Thursday, April 19, 2018

ವಚನ ಗ್ರಾಮ




ಚಿತ್ರ 1 ಶರಣು ವಿಶ್ವವಚನ ಫೌಂಡೇಶನ್ ಹೆಗ್ಗಡದೇವನಕೋಟೆ ತಾಲ್ಲೂಕು ಪುರ ಗ್ರಾಮದಲ್ಲಿ ಆಯೋಜಿಸಿದ್ದ ವಚನಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ ಮನೆಮನೆಗೆ ವಚನಪುಸ್ತಕವನ್ನು ನೀಡುವುದರ ಮುಖಾಂತರ ಪುರ ಮಠದ ಶ್ರೀ ಚಂದ್ರಶೇಖರಸ್ವಾಮೀಜಿ ಉದ್ಘಾಟಿಸಿದರು.ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನಕುಮಾರಸ್ವಾಮಿ, ಬಸವಬಳಗ ಒಕ್ಕೂಟದ ಅಧ್ಯಕ್ಷ ಟಿ.ಎಸ್.ಲೋಕೇಶ್, ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಶ್ರೀಕಂಠಮೂರ್ತಿ ಇತರರು ಇದ್ದರು.

ವಚನಹಳ್ಳಿ ಹಳ್ಳಿಗಾಡಿನ ಜನರನ್ನು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಪೂರಕವಾಗಿದೆ ಎಂದು ಬಸವಬಳಗ ಒಕ್ಕೂಟದ ಅಧ್ಯಕ್ಷ ಟಿ.ಎಸ್.ಲೋಕೇಶ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ಹೆಗ್ಗಡದೇವನಕೋಟೆ ತಾಲ್ಲೂಕು ಪುರ ಗ್ರಾಮದಲ್ಲಿ ಆಯೋಜಿಸಿದ್ದ ವಚನಗ್ರಾಮ  ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಚನಸಂಸ್ಕಾರ ಎಂಬುದು ವಚನಪುಸ್ತಕಗಳನ್ನು ಅಧ್ಯಯನ ಮಾಡಿದರೆ ಸಿಗುತ್ತದೆ.ಅಂತಹ ಸಂಸ್ಕಾರ ಪಡೆದಂತಹವರು ನಿರ್ಮಲ ಮನಸ್ಸನ್ನು ಹೊಂದುವುದರ ಜೊತೆಗೆ ಎಲ್ಲರನ್ನೂ ಸಮಾನತೆ ಮತ್ತು ಸಹೋದರತೆ ಭಾವನೆಯಿಂದ ಕಾಣುತ್ತಾರೆ. ಆಗ ಇಡೀ ಹಳ್ಳಿಯೇ ಸುಸಂಸ್ಕøತ ಹಳ್ಳಿಯಾಗಿ ಮಾರ್ಪಾಡಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.ಸಾಹಿತಿ ನಗರ್ಲೆ ಶಿವಕುಮಾರ್ ಮಾತನಾಡಿ ಮಕ್ಕಳಲ್ಲಿ ವಚನಗಳ ಬಗ್ಗೆ ಆಸಕ್ತಿ ಚಿಕ್ಕಂದಿನಲ್ಲೇ ಚಿಗುರೊಡೆಯಲು ಈ ಕಾರ್ಯಕ್ರಮ ಸಹಕಾರಿಯಾಗಿದೆ.12 ನೇ ಶತಮಾನದ ಶರಣರ ಕಾಯಕತತ್ವ ಮತ್ತು ಏಕದೇವೋಪಾಸನೆಯನ್ನು ಮಕ್ಕಳು ಮೈಗೂಡಿಸಿಕೊಂಡಿದ್ದೇ ಆದರೆ ಏಕಾಗ್ರತೆ ಜೊತೆಗೆ ಆರ್ಥಿಕವಾಗಿ ಸಬಲರಾಗಬಹುದು. ಇಂತಹ ತತ್ವದಿಂದ ಪ್ರೇರಣೆಗೊಂಡು ಕಾಶ್ಮೀರದ ಅರಸ ಮೋಳಿಗೆ ಮಾರಯ್ಯ ತನ್ನ ಅರಸುತನಕ್ಕೆ ತಿಲಾಂಜಲಿ ಹೇಳಿ ಕಟ್ಟಿಗೆ ಕಡಿಯುವ ಕಾಯಕ ಕೈಗೊಂಡರು.ವಚನಗಳನ್ನು ಆಧ್ಯಯನ ಮಾಡಿದ್ದೇ ಆದರೆ ಎಲ್ಲರೂ ಕೂಡ ಪರಿವರ್ತನೆ ಆಗಿ ನಿಷ್ಕಲ್ಮಷ ಮನಸ್ಸು ಹೊಂದಬಹುದು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ವಚನಕುಮಾರಸ್ವಾಮಿ ಶರಣು ವಿಶ್ವವಚನ ಫೌಂಡೇಶನ್ ಪ್ರತಿಹಳ್ಳಿಯಲ್ಲಿ ಉನ್ನತವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಸತ್ಕಾರ ಮಾಡುತ್ತಿದೆ.ಇದರ ಉದ್ದೇಶ ಹಳ್ಳಿಯಲ್ಲಿನ ಎಲ್ಲಾ ಮಕ್ಕಳು ಉನ್ನತ ವ್ಯಾಸಂಗ ಮಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಾಯಕವಾಗಿದೆ. ವಚನಪ್ರಪಂಚ ಮಾಡುವ ಮೊದಲು ವಚನಹಳ್ಳಿಗಳಾಗಿ ಪರಿವರ್ತನೆ ಆಗಬೇಕಿದೆ.ಅದಕ್ಕೆ ಆ ಗ್ರಾಮದ ಪ್ರತಿ ಮನೆಮನೆಗೆ ಭೇಟಿ ನೀಡಿ ವಚನಪುಸ್ತಕಗಳನ್ನು ಕೊಟ್ಟು ವಚನಾಸಕ್ತಿ ಮೂಡಿಸಲು ವಚನಹಳ್ಳಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.ಪುರದ ಬಸವೇಶ್ವರ ಪಟ್ಟದ ಮಠದ ಚಂದ್ರಶೇಖರಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ನಂತರ ಉನ್ನತ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಾದ ಅರ್ಚನ,ವಿಜಯಕುಮಾರಿ,ಅನಿತ,ಶಾಲಿನಿ,ಜಯಕುಮಾರಿ,ಸುಷ್ಮ ಮತ್ತು ಪವಿತ್ರರವರಿಗೆ ವಚನರತ್ನ ಪ್ರಮಾಣಪತ್ರನೀಡಿ ಸನ್ಮಾನಿಸಲಾಯಿತು.ತದನಂತರ ಇಡೀ ಹಳ್ಳಿಗೆ “ವಚನಹಳ್ಳಿ” ಎಂಬ ಪ್ರಮಾಣಪತ್ರ ನೀಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಶ್ರೀಕಂಠಮೂರ್ತಿ, ನಿರ್ದೇಶಕಿ ರೂಪಕುಮಾರಸ್ವಾಮಿ,ಸುಜಾತ ದುರ್ಗೇಶ್,ಪೂರ್ಣಿಮಾ,ದಿವ್ಯಚೇತನ್,ಗೀತಾಶ್ರೀಕಂಠಮೂರ್ತಿ,ಸುನಿಲ್ ಕುಮಾರ್,ಅನಿಲ್ ಗೌಡರ್,ಶರಣಪ್ಪ,ಶ್ರೀಕಂಠಸ್ವಾಮಿ,ಶಿವರುದ್ರಪ್ಪ,ಕಸ್ತೂರಿ ಮಹೇಶ್,ನಾಗೇಶ್,ಅಂಜನ್ ಉಪಸ್ಥಿತರಿದ್ದರು.
=====================================================================
ಚಿತ್ರ:- ಶರಣು ವಿಶ್ವವಚನ ಫೌಂಡೇಶನ್ ಕೆ ಆರ್ ನಗರ ತಾಲ್ಲೂಕು ಲಾಳನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ವಚನಹಳ್ಳಿ ಕಾರ್ಯಕ್ರಮವನ್ನು  ಲಾಳನಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿತಾಯಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಅನಿಲ್ ವಾಜಂತ್ರಿ, ಕಾರ್ಯದರ್ಶಿ ರತ್ನಮ್ಮ ಜಯಣ್ಣ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾದ್ಯಕ್ಷ ಪಂಪಾಪತಿ, ಉಪಾದ್ಯಕ್ಷೆ ಪ್ರೇಮಪ್ರಭುಸ್ವಾಮಿ, ಸಂಚಾಲಕಿ ಅಂಬಿಕಾ ಪ್ರಭುಶಂಕರ್, ತಾಲ್ಲೂಕು ಯುವವೀರಶೈವ ಘಟಕದ ಅಧ್ಯಕ್ಷ ರವಿಕುಮಾರ್, ಕಾವೇರಿ, ಜಯಣ್ಣ ಉಪಸ್ಥಿತರಿದ್ದರು.

