ವಚನ ಕಲ್ಯಾಣ ಮಹೋತ್ಸವ
ಶರಣರ ವಚನಗಳಾಧಾರಿತ ವಿವಾಹ
ಸಂಪಾದಕರು
ಡಾ. ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್, ಮೈಸೂರು
ವಚನ ಕಲ್ಯಾಣ ಮಹೋತ್ಸವ
ಶರಣರ ವಚನಗಳಾಧಾರಿತ ವಿವಾಹ
ಕಾರ್ಯಕ್ರಮದ
ವಿವರ
1. ವಚನ ಕಲ್ಯಾಣ ಮಹೋತ್ಸವಕ್ಕೆ ಸಿದ್ಧತೆ
2. ಪ್ರಾರ್ಥನೆ
3. ಸ್ವಾಗತ
4. ಪ್ರಾಸ್ತಾವಿಕ ನುಡಿ
5. ಧ್ವಜಾರೋಹಣ
6. ಭಾವೋದಕ
7. ವಿಭೂತಿಧಾರಣೆ
8. ರುದ್ರಾಕ್ಷಿಧಾರಣೆ
9. ಇಷ್ಟಲಿಂಗಪೂಜೆ
10. ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ
11. ವಧುವಿನ ತಂದೆ ತಾಯಿಗಳಿಂದ ಒಪ್ಪಿಗೆ
12. ವರನ ತಂದೆ ತಾಯಿಗಳಿಂದ ಒಪ್ಪಿಗೆ
13. ಪ್ರತಿಜ್ಞಾ ವಿಧಿ
14. ವಚನ ಮಾಂಗಲ್ಯ ಸಂಹಿತೆ
15. ಮಾಂಗಲ್ಯಧಾರಣೆ
16. ಪುಷ್ಪ ವೃಷ್ಟಿ
17. ವಧುವರರಿಂದ ಅಂತಿಮ ಪ್ರತಿಜ್ಞಾ ವಚನ
18. ವಚನಗಂಟು
19. ಗಣ್ಯರ ಹಿತನುಡಿ
20. ಆಶೀರ್ವಚನ
21. ವಂದನಾರ್ಪಣೆ
22. ಪ್ರಸಾದ
1. ವಚನ ಕಲ್ಯಾಣ ಮಹೋತ್ಸವಕ್ಕೆ ವಿವಾಹಕ್ಕೆ ಸಿದ್ಧತೆ
·
ವೇದಿಕೆ
ಎಡಭಾಗದಲ್ಲಿ ಬಸವಣ್ಣನವರ ಭಾವಚಿತ್ರ ಇಡಬೇಕು
·
ವೇದಿಕೆಯ
ಬಲಭಾಗದಲ್ಲಿ ಧಾರ್ಮಿಕ ಗುರುಗಳು ಹಾಗೂ ಮಧ್ಯಭಾಗದಲ್ಲಿ ವಧು ವರರು ಕೂರಲು ವ್ಯವಸ್ಥೆ ಇರಬೇಕು.
·
ವೇದಿಕೆಯ
ಮುಂಭಾಗದಲ್ಲಿ ಫಲತಾಂಬೂಲ ಸರಳ ಪೂಜಾ ಸಾಮಗ್ರಿ, ಹಾರಗಳು, ಮಾಂಗಲ್ಯಸರ, ದೀಪದ ಆರತಿ, ತಟ್ಟೆ, ಬಿಡಿ
ಹೂ, ರುದ್ರಾಕ್ಷಿ
ಮಾಲಾ, ವಿಭೂತಿ, ಇಡುವುದು.
·
ವೇದಿಕೆಗೆ
ಧರ್ಮ ಗುರುಗಳನ್ನು ಆಹ್ವಾನಿಸುವುದು. ವಧು ವರರನ್ನು ಹಾಗೂ ತಂದೆ ತಾಯಿಗಳು ಮತ್ತು ಕೆಲವರು ಬಂಧುಗಳು ಮಾತ್ರ ವೇದಿಕೆಗೆ ಆಗಮಿಸುವುದು.
·
ಧ್ವನಿವರ್ಧಕ
ಇದ್ದರೆ ಒಳ್ಳೆಯದು. ಇದರ ಅನುಕೂವಿಲ್ಲದಿದ್ದರೆ
ಸಭಿಕರಿಗೆ ಕೇಳುವಂತೆ ಗಟ್ಟಿಯಾಗಿ ನಿರ್ವಾಹಕರು ವಾಚನ ಮಾಡಬೇಕು.
2. ಪ್ರಾರ್ಥನೆ : ವಚನ ಗಾಯನ
ವಚನ
ಸ್ವಾಮಿ
ನೀನು, ಶಾಶ್ವತ
ನೀನು,
ಎತ್ತಿದೆ ಬಿರುದ ಜಗವೆಲ್ಲರಿಯಲು,
ಮಹಾದೇವ, ಮಹಾದೇವ,
ಇಲ್ಲಿಂದ
ಮೇಲೆ ಶಬ್ದವಿಲ್ಲ.
ಪಶುಪತಿ
ಜಗಕೆ ಏಕೋ ದೇವ
ಸ್ವರ್ಗ
ಮರ್ತ್ಯ ಪಾತಾಳದೊಳಗೆ
ಒಬ್ಬನೇ
ದೇವ ಕೂಡಲಸಂಗಮದೇವ.
