*ರೂಪ ಕುಮಾರಸ್ವಾಮಿ, ಸಂಸ್ಥಾಪಕರು, ಶರಣು ವಿಶ್ವವಚನ ಫೌಂಡೇಷನ್*
ರೂಪ ಕುಮಾರಸ್ವಾಮಿ ಇವರು ವಚನಗಳ ಬಗ್ಗೆ ಹೊಂದಿರುವ ಪ್ರೀತಿ ಹಾಗೂ ವಚನ ಪ್ರಸಾರಕ್ಕೆ ಕೈಗೊಂಡಿರುವ ಚಟುವಟಿಕೆಗಳಿಂದ ವಚನ ರೂಪ ಎಂದೇ ಚಿರಪರಿಚಿತರಾಗಿದ್ದಾರೆ.
ಜನನ : 1985 ಜನವರಿ 8 ರಂದು ಬೆಂಗಳೂರಿನ ಉದಯನಗರದಲ್ಲಿ ಜನಿಸಿದರು.
ತಂದೆ ತಾಯಿ : ಎನ್ ಬಸವರಾಜು, ನಾಗರತ್ನ
ಪತಿ : ಡಾ. ವಚನ ಕುಮಾರಸ್ವಾಮಿ
ಮಕ್ಕಳು: ಸಿ.ಕೆ ಗಿರಿಜೇಶ್, ಸಿ.ಕೆ. ವಚನ
ವಿದ್ಯಾಭ್ಯಾಸ
·ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪಿ.ಯು.ಸಿ - ಇಂದಿರಾನಗರ ಕಂಪೋಸಿಟ್ ಪಿ.ಯು ಕಾಲೇಜ್ (ಕೈರಳಿನಿಕೇತನ್), ಇಂದಿರಾನಗರ , ಬೆಂಗಳೂರು
.ಡಿ.ಎಡ್ - ಫಾತಿಮಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್
·ಪದವಿ – ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು
·ಸ್ನಾತಕೋತ್ತರ ಪದವಿ - ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು
ವೃತ್ತಿ
·ಮೈಸೂರಿನ ಎಸ್.ವಿ.ಇ.ಐ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಣೆ
.ಮೈಸೂರು ತಾ. ಕುಮಾರಬೀಡು ಆರ್ಕಿಡ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಣೆ
·ಗದ್ದಿಗೆಯ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಣೆ
·ಹುಣಸೂರಿನ ನ್ಯೂ ಕೇಂಬ್ರಿಡ್ಜ್ ಪ್ರೀ ಯುನಿವರ್ಸಿಟಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಣೆ
ಪ್ರವೃತ್ತಿ
·ಕವಿತೆ ರಚನೆ, ವಚನ ವಾಚನ, ಕ್ರೀಡೆ, ಸಂಗೀತ ಮತ್ತು ನೃತ್ಯ, ಉಪನ್ಯಾಸ ನೀಡುವುದು.
ಶರಣು ವಿಶ್ವವಚನ ಫೌಂಡೇಷನ್ ಸ್ಥಾಪನೆ
2016ರಲ್ಲಿ ವಚನ ಪ್ರಸಾರಕ್ಕೆ ಶರಣು ವಿಶ್ವವಚನ ಫೌಂಡೇಷನ್ ಎಂಬ ಅಂತರರಾಷ್ಟ್ರೀಯ ಸಂಸ್ಥೆ ಸ್ಥಾಪಿಸಿ
ಅದರ ಮುಖಾಂತರ 15 ದೇಶ ಮತ್ತು 10 ರಾಜ್ಯಗಳಿಗೆ ವಾಟ್ಸ್ ಆ್ಯಪ್ ಮುಖಾಂತರ 1 ಲಕ್ಷಕ್ಕೂ ಹೆಚ್ಚು
ಜನರಿಗೆ ವಚನ ಪ್ರಸಾರ ಮಾಡುತ್ತಿದ್ದಾರೆ. ಅಲ್ಲದೇ ಶಾಲೆಗಳೆಡೆಗೆ ವಚನಗಳ ನಡಿಗೆ,
ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ, ಕಾಲೇಜಿನೆಡೆಗೆ ವಚನಗಳ ನಡಿಗೆ, ವಿಶ್ವವಿದ್ಯಾನಿಲಯಗಳೆಡೆಗೆ ವಚನಗಳ ನಡಿಗೆ,
ಅನಾಥಾಶ್ರಮಗಳೆಡೆಗೆ ವಚನಗಳ ನಡಿಗೆ, ವೃದ್ಧಾಶ್ರಮಗಳೆಡೆಗೆ ವಚನಗಳ ನಡಿಗೆ ಹಾಗೂ ವಚನಗ್ರಾಮಗಳ
ಮುಖಾಂತರ ವಚನಪ್ರಸಾರ ಮಾಡುತ್ತಿದ್ದಾರೆ.