ಕೆ.ಆರ್.ನಗರ:- ಪ್ರತಿಯೊಬ್ಬರ ಮನ ಮತ್ತು ಮನೆ ಬೆಳಗಲು ವಚನ ಸಾಹಿತ್ಯ ತುಂಬಾ ಅಗತ್ಯ ಎಂದು ಲಾಳನಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿತಾಯಿ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ಕೆ ಆರ್ ನಗರ ತಾಲ್ಲೂಕು ಲಾಳನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ವಚನಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮದ ಎಲ್ಲಾ ಮನೆಗಳಿಗೆ ವಚನ ಪುಸ್ತಕ ನೀಡಿ ಅವರನ್ನು ಸಂಸ್ಕಾರಯುತ ಪ್ರಜೆಗಳನ್ನಾಗಿ ರೂಪಿಸಲು ಶರಣು ವಿಶ್ವವಚನ ಫೌಂಡೇಷನ್ ಕೈಗೊಂಡಿರುವ ಕಾರ್ಯ  ವಿಶೇóಷವಾದುದು ಮತ್ತು ಸ್ತುತ್ಯಾರ್ಹವಾದುದು. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಒಂದಿಲ್ಲ ಒಂದು ವಿಚಾರವನ್ನು ಮುಂದಿಟ್ಟುಕೊಂಡು ಕಲಹದಲ್ಲೇ ಮುಳುಗಿರುವುದನ್ನು ಕಾಣಬುದು. ಇಂತಹವರು ವಚನ ಸಾಹಿತ್ಯವನ್ನು ಓದುವ ಹವ್ಯಾಸವನ್ನು ರೂಢಿಸಿಕೊಂಡು ಬದುಕಿನಲ್ಲಿ ಎಲ್ಲರೂ ನಮ್ಮವರು ಎಂಬ ಭಾವನೆಯೊಂದಿಗೆ ಒಬ್ಬರಿಗೊಬ್ಬರೂ ಸಹಕಾರ ನೀಡುವ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ತದನಂತರ ವಚನ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನಕುಮಾರಸ್ವಾಮಿ ನಾವು ಹುಟ್ಟಿದಾಗಿನಿಂದ ಜೀವನದ ಕೊನೆಯ ಭಾಗದವರೆಗೂ ಹೇಗೆ ಬದುಕಬೇಕು ಎಂಬುದನ್ನು ಶರಣರು ವಚನಗಳ ಮೂಲಕ ತಿಳಿಸಿದ್ದಾರೆ. ಅಂತಹ ವಚನಗಳನ್ನು ಓದಿ ಅದರಂತೆ ನಡೆದು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಲಿ ಎಂದು ನಮ್ಮ ಸಂಸ್ಥೆವತಿಯಿಂದ ಪ್ರತಿ ಮನೆಗೆ ವಚನ ಪುಸ್ತಕಗಳನ್ನು ನೀಡಿದ್ದೇವೆ. ತಾವು ಒಂದು ವಚನವನ್ನಾದರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಕರ್ನಾಟಕದ ಪ್ರತಿ ಮನೆಯೂ ಕೂಡಾ ವಚನ ಪುಸ್ತಕ ಹೊಂದಬೇಕು ಎಂಬ ಸದಾಶಯ ನಮ್ಮದಾಗಿದ್ದು ಮುಂದಿನ ದಿನಗಳಲ್ಲಿ ವಚನಹಳ್ಳಿ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದರು. ತದನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ನಮ್ಮ ಶರಣರ ವಚನಗಳು 23 ಭಾಷೆಗೆ ತರ್ಜುಮೆಯಾದ ನಂತರ ಇಡೀ ವಿಶ್ವವೇ ವಚನಗಳ ಕಡೆ ಮುಖ ಮಾಡಿದೆ. ಇದರಿಂದ ವಚನ ಸಾಹಿತ್ಯ ಶ್ರೀಮಂತಗೊಳಿಸಿದ ನಾಡಾದ ಕರ್ನಾಟಕಕ್ಕೆ ಎಲ್ಲಾ ರೀತಿಯ ಹಿರಿಮೆ ಗರಿಮೆ ಸಲ್ಲುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸುಮಿತ್ರ ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳಲ್ಲಿ ವಚನದ ಅರಿವನ್ನು ಮೂಡಿಸಿದಾಗ ಸುಂದರ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಅರಿವನ್ನು ಉಂಟು ಮಾಡಲು ಕೈಗೊಂಡಿರುವಂತಹ ವಚನಹಳ್ಳಿ ಕಾರ್ಯಕ್ರಮ ನನ್ನ ಹೃದಯವನ್ನು ಗೆದ್ದಿದೆ ಎಂದು ಅಪಾರ ಸಂತೋಷóವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಗುರುಮಲ್ಲೇಶ್ವರ ಮಠದಲ್ಲಿ 145ನೇ ಅಮವಾಸ್ಯೆ ಮತ್ತು ಲಿಂಗೈಕ್ಯ ಎಲ್.ಎಸ್.ಪುಟ್ಟಣಯ್ಯನವರ 13 ನೇ ಪುಣ್ಯಸ್ಮರಣೆ ನಿಮಿತ್ತ ಕಾರ್ಯಕ್ರಮವನ್ನು ಆಯೋಜಿಸಿ ಪುರಸಭೆ ಅಧ್ಯಕ್ಷೆ ಹರ್ಷಲತಾ, ಪ್ರಾಂಶುಪಾಲ ವೀರಪ್ಪಾಜಿ, ಪಶುವೈದ್ಯಾಧಿಕಾರಿ ಡಾ. ಹರೀಶ್, ರಾಜ್ಯ ವೀರಶೈವ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ರಾಜಶೇಖರ್, ಗ್ರಾ.ಪಂ.ಸದಸ್ಯೆ ಹೇಮಲತಾ ಮಂಜುನಾಥ್, ಹೇಮಗಿರೀಶ್, ಸುಮಿತ್ರರವರನ್ನು ಸನ್ಮಾನಿಸಲಾಯಿತು.
ತದನಂತರ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಲಾಳನಹಳ್ಳಿ ಗ್ರಾಮವನ್ನು ವಚನಹಳ್ಳಿ ಎಂದು ಘೋಷಿಸಿ ಪ್ರಶಂಸನಾಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯೆ ಮಲ್ಲಿಕಾ ರವಿಕುಮಾರ್, ಎಸ್.ವಿ.ಪ್ರಕಾಶ್, ಬಿ.ನರಗುಂದ್, ಶ್ರೀಕಾಂತ್, ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಅನಿಲ್ ವಾಜಂತ್ರಿ, ಕಾರ್ಯದರ್ಶಿ ರತ್ನಮ್ಮ ಜಯಣ್ಣ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾದ್ಯಕ್ಷ ಪಂಪಾಪತಿ, ಉಪಾದ್ಯಕ್ಷೆ ಪ್ರೇಮಪ್ರಭುಸ್ವಾಮಿ, ಸಂಚಾಲಕಿ ಅಂಬಿಕಾ ಪ್ರಭುಶಂಕರ್, ತಾಲ್ಲೂಕು ಯುವವೀರಶೈವ ಘಟಕದ ಅಧ್ಯಕ್ಷ ರವಿಕುಮಾರ್, ಧರ್ಮಮಂಜುನಾಥ್, ವಿಶಾಲಾಕ್ಷಮ್ಮ, ಪುಟ್ಟರಾಜು, ಜಗದೀಶ್, ಲೋಕೇಶ್, ದಿನೇಶ್,ಕಾವೇರಿ, ಜಯಣ್ಣ, ಶಿವಕುಮಾರ್, ಮಹದೇವಪ್ಪ, ಮಂಜುನಾಥ್, ಸೋಮಪ್ಪ, ಗಿರೀಶ್, ಮಹೇಶ್, ಶಿವಕುಮಾರ್ ಉಪಸ್ಥಿತರಿದ್ದರು.


======================================================================


ಚಿತ್ರ ೧ :- ಶರಣು ವಿಶ್ವವಚನ ಫೌಂಡೇಶನ್ ಮತ್ತು ದೇವಲಾಪುರ ಶ್ರಿÃ ಗುರುಮಲ್ಲೆÃಶ್ವರ ದಾಸೋಹ ಮಠ ಸಹಯೋಗದೊಂದಿಗೆ ದೇವಲಾಪುರ ಶ್ರಿÃ ಗುರುಮಲ್ಲೆÃಶ್ವರ ದಾಸೋಹ ಮಠದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಮತ್ತು ವಚನಗ್ರಾಮ ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ವಚನಗ್ರಾಮ ಪ್ರಶಂಸಾಪತ್ರವನ್ನು ದೇವನೂರು ಗುರುಮಲ್ಲೆÃಶ್ವರ ದಾಸೋಹ ಮಠಾಧ್ಯಕ್ಷರಾದ ಮಹಾಂತಸ್ವಾಮಿಗಳು ಶ್ರಿÃಮಠದ ಜಡೇಸ್ವಾಮಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರಿÃಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಕಾರ್ಯದರ್ಶಿ ರತ್ನಮ್ಮ ಜಯಣ್ಣ, ಉಪಾಧ್ಯಕ್ಷ ಪುಟ್ಟಪ್ಪ, ಮಾಧ್ಯಮ ಸಂಚಾಲಕ ನಾಗೇಂದ್ರ ಉಪಸ್ಥಿತರಿದ್ದರು.
ಚಿತ್ರ ೨ :- ಶರಣು ವಿಶ್ವವಚನ ಫೌಂಡೇಶನ್ ದೇವಲಾಪುರದ ಶ್ರಿÃ ಗುರುಮಲ್ಲೆÃಶ್ವರ ದಾಸೋಹ ಮಠದಲ್ಲಿ ಆಯೋಜಿಸಿದ್ದ  ವಚನಗ್ರಾಮ ಕಾರ್ಯಕ್ರಮದ ಪ್ರಯುಕ್ತ  ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರತಿ ಮನೆಗೆ ವಚನಪುಸ್ತಕ ನೀಡುವುದರ ಮುಖಾಂತರ ದೇವಲಾಪುರ ಶ್ರಿÃ ಗುರುಮಲ್ಲೆÃಶ್ವರ ದಾಸೋಹ ಮಠದ  ಜಡೇಸ್ವಾಮಿಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರಿÃಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಕಾರ್ಯದರ್ಶಿ ರತ್ನಮ್ಮ ಜಯಣ್ಣ, ಉಪಾಧ್ಯಕ್ಷ ಪುಟ್ಟಪ್ಪ ಮಾಧ್ಯಮ ಸಂಚಾಲಕ ನಾಗೇಂದ್ರ ಉಪಸ್ಥಿತರಿದ್ದರು.
ಮೈಸೂರು: ಶರಣ ಧರ್ಮದ ತತ್ವಚಿಂತನೆಗಳನ್ನು ಭಕ್ತರ ಹೃದಯದಲ್ಲಿ ಬಿತ್ತಿ ಮನೆಗಳನ್ನೆÃ ಸಂಸ್ಕಾರದ ಕೇಂದ್ರಗಳನ್ನಾಗಿ ಮಾರ್ಪಡಿಸಿದವರು ಗುರುಮಲ್ಲೆÃಶ್ವರರು ಎಂದು ದೇವನೂರಿನ ಶ್ರಿÃ ಗುರುಮಲ್ಲೆÃಶ್ವರ ಮಹಾಸಂಸ್ಥಾನ ಮಠದ   ಮಹಾಂತಸ್ವಾಮಿಗಳು ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ಮತ್ತು ದೇವಲಾಪುರ ಶ್ರಿÃ ಗುರುಮಲ್ಲೆÃಶ್ವರ ದಾಸೋಹ ಮಠ ಸಹಯೋಗದೊಂದಿಗೆ ದೇವಲಾಪುರ ಶ್ರಿÃ ಗುರುಮಲ್ಲೆÃಶ್ವರ ದಾಸೋಹ ಮಠದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಮತ್ತು ವಚನಗ್ರಾಮ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು  ಮನದ ಮಲಿನತೆಯನ್ನು ಹೋಗಲಾಡಿಸಿ ಸುಸಂಸ್ಕೃತ ವ್ಯಕ್ತಿತ್ವಕ್ಕೆ ಕಾರಣವಾಗುವ ಶರಣರ ವಚನ ಪುಸ್ತಕಗಳನ್ನು ಗ್ರಾಮದ ಪ್ರತಿಮನೆಗೆ ನೀಡಿ ವಚನಗ್ರಾಮ ಎಂದು ಕರೆಯುವುದರ ಮೂಲಕ ಸತ್‌ಚಿಂತನೆಗಳನ್ನು ಜನಮಾನಸದಲ್ಲಿ ರೂಡಿಸುತ್ತಿರುವ ಶರಣು ವಿಶ್ವವಚನ ಫೌಂಡೇಷನ್ ಕಾರ್ಯ ಶ್ಲಾಘನೀಯವಾದುದು. ನುಡಿದಂತೆ ನಡೆದ ಶರಣರ ವಚನಗಳನ್ನು ನಾವು ಪ್ರತಿನಿತ್ಯ ಅಧ್ಯಯನ ಮಾಡುವುದರ ಜೊತೆಗೆ ಅವುಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮುಖಾಂತರ ಸಂಸ್ಕಾರವಂತರಾಗಲು ಪ್ರಯತ್ನಿಸಬೇಕು. ಗುರುಮಲ್ಲೆÃಶ್ವರರು ಶರಣರ ಹಾದಿಯಲ್ಲಿ ನಡೆದು ದೇವನೂರು ಕ್ಷೆÃತ್ರವನ್ನು ಪವಿತ್ರ ಮಾಡಿದರು. ಅವರ ಸ್ಮರಣೆ ಮಾಡುವುದರ ಮುಖಾಂತರ ದೇವಲಾಪುರ ಪವಿತ್ರಗ್ರಾಮವಾಗಿ ರೂಪುಗೊಂಡಿದೆ ಎಂದರು. ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿದ ದಡದಹಳ್ಳಿ ಗುರುಮಲ್ಲೆÃಶ್ವರ ಮಠದ ಷಡಕ್ಷರಿಸ್ವಾಮಿಗಳು ಅನೇಕ ಮೂಢನಂಬಿಕೆಗಳನ್ನು ನಮಗೆ ಅರಿವಿಲ್ಲದಂತೆ ಆಚರಿಸಿಕೊಂಡು ಬರುತ್ತಿದ್ದೆÃವೆ ಮೌಡ್ಯವನ್ನು ಹೋಗಲಾಡಿಸಿ ವೈಚಾರಿಕತೆ ಮೈಗೂಡಿಸಿಕೊಳ್ಳಲು ವಚನಗಳನ್ನು ಅಧ್ಯಯನ ಮಾಡಬೇಕೆಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮೌಲಾನಪೀರ್ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿ ಗುರುಮಲ್ಲೆÃಶ್ವರರ ಪ್ರಭಾವಕ್ಕೆ ಒಳಗಾಗಿ ಲಿಂಗವಂತನಾಗಿ ಪ್ರಥಮವಾಗಿ ‘ಅಲಕ್ ನಿರಂಜನ ಮಹಾಪ್ರಭು’ ಎಂದು ಭಕ್ತಿಯಿಂದ ಹರ್ಷೋದ್ಗಾರ ಮಾಡಿದನು ನಂತರ ಅದು ಅದೇ ರೀತಿ ಕರೆಯುವುದು ರೂಢಿಯಾಯಿತು ಎಂದರು. ಉಪನ್ಯಾಸ ನೀಡಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಶರಣರ ಸುಜ್ಞಾನ ಬೆಳಕಿನ ಸಂದೇಶವನ್ನು ಮನುಕುಲಕ್ಕೆ ಬಿತ್ತಿದ ಮಹಾಮಹಿಮರು ತ್ರಿವಿಧ ದಾಸೋಹಿಗಳು ಸ್ವಲೀಲ ಮಹಾತ್ಮರು ಗುರುಮಲ್ಲೆÃಶ್ವರರು ಎಂದು ತಿಳಿಸಿ ಅವರ ಜೀವನದ ವಿವಿಧ ಘಟನಾವಳಿಗಳನ್ನು ಸ್ಮರಿಸಿದರು. ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರಿÃಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಕಾರ್ಯದರ್ಶಿ ರತ್ನಮ್ಮ ಜಯಣ್ಣ, ಉಪಾಧ್ಯಕ್ಷ ಪುಟ್ಟಪ್ಪ, ಮಾಧ್ಯಮ ಸಂಚಾಲಕ ನಾಗೇಂದ್ರ ಉಪಸ್ಥಿತರಿದ್ದರು.

