕಿದೆ ಮತ್ತು "ನಿಮ್ಮೊಂದಿಗೆ ಮಾಡಿದ ಪ್ರಯಾಣ ಸಂತೋಷವಾಗಿತ್ತು. ಅಂದಹಾಗೆ, ನನ್ನ ಹೆಸರು ಅಮಿತಾಭ್ ಬಚ್ಚನ್!" ಎಂದೆ.
ಆ ವ್ಯಕ್ತಿ ಕೈಕುಲುಕುತ್ತಾ ಮುಗುಳ್ನಕ್ಕು, “ಧನ್ಯವಾದಗಳು... ನಿಮ್ಮನ್ನು ಭೇಟಿಯಾಗಿ ಸಂತೋಷವಾಯಿತು... ನಾನು JRD ಟಾಟಾ (ಟಾಟಾ ಅಧ್ಯಕ್ಷ)!”
ನೀನು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ನಿನಗಿಂತ ದೊಡ್ಡ ವ್ಯಕ್ತಿ ಇರುತ್ತಾರೆ ಎಂದು ಆ ದಿನ ನನಗೆ ತಿಳಿಯಿತು!! !!
ವಿನಮ್ರರಾಗಿರಿ, ಇದಕ್ಕೆ ಏನೂ ವೆಚ್ಚವಾಗುವುದಿಲ್ಲ.
19
ಅದೊಂದು ಜಗತ್ಪ್ರಸಿದ್ಧ ಚಿತ್ರ. ಸಾಸಿವೆ ಕಾಳಿನಷ್ಟು ಮನುಷ್ಯತ್ವವಿದ್ದರೂ ಮನಕಲಕುವ ಚಿತ್ರ. ಆಫ್ರಿಕಾದ ಸೂಡಾನಿನ ಭೀಕರ ಬರಗಾಲದ ಸಮಯದಲ್ಲಿ ಸೆರೆಹಿಡಿದ ಆ ಚಿತ್ರದಲ್ಲಿದ್ದದ್ದು ಒಂದು ಹದ್ದು ಮತ್ತೊಂದು ಪುಟ್ಟ ಹೆಣ್ಣು ಕೂಸು. ಹಸಿವು ತಾಳಲಾರದ ಆ ಕಂದ ಗಂಜಿಕೇಂದ್ರದ ಕಡೆ ಹೊರಟಿದೆ. ಎಷ್ಟೋ ದಿವಸದಿಂದ ಹಸಿದಿದ್ದರಿಂದ ನಡೆಯಲೂ ತ್ರಾಣವಿಲ್ಲದೇ ತೆವಳತೊಡಗಿದೆ. ಹಾಗೆ ನಿತ್ರಾಣವಾಗಿ ಆಹಾರ ಕೇಂದ್ರದ ಕಡೆ ಹೋಗಲೆತ್ನಿಸುತ್ತಿದ್ದ ಕೂಸಿನ ಹಿಂದೆ ರಣಹದ್ದೊಂದು ಕಾದು ಕುಳಿತಿದೆ! ಈ ದೃಶ್ಯವನ್ನು 1993ರಲ್ಲಿ ಆಫ್ರಿಕಾದ ಖ್ಯಾತ ಫೋಟೋ ಜರ್ನಲಿಸ್ಟ್ ಕೆವಿನ್ ಕಾರ್ಟರ್ ಸೆರೆಹಿಡಿದ. ಈ ಚಿತ್ರಕ್ಕೆ ಪುಲಿಟ್ಜರ್ ಪ್ರಶಸ್ತಿ ಕೂಡ ದೊರೆಯಿತು. ಆದರೆ ಇದಾದ ಕೆಲವೇ ತಿಂಗಳಲ್ಲಿ 33ರ ಹರೆಯದ ಕೆವಿನ್ ಆತ್ಮಹತ್ಯೆ ಮಾಡಿಕೊಂಡುಬಿಟ್ಟ.
ಕೆವಿನ್ನ ಆತ್ಮಹತ್ಯೆಯ ಕಾರಣ ಕೂಡ ಮನುಷ್ಯ ಲೋಕವನ್ನು ಹಿಡಿದು ಅಲ್ಲಾಡಿಸುವಂತದ್ದು. ಪ್ರಶಸ್ತಿ ಸ್ವೀಕರಿಸಿದ ಕೆವಿನ್ಗೆ ದೇಶದೇಶಗಳಿಂದ ಅಭಿನಂದನೆಗಳ ಮಹಾಪೂರ. ಆದರೆ ಒಂದು ಕರೆ ಮಾತ್ರ ಕೆವಿನ್ನನ್ನು ಕೆಣಕಿತ್ತು. ಕರೆ ಮಾಡಿದವರು ಕೇಳಿದರು. ''ಆ ನಂತರ ಏನಾಯಿತು ಕೆವಿನ್ ಅಲ್ಲಿ? ಆ ಪುಟ್ಟ ಕೂಸು ಗಂಜಿಕೇಂದ್ರ ತಲುಪಿತಾ? ಅಥವಾ ಹದ್ದಿಗೆ ಬಲಿಯಾಯಿತಾ?'' ಕೆವಿನ್ ಬಳಿ ಉತ್ತರವಿರಲಿಲ್ಲ. ನನಗೆ ಗೊತ್ತಿಲ್ಲ ಅಂದ. ಅವತ್ತು ವಿಮಾನಕ್ಕೆ ತಡವಾಗುತ್ತಿದ್ದ ಕಾರಣ ನಾನು ಫೋಟೋ ಕ್ಲಿಕ್ಕಿಸಿ ಹೊರಟುಬಿಟ್ಟೆ ಅಂದ. ಫೋನಿನ ವ್ಯಕ್ತಿ, ''ಹಾಗಿದ್ದರೆ ನನ್ನ ಪ್ರಕಾರ ಅವತ್ತು ಅಲ್ಲಿದ್ದುದು ಒಂದಲ್ಲ ಎರಡು ರಣಹದ್ದುಗಳು. ಒಂದು ರಣಹದ್ದಿನ ಕೈಲಿ ಕ್ಯಾಮೆರಾ ಇತ್ತು,'' ಎಂದು ಹೇಳಿ ಫೋನಿಟ್ಟರು. ಈ ಮಾತುಗಳು ಕೆವಿನ್ ಮನಸಿನ ಒಳಗಿಳಿಯುತ್ತಾ ಖಿನ್ನನಾದ. ಆ ಮಗುವನ್ನು ರಕ್ಷಿಸುವ ಅವಕಾಶ ತನಗಿತ್ತಲ್ಲ ಅಂತ ಮಿಂಚಿಹೋದ ಕಾಲದ ತನ್ನದೇ ತಪ್ಪನ್ನು ನೆನೆಯುತ್ತಾ ಕೃಶನಾಗಿ ಕಡೆಗೆ ಆತ್ಮಹತ್ಯೆ ಮಾಡಿಕೊಂಡ.
ನವಮಾಧ್ಯಮ ಯುಗದ ನಮ್ಮ ನಡಾವಳಿಗಳು ಈ ಘಟನೆಯಂತೆಯೇ ಇಲ್ಲವೇ ಎಂಬ ಸೂಕ್ಷ್ಮ ಮನಸಿನ ಪ್ರಶ್ನೆಯೊಂದು ನವಮಾಧ್ಯಮಗಳಲ್ಲೇ ಹರಿದಾಡುತ್ತಿದೆ. ಆದರೆ ಯಾವ್ಯಾವುದೋ ಸುದ್ದಿ ಸಂತೆಯಲಿ ಈ ಪ್ರಶ್ನೆ ಯಾರ ಕಿವಿಯನ್ನೂ ತಲುಪುತ್ತಿಲ್ಲ. ತಲುಪಿದವರಲ್ಲಿ ಕೆಲವರದು ಆತ್ಮಾವಲೋಕನ ಮಾಡಿಕೊಂಡರೂ ಅಸಹಾಯಕತೆ. ಮತ್ತು ಹಲವರದು ಜಾಣಕಿವುಡು. ಇತರರ ವೈಯಕ್ತಿಕ ಬದುಕಿನ ಕುರಿತು ನಾವೇಕೆ ಕೆವಿನ್ನಂತೆ ಒಮ್ಮೊಮ್ಮೆ ಥೇಟು ರಣಹದ್ದಿನಂತೆಯೇ ವರ್ತಿಸುತ್ತೇವೆ? ಪ್ರಶ್ನೆ ನಾವು ಕೇಳಿಕೊಳ್ಳುವುದಿಲ್ಲ. ಸುದ್ದಿಗಳನ್ನು ಹೆಕ್ಕುತ್ತಾ ಅದಕ್ಕೆ ಪ್ರತಿಕ್ರಿಯಿಸುತ್ತಾ ಹೋಗುವ ಪ್ರಕ್ರಿಯೆಯಲ್ಲಿ ಮನುಷ್ಯರಾದ ನಮ್ಮ ಮೈಗೆ ಹದ್ದಿನ ರೆಕ್ಕೆ ಅಂಟಿಕೊಂಡದ್ದು ನಮ್ಮ ಗಮನಕ್ಕೇ ಬಂದಿರುವುದಿಲ್ಲ. ನಮ್ಮನ್ನು ಮೀರಿ ನಮ್ಮೊಳಗಿನ ಕುಕ್ಕುವ ಪ್ರವೃತ್ತಿ ಸದ್ದು ಮಾಡತೊಡಗಿರುತ್ತದೆ.
