Tuesday, April 17, 2018

ಶಾಲೆಗಳೆಡೆಗೆ ವಚನಗಳ ನಡಿಗೆ

Updated date 11.02.2019 By Rudresh P V





2016 ನೇ ಸಾಲಿನ  ಶಾಲೆಗಳೆಡೆಗೆ ವಚನಗಳ ನಡಿಗೆ ವಿವರ

ಶರಣು ವಿಶ್ವ ವಚನ ಫೌಂಡೇಶನ್ 2 ಫೆಬ್ರವರಿ 2016 ರಂದು ಮೈಸೂರು ತಾಲ್ಲೂಕಿನ ಡಿ.ಸಾಲುಂಡಿ ಗ್ರಾಮದ ಸ್ಯಾಂಡಲ್ ರೋಸ್ ವಿದ್ಯಾಸಂಸ್ಥೆಯಲ್ಲಿ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವ ವಚನ ಫೌಂಡೇಶನ್  ಸಂಸ್ಥಾಪಕರಾದ ವಚನ ಕುಮಾರಸ್ವಾಮಿ  ಸ್ಯಾಂಡಲ್ ರೋಸ್ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಶೋಭಾ ಶಿವರಾಜು.ಚಾಮುಂಡೇಶ್ವರಿ ಕ್ಷೇತ್ರದ ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ದೊರೆಸ್ವಾಮಿ ಕಾರ್ಯಕ್ರಮದಲ್ಲಿ  ಸಾಲುಂಡಿ ಕ್ಲಸ್ಟರ್ ಸಿ.ಆರ್.ಪಿ ರಮೇಶ್, ಉಮಾ ಮಹೇಶ್ವರಿ,ಹೇಮಾ ದೊಡ್ಡಯ್ಯ,ಸಂಸ್ಥೆಯ ಅಧ್ಯಕ್ಷ ಬಸವಯ್ಯ,ನಂದಿನಿ ರಮೇಶ್, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



ಶರಣು ವಿಶ್ವವಚನ ಫೌಂಡೇಷನ್ ಬೋಗಾದಿಯ ದೀಪನಗರದಲ್ಲಿರುವ ದೀಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾರ್ಚ5, 2016 ರಂದು  ನಡೆಸಿದ  "ಶಾಲೆಗಳೆಡೆಗೆ ವಚನಗಳ ನಡಿಗೆ" ಕಾರ್ಯಕ್ರವನ್ನು ದೀಪ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷರಾದ ರಾಮಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  ಮೈಸೂರು ಜಿಲ್ಲೆಯ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಿನ್ಕಲ್ ಬಸವರಾಜು, .ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ವಚನ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ದೀಪ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ದಿವಾಕರ್, ಹರಿವಿದ್ಯಾಲಯ ಸಂಸ್ಥೆಯ ಕಾರ್ಯದರ್ಶಿ ಭಗವಾನ್, ಪಿ.ಆರ್.ಓ ಅಂಬರೀಷ್, ಮುಖ್ಯಶಿಕ್ಷಕ ಮಹದೇವಯ್ಯ, ಶಿಕ್ಷಕರಾದ ಬಾಬು ಎ.ಕೆ,ಚಂದನ್ ಕುಮಾರ್, ಸರ್ವೇಶ್, ಚಂದ್ರಶೇಖರ್, ಲಿಂಗಾನಂದ್, ಚಂದ್ರಿಕ, ಗಾಯತ್ರಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.



ಶರಣು ವಿಶ್ವವಚನ ಫೌಂಡೇಶನ್ ಮೈಸೂರಿನ ಬೃಂದಾವನ ಬಡಾವಣೆಯ ರೋಟರಿ ಬೃಂದಾವನ ಶಾಲೆಯಲ್ಲಿ 9 ಸೆಪ್ಟೆಂಬರ್ 2016 ರಂದು ಆಯೋಜಿಸಿದ್ದ "ಶಾಲೆಗಳೆಡೆಗೆ ವಚನಗಳ ನಡಿಗೆ" ಎಂಬ ಕಾರ್ಯಕ್ರಮದಲ್ಲಿ ವಚನಗಾಯನ ಮಾಡಿ ಬಹುಮಾನ ಪಡೆದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಆಸ್ಟ್ರೇಲಿಯಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಶಿವಕುಮಾರ್ ರಾವಂದೂರು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಶ್ರೀಕಂಠಮೂರ್ತಿ, ಪ್ರಾಂಶುಪಾಲರಾದ ಮಮತ ಉಪಸ್ಥಿತರಿದ್ದರು. 


ಶರಣು ವಿಶ್ವವಚನ ಫೌಂಡೇಶನ್ ಹೆಗ್ಗಡದೇವನಕೋಟೆ ತಾಲ್ಲೂಕು ಸರಗೂರು ಹೋಬಳಿಯ ದಡದಹಳ್ಳಿ ಪ್ರೌಢಶಾಲೆಯಲ್ಲಿ  16 ಸೆಪ್ಟೆಂಬರ್ 2016ರಂದು ಆಯೋಜಿಸಿದ್ದ "ಶಾಲೆಗಳೆಡೆಗೆ ವಚನಗಳ ನಡಿಗೆ" ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕಗಳನ್ನು ನೀಡಲಾಯಿತು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಹೆಗ್ಗಡದೇವನಕೋಟೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಮಹದೇವಸ್ವಾಮೀಜಿ ಕಾರ್ಯಕ್ರಮದಲ್ಲಿ ದಡದಹಳ್ಳಿ ಗುರುಸ್ವಾಮಿ, ಶ್ರೀಕಂಠಮೂರ್ತಿ,ಮುಖ್ಯಶಿಕ್ಷಕ ಆದಿನಾರಾಯಣ,ಸಣ್ಣಕೂಸಪ್ಪ,ಚನ್ನಬಸಪ್ಪದೇವರು,ಚನ್ನಪ್ಪ,ಗಣಪತಿ,ಪ್ರಕಾಶ್,ಕಸ್ತೂರಿ ಮಹೇಶ್, ಶಿವಣ್ಣ, ಮಾದಪ್ಪ, ದಡದಹಳ್ಳಿ ಮಹೇಶ್, ಸುರೇಶ್, ವೀರಭದ್ರಪ್ಪ ಶಿಕ್ಷಕರುಗಳಾದ ಮಹದೇವಿ, ಭಾಸ್ಕರ್, ಧನಂಜಯ, ಅನಿಲ್‍ಕುಮಾರ್ ಗೋಲಾಬಾವಿ, ನಾಗೇಂದ್ರಯ್ಯ ಉಪಸ್ಥಿತರಿದ್ದರು.