ಉಭಯದೃಷ್ಟಿ
ಏಕದೃಷ್ಟಿಯಲ್ಲಿ
ಕಾಬಂತೆ
ದಂಪತಿ ಏಕಭಾವವಾಗಿ
ನಿಂದಲ್ಲಿ,
ಗುಹೇಶ್ವರಲಿಂಗಕ್ಕೆ
ಅರ್ಪಿತವಾಯಿತ್ತು,_ಸಂಗನಬಸವಣ್ಣ.
3.
ಸ್ವಾಗತ
ವಚನ
ಲಿಂಗಭಕ್ತನ ವಿವಾಹದಲ್ಲಿ ಶಿವಗಣಂಗಳಿಗೆ
ವಿಭೂತಿ ವೀಳೆಯವ ಕೊಟ್ಟು
ಆರೋಗಣೆಯ
ಮಾಡಿಸಿ
ಶಿವಗಣಂಗಳು
ಸಾಕ್ಷಿಯಾಗಿ
ಪ್ರಸಾದವನಿಕ್ಕುವುದೆ
ಸದಾಚಾರವಲ್ಲದೆ,
ವಾರ ತಿಥಿ ಸುಮುಹೂರ್ತವೆಂಬ
ಲೌಕಿಕದ
ಕರ್ಮವ ಮಾಡಿದಡೆ
ನಿಮ್ಮ ಸದ್ಭಕ್ತರಿಗೆ
ದೂರವಯ್ಯಾ
ಕೂಡಲಚೆನ್ನಸಂಗಮದೇವಾ
ಸೂರ್ಯನ
ಉದಯ ತಾವರೆಗೆ ಜೀವಾಳ,
ಚಂದ್ರಮನುದಯ
ನೈದಿಲೆಗೆ
ಜೀವಾಳ.
ಕೂಪರಠಾವಿನಲ್ಲಿ
ಕೂಟ ಜೀವಾಳವಯ್ಯಾ,
ಒಲಿದ ರಾವಿನಲ್ಲಿ
ನೋಟ ಜೀವಾಳವಯ್ಯಾ.
ಕೂಡಲಸಂಗನ
ಶರಣರ
ಬರವೆನಗೆ
ಪ್ರಾಣ ಜೀವಾಳವಯ್ಯಾ
ವಚನದೊಂದಿಗೆ ಸಭಿಕರನ್ನು ಸ್ವಾಗತಿಸುವುದು ಮತ್ತು ವಚನಮಾಂಗಲ್ಯದ ಸದುದ್ದೇಶವನ್ನು ವಿವರಿಸುವುದು.
4.
ಪ್ರಾಸ್ತಾವಿಕ ನುಡಿ
ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ
ಋಣಸಂಬಂಧವುಂಟೆಂದು
ಹೇಳಿರಯ್ಯಾ,
ಚಂದ್ರಬಲ
ತಾರಾಬಲವುಂಟೆಂದು
ಹೇಳಿರಯ್ಯಾ,
ನಾಳಿನ ದಿನಕಿಂದನ
ದಿನ ಲೇಸೆಂದು
ಹೇಳಿರಯ್ಯಾ,
ಕೂಡಲಸಂಗಮದೇವನ
ಪೂಜಿಸಿದ
ಫಲ ನಿಮ್ಮದಯ್ಯಾ.
ಹನ್ನೆರಡನೆಯ ಶತಮಾನದಲ್ಲಿ ನಡೆದ ಅಪೂರ್ವ ವೈಚಾರಿಕ ಕ್ರಾಂತಿಗೆ ಕಾರಣ ಪುರುಷರಾದ ಮಹಾ ಮಾನವತಾವಾದಿ ಬಸವಣ್ಣನವರ ಈ ವಚನ ಹೆಜ್ಜೆ ಹೆಜ್ಜೆಗೆ ಲಗ್ನ, ವಾರ, ತಿಥಿ, ನಕ್ಷತ್ರ, ಶಕುನಗಳನ್ನು ನೋಡುವ ಜನರಿಗೆ ನೀಡಿದ ಬುದ್ಧಿ ಮಾತು. ನಮ್ಮ ಅನೇಕ ಸಂಪ್ರದಾಯಗಳು ಅರ್ಥಹೀನವಾಗಿದ್ದರೂ ನಂಬಿಕೆಗಳು ಆಧಾರರಹಿತವಾಗಿದ್ದರೂ ನಮ್ಮ ಜನ ಅದನ್ನು ಅಂಧಶ್ರದ್ಧೆಯಿಂದ ತಲೆಮಾರುಗಳಿಂದ ಅನುಸರಿಸಿಕೊಂಡು ಬರುತ್ತಿರುವುದನ್ನು ಇಂದಿಗೂ ಕಾಣುತ್ತಿದ್ದೇವೆ. ಇದನ್ನು ಹೋಗಲಾಡಿಸಲು ಬಸವಣ್ಣನವರು ಎಲ್ಲರೂ ಅಜ್ಞಾನದಿಂದ ಜ್ಞಾನದ ಕಡೆಗೆ ಹೋಗಬೇಕು. ಸಮಾಜ ಸುಧಾರಣೆಯಾಗಬೇಕೆಂದು ಅವರ ಆಶಯವಾಗಿತ್ತು. ಈ ದಿಸೆಯಲ್ಲಿ ಸರ್ವರ ಪ್ರಯತ್ನ ಇಂದು ತೀರಾ ಅಗತ್ಯವಾಗಿದೆ.
5.
