Saturday, March 2, 2019

ನುಡಿ ನಮನ ಸಂಗ್ರಹ ಭಾಗ - 3

101.
🙏ಶಿವ ಕುಮಾರ ಸ್ವಾಮಿ ಗಳಿಗೆ ನುಡಿ ನಮನ ಗಳು🙏

ಹೋಮ ಹವನಗಳನ್ನು ಮಾಡಲಿಲ್ಲ
ಮಂತ್ರ ತಂತ್ರ ಗಳ ಕಥೆಯನ್ನು ಜನಕ್ಕೆ ಹೇಳಲಿಲ್ಲ
ವಾಸ್ತು. ಜ್ಯೋತಿಷ್ಯ. ಭವಿಷ್ಯದ ಬುರುಡೆ ಬಿಡಲಿಲ್ಲ.
ನಮ್ಮ ಶಿವಕುಮಾರ ಸ್ವಾಮಿಗಳು
ಅನ್ನದ ಹರಿವನ್ನು
ವಿದ್ಯೆಯೇ ಮಂತ್ರವನ್ನು
ಜ್ಞಾನದ ಜ್ಯೋತಿ ಯನ್ನು
ಜನರಲ್ಲಿ ಮೂಡಿಸುತ್ತಾ.
ಆ ಮೂಲಕ ಲಕ್ಷಾಂತರ ಜೀವಿಗಳಿಗೆ ಭವಿಷ್ಯ ತೋರಿದ.
ನಮ್ಮ ಆರಾಧ್ಯ ಗುರುವಿಗೂಂದು ನನ್ನ ನುಡಿ ನಮನ.


ಎಂ.ಪಿ. ನಾಗವೇಣಿ ಆರ್ ನಾಗಣ್ಣ.
ಕಾರ್ಯದರ್ಶಿ
ಕೊಳ್ಳೇಗಾಲ ತಾಲ್ಲೂಕು ಶರಣು ವಿಶ್ವವಚನ ಫೌಂಡೇಶನ್.
@@@@@

102.
ಸಾಂಬಶಿವ

ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು,
ಸಾವೆಂಬುದು ಸಯವಲ್ಲ.
ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ
ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ.
ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು
ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ,
ಉಪಮಿಸಬಲ್ಲವರ ಕಾಣೆನು.

-ಬಸವಣ್ಣ

ಅಣ್ಣನ ವಚನದಂತೆ , ಪರಶಿವ ಕೊಟ್ಟ ಜನ್ಮವನ್ನು ಸರ್ವರೀತಿಯ ದಾಸೋಹಕ್ಕಾಗಿ ಮುಡಿಪಾಗಿಟ್ಟು ಈ ದಿನ ಲಿಂಗೈಕ್ಯರಾಗಿರುವ ವಿಶ್ವರತ್ನ ಶರಣ ಡಾ: ಶಿವಕುಮಾರಸ್ವಾಮಿಗಳಿಗೆ ಬಸವ ಸಮಿತಿ ಬಹರೈನ ಮಹಾಮನೆಯ ಸಮಸ್ತ ಪರಿವಾರದ ಪರವಾಗಿ ಮನಃಪೂರ್ವಕ ಶ್ರದ್ಧಾಂಜಲಿ ಯನ್ನು ಸಮರ್ಪಿಸುತ್ತೇವೆ.

 ಅವರ ಬದುಕು ಬಸವಾದಿ ಶರಣರ ದಿವ್ಯ ಜೀವನಕ್ಕೆ ಕನ್ನಡಿ ಹಿಡಿದಂತಿದ್ದು ಸರ್ವರಿಗೂ ಮಾದರಿ ಮತ್ತು ಪ್ರಾಥಃ ಸ್ಮರಣೀಯರು.

ಅವರನ್ನು ಪಡೆದ ಕನ್ನಡ ನಾಡು ಧನ್ಯ.ಭಾರತ ದೇಶ ಧನ್ಯ. ಅವರ ದಾಸೋಹಭಾವ ವಿಶ್ವಕ್ಜೆ ಒಂದು ಮಾದರಿ.

ಅವರಂಥ ದಾಸೋಹಮೂರ್ತಿಗಳು ಮತ್ತೆ ಉದಯಿಸಲಿ ಎಂಬ ದಿವ್ಯ ಸಂಕಲ್ಪ ನಮ್ಮದು.

ಓಂ ನಮಃ ಶಿವಾಯ

ಶಿವಾನಂದಪಾಟೀಲ್
ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷರು
ಬಹ್ರೇನ್
@@@@@

103.

@@@@@

104. 
 @@@@@

105.
@@@@@

106.

@@@@

107.

@@@@

108.
"ಗುರುವಿಗೆ ನಮ್ಮ ನುಡಿ ನಮನ"
ನಿತ್ಯ ಅನ್ನ ದಾಸೋಹ ಮಾಡುತ್ತಿರುವ ಗುರುವಿಗೆ ವಂದನೆ
ವಿದ್ಯಾ ದಾನವ ಮಾಡಿದ ಪರಮಪೂಜ್ಯ ರಿಗೆ ವಂದನೆ
ಸತ್ಯ ಧರ್ಮದ ದಾರಿ ದೀಪ ವಾ ತೋರಿದ ಶಿವಕುಮಾರ ಸ್ವಾಮಿಗೆ ವಂದನೆ
ಕಲಿಯುಗದ ಪ್ರತ್ಯಕ್ಷ ದೇವರಿ ವಂದನೆ
ಇವರ ದರುಶನ ಪಡೆದ ನಮ್ಮ ಜನ್ಮ ಪಾವನ ವಾಯಿತು ಇಂದಿಗೆ ,
ಅರುಣ ಕಾರ್ತಿಕ್
ಕೋಳ್ಳೆಗಾಲ
@@@@@

109.

Well Shivakumar swamiji was more like a God father than God man,he took care of lot of rural area children's education and more.he and his institutions helped lot of rural children's to become a better human being. You might call him a millenium man. He was simple but wise. You can find his wisdom and simplicity in his written books. I feel my words in my vocabulary are less to describe his greatness.

 Tharun Kumar
 Tinfactory 
Bengaluru
@@@@@@

110.
ತ್ರಿಕಾಲದಲ್ಲೂ ಇಷ್ಟಲಿಂಗ ಪೂಜೆ ಮಾಡಿ ಧರ್ಮದ ಕುರುಹಾದ ಇಷ್ಟಲಿಂಗದ ಮಹತ್ವವನ್ನು ಲೋಕಕ್ಕೆ ತಿಳಿಸಿದ ಶ್ರೀ ಶಿವಕುಮಾರಮಹಾಸ್ವಾಮಿಗಳ ಆದರ್ಶ ಎಲ್ಲರಿಗೂ ಅನುಕರಣೀಯ. ಇವರು ಮಕ್ಕಳಲ್ಲೇ ದೇವರನ್ನು ಕಂಡವರು. ಜಾತ್ಯಾತೀತವಾಗಿ ಮಕ್ಕಳಿಗೆ ಶಿಕ್ಷಣ ನೀಡಿದ ಶ್ರೀಗಳು ಶ್ರೇಷ್ಟ ಸಮಾಜ ಸುಧಾರಕರಾಗಿದ್ದಾರೆ.