ಶರಣು ವಿಶ್ವವಚನ ಫೌಂಡೇಶನ್ ಮೈಸೂರು ತಾಲ್ಲೂಕು ಮುಳ್ಳೂರು ವಿನಾಯಕ ಜ್ಞಾನವಿದ್ಯಾ ಶಾಲೆಯಲ್ಲಿ   25 ಅಕ್ಟೋಬರ್ 2016ರಂದು ಆಯೋಜಿಸಿದ್ದ "ಶಾಲೆಗಳೆಡೆಗೆ ವಚನಗಳ ನಡಿಗೆ" ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕಗಳನ್ನು ನೀಡಲಾಯಿತು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಕವಯತ್ರಿ ರತ್ನ ಹಾಲಪ್ಪಗೌಡ, ರೂಪಕುಮಾರಸ್ವಾಮಿ, ಶ್ರೀಕಂಠಮೂರ್ತಿ ಉಪಸ್ಥಿತರಿದ್ದರು.




ಶರಣು ವಿಶ್ವವಚನ ಫೌಂಡೇಷನ್ ಕಲಬುರಗಿಯ ವಿಶ್ವನಾಥರೆಡ್ಡಿ ಮುದ್ನಾಳ್ ಕಾಲೇಜಿನಲ್ಲಿ 15 ಅಕ್ಟೋಬರ್ 2016 ರಂದು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ಆಯೋಜಿಸಲಾಯಿತು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಕಲಬುರಗಿ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಡಾ. ಶರಣ ಬಸಪ್ಪ ವಡ್ಡನಕೇರಿ ಉಪಸ್ಥಿತರಿದ್ದರು.





2017 ನೇ ಸಾಲಿನ  ಶಾಲೆಗಳೆಡೆಗೆ ವಚನಗಳ ನಡಿಗೆ ವಿವರ


ಶರಣು ವಿಶ್ವವಚನ ಫೌಂಡೇಶನ್ ಗುಂಡ್ಲುಪೇಟೆ ತಾಲ್ಲೂಕು ಬೇಗೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 26 ಜೂನ್ 2017 ರಂದು ಹಮ್ಮಿಕೊಂಡಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನಪಸ್ತಕ ನೀಡಿ ಅಭಿನಂದಿಸಲಾಯಿತು.  ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಶರಣು ವಿಶ್ವವಚನ ಫೌಂಡೇಶನ್ ಕೇಂದ್ರೀಯ ಸಮಿತಿ ಸಂಚಾಲಕರಾದ ಲಿಂಗಣ್ಣ, ಶರಣು ವಿಶ್ವವಚನ ಫೌಂಡೇಶನ್ ಕೇಂದ್ರೀಯ ಸಮಿತಿ ಸಂಚಾಲಕರಾದ ಜಮೀನ್ದಾರ್ ಮಹೇಶ್ ಮಹೀ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಬಸವಣ್ಣ, ನಿಲಯಪಾಲಕರಾದ ಎಚ್.ಎನ್.ಮಂಜುನಾಥ್, ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



18 ಆಗಸ್ಟ್ 2017 ರಂದು ಶರಣು ವಿಶ್ವವಚನ ಫೌಂಡೇಷನ್ ಬೆಂಗಳೂರಿನ ಬೊಮ್ಮಸಂದ್ರ ಎಸ್ ಕೆ ಪಬ್ಲಿಕ್ ಶಾಲೆಯಲ್ಲಿ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಶಂಕರಪ್ಪ, ಡಾ. ಶಶಿಧರ್, ಹಿರೇಮಥ್, ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಕಣ್ಣೂರು ಕುಮಾರಸ್ವಾಮಿ ಉಪಸ್ಥಿತರಿದ್ದರು.




26 sಸೆಪ್ಟೆಂಬರ್ 2017ರಂದು  ಮೈಸೂರನ ಅರಮನೆಯ ಟೆಂಟ್‍ಶಾಲೆಯಲ್ಲಿ ಮಾವುತ ಮತ್ತು ಕಾವಾಡಿಗರ ಮಕ್ಕಳಿಗೆ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಯು.ಎಂ. ಉಮಾಮಹದೇವಸ್ವಾಮಿ, ಕಾರ್ಯಕ್ರಮದಲ್ಲಿ ಮಾವುತರ ಉಸ್ತುವಾರಿ ವೈಧ್ಯರಾದ  ಡಾ.ನಾಗರಾಜು, ಜಿಲ್ಲಾ  ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಶ್ರೀಕಂಠಮೂರ್ತಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಶಿಕ್ಷಕಿ ನೂರ್‍ಫಾತಿಮಾ ಉಪಸ್ಥಿತರಿದ್ದರು.




ಚಿತ್ರದುರ್ಗ ಜಿಲ್ಲೆ ಚಳ್ಳೆಕೆರೆ ತಾಲ್ಲೂಕು ತಳಕು ಮಾರುತಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ 09 ಅಕ್ಟೋಬರ್ 2017ರಂದು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ  ಶರಣು ವಿಶ್ವವಚನ ಫೌಂಡೇಶನ್ ಅಂತರ್ಜಾಲ ಸಂಚಾಲಕ ಪಿ.ವಿ.ರುದ್ರೇಶ್ ಉಪಸ್ಥಿತರಿದ್ದರು.