ಭಾವೋದಕ ಸಿದ್ಧತೆ
ಕಲ್ಯಾಣ ಮಹೋತ್ಸವವನ್ನು ನೆರವೇರಿಸಿಕೊಡುವ ವಚನ ಮೂರ್ತಿಯು ಒಂದು ತಂಬಿಗೆಯಲ್ಲಿ ಶುದ್ಧವಾದ ನೀರನ್ನು ಇಟ್ಟುಕೊಂಡು ಭಸ್ಮಲೇಪಿತ ಹಸ್ತದಿಂದ ಅದನ್ನು ಮುಚ್ಚಿ ಗುರುಲಿಂಗಜಂಗಮರನ್ನು ಧ್ಯಾನಿಸಿ ಅಥವಾ ಗುರುಜಂಗಮರಿಂದ ಅದಕ್ಕೆ ಬಸವ ಎಂಬ ಅಕ್ಷರ ಸಂಬಂಧಿಸಿ ಭಾವೋದಕವನ್ನು ಸಿದ್ಧಪಡಿಸಿಕೊಳ್ಳಬೇಕು.
ವಧುವರರ ಮಸ್ತಕದ ಮೇಲೆ ಭಾವೋದಕವನ್ನು ಸಿಂಪಡಿಸುವುದು.
ಮೈಲಾರ ಬಸವಲಿಂಗ ಶರಣರ ನುಡಿ
ಸೃಷ್ಟಿಯೊಳಗುಳ್ಳ ಬಹುನದಿಯ ಸ್ನಾನದ ಫಲವು
ಶ್ರೇಷ್ಠವಹ ಸಪ್ತಸಾಗರದ ಜಳಕದ ಫಲವು
ಅಷ್ಟಷಷ್ಠಿಯ ಕೋಟಿ ತೀರ್ಥಯಾತ್ರೆಮಾಡಿಮಿಂದು ಮಡಿಯುಟ್ಟ ಫಲವು
ಇಷ್ಟ ಗುರು ಲಿಂಗ ಜಂಗಮದ ಶ್ರೀ ಚರಣದಂ
ಗುಷ್ಟದಿಂದೊಗೆದ ಜಲಬಿಂದು ಸಾಸಿರಭಾಗ
ದಷ್ಟಕಣೆಯಲ್ಲವಾ ಫಲವೆಂಬ ಶಿವನ ಶೃತಿ ಸಾರುತಿದೆ ಮೂಜಗದೊಳು
6.
ವಿಭೂತಿ ಧಾರಣೆ
ಅಯ್ಯಾ ಎನಗೆ ವಿಭೂತಿಯೆ ಕುಲದೈವ;
ಅಯ್ಯಾ ಎನಗೆ ವಿಭೂತಿಯೆ
ಮನೆದೈವ;
ಅಯ್ಯಾ ಎನಗೆ ವಿಭೂತಿಯೆ ಸರ್ವಕಾರಣ;
ಅಯ್ಯಾ ಎನಗೆ ವಿಭೂತಿಯೆ
ಸರ್ವಸಿದ್ಧಿ;
ಅಯ್ಯಾ ಎನಗೆ ವಿಭೂತಿಯೆ
ಸರ್ವವಶ್ಯ;
ಅಯ್ಯಾ ಕೂಡಲಚೆನ್ನಸಂಗಮದೇವಾ
ಶ್ರೀಮಹಾಭೂತಿಯೆಂಬ
ಪರಂಜ್ಯೋತಿ
ನೀವಾದಿರಾಗಿ,
ಎನಗೆ ವಿಭೂತಿಯೆ
ಸರ್ವಸಾಧನ
ಬಸವ ಬಸವಾ ಎಂದು ಭಸಿತಮಂ ಧರಿಸಿದರೆ
ಬಸವಾದಿ ಪ್ರಮಥರಿಗೆ
ಪ್ರೀತಿಯಯ್ಯಾ
ಬಸವ ಷಟಸ್ಥಲ
ಚನ್ನಬಸವ ಪ್ರಭು ಮುಖ್ಯರು
ಭಸಿತಮಂ ಧರಿಸಿ
ಬಯಲಾದರಯ್ಯ
ಎಸೆವ
ಅಂಗುಲಿತ್ರಯವು ಭಸಿತರೇಖೆಗಳೆಲ್ಲ
ಬಸವಾಕ್ಷರತ್ರಯಗಳೆಂದು ಮುದದಿ
ಭಸಿತದಿಂ ನವ ಪ್ರಣವ ಹಸನಾಗಿ ಅಂಗದಲಿ
ಬಸವ ಬಸವಾ ಎಂದು ಸಂಬಂಧಿಸುವೆನು
ದುರುಳ ಕರಣಂಗಳೆಂಬ ಬೆರಣಿಗಳನುರುಹಿದ
ಪರಮಚಿದ್ಭಸಿತವೆಂದರಿದು ನಾನು
ಹರಬಸವ ಗುರುಬಸವ ಚರಬಸವ ಎಂದೆನುತ
ಶಿರವಾದಿ ಚರಣಾಂತ್ಯದೊಳು ಧರಿಸುವೆ
ನೀನು ಧರಿಸಿದೆಯಾಗಿ ಆನು ಧರಿಸುವೆನಯ್ಯ
ಸ್ನಾನಧೂಳನ ಧಾರಣಗಳಿಂದ
ಹೀನ ಮಾನವರಿದರ ಜ್ಞಾನವಿಲ್ಲದೆ ಭವದ,
ಕಾನನದೊಳಗೆ ತಾವು ಬೀಳುತಿಹರು
ತ್ರಿನಯನ ಮಹಾಂತೇಶ ದಣಿ ಬಸವರಾಜನ
ಅಣಿಯರದಿ ಸ್ಮರಿಸುತ್ತ ಭಜಿಸುತ್ತಲಿ
ಅಣುಮಾತ್ರ ಭಸಿತವನು ಹಣೆಯೊಳಿಟ್ಟಾಕ್ಷಣವೆ
ಒಣಗುವವು ದುರಿತಂಗಳೆಂಬ ಕುಜವು.
