Sunday, October 2, 2022

ಮುಪ್ಪಿನ ಕವಿತೆ

 ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ !

*ಎಂಭತ್ತು ವರುಷದ ಮುದುಕಿ ತೊಂಭತ್ತರ ಗಂಡನಿಗೆ  ಹೇಳುತ್ತಾಳೆ 😗

   " ಈ ದಾಂಪತ್ಯಯಾನದಲಿ

     ಎನ್ನ ಕೈ ಪಿಡಿದವರು

     ಹಿಡಿದ ಕೈ ಬಿಡದವರು

     ನೀವಲ್ಲವೇ ನನ್ನ ದೊರೆ ನೀವಲ್ಲವೇ !

           ಹಬ್ಬಗಳು  ಬಂದಾಗ 

           ಹೊಸಪಂಚೆ ನಿಮಗಿರಲಿ, ಇರದಿರಲಿ

           ನಾ ಹಳೆ ಸೀರೆ ಉಟ್ಟಾಗ

           ಬಿಟ್ಟುಬಿಡು  ಎಂದವರು 

           ಸಾಕುಬಿಡು ಎಂದವರು 

           ಹೊಸಸೀರೆ ಕೊಟ್ಟವರು,

           ಮಲ್ಲಿಗೆಯನಿತ್ತವರು, 

           ನೀವಲ್ಲವೇ ನನ್ನ ದೊರೆ ನೀವಲ್ಲವೇ ? 

    ಮತ್ತೆ ನಾ  ತವರೂರು ಹೊರಟಾಗ 

    ಬಾಗಿಲಬಳಿ  ಬಂದವರು‌

    ಬೇಗ ಬಾ  ಎಂದವರು 

    ನೀವಲ್ಲವೇ ನನ್ನ ದೊರೆ  ನೀವಲ್ಲವೇ

          ಮತ್ತೆ  ಫೋನುಗಳ ಮಾಡುತ್ತ ,

          ಮನೆಯೊಳಗೆ ನೀನಿಲ್ಲ 

          ಬಳೆಗಳ ಸದ್ದಿಲ್ಲ , ಬಾಯಿಗೆ ರುಚಿಯಿಲ್ಲ 

          ಬೇಗನೆ ಬರುವೆಯಲ್ಲ  ಎಂದವರು 

          ನೀವಲ್ಲವೇ, ನನ್ನ ದೊರೆ ನೀವಲ್ಲವೇ ? "


*ಅದಕ್ಕೆ  ಗಂಡ ಹೇಳ್ತಾನೆ !*

       " ಬೇರಿಲ್ಲದೆ ಮರವೆಲ್ಲಿದೆ

         ಮರವಿಲ್ಲದೆ ಹೂವೆಲ್ಲಿದೆ

         ಹೂವಿಲ್ಲದೆ ಹಣ್ಣೆಲ್ಲಿದೆ

         ನೀನಿಲ್ಲದ ಮನೆ ಯಾರಿಗೆ ಬೇಕಾಗಿದೆ ?

ಎಂತಹ ಹೃದಯಸ್ಪರ್ಶಿ ಮಾತು !....

           "  ಮನೆಯೊಳಗೆ ಬಂದವಳೇ , 

              ಮನೆಯಾಕೆ ಆದವಳೇ, 

              ಮನದೊಳಗೆ ನಿಂದವಳೇ, 

             ನೀನಲ್ಲವೇ ನನ್ನರಸಿ ನೀನಲ್ಲವೇ ?

      ಬಡತನವೊ ,ಸಿರಿತನವೊ , 

      ಕಷ್ಟನಷ್ಟಗಳಲಿ ಎನ್ನ ಜೊತೆ ಬಂದವಳು !

      ಜೊತೆಯಾಗಿ ನಿಂದವಳು 

      ನೀನಲ್ಲವೇ ನನ್ನರಸಿ ನೀನಲ್ಲವೇ ! "


*ಮತ್ತೆ ಕೊನೆಗೆ  ಆ ಮುದುಕ ಒಂದು ಮಾತು ಹೇಳುತ್ತಾನೆ !*

         "  ವೃದ್ಧಾಪ್ಯ ಬಂದಾಗ 

            ಆರೋಗ್ಯ ಹೋದಾಗ ,

            ಆದಾಯ ಇರದಾಗ ,

            ಹಣವೆಲ್ಲ ಸವೆದಾಗ‌ , 

            ಬಂಧುಗಳು  ಬರದಾಗ ,

            ಮಕ್ಕಳು ಮರೆತಾಗ ,

            ನಾ ಒಳಗೊಳಗೆ ಅತ್ತಾಗ ,

            ಬಳಿ ಬಂದು ನಿಂದವಳು ,

            ಮರುಗದಿರಿ ಅಂದವಳು ,

            ಕಣ್ಣೀರ ತಡೆದವಳು , 

            ಯಾರಿರಲಿ, ಇರದಿರಲಿ ,

           ನಾನಿಲ್ಲವೇ ನಿಮ್ಮ ಜೊತೆ , ಎಂದವಳು ,

           ನೀನಲ್ಲವೇ ನನ್ನರಸಿ ನೀನಲ್ಲವೇ !

       

    ಇದು  ನಮ್ಮ ಭಾರತೀಯ ಸಂಸ್ಕೃತಿ !


ಇದು ನನಗೆ ಬೇರೊಬ್ಬರಿಂದ ಬಂದ ಸಂದೇಶವೇ ಆದರೂ, ಇದನ್ನು ನನಗೆ ಕಳುಹಿಸಿದವರಿಗೆ ನಮನ ಮಾಡಿ, ನಿಮಗೆ ಕಳಿಸಿದ್ದೇನೆ.

ನೀವು ಸಹ ನಿಮ್ಮ ಬಂಧು ಮಿತ್ರರುಗಳಿಗೆ ಕಳಿಸಬೇಕೆಂಬ ಮನಸ್ಸಾದರೆ ಕಳುಹಿಸಿ....

No comments:

Post a Comment