ಶರಣು ವಿಶ್ವವಚನ ಫೌಂಡೇಶನ್ ಮತ್ತು ಸ್ಯಾಂಡಲ್‍ರೋಸ್ ಕಾನ್ವೆಂಟ್ ಸಹಯೋಗದೊಂದಿಗೆ ಡಿ.ಸಾಲುಂಡಿಯ ಪ್ರಥಮ ಕನ್ವೆನ್ಷನ್ ಹಾಲ್‍ನಲ್ಲಿ 6 ನವೆಂಬರ 2017 ರಂದು ನಡೆದ “ ಶಾಲೆಗಳೆಡೆಗೆ ವಚನಗಳ ನಡಿಗೆ” ಎಂಬ  ಕಾರ್ಯಕ್ರಮವನ್ನು ಮೈಸೂರು ಎಸ್.ಎಂ.ಪಿ. ಫೌಂಡೇಶನ್ ಅಧ್ಯಕ್ಷ ಎಸ್.ಎಂ.ಶಿವಪ್ರಕಾಶ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಬಸವಬಳಗ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಎಂ.ಎಚ್.ಮಹದೇವಸ್ವಾಮಿ, ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಎಚ್.ಡಿ.ಕೋಟೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಮಂಜುನಾಥ್, ಶರಣು ವಿಶ್ವವಚನ ಫೌಂಡೇಶನ್ ನಿದೇಶಕಿ ರೂಪ ಕುಮಾರಸ್ವಾಮಿ, ಸ್ಯಾಂಡಲ್ ರೋಸ್ ಕಾನ್ವೆಂಟ್ ಸಂಸ್ಥಾಪಕ ಕಾರ್ಯದರ್ಶಿ ಬಿ. ಶೋಭಾ ಶಿವರಾಜು, ಲತಾ ಬಸಪ್ಪ, ನಿಂಗೇಗೌಡ, ಪಂಪಾಪತಿ, ಲಿಂಗಣ್ಣ, ಪ್ರಭುಸ್ವಾಮಿ ಉಪಸ್ಥಿತರಿದ್ದರು



ಶರಣು ವಿಶ್ವವಚನ ಫೌಂಡೇಶನ್ 9 ನವೆಂಬರ್ 2017 ರಂದು  ಜೆ.ಎಸ್.ಎಸ್ ಪ್ರೌಢಶಾಲೆ, ವಿಜಯನಗರ ವಿದ್ಯಾಸಂಸ್ಥೆಯಲ್ಲಿ  “ ಶಾಲೆಗಳೆಡೆಗೆ ವಚನಗಳ ನಡಿಗೆ” ಎಂಬ ಕಾರ್ಯಕ್ರಮ ನಡೆಸಿ ವಚನ ವಾಚನ ಮಾಡಿದ ಮಕ್ಕಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ  ಶ್ರೀ ಎಂ.ಎಂ.ನಿಖಿಲೇಶ್, ಸಂಸ್ಥಾಪಕರು, ಕಲಿಸು ಫೌಂಡೇಶನ್, ಮೈಸೂರು, ಶ್ರೀ ವಚನ ಕುಮಾರಸ್ವಾಮಿ, ಶ್ರೀ ವಿ. ನಾಗೇಶ್, ರೂಪ ಕುಮಾರಸ್ವಾಮಿ ಉಪಸ್ಥಿತರಿದ್ದರು.





ಶರಣು ವಿಶ್ವವಚನ ಫೌಂಡೇಶನ್ ಮತ್ತು ರೋಟರಿ ಸಂಸ್ಥೆ ಸಹಯೋಗದೊಂದಿಗೆ ಹೆಗ್ಗಡದೇವನಕೋಟೆ ತಾಲ್ಲೂಕು ಆಲನಹಳ್ಳಿಯ ಶ್ರೀ ಚಂದ್ರಮೌಳೇಶ್ವರ ಮಲ್ಲಿಕಾರ್ಜುನಸ್ವಾಮಿ ವಿದ್ಯಾಸಂಸ್ಥೆಯಲ್ಲಿ 10 ನವೆಂಬರ್ 2017 ರದು  ನಡೆದ “ಶಾಲೆಗಳೆಡೆಗೆ ವಚನಗಳ ನಡಿಗೆ” ಎಂಬ  ಕಾರ್ಯಕ್ರಮದಲ್ಲಿ ವಚನ ವಾಚನ ಮಾಡಿದ ಮಕ್ಕಳಿಗೆ ವಚನದೀವಿಗೆ ಪ್ರಮಾಣ ಪತ್ರ ಮತ್ತು ವಚನ ಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾದಾಪುರ ಚಂದ್ರಮೌಳೇಶ್ವರ ಮಠದ ಮಲ್ಲಿಕಾರ್ಜುನಸ್ವಾಮೀಜಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ರೋಟರಿ ಸಂಸ್ಥೆಯ ಅಧ್ಯಕ್ಷ ನಾರಾಯಣಲಾಲ್, ಕಾರ್ಯದರ್ಶಿ ಕೃಷ್ಣ,  ತಾಲ್ಲೂಕು ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಮಹೇಶ್ ಉಪಸ್ಥಿತರಿದ್ದರು.



ಶರಣು ವಿಶ್ವವಚನ ಫೌಂಡೇಷನ್ ಮತ್ತು ಅನುರಾಗ ಸೇವಾ ಟ್ರಸ್ಟ್ ಸಹಯೋಗದೊಂದಿಗೆ 25 ನವೆಂಬರ್ 2017 ರಂದು  ನಂಜನಗೂಡು ತಾಲ್ಲೂಕಿನ ಸ.ಹಿ.ಪ್ರಾ.ಶಾಲೆ ಕಲ್ಕುಂದದಲ್ಲಿ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಬಸವರಾಜಪ್ಪ, ಬಸವಣ್ಣ, ಸೋಮಶೇಖರಮೂರ್ತಿ, ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಸಿದ್ಧರಾಜು, ಶಶಿಕಲಾ ಗಿರೀಶ್ ಉಪಸ್ಥಿತರಿದ್ದರು.



2018 ನೇ ಸಾಲಿನ  ಶಾಲೆಗಳೆಡೆಗೆ ವಚನಗಳ ನಡಿಗೆ ವಿವರ



ಶರಣು ವಿಶ್ವವಚನ ಫೌಂಡೇಷನ್ 6 ಫೆಬ್ರವರಿ 2018 ಮೈಸೂರು ಶ್ರೀರಾಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ವಚನ ಗಾಯನ, ವಾಚನ ಮತ್ತು ತಾತ್ಪರ್ಯ ಮಾಡಿದ ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನಪುಸ್ತಕ ನೀಡಿ ಅಭಿನಂದಿಸಲಾಯಿತು.