ಕೆ ಎಂ ಮಹೇಶ್
ಅಧ್ಯಕ್ಷರು
ಶರಣು ವಿಶ್ವವಚನ ಫೌಂಡೇಷನ್
ಎಚ್ ಡಿ ಕೋಟೆ
@@@@@

111.
@@@@

112.
@@@@@

113.

ಕಾಯಕವೇ ಕೈಲಾಸ 

" ಕಾಯಕದಲ್ಲಿ ನಿರತನಾದರೆ

   ಗುರುದರುಶನವಾದಡೂ ಮರೆಯಬೇಕು

   ಲಿಂಗಪೂಜೆಯಾದಡೂ ಮರೆಯಬೇಕು 

    ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು

     ಕಾಯಕವೇ ಕೈಲಾಸವಾದ ಕಾರಣ

   ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು " ಶರಣರ ನುಡಿಯಂತೆ

ಲಕ್ಷಕ್ಕೂಬ್ಬ ಭಕ್ತ  ಕೋಟಿಗೂಬ್ಬ ಶರಣ ಅನ್ನುವಂತೆ ಬದುಕಿದ್ದ ನಡೆದಾಡುವ ದೇವರು ಪೂಜ್ಯ ಅಪ್ಪನವರಿಗೆ ಅನಂತ ಕೋಟಿ ಶರಣು ಶರಣಾರ್ಥಿಗಳು. 

                -ಬಸವರಾಜ  ಗುರುಸಿದ್ದಪ್ಪಾ ಚನಾಳ.  ಸಂಚಾಲಕರು.  ಶ್ರೀ ಗುರು ಬಸವ ಮನೆಯಲ್ಲಿ  ಮಹಾಮನೆ ಸೇವಾ ಸಮಿತಿ ಬನಹಟ್ಟಿ.

@@@@@

114.
ತ್ರಿಕಾಲದಲ್ಲೂ ಇಷ್ಟಲಿಂಗ ಪೂಜೆ ಮಾಡಿ ಧರ್ಮದ ಕುರುಹಾದ ಇಷ್ಟಲಿಂಗದ ಮಹತ್ವವನ್ನು ಲೋಕಕ್ಕೆ ತಿಳಿಸಿದ ಶ್ರೀ ಶಿವಕುಮಾರಮಹಾಸ್ವಾಮಿಗಳ ಆದರ್ಶ ಎಲ್ಲರಿಗೂ ಅನುಕರಣೀಯ. ಇವರು ಮಕ್ಕಳಲ್ಲೇ ದೇವರನ್ನು ಕಂಡವರು. ಜಾತ್ಯಾತೀತವಾಗಿ ಮಕ್ಕಳಿಗೆ ಶಿಕ್ಷಣ ನೀಡಿದ ಶ್ರೀಗಳು ಶ್ರೇಷ್ಟ ಸಮಾಜ ಸುಧಾರಕರಾಗಿದ್ದಾರೆ.

ಕೆ ಎಂ ಮಹೇಶ್
ಅಧ್ಯಕ್ಷರು
ಶರಣು ವಿಶ್ವವಚನ ಫೌಂಡೇಷನ್
ಎಚ್ ಡಿ ಕೋಟೆ
@@@@@

115.
@@@@@

116.

@@@@

117.
 ಸಮಾಜದ ಪ್ರಸ್ತುತ ಬೇಕು ಬೇಡಗಳನ್ನು ಸಮರ್ಥವಾಗಿ ಸಕಾಲಿಕವಾಗಿ ಸತತ 111 ಸಂವತ್ಸರಗಳ ಕಾಲ ಪೂರೈಸಿ ಪಿತಾಮಹ ಭೀಷ್ಮನಂತೆ ಇಚ್ಛಾಮರಣಿ ಎನಿಸಿದ ಶ್ರೀ ಶ್ರೀ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾದದ್ದು ನಿಜಕ್ಕೂ ಸಮಾಜಕ್ಕೆ ತುಂಬಲಾರದ ನಷ್ಟ, ಮತ್ತೊಮ್ಮೆ ಸಾವಿರ ಸಾವಿರ ಸಂಖ್ಯೆಯಲ್ಲಿ ಹುಟ್ಟಿ ಬನ್ನಿ, ನಿಮ್ಮಿಂದ ಆಗಬೇಕಾದ ಸಮಾಜ ಮುಖಿ ಕೆಲಸಗಳು ಸಾಕಷ್ಟಿವೆ. 

ವೈ. ಎಮ್. ನಾಗರಾಜ್
@@@@@@

118.

ಎಚ್. ಡಿ. ಕೋಟೆ ತಾಲೂಕಿನ ಪತ್ರಕರ್ತರು ಮತ್ತು ಕುಟುಂಬದೊಂದಿಗೆ 2013ರ ಡಿಸೆಂಬರ್‌ನಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಅಮೃತ ಹಸ್ತದಿಂದ ಪತ್ರಕರ್ತರ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ದೇವೆ.
ನಮ್ಮೆಲ್ಲಾ ಪತ್ರಕರ್ತರು ಹಾಗೂ ಕುಟುಂಬದ ಸದಸ್ಯರು ಅವರ ಪಾದಗಳಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದ ಪಡೆದು ಬಂದಿದ್ದು ನಮ್ಮೆಲ್ಲರಿಗೂ ಒಂದು ಮರೆಯದ ಕ್ಷಣ ಏಕೆಂದರೆ ಅಂತಹ ದಿವ್ಯ ತಪೋನಿಧಿ ಆದಂತಹ ದಿವ್ಯ ಸ್ವಾಮಿಜಿಯವರ ಆಶೀರ್ವಾದ ಸ್ವೀಕರಿಸಿದ ನೆನಪು ಇಂದಿಗೂ ಅಚ್ಚಳಿಯದೆ ಉಳಿದಿದೆ.

ಸತೀಶ್ ಆರಾಧ್ಯ
ಸಂಸ್ಥಾಪಕರು
ಕಸ್ತೂರಿ ಜನನಿ ಸಂಸ್ಥೆ
ಎಚ್ ಡಿ ಕೋಟೆ
@@@@@

119.
@@@@@

120.

