Sunday, December 2, 2018

ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನೆಡಿಗೆ


ಮೈಸೂರು :- ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ವಚನಗಳ ಕೊಡುಗೆ ಗಮನಾರ್ಹ ಎಂದು ಮೈಸೂರು ಉತ್ತರವಲಯದ ಕ್ಷೇತ್ರಸಂಪನ್ಮೂಲ ಸಮನ್ವಯಾಧಿಕಾರಿ ಎ.ಜೆ.ಸೋಮಶೇಖರ್ ಹೇಳಿದರು.ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಮೈಸೂರು ಉತ್ತರವಲಯದ  ಸರ್ಕಾರಿ ನಿರ್ದಿಷ್ಟ ವರ್ಗದ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವ ಸಾಹಿತ್ಯಕ್ಕೆ ಕನ್ನಡದ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ನೀಡಿದ ಕೊಡುಗೆಗಳು ಅಪೂರ್ವವಾದವುಗಳಾಗಿವೆ. ವಚನ ಸಾಹಿತ್ಯದ ಮೂಲಕ ವಚನಕಾರರು ಜನರ ಆಡುಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಮ್ಮ ಅನುಭವಗಳನ್ನು ವ್ಯಕ್ತಪಡಿಸುವುದರ ಮೂಲಕ ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ವಿಶೇಷ ಪ್ರಯತ್ನ ಪಟ್ಟರು.ಅಂದಿನ ಸಮಾಜದಲ್ಲಿದ್ದ ಜಾತಿ ಪದ್ಧತಿ,ಮೇಲು-ಕೀಳು, ಬಡವ-ಬಲ್ಲಿದ ಮುಂತಾದವುಗಳ ವಿರುದ್ಧವಾಗಿ ಮಾನವಧರ್ಮವೇ ಪ್ರಧಾನವಾಗಿ ಎಲ್ಲರೂ ಒಂದೇ ಹಾಗೂ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದನ್ನು 12 ನೇ ಶತಮಾನದಲ್ಲಿಯೇ ಬಸವಣ್ಣ ತೋರಿಸಿಕೊಟ್ಟಿದ್ದಾರೆ. ಸಾಮಾನ್ಯ ಜನರು ವಚನಗಳ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದರು.ಕಾರ್ಯಕ್ರಮದ ಆಯೋಜಕರಾದ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಮುಂದಿನ ನವ ಸಮಾಜ ನಿರ್ಮಾಣದ ಕುಡಿಗಳು ಶಾಲೆಯಲ್ಲಿ ಅರಳುತ್ತಿರುವುದರಿಂದ ನಾವು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅವರಲ್ಲಿ ವಚನಕಾರರ ಆಶಯವಾದ ಸಮಾನತೆ, ಸಹೋದರತೆ, ಸುಸಂಸ್ಕøತೆ ಮುಂತಾದ ಮೌಲ್ಯಗಳನ್ನು ಬೆಳೆಸಲಾಗುತ್ತಿದೆ. ಮಕ್ಕಳು ಬಾಲಸಂಗಯ್ಯನವರ ತನ್ನ ತಾನರಿತು ತಾನಾರೆಂದು ತಿಳಿದೊಡೆ ತಾನೇ ದೇವರು ನೋಡಾ ಎಂಬ ವಚನ ಅರ್ಥೈಸಿಕೊಂಡರೆ ಸಾಕು ದೈವಿಕತೆಯನ್ನು ತಮ್ಮಲ್ಲಿಯೇ ಕಾಣಬಹುದು ಎಂದರು.ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಗೌರಮ್ಮ, ಮುಖ್ಯಶಿಕ್ಷಕ ಎಸ್,ಎಂ.ಮಹೇಶ್ ಬಿ.ಆರ್.ಪಿ ಗಳಾದ ಮಹದೇವಪ್ರಸಾದ್,ಮಹೇಶ್ ಶಿಕ್ಷಕರುಗಳಾದ ಚಂದ್ರಕುಮಾರ್, ಜಗದಾಂಬ, ಕಾವ್ಯಶ್ರೀ, ಮನೋರಮಣಿ, ಭಾರ್ಗವಿ, ಆಶಾರಾಣಿ, ಮಂಗಳಗೌರಮ್ಮ, ಮದು, ಸೌಜನ್ಯ, ಶೈಲಾ, ರತ್ನಮ್ಮ, ಮಂಗಳಮ್ಮ, ಮಂಜುಳ, ಅಶ್ವಿನಿ ಉಪಸ್ಥಿತರಿದ್ದರು
====================================================================


ನಂಜನಗೂಡು: ಮೌಡ್ಯತೆ ವಿರುದ್ಧ ವಚನಗಳ ಮೂಲಕ ಜಾಗೃತಿ ಉಂಟುಮಾಡಿದ ಪ್ರಥಮ ವ್ಯಕ್ತಿ ಎಂದರೆ ಅದು ಬಸವಣ್ಣ ಎಂದು ಮಿತ್ರಕೂಟದ ಅಧ್ಯಕ್ಷ ಎನ್.ವಿ.ಶಿವಲಿಂಗಪ್ಪ ಹೇಳಿದರು.  ಶರಣು ವಿಶ್ವವಚನ ಫೌಂಡೇಶನ್ ಮತ್ತು ಅನುರಾಗಸೇವಾ ಟ್ರಸ್ಟ್ ಸಹಯೋಗದೊಂದಿಗೆ  ದೇವೀರಮ್ಮನಹಳ್ಳಿಯ ಬಳಿಯ ಅನುರಾಗ ಮಕ್ಕಳ ಮನೆಯಲ್ಲಿ ನಡೆದ “ ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ” ಎಂಬ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಂಧಕಾರ ಕವಿದಿದ್ದ ಕಾಲಘಟ್ಟದಲ್ಲಿಯೇ ಎಂದೆಂದೂ ವೈಜ್ಞಾನಿಕವಾಗಿ ಚಿಂತನೆಗೆ ತೊಡಗಿಸುವ ವಚನಗಳ ಮುಖಾಂತರ ಎಲ್ಲಾ ಸಮುದಾಯದಲ್ಲೂ ಒಂದು ರೀತಿಯ ಹೊಸ ಸಂಚಲನವನ್ನು ಸೃಷ್ಟಿಸಿ ಬದಲಾವಣೆಯ ನೇತಾರರಾದರು. ಎಂದೆಂದಿಗೂ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿರುವ ವಚನಗಳನ್ನು ಶಾಲೆಗಳಲ್ಲಿ, ವಿದ್ಯಾರ್ಥಿನಿಲಯಗಳಲ್ಲಿ ಮತ್ತು ಹಳ್ಳಿಗಳಲ್ಲಿ ಪ್ರಸಾರ ಮಾಡಿ ಜನರಲ್ಲಿನ ಮೌಡ್ಯತೆಯನ್ನು ಕಡಿಮೆ ಮಾಡುತ್ತಿರುವ ಶರಣು ವಿಶ್ವವಚನ ಫೌಂಡೇಶನ್ ಕಾರ್ಯ ನಿಜಕ್ಕೂ ಒಂದು ರೀತಿಯ ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಪಂಡಿತ ಪಾಮರರ ಸ್ವತ್ತಾಗಿದ್ದ ಸಾಹಿತ್ಯವನ್ನು ಕೆಳವರ್ಗದವರೂ ಕೂಡ ರಚಿಸಿ ತಮ್ಮ ಜ್ಞಾನವನ್ನು ಹೊರಹೊಮ್ಮಿಸಬಹುದು ಎಂದು ತೋರಿಸಿಕೊಟ್ಟಿದ್ದೇ ಬಸವಣ್ಣನವರು. ದನಗಾಹಿ ರಾಮಣ್ಣ, ಮಾದಾರ ಚನ್ನಯ್ಯ,, ಮಾರುಡಿಗೆಯ ನಾಚಯ್ಯ, ಸೂಳೆ ಸಂಕವ್ವೆ ಮೊದಲಾದವರಲ್ಲಿ ಅಕ್ಷರ ಕ್ರಾಂತಿ ಉಂಟುಮಾಡುವುದರ ಮುಖಾಂತರ ಅವರನ್ನು ವಚನಕಾರರನ್ನಾಗಿ ಮಾಡಿದ ಬಸವಣ್ಣನವರ ವ್ಯಕ್ತಿತ್ವ ಘನವಾದದ್ದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಚಿಕ್ಕಮಕ್ಕಳಿಂದ ಹಿರಿಯರವರೆಗೂ 6 ವಿಭಾಗ ಮಾಡಿ ವಚನಸ್ಪರ್ಧೆ ನಡೆಸಿ ವಿಜೇತರಾದವರಿಗೆ ವಿಶೇಷ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಅನುರಾಗ ಸೇವಾ ಟ್ರಸ್ಟ್ ಸಂಸ್ಥಾಪಕ ಡಿ.