ಸರ್ಕಾರಿ ಶಾಲೆಗಳ ಬಲವರ್ಧನೆಗೆ ಅಗತ್ಯ ಸೌಲಭ್ಯಗಳ ವಿತರಣೆ ಕಾರ್ಯಕ್ರಮದಲ್ಲಿ ಇದುವರೆಗೂ 35 ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಗ್, ನೋಟ್ ಬುಕ್, ಲೇಖನಿ ಸಾಮಗ್ರಿ ನೀಡಲಾಗಿದೆ.
ಹಸಿವು ಮುಕ್ತ ಸಮಾಜಕ್ಕಾಗಿ ನಮ್ಮ ಚಿತ್ತ
ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಕೊಡಗು ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ
ತೊಂದರೆಗೊಳಗಾದ ಜನರಿಗೆ ಹಾಗೂ ಕೋವಿಡ್ ಪರಿಣಾಮ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಸಾಮಗ್ರಿ
ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಿ ಹಸಿವು ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆ.
*ಆ್ಯಪ್*
ಸಿದ್ಧಗಂಗಾ ದಿವ್ಯ ತಪೋನಿಧಿ
ವಿಶ್ವವಚನ ಆ್ಯಪ್
*ಸಾಕ್ಷ್ಯಚಿತ್ರಗಳು*
ಶ್ರೀ ಗುರುಮಲ್ಲೇಶ್ವರರ ಜೀವನ ದರ್ಶನ
ಗದ್ಧಿಗೆಯ ಸದ್ಗುರು ಶ್ರೀ ಕೆಂಡಗಣ್ಣಸ್ವಾಮಿ
ಯುಗಪ್ರವರ್ತಕ ಬಸವಣ್ಣ ಆಂಗ್ಲ ಭಾಷೆಯಲ್ಲಿ (THE PIONEER OF THE ERA - BASAVANNA
ಮಲೆ ಮಹದೇವ
ವಿವಿಧ ಕಾರ್ಯಕ್ರಮಗಳು
·ಯಶ್ ಟೆಲ್ ಟಿ ವಿ ಯಲ್ಲಿ ಡಿಬೆಟ್ ನಲ್ಲಿ ಭಾಗವಹಿಸುವಿಕೆ
https://youtu.be/0IizNXc5eL4
. ನಿವ್ಸ್ 1 ಕನ್ನಡದಲ್ಲಿ ಕಾರ್ಯಕ್ರಮ
·ಬಸವ ಟಿ ವಿಯಲ್ಲಿ ವಚನ ನೃತ್ಯ ಮತ್ತು ಉಪನ್ಯಾಸ
· ಜನಧ್ವನಿ ಸರಗೂರು ಇಲ್ಲಿ 1000 ಕ್ಕೂ ಹೆಚ್ಚು ವಚನಾಮೃತ ಕಾರ್ಯಕ್ರಮವನ್ನು ಪತಿಯೊಡಗೂಡಿ ನೀಡಿರುತ್ತಾರೆ.
·ವಚನ ಸಾಹಿತ್ಯ ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದಂತೆ 200 ಕ್ಕೂ ಹೆಚ್ಚು ಉಪನ್ಯಾಸ ನೀಡಿರುತ್ತಾರೆ.
ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ
ಕೋವಿಡ್ 19 ಸಂದರ್ಭದಲ್ಲಿಯೂ ಅಂತರ್ಜಾಲದ ವಿವಿಧ ಮಾಧ್ಯಮಗಳ ಮುಖಾಂತರ ಪ್ರತೀ ಭಾನುವಾರ
ವಿವಿಧ ಮಠದ ಶ್ರೀಗಳು ಹಾಗೂ ವಚನ ಸಾಹಿತ್ಯದ ಬಗ್ಗೆ ಪರಿಣಿತಿ ಹೊಂದಿರುವ ವ್ಯಕ್ತಿಗಳಿಂದ ಶರಣ ಸಾಹಿತ್ಯ
ವಿಷಯಕ್ಕೆ ಸಂಬಂಧಿಸಿದಂತೆ ಪ್ರವಚನ ಏರ್ಪಡಿಸಿ ಮನೆಯಲ್ಲಿಯೇ ಜ್ಞಾನ ಪಡೆದುಕೊಳ್ಳಲು
ಕಾರಣರಾಗಿದ್ದಾರೆ.