ಸಂತರ ನಡಿಗೆ ಕೈಲಾಸದ ಕಡೆಗೆ
ನಾ ಕಂಡ ನಡೆದಾಡುವ ದೇವರು 21ನೇ ಶತಮಾನದ ತ್ರಿವಿದ ದಾಸೋಹಿ, ಕಾಯಕಯೋಗಿ, ಅಭಿನವ ಬಸವಣ್ಣ ಎಂದೇ ಪ್ರಸಿದ್ಧರಾಗಿರುವ ಡಾ|| ಶಿವಕುಮಾರ ಸ್ವಾಮಿಗಳು ಏಪ್ರಿಲ್ 1, 1907 ರಲ್ಲಿ ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು, ವೀರಾಪುರ ಎಂಬ ಕುಗ್ರಾಮದಲ್ಲಿ ಪಟೇಲ್ ಹೊನ್ನಪ್ಪ ಮತ್ತು ಗಂಗಮ್ಮ ನವರ 13ನೇ ಪುತ್ರರಾಗಿ ಜನಿಸಿದರು. ಇವರು 8 ವರ್ಷದವರಾಗಿದ್ದಾಗ ಇವರ ತಾಯಿ ನಿಧನರಾದರು.
ಶಿವಣ್ಣರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇಂದಿನ ತುಮಕೂರು ಜಿಲ್ಲೆಯ ನಾಗವಲ್ಲಿಯ ಗ್ರಾಮೀಣ ಆಂಗ್ಲೊ-ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿ 1926 ರಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಅನ್ನು ಅಂಗೀಕರಿಸಿದರು. ಈ ಸಮಯದಲ್ಲಿ ಸಂಕ್ಷಿಪ್ತ ಅವಧಿಗೆ ಸಿದ್ದಗಂಗಾ ಮಠದ ನಿವಾಸಿ ವಿದ್ಯಾರ್ಥಿಯಾಗಿ ಭೌತಶಾಸ್ತ್ರ, ಗಣಿತಶಾಸ್ತ್ರದ ಜೊತೆ ಐಚ್ಛಿಕ ವಿಷಯಗಳನ್ನು ಕಲಿಯಲು ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿಕೊಂಡರು. ಹಾಗೂ ಇವರು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಪರಿಣಿತರಾಗಿದ್ದರು. ಈ ಸಮಯದಲ್ಲಿ ಸಿದ್ಧಗಂಗಾ ಮಠಕ್ಕೆ 1930 ಜನವರಿಯಲ್ಲಿ ಅಂದಿನ ಕಿರಿಯ ಶ್ರೀಗಳಾದ ಮರುಳಾರಾಧ್ಯರ ನಿಧನದ ನಂತರ ಹಿರಿಯ ಶ್ರೀಗಳಾದ ಶಿವಯೋಗಿ ಶ್ರೀಗಳ ಆಪೇಕ್ಷೆಯಂತೆ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರಿಂದ ಪದವಿ ಮುಗಿಸಲು ಸಾಧ್ಯವಾಗಲಿಲ್ಲ ನಂತರ ಇವರ ಶಿವಣ್ಣ ಎಂಬ ಹೆಸರನ್ನು “ಶಿವಕುಮಾರ” ಎಂದು ಮರು ನಾಮಕರಣ ಮಾಡಿದರು.
ಇವರು ಅಧಿಕಾರವಹಿಸಿಕೊಂಡ ಸಮಯದಲ್ಲಿ ಮಠದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ ಆದರೂ ಕೂಡ ಭಿಕ್ಷಾಟನೆ ಮಾಡಿ ಪ್ರಸಾದ ವಿನಿಯೋಗದ ಜೊತೆಗೆ ಉತ್ತಮ ಶಿಕ್ಷಣಕ್ಕೆ ಒತ್ತುಕೊಟ್ಟು ಗುರುಕುಲವನ್ನು ಉತ್ತಮ ಮಟ್ಟಕ್ಕೆ ತಂದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಅಂದು ಅವರು ಹಾಕಿದ “ಬೀಜ ಇಂದು ದೊಡ್ಡ ಹೆಮ್ಮರವಾಗಿ ಬೆಳೆದು ಸಮಾರು 15000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇಂದಿಗೂ ಯಾವುದೇ ಜಾತಿಭೇದ ಹಾಗೂ ತಾರತಮ್ಯವಿಲ್ಲದೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶ್ರೀಗಳ ಈ ಸೇವೆಯನ್ನು ಪರಿಗಣಿಸಿ ಇವರಿಗೆ ಕರ್ನಾಟಕ ಸರ್ಕಾರವು 2007 ರಲ್ಲಿ “ಕರ್ನಾಟಕ ರತ್ನ” ಪ್ರಶಸ್ತಿ ಹಾಗೂ ಭಾರತ ಸರ್ಕಾರವು 2015 ರಲ್ಲಿ  “ಪದ್ಮ ಭೂಷಣ” ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಶ್ರೀಗಳಿಗೆ ಭಾರತರತ್ನ ನೀಡಬೇಕೆಂಬುದು ನಮ್ಮೆಲ್ಲರ ಅಭಿಲಾಷೆಯಾಗಿತ್ತು ಅದು ಈಡೇರುವ ಮುನ್ನವೇ ಶ್ರೀಗಳು ಜನವರಿ 21 ರಂದು ತಮ್ಮ 111 ನೇ ವಯಸ್ಸಿನಲ್ಲಿ ಸ್ವರ್ಗಸ್ಥರಾದರು. ಆದರೂ ಕೂಡ ಶ್ರೀಗಳು ಮಾಡಿರುವ ಸಾಮಾಜಿಕ ಸೇವೆ, ವಿದ್ಯಾಕ್ರಾಂತಿ, ಬಡವರ ಮೇಲೆ ಇದ್ದ ಅಪಾರ ಕಾಳಜಿ ಇಡೀ ಪ್ರಪಂಚವೇ ಶ್ರೀಗಳ ಕಡೆಗೆ ತಿರುಗಿ ನೋಡುವ ಹಾಗೇ ಮಾಡಿದ್ದು ಹೆಮ್ಮೆಯ ಸಂಗತಿ. ಶ್ರೀಗಳು ಇಂದು ನಮ್ಮೊಂದಿಗೆ ಇಲ್ಲದಿದ್ದರು ನಮ್ಮನ್ನು ನ್ಯಾಯ ಮಾರ್ಗದಲ್ಲಿ ಕೈ ಹಿಡಿದು ನಡೆಸುವ ಮುಂದಿನ ಪೀಳಿಗೆಗೆ ದಾರಿ ತೋರಿಸುವ ಮಹಾನ್ ಚೇತನರಾಗಿ ನಮ್ಮನ್ನು ಸ್ವರ್ಗದಿಂದಲೇ ಆರೈಸುತ್ತಿರುವ “ಓ ನನ್ನ ದೇವರೆ ಮತ್ತೆ ಈ ನಾಡಲ್ಲಿ ಹುಟ್ಟಿ ಬನ್ನಿ”
“ಜೈ ಸಿದ್ದಗಂಗಾ”
“ಜೈ ಶಿವಕುಮಾರ ಸ್ವಾಮಿ

ಇಂತಿ,
ಎಂ.ಉಮೇಶ್,
ಮನುಗನಹಳ್ಳಿ ಗ್ರಾಮ,
ಹೆಚ್.ಡಿ ಕೋಟೆ ತಾಲ್ಲೂಕು
ಮೈಸೂರು ಜಿಲ್ಲೆ
@@@@@

121.