ಜಿ.ಸೋಮಶೇಖರ್, ಎ.ಪಿ.ಎಂ.ಸಿ ಸದಸ್ಯ ಗುರುಸ್ವಾಮಿ, ಬಸವಬ್ರಿಗೇಡ್ ಅಧ್ಯಕ್ಷ ಟಿ.ಕೆ.ನಿರಂಜನಮೂರ್ತಿ, ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪಕುಮಾರಸ್ವಾಮಿ, ಲಿಂಗರಾಜಣ್ಣ, ಶಂಭುಲಿಂಗಸ್ವಾಮಿ, ಬಸವರಾಜಪ್ಪ, ಮಾದಪ್ಪ, ಲಿಂಗಣ್ಣ, ಪಂಪಾಪತಿ, ಪ್ರಭುಸ್ವಾಮಿ, ಚಿನ್ನತಾಯಮ್ಮ, ಶಶಿಕಲಾ ಗಿರೀಶ್, ಮಂಜುಳ ಮಧು ಉಪಸ್ಥಿತರಿದ್ದರು.
================================================

ಕೊಳ್ಳೇಗಾಲ: ಸರ್ವಸಮಾನತೆಯ ತತ್ವದ ಮೇಲೆ ಆದರ್ಶ ಸಮಾಜ ನಿರ್ಮಾಣ ಮಾಡಿದವರು ಹನ್ನೆರಡನೇ ಶತಮಾನದ ವಚನಕಾರರು ಎಂದು ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್, ಮೈಸೂರು ಮತ್ತು  ಶ್ರೀ ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿಲಯದ ಸಹಯೋಗದೊಂದಿಗೆ ಕೊಳ್ಳೇಗಾಲ ತಾಲ್ಲೂಕು ಮುಡಿಗುಂಡದ ಶ್ರೀ ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿ ನಿಲಯದಲ್ಲಿ ನಡೆದ “ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ” ಎಂಬ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾನವನನ್ನು ಮಹಾದೇವನಲ್ಲಿ ಬೆರೆಸುವ ಮಾರ್ಗದರ್ಶಕವಾಗಿ ವಚನಗಳು ರಚನೆಯಾದವು. ಅವು ಮಹಾಲಿಂಗದ ಬೆಳಕಾಗಿವೆ. ಶರಣರು ಜನಮಾನಸದಲ್ಲಿದ್ದ ಅಜಾÐನ ಅಂಧಕಾರವನ್ನು ದೂರಮಾಡಿ ಜ್ಞಾನದ ಬೆಳಕನ್ನು ಪಸರಿಸಿದರು. ನಮ್ಮ ನಿಜವಾದ ಆಯಸ್ಸು ನಾವು ಸಂಸ್ಕಾರವಂತರಾದಾಗ ಮಾತ್ರ ಪ್ರಾರಂಭವಾಗುತ್ತದೆ. ಅಂತಹ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕಾದರೆ ನಾವು ವಚನಗಳನ್ನು ಅಧ್ಯಯನ ಮಾಡಬೇಕು. ಮನುಷ್ಯ ಸತ್ತ ನಂತರ ಅವನ ದೇಹ ಸತ್ತ ಮೊಲದ ದೇಹಕ್ಕಿಂತಲೂ ಕೀಳಾಗುತ್ತದೆ ಏಕೆಂದರೆ ಸತ್ತ ಮೊಲವನ್ನು ಯಾರಾದರೂ ಕೊಂಡುಕೊಳ್ಳುತ್ತಾರೆ ಆದರೆ ಸತ್ತ ಮನುಷ್ಯನ ದೇಹವನ್ನು ಒಂದಾಣೆಗೂ ಯಾರೂ ತೆಗೆದುಕೊಳ್ಳುವುದಿಲ್ಲ. ಉಸಿರು ನಿಂತ ಮೇಲೂ ಹೆಸರು ಇರಬೇಕಾದರೆ ನಾವು ಉತ್ತಮ ನಡತೆಯನ್ನು ರೂಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕಾಗುತ್ತದೆ ಎಂದರು.  