=====================================================================

ಚಿತ್ರ:1 ಶರಣು ವಿಶ್ವವಚನ ಫೌಂಡೇಷನ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ದೊಡ್ಡಬೂಹಳ್ಳಿಯಲ್ಲಿ ಏರ್ಪಡಿಸಿದ್ದ ವಚನಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ ಮನೆಗೆ ವಚನ ಪುಸ್ತಕ ನೀಡಿ ಆ ಗ್ರಾಮವನ್ನು ವಚನಗ್ರಾಮ ಎಂದು ಘೋಷಿಸಿ ವಚನಗ್ರಾಮ ಪ್ರಶಂಸಾಪತ್ರವನ್ನು ಶ್ರೀಮಠದ ಶಿವಪ್ಪಸ್ವಾಮಿಗಳಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕರಾದ ಕಾವೇರಿ, ಮೈಸೂರು ಜಿಲ್ಲಾಧ್ಯಕ್ಷ  ಅನಿಲ್ ಕುಮಾರ್ ವಾಜಂತ್ರಿ, ಮಳವಳ್ಳಿ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹದೇವಪ್ಪ, ಆಧುನಿಕ ವಚನಕಾರ್ತಿ ಮಲ್ಲಿಕಾ ಮಳವಳ್ಳಿ, ಮುಖ್ಯಶಿಕ್ಷಕ ಲೋಕೇಶ್, ಪತ್ರಕರ್ತ ಶಿವಕುಮಾರ್, ಮಾಧ್ಯಮ ಸಂಚಾಲಕ ನಾಗೇಂದ್ರ,  ಗ್ರಾಮಸ್ಥರು ಉಪಸ್ಥಿತರಿದ್ದರು. 
ಮಳವಳ್ಳಿ: ವಚನಗಳು ಕಾಯಕಪ್ರಜ್ಞೆಯನ್ನು ಮೂಡಿಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತವೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ದೊಡ್ಡಬೂಹಳ್ಳಿಯಲ್ಲಿ ಏರ್ಪಡಿಸಿದ್ದ ವಚನಗ್ರಾಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ವಚನಗಳು ಮನದ ಮೈಲಿಗೆಯನ್ನು ಹೋಗಲಾಡಿಸಿ ಪಂಚಾಚಾರಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರಗಳಿಗೆ ಸಂಬಂಧಿಸಿದ ವೈಜ್ಷಾನಿಕ ಅರಿವನ್ನು ಮೂಡಿಸಿ ಮಾನವನನ್ನು ಮಹಾದೇವನನ್ನಾಗಿ ಮಾಡುತ್ತವೆ. ನಾವಾಡುವ ಮಾತುಗಳು ಹಿತವಾಗಿರಬೇಕು ಹಾಗೂ ಮಿತವಾಗಿರಬೇಕು ಎಂದು ತಿಳಿಸಿ ನಾವಾಡಿದ ಮಾತಿಗೆ ಪರಶಿವನೂ ತಲೆದೂಗಿಸುವಂತಿರಬೇಕು ಎಂದು ತಿಳಿಸಿದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ  ಗುಡಿಗೆ ಹೋಗಿ ಪೂಜಿಸುವುದು ನಿಜವಾದ ಭಕ್ತಿಯಲ್ಲ. ವಂಚನೆ ಇಲ್ಲದೆ ಜೀವನ ನಡೆಸುವುದು ನಿಜವಾದ ಭಕ್ತಿ. ಜನರ ನೈತಿಕ ಮಟ್ಟದಿಂದ ದೇಶದ ಪ್ರಗತಿ ಅಳೆಯಬೇಕೆ ಹೊರತು ಸಂಪಾದಿಸಿದ ಹಣದಿಂದಲ್ಲ. ನಮಗೆ ವಚನಗಳು ಸುಖ, ನೆಮ್ಮದಿಯನ್ನು ಉಂಟುಮಾಡಿ ಬದುಕನ್ನು ಸಾರ್ಥಕಗೊಳಿಸುತ್ತವೆ ಎಂದರು. ಕಾರ್ಯಕ್ರಮದ ಮೊದಲು ಪ್ರತಿ ಮನೆಗೆ ವಚನ ಪುಸ್ತಕ ನೀಡಿ ಆ ಗ್ರಾಮವನ್ನು ವಚನಗ್ರಾಮ ಎಂದು ಘೋಷಿಸಿ ವಚನಗ್ರಾಮ ಪ್ರಶಂಸಾಪತ್ರವನ್ನು ಶ್ರೀಮಠದ ಶಿವಪ್ಪಸ್ವಾಮಿಗಳಿಗೆ ನೀಡಲಾಯಿತು. ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಪ್ರೊಜೆಕ್ಟರ್ ಮೂಲಕ ಶರಣು ವೀಸ್ವವಚನ ಫೌಂಡೆಷನ್ ಚಟುವಟಿಕೆಗಳು ಮತ್ತು ಅನೇಕ ವಚನಗಳನ್ನು ತೋರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರೀಯ ಸಂಚಾಲಕರಾದ ಕಾವೇರಿ, ಮೈಸೂರು ಜಿಲ್ಲಾಧ್ಯಕ್ಷ  ಅನಿಲ್ ಕುಮಾರ್ ವಾಜಂತ್ರಿ, ಮಳವಳ್ಳಿ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹದೇವಪ್ಪ, ಆಧುನಿಕ ವಚನಕಾರ್ತಿ ಮಲ್ಲಿಕಾ ಮಳವಳ್ಳಿ, ಮುಖ್ಯಶಿಕ್ಷಕ ಲೋಕೇಶ್, ಪತ್ರಕರ್ತ ಶಿವಕುಮಾರ್, ಮಾಧ್ಯಮ ಸಂಚಾಲಕ ನಾಗೇಂದ್ರ,  ಗ್ರಾಮಸ್ಥರು ಉಪಸ್ಥಿತರಿದ್ದರು. 

====================================================================




ಚಿತ್ರ ಸುದ್ಧಿ :- ಶರಣು ವಿಶ್ವವಚನ ಫೌಂಡೇಷನ್ ಮತ್ತು ಕಸ್ತೂರಿ ಜನನಿ ಸಂಸ್ಥೆಯ ಸಹಯೋಗದೊಂದಿಗೆ ಆಲತಾಳಹುಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಚನಗ್ರಾಮ ಕಾರ್ಯಕ್ರಮದಲ್ಲಿ ಗುರುಮಲ್ಲೇಶ್ವರ ದಾಸೋಹ ಮಠದ ಗಂಗಾಧರಸ್ವಾಮಿಗಳಿಗೆ ವಚನಗ್ರಾಮ ಪ್ರಶಂಸಾಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಸ್ತೂರಿ ಜನನಿ ಸಂಸ್ಥೆ ಸಂಸ್ಥಾಪಕ ಸತೀಶ್ ಆರಾಧ್ಯ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಎಚ್.ಡಿ.ಕೋಟೆ ಅಧ್ಯಕ್ಷ ಕೆ.ಎಂ.ಮಹೇಶ್, ಗೌಡಿಕೆ ಬಸವರಾಜು, ಗ್ರಾ.ಪಂ.ಸದಸ್ಯ ಕೆಂಡಗಣ್ಣಸ್ವಾಮಿ, ಉಪಾಧ್ಯಕ್ಷ ಲೋಕೇಶ್, ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಯುವಸಮಿತಿ ಅಧ್ಯಕ್ಷ ಮಹದೇವಪ್ರಸಾದ್, ಉಪಾಧ್ಯಕ್ಷ ವೀರಭದ್ರಪ್ಪ, ಗೌಡಿಕೆ ಮಹದೇವಸ್ವಾಮಿ, ಕಸ್ತೂರಿ ಜನನಿ ಸಂಸ್ಥೆ ಖಜಾಂಚಿ ರಾಕೇಶ್ ಶರ್ಮ, ಸಿದ್ದಪ್ಪ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ತಾಲ್ಲೂಕು ಅಧ್ಯಕ್ಷ ಗಿರೀಶ್, ಕಾರ್ಯಾಧ್ಯಕ್ಷ ಪಂಪಾಪತಿ, ಉಪಾಧ್ಯಕ್ಷೆ, ಪ್ರೇಮ ಪ್ರಭುಸ್ವಾಮಿ, ಸಿದ್ದಪ್ಪ ಮತ್ತು ಗುರುಸ್ವಾಮಿ  ಉಪಸ್ಥಿತರಿದ್ದರು.

ಎಚ್.ಡಿ.ಕೋಟೆ :- ಸಂಸ್ಕಾರಯುತ ಗ್ರಾಮಗಳ ನಿರ್ಮಾಣಕ್ಕೆ ವಚನಗ್ರಾಮ ಸಹಕಾರಿಯಾಗಿದೆ ಎಂದು ಕಸ್ತೂರಿ ಜನನಿ ಸಂಸ್ಥೆ ಸಂಸ್ಥಾಪಕ ಸತೀಶ್ ಆರಾಧ್ಯ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮತ್ತು ಕಸ್ತೂರಿ ಜನನಿ ಸಂಸ್ಥೆಯ ಸಹಯೋಗದೊಂದಿಗೆ ಆಲತಾಳಹುಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಚನಗ್ರಾಮ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಮಾನವನ ಬದುಕಿಗೆ ವಚನಗಳು ಸಹಾಯಕವಾಗಿದ್ದು ಅಂತಹ ವಚನ ಪುಸ್ತಕಗಳನ್ನು ಪ್ರತಿಮನೆಗೆ ಯಾವುದೇ ಧರ್ಮ, ಜಾತಿ, ಲಿಂಗಭೇದವಿಲ್ಲದೇ ಹಂಚಿ ವಚನಗ್ರಾಮ ಮಾಡಲು ಹೊರಟಿರುವ ಶರಣು ವಿಶ್ವವಚನ ಫೌಂಡೇಷನ್ ಕಾರ್ಯ ಸ್ತುತ್ಯಾರ್ಹವಾದುದು. ದ್ವೇಷ ಅಸೂಹೆಗಳನ್ನು ಹೋಗಲಾಡಿಸಿ  ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುವ ಶರಣ ಸಂಸ್ಜøತಿ ಪ್ರತಿ ಗ್ರಾಮದಲ್ಲಿ  ಅಳವಡಿಕೆ ಆದರೆ ನಮ್ಮ ದೇಶ ಸುಸಂಸ್ಕøತ ದೇಶವಾಗಿ ರೂಪುಗೊಳ್ಳವುದರಲ್ಲಿ ಯಾವುದೇ ಅನುಮಾನವಿಲ್ಲ ಅಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ವಚನಗಳನ್ನು ವಿಶ್ವದ ಪ್ರತಿಯೊಬ್ಬರೂ ಕಲಿಯಲು ಸಹಾಯಕವಾಗುವ ಉದ್ದೇಶದಿಂದ ಪ್ರಸ್ತುತ ವರ್ಷ 13 ಭಾಷೆಗಳನ್ನು ಒಳಗೊಂಡ ಶರಣು ದಿನಚರಿಯನ್ನು ಸಂಸ್ಥೆಯಿಂದ ಹೊರತರಲಾಗಿದೆ. ಬೇರೆ ಭಾಷೆಯವರು ಕನ್ನಡನಾಡಿನಲ್ಲಿ  ಉದಯವಾದ ವಚನಗಳನ್ನು ಪ್ರೀತಿಸಿದಾಗ ಅದರ ಕೀರ್ತಿ ಪ್ರತಿಯೊಬ್ಬ ಕನ್ನಡಿಗನಿಗೂ ಸಲ್ಲುತ್ತದೆ. ತಾವೆಲ್ಲಾ ಸಹಕಾರ ನೀಡಿದರೆ ಭಾರತದ ಪ್ರತಿಯೊಂದು ಗ್ರಾಮವನ್ನು ವಚನಗ್ರಾಮ ಮಾಡಲು ಪ್ರಯತ್ನಿಸಲಾಗುವುದು ಎಂದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ವಚನ ಸಾಹಿತ್ಯ ಸಂಕುಚಿತ ಮನೋಭಾವನೆ ಹೊಂದಿರುವ ಜನರು ವಿಶಾಲ ಮನೋಭಾವನೆಯನ್ನು ಮೈಗೂಡಿಸಿಕೊಂಡು ಮೂಢನಂಬಿಕೆ, ಕಂದಾಚಾರ ಇವುಗಳನ್ನು ಹೋಗಲಾಡಿಸಿ ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ. ವಚನಗಳು ಶರಣರ ಅನುಭವದ ನುಡಿಗಳಾಗಿರುವುದರಿಂದ ಪ್ರತಿಯೊಬ್ಬರೂ ಅವುಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಮತ್ತು ಕಸ್ತೂರಿ ಜನನಿ ಸಂಸ್ಥೆ ಹೊರತಂದಿರುವ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆಲತಾಳಹುಂಡಿ  ಗುರುಮಲ್ಲೇಶ್ವರ ದಾಸೋಹ ಮಠದ ಗಂಗಾಧರಸ್ವಾಮೀಜಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಎಚ್.ಡಿ.ಕೋಟೆ ಅಧ್ಯಕ್ಷ ಕೆ.ಎಂ.ಮಹೇಶ್, ಗೌಡಿಕೆ ಬಸವರಾಜು, ಗ್ರಾ.ಪಂ.ಸದಸ್ಯ ಕೆಂಡಗಣ್ಣಸ್ವಾಮಿ, ಉಪಾಧ್ಯಕ್ಷ ಲೋಕೇಶ್, ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಯುವಸಮಿತಿ ಅಧ್ಯಕ್ಷ ಮಹದೇವಪ್ರಸಾದ್, ಉಪಾಧ್ಯಕ್ಷ ಚಂದ್ರಶೇಖರ್, ಗೌಡಿಕೆ ಮಹದೇವಸ್ವಾಮಿ, ಕಸ್ತೂರಿ ಜನನಿ ಸಂಸ್ಥೆ ಖಜಾಂಚಿ ರಾಕೇಶ್ ಶರ್ಮ, ಸಿದ್ದಪ್ಪ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ತಾಲ್ಲೂಕು ಅಧ್ಯಕ್ಷ ಗಿರೀಶ್, ಕಾರ್ಯಾಧ್ಯಕ್ಷ ಪಂಪಾಪತಿ, ಉಪಾಧ್ಯಕ್ಷೆ, ಪ್ರೇಮ ಪ್ರಭುಸ್ವಾಮಿ, ಸಿದ್ದಪ್ಪ ಮತ್ತು ಗುರುಸ್ವಾಮಿ  ಉಪಸ್ಥಿತರಿದ್ದರು.
====================================================================