@@@@@@

122.


@@@@

123.
@@@@

124.

ನಿಬ್ಬೆರಗು


ಕಣ್ಣು ಮೀಸಲು ಶಿವನ, ಕೈ ಮೀಸಲು ಶಿವನ, ಕಾಲು ಮೀಸಲು ಶಿವನ, ನಾಲಿಗೆ ಮೀಸಲು ಶಿವನ, ಕಿವಿ ಮೀಸಲು ಶಿವನ, ನಾಸಿಕ ಮೀಸಲು ಶಿವನ, ತನು ಮೀಸಲು ಶಿವನ, ಮನವೆಲ್ಲ ಮೀಸಲು ಶಿವನ, ಈ ಮೀಸಲು ಬೀಸರವೋಗದಂತಿದ್ದರೆ ಆತನೇ ಜಗದೀಶ ಕಾಣಾ ರಾಮನಾಥ! 
ಜೇಡರ ದಾಸಿಮಯ್ಯನವರ ಈ ವಚನಕ್ಕೆ ವ್ಯಾಖ್ಯಾನದಂತಿದ್ದ ದಿವ್ಯ ಚೇತನವನ್ನು ಕಂಡ ಪುಣ್ಯ ನಮ್ಮದು. ಈ ನಾಡಿನದು. 
ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿಯ ವೀರಾಪುರ ಗ್ರಾಮದಲ್ಲಿ ಶ್ರೀ ಪಟೇಲ್ ಹೊನ್ನೇಗೌಡರು ಮತ್ತು ಗಂಗಮ್ಮ ದಂಪತಿಗಳ 13ನೇ ಪುತ್ರರಾಗಿ 01-04-1908 ರಂದು ಜನಿಸಿದ ಶಿವಣ್ಣ (ಅವರ ಜನ್ಮನಾಮ) ಶ್ರೀ ಸಿದ್ಧಗಂಗಾ ಮಠದ ಆಧ್ಯಾತ್ಮಿಕ ಜ್ಯೋತಿಯಾಗಿ ಬೆಳಗಿದರು. ವಿರಕ್ತಾಶ್ರಮವನ್ನು ಸ್ವೀಕರಿಸಿ ಸೇವಾ ದೀಕ್ಷೆಯನ್ನು ಪಡೆದು ಸುಮಾರು 88 ವರ್ಷಗಳ ದೀರ್ಘಾವಧಿಯಿಂದ ಶ್ರೀ ಮಠದ ಜವಾಬ್ದಾರಿಯನ್ನು ಜಗಮೆಚ್ಚುವಂತೆ, ಜನಮೆಚ್ಚುವಂತೆ ಸಮರ್ಥವಾಗಿ ನಿರ್ವಹಿಸಿದುದು ಒಂದು ಪವಾಡವೇ ಸರಿ. ಪವಿತ್ರ ಜನ್ಮವೆತ್ತಿ ಭೂಮಿಗೆ ಬಂದ ಭುವನದಭಾಗ್ಯ ಶ್ರೀಗಳು. 111 ನೆಯ ವರ್ಷಕ್ಕೆ ಪಾದರ್ಪಣೆ ಮಾಡಿದ್ದರು. ನಿತ್ಯ ಇಷ್ಟಲಿಂಗದ ಪೂಜೆ ಮಾಡುತ್ತಾ ತ್ರಿವಿಧ ದಾಸೋಹದ ಕೈಂಕರ್ಯ ನೆರವೇರಿಸುತ್ತಾ ಬಂದವರಿಗೆಲ್ಲಾ ತಾಯಿ ಮಮತೆಯನ್ನು ತೋರುತ್ತಾಬಂದಿದ್ದ ಸಂತರು ಕೊನೆಗೆ ದೇವರ ಸ್ವರೂಪವನ್ನು ತಾಳಿಬಿಟ್ಟರು. ಡಾ|| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಹೇಳುವಂತೆ ಕ್ರಿಕೆಟ್‍ಆಟದ ಮೈದಾನದಲ್ಲಿ ನೂರು ರನ್ ಬಾರಿಸಿ ಶತವೀರನೆನಿಸಿಕೊಂಡವರು ಅನೇಕರಿದ್ದಾರೆ. ಆದರೆ ಬದುಕಿನ ಕ್ರಿಕೆಟ್‍ನಲ್ಲಿ ಶತಕ ಬಾರಿಸಿದವರು ಅಪರೂಪ. ಶ್ರೀಗಳವರದು ಶತಮಾನ ದಾಟಿ ಬದುಕಿನ ಜಗತ್ತಿನ ದೀರ್ಘಾಯುಷಿಗಳಲ್ಲಿ ಆರನೆಯ ಶ್ರೇಯಾಂಕ; ಭಾರತದಲ್ಲಿ ಅವರದು ಮೊದಲನೆಯ ಸ್ಥಾನ! 
ಸಿದ್ಧಗಂಗಾ ಕ್ಷೇತ್ರದಲ್ಲಿ ಪೂಜ್ಯಶ್ರೀಗಳು ನಡೆಸಿರುವ ತ್ರಿವಿಧ ದಾಸೋಹ ಸಮಕಾಲೀನ ಚರಿತ್ರೆಯಲ್ಲಿ ಹಿಮಾಲಯ ಸದೃಶವಾದುದು. ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಯಾತ್ರಾರ್ಥಿಗಳಿಗೆ ದಾಸೋಹ ನಡೆಯುತ್ತದೆಂದರೆ ಊಹೆಗೂ ನಿಲುಕದ ಅದ್ಭುತ. ಏಕಕಾಲಕ್ಕೆ ಪ್ರತಿನಿತ್ಯ ಇಂತಹ ದಾಸೋಹ ಮಠದಲ್ಲಿ ನಡೆಯುತ್ತಿದೆ ಎಂದರೆ ಯಾವುದೇ ಪುರಾಣದ ಕಟ್ಟು ಕಥೆಯಲ್ಲ; ನಿತ್ಯ, ಸತ್ಯ! 
ಹಗಲಿರುಳು ಜನಸಮುದಾಯದ, ಮಕ್ಕಳ ಹಿತಚಿಂತನೆಗಾಗಿ ಶ್ರಮಿಸಿದ ಶಿವಯೋಗಿಗಳು ಶ್ರೀ ಶಿವಕುಮಾರ ಸ್ವಾಮಿಗಳು. ಸಮಾಜಮುಖಿಯಾಗಿ ನಿರ್ಮಲ ಮನಸ್ಸಿನಿಂದ ಲೋಕಕಲ್ಯಾಣ ಸೇವೆಯ ಮಣಿದ ಹೊತ್ತು ಅದರಲ್ಲಿಯೇ ಮುಕ್ತಿ ಕಂಡವರು. ಸೇವೆ, ಸಂಕಲ್ಪ ಮತ್ತು ಸಮಾನತೆಯೊಂದಿಗೆ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಜಾತಿ, ಮತ, ಧರ್ಮ ಭೇದಗಳನ್ನು ತೊಡೆದುಹಾಕಿ ಪ್ರತಿಯೊಬ್ಬರ ಬದುಕಿಗೆ ದಿವ್ಯ ಸಂದೇಶವನ್ನು ನೀಡುತ್ತಿದ್ದ ಪೂಜ್ಯರ ಕಾರ್ಯಗಳ ಬಗ್ಗೆ ನೋಡಿದಾಗ ಮಾತು ಮೌನ ವಹಿಸುತ್ತದೆ, ನೋಡಲು ಕಣ್ಣುಗಳು ಸಾಲದಾಗುತ್ತವೆ. ಶಬ್ಧಗಳು ನಿಶ್ಯಬ್ಧವಾಗುತ್ತವೆ. ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳನ್ನು ಕಂಡ ಕಣ್ಣುಗಳೇ ಧನ್ಯ. ಶ್ರೀಗಂಧದಂತೆ ಪರಿಮಳಿಸಿ, ನಡೆದಾಡುವ ದೇವರೆಂದು ಜನಮನದಲ್ಲಿ ಹಚ್ಚ ಹಸಿರಾಗಿ, ಯುಗದಸಿರಿಯಾಗಿ, ಜಗದಬೆಳಕಾಗಿ ಮೂಡಿಬಂದವರು. ಮಕ್ಕಳಲ್ಲಿ ಮಹಾದೇವನನ್ನು ಕಂಡ ಪರಿಣಾಮಿಗಳು. ಪ್ರೀತಿ ವಾತ್ಸಲ್ಯದ ಮಹಾಮೇರು. ಬಡವ ಬಲ್ಲಿದರೆನ್ನದೆ ಎಲ್ಲರನ್ನೂ ಸಮಭಾವದಿಂದ ಕಂಡ ಸಮದರ್ಶಿಗಳು. ಸಮಯ ನಿಷ್ಠೆಯ ಸಮುದ್ರ. ಮಾನವೀಯತೆಯ ಮಂಗಳ ಮಹಾಚೇತನರು! 
ಪರಮಪೂಜ್ಯ ಶ್ರೀಗಳವರೊಂದು ನಿಬ್ಬೆರಗು, ಬೆರಗಿನೊಳಗಣ ಬೆರಗು. ನಿಬ್ಬೆರಗು ಎಂದರೆ ಪರಮಾಶ್ಚರ್ಯ. ಅವರ ಸುದೀರ್ಘ ಸೇವಾ ಜೀವನದಲ್ಲಿ ನಿತ್ಯ ಬೆರಗನ್ನೇ ತೋರುತ್ತಾ ನಡೆದ ನಿಜ ಅರ್ಥದಲ್ಲಿ ಕರ್ನಾಟಕ ರತ್ನ ಮಾತ್ರವಲ್ಲ ವಿಶ್ವರತ್ನ. ಕಾಯಕ ನಿಷ್ಠೆ ಬೆರಗು, ದಾಸೋಹ ನಿಷ್ಠೆ ಬೆರಗು, ಆಚಾರ ನಿಷ್ಠೆ ಬೆರಗು, ನೆನಪಿನ ಶಕ್ತಿ ಬೆರಗು, ದೃಷ್ಟಿಶಕ್ತಿ ಬೆರಗು, ನಡಿಗೆ ಬೆರಗು ಎಲ್ಲವೂ ಬೆರಗು, ನಿಬ್ಬೆರಗು. 
ಮಹಾಸ್ವಾಮಿಗಳಿಂದ ಬೆಳಕು ಪಡೆದ ಹಣತೆಗಳು ಇಂದು ನಾಡಿನ ಒಳ-ಹೊರಗೆ, ದೇಶ ವಿದೇಶಗಳಲ್ಲಿ ಜ್ಯೋತಿಗಳಾಗಿ ಬೆಳೆಗುತ್ತಿವೆ. ಅನ್ನದಾನ, ವಿದ್ಯಾದಾನವನ್ನು ಒಂದು ತಪಸ್ಸಿನಂತೆ ಮಾಡಿ ಸಮಾಜಶಿಶುವನ್ನು ಪೊರೆದು ಪೋಷಿಸಿದ ಅವರ ಋಣವನ್ನು ಈ ಸಮಾಜ ಎಂದಿಗೂ ತೀರಿಸಲು ಸಾಧ್ಯವಿಲ್ಲ. ಪೂಜ್ಯರ ಆಶೀರ್ವಾದ ಜ್ಯೋತಿಯು ಲಕ್ಷಾಂತರ ಮನೆಗಳನ್ನು ಇಂದು ಬೆಳಗುತ್ತಿದೆ. ಶ್ರೀಗಳಿಗೆ ಸೇವೆಯೇ ಪೂಜೆಯಾಗಿತ್ತು, ಮಾನವ ಕಲ್ಯಾಣವೇ ಮಂತ್ರವಾಗಿತ್ತು. ಪೂಜ್ಯರ ಕಾಯಕದಿಂದಾಗಿ ಸಿದ್ಧಗಂಗೆ ಶುದ್ಧಗಂಗೆಯಾಯಿತು. ನಿರಂತರ ದಾಸೋಹದ ದೋಣಿಯಾಯಿತು. ಇಂತಹ ಪಾವನಮೂರ್ತಿ ಮೆಟ್ಟಿದ ನೆಲ ಪಾವನ. ಮುಟ್ಟಿದ ನಾವು ಪಾವನರು, ಪುನೀತರು. 
ಶ್ರೀಗಳು ಅಧ್ಯಯನಶೀಲರಾಗಿದ್ದರು. ಗ್ರಂಥಗಳೆಂದರೆ ಅವರಿಗೆ ಪಂಚಪ್ರಾಣ ಗ್ರಂಥಾವಲೋಕನ ಒಂದು ತಪಸ್ಸು ಎಂದು ಹೇಳುತ್ತಿದ್ದರು. ಶರಣರ ವಚನ ಸಾಹಿತ್ಯದ ಜೊತೆಗೆ ಇಂಗ್ಲೀಷ್ ಸಾಹಿತ್ಯವನ್ನು ಅಭ್ಯಸಿಸಿದ ಪರಿಣಾಮವಾಗಿ ಶ್ರೀಗಳು ಸಹಜವಾಗಿಯೇ ಉತ್ತಮ ವಾಗ್ಮಿಯೂ ಆಗಿದ್ದರು. ನನ್ನ ಕೇವಲ 12ನೇ ವಯಸ್ಸಿನಲ್ಲಿಯೇ ಅವರ ಪ್ರಬುದ್ಧ ಪಾಂಡಿತ್ಯಪೂರಿತ ಮಾತುಗಳಂದ ಪ್ರಭಾವಗೊಂಡಿದ್ದೆ. ಅವರು ನಡೆದು ಬರುತ್ತಿದ್ದುದನ್ನು ನೋಡಿ ಮೈ ರೋಮಾಂಚನಗೊಂಡಿತ್ತು ಆ ಸಣ್ಣ ವಯಸ್ಸಿನಲ್ಲಿ. 
ಕವಿ ಅನ್ನದಾನಯ್ಯ ಪುರಾಣಿಕರು ಬರೆದಿರುವ ಒಂದು ಕವನದ ಸಾಲುಗಳನ್ನು ನಿಮ್ಮ ಮುಂದಿಟ್ಟು ಪರಮಪೂಜ್ಯ ಶ್ರೀಗಳ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಸಮರ್ಪಿಸುತ್ತೇನೆ. 
ನಿಮ್ಮಂತೆ ಕತ್ತಲೆ ಕಳೆದವರಿಲ್ಲ, ಜ್ಞಾನಹರಡಿದವರಿಲ್ಲ, 
ನಿಮ್ಮಿಂದ ಬಂತು ಕಾವಿಗೆ ಬೆಲೆ, ಪೀಠಕೆ ಗೌರವ 
ಸಿದ್ಧಗಂಗಾ ಕ್ಷೇತ್ರಕ್ಕೆ ವಿಶ್ವದ ಮನ್ನಣೆ,
ಶ್ರೀ ಗುರು ಸಿದ್ಧಲಿಂಗೇಶನ ಪ್ರತಿರೂಪರು ನೀವು 
ನಿಮ್ಮ ಬದುಕು ಜಗದ ಹಿತಕ್ಕಾಗಿ 
ಬಾಳಿದಿರಿ ಶತಮಾನ ಜನ ಉದ್ಧಾರಕ್ಕಾಗಿ 
ಶ್ರೀ ಶಿವಕುಮಾರ ನಿರಂಜನ ಪ್ರಭುವೇ  
ಶತಕೋಟಿ ನಮನಗಳು ನಿಮ್ಮಡಿಗೆ 