20
ದಿನಕ್ಕೊಂದು ಕಥೆ
ವಸ್ತುಗಳಿಗಿಂತ ಪ್ರಾಣ ಮುಖ್ಯ
ಉದ್ಯೋಗ ವರ್ಗಾವಣೆಯಿಂದಾಗಿ ಒಬ್ಬ ವ್ಯಕ್ತಿ ತನ್ನ ಮನೆಯನ್ನು ಖಾಲಿ ಮಾಡಿ ಬೇರೆ ಊರಿಗೆ ಹೋಗಬೇಕಾಯಿತು. ಆ ಊರಿಗೆ ಹೋಗಬೇಕಾದರೆ ದಾರಿಯಲ್ಲಿ ದೊಡ್ಡ ನದಿಯನ್ನು ದಾಟಬೇಕು. ನದಿಯು ಸಾಕಷ್ಟು ನೀರಿನಿಂದ ಹರಿಯುತ್ತಿತ್ತು. ಅವರು ನದಿ ದಾಟಲು ದೋಣಿ ಬಾಡಿಗೆಗೆ ವ್ಯವಸ್ಥೆ ಮಾಡಿದರು. ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲ ದೋಣಿಗೆ ತುಂಬಿಸಿದ. ಅವನು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ದೋಣಿ ಹತ್ತಿದನು. ನದಿಯಲ್ಲಿ ಸ್ವಲ್ಪ ದೂರ ಸಾಗಿದ ನಂತರ ದೋಣಿ ಕುಣಿಯತೊಡಗಿತು. ಬೋಟ್ ಓವರ್ ಲೋಡ್ ಆದ ಕಾರಣ ಬೋಟ್ ನಿಧಾನವಾಗಿ ನದಿಯಲ್ಲಿ ಮುಳುಗತೊಡಗಿತು. ನದಿಯ ನೀರು ಸ್ವಲ್ಪಮಟ್ಟಿಗೆ ದೋಣಿಯೊಳಗೆ ಬರಲಾರಂಭಿಸಿತು. ಪರಿಸ್ಥಿತಿಯ ಅಪಾಯವನ್ನು ಅರಿತು ಅವರು ಕಾರ್ಯಪ್ರವೃತ್ತರಾದರು. ಭಾರವನ್ನು ಕಡಿಮೆ ಮಾಡಲು, ಅವನು ಪ್ರತಿ ವಸ್ತುವನ್ನು ತೆಗೆದುಕೊಂಡು ನದಿಗೆ ಎಸೆದನು. ಹೀಗೆ ಬೆಡ್, ಬ್ಯೂರೋ, ಗ್ರೈಂಡರ್, ಮಿಕ್ಸರ್, ರೆಫ್ರಿಜರೇಟರ್ ಎಲ್ಲವನ್ನೂ ಒಂದೊಂದಾಗಿ ನದಿಗೆ ಎಸೆದಿದ್ದಾನೆ. ತೂಕ ಕಡಿಮೆಯಾದ ತಕ್ಷಣ ದೋಣಿ ನಿಧಾನವಾಗಿ ಮೇಲಕ್ಕೆ ಏರಿತು. ದೋಣಿಯೊಳಗೆ ನೀರು ಕೂಡ ನಿಂತಿದೆ. ದೋಣಿ ಸುರಕ್ಷಿತವಾಗಿ ಇನ್ನೊಂದು ದಡ ತಲುಪಿತು. ಪತಿ ಚಿಂತೆಗೀಡಾದ ಹೆಂಡತಿಯತ್ತ ನೋಡಿ, “ಚಿಂತೆ ಮಾಡಬೇಡಿ, ಇವೆಲ್ಲಾ ನಮ್ಮನ್ನು ಬಿಟ್ಟು ಹೋಗದಿದ್ದರೆ ನಮ್ಮ ಪ್ರಾಣವೇ ನಮ್ಮನ್ನು ಬಿಟ್ಟು ಹೋಗುತ್ತದೆ. ನಾವು ನಮ್ಮ ಸುಂದರ ಮಕ್ಕಳನ್ನು ಕಳೆದುಕೊಳ್ಳುತ್ತೇವೆ. ನಮ್ಮನ್ನು ಬಿಟ್ಟು ಹೋದ ಈ ಎಲ್ಲ ಸಂಗತಿಗಳನ್ನು ನಾವು ಮರಳಿ ಪಡೆಯಬಹುದು. ಹಾಗಾಗಿ ಚಿಂತಿಸಬೇಡಿ,’’ ಎಂದು ಸಮಾಧಾನಪಡಿಸಿದರು. ಅವನ ಹೆಂಡತಿ ತನ್ನ ಕಣ್ಣುಗಳಲ್ಲಿ ಸಂತೋಷದ ಕಣ್ಣೀರಿನಿಂದ ಅದನ್ನು ಅನುಮೋದಿಸಿದಳು.
21
ದಿನಕ್ಕೊಂದು ಕಥೆ
ಶ್ರದ್ಧೆಯ ಕ್ಯಾಮರಾ ಮಾತ್ರ ಪರಮ ಸತ್ಯದ ಚಿತ್ರ ಸೆರೆಹಿಡಿಯಬಲ್ಲದು.
ಇಟಾಲಿ ದೇಶದ ಒಂದು ದೊಡ್ಡ ಪಟ್ಟಣದಲ್ಲಿ ಒಬ್ಬ ಜಗತ್ಪಸಿದ್ಧ ಕಲಾವಿದ. ಆತನ ಹೆಸರು ಮೈಕೆಲ್ ಎಂಜಲೋ. ಒಂದು ದಿನ ಒಬ್ಬ ವ್ಯಕ್ತಿ ಮೈಕೆಲ್ ಬಳಿ ಬಂದ. "ನೀವು, ನನ್ನ ಒಂದು ಸುಂದರ ಚಿತ್ರವನ್ನು ಬರೆದುಕೊಡಿ" ಎಂದು ಹೇಳಿದ. ಮೈಕೆಲ್ "ನಿನ್ನದೇ ಚಿತ್ರ ಬರೆಯಬೇಕೇ?" ಎಂದು ಕೇಳಿದರು. "ಹೌದು ನನ್ನದೇ ಚಿತ್ರ ಬರೆಯಬೇಕು"
ಎಂದು ಆತ.
ಮೈಕೆಲ್ರು ಒಂದು ಬಿಳಿ ಹಾಳಿ ತೆಗೆದುಕೊಂಡರು. ಒಳಗೆ ಹೋದರು. ಅದನ್ನು ಸುತ್ತಿ ಕಟ್ಟಿದರು. ಹೊರಗೆ ಬಂದರು. ಅದನ್ನು ಅವನ ಕೈಗೆ ಕೊಟ್ಟು "ಇದರಲ್ಲಿ ನಿನ್ನದೇ ಚಿತ್ರವಿದೆ. ನೋಡುವ ಕಲೆ ಇದ್ದರೆ, ಅದು ಕಾಣುತ್ತದೆ. ಸಾಮರ್ಥ್ಯವಿದ್ದರೆ ಮನೆಗೆ ಹೋಗಿ ನೋಡು" ಎಂದು ಹೇಳಿದ.
ಆತ ಮನೆಗೆ ಹೋದ. ಅದರಲ್ಲಿ ತನ್ನ ಅಪ್ರತಿಮ ಚಿತ್ರ ಇರಬೇಕೆಂಬ ಕುತೂಹಲ. ಅವನು ಅದನ್ನು ಬಿಚ್ಚಿ ನೋಡಿದ. ಆಶ್ಚರ್ಯವೆಂದರೆ ಅದು ಬರೀ ಬಿಳಿಯ ಹಾಳಿಯಾಗಿತ್ತು. ಅವನಿಗೆ ತುಂಬಾ ನಿರಾಶೆಯಾಯಿತು. ಮೈಕೆಲ್ನ ಬಳಿ ಮತ್ತೆ ಓಡಿದ "ಮಹಾನುಭಾವರೆ, ತಾವು ಮರೆತು ನನ್ನ ಚಿತ್ರಕೆ ಬದಲು ಯಾವುದೋ ಬಿಳಿ ಹಾಳೆಯನ್ನು ಕೊಟ್ಟಿರುವಿರಿ" ಎಂದು ಹೇಳಿದ. ಮೈಕೆಲ್ "ಇದೇ ನಿನ್ನ ನಿಜವಾದ ಚಿತ್ರ. ಅದನ್ನು ಯಾರೂ ಈ ಪ್ರಪಂಚದಲ್ಲಿ ಬರೆಯಲಾರರು. ಆದರೆ ನಿನ್ನ ಹುಸಿ ಚಿತ್ರವನ್ನು ಎಂದರೆ ನಿನ್ನ ದೇಹದ ಚಿತ್ರವನ್ನು ಯಾರಾದರೂ ಬರೆಯಬಹುದು" ಎಂದ. ಮೈಕೆಲ್ನ ಈ ಮಾತನ್ನು ಕೇಳುತ್ತಲೇ ಆ ವ್ಯಕ್ತಿಗೆ ನಿರಾಕಾರ ಸತ್ಯ, ಪರಮಾತ್ಮ ಹೊಳೆದ. ಆದರೆ ನಮ್ಮ ಅಲ್ಬಮ್ಗಳೆಲ್ಲ ಹುಸಿ ಚಿತ್ರಗಳಿಂದಲೇ ತುಂಬಿ ಹೋಗಿವೆ. ಶ್ರದ್ಧೆಯ ಕ್ಯಾಮರಾ ಮಾತ್ರ ನಮ್ಮ ಆತ್ಮದ, ಪರಮ ಸತ್ಯದ ಚಿತ್ರ ಸೆರೆಹಿಡಿಯಬಲ್ಲದು.