1

ಕಲಬುರಗಿ ಜಿಲ್ಲೆ ಕಮಲಾಪುರದ ಮಹಾಗಾಂವ ಕಳ್ಳಿಮಠದಲ್ಲಿ 10 ಫೆಬ್ರವರಿ 2018ರಂದು ನಡೆದ ಶಾಲೆಗಳೆಡೆಗೆ ವಚನಗಳ ನಡಿಗೆ
======================================================================

ನಂಜನಗೂಡು:-ವಚನಸಾಹಿತ್ಯ ವಿಶ್ವಭ್ರಾತೃತ್ವ ಮತ್ತು ಸಮಾನತೆಯನ್ನು ಬಿಂಬಿಸುತ್ತದೆ ಎಂದು ಜೆ.ಎಸ್.ಎಸ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಸೋಮಸುಂದರ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ನಂಜನಗೂಡಿನ ಜೆ.ಎಸ್.ಎಸ್ ಪ್ರೌಢಶಾಲೆಯಲ್ಲಿ 20 ಆಗಸ್ಟ್ 2018ರಂದು ಆಯೋಜಿಸಿದ್ದ "ಶಾಲೆಗಳೆಡೆಗೆ ವಚನಗಳ ನಡಿಗೆ"ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶರಣರು ಎಲ್ಲಾ ಜನರನ್ನು ಮಾನವೀಯತೆಯ ನೆಲಗಟ್ಟಿನಲ್ಲಿ ಒಂದೆಡೆ ಸೇರಿಸಿ ಅವರಲ್ಲಿದ್ದ ಪ್ರತಿಭೆಯನ್ನು ಅನುಭವಮಂಟಪದ ಮುಖಾಂತರ ಹೊರತಂದರು.ಅನುಭವ ಮಂಟಪವು ಎಲ್ಲಾ ವರ್ಗದವರಲ್ಲಿದ್ದ ಜಾÐನವನ್ನು ವಿನಿಮಯ ಮಾಡಿಕೊಂಡು ಒಂದು ಬಗೆಯ ಸಮ ಹಾಗೂ ಶರಣ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡರು.ಇಂದು ಅವರ ವಚನಗಳ ಆಶಯ ಎಲ್ಲರಿಗೂ ಅರ್ಥವಾಗುತ್ತಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಮಾತನಾಡಿ ಬಾಗಿದ ತಲೆ,ಮುಗಿದ ಕೈಯಾಗಿರಿಸು ಎಂದ ಬಸವಣ್ಣನವರ ಬಳಿ ಅಹಂ ಮಮಕಾರಗಳು ಅವರತ್ತ ಸುಳಿಯಲಿಲ್ಲ.ಆಧ್ಯಾತ್ಮ ಜೀವನದಲ್ಲಿ ಬಾನೆತ್ತರ ತಲುಪಿದರೂ ಅಲ್ಲಿ ನೆಲೆ ನಿಲ್ಲದೆ,ದೀನ-ದಲಿತರ ಮೇಲೆತ್ತಲು ಭೂಮಿಗಿಳಿದ ಕಾರುಣ್ಯಮೂರ್ತಿ.ವಿಶ್ವದ ಎಲ್ಲಾ ಮಾನವೀಯತೆ ಗುಣಗಳನ್ನು ರಾಶಿ ಸುರಿದರೆ ಬಸವಣ್ಣನವರಿಗೆ ಸರಿಸಾಟಿಯಿಲ್ಲ.ಬಸವಣ್ಣನವರ ಆದಿಯಾಗಿ ಎಲ್ಲಾ ವಚನಕಾರರ ವಚನಗಳನ್ನು ಅಧ್ಯಯನ ಮಾಡಿದರೆ ವಿದ್ಯೆಯ ಜೊತೆಗೆ ವಿನಯತೆಯೂ ಮೈಗೂಡುತ್ತದೆ ಎಂದರು. ನಂತರ ಮಾತನಾಡಿದ ಅನುರಾಗ ಸೇವಾಟ್ರಸ್ಟ್ ಸಂಸ್ಥಾಪಕ ಸೋಮಶೇಖರ್ ಎಳೆಯ ವಯಸ್ಸಿನಲ್ಲಿ ವಚನಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಲು ಶರಣು ವಿಶ್ವವಚನ ಫೌಂಡೇಷನ್ ಪ್ರಯತ್ನಿಸುತ್ತಿರುವುದು ಸ್ತುತ್ಯಾರ್ಹವಾದ ಕೆಲಸ, ವಚನಗಳನ್ನು ಅರಿತು ಅದರಂತೆ ನಡೆದಾಗ ಮಾತ್ರ ಸುಸಂಸ್ಕøತ ಸಮಾಜ ನಿರ್ಮಾಣವಾಗುತ್ತದೆ ಎಂದರು. ನಂತರ ವಚನ ವಾಚನ ಮಾಡಿದ ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣಪತ್ರ ಮತ್ತು ವಚನಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಗುರುಮಲ್ಲೇಶ್ವರ ಮಹಿಳಾ ಪತ್ತಿನ ಸಹಕಾರ ನಿಯಮಿತ ಅಧ್ಯಕ್ಷೆ ನಂದಿನಿ, ತಾಲ್ಲೂಕು ಅಧ್ಯಕ್ಷೆ ಶಶಿಕಲಾ ಗಿರೀಶ್,ಉಪಾಧ್ಯಕ್ಷ ಕಣೆನೂರು ನಾಗೇಶ್‍ಮೂರ್ತಿ ಕಾರ್ಯಾಧ್ಯಕ್ಷ ಪಂಪಾಪತಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಮಾಧ್ಯಮಸಂಚಾಲಕ ನಾಗೇಂದ್ರ,  ಕಾವೇರಿ ಅನಿಲ್, ಕೋಮಲ,  ಉಪಸ್ಥಿತರಿದ್ದರು. 
=====================================================================
ಚಿತ್ರಸುದ್ಧಿ: ಶರಣು ವಿಶ್ವವಚನ ಫೌಂಡೇಷನ್ ತಮಿಳುನಾಡು ರಾಜ್ಯದ ತಾಳವಾಡಿ ತಾಲ್ಲೂಕು ಪಾಳ್ಯಂ ಪ್ರಾಥಮಿಕ ಶಾಲೆಯಲ್ಲಿ 8ಮಾರ್ಚ್ 2018ರಂದು ಹಮ್ಮಿಕೊಂಡಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ವಚನಗಾಯನ, ವಚನ ವಾಚನ ಮತ್ತು ತಾತ್ಪರ್ಯ ಮಾಡಿದ ವಿದ್ಯಾರ್ಥಿಗಳಿಗೆ ವಚನಪುಸ್ತಕ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕರಾದ ಲಿಂಗಣ್ಣ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಪೌಂಡೇಷನ್ ಕಾರ್ಯಾಧ್ಯಕ್ಷ ಬಿ.ಪಂಪಾಪತಿ, ಉಪಾಧ್ಯಕ್ಷ ಮುಡಿಗುಂಡ ಪುಟ್ಟಪ್ಪ, ಮಾಧ್ಯಮ ಸಂಚಾಲಕ ನಾಗೇಂದ್ರ, ಶಾಲಾ ಮುಖ್ಯಶಿಕ್ಷಕ ಜಯರಾಂ, ಸಹಶಿಕ್ಷಕಿ ಮಹದೇವಿ ಉಪಸ್ಥಿತರಿದ್ದರು.
========================================================================