ಮೈಸೂರು: ಗ್ರಾಮೀಣ ಜನರು ವಚನಗಳ ಆರಾಧಕರಾದರೆ ಗ್ರಾಮಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತವೆ ಎಂದು ಬರಡನಪುರ ಮಹಾಂತೇಶ್ವರಮಠದ ಪರಶಿವಮೂರ್ತಿಸ್ವಾಮೀಜಿಗಳು ಹೇಳಿದರು. ಮೈಸೂರು ತಾಲ್ಲೂಕು ದೊಡ್ಡಕಾಟೂರು ಗ್ರಾಮದಲ್ಲಿ 4ಮೇ 2019ರಂದು ತಾಲ್ಲೂಕು ಶರಣು ವಿಶ್ವವಚನ ಫೌಂಡೇಷನ್ ಘಟಕ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮತ್ತು ವಚನಗ್ರಾಮಕ್ಕೆ  ಚಾಲನೆ ನೀಡಿ ಮಾತನಾಡಿದ ಅವರು ಜನರು ಯಾವುದೇ ವಿಚಾರದ ಬಗ್ಗೆ ಪ್ರಶ್ನೆ ಮಾಡಿ ಸತ್ಯಾಸತ್ಯತೆಯನ್ನು ಅರಿಯುವ ಮತ್ತು ವೈಚಾರಿಕತೆಯ ಕಡೆಗೆ ಮುಖಮಾಡುವತ್ತ ವಚನ ಸಾಹಿತ್ಯ ಪ್ರಭಾವ ಬೀರುತ್ತದೆ. ಇಂದು ಪ್ರತಿಮನೆಗೆ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ವಚನಪುಸ್ತಕಗಳನ್ನು ಉಚಿತವಾಗಿ ಹಂಚುವುದರ ಮುಖಾಂತರ  ವಿಶ್ವಸಾಹಿತ್ಯದ ಶ್ರೀಮಂತಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ ವಚನ ಸಾಹಿತ್ಯವನ್ನು ಹಳ್ಳಿಗರು ಮನನ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಂದು ವಿಶ್ವವೇ ಬಸವಣ್ಣನವರ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಕನ್ನಡಿಗರಾದ ನಾವು ಬಸವಣ್ಣನವರ ತತ್ವವನ್ನು ಅರಿತು ಅದರಂತೆ ನಡೆಯಬೇಕಾಗಿದೆ ಎಂದರು. ಮೈಸೂರು ತಾಲ್ಲೂಕು ಶರಣು ವಿಶ್ವವಚನ ಫೌಂಡೇಶನ್ ಘಟಕ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ವಚನ ಕುಮಾರಸ್ವಾಮಿ ಪ್ರತಿ ಮನೆಗೆ ಮತ್ತು ಮನಮನಗಳಿಗೆ ವಚನಸಂದೇಶವನ್ನು ತಲುಪುವ ಉದ್ದೇಶದಿಂದ ವಚನಗ್ರಾಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. 12ನೇ ಶತಮಾನದಲ್ಲಿ ದನಗಾಹಿ ರಾಮಣ್ಣ ಕೂಡಾ ವಚನ ಸಾಹಿತ್ಯವನ್ನು ರಚಿಸಿ ಸಾಕ್ಷರನಾದ. ಅವನನ್ನು ಆದರ್ಶವಾಗಿಟುಕೊಂಡು ಎಲ್ಲಾ ಹಳ್ಳಿಗರು ಸಾಕ್ಷರರಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ನಾವೆಲ್ಲರೂ ಸಣ್ಣಪುಟ್ಟ ವಿಚಾರಗಳಿಗೆ ಕಚ್ಚಾಡದೆ ಸಹೋದರರಂತೆ ಸಹಬಾಳ್ವೆ ನಡೆಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ತಾಲ್ಲೂಕು ಅಧ್ಯಕ್ಷ ಎಸ್.ಗಿರೀಶ್, ಕಾರ್ಯಾಧ್ಯಕ್ಷ ಭ.ಪಂಪಾಪತಿ, ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಗ್ರಾ.ಪಂ.ಸದಸ್ಯ ಮಹದೇವಸ್ವಾಮಿ, ಗುಡಿಗೌಡ ಗಣಿ ಮಹದೇಸ್ವಾಮಿ, ಡೈರಿ ಅಧ್ಯಕ್ಷ ರಾಜಶೇಖರಮೂರ್ತಿ, ಮಾಜಿ ಗುಡಿಗೌಡ ಶಿವನಾಗು, ಪ್ರಭುಸ್ವಾಮಿ ಉಪಸ್ಥಿತರಿದ್ದರು.
                                                         ----------------------------------------


ಎಚ್.ಡಿ.ಕೋಟೆ :- ಸಮಾಜದಲ್ಲಿ ನವಚೇತನವನ್ನು ನೀಡಲು ವಚನಗಳು ಸಹಕಾರಿಯಾಗಿವೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ್ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮತ್ತು ಕಸ್ತೂರಿ ಜನನಿ ಸಂಸ್ಥೆಯ ಸಹಯೋಗದೊಂದಿಗೆ ಸೊಳ್ಳೆಪುರ ಹಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಚನಗ್ರಾಮ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು 12ನೇ ಶತಮಾನದ ವಚನಕಾರರು ಧಾರ್ಮಿಕ, ಸಾಮಾಜಿಕ ಮತ್ತು ಸಾಹಿತ್ಯಿಕವಾಗಿ ವಚನಗಳ ಮೂಲಕ ಜಾಗೃತಿಯನ್ನು ಉಂಟುಮಾಡಿದರು. ವಚನಗಳು ಇಹ-ಪರಗಳ ಸಾಧನೆಗಳ  ಕೈದೀವಿಗೆಗಳಾಗಿ ಸಾಮಾಜಿಕ ಪಿಡುಗಗಳನ್ನು ತೊಡೆದು ಸುಖೀ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿವೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಸರಳ ಹಾಗೂ ಸುಂದರ ಭಾಷೆಯಲ್ಲಿ ವಚನಗಳು ದೊರೆತಿರುವುದು ಕನ್ನಡಿಗರ ಸೌಭಾಗ್ಯ. ಅಂತಹ ವಚನಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸುಸಂಸ್ಕøತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಶರಣರು ಸಂಗ್ರಹಣ ತತ್ವಕ್ಕೆ ವಿರುದ್ಧವಾಗಿದ್ದರು ಎನ್ನುವುದಕ್ಕೆ ವಸ್ತ್ರದೊಳಗೊಂದೆಳೆಯ, ಹೊನ್ನಿನೊಳಗೊಂದೆಳೆಯ, ಇಂದಿಂಗೆ ನಾಳಿಂಗೆ ಎಂದು ಇಟ್ಟುಕೊಂಡೆನಾದಡೆ ತಲೆದಂಡ ಎನ್ನುವ ಬಸವಣ್ಣನವರ ವಚನವೇ ಸಾಕ್ಷಿಯಾಗಿದೆ. ಈ ವಚನಕ್ಕೆ ಪೂರಕವಾಗಿ ಹಾಡಿಯ ಜನರು ಅಸಂಗ್ರಹಣ ತತ್ವವನ್ನು ಅನುಸರಿಸುತ್ತಿರುವುದರಿಂದ ಸಂತೋಷವಾಗಿದ್ದಾರೆ. ಆದಿವಾಸಿ ಜನಾಂಗದ ಬಿರ್ಸಾಮುಂಡ ಅಂದು ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರಿಂದ ಭಾರತದ ಪಾರ್ಲಿಮೆಂಟ್ ಭವನದಲ್ಲಿ ಆತನ ಭಾವಚಿತ್ರ ಇಂದಿಗೂ ರಾರಾಜಿಸುತ್ತಿದೆ. ಆತನ ಹೆಸರಿನಲ್ಲಿ ರಾಂಚಿಯ ವಿಮಾನ ನಿಲ್ದಾಣವಿದೆ. ಅವರ ಆಧರ್ಶಗಳನ್ನು ಪಾಲಿಸುವುದರ ಮುಖಾಂತರ ನಾವು ಉತ್ತಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಸ್ತೂರಿ ಜನನಿ ಸಂಸ್ಥೆ ಸಂಸ್ಥಾಪಕ ಸತೀಶ್ ಆರಾಧ್ಯ, ರೋಟರಿ ಅಧ್ಯಕ್ಷ ನಾರಾಯಣ ಲಾಲ್, ವೈಲ್ಡ್ ಲೈಫ್ ಕನ್ಸರ್ವೇಟಿವ್ ಸೊಸೈಟಿ ಕ್ಷೇತ್ರಾಧಿಕಾರಿ ಗೋವಿಂದಪ್ಪ, ಎಚ್.ಡಿ.ಕೋಟೆ ತಾಲ್ಲೂಕು ಅಧ್ಯಕ್ಷ ಕಸ್ತೂರಿ ಮಹೇಶ್, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಕಾರ್ಯದರ್ಶಿ ಆನಗಟ್ಟಿ ಶಿವರುದ್ರಪ್ಪ, ಮೇಟಿಕುಪ್ಪೆ ವಿಶ್ವನಾಥ್, ರವಿಕುಮಾರ್, ವಿಜಯ್ ಕೆ.ಪಿ. ವರದರಾಜು ಉಪಸ್ಥಿತರಿದ್ದರು.
                                        ------------------------------------------------------------