https://sharanuvishwa.blogspot.com/2020/08/blog-post_31.html
ಅಂತರರಾಷ್ಟ್ರೀಯ ಅಂತರ್ಜಾಲ ವಚನ ಮಾಧುರ್ಯ
ಪ್ರತೀ ಗುರುವಾರ ಮಹಿಳೆಯರಿಂದ, ಖ್ಯಾತ ಗಾಯಕರಿಂದ, ಮಕ್ಕಳಿಂದ, ವಿಶೇಷ ಚೇತನರಿಂದ, ಮೂರು
ತಲೆಮಾರಿನವರಿಂದ, ದಂಪತಿಗಳಿಂದ, ಶಿಕ್ಷಕರಿಂದ, ವಿದೇಶದಲ್ಲಿರುವ ಕನ್ನಡಿಗರಿಂದ
ವಚನಗಾಯನ ಏರ್ಪಡಿಸಿ ವಚನದ ಕಂಪನ್ನು ವಿವಿಧ ಆಯಾಮಗಳ ಮೂಲಕ ಹರಡಲು ಕಾರಣರಾಗಿದ್ದಾರೆ.
https://sharanuvishwa.blogspot.com/2020/08/blog-post_2.html
ಕೃತಿಗಳು
·ವಚನ ಜ್ಞಾನೋದಯ
.ಕರುನಾಡಿನ ಪುಣ್ಯಸ್ತ್ರೀಯರು
.ಬಸವಭಾನು (ನಾಲ್ಕು ವರ್ಷಗಳಿಂದ ನಿರಂತರವಾಗಿ ಸಂಚಿಕೆ ಹೊರತರುತ್ತಿದ್ದಾರೆ.)
.ಇನ್ನರ್ ಐ (ವಚನ ಸಾಹಿತ್ಯದ ಆಂಗ್ಲ ಭಾಷೆಯ ಕೃತಿ)
ವಚನಾಂತರಂಗ
ವಚನ ಶಾಲೆ
ವಚನ ದೀಪ
ದಿವ್ಯ ಪ್ರಸಾದ
ಬಸವ ವಚನಾಮೃತ
ಅಕ್ಕನ ವಚನಾಮೃತ
ವಚನ ಜಗಜ್ಯೋತಿ
ವಿವಿಧ ಹುದ್ಧೆಗಳು
ಮೈಸೂರಿನ ಬಸವ ಬಳಗಗಳ ಒಕ್ಕೂಟದಲ್ಲಿ 2019 ಹಾಗೂ 2020 ರಲ್ಲಿ ಎರಡು ಸಲ ಮಕ್ಕಳ ಸಮಿತಿಯ
ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿರುತ್ತಾರೆ.
ಪ್ರಶಸ್ತಿಗಳು
- ಬೆಂಗಳೂರು ಬಸವಸಮಿತಿ ವತಿಯಿಂದ *ಬಸವಭೂಷಣ*
- ಬೆಂಗಳೂರಿನ ರಾಷ್ಟ್ರ್ರೀಯ ಬಸವದಳ ವತಿಯಿಂದ *ಶರಣ ಸೇವಾರತ್ನ*
- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ *ಜರಗನಹಳ್ಳಿ ಸಿದ್ದಮ್ಮ ನಂಜುಂಡಪ್ಪ ಶರಣ ದತ್ತಿ ಪ್ರಶಸ್ತಿ*
- ಜಮಖಂಡಿಯ ಬಸವಜ್ಞಾನ ಗುರುಕುಲದ ವತಿಯಿಂದ *ಬಸವಚೇತನ ಪ್ರಶಸ್ತಿ*
- ಮಂಡ್ಯದ ಅಮ್ಮಯ್ಯಮ್ಮ ದುರ್ಗೇಗೌಡ ಪ್ರತಿಷ್ಟಾನದ ವತಿಯಿಂದ *ವಚನರತ್ನ ಪ್ರಶಸ್ತಿ*
- ಮಳವಳ್ಳಿ ತಾ. ಹೊಸಮಠದ ವತಿಯಿಂದ *ಕಾಯಕಯೋಗಿ ಪ್ರಶಸ್ತಿ*
*ಶರಣೆ ದಾನಮ್ಮದೇವಿ ಪ್ರತಿಷ್ಠಾನ ವತಿಯಿಂದ ದಾನಮ್ಮದೇವಿ ಪ್ರಶಸ್ತಿ*
*ಮದ್ದೂರು ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಜಗನ್ಮಾತೆ ಅಕ್ಕಮಹಾದೇವಿ ಪ್ರಶಸ್ತಿ*
·ಬೆಮೆಲ್ ಬಸವಸಮಿತಿ, ಬೆಂಗಳೂರು, ಮೈಸೂರು ಮತ್ತು ಕೋಲಾರ ಇವರಿಂದ ಅಭಿನಂದನೆ
· 200 ಕ್ಕೂ ಹೆಚ್ಚು ಸಂಘಸಂಸ್ಥೆಗಳಿಂದ ಗೌರವಿಸಿ ಸನ್ಮಾನಿಸಿವೆ.
ವಿಶ್ವಮಟ್ಟದಲ್ಲಿ ವಚನವನ್ನು ಪಸರಿಸುತ್ತಿರುವ ಇವರ ಸೇವಾಕೈಂಕರ್ಯ ಹೀಗೆ ಸಾಗಲಿ ಎಂದು ಹರಸೋಣ
No comments:
Post a Comment