Sunday, October 2, 2022

ಮುಪ್ಪಿನ ಕವಿತೆ

 ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ !

*ಎಂಭತ್ತು ವರುಷದ ಮುದುಕಿ ತೊಂಭತ್ತರ ಗಂಡನಿಗೆ  ಹೇಳುತ್ತಾಳೆ 😗

   " ಈ ದಾಂಪತ್ಯಯಾನದಲಿ

     ಎನ್ನ ಕೈ ಪಿಡಿದವರು

     ಹಿಡಿದ ಕೈ ಬಿಡದವರು

     ನೀವಲ್ಲವೇ ನನ್ನ ದೊರೆ ನೀವಲ್ಲವೇ !

           ಹಬ್ಬಗಳು  ಬಂದಾಗ 

           ಹೊಸಪಂಚೆ ನಿಮಗಿರಲಿ, ಇರದಿರಲಿ

           ನಾ ಹಳೆ ಸೀರೆ ಉಟ್ಟಾಗ

           ಬಿಟ್ಟುಬಿಡು  ಎಂದವರು 

           ಸಾಕುಬಿಡು ಎಂದವರು 

           ಹೊಸಸೀರೆ ಕೊಟ್ಟವರು,

           ಮಲ್ಲಿಗೆಯನಿತ್ತವರು, 

           ನೀವಲ್ಲವೇ ನನ್ನ ದೊರೆ ನೀವಲ್ಲವೇ ? 

    ಮತ್ತೆ ನಾ  ತವರೂರು ಹೊರಟಾಗ 

    ಬಾಗಿಲಬಳಿ  ಬಂದವರು‌

    ಬೇಗ ಬಾ  ಎಂದವರು 

    ನೀವಲ್ಲವೇ ನನ್ನ ದೊರೆ  ನೀವಲ್ಲವೇ

          ಮತ್ತೆ  ಫೋನುಗಳ ಮಾಡುತ್ತ ,

          ಮನೆಯೊಳಗೆ ನೀನಿಲ್ಲ 

          ಬಳೆಗಳ ಸದ್ದಿಲ್ಲ , ಬಾಯಿಗೆ ರುಚಿಯಿಲ್ಲ 

          ಬೇಗನೆ ಬರುವೆಯಲ್ಲ  ಎಂದವರು 

          ನೀವಲ್ಲವೇ, ನನ್ನ ದೊರೆ ನೀವಲ್ಲವೇ ? "


*ಅದಕ್ಕೆ  ಗಂಡ ಹೇಳ್ತಾನೆ !*

       " ಬೇರಿಲ್ಲದೆ ಮರವೆಲ್ಲಿದೆ

         ಮರವಿಲ್ಲದೆ ಹೂವೆಲ್ಲಿದೆ

         ಹೂವಿಲ್ಲದೆ ಹಣ್ಣೆಲ್ಲಿದೆ

         ನೀನಿಲ್ಲದ ಮನೆ ಯಾರಿಗೆ ಬೇಕಾಗಿದೆ ?

ಎಂತಹ ಹೃದಯಸ್ಪರ್ಶಿ ಮಾತು !....

           "  ಮನೆಯೊಳಗೆ ಬಂದವಳೇ , 

              ಮನೆಯಾಕೆ ಆದವಳೇ, 

              ಮನದೊಳಗೆ ನಿಂದವಳೇ, 

             ನೀನಲ್ಲವೇ ನನ್ನರಸಿ ನೀನಲ್ಲವೇ ?

      ಬಡತನವೊ ,ಸಿರಿತನವೊ , 

      ಕಷ್ಟನಷ್ಟಗಳಲಿ ಎನ್ನ ಜೊತೆ ಬಂದವಳು !

      ಜೊತೆಯಾಗಿ ನಿಂದವಳು 

      ನೀನಲ್ಲವೇ ನನ್ನರಸಿ ನೀನಲ್ಲವೇ ! "