Tuesday, April 17, 2018

ಶಾಲೆಗಳೆಡೆಗೆ ವಚನಗಳ ನಡಿಗೆ

Updated date 11.02.2019 By Rudresh P V





2016 ನೇ ಸಾಲಿನ  ಶಾಲೆಗಳೆಡೆಗೆ ವಚನಗಳ ನಡಿಗೆ ವಿವರ

ಶರಣು ವಿಶ್ವ ವಚನ ಫೌಂಡೇಶನ್ 2 ಫೆಬ್ರವರಿ 2016 ರಂದು ಮೈಸೂರು ತಾಲ್ಲೂಕಿನ ಡಿ.ಸಾಲುಂಡಿ ಗ್ರಾಮದ ಸ್ಯಾಂಡಲ್ ರೋಸ್ ವಿದ್ಯಾಸಂಸ್ಥೆಯಲ್ಲಿ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವ ವಚನ ಫೌಂಡೇಶನ್  ಸಂಸ್ಥಾಪಕರಾದ ವಚನ ಕುಮಾರಸ್ವಾಮಿ  ಸ್ಯಾಂಡಲ್ ರೋಸ್ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಶೋಭಾ ಶಿವರಾಜು.ಚಾಮುಂಡೇಶ್ವರಿ ಕ್ಷೇತ್ರದ ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ದೊರೆಸ್ವಾಮಿ ಕಾರ್ಯಕ್ರಮದಲ್ಲಿ  ಸಾಲುಂಡಿ ಕ್ಲಸ್ಟರ್ ಸಿ.ಆರ್.ಪಿ ರಮೇಶ್, ಉಮಾ ಮಹೇಶ್ವರಿ,ಹೇಮಾ ದೊಡ್ಡಯ್ಯ,ಸಂಸ್ಥೆಯ ಅಧ್ಯಕ್ಷ ಬಸವಯ್ಯ,ನಂದಿನಿ ರಮೇಶ್, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



ಶರಣು ವಿಶ್ವವಚನ ಫೌಂಡೇಷನ್ ಬೋಗಾದಿಯ ದೀಪನಗರದಲ್ಲಿರುವ ದೀಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾರ್ಚ5, 2016 ರಂದು  ನಡೆಸಿದ  "ಶಾಲೆಗಳೆಡೆಗೆ ವಚನಗಳ ನಡಿಗೆ" ಕಾರ್ಯಕ್ರವನ್ನು ದೀಪ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷರಾದ ರಾಮಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  ಮೈಸೂರು ಜಿಲ್ಲೆಯ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಿನ್ಕಲ್ ಬಸವರಾಜು, .ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ವಚನ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ದೀಪ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ದಿವಾಕರ್, ಹರಿವಿದ್ಯಾಲಯ ಸಂಸ್ಥೆಯ ಕಾರ್ಯದರ್ಶಿ ಭಗವಾನ್, ಪಿ.ಆರ್.ಓ ಅಂಬರೀಷ್, ಮುಖ್ಯಶಿಕ್ಷಕ ಮಹದೇವಯ್ಯ, ಶಿಕ್ಷಕರಾದ ಬಾಬು ಎ.ಕೆ,ಚಂದನ್ ಕುಮಾರ್, ಸರ್ವೇಶ್, ಚಂದ್ರಶೇಖರ್, ಲಿಂಗಾನಂದ್, ಚಂದ್ರಿಕ, ಗಾಯತ್ರಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.



ಶರಣು ವಿಶ್ವವಚನ ಫೌಂಡೇಶನ್ ಮೈಸೂರಿನ ಬೃಂದಾವನ ಬಡಾವಣೆಯ ರೋಟರಿ ಬೃಂದಾವನ ಶಾಲೆಯಲ್ಲಿ 9 ಸೆಪ್ಟೆಂಬರ್ 2016 ರಂದು ಆಯೋಜಿಸಿದ್ದ "ಶಾಲೆಗಳೆಡೆಗೆ ವಚನಗಳ ನಡಿಗೆ" ಎಂಬ ಕಾರ್ಯಕ್ರಮದಲ್ಲಿ ವಚನಗಾಯನ ಮಾಡಿ ಬಹುಮಾನ ಪಡೆದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಆಸ್ಟ್ರೇಲಿಯಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಶಿವಕುಮಾರ್ ರಾವಂದೂರು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಶ್ರೀಕಂಠಮೂರ್ತಿ, ಪ್ರಾಂಶುಪಾಲರಾದ ಮಮತ ಉಪಸ್ಥಿತರಿದ್ದರು. 


ಶರಣು ವಿಶ್ವವಚನ ಫೌಂಡೇಶನ್ ಹೆಗ್ಗಡದೇವನಕೋಟೆ ತಾಲ್ಲೂಕು ಸರಗೂರು ಹೋಬಳಿಯ ದಡದಹಳ್ಳಿ ಪ್ರೌಢಶಾಲೆಯಲ್ಲಿ  16 ಸೆಪ್ಟೆಂಬರ್ 2016ರಂದು ಆಯೋಜಿಸಿದ್ದ "ಶಾಲೆಗಳೆಡೆಗೆ ವಚನಗಳ ನಡಿಗೆ" ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕಗಳನ್ನು ನೀಡಲಾಯಿತು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಹೆಗ್ಗಡದೇವನಕೋಟೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಮಹದೇವಸ್ವಾಮೀಜಿ ಕಾರ್ಯಕ್ರಮದಲ್ಲಿ ದಡದಹಳ್ಳಿ ಗುರುಸ್ವಾಮಿ, ಶ್ರೀಕಂಠಮೂರ್ತಿ,ಮುಖ್ಯಶಿಕ್ಷಕ ಆದಿನಾರಾಯಣ,ಸಣ್ಣಕೂಸಪ್ಪ,ಚನ್ನಬಸಪ್ಪದೇವರು,ಚನ್ನಪ್ಪ,ಗಣಪತಿ,ಪ್ರಕಾಶ್,ಕಸ್ತೂರಿ ಮಹೇಶ್, ಶಿವಣ್ಣ, ಮಾದಪ್ಪ, ದಡದಹಳ್ಳಿ ಮಹೇಶ್, ಸುರೇಶ್, ವೀರಭದ್ರಪ್ಪ ಶಿಕ್ಷಕರುಗಳಾದ ಮಹದೇವಿ, ಭಾಸ್ಕರ್, ಧನಂಜಯ, ಅನಿಲ್‍ಕುಮಾರ್ ಗೋಲಾಬಾವಿ, ನಾಗೇಂದ್ರಯ್ಯ ಉಪಸ್ಥಿತರಿದ್ದರು.



ಶರಣು ವಿಶ್ವವಚನ ಫೌಂಡೇಶನ್ ಮೈಸೂರು ತಾಲ್ಲೂಕು ಮುಳ್ಳೂರು ವಿನಾಯಕ ಜ್ಞಾನವಿದ್ಯಾ ಶಾಲೆಯಲ್ಲಿ   25 ಅಕ್ಟೋಬರ್ 2016ರಂದು ಆಯೋಜಿಸಿದ್ದ "ಶಾಲೆಗಳೆಡೆಗೆ ವಚನಗಳ ನಡಿಗೆ" ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕಗಳನ್ನು ನೀಡಲಾಯಿತು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಕವಯತ್ರಿ ರತ್ನ ಹಾಲಪ್ಪಗೌಡ, ರೂಪಕುಮಾರಸ್ವಾಮಿ, ಶ್ರೀಕಂಠಮೂರ್ತಿ ಉಪಸ್ಥಿತರಿದ್ದರು.




ಶರಣು ವಿಶ್ವವಚನ ಫೌಂಡೇಷನ್ ಕಲಬುರಗಿಯ ವಿಶ್ವನಾಥರೆಡ್ಡಿ ಮುದ್ನಾಳ್ ಕಾಲೇಜಿನಲ್ಲಿ 15 ಅಕ್ಟೋಬರ್ 2016 ರಂದು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ಆಯೋಜಿಸಲಾಯಿತು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಕಲಬುರಗಿ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಡಾ. ಶರಣ ಬಸಪ್ಪ ವಡ್ಡನಕೇರಿ ಉಪಸ್ಥಿತರಿದ್ದರು.





2017 ನೇ ಸಾಲಿನ  ಶಾಲೆಗಳೆಡೆಗೆ ವಚನಗಳ ನಡಿಗೆ ವಿವರ


ಶರಣು ವಿಶ್ವವಚನ ಫೌಂಡೇಶನ್ ಗುಂಡ್ಲುಪೇಟೆ ತಾಲ್ಲೂಕು ಬೇಗೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 26 ಜೂನ್ 2017 ರಂದು ಹಮ್ಮಿಕೊಂಡಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನಪಸ್ತಕ ನೀಡಿ ಅಭಿನಂದಿಸಲಾಯಿತು.  ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಶರಣು ವಿಶ್ವವಚನ ಫೌಂಡೇಶನ್ ಕೇಂದ್ರೀಯ ಸಮಿತಿ ಸಂಚಾಲಕರಾದ ಲಿಂಗಣ್ಣ, ಶರಣು ವಿಶ್ವವಚನ ಫೌಂಡೇಶನ್ ಕೇಂದ್ರೀಯ ಸಮಿತಿ ಸಂಚಾಲಕರಾದ ಜಮೀನ್ದಾರ್ ಮಹೇಶ್ ಮಹೀ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಬಸವಣ್ಣ, ನಿಲಯಪಾಲಕರಾದ ಎಚ್.ಎನ್.ಮಂಜುನಾಥ್, ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



18 ಆಗಸ್ಟ್ 2017 ರಂದು ಶರಣು ವಿಶ್ವವಚನ ಫೌಂಡೇಷನ್ ಬೆಂಗಳೂರಿನ ಬೊಮ್ಮಸಂದ್ರ ಎಸ್ ಕೆ ಪಬ್ಲಿಕ್ ಶಾಲೆಯಲ್ಲಿ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಶಂಕರಪ್ಪ, ಡಾ. ಶಶಿಧರ್, ಹಿರೇಮಥ್, ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಕಣ್ಣೂರು ಕುಮಾರಸ್ವಾಮಿ ಉಪಸ್ಥಿತರಿದ್ದರು.




26 sಸೆಪ್ಟೆಂಬರ್ 2017ರಂದು  ಮೈಸೂರನ ಅರಮನೆಯ ಟೆಂಟ್‍ಶಾಲೆಯಲ್ಲಿ ಮಾವುತ ಮತ್ತು ಕಾವಾಡಿಗರ ಮಕ್ಕಳಿಗೆ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಯು.ಎಂ. ಉಮಾಮಹದೇವಸ್ವಾಮಿ, ಕಾರ್ಯಕ್ರಮದಲ್ಲಿ ಮಾವುತರ ಉಸ್ತುವಾರಿ ವೈಧ್ಯರಾದ  ಡಾ.ನಾಗರಾಜು, ಜಿಲ್ಲಾ  ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಶ್ರೀಕಂಠಮೂರ್ತಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಶಿಕ್ಷಕಿ ನೂರ್‍ಫಾತಿಮಾ ಉಪಸ್ಥಿತರಿದ್ದರು.




ಚಿತ್ರದುರ್ಗ ಜಿಲ್ಲೆ ಚಳ್ಳೆಕೆರೆ ತಾಲ್ಲೂಕು ತಳಕು ಮಾರುತಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ 09 ಅಕ್ಟೋಬರ್ 2017ರಂದು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ  ಶರಣು ವಿಶ್ವವಚನ ಫೌಂಡೇಶನ್ ಅಂತರ್ಜಾಲ ಸಂಚಾಲಕ ಪಿ.ವಿ.ರುದ್ರೇಶ್ ಉಪಸ್ಥಿತರಿದ್ದರು.



