Sunday, December 29, 2024

2025ರ ಶರಣು ದಿನಚರಿ ಬಿಡುಗಡೆ ಅನಿಸಿಕೆ

*ಶರಣು ಶರಣಾರ್ಥಿಗಳು*🙏🌹🙏

ಶರಣು ವಿಶ್ವ ವಚನ ಫೌಂಡೇಶನ್ ಮೈಸೂರು ವತಿಯಿಂದ ಆಯೋಜಿಸಿದ ಕಾರ್ಯಕ್ರಮ ಬಹಳ ಶಿಸ್ತು ಬದ್ಧವಾಗಿ ಯಶಸ್ವಿ ಕಾರ್ಯಕ್ರಮವಾಗಿದೆ. ವಚನ ಸಾಹಿತ್ಯದ ದಾಸೋಹವನ್ನು ನಿತ್ಯ ನಿರಂತರ ಉಣಬಡಿಸುತ್ತಿರುವ ತಮಗೆ ನನ್ನ ವೈಯಕ್ತಿಕ ಹಾಗೂ ಕುಟುಂಬದ ಪರವಾಗಿ ತುಂಬು ಹೃದಯದ ಅಭಿನಂದನೆಗಳು. ನಮ್ಮಿಬ್ಬರನ್ನು ಕರೆದು *ಆದರ್ಶ ಶರಣ ದಂಪತಿಗಳು* ಪ್ರಶಸ್ತಿಗೆ ಭಾಜನರಾಗುವಂತೆ ಮಾಡಿದ ತಮ್ಮಿಬ್ಬರಿಗೂ ಹಾಗೂ ಫೌಂಡೇಶನ್ ನ ಎಲ್ಲಾ ಗೌರವಾನ್ವಿತ ಸದಸ್ಯರಿಗೂ ನಮ್ಮ ಹೃದಯಾಂತರಾಳದ ಧನ್ಯವಾದಗಳು.. ಬೆಂಗಳೂರಿನಲ್ಲಿ ಸಂಜೆ ಆರು ಗಂಟೆಗೆ ಒಂದು ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಸಾಧ್ಯವಾಗಲಿಲ್ಲ ದಯವಿಟ್ಟು ಕ್ಷಮಿಸಿ.🙏 ತಾವು ಕೆಲಸದ ಒತ್ತಡದಲ್ಲಿರುವುದರಿಂದ ರೂಪಕ್ಕ ಅವರಿಗೆ ಮಾತ್ರ ಹೇಳಿ ಬಂದೆ. ಬಹುಶಃ ಮಧ್ಯಾಹ್ನದ ಕಾರ್ಯಕ್ರಮ ಕೂಡ ಅಷ್ಟೇ ಯಶಸ್ವಿಯಾಗಿ ನೆರವೇರಿರುತ್ತದೆ ಎಂಬುದು ನಮ್ಮ ಬಲವಾದ ನಂಬಿಕೆ. ನನ್ನೊಂದಿಗೆ ಬಂದಂತಹ ನನ್ನ ಸ್ನೇಹಿತೆಯರಿಗೂ ಕೂಡ ಕಾರ್ಯಕ್ರಮ ತುಂಬಾ ಇಷ್ಟವಾಗಿದೆ.

ಇದೇ ರೀತಿ ತಮ್ಮ ಕಾರ್ಯಕ್ರಮಗಳು ಇನ್ನೂ ಅಭಿವೃದ್ಧಿ ಮಟ್ಟದಲ್ಲಿ ಜನರ ಮನ ಮುಟ್ಟುವಂತೆ ಸಾಗಲಿ ಎಂಬುದೇ ನಮ್ಮ ಆಶಯ ಹಾಗೂ ಸಂಪೂರ್ಣವಾದ ನಂಬಿಕೆ. ಆ ಶರಣಾದಿ ಪ್ರಮ ಥರ ಆಶೀರ್ವಾದದಿಂದ ತಮಗೂ ತಮ್ಮ ಕುಟುಂಬಕ್ಕೂ ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತೇವೆ.


*ಶುಭವಾಗಲಿ*


ಶ್ರೀ ಎಂ ಅಶೋಕ್ ಕುಮಾರ್ ಹಾಗೂ ಶ್ರೀಮತಿ ಮಧುರಾ ಅಶೋಕ್ ಕುಮಾರ್.🙏🌹🙏

No comments:

Post a Comment