22
ದಿನಕ್ಕೊಂದು ಕಥೆ
ಸಮಾನ ಮರ್ಯಾದೆ
ಒಂದು ದಿನ ನೆಪೋಲಿಯನ್ ಚಕ್ರವರ್ತಿ ತನ್ನ ಹೆಂಡತಿಯ ಜತೆ ನಡೆದುಕೊಂಡು ಹೋಗ್ತಾ ಇದ್ದ. ಒಂದು ಸಣ್ಣ ರಸ್ತೆಯಲ್ಲಿ ಎದುರು ದಿಕ್ಕಿನಿಂದ ಒಬ್ಬ ಮರಗೆಲಸದವನು ತನ್ನ ತಲೆಯ ಮೇಲೆ ಮರದ ತುಂಡುಗಳನ್ನು ಹೊತ್ತುಕೊಂಡು ಬರ್ತಾ ಇದ್ದ. ಅವನು ತೀರಾ ಹತ್ತಿರಕ್ಕೆ ಬಂದಾಗ ತಾನೂ ಪಕ್ಕಕ್ಕೆ ಜರುಗಿ ಹೆಂಡತಿಗೂ "ಪಕ್ಕಕ್ಕೆ ಬಂದು ಅವನಿಗೆ ಜಾಗ ಬಿಡು" ಎಂದು ಹೇಳಿದ.
ಶ್ರೀಮಂತ ರಾಜಮನೆತನಕ್ಕೆ ಸೇರಿದ ನೆಪೋಲಿಯನ್ನನ ಹೆಂಡತಿ "ಆ ಸಾಮಾನ್ಯ ಕೆಲಸದವನು ನಮಗೆ ನಮಸ್ಕಾರ ಮಾಡಲಿಲ್ಲ. ಬಗ್ಗಿ ಗೌರವ ತೋರಿಸಲಿಲ್ಲ. ಆದರೂ, ನೀವು ಮಾತ್ರ ಇಷ್ಟು ವಿನಯವಾಗಿ ವರ್ತಿಸುತ್ತಾ ಇದ್ದೀರಿ?" ಎಂದು ಕೇಳಿದಳು.
ನೆಪೋಲಿಯನ್ "ನೀನು ಶ್ರೀಮಂತಿಕೆಗೆ ತೋರಿಸುವಷ್ಟು ಗೌರವ ಸಾಧಾರಣ ಕೆಲಸಕ್ಕೆ ತೋರಿಸುತ್ತಿಲ್ಲ. ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಘನತೆ, ಮರ್ಯಾದೆ ಇರುತ್ತದೆ. ಯಾವ ಕೆಲಸವೂ ಸಣ್ಣದಲ್ಲ. ಯಾವ ಕೆಲಸವೂ ದೊಡ್ಡದಲ್ಲ. ನಮಗಾಗಿ ದುಡಿಯುವ ಕೆಲಸಗಾರರನ್ನು ಮರ್ಯಾದೆಯಿಂದ ಕಾಣುವುದು ನಮ್ಮ ದೊಡ್ಡತನವನ್ನು ತೋರಿಸುತ್ತದೆ ನೆನಪಿಟ್ಟುಕೋ" ಎಂದು ಉತ್ತರಿಸಿದ.
ನೆಪೋಲಿಯನ್ನನ ಮಾತನ್ನೇ ಎಷ್ಟೋ ಸಂದರ್ಭಗಳಲ್ಲಿ ಗಾಂಧೀಜಿಯವರೂ ಹೇಳಿ ಆಚರಣೆಗೆ ತಂದಿದ್ದರು.
23
ದಿನಕ್ಕೊಂದು ಕಥೆ
ಬಳೆಗಳ ಶಬ್ದದಿಂದ ಸನ್ಯಾಸದ ಸೂಚನೆ
ಭಗವಂತನ ಇಚ್ಛೆ ಇದ್ದರೆ, ಭೋದೆಯು ಯಾವುದೇ ಕ್ಷಣದಲ್ಲಿ, ಎಲ್ಲಿ ಬೇಕಾದರೂ, ಯಾವುದೇ ರೂಪದಲ್ಲೂ ಕೂಡಾ ಆಗಬಹುದು. ಅದಕ್ಕೆ ಆಧ್ಯಾತ್ಮಿಕತೆಯ ಬಗ್ಗೆ ಅಧ್ಯಯನ ಮಾಡಬೇಕೆಂದಾಗಲಿ, ಶಾಸ್ತ್ರಗಳನ್ನು ಓದಬೇಕೆಂದಾಗಲಿ, ಕಟ್ಟುಪಾಡುಗಳನ್ನು ಪಾಲಿಸಬೇಕೆಂದಾಗಲಿ ಇಲ್ಲ. ಆದರೆ ಯಾರೇ ಆಗಲಿ ಜಾಗರೂಕತೆಯಿಂದ ಇದ್ದ ಕ್ಷಣದಲ್ಲಿ, ಮೌನದ ಮಹತ್ವದ ಅರಿವಾದಾಗ, ಯಾವುದೇ ಕ್ಷಣದಲ್ಲಿ, ಯಾವುದೇ ಘಟನೆಯು ಕೂಡ ಸಂಭವಿಸಬಹುದು.
ಇದೊಂದು ಜೈನ ಶಾಸ್ತ್ರದಲ್ಲಿನ ಪ್ರಾಚೀನ ಕಥೆ. ಮಿಥಿಲಾದ ಮಹಾರಾಜ ನೇಮಿ. ಈತ ಯಾವತ್ತೂ ಯಾವ ಶಾಸ್ತ್ರಗಳನ್ನು ಓದಿರಲಿಲ್ಲ. ಎಂದೂ ಅವನಲ್ಲಿ ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಇರಲಿಲ್ಲ. ಅದೊಂದು ಕೊರತೆಯೆಂದು ಕೂಡ ಅವನಿಗೆ ಅನಿಸಿರಲೇ ಇಲ್ಲ.
ಅವನು ಸ್ವಲ್ಪ ಮಧ್ಯವಯಸ್ಕನಾಗುತ್ತಾ ಬಂದ. ಒಂದು ಸಲ ಅವನಿಗೆ ಜೋರಾಗಿ ಜ್ವರ ಬಂತು. ಭಯಂಕರ ಜ್ವರದ ಯಾತನೆಯಲ್ಲಿ ನರಳುತ್ತಾ ಮಲಗಿದ. ಅವನ ರಾಣಿಯರು ಜ್ವರದ ತಾಪದಿಂದ ಅವನ ಶರೀರವನ್ನು ತಂಪಾಗಿಸಲು, ಗಂಧ ಮತ್ತು ಕೇಸರಿಯ ಲೇಪ ಮಾಡಿದರು. ರಾಣಿಯರ ಕೈಯಲ್ಲಿ ಬಂಗಾರದ ಬಳೆಗಳಿಗೆ ಮುತ್ತು ರತ್ನಗಳನ್ನು ಅಂಟಿಸಲಾಗಿತ್ತು. ಅವನಿಗೆ ಗಂಧ ಲೇಪನ ಮಾಡುವ ಸಮಯದಲ್ಲಿ ಅವರ ಬಳೆಗಳು ಬಹಳವಾಗಿ ಸದ್ದು ಮಾಡುತ್ತಿದ್ದವು.
ರಾಜನಿಗೆ ಆ ಬಳೆಗಳ ಸದ್ದಿನಿಂದ ವಿಪರೀತ ಕಿರಿಕಿರಿಯಾಗುತ್ತಿತ್ತು. ತೆಗೆದುಹಾಕಿ ಈ ಬಳೆಗಳನ್ನು, ನನಗೆ ಇವುಗಳ ಶಬ್ದವನ್ನು ತಡೆದುಕೊಳ್ಳಲಾಗುತ್ತಿಲ್ಲ ಎಂದು ಕಿರುಚಿದ. ಆಗ ರಾಣಿಯರು, ಮಂಗಳಸೂತ್ರದ ಕಲ್ಪನೆಯಿಂದ ಬಳೆಯಿಲ್ಲದೆ ಬರೀ ಕೈಯಲ್ಲಿ ಇರಬಾರದು ಎಂದುಕೊಂಡು, ಕೈಯಲ್ಲಿ ಒಂದೊಂದು ಬಳೆಗಳನ್ನು ಇಟ್ಟುಕೊಂಡು ಉಳಿದಿದ್ದನ್ನು ತೆಗೆದು ಇಟ್ಟರು. ಬಳೆಯ ಸದ್ದೇನೊ ನಿಂತಿತು, ಶ್ರೀಗಂಧದ ಲೇಪನ ನಡೆಯುತ್ತಿತ್ತು.