- ಬಾಲ ಲೀಲಾ ಮಹಾಂತ ಶಿವಯೋಗಿಗಳು
7.
ರುದ್ರಾಕ್ಷಿಧಾರಣೆ
ವಧು ವರನಿಗೆ ವರ ವಧುವಿಗೆ ಬಲ ಮುಂಗೈಗೆ ಕಟ್ಟಬೇಕು.
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು,
ಅಯ್ಯಾ ಎನಗೆ ರುದ್ರಾಕ್ಷಿಯೆ
ಸರ್ವಸಾಧನವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ,
ಅಯ್ಯಾ ಎನಗೆ ರುದ್ರಾಕ್ಷಿಯೆ
ಸರ್ವಪಾಪಕ್ಷಯವು.
ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ
ಪಂಚಮುಖದ ರುದ್ರಾಕ್ಷಿಗಳಾದವಾಗಿ,
ಅಯ್ಯಾ ಕೂಡಲಸಂಗಮದೇವಯ್ಯಾ,
ಎನ್ನ ಮುಕ್ತಿಪಥಕ್ಕೆ
ಶ್ರೀಮಹಾರುದ್ರಾಕ್ಷಿಯೆ
ಸಾಧನವಯ್ಯಾ.
8. ಧ್ವಜಾರೋಹಣ
ಲಿಂಗಾಯತ
ಧಮದ ಷಟ್ ಸೂತ್ರಗಳು
ನಮ್ಮ
ಧರ್ಮಗುರು
: ವಿಶ್ವಗುರು ಬಸವಣ್ಣನವರು
ನಮ್ಮ
ಧರ್ಮ ಸಂಹಿತೆ
: ವಚನ ಸಾಹಿತ್ಯ
ನಮ್ಮ
ಧರ್ಮ ಲಾಂಛನ : ಇಷ್ಟಲಿಂಗ
ನಮ್ಮ
ಧರ್ಮ ಕ್ಷೇತ್ರ : ಗುರುಬಸವಣ್ಣನವರ ಜನ್ಮಸ್ಥಳ ಬಾಗೇವಾಡಿ
ಗುರುಬಸವಣ್ಣನವರ ಕರ್ಮ
ಕ್ಷೇತ್ರ ಬಸವಕಲ್ಯಾಣ
ಗುರುಬಸವಣ್ಣನವರ ಐಕ್ಯ
ಕ್ಷೇತ್ರ ಕೂಡಲಸಂಗಮ
ನಮ್ಮ
ಧರ್ಮ ಧ್ವಜ
: ಷಟ್ಕೋನ
ಇಷ್ಟಲಿಂಗ ಸಹಿತ ಬಸವ ಧ್ವಜ
ನಮ್ಮ
ಧರ್ಮದ ಧ್ಯೇಯ
: ಶರಣ ಸಮಾಜ ಅಂದರೆ ಕಲ್ಯಾಣ ರಾಜ್ಯ ನಿರ್ಮಾಣ
9.
ಇಷ್ಟಲಿಂಗಪೂಜೆ
ಇಷ್ಟಲಿಂಗವನ್ನು ಅಂಗೈಯಲ್ಲಿ ಹಿಡಿದುಕೊಂಡು ನೇರವಾಗಿ ಕುಳಿತು ಇಷ್ಟಲಿಂಗಪೂಜೆ ಮಾಡಿ ನಂತರ ಕಣ್ಣಿನ ದೃಷ್ಟಿಯನ್ನು ಲಿಂಗದ ಮೇಲೆ ಕೇಂದ್ರೀಕರಿಸಿ ಅನಿಮಿಷ ದೃಷ್ಟಿಯಿಂದ ಲಿಂಗವನ್ನು ನೋಡುತ್ತಿರಬೇಕು.
ವಚನ
ಜಗದಗಲ ಮುಗಿಲಗಲ ಮಿಗೆಯಗಲ
ನಿಮ್ಮಗಲ,
ಪಾತಾಳದಿಂದವೆ
ಅತ್ತತ್ತ
ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ
ಅತ್ತತ್ತ
ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ
ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ
ಬಂದು ಚುಳುಕಾದಿರಯ್ಯಾ.
ಜಗವನೊಳಕೊಂಡ
ಲಿಂಗವು
ಸೊಗಸಿಂದೆ ಎನ್ನ ಕರಸ್ಥಲಕ್ಕೆ
ಬಂದಿರಲು,
ಕಂಡು ಹಗರಣವಾಯಿತ್ತೆನಗೆ.
ಗುರುಲಿಂಗಜಂಗಮಸ್ವರೂಪವಾಗಿ
ಮೂರ್ತಿಗೊಂಡಿತ್ತು
ನೋಡಾ.
ಆಹಾ ಎನ್ನ ಪುಣ್ಯವೇ ! ಆಹಾ ಎನ್ನ ಭಾಗ್ಯವೇ !