ಶರಣು ವಿಶ್ವವಚನ ಫೌಂಡೇಶನ್ ನಿದೇಶಕಿ ರೂಪ ಕುಮಾರಸ್ವಾಮಿ, ಮಾತನಾಡಿ ಮಾವಿನಮರ ಮತ್ತು ಕೋಗಿಲೆಯನ್ನು ವಸಂತಕಾಲ ಒಂದು ಮಾಡುವಂತೆ ಸತ್‍ಚಿಂತನೆಯ ಇಂತಹ ಚಟುವಟಿಕೆಗಳು ನಮ್ಮೆಲ್ಲರನ್ನು ಒಂದು ಮಾಡಿದೆ. ಈ ದಿನ ಕಲಿತ ಮೌಲ್ಯಗಳನ್ನು ನಾವು ಬದುಕಿರುವವರೆಗೂ ಅಳವಡಿಸಿಕೊಂಡಾಗ ನಮ್ಮ ಬದುಕಿಗೆ ಮೌಲ್ಯ ಬರುತ್ತದೆ. ಈ ದಿನ ನಾವು ವಚನ ಹೇಳುತ್ತಿದ್ದೇವೆ ಎಂದರೆ ನಾವು ಉತ್ತಮ ರೀತಿಯಲ್ಲಿ ನಡೆಯುತ್ತೇವೆ ಎಂದು ಪ್ರಮಾಣ ಮಾಡುತ್ತಿದ್ದೇವೆ ಎಂದರ್ಥ ಎಂದರು. ಕಾರ್ಯಕ್ರಮದಲ್ಲಿ ಗುಬ್ಬಿತೋಟದಪ್ಪ ವಿದ್ಯಾರ್ಥಿನಿಲಯದ ಮಹಾಪೋಷಕ ಉದಯಶಂಕರ್, ತಾಲ್ಲೂಕು ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ, ಖಜಾಂಚಿ ಸಂಗನಬಸಪ್ಪ, ಚಾಮರಾಜನಗರ ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಸಿ.ರಾಜಶೇಖರಮೂರ್ತಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ್  ಕಾರ್ಯಾಧ್ಯಕ್ಷ  ಪಂಪಾಪತಿ,  ಉಪಾಧ್ಯಕ್ಷ ಮುಡಿಗುಂಡ ಪುಟ್ಟಪ್ಪ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಶಶಿಕುಮಾರ್, ಉದ್ಯಮಿ ಮಾದಪ್ಪ, ಜಗದಾಂಬ, ನಾಗವೇಣಿ, ಕಾತ್ಯಾಯಿನಿ, ಸ್ವರ್ಣಲತಾ, ದೊಡ್ಡಮಲ್ಲಪ್ಪ ಉಪಸ್ಥಿತರಿದ್ದರು.


====================================================================


ಮೈಸೂರು:- ಶರಣರ ವಚನಗಳು ಜಾಗತಿಕ ಮೌಲ್ಯಗಳಾಗಿವೆ ಎಂದು ಹುಣಸೂರು ಶ್ರೀ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಆರ್. ಗುರುಸ್ವಾಮಿ ಹೇಳಿದರು. ಮೈಸೂರಿನ ಸರ್ದಾರ್ ವಲ್ಲಭಬಾಯಿ ಪಟೇಲ್ ನಗರದ ರಾವ್ ಬಹದ್ದೂರ್ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿಲಯದಲ್ಲಿ ನಡೆದ ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಹನ್ನೆರಡನೇ ಶತಮಾನದಲ್ಲಿ ಇದ್ದಂತಹ ರಾಜಕೀಯ ಅಸ್ಥಿರತೆಯ ಸಂದರ್ಭದಲ್ಲಿ ಮಾನವನ ಅಂತಃಕರಣವನ್ನು ಶುದ್ಧಿ ಮಾಡಲು ನಡೆದಂತಹ ಚಳುವಳಿಯೇ ವಚನ ಚಳುವಳಿ. ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಎಲ್ಲಾ ಜನಾಂಗದವರನ್ನು ಒಪ್ಪಿಕೊಂಡು ಅಪ್ಪಿಕೊಂಡು ರಚಿತವಾದ ಸಾಹಿತ್ಯ ಯಾವುದಾದರೂ ಇದ್ದರೆ ಅದು ವಚನ ಸಾಹಿತ್ಯ. ಮೌಡ್ಯತೆಯನ್ನು ತೊಡೆದುಹಾಕಿ, ಮೇಲು ಕೀಳು ಎಂಬ ಭೇದವನ್ನು ಕಿತ್ತೊಗೆದು ಎಲ್ಲರನ್ನು ಅನುಭವಮಂಟಪದಲ್ಲಿ ಸಮನಾಗಿ ಕುಳಿತು ಚರ್ಚಿಸಲು ಅವಕಾಶ ಮಾಡಿಕೊಡುವುದರ ಮುಖಾಂತರ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದರು. ಜಗತ್ತಿನ ಎಲ್ಲಾ ಧರ್ಮಗಳು ಬೇರೆ ರೀತಿಯ ಪೂಜೆಗಳ ಬಗ್ಗೆ ಹೇಳಿದರೆ ವಚನ ಧರ್ಮವು ಕಾಯಕವನ್ನು ಮಾಡಿ ದೇವರನ್ನು ಒಲಿಸಿಕೊಳ್ಳಿ ಎಂದು ಕರೆ ನೀಡಿತು. ನಾವು ಕಾಯಕಕ್ಕೆ ಮಹತ್ವ ನೀಡಿ ಕಾಯಕಜೀವಿಗಳಾದಾಗ ಮಾತ್ರ ನಮ್ಮ ದೇಶ ಅಬಿವೃದ್ಧಿಯಾಗಲು ಸಾಧ್ಯ ಎಂದು ತಿಳಿಸಿದರು. ನಂತರ ಮಾತನಾಡಿದ ಶ್ರೀ ಶಿವರಾತ್ರಿರಾಜೇಂದ್ರಸ್ವಾಮಿ ಟ್ರಸ್ಟ್ ಅಧ್ಯಕ್ಷ ಪ್ರೊ.ಪುಟ್ಟಬುದ್ಧಿ ವಿದ್ಯಾರ್ಥಿನಿಲಯಗಳಲ್ಲೂ ಕೂಡಾ ವಿದ್ಯಾರ್ಥಿಗಳಲ್ಲಿ ವಚನಗಳ ಮೂಲಕ ಸಂಸ್ಕಾರ ಮೂಡಿಸಲು ಪ್ರತಿ ವಿದ್ಯಾರ್ಥಿಗಳಲ್ಲಿ ವಚನವನ್ನು ಹೇಳಿಸಿ ಅವರಿಗೆ ವಚನಪುಸ್ತಕ ನೀಡಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು  ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಿರುವ ವಿಶ್ವವಚನ ಫೌಂಡೇಶನ್ ಅಭಿನಂದನೆಗೆ ಅರ್ಹವಾದುದು ಎಂದರು. ಕನ್ನಡ ಸರ್ವೋದಯ ಮಂಡಲದ ಅಧ್ಯಕ್ಷೆ ಲೀಲಾ ಶಿವಕುಮಾರ್, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ, ಪರಿಸರ ಪ್ರೇಮಿ ಮಹೇಂದ್ರಸಿಂಗ್ ಕಾಳಪ್ಪ, ಶರಣು ವಿಶ್ವವಚನ ಫೌಂಡೇಷನ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾರ್ಯಾಧ್ಯಕ್ಷ ಪಂಪಾಪತಿ, ಕಾರ್ಯದರ್ಶಿ ರತ್ನಮ್ಮ ಜಯಣ್ಣ, ಕೇಂದ್ರೀಯಸಂಚಾಲಕರಾದ ಲಿಂಗಣ್ಣ ಮತ್ತು ಕಾವೇರಿ, ಮಾಧ್ಯಮ ಸಂಚಾಲಕ ನಾಗೇಂದ್ರ, ಗಂಗಾಧರಪ್ಪ, ಆನಂದಮೂರ್ತಿ, ವೀರಭದ್ರಪ್ಪ, ಮಲ್ಲಿಕಾರ್ಜುನಸ್ವಾಮಿ, ಬಸವಣ್ಣ, ಕೆಂಡಗಣ್ಣಸ್ವಾಮಿ, ಪ್ರಗತಿಪರ ರೈತ ಭಾಸ್ಕರ್ ಉಪಸ್ಥಿತರಿದ್ದರು.