ಶರಣು ವಿಶ್ವವಚನ ಫೌಂಡೇಶನ್ ಮತ್ತು ಸ್ಯಾಂಡಲ್‍ರೋಸ್ ಕಾನ್ವೆಂಟ್ ಸಹಯೋಗದೊಂದಿಗೆ ಡಿ.ಸಾಲುಂಡಿಯ ಪ್ರಥಮ ಕನ್ವೆನ್ಷನ್ ಹಾಲ್‍ನಲ್ಲಿ 6 ನವೆಂಬರ 2017 ರಂದು ನಡೆದ “ ಶಾಲೆಗಳೆಡೆಗೆ ವಚನಗಳ ನಡಿಗೆ” ಎಂಬ  ಕಾರ್ಯಕ್ರಮವನ್ನು ಮೈಸೂರು ಎಸ್.ಎಂ.ಪಿ. ಫೌಂಡೇಶನ್ ಅಧ್ಯಕ್ಷ ಎಸ್.ಎಂ.ಶಿವಪ್ರಕಾಶ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಬಸವಬಳಗ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಎಂ.ಎಚ್.ಮಹದೇವಸ್ವಾಮಿ, ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಎಚ್.ಡಿ.ಕೋಟೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಮಂಜುನಾಥ್, ಶರಣು ವಿಶ್ವವಚನ ಫೌಂಡೇಶನ್ ನಿದೇಶಕಿ ರೂಪ ಕುಮಾರಸ್ವಾಮಿ, ಸ್ಯಾಂಡಲ್ ರೋಸ್ ಕಾನ್ವೆಂಟ್ ಸಂಸ್ಥಾಪಕ ಕಾರ್ಯದರ್ಶಿ ಬಿ. ಶೋಭಾ ಶಿವರಾಜು, ಲತಾ ಬಸಪ್ಪ, ನಿಂಗೇಗೌಡ, ಪಂಪಾಪತಿ, ಲಿಂಗಣ್ಣ, ಪ್ರಭುಸ್ವಾಮಿ ಉಪಸ್ಥಿತರಿದ್ದರು



ಶರಣು ವಿಶ್ವವಚನ ಫೌಂಡೇಶನ್ 9 ನವೆಂಬರ್ 2017 ರಂದು  ಜೆ.ಎಸ್.ಎಸ್ ಪ್ರೌಢಶಾಲೆ, ವಿಜಯನಗರ ವಿದ್ಯಾಸಂಸ್ಥೆಯಲ್ಲಿ  “ ಶಾಲೆಗಳೆಡೆಗೆ ವಚನಗಳ ನಡಿಗೆ” ಎಂಬ ಕಾರ್ಯಕ್ರಮ ನಡೆಸಿ ವಚನ ವಾಚನ ಮಾಡಿದ ಮಕ್ಕಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ  ಶ್ರೀ ಎಂ.ಎಂ.ನಿಖಿಲೇಶ್, ಸಂಸ್ಥಾಪಕರು, ಕಲಿಸು ಫೌಂಡೇಶನ್, ಮೈಸೂರು, ಶ್ರೀ ವಚನ ಕುಮಾರಸ್ವಾಮಿ, ಶ್ರೀ ವಿ. ನಾಗೇಶ್, ರೂಪ ಕುಮಾರಸ್ವಾಮಿ ಉಪಸ್ಥಿತರಿದ್ದರು.





ಶರಣು ವಿಶ್ವವಚನ ಫೌಂಡೇಶನ್ ಮತ್ತು ರೋಟರಿ ಸಂಸ್ಥೆ ಸಹಯೋಗದೊಂದಿಗೆ ಹೆಗ್ಗಡದೇವನಕೋಟೆ ತಾಲ್ಲೂಕು ಆಲನಹಳ್ಳಿಯ ಶ್ರೀ ಚಂದ್ರಮೌಳೇಶ್ವರ ಮಲ್ಲಿಕಾರ್ಜುನಸ್ವಾಮಿ ವಿದ್ಯಾಸಂಸ್ಥೆಯಲ್ಲಿ 10 ನವೆಂಬರ್ 2017 ರದು  ನಡೆದ “ಶಾಲೆಗಳೆಡೆಗೆ ವಚನಗಳ ನಡಿಗೆ” ಎಂಬ  ಕಾರ್ಯಕ್ರಮದಲ್ಲಿ ವಚನ ವಾಚನ ಮಾಡಿದ ಮಕ್ಕಳಿಗೆ ವಚನದೀವಿಗೆ ಪ್ರಮಾಣ ಪತ್ರ ಮತ್ತು ವಚನ ಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾದಾಪುರ ಚಂದ್ರಮೌಳೇಶ್ವರ ಮಠದ ಮಲ್ಲಿಕಾರ್ಜುನಸ್ವಾಮೀಜಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ರೋಟರಿ ಸಂಸ್ಥೆಯ ಅಧ್ಯಕ್ಷ ನಾರಾಯಣಲಾಲ್, ಕಾರ್ಯದರ್ಶಿ ಕೃಷ್ಣ,  ತಾಲ್ಲೂಕು ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಮಹೇಶ್ ಉಪಸ್ಥಿತರಿದ್ದರು.



ಶರಣು ವಿಶ್ವವಚನ ಫೌಂಡೇಷನ್ ಮತ್ತು ಅನುರಾಗ ಸೇವಾ ಟ್ರಸ್ಟ್ ಸಹಯೋಗದೊಂದಿಗೆ 25 ನವೆಂಬರ್ 2017 ರಂದು  ನಂಜನಗೂಡು ತಾಲ್ಲೂಕಿನ ಸ.ಹಿ.ಪ್ರಾ.ಶಾಲೆ ಕಲ್ಕುಂದದಲ್ಲಿ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಬಸವರಾಜಪ್ಪ, ಬಸವಣ್ಣ, ಸೋಮಶೇಖರಮೂರ್ತಿ, ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಸಿದ್ಧರಾಜು, ಶಶಿಕಲಾ ಗಿರೀಶ್ ಉಪಸ್ಥಿತರಿದ್ದರು.



2018 ನೇ ಸಾಲಿನ  ಶಾಲೆಗಳೆಡೆಗೆ ವಚನಗಳ ನಡಿಗೆ ವಿವರ



ಶರಣು ವಿಶ್ವವಚನ ಫೌಂಡೇಷನ್ 6 ಫೆಬ್ರವರಿ 2018 ಮೈಸೂರು ಶ್ರೀರಾಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ವಚನ ಗಾಯನ, ವಾಚನ ಮತ್ತು ತಾತ್ಪರ್ಯ ಮಾಡಿದ ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನಪುಸ್ತಕ ನೀಡಿ ಅಭಿನಂದಿಸಲಾಯಿತು.

1

ಕಲಬುರಗಿ ಜಿಲ್ಲೆ ಕಮಲಾಪುರದ ಮಹಾಗಾಂವ ಕಳ್ಳಿಮಠದಲ್ಲಿ 10 ಫೆಬ್ರವರಿ 2018ರಂದು ನಡೆದ ಶಾಲೆಗಳೆಡೆಗೆ ವಚನಗಳ ನಡಿಗೆ
======================================================================

ನಂಜನಗೂಡು:-ವಚನಸಾಹಿತ್ಯ ವಿಶ್ವಭ್ರಾತೃತ್ವ ಮತ್ತು ಸಮಾನತೆಯನ್ನು ಬಿಂಬಿಸುತ್ತದೆ ಎಂದು ಜೆ.ಎಸ್.ಎಸ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಸೋಮಸುಂದರ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ನಂಜನಗೂಡಿನ ಜೆ.ಎಸ್.ಎಸ್ ಪ್ರೌಢಶಾಲೆಯಲ್ಲಿ 20 ಆಗಸ್ಟ್ 2018ರಂದು ಆಯೋಜಿಸಿದ್ದ "ಶಾಲೆಗಳೆಡೆಗೆ ವಚನಗಳ ನಡಿಗೆ"ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶರಣರು ಎಲ್ಲಾ ಜನರನ್ನು ಮಾನವೀಯತೆಯ ನೆಲಗಟ್ಟಿನಲ್ಲಿ ಒಂದೆಡೆ ಸೇರಿಸಿ ಅವರಲ್ಲಿದ್ದ ಪ್ರತಿಭೆಯನ್ನು ಅನುಭವಮಂಟಪದ ಮುಖಾಂತರ ಹೊರತಂದರು.ಅನುಭವ ಮಂಟಪವು ಎಲ್ಲಾ ವರ್ಗದವರಲ್ಲಿದ್ದ ಜಾÐನವನ್ನು ವಿನಿಮಯ ಮಾಡಿಕೊಂಡು ಒಂದು ಬಗೆಯ ಸಮ ಹಾಗೂ ಶರಣ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡರು.ಇಂದು ಅವರ ವಚನಗಳ ಆಶಯ ಎಲ್ಲರಿಗೂ ಅರ್ಥವಾಗುತ್ತಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಮಾತನಾಡಿ ಬಾಗಿದ ತಲೆ,ಮುಗಿದ ಕೈಯಾಗಿರಿಸು ಎಂದ ಬಸವಣ್ಣನವರ ಬಳಿ ಅಹಂ ಮಮಕಾರಗಳು ಅವರತ್ತ ಸುಳಿಯಲಿಲ್ಲ.ಆಧ್ಯಾತ್ಮ ಜೀವನದಲ್ಲಿ ಬಾನೆತ್ತರ ತಲುಪಿದರೂ ಅಲ್ಲಿ ನೆಲೆ ನಿಲ್ಲದೆ,ದೀನ-ದಲಿತರ ಮೇಲೆತ್ತಲು ಭೂಮಿಗಿಳಿದ ಕಾರುಣ್ಯಮೂರ್ತಿ.ವಿಶ್ವದ ಎಲ್ಲಾ ಮಾನವೀಯತೆ ಗುಣಗಳನ್ನು ರಾಶಿ ಸುರಿದರೆ ಬಸವಣ್ಣನವರಿಗೆ ಸರಿಸಾಟಿಯಿಲ್ಲ.ಬಸವಣ್ಣನವರ ಆದಿಯಾಗಿ ಎಲ್ಲಾ ವಚನಕಾರರ ವಚನಗಳನ್ನು ಅಧ್ಯಯನ ಮಾಡಿದರೆ ವಿದ್ಯೆಯ ಜೊತೆಗೆ ವಿನಯತೆಯೂ ಮೈಗೂಡುತ್ತದೆ ಎಂದರು. ನಂತರ ಮಾತನಾಡಿದ ಅನುರಾಗ ಸೇವಾಟ್ರಸ್ಟ್ ಸಂಸ್ಥಾಪಕ ಸೋಮಶೇಖರ್ ಎಳೆಯ ವಯಸ್ಸಿನಲ್ಲಿ ವಚನಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಲು ಶರಣು ವಿಶ್ವವಚನ ಫೌಂಡೇಷನ್ ಪ್ರಯತ್ನಿಸುತ್ತಿರುವುದು ಸ್ತುತ್ಯಾರ್ಹವಾದ ಕೆಲಸ, ವಚನಗಳನ್ನು ಅರಿತು ಅದರಂತೆ ನಡೆದಾಗ ಮಾತ್ರ ಸುಸಂಸ್ಕøತ ಸಮಾಜ ನಿರ್ಮಾಣವಾಗುತ್ತದೆ ಎಂದರು. ನಂತರ ವಚನ ವಾಚನ ಮಾಡಿದ ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣಪತ್ರ ಮತ್ತು ವಚನಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಗುರುಮಲ್ಲೇಶ್ವರ ಮಹಿಳಾ ಪತ್ತಿನ ಸಹಕಾರ ನಿಯಮಿತ ಅಧ್ಯಕ್ಷೆ ನಂದಿನಿ, ತಾಲ್ಲೂಕು ಅಧ್ಯಕ್ಷೆ ಶಶಿಕಲಾ ಗಿರೀಶ್,ಉಪಾಧ್ಯಕ್ಷ ಕಣೆನೂರು ನಾಗೇಶ್‍ಮೂರ್ತಿ ಕಾರ್ಯಾಧ್ಯಕ್ಷ ಪಂಪಾಪತಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಮಾಧ್ಯಮಸಂಚಾಲಕ ನಾಗೇಂದ್ರ,  ಕಾವೇರಿ ಅನಿಲ್, ಕೋಮಲ,  ಉಪಸ್ಥಿತರಿದ್ದರು. 
=====================================================================
ಚಿತ್ರಸುದ್ಧಿ: ಶರಣು ವಿಶ್ವವಚನ ಫೌಂಡೇಷನ್ ತಮಿಳುನಾಡು ರಾಜ್ಯದ ತಾಳವಾಡಿ ತಾಲ್ಲೂಕು ಪಾಳ್ಯಂ ಪ್ರಾಥಮಿಕ ಶಾಲೆಯಲ್ಲಿ 8ಮಾರ್ಚ್ 2018ರಂದು ಹಮ್ಮಿಕೊಂಡಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ವಚನಗಾಯನ, ವಚನ ವಾಚನ ಮತ್ತು ತಾತ್ಪರ್ಯ ಮಾಡಿದ ವಿದ್ಯಾರ್ಥಿಗಳಿಗೆ ವಚನಪುಸ್ತಕ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕರಾದ ಲಿಂಗಣ್ಣ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಪೌಂಡೇಷನ್ ಕಾರ್ಯಾಧ್ಯಕ್ಷ ಬಿ.ಪಂಪಾಪತಿ, ಉಪಾಧ್ಯಕ್ಷ ಮುಡಿಗುಂಡ ಪುಟ್ಟಪ್ಪ, ಮಾಧ್ಯಮ ಸಂಚಾಲಕ ನಾಗೇಂದ್ರ, ಶಾಲಾ ಮುಖ್ಯಶಿಕ್ಷಕ ಜಯರಾಂ, ಸಹಶಿಕ್ಷಕಿ ಮಹದೇವಿ ಉಪಸ್ಥಿತರಿದ್ದರು.
========================================================================