ಮೈಸೂರು :- ವಚನಗಳು ಸಾಮಾಜಿಕ ಮತ್ತು ವೈಚಾರಿಕ ಪ್ರಜೆÐ ಬೆಳೆಸುತ್ತವೆ ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಅಧ್ಯಕ್ಷ ಪಿ.ಮಹೇಶ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಅರಮನೆಯ ಟೆಂಟ್‍ಶಾಲೆಯಲ್ಲಿ ಮಾವುತರ ಮತ್ತು ಕಾವಾಡಿ ಮಕ್ಕಳಿಗೆ ನಡೆಸಿದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದ ಅವರು ವಚನಕಾರರು ದನಗಾಹಿ ರಾಮಣ್ಣ ಮತ್ತು ಕುರುಬ ಗೊಲ್ಲಾಳ ಎಂಬ ವ್ಯಕ್ತಿಗಳಿಗೂ ಕೂಡ ಶಿಕ್ಷಣವನ್ನು ನೀಡಿ ಅವರು ಜ್ಞಾನವನ್ನು ಪಡೆಯುವಂತೆ ಸಾಕ್ಷರರನ್ನಾಗಿ ಮಾಡಿ ಅನೇಕ ವಚನಗಳನ್ನು ರಚಿಸಲು ಕಾರಣರಾದರು. 12 ನೇ ಶತಮಾನದ ವಚನಕಾರರಲ್ಲಿದ್ದ ಸಾಮಾಜಿಕ ಪ್ರಜ್ಞೆ ಇಂದಿನ ಅಕ್ಷರಸ್ಥರಲ್ಲಿ ಮನೆಮಾಡಿದ್ದೇ ಆದರೆ ಇಡೀ ದೇಶವೇ ನೂರಕ್ಕೆ ನೂರರಷ್ಟು ಸಾಕ್ಷರ ದೇಶವಾಗಬಹುದು ಎಂದರು. ವಚನ ಗಾಯನವನ್ನು ನಡೆಸಿಕೊಟ್ಟ ಸಂಗೀತ ಶಿಕ್ಷಕ ಜೆ.ನಿರಂಜನ್  ದೇವಲೋಕ, ಮತ್ರ್ಯಲೋಕವೆಂಬುದು ಬೇರಿಲ್ಲ ಕಾಣಿರೋ, ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ, ಹಾಡಿದೊಡೆ ಎನ್ನೊಡೆಯನ ಹಾಡುವೆ, ಂದು ಇಂದು ಮತ್ತೊಂದೆನಬೇಡ ಮುಂತಾದ  ವಚನಗಳನ್ನು ಮಕ್ಕಳಿಗೆ ಹೇಳಿಕೊಡುವುದರ ಮುಖಾಂತರ ಮಕ್ಕಳಲ್ಲಿ ವಚನ ಗಾಯನದ ಬಗ್ಗೆ ಆಸಕ್ತಿ ಹೆಚ್ಚಿಸಿ ಮಕ್ಕಳೂ ಕೂಡ ಧ್ವನಿಗೂಡಿಸುವಂತೆ ಪ್ರೇರೇಪಿಸಿದರು. ವಚನ ವಾಚನ ಮತ್ತು ಗಾಯನ ಮಾಡಿದ 50 ಕ್ಕೂ ಹೆಚ್ಚು ಮಕ್ಕಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಕಾರ್ಯಾಧ್ಯಕ್ಷ ಪಂಪಾಪತಿ, ಮಾಧ್ಯಮ ಸಂಚಾಲಕ ನಾಗೇಂದ್ರ, ಮಂಜುಳ ಶಿವಪ್ರಸಾದ್, ಶೋಭ ಶಿವರಾಜ್, ಬಿ.ಆರ್.ಪಿ ಕುಸುಮ, ಶಿಕ್ಷಕರುಗಳಾದ ನೂರ್ ಫಾತಿಮಾ, ಅಕ್ಕಮ್ಮ, ಶೋಭಕುಮಾರಿ, ಲೈಬ್ರರಿಯನ್ ಯದುಕುಮಾರ್, ಶಿವರಾಜ್ ಉಪಸ್ಥಿತರಿದ್ದರು.
--------------------------------------------------------------------------------------------------------------------------

                                     2019 ರ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮಗಳು


ಮೈಸೂರು :- ವಚನ ಸಾಹಿತ್ಯ ಮೂಢನಂಬಿಕೆ, ಕಂದಾಚಾರ ಇವುಗಳನ್ನು ಹೋಗಲಾಡಿಸಿ ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮೈಸೂರಿನ ಮಂಜುನಾಥಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಗ್ ರಹಿತ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ಮಾನವನ ಬದುಕಿಗೆ ವಚನಗಳು ಸಹಾಯಕವಾಗಿದ್ದು ಅಂತಹ ವಚನಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಜೀವನದಲ್ಲಿ ಅಳವಡಿಸಿಕೊಂಡರೆ ತಮ್ಮ ಜೀವನಕ್ಕೆ ಬೆಲೆ ಬರುತ್ತದೆ. ಅಬ್ದುಲ್ ಕಲಾಂರವರು ಯಾರ ಸಹಿ ಆಟೋಗ್ರಾಫ್ ಆಗಿ ಬದಲಾಗುತ್ತದೋ ಅವರು ಸಾಧನೆಯನ್ನು ಮಾಡಿದ ವ್ಯಕ್ತಿಗಳು ಎಂದು ಹೇಳಿದ್ದಾರೆ. ಆದುದರಿಂದ ನಮಗೆ ಯಾವ ಕ್ಷೇತ್ರ ಇಷ್ಟವೋ ಅದನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸತತ ಪ್ರಯತ್ನದಿಂದ ಸಾಧನೆ ಮಾಡಿ ಲೋಕಮಾನ್ಯ ವ್ಯಕ್ತಗಳಾಗಿ ರೂಪುಗೊಳ್ಳಬೇಕು ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಶಿಕ್ಷಣ ಇಲಾಖೆ ಮಕ್ಕಳಿಗೆ ಪ್ರತಿದಿನ ಆಗುವಂತಹ ಬ್ಯಾಗ್ ಹೊರೆಯನ್ನು ಕಡಿಮೆ ಮಾಡಿ ತಿಂಗಳಲ್ಲಿ ಎರಡು ದಿನ ಮಕ್ಕಳು ಬ್ಯಾಗ್ ತರದೆ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬ್ಯಾಗ್ ರಹಿತ ದಿನವನ್ನು ಜಾರಿಗೆ ತಂದಿರುವುದು ಸ್ತುತ್ಯಾರ್ಹವಾದುದು. ಮಕ್ಕಳ ಸರ್ವಾಂಗೀಣ ಪ್ರಗತಿಗೆ ಹಾಗೂ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಪ್ರಸ್ತುತ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.  ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾವೇರಿ ಅನಿಲ್, ಮಾಧ್ಯಮ ಸಂಚಾಲಕ ನಾಗೇಂದ್ರ, ಶಿಕ್ಷಕರುಗಳಾದ ರಾಧಾ, ಗಣೇಶ್, ದೇವರಾಜ್, ಅಡುಗೆಯವರಾದ ರಾಧಾ, ಮಹದೇವಿ ಉಪಸ್ಥಿತರಿದ್ದರು.
====================================================================