=====================================================================







ಚಿತ್ರ ಸುದ್ಧಿ :- ಶರಣು ವಿಶ್ವವಚನ ಫೌಂಡೇಷನ್ ಮೈಸೂರಿನ ನಜರ್‌ಬಾದ್‌ನಲ್ಲಿರುವ ನಿರ್ದಿಷ್ಟ ವರ್ಗದ ಮಕ್ಕಳ ಸರ್ಕಾರಿ ವಸತಿ ಶಾಲೆಯಲ್ಲಿ ಲಿಂಗೈಕ್ಯ ಈಶ್ವರಯ್ಯನವರ ದತ್ತಿ ಅಂಗವಾಗಿ  ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ವಚನ ವಾಚನ ಮಾಡಿದ ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಶಂಸಾಪತ್ರ ಮತ್ತು ವಚನ ಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಡಿ.ವೈ.ಎಸ್.ಪಿ ಬಸವಣ್ಣ, ಶಿವರಾತ್ರಿÃಶ್ವರ ಸೇವಾ ಬಳಗದ ಅಧ್ಯಕ್ಷ ಪುಟ್ಟಬುದ್ಧಿ,  ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ತಾಲ್ಲೂಕು ಅಧ್ಯಕ್ಷ ಗಿರೀಶ್, ಗೌರವಾಧ್ಯಕ್ಷ ಶ್ರಿÃಕಂಠಮೂರ್ತಿ, ಮುಖ್ಯಶಿಕ್ಷಕ ಎಸ್.ಎಂ.ಮಹೇಶ್, ದತ್ತಿದಾನಿಗಳಾದ ಕೆ.ಎನ್. ಅನ್ನಪೂರ್ಣ,  ಕೇಂದ್ರಿÃಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಉಪಾಧ್ಯಕ್ಷರುಗಳಾದ ಮುಡಿಗುಂಡ ಪುಟ್ಟಪ್ಪ, ಪ್ರೆÃಮ ಪ್ರಭುಸ್ವಾಮಿ, ಸದಸ್ಯರುಗಳಾದ  ಕಾವೇರಿ ಅನಿಲ್, ಮಾಧ್ಯಮ ಸಂಚಾಲಕ ನಾಗೇಂದ್ರ, ದಿನೇಶ್, ಮುತ್ತಮ್ಮ, ಮಹದೇವಪ್ರಸಾದ್, ಗೀತಾ ಶ್ರಿÃಕಂಠಮೂರ್ತಿ, ಬಹುಲಿನ್, ಸಿದ್ದರಾಮ, ಜ್ಙಾನ, ನಾಗರತ್ನ, ಗುಂಡಪ್ಪ, ಶೋಭ, ತಂಗಮ್ಮ, ಇಶಾಂತ್ ಪೂಣಚ್ಚ, ಗೌರಮ್ಮ, ವಚನ, ಗೋಮತಿ ಪ್ರಸಾದ್, ದಕ್ಷ, ನಿಜಗುಣ ಉಪಸ್ಥಿತರಿದ್ದರು.