ಮೈಸೂರು :- ವಚನಗಳು ಸಾಮಾಜಿಕ ಮತ್ತು ವೈಚಾರಿಕ ಪ್ರಜೆÐ ಬೆಳೆಸುತ್ತವೆ ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಅಧ್ಯಕ್ಷ ಪಿ.ಮಹೇಶ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಅರಮನೆಯ ಟೆಂಟ್‍ಶಾಲೆಯಲ್ಲಿ ಮಾವುತರ ಮತ್ತು ಕಾವಾಡಿ ಮಕ್ಕಳಿಗೆ ನಡೆಸಿದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದ ಅವರು ವಚನಕಾರರು ದನಗಾಹಿ ರಾಮಣ್ಣ ಮತ್ತು ಕುರುಬ ಗೊಲ್ಲಾಳ ಎಂಬ ವ್ಯಕ್ತಿಗಳಿಗೂ ಕೂಡ ಶಿಕ್ಷಣವನ್ನು ನೀಡಿ ಅವರು ಜ್ಞಾನವನ್ನು ಪಡೆಯುವಂತೆ ಸಾಕ್ಷರರನ್ನಾಗಿ ಮಾಡಿ ಅನೇಕ ವಚನಗಳನ್ನು ರಚಿಸಲು ಕಾರಣರಾದರು. 12 ನೇ ಶತಮಾನದ ವಚನಕಾರರಲ್ಲಿದ್ದ ಸಾಮಾಜಿಕ ಪ್ರಜ್ಞೆ ಇಂದಿನ ಅಕ್ಷರಸ್ಥರಲ್ಲಿ ಮನೆಮಾಡಿದ್ದೇ ಆದರೆ ಇಡೀ ದೇಶವೇ ನೂರಕ್ಕೆ ನೂರರಷ್ಟು ಸಾಕ್ಷರ ದೇಶವಾಗಬಹುದು ಎಂದರು. ವಚನ ಗಾಯನವನ್ನು ನಡೆಸಿಕೊಟ್ಟ ಸಂಗೀತ ಶಿಕ್ಷಕ ಜೆ.ನಿರಂಜನ್  ದೇವಲೋಕ, ಮತ್ರ್ಯಲೋಕವೆಂಬುದು ಬೇರಿಲ್ಲ ಕಾಣಿರೋ, ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ, ಹಾಡಿದೊಡೆ ಎನ್ನೊಡೆಯನ ಹಾಡುವೆ, ಂದು ಇಂದು ಮತ್ತೊಂದೆನಬೇಡ ಮುಂತಾದ  ವಚನಗಳನ್ನು ಮಕ್ಕಳಿಗೆ ಹೇಳಿಕೊಡುವುದರ ಮುಖಾಂತರ ಮಕ್ಕಳಲ್ಲಿ ವಚನ ಗಾಯನದ ಬಗ್ಗೆ ಆಸಕ್ತಿ ಹೆಚ್ಚಿಸಿ ಮಕ್ಕಳೂ ಕೂಡ ಧ್ವನಿಗೂಡಿಸುವಂತೆ ಪ್ರೇರೇಪಿಸಿದರು. ವಚನ ವಾಚನ ಮತ್ತು ಗಾಯನ ಮಾಡಿದ 50 ಕ್ಕೂ ಹೆಚ್ಚು ಮಕ್ಕಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಕಾರ್ಯಾಧ್ಯಕ್ಷ ಪಂಪಾಪತಿ, ಮಾಧ್ಯಮ ಸಂಚಾಲಕ ನಾಗೇಂದ್ರ, ಮಂಜುಳ ಶಿವಪ್ರಸಾದ್, ಶೋಭ ಶಿವರಾಜ್, ಬಿ.ಆರ್.ಪಿ ಕುಸುಮ, ಶಿಕ್ಷಕರುಗಳಾದ ನೂರ್ ಫಾತಿಮಾ, ಅಕ್ಕಮ್ಮ, ಶೋಭಕುಮಾರಿ, ಲೈಬ್ರರಿಯನ್ ಯದುಕುಮಾರ್, ಶಿವರಾಜ್ ಉಪಸ್ಥಿತರಿದ್ದರು.
--------------------------------------------------------------------------------------------------------------------------

                                     2019 ರ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮಗಳು


ಮೈಸೂರು :- ವಚನ ಸಾಹಿತ್ಯ ಮೂಢನಂಬಿಕೆ, ಕಂದಾಚಾರ ಇವುಗಳನ್ನು ಹೋಗಲಾಡಿಸಿ ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮೈಸೂರಿನ ಮಂಜುನಾಥಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಗ್ ರಹಿತ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ಮಾನವನ ಬದುಕಿಗೆ ವಚನಗಳು ಸಹಾಯಕವಾಗಿದ್ದು ಅಂತಹ ವಚನಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಜೀವನದಲ್ಲಿ ಅಳವಡಿಸಿಕೊಂಡರೆ ತಮ್ಮ ಜೀವನಕ್ಕೆ ಬೆಲೆ ಬರುತ್ತದೆ. ಅಬ್ದುಲ್ ಕಲಾಂರವರು ಯಾರ ಸಹಿ ಆಟೋಗ್ರಾಫ್ ಆಗಿ ಬದಲಾಗುತ್ತದೋ ಅವರು ಸಾಧನೆಯನ್ನು ಮಾಡಿದ ವ್ಯಕ್ತಿಗಳು ಎಂದು ಹೇಳಿದ್ದಾರೆ. ಆದುದರಿಂದ ನಮಗೆ ಯಾವ ಕ್ಷೇತ್ರ ಇಷ್ಟವೋ ಅದನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸತತ ಪ್ರಯತ್ನದಿಂದ ಸಾಧನೆ ಮಾಡಿ ಲೋಕಮಾನ್ಯ ವ್ಯಕ್ತಗಳಾಗಿ ರೂಪುಗೊಳ್ಳಬೇಕು ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಶಿಕ್ಷಣ ಇಲಾಖೆ ಮಕ್ಕಳಿಗೆ ಪ್ರತಿದಿನ ಆಗುವಂತಹ ಬ್ಯಾಗ್ ಹೊರೆಯನ್ನು ಕಡಿಮೆ ಮಾಡಿ ತಿಂಗಳಲ್ಲಿ ಎರಡು ದಿನ ಮಕ್ಕಳು ಬ್ಯಾಗ್ ತರದೆ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬ್ಯಾಗ್ ರಹಿತ ದಿನವನ್ನು ಜಾರಿಗೆ ತಂದಿರುವುದು ಸ್ತುತ್ಯಾರ್ಹವಾದುದು. ಮಕ್ಕಳ ಸರ್ವಾಂಗೀಣ ಪ್ರಗತಿಗೆ ಹಾಗೂ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಪ್ರಸ್ತುತ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.  ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾವೇರಿ ಅನಿಲ್, ಮಾಧ್ಯಮ ಸಂಚಾಲಕ ನಾಗೇಂದ್ರ, ಶಿಕ್ಷಕರುಗಳಾದ ರಾಧಾ, ಗಣೇಶ್, ದೇವರಾಜ್, ಅಡುಗೆಯವರಾದ ರಾಧಾ, ಮಹದೇವಿ ಉಪಸ್ಥಿತರಿದ್ದರು.
====================================================================


ಮೈಸೂರು :- ವಚನಗಳು ಅಂತರಂಗದ ಅನುಭವದ ನುಡಿಗಳು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮೈಸೂರಿನ ಮಹಾದೇವಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಕ್ಕನ ಬಳಗ ಪ್ರೌಢಶಾಲೆಯಲ್ಲಿ  ಹಮ್ಮಿಕೊಂಡಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ  ವಚನ ಸಾಹಿತ್ಯ ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಿ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಯೋಚಿಸುವ ಆಲೋಚನೆಯನ್ನು  ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ. ಶರಣರು ಯಾವುದೇ ಮಡಿವಂತಿಕೆಯನ್ನು ತೋರದೆ ಎಲ್ಲರನ್ನು ಅಪ್ಪಿಕೊಂಡು ಸಮಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದರು ಎಂದರು.  ನಂತರ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಮಾತನಾಡಿ  ವಚನಗಳು ವಿದ್ಯೆಯ ಜೊತೆಗೆ ವಿನಯವನ್ನು ಕಲಿಸಿ ಸಂಸ್ಕಾರಯುತ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೌಲ್ಯಗಳಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ಶಾಲೆಯಲ್ಲಿ ಪ್ರತಿದಿನ ವಚನಗಳನ್ನು ಕಲಿಸುವುದರಿಂದ ಆ ಕೊರಗನ್ನು ಹೋಗಲಾಡಿಸಬಹುದು ಎಂದರು. ವಚನ ವಾಚನ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಶಂಸಾಪತ್ರ ಮತ್ತು ವಚನ ಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಮಹೇಶ್, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಉಪಾಧ್ಯಕ್ಷ ಮುಡಿಗುಂಡ ಪುಟ್ಟಪ್ಪ, ಪ್ರೇಮ ಪ್ರಭುಸ್ವಾಮಿ ಮಾಧ್ಯಮ ಸಂಚಾಲಕ ನಾಗೇಂದ್ರ, ಪ್ರೌಢಶಾಲಾ ಮುಖ್ಯಶಿಕ್ಷಕ ಶಿವಯ್ಯ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಎಂ.ಜೆ.ಸುಗುಣಾವತಿ, ಅನ್ನಪೂರ್ಣಮ್ಮ, ಪ್ರಭುಸ್ವಾಮಿ ಶಿಕ್ಷಕರುಗಳಾದ ಪುಷ್ಪಾವತಿ, ಮನೋರಮಾ, ರೇಷ್ಮ, ನಾಗರತ್ನ, ಶಿಲ್ಪ, ಪ್ರಮೋದಾ, ಶೀಲಾ, ವಸುಧ, ಪೋಷಕರಾದ ಕಾವೇರಿ, ಪುಷ್ಪ, ಉಪಸ್ಥಿತರಿದ್ದರು.
==================================================================

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಜಾಗೇರಿ (ಶಾಂತಿನಗರ) ಹಿರಿಯ ಪ್ರಾಥಮಿಕ ಶಾಲೆಯಲ್ಲಿ 24 ಜನವರಿ 2019 ರಂದು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ತಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಚಾಮರಾಜನಗರ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ವೀರಭದ್ರಸ್ವಾಮಿ, ಕೊಳ್ಳೇಗಾಲ ತಾಲ್ಲೂಕು ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷೆ ಜಗದಾಂಬ,  ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಉಪಾಧ್ಯಕ್ಷ ಮುಡಿಗುಂಡ ಪುಟ್ಟಪ್ಪ ಉಪಸ್ಥಿತರಿದ್ದರು.
=====================================================================

ಬೀದರ ಜಿಲ್ಲೆ ಹುಮ್ನಾಬಾದ್  ತಾಲ್ಲೂಕು ದುಮ್ಮನಸೂರ  ಸರ್ಕಾರಿ  ಕಿರಿಯ ಪ್ರಾಥಮಿಕ ಶಾಲೆಯಲ್ಲಿ 18 ಜನವರಿ 2019 ರಂದು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ತಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಬೀದರ್ ಜಿಲ್ಲಾಧ್ಯಕ್ಷ ಡಾ.ಗವಿಸಿದ್ದಪ್ಪ ಪಾಟೀಲ್, ಹುಮ್ನಾಬಾದ್ ತಾಲ್ಲೂಕು ಅಧ್ಯಕ್ಷೆ ರೂತಾ ತಾಳಮಡಗಿ ಉಪಸ್ಥಿತರಿದ್ದರು.
========================================================================