ಈ ಸಮಯದಲ್ಲಿ ನೇಮಿರಾಜನ ಒಳಗೆ ಒಂದು ಮಹಾಕ್ರಾಂತಿ ಘಟಿಸಿಬಿಟ್ಟಿತು. ಹತ್ತು ಬಳೆಗಳಿದ್ದರೆ, ಸದ್ದು ಮಾಡುತ್ತವೆ, ಒಂದೇ ಬಳೆ ಇದ್ದರೆ ಆಗ ಶಬ್ದಮಾಡುವುದಿಲ್ಲ, ಆಗ ಶಾಂತಿ ಎಂದು ಅವನಿಗೆ ಗೊತ್ತಾಯಿತು. ಹೀಗೆ ಯೋಚಿಸುತ್ತಾ ಹೋದ ಅವನಿಗೆ, ಒಳಗೆ ಕಾಮ ಕ್ರೋಧ ಮದ ಮತ್ಸರ ಹೀಗೆ ಅನೇಕ ಆಸೆಗಳಿದ್ದರೆ ವಿಪರೀತವಾಗಿ ಗಲಾಟೆ ಮಾಡುತ್ತವೆ. ಒಂದೇ ಇದ್ದರೆ ಆಗ ಶಾಂತಿ. ರಾಜ ಎಂದೂ ಯಾವ ಶಾಸ್ತ್ರವನ್ನು ಓದಿರಲಿಲ್ಲ, ಯಾವತ್ತೂ ಅಧ್ಯಾತ್ಮದಲ್ಲಿ ಕಿಂಚಿತ್ತೂ ಆಸಕ್ತಿಯನ್ನೂ ತೋರಿಸಿರಲಿಲ್ಲ. ಇದ್ದಕ್ಕಿದ್ದಂತೆ ಎದ್ದು ಕುಳಿತುಬಿಟ್ಟ. ತನ್ನ ರಾಣಿಯರಿಗೆ, ನನ್ನನ್ನು ಹೋಗಲು ಬಿಡಿ, ಇದು ಜ್ವರ ಅಲ್ಲ. ಇದು ನನ್ನ ಜೀವನದಲ್ಲಿ ಕ್ರಾಂತಿಯ ಒಂದು ಸಂದೇಶ. ಇದು ಜಾಗೃತಿಯನ್ನು ಹೊತ್ತು ತಂದಿದೆ. ಇದು ಆ ಭಗವಂತನ ನನ್ನ ಮೇಲಿನ ಅನುಕಂಪ, ಎಂದು ಹೇಳಿ ಎದ್ದು ಹೊರಟ.
ರಾಣಿಯರು, ಅವನನ್ನು ಬಹಳವಾಗಿ ತಡೆಯಲು ಪ್ರಯತ್ನಿಸಿದರು. ಜ್ವರದ ತೀವ್ರತೆಯಿಂದ, ಅವನಿಗೆ ಏನಾದರೂ ಬುದ್ಧಿಬ್ರಮಣೆ ಆಗಿರಬಹುದೇ? ಎಂದು ಅವರಿಗನ್ನಿಸಿತು. ಏಕೆಂದರೆ ಅವನೆಂದೂ, ಈ ರೀತಿಯ ಮಾತನ್ನೇ ಆಡುತ್ತಿರಲಿಲ್ಲ, ಅವರಿಗೆ ಅವನ ಭೋಗಿ ಜೀವನದ ರೂಪ ಮಾತ್ರ ಗೊತ್ತಿತ್ತು. ಯೋಗಿಗಳನ್ನು ಅವನು ತನ್ನ ಬಳಿ ಸುಳಿಯಲು ಕೂಡಾ ಬಿಡುತ್ತಿರಲಿಲ್ಲ. ಅವನ ಜೀವನದಲ್ಲಿ ಇದ್ದದ್ದು ಬರೀ ಭೋಗವೇ. ಏನಾದರೂ ಸನ್ನಿಪಾತ ಆಗಿರಬಹುದು, ಎಂದು ಹೆದರಿ ಅವರು ಅವನನ್ನು ತಡೆಯುತ್ತಿದ್ದರು.
ರಾಜ "ಯಾರು ಹೆದರಬೇಡಿ, ನನಗೇನು ಬುದ್ಧಿಬ್ರಮಣೆಯಾಗಿಲ್ಲ. ಅದು ಮೊದಲು ಇತ್ತು, ಈಗ ಅದು ಬಿಟ್ಟು ಹೋಯಿತು. ಎಲ್ಲಾ ನಿಮ್ಮ ಬಳೆಗಳ ಕೃಪೆಯಿಂದ, ಎಂಥಾ ಜಾಗದಿಂದ ಪರಮಾತ್ಮ ನನಗೆ ಬೆಳಕನ್ನು ತೋರಿಸಿಬಿಟ್ಟ, ಅವನ ಲೀಲೆ, ಇಂಥದ್ದೆಂದು ಹೇಳಲಾಗುವುದಿಲ್ಲ. ನೀವು ಜಾಸ್ತಿ ಬಳೆಗಳನ್ನು ತೊಟ್ಟಿದ್ದೀರಿ, ಅವು ಬಹಳವಾಗಿ ಶಬ್ದ ಮಾಡುತ್ತಿದ್ದವು, ಯಾವಾಗ ಒಂದು ಮಾತ್ರ ಉಳಿಯಿತೋ, ಆಗ ಶಬ್ದವೆಲ್ಲ ನಿಂತಿತು" ಎಂದು ಹೇಳಿದ. ಅವನಿಗೆ ಶಾಂತಿಯ ಅನುಭೂತಿ ಆಯಿತು.
ಆಧ್ಯಾತ್ಮ ಶಾಸ್ತ್ರದ ಪ್ರಕಾರ ಜೀವನದಲ್ಲಿ ಜಾಗರೂಕತೆಯ ಅಗತ್ಯ ಇದ್ದೇ ಇದೆ. ಜಾಗರೂಕರಾಗಬೇಕೆಂದಿದ್ದರೆ ಆಗ ಎಲ್ಲಿಂದಲಾದರೂ ಒಂದು ಸೂಚನೆ ಸಿಕ್ಕೇ ಬಿಡುತ್ತದೆ, ಆತನಿಗೆ ಬಳೆಗಳಿಂದ ಸನ್ಯಾಸದ ಸೂಚನೆ ಸಿಕ್ಕಿ ಬಿಟ್ಟಿತು.
ನೀತಿ :-- ಎಲ್ಲಿಯವರೆಗೆ ಆಕಾಂಕ್ಷೆಗಳು ಇರುತ್ತವೋ ಅಲ್ಲಿಯವರೆಗೆ ಮನದಲ್ಲಿ ಗಲಾಟೆ ಕೂಡ ಇರುತ್ತದೆ. ಯಾವಾಗ ಒಂದೇ ಆಗಿ, ಗಲಾಟೆಗಳೆಲ್ಲ ನಿಂತು, ಮೌನ ಶಾಂತಿ ಆವರಿಸುತ್ತದೆ.
24
ದಿನಕ್ಕೊಂದು ಕಥೆ
ಸಾರ್ಥಕ ಬದುಕಿಗೆ ಸತ್ಸಂಗ
ಒಬ್ಬ ದೊಡ್ಡ ಸಿರಿವಂತನು ಗುರುಗಳ ಹತ್ತಿರ ಹೋಗಿ ನಮಸ್ಕರಿಸಿ ಕುಳಿತುಕೊಂಡ. ಗುರುಗಳು ಅವನನ್ನು ಆದರದಿಂದ ಸ್ವಾಗತಿಸಿದರು. ಸ್ವಲ್ಪ ಸಮಯದ ನಂತರ “ಬಂದ ಕಾರಣವೇನು?” ಎಂದು ಗುರುಗಳು ಕೇಳಿದರು. “ಪೂಜ್ಯರೇ, ಬದುಕಿನ ಸಾರ್ಥಕತೆಯ ದಾರಿ ಯಾವುದು?” ಎಂದು ಧನಿಕ ಕೇಳಿದ.
ಗುರುಗಳು “ಒಳ್ಳೆಯ ಪ್ರಶ್ನೆ, ನಮ್ಮ ಜೀವನವು ಸುಗಂಧಪೂರ್ಣ ಗುಲಾಬಿ ಹೂವಿನಂತಾಗಬೇಕು. ನಿಮಗೂ ನಿಮ್ಮ ಸುತ್ತಲಿನವರಿಗೂ, ಸಂತಸದ ಸುಗಂಧ ನೀಡಬೇಕು. ಅದು ಸಾರ್ಥಕ ಜೀವನ” ಎಂದರು. “ಆದರೆ ಗುರುಗಳೇ, ನನ್ನ ಬದುಕು ಮುಳ್ಳು ಕಂಟಿಯಿಂದ ಕೂಡಿದ ಕಾಡಿನಂತಾಗಿದೆಯಲ್ಲ” ಎಂದು ಧನಿಕ ತನ್ನ ವ್ಯಥೆಯನ್ನು ತೋಡಿಕೊಂಡ. ಗುರುಗಳು “ಚಿಂತೆಯಿಲ್ಲ, ಶಾಂತ ಸಂತರ, ಅರುಹಿನ ಮಹಂತರ ಸತ್ಸಂಗ, ಸತ್ಯ ಶ್ರವಣಮಾಡು. ನಿನ್ನ ಜೀವನ ಪಾವನ ತಪೋವನವಾಗುತ್ತದೆ. ಸುಂದರ ಹೂಬನವಾಗುತ್ತದೆ” ಎಂದರು. ಗುರುಗಳ ಈ ಸುಮಧುರ ನುಡಿಗಳ ಕೇಳುತ್ತಲೇ ಸಿರಿವಂತನಿಗೆ ಸಾರ್ಥಕ ಬದುಕಿನ ದರ್ಶನವಾಗಿತ್ತು.
25
ದಿನಕ್ಕೊಂದು ಕಥೆ
ಇನೋಬ್ಬರಿಗೆ ಕೇಡು ಬಯಸಿದರೆ ಏನಾಗುತ್ತೆ?
