Saturday, December 21, 2024

ವಚನ ಹೃದಯ




 ಶರಣರ ವಚನಾಂಕಿತಗಳು ವಿಶ್ವದ ಸಾಹಿತ್ಯದಲ್ಲಿಯೇ ಪ್ರಥಮ ಪ್ರಯೋಗಗಳು: ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ


ಶರಣರ ವಚನಾಂಕಿತಗಳು ವಿಶ್ವದ ಸಾಹಿತ್ಯದಲ್ಲಿಯೇ ಪ್ರಥಮ ಪ್ರಯೋಗಗಳು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಮೈಸೂರಿನ ಉರಿಲಿಂಗಪೆದ್ದಿ ಮಹಾಸಂಸ್ಥಾನ ಮಠ, ಮಂಡ್ಯದ ಭಾರತೀಯ ಬೌದ್ಧ ಮಹಾಸಭಾ, ಕಾಯಕಯೋಗಿ ಫೌಂಡೇಷನ್, ರಾಷ್ಟçಕವಿ ಕುವೆಂಪು ವೈಚಾರಿಕ ಪರಿಷತ್ತು, ಅನ್ನಪೂರ್ಣೇಶ್ವರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಡ್ಯದ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವಾನಂದಸ್ವಾಮೀಜಿಯವರ ವಚನ ಹೃದಯ ಕೃತಿ ಕುರಿತು ಮಾತನಾಡಿದ ಅವರು ವಚನಾಂಕಿತಗಳನ್ನು ಶರಣರು ಅಂತರAಗದಲ್ಲಿ ಚಿನ್ಮಯವಾಗಿ ಅಡಗಿರುವ ಮಹಾಲಿಂಗಕ್ಕೆ ಕೊಟ್ಟ ಹೆಸರು. ೧೨ನೇ ಶತಮಾನದವರೆಗೆ ವಿಶ್ವದ ಇತರೆ ಭಾಷೆಗಳಾದ ಲ್ಯಾಟಿನ್, ಗ್ರೀಕ್, ಇಂಗ್ಲಿಷ್, ಫ್ರೆಂಚ್ ಮುಂತಾದ ಯಾವ ಭಾಷೆಗಳಲ್ಲಿಯೂ ಕೂಡಾ ಅಂಕಿತನಾಮ ಇಟ್ಟುಕೊಂಡು ಸಾಹಿತ್ಯ ರಚಿಸುವ ಪದ್ಧತಿ ಇರಲಿಲ್ಲ. ಅಂಕಿತ ಇಟ್ಟುಕೊಂಡು ವಚನ ರಚಿಸುವ ಪದ್ಧತಿ ಪ್ರಾರಂಭವಾದದ್ದು ಕರ್ನಾಟಕದ ಕಲ್ಯಾಣದ ಅನುಭವಮಂಟಪದಲ್ಲಿ ಎಂಬುದನ್ನು ವಚನ ಹೃದಯ ಕೃತಿಯಲ್ಲಿ ವಿವಿಧ ಉದಾಹರಣೆಗಳ ಮೂಲಕ ಸಾಬೀತು ಮಾಡಿದ್ದಾರೆ. ಶರಣರು ವಚನ ಎಂಬ ಪದಕ್ಕಿಂತ ಮೊದಲು ಶರಣರ ಸೂಳ್ನುಡಿ, ಮೃಡಶರಣರ ನುಡಿಗಡಣ ಮುಂತಾದ ಪದ ಪ್ರಯೋಗ ಮಾಡಿ ಅಂತಿಮವಾಗಿ ಅನುಭವಮಂಟಪದ ೭೭೦ ಅಮರಗಣಂಗಳು ಸಾಕಷ್ಟು ಚರ್ಚೆ ಮಾಡಿ ವಚನ ಎಂಬ ಪದ ಪ್ರಯೋಗ ಮಾಡಿದ್ದಾರೆ. ಶರಣರು ತಮ್ಮ ನಾಲಗೆ ಮತ್ತು ಮನಸ್ಸನ್ನು ಪರಮಾತ್ಮನಿಗೆ ಮೀಸಲಿಟ್ಟು ವಚನ ಸಾಹಿತ್ಯ ರಚಿಸಿದುದರ ಪರಿಣಾಮ ೯೦೦ ವರ್ಷವಾದರೂ ಕೋಟ್ಯಂತರ ಜನರ ಬಾಯಲ್ಲಿ ವಚನಗಳು ನಲಿದಾಡುತ್ತಿವೆ. ಪೂಜ್ಯ ಶ್ರೀ ಬಸವಾನಂದಸ್ವಾಮಿಗಳವರು ಅಂಧರಾಗಿದ್ದರೂ ಅವರ ಅನುಭಾವದ ಫಲವಾಗಿ ಒಳಗಣ್ಣು ತೆರದು ವಚನಗಳ ಹೃದಯವನ್ನು ಅರ್ಥೈಸಿಕೊಂಡಿರುವುದರ ಫಲವಾಗಿ ವಚನ ಹೃದಯ ಎಂಬ ಬೃಹತ್ಕೃತಿ ಕೊಡಲು ಸಾಧ್ಯವಾಯಿತು ಎಂದರು.