ಮೈಸೂರು :- ವಚನಗಳು ಅಂತರಂಗದ ಅನುಭವದ ನುಡಿಗಳು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮೈಸೂರಿನ ಮಹಾದೇವಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಕ್ಕನ ಬಳಗ ಪ್ರೌಢಶಾಲೆಯಲ್ಲಿ  ಹಮ್ಮಿಕೊಂಡಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ  ವಚನ ಸಾಹಿತ್ಯ ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಿ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಯೋಚಿಸುವ ಆಲೋಚನೆಯನ್ನು  ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ. ಶರಣರು ಯಾವುದೇ ಮಡಿವಂತಿಕೆಯನ್ನು ತೋರದೆ ಎಲ್ಲರನ್ನು ಅಪ್ಪಿಕೊಂಡು ಸಮಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದರು ಎಂದರು.  ನಂತರ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಮಾತನಾಡಿ  ವಚನಗಳು ವಿದ್ಯೆಯ ಜೊತೆಗೆ ವಿನಯವನ್ನು ಕಲಿಸಿ ಸಂಸ್ಕಾರಯುತ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೌಲ್ಯಗಳಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ಶಾಲೆಯಲ್ಲಿ ಪ್ರತಿದಿನ ವಚನಗಳನ್ನು ಕಲಿಸುವುದರಿಂದ ಆ ಕೊರಗನ್ನು ಹೋಗಲಾಡಿಸಬಹುದು ಎಂದರು. ವಚನ ವಾಚನ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಶಂಸಾಪತ್ರ ಮತ್ತು ವಚನ ಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಮಹೇಶ್, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಉಪಾಧ್ಯಕ್ಷ ಮುಡಿಗುಂಡ ಪುಟ್ಟಪ್ಪ, ಪ್ರೇಮ ಪ್ರಭುಸ್ವಾಮಿ ಮಾಧ್ಯಮ ಸಂಚಾಲಕ ನಾಗೇಂದ್ರ, ಪ್ರೌಢಶಾಲಾ ಮುಖ್ಯಶಿಕ್ಷಕ ಶಿವಯ್ಯ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಎಂ.ಜೆ.ಸುಗುಣಾವತಿ, ಅನ್ನಪೂರ್ಣಮ್ಮ, ಪ್ರಭುಸ್ವಾಮಿ ಶಿಕ್ಷಕರುಗಳಾದ ಪುಷ್ಪಾವತಿ, ಮನೋರಮಾ, ರೇಷ್ಮ, ನಾಗರತ್ನ, ಶಿಲ್ಪ, ಪ್ರಮೋದಾ, ಶೀಲಾ, ವಸುಧ, ಪೋಷಕರಾದ ಕಾವೇರಿ, ಪುಷ್ಪ, ಉಪಸ್ಥಿತರಿದ್ದರು.
==================================================================

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಜಾಗೇರಿ (ಶಾಂತಿನಗರ) ಹಿರಿಯ ಪ್ರಾಥಮಿಕ ಶಾಲೆಯಲ್ಲಿ 24 ಜನವರಿ 2019 ರಂದು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ತಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಚಾಮರಾಜನಗರ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ವೀರಭದ್ರಸ್ವಾಮಿ, ಕೊಳ್ಳೇಗಾಲ ತಾಲ್ಲೂಕು ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷೆ ಜಗದಾಂಬ,  ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಉಪಾಧ್ಯಕ್ಷ ಮುಡಿಗುಂಡ ಪುಟ್ಟಪ್ಪ ಉಪಸ್ಥಿತರಿದ್ದರು.
=====================================================================

ಬೀದರ ಜಿಲ್ಲೆ ಹುಮ್ನಾಬಾದ್  ತಾಲ್ಲೂಕು ದುಮ್ಮನಸೂರ  ಸರ್ಕಾರಿ  ಕಿರಿಯ ಪ್ರಾಥಮಿಕ ಶಾಲೆಯಲ್ಲಿ 18 ಜನವರಿ 2019 ರಂದು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ತಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಬೀದರ್ ಜಿಲ್ಲಾಧ್ಯಕ್ಷ ಡಾ.ಗವಿಸಿದ್ದಪ್ಪ ಪಾಟೀಲ್, ಹುಮ್ನಾಬಾದ್ ತಾಲ್ಲೂಕು ಅಧ್ಯಕ್ಷೆ ರೂತಾ ತಾಳಮಡಗಿ ಉಪಸ್ಥಿತರಿದ್ದರು.
========================================================================