ಫಲವತ್ತಾದ ಇಪ್ಪತ್ತೈದು ಎಕರೆ ತೋಟದ ಭೂಮಿಯ ಒಡೆಯನಾಗಿದ್ದ ನಿಂಗಪ್ಪ ಅನಕ್ಷರಸ್ಥನಾಗಿದ್ದ. ಓದಲು ಬರೆಯಲು ಬಾರದೆ ತಾನು ಅನುಭವಿಸಿದ ಕಷ್ಟಗಳನ್ನು ತನ್ನ ಮಗ ಅನುಭವಿಸಬಾರದೆಂದು ನಿರ್ಧರಿಸಿದ್ದ. ಕಷ್ಟಪಟ್ಟು ಮಗನನ್ನು ವಿದ್ಯಾವಂತನನ್ನಾಗಿ ಮಾಡಿದ್ದ. ಆತನ ಹೆಸರು ವಿನಯ. ನಿಜಕ್ಕೂ ವಿನಯವಂತನಾಗಿದ್ದ. ಪಟ್ಟಣದ ಹಾಸ್ಟೆಲ್ನಲ್ಲಿ ಇದ್ದುಕೊಂಡು, ಹಗಲಿರುಳೂ ಓದಿ, ಉನ್ನತ ಶ್ರೇಣಿಯಲ್ಲಿ ಕೃಷಿ ಪದವಿಯನ್ನು ಪಡೆದುಕೊಂಡಿದ್ದ. ಸರ್ಕಾರಿ ನೌಕರಿಯ ಕನಸು ಕಾಣದ ಆತ ದಿನವೂ ಪಂಚೆ ಉಟ್ಟುಕೊಂಡು, ತಲೆಗೆ ಟವಲ್ಲು ಸುತ್ತಿಕೊಂಡು ಅಪ್ಪನೊಡನೆ ಹೊಲದಲ್ಲಿ ಮಣ್ಣಿನ ಮಗನಾಗಿ ಬೆವರು ಸುರಿಸಿ ದುಡಿಯುತ್ತಿದ್ದ. ತಾನು ಕಲಿತ ಕೃಷಿ ಪದವಿಯ ಜ್ಞಾನವನ್ನು ಬಳಸಿಕೊಂಡು ಹೊಸ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದ.
ತಾತನ ಕಾಲದಿಂದಲೂ ತನ್ನಪ್ಪ ಬೆಳೆಯುತ್ತಿದ್ದ ನಾಟಿ ದ್ರಾಕ್ಷಿ ತೋಟದಲ್ಲಿ ಹೊಸ ತಳಿಯ ಬೀಜರಹಿತ ಕಪ್ಪು ದ್ರಾಕ್ಷಿ ಸಸಿಗಳನ್ನು ವಿನಯ ನಾಟಿ ಮಾಡಿದ. ಅವುಗಳ ಬುಡಕ್ಕೆ ಹನಿ ಹನಿಯಾಗಿ ನೀರು ತೊಟ್ಟಿಕ್ಕುವಂತೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದ. ಹಾಗಾಗಿ ಬಹಳ ಬೇಗನೆ ದ್ರಾಕ್ಷಿ ಸಸಿಗಳು ಆಳೆತ್ತರಕ್ಕೆ ಬೆಳೆದುನಿಂತವು. ಮಾರುದ್ದ ಅಂತರದಲ್ಲಿ ಕಲ್ಲಿನ ಕಂಬಗಳನ್ನು ನೆಟ್ಟು ನಿರ್ಮಿಸಿದ್ದ ಚಪ್ಪರದ ತುಂಬ ಬಳ್ಳಿಯಾಗಿ ಹರಡಿಕೊಂಡವು. ಕೆಲ ತಿಂಗಳುಗಳು ಕಳೆಯುತ್ತಲೇ ದ್ರಾಕ್ಷಿ ಬಳ್ಳಿಗಳಲ್ಲಿ ಹೂವುಗಳು ಕಾಣಿಸಿಕೊಂಡವು. ಆ ಹೂವುಗಳನ್ನು ಕೀಟಗಳು ತಿನ್ನಬಾರದು, ತಿಂದರೆ ಇಳುವರಿ ಕಡಿಮೆಯಾದೀತೆಂದು ಮುಂಜಾಗ್ರತೆಯಿಂದ ವಿನಯ ಹದಿನೈದು ದಿನಕ್ಕೊಮ್ಮೆ ರಾಸಾಯನಿಕ ಕೀಟನಾಶಕವನ್ನು ಸಿಂಪಡಿಸತೊಡಗಿದ.
ದಿನಗಳೆದಂತೆ ಹೂವುಗಳು ಸಣ್ಣ ಸಣ್ಣ ಕಾಯಿಗಳಾದವು. ಎಲೆಗಳ ಕೆಳಗೆ ಬೊಗಸೆಯಷ್ಟು ದ್ರಾಕ್ಷಿ ಕಾಯಿಗಳ ಗೊಂಚಲು ಜೋತುಬಿದ್ದವು. ಆಗ ಊರಿನಲ್ಲಿದ್ದ ಎಲ್ಲ ರೈತರ ಕಣ್ಣುಗಳು ಅರಳಿದವು. ಪಟ್ಟಣದ ಹಾಸ್ಟೆಲ್ನಲ್ಲಿದ್ದು ಓದಿ, ಹಳ್ಳಿಗೆ ಮರಳಿದ ನಿಂಗಪ್ಪನ ಮಗ ಒಳ್ಳೆಯ ಫಸಲು ಬೆಳೆಯುತ್ತಿದ್ದಾನೆ. ಇದ್ದರೆ ಇಂತಹ ಮಗ ಇರಬೇಕು ಅಂತ ಅನೇಕರು ಹೊಗಳಿದರು.
ಆದರೆ ನಿಂಗಪ್ಪನ ಹೊಲದ ಅಕ್ಕಪಕ್ಕದ ದ್ಯಾವಪ್ಪ ಮತ್ತು ಸಂಗಪ್ಪ ಮಾತ್ರ ಹೊಗಳಿಕೆಯ ಮಾತುಗಳನ್ನು ಕೇಳಿ ಹೊಟ್ಟೆಕಿಚ್ಚುಪಟ್ಟರು. ಹೇಗಾದರೂ ಮಾಡಿ ದ್ರಾಕ್ಷಿ ತೋಟವನ್ನು ನಾಶಪಡಿಸಬೇಕೆನ್ನುವ ಕೆಟ್ಟ ಯೋಚನೆ ಅವರಿಬ್ಬರಲ್ಲಿ ಮೂಡಿತು. ಒಂದು ದಿನ ರಾತ್ರಿ ಇಬ್ಬರೂ ತಮ್ಮ ನೂರಾರು ಕುರಿಗಳನ್ನು ನಿಂಗಪ್ಪನ ತೋಟದೊಳಕ್ಕೆ ನುಗ್ಗಿಸಿಬಿಟ್ಟು ತೆಪ್ಪಗೆ ನಿದ್ದೆ ಹೋದರು.
ಬೆಳಗಾಯಿತು. ದ್ಯಾವಪ್ಪ ಮತ್ತು ಸಂಗಪ್ಪನ ಕೆಟ್ಟ ಯೋಚನೆ ಅವರಿಗೇ ತಿರುಮಂತ್ರವಾಗಿತ್ತು. ಹಿಂದಿನ ದಿನ ಸಂಜೆ ವಿನಯ ದ್ರಾಕ್ಷಿ ತೋಟಕ್ಕೆ ಕೀಟನಾಶಕವನ್ನು ಸಿಂಪಡಿಸಿದ್ದ. ಕುರಿಗಳು ಕೀಟನಾಶಕ ಅಂಟಿದ ಒಂದಿಷ್ಟು ದ್ರಾಕ್ಷಿ ಬಳ್ಳಿಯನ್ನು ತಿನ್ನುತ್ತಲೇ ಎಚ್ಚರ ತಪ್ಪಿ, ಹೊಟ್ಟೆ ಉಬ್ಬಿಕೊಂಡು ಅರೆಜೀವವಾಗಿ ಬಿದ್ದಿದ್ದವು. ಅವುಗಳನ್ನು ನೋಡಿದ ದ್ಯಾವಪ್ಪ ಮತ್ತು ಸಂಗಪ್ಪ ಇಬ್ಬರೂ ಎದೆಬಡಿದುಕೊಂಡು ಅಳತೊಡಗಿದರು. ‘ಜೀವನಕ್ಕೆ ಆಧಾರವಾಗಿರುವ ಕುರಿಗಳು ಸಾಯುತ್ತಿವೆ. ಯಾರಾದರೂ ಕಾಪಾಡಿ’ ಎಂದು ಗೋಳಾಡತೊಡಗಿದರು.
ಆಗ ತೋಟದ ಸುತ್ತಮುತ್ತಲಿನ ರೈತರೆಲ್ಲರೂ ಓಡೋಡಿ ಬಂದರು. ಕಷ್ಟಪಟ್ಟು ಬೆಳೆದ ನಿಂಗಪ್ಪನ ದ್ರಾಕ್ಷಿ ತೋಟವನ್ನು ನಾಶಪಡಿಸಲು ರಾತ್ರೋರಾತ್ರಿ ಕುರಿಗಳನ್ನು ತೋಟದೊಳಗೆ ಬಿಟ್ಟಿದ್ದೂ ಅಲ್ಲದೆ, ತಮ್ಮ ಕುರಿಗಳನ್ನು ಕಾಪಾಡಿ ಎನ್ನುತ್ತಿದ್ದಾರೆ ಇವರನ್ನು ಸುಮ್ಮನೆ ಬಿಡಬಾರದು, ಪೊಲೀಸರಿಗೆ ದೂರು ಕೊಟ್ಟು, ಇವರಿಬ್ಬರನ್ನು ಜೈಲಿಗೆ ಕಳುಹಿಸಬೇಕು. ಸುಮ್ಮನಿದ್ದರೆ ಇವರಿಬ್ಬರೂ ಪಾಠ ಕಲಿಯುವುದಿಲ್ಲವೆಂದು ನಿರ್ಧರಿಸಿದರು.