ಶ್ರೀಮತಿ ಶಾರದಾ ಶಿವಲಿಂಗಸ್ವಾಮಿ 
ನಿವೃತ್ತ ಮುಖ್ಯೋಪಾಧ್ಯಾಯಿನಿ, ಮೈಸೂರು 
******

125.
🙏ಮಹಾತಪಸ್ವಿ🙏

೧೨ ನೇ ಶತಮಾನದ ಬಸವಣ್ಣನವರನ್ನು ನಾವು ಕಂಡಿಲ್ಲ‌. ಆದರೆ ೨೧ನೇ ಶತಮಾನದಲ್ಲಿ ಯುಗಪ್ರವರ್ತಕರಾಗಿ ನಡೆದಾಡುವ ದೇವರಾಗಿ ನಮಗೆಲ್ಲಾ ಮಾರ್ಗದರ್ಶಕರಾದವರು ಸಿದ್ಧಗಂಗಾ ಶ್ರೀಗಳು. ತಮ್ಮ ಬದುಕಿನ ಹೆಚ್ಚಿನ ಕ್ಷಣಗಳನ್ನು ಶ್ರೀಗಳು ಮಕ್ಕಳ ಜೊತೆಯಲ್ಲಿಯೇ ಕಳೆದರು. ತಾವು ಊಟದ ಸಮಯಕ್ಕಿಂತ ಮೊದಲೇ ಲಿಂಗೈಕ್ಯರಾದರೆ ಮಕ್ಕಳು ಊಟ ಮಾಡಿದ ನಂತರವೇ ಪ್ರಕಟಿಸಬೇಕೆಂದು ಮಠದ ಸಿಬ್ಬಂದಿಗೆ ತಿಳಿಸಿ ತಮ್ಮ ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ. ಇಂತಹ ನಡೆದಾಡುವ ದೇವರಾಗಿದ್ದ ಕರ್ನಾಟಕ ರತ್ನ ಸಿದ್ದಗಂಗಾ ಶ್ರೀಗಳ ಅಗಲಿಕೆಯಿಂದ ಇಡೀ ವಿಶ್ವಕ್ಕೆ ತುಂಬಲಾರದ ನಷ್ಟವಾಗಿದೆ. ಇಂತಹ ಮಹಾನ್ ತಪಸ್ವಿಗಳ ನೆನಪು ಸೂರ್ಯ ಚಂದ್ರ ಇರುವವರೆಗೂ ಶಾಶ್ವತವಾಗಿ ಇರುತ್ತದೆ. ಶ್ರೀಗಳು ದೈಹಿಕವಾಗಿ ಇಲ್ಲದಿದ್ದರೂ ಮಾನಸಿಕವಾಗಿ ನಮ್ಮ ಜೊತೆಯಲ್ಲಿದ್ದಾರೆ. ಇಂತಹ ಮಹಾತಪಸ್ವಿಗಳು ಆಗಾಗ ಕರುನಾಡಿನಲ್ಲಿ ಅವತರಿಸಲಿ ಎಂದು ಬಸವಾದಿ ಶರಣರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.

ಭ. ಪಂಪಾಪತಿ
ಕಾರ್ಯಾಧ್ಯಕ್ಷರು
ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್
@@@@@

126.
*ಅನಂತದೆಡೆಗೆ ನಡೆದ ಶ್ರೀ ಚೇತನ*

ಮಾತೃ ಹೃದಯದ ಮಮತಾಮಹಿ
ಅನ್ನದಾನಿ
ವಿದ್ಯೆಯ ನೀಡಿದ ಕರುಣಾಮಹಿ ಜ್ಞಾನದಾನಿ
ದೇವರ ಸನ್ನಿಧಿ ನಿಮ್ಮಯ ತಾಣ ಶತಮಾನದ ಶತಾಯುಷಿ

ತ್ರಿವಿಧ ದಾಸೋಹಿ ಸಿದ್ಧಗಂಗೆಯ ಸಿದ್ಧಪುರುಷ
ಜ್ಞಾನ ಪ್ರಸಾದದ ಬಂಡಾರ ಮಹಾಋಷಿ
ಶರಣ ಸಂಸ್ಕೃತಿಯ ಬ್ರಹ್ಮಕಮಲ
ಕಾಯಕದಲ್ಲಿಯೆ ಕರ್ಮ ಕಾಯಕವೆಂಬುದೇ ಧರ್ಮ
ಕಾಯಕತತ್ವದ ಕ್ರಿಯಾಶೀಲ ಚೇತನ
ಬೇಧವ ತೋರದ ವಿಶ್ವ ಚೇತನ
ವಿದ್ಯಾರ್ಥಿಗಳ ನಿಧಿ ಆಧ್ಯಾತ್ಮ ಜ್ಯೋತಿ