ಮೈಸೂರು :- ವಿದ್ಯಾರ್ಥಿಗಳಾಗಿದ್ದಾಗಲೇ ಸಂಸ್ಕಾರ ರೂಡಿಸಿಕೊಳ್ಳಲು ವಚನ ಸಾಹಿತ್ಯ ಸಹಕಾರಿಯಾಗಿದೆ ಎಂದು ನಿವೃತ್ತ ಡಿ.ವೈ.ಎಸ್.ಪಿ ಬಸವಣ್ಣ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮೈಸೂರಿನ ನಜರ್‌ಬಾದ್‌ನಲ್ಲಿರುವ ನಿರ್ದಿಷ್ಟ ವರ್ಗದ ಮಕ್ಕಳ ಸರ್ಕಾರಿ ವಸತಿ ಶಾಲೆಯಲ್ಲಿ ಲಿಂಗೈಕ್ಯ ಈಶ್ವರಯ್ಯನವರ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಜೀವನವನ್ನು ಚಿನ್ನಕ್ಕೆ ಹೋಲಿಸುತ್ತಾರೆ ಅದನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ವಿದ್ಯೆಯ ಜೊತೆಗೆ ವಿನಯವನ್ನು ಮೈಗೂಡಿಸಿಕೊಂಡು ಗುರುಹಿರಿಯರಿಗೆ ಹಾಗೂ ನೆರೆಹೊರೆಯವರಿಗೆ ಗೌರವವನ್ನು ಕೊಡುವುದನ್ನು ರೂಡಿಸಿಕೊಳ್ಳಬೇಕು. ನಾನು ಕೂಡಾ ವಿದ್ಯಾರ್ಥಿನಿಲಯದಲ್ಲಿಯೇ ಕಲಿತು ವಿನಯತೆಯನ್ನು ಅಳವಡಿಸಿಕೊಂಡಿದ್ದರಿಂದ ಎಲ್ಲಾ ಸ್ಥರದ ಉದ್ಯೊÃಗಗಳಲ್ಲಿಯೂ ನನಗೆ ಗೌರವ ಸಿಕ್ಕದೆ. ಆದುದರಿಂದ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ನಂತರ ಮಾತನಾಡಿದ ಶಿವರಾತ್ರಿÃಶ್ವರ ಸೇವಾ ಬಳಗದ ಅಧ್ಯಕ್ಷ ಪುಟ್ಟಬುದ್ಧಿ ಕಣ್ಣಿಗೆ ಕಾಣುವ ದೇವರಾದ ತಂದೆತಾಯಿಗಳನ್ನು ಹಾಗೂ ಗುರುಗಳನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ಪಠ್ಯದಲ್ಲಿಯೇ ಅಳವಡಿಕೆಯಾಗಿರುವ ಶರಣರ ವಚನಗಳನ್ನು ಕೇವಲ ಕಲಿಯದೆ ಜೀವನದಲ್ಲಿ ಅಳವಡಿಸಿಕೊಂಡರೆ ಮೌಲ್ಯಯುತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದು ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಮಾತನಾಡಿ ಮಕ್ಕಳಲ್ಲಿ ಸಭಾಕಂಪನ ಹೋಗಲಾಡಿಸಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಪ್ರಸ್ತುತ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.  ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ತಾಲ್ಲೂಕು ಅಧ್ಯಕ್ಷ ಗಿರೀಶ್, ಗೌರವಾಧ್ಯಕ್ಷ ಶ್ರಿÃಕಂಠಮೂರ್ತಿ, ಮುಖ್ಯಶಿಕ್ಷಕ ಎಸ್.ಎಂ.ಮಹೇಶ್, ದತ್ತಿದಾನಿಗಳಾದ ಕೆ.ಎನ್. ಅನ್ನಪೂರ್ಣ,  ಕೇಂದ್ರಿÃಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಉಪಾಧ್ಯಕ್ಷರುಗಳಾದ ಮುಡಿಗುಂಡ ಪುಟ್ಟಪ್ಪ, ಪ್ರೆÃಮ ಪ್ರಭುಸ್ವಾಮಿ, ಸದಸ್ಯರುಗಳಾದ  ಕಾವೇರಿ ಅನಿಲ್, ಮಾಧ್ಯಮ ಸಂಚಾಲಕ ನಾಗೇಂದ್ರ, ದಿನೇಶ್, ಮುತ್ತಮ್ಮ, ಮಹದೇವಪ್ರಸಾದ್, ಗೀತಾ ಶ್ರಿÃಕಂಠಮೂರ್ತಿ, ಬಹುಲಿನ್, ಸಿದ್ದರಾಮ, ಜ್ಙಾನ, ನಾಗರತ್ನ, ಗುಂಡಪ್ಪ, ಶೋಭ, ತಂಗಮ್ಮ, ಇಶಾಂತ್ ಪೂಣಚ್ಚ, ಗೌರಮ್ಮ, ವಚನ, ಗೋಮತಿ ಪ್ರಸಾದ್, ದಕ್ಷ, ನಿಜಗುಣ ಉಪಸ್ಥಿತರಿದ್ದರು.