ಆಹಾ ಅಖಂಡೇಶ್ವರಾ, ನಿಮ್ಮ ಘನವ ಕಂಡು
ಎನ್ನ ಮನಕ್ಕೆ
ಮಂಗಳವಾಯಿತ್ತು
ನೋಡಾ.
10.
ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ
ತಂದೆ ನೀನು ತಾಯಿ ನೀನು,
ಬಂಧು ನೀನು ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು ನೀರಲದ್ದು
ಹಾಡಿದಡೆನ್ನೊಡೆಯನ ಹಾಡುವೆ,
ಬೇಡಿದಡೆನ್ನೊಡೆಯನ ಬೇಡುವೆ,
ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ.
ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ.
ದಯವಿಲ್ಲದ ಧರ್ಮವದೇವುದಯ್ಯಾ
ದಯವೇ
ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
ಜಯ ಬಸವರಾಜ ಭಕ್ತ ಜನ ಸುರಭೂಜ
ಜಯತು ಮಹಾಕಾರಣಿಕ ಪರಶಿವನ ಘನತೇಜ
ಜಯತು ಕರುಣಾಸಿಂಧು ಭಜಕ ಜನ ಬಂಧು
ಜಯ ಇಷ್ಟದಾಯಕ ರಕ್ಷಿಸು ಶ್ರೀ ಗುರುಬಸವ
ಜಯಗುರು ಬಸವೇಶ ಹರಹರ ಮಹಾದೇವ
ವಿಶ್ವಗುರು ಬಸವೇಶ್ವರ ಮಹಾತ್ಮಾ ಕೀ ಜೈ
ಸಕಲ ಶರಣ ಸಂತತೋಂಕೀ ಜೈ
11. ವಧುವಿನ ತಂದೆ ತಾಯಿಗಳ ಒಪ್ಪಿಗೆ
ಬಸವಣ್ಣನೇ ತಾಯಿ ಬಸವಣ್ಣನೇ ತಂದೆ
ಬಸವಣ್ಣನೇ ಪರಮ ಬಂಧುವೆನಗೆ
ವಸುಧೀಶ ಕಪಿಲಸಿದ್ಧ ಮಲ್ಲಿಕಾಜುನ
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯ
ವಧುವಿನ ತಂದೆ ತಾಯಿಗಳಾದ ನಾವು ನಮ್ಮ ಸುಪುತ್ರಿಯನ್ನು ---- ವರನಿಗೆ ನೀಡಿ ಕಲ್ಯಾಣ ಮಹೋತ್ಸವ ನೆರವೇರಲು ಮನಃಪೂವಕವಾಗಿ ಒಪ್ಪಿರುತ್ತೇವೆ. ಶರಣು ಶರಣಾಥಿಗಳು
12. ವರನ ತಂದೆ ತಾಯಿಗಳ ಒಪ್ಪಿಗೆ
ಬಸವ ರಾಜ್ಯದ ಸಿರಿಯು ಬಸವ ಬಡವರ ನಿಧಿಯು
ಬಸವ ಮಳೆ ಬೆಳೆಯು ನಾಡೊಳಗೆ ! ನಿಜದೀಪ
ಬಸವನೇ ಸಗ್ಗ ಸೋಪಾನ
ವರನ ತಂದೆ ತಾಯಿಗಳಾದ ನಾವು ನಮ್ಮ ಸುಪುತ್ರನಾದ -----ನಿಗೆ
---- ಎಂಬ ವಧುವಿನ ಜೊತೆಗೆ ಕಲ್ಯಾಣ ಮಹೋತ್ಸವವಾಗಲು ಮನಃಪೂವಕವಾಗಿ ಒಪ್ಪಿರುತ್ತೇವೆ. ಶರಣು ಶರಣಾಥಿಗಳು
13. ಪ್ರತಿಜ್ಞಾ ವಿಧಿ
ವಿವಾಹವೆಂಬುದು ಎರಡು ದೇಹಗಳ ಸಂಬಂಧವಲ್ಲ
ಎರಡು ಹೃದಯಗಳ ಸಮ್ಮಿಲನವೆಂದು ಭಾವಿಸಿ
ಒಬ್ಬರನ್ನೊಬ್ಬರು ಅರಿತುಕೊಂಡು ಬಾಳುತ್ತೇವೆ.
ನಮ್ಮ ಬದುಕಿನಲ್ಲಿ ಕಾಯಕವನ್ನು ಅಳವಡಿಸಿಕೊಂಡು ಸತ್ಯಶುದ್ಧವಾಗಿ ದುಡಿಯುತ್ತೇವೆ ಹಾಗೂ ಧರ್ಮ ಪ್ರಜ್ಞೆ ಹಾಗೂ ದಾಸೋಹ ಪ್ರಜ್ಞೆಯೊಂದಿಗೆ ಸಮಾಜಕ್ಕೆ ಹಿತವನ್ನು ತರುತ್ತೇವೆ.
ಬದುಕಿನ ಸುಖ ದುಃಖಗಳಲ್ಲಿ ನಾವಿಬ್ಬರೂ ಒಂದಾಗಿ ಪರಸ್ಪರ ಅರಿತುಕೊಂಡು ಪ್ರೀತಿ ವಿಶ್ವಾಸಗಳಿಂದ ಗೌರವ ಆದರಗಳಿಂದ ಸಮರಸದ ಜೀವನವನ್ನು ನಡೆಸುತ್ತೇವೆ.