*ಮತ್ತೆ ಕೊನೆಗೆ  ಆ ಮುದುಕ ಒಂದು ಮಾತು ಹೇಳುತ್ತಾನೆ !*

         "  ವೃದ್ಧಾಪ್ಯ ಬಂದಾಗ 

            ಆರೋಗ್ಯ ಹೋದಾಗ ,

            ಆದಾಯ ಇರದಾಗ ,

            ಹಣವೆಲ್ಲ ಸವೆದಾಗ‌ , 

            ಬಂಧುಗಳು  ಬರದಾಗ ,

            ಮಕ್ಕಳು ಮರೆತಾಗ ,

            ನಾ ಒಳಗೊಳಗೆ ಅತ್ತಾಗ ,

            ಬಳಿ ಬಂದು ನಿಂದವಳು ,

            ಮರುಗದಿರಿ ಅಂದವಳು ,

            ಕಣ್ಣೀರ ತಡೆದವಳು , 

            ಯಾರಿರಲಿ, ಇರದಿರಲಿ ,

           ನಾನಿಲ್ಲವೇ ನಿಮ್ಮ ಜೊತೆ , ಎಂದವಳು ,

           ನೀನಲ್ಲವೇ ನನ್ನರಸಿ ನೀನಲ್ಲವೇ !

       

    ಇದು  ನಮ್ಮ ಭಾರತೀಯ ಸಂಸ್ಕೃತಿ !


ಇದು ನನಗೆ ಬೇರೊಬ್ಬರಿಂದ ಬಂದ ಸಂದೇಶವೇ ಆದರೂ, ಇದನ್ನು ನನಗೆ ಕಳುಹಿಸಿದವರಿಗೆ ನಮನ ಮಾಡಿ, ನಿಮಗೆ ಕಳಿಸಿದ್ದೇನೆ.

ನೀವು ಸಹ ನಿಮ್ಮ ಬಂಧು ಮಿತ್ರರುಗಳಿಗೆ ಕಳಿಸಬೇಕೆಂಬ ಮನಸ್ಸಾದರೆ ಕಳುಹಿಸಿ....

Saturday, October 1, 2022

ವಚನ ಭಾರತ_ವಚನ ಕುಮಾರಸ್ವಾಮಿ

 

ಮಾನವ ಹೃದಯ ಕ್ಷೇತ್ರದ ದೇವಕೃಷಿಕರು ವಚನಕಾರರು ಹಿರಿಯ ಸಾಹಿತಿ ಸಿ.ಪಿ.ಕೆ

ಮೈಸೂರು : ಮಾನವ ಹೃದಯ ಕ್ಷೇತ್ರದ ದೇವಕೃಷಿಕರು ವಚನಕಾರರು ಎಂದು ಹಿರಿಯ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್ ಹೇಳಿದರು. ಮೈಸೂರಿನ ಬೋಗಾದಿಯ ಶಾರದಾನಗರ ರೈಲ್ವೆ ಬಡಾವಣೆಯಲ್ಲಿರುವ ಶರಣು ಕುಟೀರದಲ್ಲಿ ಹಮ್ಮಿಕೊಂಡಿದ್ದ ವಚನ ಕುಮಾರಸ್ವಾಮಿ ಸಂಪಾದನೆಯ ವಚನ ಭಾರತ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು ವಚನ ಭಾರತ ಕೃತಿ ಪುಟ್ಟದಾದರೂ ಗಟ್ಟಿಯಾದ ಕೃತಿ. ಬೆಟ್ಟದಷ್ಟು ಹಿರಿಮೆ ಗರಿಮೆ ಹೊಂದಿದೆ. ಬೆಳಗ್ಗೆ ಹಾಸಿಗೆಯಿಂದ ಎದ್ದಾಗ, ಸ್ತುತಿ ನಿಂದನೆ ಮಾಡಿದಾಗ, ಸತ್ಕಾರ್ಯಕ್ಕೆ ತೊಡಗುವಾಗ, ಅನಾರೋಗ್ಯ ಉಂಟಾದಾಗ, ಕಾಯಕದಲ್ಲಿ ನಿರತರಾಗಿದ್ದಾಗ ಯಾವ ವಚನ ಪಠಿಸಬೇಕು ಎಂಬುದನ್ನು ತಿಳಿಸಿದೆ. ರಾಜಕೀಯ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳು ತೆಗೆದುಕೊಳ್ಳಬೇಕಾದ ಪ್ರಮಾಣವಚನಕ್ಕೆ ಸತ್ಯಕ್ಕನವರ ವಚನವನ್ನು ಅಳವಡಿಸುವುದರ ಮೂಲಕ ಭ್ರಷ್ಟಾಚಾರ ರಹಿತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಈ ಕೃತಿ ಯಶಸ್ವಿಯಾಗಿದೆ. ವಚನಗಳು ಕಾವ್ಯಕ್ಕೆ ಕಾವ್ಯವೂ ಕಾರ್ಯಕ್ಕೆ ಕಾರ್ಯವೂ ಆಗಿದ್ದು ಅವುಗಳನ್ನು ಅಧ್ಯಯನ ಮಾಡುವುದರಿಂದ ಮೌಲ್ಯಯುತವಾದ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು. ಶರಣು ವಿಶ್ವವಚನ ಫೌಂಡೇಷನ್ ಕಾರ್ಯ ಚಟುವಟಿಕೆಗಳನ್ನು ಪ್ರತಿನಿತ್ಯ ಪತ್ರಿಕೆಗಳಲ್ಲಿ ಗಮನಿಸುತ್ತಿರುತ್ತೇನೆ. ಒಂದು ವಿಶ್ವವಿದ್ಯಾನಿಲಯ ಮಾಡುವಷ್ಟು ಕೆಲಸವನ್ನು  ಮಾಡುತ್ತಿರುವುದು ಸ್ತುತ್ಯಾರ್ಹವಾದ ಕೆಲಸ ಎಂದರು.