--------------------------------------


ಮೈಸೂರು :- ವಿದ್ಯಾರ್ಥಿ ಜೀವನದಲ್ಲಿ ಸಂಸ್ಕಾರ ರೂಡಿಸಿಕೊಳ್ಳಲು ವಚನ ಸಾಹಿತ್ಯ ಸಹಕಾರಿಯಾಗಿದೆ ಎಂದು ಕುದೇರು ಮಠದ ಕಿರಿಯ ಶ್ರೀಗಳಾದ ಇಮ್ಮಡಿ ಗುರುಲಿಂಗಸ್ವಾಮಿಗಳು ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮೈಸೂರು ಕುದೇರು ಮಠದಲ್ಲಿ ಡಾ. ಮೆ ರಾಜೇಶ್ವರಯ್ಯರವರ ದತ್ತಿ ಅಂಗವಾಗಿ ನಡೆಸಿದ ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ವಿದ್ಯೆಯ ಜೊತೆಗೆ ವಿನಯವನ್ನು ಮೈಗೂಡಿಸಿಕೊಂಡು ಗುರುಹಿರಿಯರಿಗೆ ಹಾಗೂ ನೆರೆಹೊರೆಯವರಿಗೆ ಗೌರವವನ್ನು ಕೊಡುವುದನ್ನು ರೂಡಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಲು ವಚನಗಳು ಸಹಕಾರಿಯಾಗಿದ್ದು ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಹೇಳಿದರು. ್ಲ  ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ ಮಾತನಾಡಿ ಕಣ್ಣಿಗೆ ಕಾಣುವ ದೇವರಾದ ತಂದೆತಾಯಿಗಳನ್ನು ಹಾಗೂ ಗುರುಗಳನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ಪಠ್ಯದಲ್ಲಿಯೇ ಅಳವಡಿಕೆಯಾಗಿರುವ ಶರಣರ ವಚನಗಳನ್ನು ಪರೀಕ್ಷೆಗೋಸ್ಕರ ಕಲಿಯದೆ ಜೀವನದಲ್ಲಿ ಅಳವಡಿಸಿಕೊಂಡರೆ ಮೌಲ್ಯಯುತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದು ಹೇಳಿದರು. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಆದ್ದರಿಂದ ನೀವೆಲ್ಲ ಶರಣರ ರೀತಿ ದೇಶದ ಆಸ್ತಿಯಾಗಿ ಸಮಾಜಕ್ಕೆ ನಿಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಕಿವಿಮಾತನ್ನು ಹೇಳಿದರು. ದತ್ತಿ ದಾನಿಗಳಾದ ಮಂಜುಳಾದೇವಿ ಮಾತನಾಡಿ ನಾವು ಗಳಿಸಿದ ಹಣ ಸದ್ವಿನಿಯೋಗವಾದಾಗ ಮಾತ್ರ ಬೆಲೆ ಇರುತ್ತದೆ ದುಡಿದು ತಿನ್ನುವುದನ್ನು ಶರಣರು ವಚನಗಳಲ್ಲಿ ತಿಳಿಸಿದ್ದಾರೆ ವಚನಗಳಲ್ಲಿ ಅಳವಡಿಕೆಯಾಗಿರುವ ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ  ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾವೇರಿ, ಬಸವ ಬಳಗ ಒಕ್ಕೂಟ ಅಧ್ಯಕ್ಷೆ ಜಯಾಗೌಡ, ಮಂಜುಳಾದೇವಿ, ಶಿವಪ್ರಸಾದ್ ಮೇಲುದುರ್ಗ ಮಠದ್, ಚೋಂದಮ್ಮ, ಡಾ.ಎ¸
ಪುಟ್ಟಪ್ಪ ಮುಡಿಗುಂಡ, ಲಿಂಗಣ್ಣ, ಪೂರ್ಣಿಮಾ, ವನಜಾಕ್ಷಿ, ಪುಷ್ಪ, ಶೀಲಾ ನಂದೀಶ್, ಉಷಾರಾಣಿ, ಚನ್ನಬಸಪ್ಪ, ಶಿವಲಿಂಗಪ್ಪ, ಉಷಾ, ನಾಗೇಶ್, ಮುರುಘೇಂದ್ರಸ್ವಾಮಿ ,ಅನ್ನಪೂರ್ಣ, ಪಾವರ್ತಿ ಮೀನಾಕ್ಷಿ, ಇಂದ್ರಾಣಿ, ಉಮ, ದೀಪ, ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  
----------------------------------------------------------

No comments:

Post a Comment