ಬೀದರ ಜಿಲ್ಲೆ ಬಸವ ಕಲ್ಯಾಣ ತಾಲ್ಲೂಕು ತಡೋಳ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ 18 ಜನವರಿ 2019 ರಂದು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ತಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಬೀದರ್ ಜಿಲ್ಲಾಧ್ಯಕ್ಷ ಡಾ.ಗವಿಸಿದ್ದಪ್ಪ ಪಾಟೀಲ್, ಹುಮ್ನಾಬಾದ್ ತಾಲ್ಲೂಕು ಅಧ್ಯಕ್ಷೆ ರೂತಾ ತಾಳಮಡಗಿ ಉಪಸ್ಥಿತರಿದ್ದರು.
=======================================================================
ಬೀದರ್ ಜಿಲ್ಲೆ ಹುಮನಾಬಾದ್ ಎಚ್ ಕೆ ಡಿ ಇ ಟಿ ಬಿ   ಬಿ.ಎಡ್ ಕಾಲೇಜಿನಲ್ಲಿ  4 ಜೂನ್ 2019 ರಂದು    ಬೀದರ್ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಘಟಕದಿಂದ ವಚನ ವಾಚನ ಮತ್ತು ಚಿಂತನಾ ಕಾರ್ಯಕ್ರಮ ನಡೆಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಡಾ ಗವಿಸಿದ್ದಪ್ಪ ಪಾಟೀಲ, ಎಂ ಎಸ್ ಉಪ್ಪಿನ, ಡಾ ಅರವಿಂದ ರಾಠೋಡ, ಪೀರಪ್ಪ ಸಜ್ಜನ ಉಪಸ್ಥಿತರಿದ್ದರು.
                                                      ___________________  






ಎಚ್ ಡಿ ಕೋಟೆ:- ಮನುಕುಲದಲ್ಲಿದ್ದ ಸಂಕುಚಿತ ಮನೋಭಾವನೆಯನ್ನು ಹೋಗಲಾಡಿಸಿ ಹೃದಯ ವೈಶಾಲ್ಯತೆಯನ್ನು ಬೆಳೆಸಲು ವಚನಗಳು ಸಹಕಾರಿಯಾಗಿವೆ ಎಂದು ಮಾದಾಪುರ ಚಂದ್ರಮೌಳೇಶ್ವರ ಮಠಾಧ್ಯಕ್ಷರಾದ ಮಲ್ಲಿಕಾರ್ಜುನಸ್ವಾಮೀಜಿ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ಮಾದಾಪುರ ಶ್ರೀ ಚಂದ್ರಮೌಳೇಶ್ವರಸಂಸ್ಥೆಯಲ್ಲಿ ಆಯೋಜಿಸಿದ್ದ “ ಶಾಲೆಗಳೆಡೆಗೆ ವಚನಗಳ ನಡಿಗೆ” ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ಆಧುನಿಕ ಪ್ರಪಂಚದಲ್ಲಿ ಸಂಸ್ಕಾರ ಎಂಬುದು ಮರೀಚಿಕೆಯಾಗಿದೆ ಆದರೆ ವಚನಗಳು ಅಂತಹ ಸಂಸ್ಕಾರ ಮೂಡಿಸಲು ಸಹಕಾರಿಯಾಗಿದ್ದು ಮಕ್ಕಳಿಗೆ ಎಳೆಯ ಪ್ರಾಯದಲ್ಲಿಯೇ ಸಮಾನತೆಯ ದ್ಯೋತಕವಾದ ವಚನಗಳನ್ನು ಪ್ರಚುರಪಡಿಸಿ ವಿಶ್ವಮಾನವರಾಗಲು ಅಣಿಗೊಳಿಸುತ್ತಿರುವುದು ಸ್ತುತ್ಯಾರ್ಹವಾದುದು. ಕಾಯಕದಿಂದ ಜೀವನ ಸಾಗಿಸುವ ಪ್ರವೃತ್ತಿ ಮಕ್ಕಳಲ್ಲಿ ಮೈಗೂಡಿದ್ದೇ ಆದರೆ ಸದೃಢ ಸಮಾಜ ನಿರ್ಮಾಣ ಮಾಡಲ ಸಾಧ್ಯ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಪ್ರತಿಯೊಬ್ಬರ ಜೀವನವೂ ಸಾರ್ಥಕತೆಯ ಹಾದಿಯಲ್ಲಿ ರೂಪುಗೊಳ್ಳಬೇಕಾದರೆ ವಚನಕಾರರ ಜೀವನವೇ ನೈಜ ಉದಾಹರಣೆಯಾಗಿದೆ. ಬಡವ, ಬಲ್ಲಿದ, ಮೇಲು, ಕೀಳು ಎಂಬ ಭೇದವಿಲ್ಲದೆ ಎಲ್ಲರನ್ನೂ ಅಪ್ಪಿಕೊಂಡು ವಿಚಾರಕ್ರಾಂತಿಗೆ ಕಾರಣವಾದ ವಚನ ಸಾಹಿತ್ಯ ಎಲ್ಲಾ ಕಾಲಘಟ್ಟದಲ್ಲಿಯೂ ಕೂಡ ಅನ್ವಯವಾಗುತ್ತದೆ ಎಂದರು. ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪಕುಮಾರಸ್ವಾಮಿ ಮಾತನಾಡಿ ಬಸವಣ್ಣನವರ ಅಸ್ಪøಶ್ಯತೆ ನಿವಾರಣೆ, ಸಾಮಾಜಿಕ ಸಮಾನತೆ ಕಂಡು ದೇಶದ ಮಹಾನ್ ವ್ಯಕ್ತಿಗಳಾದ ಮಹಾತ್ಮಗಾಂಧಿ ಮತ್ತು ರಾಧಾಕೃಷ್ಣನ್ ಶ್ಲಾಘನೀಯ ಮಾತುಗಳನ್ನಾಡಿದ್ದಾರೆ. ಇಂದು ನಾವು ವಚನಕಾರರನ್ನು ಪೂಜೆ ಮಾಡುವುದಕ್ಕಷ್ಟೇ ಸೀಮಿತವಾಗದೆ ಅವರ ವಚನಗಳ ಬಗ್ಗೆ ವಿಚಾರಸಂಕಿರಣ, ಚರ್ಚೆ ಮುಂತಾದ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಿ ಅವರ ತತ್ವಗಳನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದರು. ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ತಾಲ್ಲೂಕು ಅಧ್ಯಕ್ಷ ಕೆ.ಎಂ.ಮಹೇಶ್, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಸರಗೂರು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದಡದಹಳ್ಳಿ ಗುರುಸ್ವಾಮಿ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ್, ಸಂಸ್ಕøತ ಶಿಕ್ಷಕ ದೊರೆಸ್ವಾಮಿ, ಶಿಕ್ಷಕರಾದ ಅನಿಲ್, ಪ್ರಕಾಶ್, ಚಂದ್ರಶೇಖರ್, ರೋಜಾ ಉಪಸ್ಥಿತರಿದ್ದರು.
                                  ---------------------------------------------------------------------