ಬೆAಗಳೂರು ಕರ್ನಾಟಕ ವಿದ್ಯುತ್ ಮಂಡಳಿಯ ವಿಶ್ರಾಂತ ಮುಖ್ಯ ಲೆಕ್ಕನಿಯಂತ್ರಣಾಧಿಕಾರಿ ಎಂ. ಸುಬ್ಬಣ್ಣ ಮಾತನಾಡಿ ಶರಣರ ೨೫೦೦ ವಚನಗಳನ್ನು ೨೩ ಭಾಷೆಗಳಲ್ಲಿ ಬಸವ ಸಮಿತಿ ಪ್ರಕಟಿಸಿರುವದರಿಂದ ಅನ್ಯ ಭಾಷೆಯವರು ಕೂಡಾ ವಚನಗಳಲ್ಲಿರುವ ಮೌಲ್ಯಗಳನ್ನು ಅರಿತು ವಚನಗಳನ್ನು ವಿವಿಧ ವೇದಿಕೆಗಳಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ ಎಂದರೆ ಎಲ್ಲಾ ಕನ್ನಡಿಗರು ಹೆಮ್ಮೆ ಪಡುವ ವಿಷಯ. ಇಂದಿಗೂ ಅನೇಕ ಮೌಡ್ಯಾಚರಣೆಗಳು ಜೀವಂತವಾಗಿದ್ದು ಶರಣರ ವಚನಗಳನ್ನು ಅನುಸರಿಸುವುದರಿಂದ ತಿಲಾಂಜಲಿ ಹೇಳಬಹುದು ಎಂದರು.


ಕಾರ್ಯಕ್ರಮದಲ್ಲಿ ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಅಧಿಕಾರಿ ಮಂಗಳ ಮುದ್ದುಮಾದಪ್ಪ, ವಿಶ್ರಾಂತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮರಿಸ್ವಾಮಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ, ಗೌರವಾಧ್ಯಕ್ಷ ಚನ್ನಬಸಪ್ಪ, ರಾಷ್ಟಿçÃಯ ಮಾನವ ಹಕ್ಕುಗಳು ಮತ್ತು ಗ್ರಾಹಕರ ಸಂರಕ್ಷಣೆ ಜಂಟಿ ಕಾರ್ಯದರ್ಶಿ ಎಸ್.ಎನ್. ಪ್ರಸನ್ನಕುಮಾರ್, ಕಾವೇರಿ ವಾಜಂತ್ರಿ, ಮಂಜುಳ ಚನ್ನಬಸಪ್ಪ, ರಶ್ಮಿ ಉಮೇಶ್, ಮಂಗಳಮ್ಮ, ಮಹದೇವಸ್ವಾಮಿ, ಶ್ರೇಯಸ್, ಜಯದೇವ್, ಪರಶಿವಮೂರ್ತಿ, ಚಂಚಲ ಜಯದೇವ್, ಶ್ರಾವ್ಯ, ಗಿರಿಜೇಶ್, ವಚನ, ವರ್ಷ, ನಿಜಗುಣ, ಅಮೃತ, ವರ್ಷಿತ, ಸುನೀತ, ತನು, ಪ್ರಜ್ವಲ್, ಲೋಹಿತ್, ಚಿನ್ಮಯ್ ಉಪಸ್ಥಿತರಿದ್ದರು.