ಗುರು ಹಿರಿಯರಲ್ಲಿ ಗೌರವ ಭಾವನೆ ಇಟ್ಟುಕೊಂಡು ತಂದೆ ತಾಯಿಗಳನ್ನು ಗೌರವದಿಂದ ಕಾಣುತ್ತೇವೆ. ಸರ್ವರ ಹಿತಕ್ಕಾಗಿ ಶ್ರಮಿಸುತ್ತಾ ಆದರ್ಶ ದಾಂಪತ್ಯ ಜೀವನವನ್ನು ನಡೆಸುತ್ತೇವೆ.
ದುಶ್ಚಟ ದುರಭ್ಯಾಸಗಳಿಂದ ದೂರವಿರುತ್ತೇವೆ. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಎದುರಾದಲ್ಲಿ ಪರಸ್ಪರ ವಿಶ್ವಾಸದಿಂದ ಚರ್ಚಿಸಿ ಬಗೆಹರಿಸಿಕೊಂಡು ಜೀವನ ನಡೆಸುತ್ತೇವೆ.
ಹೀಗೆ ಪರಿಶುದ್ಧ ಜೀವನವೇ ನಮ್ಮ ಪರಮ ಧ್ಯೇಯವೆಂದು ತಿಳಿದು ಮನಃಪೂರ್ವಕವಾಗಿ ನಡೆ ನುಡಿಗಳಿಂದ ಒಂದಾಗಿ ಬಾಳುತ್ತೇವೆಂದು ಪ್ರತಿಜ್ಞೆ ಮಾಡುತ್ತಾ ಪೂಜ್ಯರಲ್ಲಿ ಬಂಧು ಬಳಗದವರಲ್ಲಿ ಹಾಗೂ ಗಣ್ಯರುಗಳಲ್ಲಿ ಆಶೀರ್ವಾದ ಕೋರುತ್ತೇವೆ.
14.
ವಚನ ಮಾಂಗಲ್ಯ ಸಂಹಿತೆ
ಈ ಸೃಷ್ಟಿಗೆ ಮತ್ತು ಅದರ ವ್ಯವಹಾರಕ್ಕೆ ಕಾರಣವಾದ ಶಕ್ತಿ ಹೊಂದಿದೆ. ಅದು ಸರ್ವವ್ಯಾಪ್ತಿ. ಅಣುವಿಗೆ ಅಣು, ಘನಕ್ಕೆ ಘನ. ಅದ್ಭುತ ಚೇತನ.
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲವಿಸ್ತಾರದ
ರೂಹು ನೀನೇ ದೇವಾ,
`ವಿಶ್ವತಶ್ಚಕ್ಷು' ನೀನೆ ದೇವಾ,
`ವಿಶ್ವತೋಮುಖ' ನೀನೆ ದೇವಾ,
`ವಿಶ್ವತೋಬಾಹು' ನೀನೇ ದೇವಾ,
`ವಿಶ್ವತಃಪಾದ' ನೀನೆ ದೇವಾ, ಕೂಡಲಸಂಗಮದೇವಾ.
ಎಂದು ಶರಣರು ಕಂಡಿರುವ ಭಗವತ್ ಚೇತನಕ್ಕೆ ನಮಿಸೋಣ.
ಎಂದು ಶರಣರು ವರ್ಣಿಸಿರುವ ವಿರಾಡ್ರೂಪದ ಸಂಕೇತವಾದ ಇಷ್ಟಲಿಂಗವನ್ನು ನೆನೆಯೋಣ.
ನಮ್ಮ ಐಹಿಕ ಬದುಕಿಗೆ ವೈಚಾರಿಕ ಧರ್ಮವೇ ತಳಹದಿಯಾಗಲಿ. ಮಾನವೀಯ ಮೌಲ್ಯಗಳನ್ನು ರಕ್ಷಿಸಿಕೊಂಡು ಪರಿಪೂರ್ಣ ಬದುಕನ್ನು ಅನುಭವಿಸಲು ಶರಣ ಧರ್ಮದ ಷಟ್ಸ್ಥಲ, ಅಷ್ಟಾವರಣ ಮತ್ತು ಪಂಚಾಚಾರ ಸಿದ್ಧಾಂತಗಳು ನಮ್ಮ ಜೀವನದ ಆದರ್ಶ ಸೂತ್ರಗಳಾಗಲಿ ಎಂದು ಆಶಿಸೋಣ.
15.
ಮಾಂಗಲ್ಯ ಧಾರಣೆ
ನಿರ್ವಾಹಕರು ವಚನ ವಾಚನ ಮಾಡುತ್ತಿರುವಾಗಲೇ ರುದ್ರಾಕ್ಷಿ ಮಾಲಾ ಮತ್ತು ಮಾಂಗಲ್ಯವನ್ನು ತಟ್ಟೆಯಲ್ಲಿಟ್ಟುಕೊಂಡು ಪೂಜಿಸಿ ಗಂಡು ಮತ್ತು ಹೆಣ್ಣಿನ ಕಡೆಯವರಿಂದ ಮುಟ್ಟಿಸಿ ಇಟ್ಟುಕೊಳ್ಳಬೇಕು.
ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ ?
ಬೆಟ್ಟದ
ಮೇಲಣ ನೆಲ್ಲಿಯ
ಕಾಯಿ ಸಮುದ್ರದೊಳಗಣ
ಉಪ್ಪು,
ಎತ್ತಣಿಂದೆತ್ತ
ಸಂಬಂಧವಯ್ಯಾ ?