      ಕೃತಿ ಬಿಡುಗಡೆ ಮಾಡಿ ಮಾಡಿ ಮಾತನಾಡಿದ ಮೈಸೂರಿನ ಉರಿಲಿಂಗಪೆದ್ದಿ ಮಹಾಸಂಸ್ಥಾನ ಮಠದ ಶ್ರೀ ಜ್ಞಾನಪ್ರಕಾಶಸ್ವಾಮೀಜಿ ಬಸವಧರ್ಮ ನಡೆ ನುಡಿ ಒಂದಾಗಿರುವAತಹ ವಿಶೇಷ ಧರ್ಮ. ಸಕಲ ಜೀವಿಗಳಿಗೆ ಲೇಸನ್ನು ಬಯಸಿದಂತಹ ಕುಲಜರೇ ಶರಣರು. ಮಾನವರ ಬಗ್ಗೆ ಪ್ರೀತಿ, ಅನುಕಂಪ ಇಟ್ಟು ಮಾನವನನ್ನು ವiಹಾದೇವನ್ನಾಗಿ ಮಾಡಲು ಹೊರಟಂತಹ ಶರಣರ ಅನುಭಾವದ ಫಲವಾಗಿ ನಿರ್ಮಾಣವಾದ ವಚನ ಸಾಹಿತ್ಯದಲ್ಲಿ ಬಂದಿರುವ ಪದ ಪ್ರಯೋಗಗಳನ್ನು ನಾವು ವಿಶ್ವದ ಯಾವುದೇ ಸಾಹಿತ್ಯದಲ್ಲಿ ನೋಡಲು ಸಾಧ್ಯವಿಲ್ಲ ಎಂದರು.

ಕೃತಿಯ ಕರ್ತೃ ಶ್ರೀ ಬಸವಾನಂದಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷ  ಬಿ. ಅನ್ನದಾನಿ, ಸಹಾಯಕ ಪ್ರಾಧ್ಯಾಪಕ, ಜಿ.ಡಿ ಶಿವರಾಜ್, ವಿಶ್ರಾಂತ ಪ್ರಾಂಶುಪಾಲರಾದ ಜಿ.ಟಿ ವೀರಪ್ಪ, ಡಾ. ಎಸ್.ಬಿ ಶಂಕರೇಗೌಡ, ಕಾಯಕಯೋಗಿ ಫೌಂಡೇಷನ್ ಸಂಸ್ಥಾಪಕ ಎಂ. ಶಿವಕುಮಾರ್, ಚಿತ್ರಕೂಟದ ಸಂಚಾಲಕ ಅರವಿಂದ ಪ್ರಭು, ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಂ.ಎಸ್ ಮಂಜುನಾಥ, ವಿಜಯ ಕಾಲೇಜಿನ ಉಪನ್ಯಾಸಕ ಕೆ.ಆರ್ ಮಹದೇವಯ್ಯ, ಅನಿಕೇತನ ಕಾಲೇಜಿನ ಉಪನ್ಯಾಸಕ ಕಾಲಿಂಪು, ಮಹಾಮನೆಯ ಸೋಲಾರ್ ರಮೇಶ್, ಶಿವಪುರ ಉಮಾಪತಿ ಉಪಸ್ಥಿತರಿದ್ದರು.

No comments:

Post a Comment