ಆಧ್ಯಾತ್ಮ ಗುರು ಜ್ಞಾನದ ದೊರೆ
ಪ್ರತಿಫಲ ಬಯಸದೆ ಸೇವೆಯ ಗೈದ ಕಾಯಕಯೋಗಿ
ಮಾನವ ಧರ್ಮದ ಮುಕುಟಮಣಿ ವಿಭೂತಿ ಪುರುಷ
ಮನುಕುಲದ ದಾರಿದೀಪ ಯುಗಪುರುಷ
ಆಶ್ರಯದಾತ ವಾತ್ಸಲ್ಯ ಶ್ರೀ ಸಿದ್ಧಗಂಗಾ ಶ್ರೀನಿಧಿ
ಜಂಗಮ ಶ್ರೇಷ್ಟ ಜ್ಞಾನಕೋಶ
ಅವತಾರ ಪುರುಷ ಮಹಾಚೇತನ
ಅನಂತದೆಡೆಗೆ ನಡೆದ ನಡೆದಾಡುವ ದೇವರು ಅಜರಾಮರ


ದೇಸು ಆಲೂರು...✍
@@@@

127.
ಸ್ವರ್ಗಕ್ಕೆ ನಡೆದ ದೇವರು *
ತ್ರಿವಿದ ದಾಸೋಹದ ಮಾನವ ಕೋಟಿಯ ಮಹಾ ಚೇತನ
ನಡೆದಾಡುವ ದೇವರ ಅಭಿವ್ಯಕ್ತಿಯ ಅನಿಕೇತನ
   ಮಾತೃ ಮಯಿ, ತ್ಯಾಗ ಮಯಿ ದೇವಲೋಕದ ಜೀವ ಚೇತನ
ಭಕ್ತಿ ದೇಗುಲ ಬೆಳಗಿದ ಜ್ಞಾನದೀಪದ ಸೂರ್ಯಕಂಪನ
   ಜ್ಞಾನ ಭಂಡಾರದ ಸಿಂಧೂರ, ಶಿಷ್ಯಕಾಶಿಯ ಮಂದಾರ
ಭೂಲೋಕದ ಹರಿಕಾರ, ಶತಮಾನದ ಶಿಖರ
  ನುಡಿದಂತೆ ತಾ ನಡೆದು, ಮಾನವೀಯತೆ ಮೇರೆದ ದೇವದೂತ
ಹಸಿದವರ ದಾಹ ನೀಗಿಸುವ ಅನ್ನದಾತ,
ಅಮರತ್ವದ ಪಡೆದ ದಿವ್ಯ ಶಾಂತಿದೂತ
   ಜೀವನ ಗೆದ್ದ ಪ್ರಜಾ ಪ್ರಜ್ಞೆಯ ಸರಸ್ವತಿ ಪುತ್ರರು,
ಅಧ್ಯಾತ್ಮ ಸಮಾಜಮುಖಿಯ ಪುಣ್ಯಾತ್ಮರು
   ಬಡವರ, ದೀನದಲಿತರ ಅಭಿವೃದ್ಧಿಚಿiÀು ಕಾರ್ಯಯೋಗಿ
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಯ ಅಮೂಲ್ಯ ರತ್ನ
ಸಿದ್ಧಗಂಗಾ ಅನಾಥವಾಯಿತೇ!
   ಕಡಲು, ಮುಗಿಲು ಕಂಪಿಸುತಿದೇ ಶ್ರೀಗಳ ಮರಣ-ಮೃದಂಗ
ಅನ್ನ-ಅಕ್ಷರ-ಜ್ಞಾನದ ಕೊಂಡಿ ಕಳಚಿ ಹೋಯಿತೇ!
  ಶ್ರೀಗಳ ಮೌನ-ತರಂಗ
ಶೋಕ ಸಾಗರದಲ್ಲಿ ಮುಳುಗಿದ ಕನ್ನಡ ನಾಡು
ಕಲಿಯುಗದ ದೈವ ಗರ್ಭ ಗುಡಿಯ ಬೀಡು
  ಸ್ವರ್ಗಕ್ಕೆ ನಡೆದ ದೇವರಿಗೆ ಭಕ್ತಿ ಪೂರ್ವಕ ನಮನ...........
  ಲಿಂಗೈಕ್ಯ ಸಿದ್ದಗಂಗಾ ಶ್ರೀಗಳಿಗೆ ನನ್ನ ಹ್ಲದಯಶ್ಪರ್ಶಿ ನಮನ......
ಸುರೇಶ್ ರಾವ್ ಚವ್ಹಾಣ್ ಜಿ.
(ಆರೋಗ್ಯ ಇಲಾಖೆ)
ನಂ.67/2, "ಜೀವಸೌಧ"
ಕುವೆಂಪು ಬಡಾವಣೆ,
ಸಂಗೊಳ್ಳಿ ರಾಯಣ್ಣ ಮುಖ್ಯ ರಸ್ತೆ, ಕೆ.ಆರ್.ನಗರ ಟೌನ್,
ಮೈಸೂರು-571602.
                    
@@@@@

128.
ಶ್ರೀಗಳಿಗೊಂದು ನಮನ          
ಸಿದ್ಧಗಂಗೆಯ ಪುತ್ರ ಸಿದ್ಧಲಿಂಗೇಶ್ವರನ ಭಕ್ತ  ಸಿದ್ಧಿಸಿದ ವಿದ್ಯೆಯ  ಧಾರೆಯೆರೆದ ಸಿದ್ಧ ಪುರುಷ   ಜಂಗಮರ ದಾಸೊಹಕ್ಕೆ    ನೀನೇ ಆಧಾರ          ಸಿದ್ಧಗಂಗಾ ಮಠಕ್ಕೆ          ನೀನೇ ಜೀವಾಳ ಮಣ್ಣಾಮುದ್ದೆಯು   ಹೊಳೆದವು                       ನಿನ್ನ ಪ್ರಖರತೆಗೆ            ಅಳಸಿದೆ ಯುಗದ ಕಳಂಕ ಗಳಿಸಿದೆ ದೇವತ್ವ                    ಓ ಕನ್ನಡದ ರತ್ನವೇ ಮನುಕುಲದ ಇತಿಹಾಸದಲ್ಲಿ  ನೀ ಎಂದೆಂದಿಗೂ ಅಮರ      ಓ ಗುರುಕುಲದ ಹಿರಿಮೆಯೆ ನಿನಗಿದು ಕೊಟಿ ಕೊಟಿ ಪ್ರಣಾಮ.                          ಶಾಮರಾವ ನೆಲವಾಡೆ .ಮ.ಸಂ.೯-೯೧೩೭,ಅಕ್ಕಮಹಾದೇವಿ ಕಾಲೊನಿ, ಹಾರೂರಗೆರಿ ರಸ್ತೆ ಬೀದರ.-೫೮೫೪೦೩
@@@@@