ಆ ಕೂಡಲೇ ಅಪ್ಪನೊಂದಿಗೆ ಹೊಲದತ್ತ ಧಾವಿಸಿಬಂದ ವಿನಯ, ‘ಆಗಿದ್ದು ಆಗಿ ಹೋಯಿತು. ಈಗ ಅರೆಜೀವವಾಗಿ ಬಿದ್ದಿರುವ ಮೂಕಪ್ರಾಣಿಗಳಾದ ಕುರಿಗಳನ್ನು ಬದುಕಿಸೋಣ ಬನ್ನಿ, ಎಲ್ಲರೂ ಕುರಿಗಳನ್ನು ಒಂದೊಂದಾಗಿ ಎತ್ತಿಕೊಂಡು ಬನ್ನಿ…’ ಎಂದು ಹೇಳಿದವನೇ ಕುರಿಯೊಂದನ್ನು ಎತ್ತಿಕೊಂಡು ತೋಟದ ಬದುವಿನ ಮೇಲೆ ಹೋಗಿ ಕುಳಿತ. ಅದೇ ಬದುವಿನ ಮೇಲೆ ಬೆಳೆದಿದ್ದ ಒಂದೆರಡು ಜಾತಿಯ ಗಿಡದ ಸೊಪ್ಪನ್ನು ಕಿತ್ತುಕೊಂಡ. ಅಗಲವಾದ ಕಲ್ಲಿನ ಮೇಲೆ ಹಾಕಿ ಕುಟ್ಟಿ ಅರೆದು, ಅಗತ್ಯವಾದ ಔಷಧಿಯನ್ನು ತಯಾರಿಸಿದ. ಆ ಔಷಧಿಯನ್ನು ಕುರಿಗಳಿಗೆ ಕುಡಿಸಿದ. ಸ್ವಲ್ಪ ಸಮಯದ ಬಳಿಕ ಎಲ್ಲ ಕುರಿಗಳು ತಲೆಕೊಡವಿಕೊಂಡು ಎದ್ದು ನಿಂತವು. ‘ಬ್ಯಾ.. ಬ್ಯಾ…’ ಅಂತ ಅರಚತೊಡಗಿದವು.
ನಿಂಗಪ್ಪ ಮತ್ತು ಆತನ ಮಗ ವಿನಯನ ಶ್ರಮದ ಫಲವನ್ನು ನೋಡಲಾಗದೆ ಹೊಟ್ಟೆಕಿಚ್ಚುಪಟ್ಟು ನಾಶಪಡಿಸಲು ಹೋಗಿ ತಾವೇ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಕ್ಕೆ ದ್ಯಾವಪ್ಪ ಮತ್ತು ಸಂಗಪ್ಪ ಪಶ್ಚಾತ್ತಾಪಪಟ್ಟರು. ಸಕಾಲಕ್ಕೆ ತಮ್ಮ ಕುರಿಗಳಿಗೆಲ್ಲ ಔಷಧಿಯುಣಿಸಿ ಕಾಪಾಡಿದ್ದಕ್ಕೆ ಇಬ್ಬರೂ ವಿನಯನ ಕಾಲಿಗೆ ಎರಗಿದರು. ಕೂಡಲೇ ವಿನಯ ಅವರ ಭುಜಗಳನ್ನು ಹಿಡಿದು ಮೇಲಕ್ಕೆ ಎತ್ತಿದ. ಪಶ್ಚಾತ್ತಾಪ ತುಂಬಿದ ಅವರಿಬ್ಬರ ಕಣ್ಣಂಚಿನಲ್ಲಿ ಹನಿಗಳು ಉದುರಿದವು.
26
ದಿನಕ್ಕೊಂದು ಕಥೆ
ಸರಳ, ಸೌಜನ್ಯತೆಯಿಂದ ಎಲ್ಲರ ಹೃದಯ ಗೆಲ್ಲಬಹುದು
ಈ ಜಗತ್ತಿನಲ್ಲಿ ಸಾಧು-ಸಂತರನ್ನು ಗೌರವದಿಂದ ಕಂಡು, ಅವರಿಂದ ಪ್ರೇರಣೆ ಪಡೆಯಬೇಕು. ಅವರನ್ನು ಗೌರವಿಸುವುದರಿಂದ ನಮ್ಮ ಗೌರವವೂ ಹೆಚ್ಚುತ್ತದೆ ಎಂಬ ನಿರೀಕ್ಷೆಯಿಂದ ಕೆಲವು ದುರಭಿಮಾನಿಗಳು ಸಾಧು ಸಂತರ ಬಳಿಗೆ ತೆರಳುವ ಮತ್ತು ಗೌರವಿಸುವ ನಾಟಕವಾಡುತ್ತಾರೆ. ಅಂಥವರ ಕಣ್ತೆರೆಸುವ ಒಂದು ರೋಚಕ ಪ್ರಸಂಗ ಹೀಗಿದೆ.
ಹಿಂದಿ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಪಡೆದ ಸಂತ ಕವಿ ದಾದೂ ದಯಾಳರು ತಮ್ಮ ಸರಳತೆ ಮತ್ತು ಸಹನಶೀಲತೆಯಂತಹ ಸದ್ಗುಣಗಳಿಂದಾಗಿ ಸರ್ವತ್ರ ವಿಖ್ಯಾತರಾಗಿದ್ದರು. ಅವರ ಪ್ರಸಿದ್ಧಿಯಿಂದ ಆಕರ್ಷಿತನಾದ ಸೇನಾಧಿಕಾರಿಯೊಬ್ಬ ಕುದುರೆಯನ್ನೇರಿ ಅವರ ದರ್ಶನಕ್ಕೆಂದು ಹೊರಟ. ಸಂತ ದಾದೂ ದಯಾಳರು ನಗರದಾಚೆ ಒಂದು ಹಳ್ಳಿಯ ರಸ್ತೆ ಬದಿಯ ಆಲದ ಮರದ ಬುಡದಲ್ಲಿ ಹಳೆಯ ಹರಿದ ವಸ್ತ್ರ ತೊಟ್ಟು ಧ್ಯಾನಮಗ್ನರಾಗಿದ್ದರು.
ಅಹಂಕಾರಿಯಾದ ಸೇನಾಧಿಕಾರಿ ಅದೇ ದಾರಿಯಾಗಿ ಬಂದರೂ, ಸಾಧಾರಣ ಹರಿದ ವಸ್ತ್ರ ತೊಟ್ಟ ಸಂತರನ್ನು ಗುರುತಿಸಲು ಅಸಮರ್ಥನಾದ. ಅವನು ಕುದುರೆಯ ಬೆನ್ನ ಮೇಲೆ ಕುಳಿತಿದ್ದೇ ಜೋರಾದ ದನಿಯಲ್ಲಿ ''ಲೋ ಮುದುಕ, ನಿನಗೆ ಇಲ್ಲಿ ಸಂತ ದಾದೂ ದಯಾಳರು ಎಲ್ಲಿದ್ದಾರೆಂದು ಗೊತ್ತಿದೆಯೆ?'' ಎಂದು ಪ್ರಶ್ನಿಸಿದ. ಸಂತರು ಶಾಂತರಾಗಿ ಕುಳಿತೇ ಇದ್ದರು. ಉತ್ತರಿಸಲಿಲ್ಲ. ಆಗ ಸೇನಾಧಿಕಾರಿ ಮತ್ತೊಮ್ಮೆ ''ಲೋ ಮುದಿಯಾ, ನಿನಗೆ ಕಿವಿ ಕೇಳಿಸುವುದಿಲ್ಲವೇ? ಸಂತ ದಾದೂ ದಯಾಳರೆಲ್ಲಿರುತ್ತಾರೆ? ಆಗಿನಿಂದ ಕೇಳುತ್ತಾ ಇದ್ದೇವೆ'' ಎಂದು ಕೇಳಿದ. ಸಂತರು ಆಗಲೂ ಪ್ರತಿಕ್ರಿಯಿಸಲಿಲ್ಲ. ಮಂದ ಮುಗುಳುನಗೆಯೊಂದಿಗೆ ತಮ್ಮ ಕೆಲಸ ಮಾಡುತ್ತಿದ್ದರು.
ಈ ಮುದುಕ ಉದ್ದೇಶಪೂರ್ವಕವಾಗಿ ತನ್ನ ಪ್ರಶ್ನೆಗೆ ಉತ್ತರಿಸುತ್ತಿಲ್ಲ ಎಂದು ಸೇನಾಧಿಕಾರಿಗೆ ಅನ್ನಿಸಿ ಆತ ಗದರಿಸತೊಡಗಿದ. ಆಗಲೂ ಸಂತರು ಸುಮ್ಮನೆ ಇದ್ದುದರಿಂದ ಸೇನಾಧಿಕಾರಿ ಬೈಯುತ್ತಾ ಮುಂದೆ ಸಾಗಿದ. ಇಲ್ಲಿ ಇನ್ನೊಬ್ಬ ಸಿಕ್ಕಿದಾಗ ''ಇಲ್ಲಿ ಸಂತ ದಾದೂ ದಯಾಳರು ಎಲ್ಲಿರುತ್ತಾರೆಂದು ಗೊತ್ತೇ?,'' ಎಂದು ಕೇಳಿದ. ಆತ ''ಬನ್ನಿ, ಹಿಂದೆ ಹೋಗೋಣ,'' ಎಂದು ಸೇನಾಧಿಕಾರಿಯನ್ನು ಸಂತರ ಬಳಿಗೆ ತಲಪಿಸಿದ.