ಗುಹೇಶ್ವರಲಿಂಗಕ್ಕೆಯೂ
ನಮಗೆಯೂ
ಎತ್ತಣಿಂದೆತ್ತ
ಸಂಬಂಧವಯ್ಯಾ.
ವಧು ವರರ ತಂದೆ ತಾಯಿಗಳ ಸಮ್ಮತಿ ಮೇರೆಗೆ ಒಪ್ಪಿ ಶರಣ ಸಮ್ಮತ ಲಗ್ನದಲ್ಲಿ ವಿವಾಹವಾಗುತ್ತಿರುವುದನ್ನು ತಿಳಿಸುತ್ತಾ ನೂತನ ವಧು ವರರಿಗೆ ಗುರು ಹಿರಿಯರ ಆಶೀರ್ವಾದವನ್ನು ಕೋರಲಾಗಿದೆ.
ಓಂ ಶ್ರೀ ಗುರುಬಸವಲಿಂಗಾಯ ನಮಃ
ಓಂ ಶ್ರೀ ಗುರುಬಸವಲಿಂಗಾಯ ನಮಃ
ಓಂ ಶ್ರೀ ಗುರುಬಸವಲಿಂಗಾಯ ನಮಃ
ರುದ್ರಾಕ್ಷಿ ಮಾಲಾಧಾರಣೆ
ವಧುವಿನಿಂದ ವರನ ಕೊರಳಿಗೆ ರುದ್ರಾಕ್ಷಿಧಾರಣ ಮಾಡಿಸಬೇಕು.
ನನ್ನ ಜೀವನದ ಸರ್ವಸ್ವವೆಂದು
ಕೈಬಿಡದೇ ಸಲಹುವ ಜೊತೆಗಾರನೆಂದು
ಮಡದಿ ಮಕ್ಕಳ ಪೊರೆವ ಪತಿರತ್ನವೆಂದು
ನಿಮ್ಮ ಕೈ ಹಿಡಿವೆ ನಂಬಿ ನಾನಿಂದು
ವರನಿಂದ ವಧುವಿನ ಕೊರಳಿಗೆ ಮಾಂಗಲ್ಯಧಾರಣ ಮಾಡಿಸಬೇಕು.
ವರ
ನನ್ನ ಜೀವನದ ಅರ್ಧಾಂಗಿ ಎಂದು
ಜೊತೆಗೂಡಿ ನಡೆಯುವ ಸಹಚರಿಣಿ ಎಂದು
ಮನೆ ಮನ ತುಂಬುವ ಸತಿರತ್ನವೆಂದು
ಮಾಂಗಲ್ಯ ಧರಿಸುವೆನು ದೇವಿ ನಿನಗಿಂದು
ವಚನ
ಭಕ್ತಿರತಿ ಎಂಬ ಮದುವೆಗೆ-
ಕಣಗಿಲೆಲೆಯ
ಉಂಗುರವನಿಕ್ಕಿ,
ಮೊಲ್ಲೆಮಲ್ಲಿಗೆಯ
ತೆರೆಯ ಕಟ್ಟಿ,
ಸೇವಂತಿಗೆಯ
ಚಪ್ಪರವನಿಕ್ಕಿ,
ಪುಷ್ಪಜಾತಿಗಳೆಲ್ಲಾ
ನಿಬ್ಬಣವ
ಬನ್ನಿರೇ.
ನಮಗೆಯು
ನಮ್ಮ ಕೂಡಲಸಂಗಮದೇವಂಗೆಯು
ಮದುವೆ.
16. ಪುಷ್ಪವೃಷ್ಟಿ
ಮಾಂಗಲ್ಯಧಾರಣೆ, ವಚನ ಮಾಂಗಲ್ಯವಾದ ನಂತರ ವಧು ವರರಿಗೆ ಹಾರಗಳನ್ನು ಹಾಕಿಸಿ, ಕುಳ್ಳಿರಿಸಿ, ಓಂ ಶ್ರೀ ಗುರುಬಸವಲಿಂಗಾಯ ನಮಃ ಎನ್ನುತ ನೆರೆದ ಸರ್ವರಿಂದಲೂ ಪುಷ್ಪವನ್ನೆರಚಿ ಗುರುಬಸವಣ್ಣನವರ ಶ್ರೀ ರಕ್ಷೆ ತಮಗೆ ಇರಲಿ, ಗುರು, ಲಿಂಗ ,ಮತ್ತು ಜಂಗಮದ ಕಾರುಣ್ಯವಿರಲಿ, ಆಯುಷ್ಯ, ಆರೋಗ್ಯ, ಐಶ್ವರ್ಯ, ಸದ್ವಿದ್ಯೆ, ಸಂವೃದ್ಧಿ ಮತ್ತು ಸಂತೃಪ್ತಿ ನೆಲೆಸಿ ಶರಣ ದಂಪತಿಗಳಾಗಿ ಶರಣ ಪಥದಲ್ಲಿ ಸಾಗಿ ಎಂದು ಹರಸಿ ಜಯಗುರುಬಸವೇಶ ಹರ ಹರ ಮಹಾದೇವ ಎಂದು ಶುಭಾಶೀರ್ವಾದ ಮಾಡಬೇಕು.
17.
ವಧು ವರರಿಂದ ಅಂತಿಮ ಪ್ರತಿಜ್ಞಾ ವಚನ
ನಿರ್ವಾಹಕರು ಬೋಧಿಸಬೇಕು. ವಧು ವರರು ಒಟ್ಟಿಗೆ ಪುನರುಚ್ಚರಿಸಬೇಕು.