ಬೀದರ ಜಿಲ್ಲೆ ಬಸವ ಕಲ್ಯಾಣ ತಾಲ್ಲೂಕು ತಡೋಳ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ 18 ಜನವರಿ 2019 ರಂದು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ತಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಬೀದರ್ ಜಿಲ್ಲಾಧ್ಯಕ್ಷ ಡಾ.ಗವಿಸಿದ್ದಪ್ಪ ಪಾಟೀಲ್, ಹುಮ್ನಾಬಾದ್ ತಾಲ್ಲೂಕು ಅಧ್ಯಕ್ಷೆ ರೂತಾ ತಾಳಮಡಗಿ ಉಪಸ್ಥಿತರಿದ್ದರು.
=======================================================================
ಬೀದರ್ ಜಿಲ್ಲೆ ಹುಮನಾಬಾದ್ ಎಚ್ ಕೆ ಡಿ ಇ ಟಿ ಬಿ   ಬಿ.ಎಡ್ ಕಾಲೇಜಿನಲ್ಲಿ  4 ಜೂನ್ 2019 ರಂದು    ಬೀದರ್ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಘಟಕದಿಂದ ವಚನ ವಾಚನ ಮತ್ತು ಚಿಂತನಾ ಕಾರ್ಯಕ್ರಮ ನಡೆಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಡಾ ಗವಿಸಿದ್ದಪ್ಪ ಪಾಟೀಲ, ಎಂ ಎಸ್ ಉಪ್ಪಿನ, ಡಾ ಅರವಿಂದ ರಾಠೋಡ, ಪೀರಪ್ಪ ಸಜ್ಜನ ಉಪಸ್ಥಿತರಿದ್ದರು.
                                                      ___________________  






ಎಚ್ ಡಿ ಕೋಟೆ:- ಮನುಕುಲದಲ್ಲಿದ್ದ ಸಂಕುಚಿತ ಮನೋಭಾವನೆಯನ್ನು ಹೋಗಲಾಡಿಸಿ ಹೃದಯ ವೈಶಾಲ್ಯತೆಯನ್ನು ಬೆಳೆಸಲು ವಚನಗಳು ಸಹಕಾರಿಯಾಗಿವೆ ಎಂದು ಮಾದಾಪುರ ಚಂದ್ರಮೌಳೇಶ್ವರ ಮಠಾಧ್ಯಕ್ಷರಾದ ಮಲ್ಲಿಕಾರ್ಜುನಸ್ವಾಮೀಜಿ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ಮಾದಾಪುರ ಶ್ರೀ ಚಂದ್ರಮೌಳೇಶ್ವರಸಂಸ್ಥೆಯಲ್ಲಿ ಆಯೋಜಿಸಿದ್ದ “ ಶಾಲೆಗಳೆಡೆಗೆ ವಚನಗಳ ನಡಿಗೆ” ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ಆಧುನಿಕ ಪ್ರಪಂಚದಲ್ಲಿ ಸಂಸ್ಕಾರ ಎಂಬುದು ಮರೀಚಿಕೆಯಾಗಿದೆ ಆದರೆ ವಚನಗಳು ಅಂತಹ ಸಂಸ್ಕಾರ ಮೂಡಿಸಲು ಸಹಕಾರಿಯಾಗಿದ್ದು ಮಕ್ಕಳಿಗೆ ಎಳೆಯ ಪ್ರಾಯದಲ್ಲಿಯೇ ಸಮಾನತೆಯ ದ್ಯೋತಕವಾದ ವಚನಗಳನ್ನು ಪ್ರಚುರಪಡಿಸಿ ವಿಶ್ವಮಾನವರಾಗಲು ಅಣಿಗೊಳಿಸುತ್ತಿರುವುದು ಸ್ತುತ್ಯಾರ್ಹವಾದುದು. ಕಾಯಕದಿಂದ ಜೀವನ ಸಾಗಿಸುವ ಪ್ರವೃತ್ತಿ ಮಕ್ಕಳಲ್ಲಿ ಮೈಗೂಡಿದ್ದೇ ಆದರೆ ಸದೃಢ ಸಮಾಜ ನಿರ್ಮಾಣ ಮಾಡಲ ಸಾಧ್ಯ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಪ್ರತಿಯೊಬ್ಬರ ಜೀವನವೂ ಸಾರ್ಥಕತೆಯ ಹಾದಿಯಲ್ಲಿ ರೂಪುಗೊಳ್ಳಬೇಕಾದರೆ ವಚನಕಾರರ ಜೀವನವೇ ನೈಜ ಉದಾಹರಣೆಯಾಗಿದೆ. ಬಡವ, ಬಲ್ಲಿದ, ಮೇಲು, ಕೀಳು ಎಂಬ ಭೇದವಿಲ್ಲದೆ ಎಲ್ಲರನ್ನೂ ಅಪ್ಪಿಕೊಂಡು ವಿಚಾರಕ್ರಾಂತಿಗೆ ಕಾರಣವಾದ ವಚನ ಸಾಹಿತ್ಯ ಎಲ್ಲಾ ಕಾಲಘಟ್ಟದಲ್ಲಿಯೂ ಕೂಡ ಅನ್ವಯವಾಗುತ್ತದೆ ಎಂದರು. ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪಕುಮಾರಸ್ವಾಮಿ ಮಾತನಾಡಿ ಬಸವಣ್ಣನವರ ಅಸ್ಪøಶ್ಯತೆ ನಿವಾರಣೆ, ಸಾಮಾಜಿಕ ಸಮಾನತೆ ಕಂಡು ದೇಶದ ಮಹಾನ್ ವ್ಯಕ್ತಿಗಳಾದ ಮಹಾತ್ಮಗಾಂಧಿ ಮತ್ತು ರಾಧಾಕೃಷ್ಣನ್ ಶ್ಲಾಘನೀಯ ಮಾತುಗಳನ್ನಾಡಿದ್ದಾರೆ. ಇಂದು ನಾವು ವಚನಕಾರರನ್ನು ಪೂಜೆ ಮಾಡುವುದಕ್ಕಷ್ಟೇ ಸೀಮಿತವಾಗದೆ ಅವರ ವಚನಗಳ ಬಗ್ಗೆ ವಿಚಾರಸಂಕಿರಣ, ಚರ್ಚೆ ಮುಂತಾದ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಿ ಅವರ ತತ್ವಗಳನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದರು. ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ತಾಲ್ಲೂಕು ಅಧ್ಯಕ್ಷ ಕೆ.ಎಂ.ಮಹೇಶ್, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಸರಗೂರು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದಡದಹಳ್ಳಿ ಗುರುಸ್ವಾಮಿ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ್, ಸಂಸ್ಕøತ ಶಿಕ್ಷಕ ದೊರೆಸ್ವಾಮಿ, ಶಿಕ್ಷಕರಾದ ಅನಿಲ್, ಪ್ರಕಾಶ್, ಚಂದ್ರಶೇಖರ್, ರೋಜಾ ಉಪಸ್ಥಿತರಿದ್ದರು.
                                  ---------------------------------------------------------------------



ಮೈಸೂರು :- ವಿದ್ಯಾರ್ಥಿಗಳಾಗಿದ್ದಾಗಲೇ ಸಂಸ್ಕಾರ ರೂಡಿಸಿಕೊಳ್ಳಲು ವಚನ ಸಾಹಿತ್ಯ ಸಹಕಾರಿಯಾಗಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮಂಡ್ಯದ ಸಾಯಿ ನಳಂದ ವಿದ್ಯಾಲಯದಲ್ಲಿ ಚಂದ್ರಕಲಾವತಿ ಶಿವಸ್ವಾಮಿ ದತ್ತಿ ಅಂಗವಾಗಿ ನಡೆಸಿದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿ ಜೀವನವನ್ನು ಚಿನ್ನಕ್ಕೆ ಹೋಲಿಸುತ್ತಾರೆ ಅದನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ವಿದ್ಯೆಯ ಜೊತೆಗೆ ವಿನಯವನ್ನು ಮೈಗೂಡಿಸಿಕೊಂಡು ಗುರುಹಿರಿಯರಿಗೆ ಹಾಗೂ ನೆರೆಹೊರೆಯವರಿಗೆ ಗೌರವವನ್ನು ಕೊಡುವುದನ್ನು ರೂಡಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಹೇಳಿದರು. ್ಲ  ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಕಣ್ಣಿಗೆ ಕಾಣುವ ದೇವರಾದ ತಂದೆತಾಯಿಗಳನ್ನು ಹಾಗೂ ಗುರುಗಳನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ಪಠ್ಯದಲ್ಲಿಯೇ ಅಳವಡಿಕೆಯಾಗಿರುವ ಶರಣರ ವಚನಗಳನ್ನು ಪರೀಕ್ಷೆಗೋಸ್ಕರ ಕಲಿಯದೆ ಜೀವನದಲ್ಲಿ ಅಳವಡಿಸಿಕೊಂಡರೆ ಮೌಲ್ಯಯುತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದು ಹೇಳಿದರು. ದತ್ತಿ ದಾನಿಗಳಾದ ನಿವೃತ್ತ ಮುಖ್ಯಶಿಕ್ಷಕ ಶಿವಸ್ವಾಮಿ ಮಾತನಾಡಿ ನಾವು ಗಳಿಸಿದ ಹಣ ಸದ್ವಿನಿಯೋಗವಾದಾಗ ಮಾತ್ರ ಬೆಲೆ ಇರುತ್ತದೆ ದುಡಿದು ತಿನ್ನುವುದನ್ನು ಶರಣರು ವಚನಗಳಲ್ಲಿ ತಿಳಿಸಿದ್ದಾರೆ ವಚನಗಳಲ್ಲಿ ಅಳವಡಿಕೆಯಾಗಿರುವ ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಬಸವ ಫೌಂಡೇಷನ್ ಅಧ್ಯಕ್ಷೆ ಅಪರ್ಣ ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಚನ ವಾಚನ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೂ ವಚನದೀವಿಗೆ ಪ್ರಶಂಸಾ ಪತ್ರ ಮತ್ತು ವಚನಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಪಂಪಾಪತಿ, ಶಿಕ್ಷಕರುಗಳಾದ ನಾಗರಾಜು, ಶಿಲ್ಪಶ್ರೀ, ಶೃತಿ, ಅರ್ಚನಾ, ಧನಲಕ್ಷ್ಮಿ, ಸೆಲ್ವಮೇರಿ, ವಿಶಾಲಾಕ್ಷಿ, ಸ್ಟೆಲ್ಲಾ, ರಮ್ಯ ಉಪಸ್ಥಿತರಿದ್ದರು.
                                                         ----------------------------------------

ಜೆ.ಎಸ್.ಎಸ್‌ ಪ್ರೌಢಶಾಲೆ, ಸುತ್ತೂರು ನಂಜನಗೂಡು ತಾ.


ಸ್ಯಾಂಡಲ್‌ ರೋಸ್‌ ಕಾನ್ವೆಂಟ್‌, ಡಿ. ಸಾಲುಂಡಿ, ಮೈಸೂರು ತಾ.


ಅರಮನೆ ಟೆಂಟ್‌ ಶಾಲೆಯ ಮಾವುತರು ಹಾಗೂ ಕಾವಾಡಿಗರ ಮಕ್ಕಳಿಗೆ ನೋಟ್‌ ಬುಕ್‌, ವಚನ ಪಸ್ತಕ ಹಾಗೂ ಪ್ರಶಂಸನಾ ಪತ್ರ ವಿತರಣೆ
------------------------------------------------------------------------------------

೨೦೨೦ ರ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮಗಳು


  ಸ.ಹಿ.ಪ್ರಾ.ಶಾಲೆ, ಹದಮಗೆರೆ, ನಾಗಮಂಗಲ ತಾ. ಮಂಡ್ಯ ಜಿಲ್ಲೆ.


ಸ.ಹಿ.ಪ್ರಾ.ಶಾಲೆ, ಇಮ್ಮಾವು, ನಂಜನಗೂಡು ತಾ.


ಸ.ಹಿ.ಪ್ರಾ.ಶಾಲೆ, ಕೆಗ್ಗೆರೆ, ಕುಣಿಗಲ್‌ ತಾ. ತುಮಕೂರು ಜಿಲ್ಲೆ.


ಶ್ರೀ ಗುರುಮಲ್ಲೇಶ್ವರ ಪ್ರೌಢಶಾಲೆ, ಹರವೆ, ಚಾಮರಾಜನಗರ ತಾ. ಮತ್ತು ಜಿಲ್ಲೆ



------------------------------------------------
2021 ರ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮಗಳು



ಮೌಲಾನ ಅಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಶೋಭ ಗಾರ್ಡನ್, ಮೈಸೂರು


ಸ.ಹಿ.ಪ್ರಾ. ಶಾಲೆ, ಎಚ್ ಎಚ್ ಎಂ ಓ ಐ ಜಲಪುರಿ, ಮೈಸೂರು


        ಸ.ಹಿ.ಪ್ರಾ. ಶಾಲೆ, ಎಂ.ಸಿ.ಸಿ ಕಾಲೋನಿ, ಮೈಸೂರು


              ಸ.ಹಿ.ಪ್ರಾ. ಶಾಲೆ, ಮೇದರ್ಸ್ ಬ್ಲಾಕ್, ಮೈಸೂರು






2022-23