ಸ್ವಲ್ಪ ಹೊತ್ತು ಮೊದಲು ತಾನು ಬೈದಿದ್ದ ವ್ಯಕ್ತಿಯೇ ಸಂತ ದಾದೂ ದಯಾಳರು ಎಂದು ಅರಿತಾಗ ಆತ ಗಾಬರಿಯಾಗಿ ಬಿಟ್ಟ. ಪಶ್ಚಾತ್ತಾಪಗೊಂಡು ''ಮಹಾತ್ಮರೇ, ನನ್ನನ್ನು ಮನ್ನಿಸಿ. ತಮ್ಮನ್ನು ಗುರುಗಳನ್ನಾಗಿ ಸ್ವೀಕರಿಸಲು ಹೊರಟಿದ್ದೆ. ನೋಡಿ, ಶಿಷ್ಯನಾಗಲು ಹೊರಟ ನನ್ನಿಂದ ಎಂಥ ತಪ್ಪಾಯ್ತು? ನನ್ನನ್ನು ಕ್ಷ ಮಿಸಿಬಿಡಿ,'' ಎಂದು ವಿನಂತಿಸಿಕೊಂಡ.
ನಮ್ಮ ಉದ್ದೇಶ ಎಷ್ಟೇ ಹಿರಿದಾಗಿದ್ದರೂ, ಅದಕ್ಕೆ ಅನುಗುಣವಾದ ವ್ಯವಹಾರ, ಆಚರಣೆಗಳು ನಮ್ಮಲ್ಲಿ ಇಲ್ಲದಿದ್ದರೆ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವಂತೆ ಮೃದು ಹೃದಯಿಗಳು ಸ್ವೀಕರಿಸುವ ಸಂಪತ್ತು ಗಟ್ಟಿಯಾದ ಕಟು ಹೃದಯಕ್ಕೆ ಸ್ವೀಕಾರಕ್ಕೆ ಅರ್ಹವೇ? ಸರಳತೆ, ನಿರಹಂಕಾರ, ಸದಾಚಾರಗಳಂತಹ ಸದ್ಗುಣಗಳು ಉಳ್ಳವರಾಗಿ ನಾವು ಜೀವನದಲ್ಲಿ ಸಫಲರಾಗಲು ಸಾಧ್ಯ. ಸರಳತೆ ಸೌಜನ್ಯಗಳಿಂದ ನಾವು ಎಲ್ಲರ ಹೃದಯಗಳನ್ನು ಗೆಲ್ಲಬಲ್ಲೆವು.
28
ದಿನಕ್ಕೊಂದು ಕಥೆ
ಅಜ್ಞಾನ ಕತ್ತಲೆ ಕಳೆದರೆ ನಿಜಾನಂದ
ಅಲ್ಲೊಂದು ಅರಣ್ಯ ಪ್ರದೇಶ. ಹೊತ್ತು ಮುಳುಗಿದರೆ ಸಾಕು, ಸುತ್ತಮುತ್ತ ಕತ್ತಲೆ ಆವರಿಸುತ್ತದೆ. ಆಗ ಅಲ್ಲಿಯ ವಾತಾವರಣ ನಿಶ್ಯಬ್ದ. ಅಲ್ಲೊಂದು ಗೂಬೆ. ಅದು ರಾತ್ರಿಯ ಹೊತ್ತು ಕಣ್ಣು ಬಿಟ್ಟಿತು. ಸುತ್ತೆಲ್ಲ ನೋಡಿತು. ಪಶುಪಕ್ಷಿ, ದನಕರು, ಜನಮನ, ಕಾಡಿಗೆ ಕಾಡೇ ಘನವಾದ ನಿದ್ರೆಯಲ್ಲಿತ್ತು.
ಗೂಬೆ, “ಈ ಪ್ರಪಂಚದಲ್ಲಿ ಎಲ್ಲರೂ ಮಲಗಿ ವ್ಯರ್ಥ ಜೀವನ ಕಳೆಯುತ್ತಿದ್ದಾರೆ. ನಾನು ಮಾತ್ರ ಎಚ್ಚರವಾಗಿದ್ದೇನೆ. ಆದ್ದರಿಂದ ಈ ಜಗತ್ತಿನಲ್ಲಿ ನಾನೇ ಏಕೈಕ ಜಾಗ್ರತ ವ್ಯಕ್ತಿ”
ಎಂದು ಕೊಂಡಿತು. ಪಾಪ ಆ ಗೂಬೆ ಹಗಲಿನಲ್ಲಿ ಕಣ್ಣು ಬಿಟ್ಟಿಲ್ಲ. ಕೋಗಿಲೆಯ ಮಧುರ ಗಾಯನ, ಗಿಳಿಯ ಸವಿನುಡಿ, ನವಿಲಿನ ನರ್ತನ, ಲಕ್ಷಾಂತರ ಪಕ್ಷಿಗಳ ಕಲರವ ಕೇಳಿಲ್ಲ. ಕತ್ತಲೆ ಪರದೆ ಸರಿಸಿಲ್ಲ. ಬೆಳಕಿನ ಲೋಕದ ಭವ್ಯತೆಯ ಅನುಭವ ಕಂಡಿಲ್ಲ. ಅದು ಅಹಂಕರಿಸದೆ ಇನ್ನೇನು ಮಾಡೀತು?.
ಅಜ್ಞಾನ ಎಂಬ ಕತ್ತಲೆಯಿಂದ ಮನುಷ್ಯನಲ್ಲಿ ರಾಗಾದಿ ಬಂಧನಗಳ ಕಳೆಯು ಹುಲುಸಾಗಿ ಬೆಳೆದಿದೆ. ಬಂಧನಭೂಮಿ ಎನ್ನಿಸಿರುವ ಈ ಅಜ್ಞಾನದ ಕತ್ತಲೆಯನ್ನು ಕಳೆದರೆ ಸಾಕು, ನಮಗಾಗಿ ಬೆಳ್ಳಂ ಬೆಳಕಿನ ಲೋಕ ಕಾಣುವುದು. ಆಗ ನನಾರೆಂಬ ಅರಿವಿನ, ನಿಜಾನಂದದ ಅನುಭವ ಆಗುವುದು.
29
ದಿನಕ್ಕೊಂದು ಕಥೆ
ಅವರವರ ಜವಾಬ್ದಾರಿ ಅರಿತು ನಡೆದರೆ ಬಾಳು ಬಂಗಾರ.
ಅದೊಂದು ವಠಾರ ನೆರೆ ಮನೆಗಳಲ್ಲಿ, ಎರಡು ಸಂಸಾರವಿತ್ತು. ಒಂದು ಮನೆ ಸಂಸಾರದಲ್ಲಿ ಗಂಡ ಹೆಂಡತಿ ಸಣ್ಣ ಪುಟ್ಟ ವಿಷಯಗಳನ್ನು ಗುಡ್ಡದಷ್ಟು ಮಾಡಿ ಇಬ್ಬರಲ್ಲೂ ಮನಸ್ತಾಪ ಬೆಳೆದು ದಿನ ಬೆಳಗು ಜಗಳ ಆಡುತ್ತಿದ್ದರು. ಆದರೆ ನೆರೆಮನೆಯಲ್ಲಿರುವ ಗಂಡ ಹೆಂಡತಿ ಒಂದೇ ಒಂದು ದಿನವೂ ಜಗಳ ಆಡುವುದು ಕೇಳಲಿಲ್ಲ. ಹಾಗಾದರೆ ಅವರು ಜಗಳ ಆಡದೆ ಹೇಗಿದ್ದಾರೆ? ಎಂದು ಜಗಳ ಹೊಡೆಯುವ ಗಂಡ ಹೆಂಡತಿ ಅವರವರೇ ಯೋಚನೆ ಮಾಡುತ್ತಿದ್ದರು. ಒಂದು ದಿನ ಹೆಂಡತಿ ಹೇಳಿದಳು. ನೋಡಿ ನೆರೆ ಮನೆಯಲ್ಲಿ ಒಂದು ದಿನವೂ ಜಗಳ ಆಡುವುದಿಲ್ಲ, ಅಂದರೆ ಆಕೆಯ ಗಂಡ ಎಷ್ಟು ಒಳ್ಳೆಯವನಿರಬೇಕು. ನಿಮ್ಮ ಹಾಗೆ ಒರಟು ಮನುಷ್ಯನಲ್ಲ ಅವನು ಹೊಂದಿಕೊಂಡು ಹೋಗುತ್ತಾನೆ ಅದಕ್ಕಾಗಿ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ ಎಂದಳು. ಗಂಡ ಹೇಳಿದ, ಅವನ್ಯಾಕೆ ಸುಮ್ಮನಿರುತ್ತಾನೆ? ಅದು ಹೇಗೆ ಸಾಧ್ಯ? ಅವನ ಹೆಂಡತಿನೇ ತಾಳ್ಮೆಯಿಂದ ಇರಬಹುದು.