129.
ನಾನು ಕಂಡಂತೆ ಪೂಜ್ಯ ಸಿದ್ಧಗಂಗಾ ಶ್ರೀಗಳು

ನಮ್ಮದು ಸಾಧಾರಣ ರೈತಾಪಿ ಕುಟುಂಬ . ನಾನು 1959 ರಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ತೇರ್ಗಡೆಯಾಗಿ ಮುಂದೆ ಓದಲು ಅನುಕೂಲವಿರಲಿಲ್ಲ. ಹೀಗಾಗಿ 2 ವರ್ಷಗಳು ಕಳೆದವು.
ಆಗ ಭಗವಂತನ ಕೃಪೆಯಿಂದ ನನ್ನ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಕೆ ಜಿ ಸತ್ಯನಾರಾಯಣರವರವರನ್ನು ಭೇಟಿ ಮಾಡಿ ನನ್ನ ಸಮಸ್ಯೆಗಳನ್ನು ಹೇಳಿಕೊಂಡಾಗ  ಅವರು ಸಿದ್ಧಗಂಗಾ ಶ್ರೀಗಳ ಬಳಿ ಕರೆದುಕೊಂಡು ಹೋದರು. ಶ್ರೀಗಳು ನಮ್ಮ ಸಮಸ್ಯೆ ಆಲಿಸಿ ಮಠದ ಹಿಂದಿನ ಛತ್ರದಲ್ಲಿ ಇರಲು ಅವಕಾಶ ಮಾಡಿಕೊಟ್ಟರು.

ಆಗ ನಾನು ಅಲ್ಲಿ ಟಿ ಸಿ ಎಸ್ ಅಧ್ಯಯನ ಮಾಡಿ ಅಲ್ಲೇ ಕಾಲೇಜು ವ್ಯಾಸಂಗವನ್ನು ಪೂರ್ಣಗೊಳಿಸಿದೆ. ತದನಂತರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಪ್ರೌಢಶಾಲಾ ಮುಖ್ಯೋಪಾಧ್ಯಾರಾಗಿ ನಿವೃತ್ತಿ ಹೊಂದಿದೆ‌. ನನ್ನ ಜೀವನದ ಅಭ್ಯುದಯಕ್ಕೆ ಶ್ರೀಗಳ ಕೃಪಾಕಟಾಕ್ಷವೇ ಕಾರಣ ಎಂದು ತಿಳಿಸುತ್ತಾ ಭಕ್ತಿ ಪೂರಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

ಅಬ್ದುಲ್ ರಹೀಮ್
ರಾಜೀವ್ ನಗರ
ಮೈಸೂರು
@@@@@@

130.

            OM NAMAH SHIVAYA
SHRI SHRI SHRI DR SHIVAKUMAR SWAMIJI
THOUGHT:
"SUN WILL NEVER SET IN THE SKY"
"IN NORTH INDIA THERE IS GANGA RIVER BUT IN SOUTH INDIA THERE IS SIDDAGANGA MATHA"
IN THE HISTORY SWAMIJI OF 111 YEASRS SERVES FOR MANY PEOPLE IN FOOD,
EDUCATION AND SHELTER.SWAMIJI ALSO CALLED "WALKING GOD".
SWAMIJI TOOK CARE OF LOT OF  CHILDRENS EDUCATION AND
MORE HIS INSTITUTE HELPS FOR RURAL STUDENTS TO GET EDUCATION.
WE CAN FIND HIS SIMPLICITY  AND IS WISDOM IN HIS LIFE.
ALWAYS SWAMIJI GIVES IMPORTANCE TO TIME.SWAMIJI SAYS ALWAYS
"WORK IS WORKSHIP".SWAMIJI PERFORMS THREE  TIMES POOJA EVERY DAY.
NO DISCRIMINATION AMONG THE CASTES.SHIVAKUMAR SWAMIJI SAYS
THAT "IF WE SALUTE OUR WORK THAN WE DOES'T SALUTE FOR ANYBODY".
I FEEL NO WORDS ARE SPEAK ABOUT GREATNESS OF SWAMIJI.



FROM,
BASAWARAJ SAHUKAR
COMPUTER SCIENCE
ENGINEER,
GULBARGA .   
@@@

131.
@@@
132.

@@@

133.
@@@

134.
@@

135.
@@@@

136.

@@@@@

137.

@@@@

138.

@@@@@

139.


140.
141.
@@@@

142.
@@@

143.

@@@

144.

145.
@@@

146.
@@@@

147.

@@@@@

148.

@@@@@@

149.
@@@@

150.


@@@

151.

@@@

152.
ಸಿದ್ದಗಂಗೆಯ ಶಿವಕುಮಾರ ಶ್ರೀಗಳು ಗಾಳಿಯಿಂದ ಶಿವಲಿಂಗ ತೆಗೆಯಲಿಲ್ಲ
ಬೂದಿಯಿಂದ ಉಂಗುರ ಸೃಷ್ಟಿಸಲಿಲ್ಲ##
ಸ್ಪರ್ಶ ಮಾತ್ರದಿಂದಲೇ ಖಾಯಿಲೆ ಗುಣಪಡಿಸಲಿಲ್ಲ
ಸೇವ ಮನೋಭಾವ ಇರುವ ಯಾವುದೇ ಸಾಮಾನ್ಯ ಮನುಷ್ಯರು ಮಾಡಬಹುದಾದ
ಅನ್ನ,ಅಕ್ಷರ. ಆಶ್ರಯ ಎಂಬ
ತ್ರಿವಿಧ ದಾಸೋಹವನ್ನು ಸಣ್ಣ ಪ್ರಮಾಣದಲ್ಲೆ ಆರಂಭಿಸಿ
ಬದ್ದತೆಯಿಂದ ಅದನ್ನು ಲಕ್ಷಾಂತರ ಜೀವಗಳಿಗೆ ಉಣಬಡಿಸಿ ದೇವರೆನಿಸಿಕೊಂಡರು🙏🙏
ನಿಜವಾದ ಪವಾಡವೇ ಇದು ಒಳ್ಳೆಯತನವೊಂದೇ ಮನುಷ್ಯನನ್ನು ದೇವರಾಗಿಸಬೇಕೆ ಹೊರತು
ಜನರನ್ನು ಮೋಸ ಮಾಡುವ ಕಣ್ಕಟ್ಟು,ಕೈ ಚಳಕದಂತ ಮಾಯಾ ಜಾಲಗಳಲ್ಲ
 ಅಂತವರು ಕಳ್ಳರೆ ಹೊರತು ಸ್ವಾಮಿಜಿಗಳಲ್ಲ ಸ್ವಾಮಿಗಳು ಎಂಬ ಪದಕ್ಕೆ ಇನ್ನೂ ಗೌರವ ಉಳಿದಿದೆ ಎಂದರೆ ಅದು ಸಿದ್ದಗಂಗೆಯ ಸಿದ್ದಪುರುಷ ಶ್ರೀ ಶಿವಕುಮಾರಸ್ವಾಮಿಗಳು ಅವರ ಪಾದಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು ಶರಣು ಶರಣಾರ್ಥಿಗಳು🙏🙏🙏
ಲಿಕಿತ್ ಕುಮಾರ್
10 ನೇ ತರಗತಿ ಮೈಸೂರು
@@@@


B

No comments:

Post a Comment