ಮೈಸೂರು :- ವಿದ್ಯಾರ್ಥಿಗಳಾಗಿದ್ದಾಗಲೇ ಸಂಸ್ಕಾರ ರೂಡಿಸಿಕೊಳ್ಳಲು ವಚನ ಸಾಹಿತ್ಯ ಸಹಕಾರಿಯಾಗಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮಂಡ್ಯದ ಸಾಯಿ ನಳಂದ ವಿದ್ಯಾಲಯದಲ್ಲಿ ಚಂದ್ರಕಲಾವತಿ ಶಿವಸ್ವಾಮಿ ದತ್ತಿ ಅಂಗವಾಗಿ ನಡೆಸಿದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿ ಜೀವನವನ್ನು ಚಿನ್ನಕ್ಕೆ ಹೋಲಿಸುತ್ತಾರೆ ಅದನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ವಿದ್ಯೆಯ ಜೊತೆಗೆ ವಿನಯವನ್ನು ಮೈಗೂಡಿಸಿಕೊಂಡು ಗುರುಹಿರಿಯರಿಗೆ ಹಾಗೂ ನೆರೆಹೊರೆಯವರಿಗೆ ಗೌರವವನ್ನು ಕೊಡುವುದನ್ನು ರೂಡಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಹೇಳಿದರು. ್ಲ  ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಕಣ್ಣಿಗೆ ಕಾಣುವ ದೇವರಾದ ತಂದೆತಾಯಿಗಳನ್ನು ಹಾಗೂ ಗುರುಗಳನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ಪಠ್ಯದಲ್ಲಿಯೇ ಅಳವಡಿಕೆಯಾಗಿರುವ ಶರಣರ ವಚನಗಳನ್ನು ಪರೀಕ್ಷೆಗೋಸ್ಕರ ಕಲಿಯದೆ ಜೀವನದಲ್ಲಿ ಅಳವಡಿಸಿಕೊಂಡರೆ ಮೌಲ್ಯಯುತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದು ಹೇಳಿದರು. ದತ್ತಿ ದಾನಿಗಳಾದ ನಿವೃತ್ತ ಮುಖ್ಯಶಿಕ್ಷಕ ಶಿವಸ್ವಾಮಿ ಮಾತನಾಡಿ ನಾವು ಗಳಿಸಿದ ಹಣ ಸದ್ವಿನಿಯೋಗವಾದಾಗ ಮಾತ್ರ ಬೆಲೆ ಇರುತ್ತದೆ ದುಡಿದು ತಿನ್ನುವುದನ್ನು ಶರಣರು ವಚನಗಳಲ್ಲಿ ತಿಳಿಸಿದ್ದಾರೆ ವಚನಗಳಲ್ಲಿ ಅಳವಡಿಕೆಯಾಗಿರುವ ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಬಸವ ಫೌಂಡೇಷನ್ ಅಧ್ಯಕ್ಷೆ ಅಪರ್ಣ ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಚನ ವಾಚನ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೂ ವಚನದೀವಿಗೆ ಪ್ರಶಂಸಾ ಪತ್ರ ಮತ್ತು ವಚನಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಪಂಪಾಪತಿ, ಶಿಕ್ಷಕರುಗಳಾದ ನಾಗರಾಜು, ಶಿಲ್ಪಶ್ರೀ, ಶೃತಿ, ಅರ್ಚನಾ, ಧನಲಕ್ಷ್ಮಿ, ಸೆಲ್ವಮೇರಿ, ವಿಶಾಲಾಕ್ಷಿ, ಸ್ಟೆಲ್ಲಾ, ರಮ್ಯ ಉಪಸ್ಥಿತರಿದ್ದರು.
                                                         ----------------------------------------

ಜೆ.ಎಸ್.ಎಸ್‌ ಪ್ರೌಢಶಾಲೆ, ಸುತ್ತೂರು ನಂಜನಗೂಡು ತಾ.


ಸ್ಯಾಂಡಲ್‌ ರೋಸ್‌ ಕಾನ್ವೆಂಟ್‌, ಡಿ. ಸಾಲುಂಡಿ, ಮೈಸೂರು ತಾ.


ಅರಮನೆ ಟೆಂಟ್‌ ಶಾಲೆಯ ಮಾವುತರು ಹಾಗೂ ಕಾವಾಡಿಗರ ಮಕ್ಕಳಿಗೆ ನೋಟ್‌ ಬುಕ್‌, ವಚನ ಪಸ್ತಕ ಹಾಗೂ ಪ್ರಶಂಸನಾ ಪತ್ರ ವಿತರಣೆ
------------------------------------------------------------------------------------

೨೦೨೦ ರ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮಗಳು


  ಸ.ಹಿ.ಪ್ರಾ.ಶಾಲೆ, ಹದಮಗೆರೆ, ನಾಗಮಂಗಲ ತಾ. ಮಂಡ್ಯ ಜಿಲ್ಲೆ.


ಸ.ಹಿ.ಪ್ರಾ.ಶಾಲೆ, ಇಮ್ಮಾವು, ನಂಜನಗೂಡು ತಾ.


ಸ.ಹಿ.ಪ್ರಾ.ಶಾಲೆ, ಕೆಗ್ಗೆರೆ, ಕುಣಿಗಲ್‌ ತಾ. ತುಮಕೂರು ಜಿಲ್ಲೆ.


ಶ್ರೀ ಗುರುಮಲ್ಲೇಶ್ವರ ಪ್ರೌಢಶಾಲೆ, ಹರವೆ, ಚಾಮರಾಜನಗರ ತಾ. ಮತ್ತು ಜಿಲ್ಲೆ



------------------------------------------------
2021 ರ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮಗಳು



ಮೌಲಾನ ಅಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಶೋಭ ಗಾರ್ಡನ್, ಮೈಸೂರು


ಸ.ಹಿ.ಪ್ರಾ. ಶಾಲೆ, ಎಚ್ ಎಚ್ ಎಂ ಓ ಐ ಜಲಪುರಿ, ಮೈಸೂರು


        ಸ.ಹಿ.ಪ್ರಾ. ಶಾಲೆ, ಎಂ.ಸಿ.ಸಿ ಕಾಲೋನಿ, ಮೈಸೂರು


              ಸ.ಹಿ.ಪ್ರಾ. ಶಾಲೆ, ಮೇದರ್ಸ್ ಬ್ಲಾಕ್, ಮೈಸೂರು






2022-23

























No comments:

Post a Comment