ಸಂಸ್ಕಾರವಂತರ ಮನೆಯವಳಿರಬೇಕು. ಎಲ್ಲಾ ಮನೆಯ ಹೆಣ್ಣು ಮಕ್ಕಳು ನಿನ್ನ ಹಾಗೆ ಜಗಳ, ಹೊಡೆಯುತ್ತಿದ್ದರೆ, ಯಾರು ಸಂಸಾರವನ್ನು ಮಾಡುತ್ತಿರಲಿಲ್ಲ ಎಂದನು. ಇದನ್ನು ಕೇಳಿ ಹೆಂಡತಿಗೆ ಸಿಟ್ಟು ಬಂದಿತು. ಸರಿ ಹಾಗಾದರೆ, ಅವಳು ಸಂಸ್ಕಾರವಂತಳೋ, ಅವನು ಒಳ್ಳೆಯವನು ನೋಡೇ ಬಿಡೋಣಂತೆ, ನೀನು ಪಕ್ಕದ ಮನೆಗೆ ಹೋಗಿ ಮರೆಯಲ್ಲಿ ನಿಂತು ಅವರು ಏನೇನು ಮಾತನಾಡಿ ಕೊಳ್ಳುತ್ತಾರೆ ನೋಡಿ ಬಾ ಎಂದಳು.
ಹೆಂಡತಿ ಹೇಳಿದ್ದನ್ನು, ಕಳ್ಳ ಬೆಕ್ಕಿನಂತೆ ಕಣ್ಣು ಮುಚ್ಚಿ ಕೇಳಿದ, ಏಕೆಂದರೆ ಅವನ ಹೆಂಡತಿಯ ಸ್ವಭಾವ ಹೇಗಿರಬಹುದು? ನೋಡಲು ಹೇಗಿರಬಹುದು ಎಂದು ನೋಡುವ ಕುತೂಹಲವೂ ಇತ್ತು. ಮರುದಿನ ಬೆಳಗ್ಗೆ ನೆರೆಮನೆಗೆ ಹೋಗಿ
ಅವರಿಬ್ಬರಿಗೂ ಗೊತ್ತಾಗದಂತೆ ಬಾಗಿಲ ಮರೆಯಲ್ಲಿ ನಿಂತನು. ಬೆಳಗಿನ ಕೆಲಸ ಎಲ್ಲರ ಮನೆಯಲ್ಲೂ ಹೆಚ್ಚು ಇರುತ್ತದೆ. ಹಾಗೆ ಇವರ ಮನೆಯಲ್ಲೂ ಗಂಡ ಹೆಂಡತಿ ಕೂಡಿ ಕೆಲಸ ಮಾಡುತ್ತಿದ್ದರು. ಹೆಂಡತಿ ಮನೆ ಗುಡಿಸಿ ನೆಲ ಒರೆಸಲು ಬಕೇಟಿನಲ್ಲಿ ನೀರು ಇಟ್ಟುಕೊಂಡು, ಅಡಿಗೆ ಮನೆಯಲ್ಲಿ ಅವಸರದ ಕೆಲಸ ಮಾಡಲು ಒಳಗೆ ಹೋದಳು. ಅದೇ ಸಮಯಕ್ಕೆ ಆಕೆಯ ಗಂಡ, ಬಚ್ಚಲು ಮನೆಯಿಂದ ಹೊರಗೆ ಬಂದವನು ತನ್ನ ಕೋಣೆಗೆ ಹೊರಟಿದ್ದನು.
ಓಡಾಡುವ ಹಾದಿಯಲ್ಲಿ ನೀರು ತುಂಬಿದ್ದ ಬಕೇಟ್ ಇಟ್ಟಿದ್ದನ್ನು ಅವನು ಗಮನಿಸಲಿಲ್ಲ. ಬಂದವನೇ ಬಕೆಟ್ ನ್ನು ಕಾಲಿನಿಂದ ಎಡವಿದನು, ಕಾಲಿಗೂ ನೋವಾಯಿತು, ಬಕೆಟಿನಲ್ಲಿದ್ದ ನೀರು ಚೆಲ್ಲಿ ಮನೆ ತುಂಬಾ ನೀರಿನ ರಾಡಿಯಾಯಿತು. ಇಷ್ಟಾಗಿಯೂ ಅವನು ಹೆಂಡತಿಗೆ ಒಂದು ಮಾತು ಬಯ್ಯಲಿಲ್ಲ.
ಅಡುಗೆ ಮನೆಯಲ್ಲಿದ್ದ ಹೆಂಡತಿ ಶಬ್ದ ಕೇಳಿ ಓಡಿ ಬಂದಳು. ಏನಾಯಿತು ಎಂದು ನೋಡಿದಳು ಗಂಡ ಎಡವಿದ್ದು ತಿಳಿಯಿತು. ಅಯ್ಯೋ ಕ್ಷಮಿಸಿ ನಾನು ಅಡಿಗೆ ಮನೆ ಅವಸರದ ಕೆಲಸದಲ್ಲಿ ತೊಡಗಿದ್ದೆ, ನೆಲ ಒರೆಸಲು ನೀರು ತುಂಬಿದ ಬಕೆಟ್ ನ್ನು, ಬೇಗ ಬರುತ್ತೇನೆ ಎಂದು ಇಲ್ಲಿ ಇಟ್ಟುಕೊಂಡಿದ್ದೆ ಹಾಗೆ ಮಾಡಬಾರದಿತ್ತು ಬಕೆಟ್ ನ್ನು ಬದಿಯಲ್ಲಿ ಇಡಬೇಕಿತ್ತು ಎಂದು ಹೇಳಿದಳು. ಅದಕ್ಕೆ ಆಕೆಯ ಗಂಡ, ಹಾಗೇನು ಇಲ್ಲ ನಿನ್ನ ತಪ್ಪು ಇದರೊಳಗೆ ಏನು ಇಲ್ಲ. ನಾನೇ ತಿಳಿದುಕೊಳ್ಳಬೇಕಿತ್ತು, ಬೆಳಗಿನ ಕೆಲಸ ಬಹಳಷ್ಟು ಇರುತ್ತದೆ ನೀನು
ಗಡಿಬಿಡಿಯಿಂದ ಎಲ್ಲವನ್ನು ಮಾಡಬೇಕು. ಬಕೇಟನ್ನು ಅಲ್ಲಿ ಇಡಬೇಕು ಇಲ್ಲಿ ಇಡಬೇಕು ಎಂಬುದನ್ನು ಯೋಚಿಸಲು ಸಮಯವಿರುವುದಿಲ್ಲ, ಒಂದೇ ಸಲಕ್ಕೆ ಅದು ಇದು ಎಂದು ಒಟ್ಟಿಗೆ ನಾಲ್ಕಾರು ಕೆಲಸಗಳನ್ನು ಮಾಡುತ್ತಿರುವೆ, ಹಾಗಾಗಿ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ನಾನೇ ನೋಡಿಕೊಂಡು ಬರಬೇಕಿತ್ತು ಎನ್ನುತ್ತಾ ಹೆಂಡತಿ ಬೇಡ ಎಂದು ಹೇಳುತ್ತಿದ್ದರೂ ಕೇಳದೆ, ತಾನು ಚೆಲ್ಲಿದ ನೀರನ್ನು ತೆಗೆದು ಒರಸಿ ಶುಚಿಗೊಳಿಸಿದನು. ಪತ್ನಿಯು ಆ ಸಮಯದಲ್ಲಿ ಶುಚಿ ರುಚಿಯಾಗಿ ಅಡುಗೆ ತಿಂಡಿಗಳನ್ನು ಮಾಡಿ ಅವನ ಆಫೀಸ್ ಡಬ್ಬಿಗಳಿಗೆ ತುಂಬಿಸಿಟ್ಟು, ಟೇಬಲ್ ಮೇಲೆ ತಿಂಡಿಗಳನ್ನು ಬಡಿಸಲು ತಯಾರಿ ಮಾಡಿದಳು. ಇಬ್ಬರು ಸಂತೋಷವಾಗಿ ನಗುನಗುತ್ತಾ ತಿಂಡಿ ತಿಂದರು.
ಬಾಗಿಲ ಮರೆಯಲ್ಲಿ ನಿಂತು ನೋಡುತ್ತಿದ್ದ ಗಂಡನಿಗೆ ಅರ್ಥವಾಯಿತು. ಮನೆಗೆ ಬಂದು ಹೆಂಡತಿಗೆ ಹೇಳಿದ, ಅವರು ಜಗಳ ಆಡದಿರುವ ರಹಸ್ಯ ಏನೆಂದರೆ, ಅವರವರ ಜವಾಬ್ದಾರಿಯನ್ನು ಅವರು ಅರಿತು ನಡೆಯುತ್ತಿದ್ದಾರೆ. ಹೀಗಾಗಿ ಗಂಡ ಹೆಂಡತಿಯರಲ್ಲಿ, ತಪ್ಪು ಒಪ್ಪಗಳ ಸಮಸ್ಯೆಯೇ ಬರುವುದಿಲ್ಲ.
ಒಬ್ಬರನ್ನೊಬ್ಬರು ಅರಿತು, ಅವರವರ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ನಿರ್ವಹಿಸಿ, ಇಬ್ಬರೂ, ಒಬ್ಬರಿಗೊಬ್ಬರ ಯೋಗ ಕ್ಷೇಮವನ್ನು ಗಮನಿಸುತ್ತಲೇ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಆದ್ದರಿಂದ ಅವರ ಸಂಸಾರದಲ್ಲಿ ಜಗಳ ಎಂದಿಗೂ ಬರುವುದಿಲ್ಲ. ಇದೇ ಸಂಸಾರದ ಸೂತ್ರ.
ನೀತಿ :-- ನಮ್ಮ ಸಂಸಾರ ಆನಂದ ಸಾಗರ, ವಿವೇಕ ಎಂಬ ದೈವವೇ ನಮಗಾಧಾರ, ಅರಿತು ನಡೆದರೆ ಬಾಳೇ ಬಂಗಾರ.