ಹುಟ್ಟಿದೆ
ಶ್ರೀಗುರುವಿನ ಹಸ್ತದಲ್ಲಿ
ಬೆಳೆದೆನು
ಅಸಂಖ್ಯಾತರ
ಕರುಣದೊಳಗೆ.
ಭಾವವೆಂಬ
ಹಾಲು, ಸುಜ್ಞಾನವೆಂಬ
ತುಪ್ಪ,
ಪರಮಾರ್ಥವೆಂಬ
ಸಕ್ಕರೆಯನಿಕ್ಕಿದರು
ನೋಡಾ.
ಇಂತಪ್ಪ
ತ್ರಿವಿಧಾಮೃತವನು
ದಣಿಯಲೆರೆದು
ಸಲಹಿದಿರೆನ್ನ.
ವಿವಾಹವ
ಮಾಡಿದಿರಿ, ಸಯವಪ್ಪ
ಗಂಡಂಗೆ
ಕೊಟ್ಟಿರಿ,
ಕೊಟ್ಟ ಮನೆಗೆ ಕಳುಹಲೆಂದು
ಅಸಂಖ್ಯಾತರೆಲ್ಲರೂ
ನೆರೆದು
ಬಂದಿರಿ.
ಬಸವಣ್ಣ
ಮೆಚ್ಚಲು
ಒಗತನವ ಮಾಡುವೆ.
ಚೆನ್ನಮಲ್ಲಿಕಾರ್ಜುನನ
ಕೈವಿಡಿದು
ನಿಮ್ಮ ತಲೆಗೆ ಹೂವ ತಹೆನಲ್ಲದೆ
ಹುಲ್ಲ ತಾರೆನು.
ಅವಧರಿಸಿ, ನಿಮ್ಮಡಿಗಳೆಲ್ಲರೂ
ಮರಳಿ ಬಿಯಂಗೈವುದು, ಶರಣಾರ್ಥಿ.
ಸುಖವೊಂದು ಕೋಟ್ಯಾನುಕೋಟಿ
ಬಂದಲ್ಲಿ ಬಸವಣ್ಣನ ನೆನೆವೆ.
ದುಃಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ. ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ.
ಇದು ಕಾರಣ, ಬಸವಣ್ಣ ಬಸವಣ್ಣ
ಎನುತಿರ್ದೆನು ಕಾಣಾ, ಕಲಿದೇವಯ್ಯ.
18.
ವಚನಗಂಟು
ಚಿಕ್ಕ ವಚನ ಗ್ರಂಥವನ್ನು ವಧು ವರರ ಶಲ್ಯದಲ್ಲಿ ಕಟ್ಟುವುದು.
ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು,
ತವರಾಜದ
ನೊರೆ ತೆರೆಯಂತೆ
ಆದ್ಯರ ವಚನವಿರಲು,
ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ
ವಿಧಿಯಂತೆ
ಆಯಿತ್ತೆನ್ನ
ಮತಿ, ಕೂಡಲಸಂಗಮದೇವಾ
19. ಗಣ್ಯರ ಹಿತನುಡಿ
20.ಆಶೀರ್ವಚನ
21. ವಂದನಾರ್ಪಣೆ
ಎಮ್ಮ ವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮ ಬಾರದಯ್ಯಾ
ಎಮ್ಮ ವಚನದ ನೂರೆಂಟರಧ್ಯಯನಕ್ಕೆ
ಶತರುದ್ರೀಯ ಯಾಗ ಸಮ ಬಾರದಯ್ಯಾ.
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರಿ ಲಕ್ಷ ಜಪ ಸಮ ಬಾರದಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ.
22.
ಪ್ರಸಾದ
ಮೌನದಲುಂಬುದು
ಆಚಾರವಲ್ಲ.
ಲಿಂಗಾರ್ಪಿತವ
ಮಾಡಿದ ಬಳಿಕ
ತುತ್ತಿಗೊಮ್ಮೆ
ಶಿವಶರಣೆನುತ್ತಿರಬೇಕು.
ಕರಣವೃತ್ತಿಗಳಡಗುವವು,
ಕೂಡಲಸಂಗನ
ನೆನೆವುತ್ತ
ಉಂಡಡೆ.
---------------------------------------------------------------------------------------

ತುಂಬಾ ಚನ್ನಾಗಿ ಮೂಡಿ ಬಂದಿದೆ. ಇನ್ನೂ ಸ್ವಲ್ಪ ಸಂಕ್ಷಿಪ್ತ ಮಾಡಿದರೆ ಚನ್ನಾಗಿತ್ತು. ಸಧ್ಕಕ್ಕೆ ನನ್ನ ಮಗನ ಕಲ್ಯಾಣ ಮಹೋತ್ಸವ ಮುಗಿದ ಮೇಲೆ ನಾನೂ ಉಚಿತವಾಗಿ ನಿರ್ವಾಹಕನಾಗಿ ಸೇವೆ ಮಾಡಬಯಸಿದ್ದೇನೆ.
ReplyDeleteತುಂಬಾ ಧನ್ಯವಾದಗಳು ತಮ್ಮ ವಿಳಾಸ ಕಳಿಸಿ
Deleteತುಂಬಾ ಚೆನ್ನಾಗಿ ಮೂಡಿ ಬಂದಿದೆ... ಶರಣು ಶರಣಾರ್ಥಿ .
ReplyDelete