Monday, September 26, 2022

ಬೀಚಿಯವರ ನುಡಿಗಳು

 ಶ್ರೀ. ಬೀ.ಚಿ.ಯವರ ಶುಚಿ

ಯಾದ ನುಡಿಗಳು. 


1. ದುಡಿಯದೇ ಇರುವ ಪ್ರತಿಯೊಬ್ಬ   

     ಶ್ರೀಮಂತನೂ ಭಿಕ್ಷುಕನೆ....


2. ಗೆಳೆಯನನ್ನು ಉಪ್ಪಿನಂತೆ 

    ಬಳಸಬೇಕೇ ವಿನಃ ಸಕ್ಕರೆಯಂತೆ      

    ಸುರಿದುಕೂಳ್ಳಬಾರದು 


3. ಶ್ರೀ ಮಂತನ "ಕ್ಷಯ"ವೇ 

    ಡಾಕ್ಟರ್ ನ "ಆಕ್ಷಯ" ಪಾತ್ರೆ.


4.  ವಷ೯ಕ್ಕೊಮ್ಮೆ ಸಾವಿನ ಬಗ್ಗೆ 

     ಎಚ್ಚರಿಸಲು ಕಾಲರಾಯನು

     ಗಂಟೆ ಬಾರಿಸುವ ದಿನವೇ 

     ಜನ್ಮ ದಿನ.


5.  ಬಾಳಿನ ವ್ಯಾಕರಣ. 

     ಹೆಣ್ಣು--ಪದ್ಯ

     ಗಂಡು--ಗದ್ಯ.

     ಮಕ್ಕಳು--ವ್ಯಾಕರಣ. 


6. ತಾಳಿ ಕದ್ದವನಿಗೆ ಕಠಿಣ ಶಿಕ್ಷೆ, 

    ತಾಳಿ ಕಟ್ಟಿದವನಿಗೆ ಜೀವಾವಧಿ

    ಶಿಕ್ಷೆ.


7. ಮನೆ ನಿಂತಿರುವುದು

    ಮಡದಿಯಿಂದ. ಅದು ಬಿದ್ದರೆ

    ಗಂಡನ ತಲೆಮೇಲೆ. 


8.ವಾರದಲ್ಲಿ ಮೂರು ದಿನ-

   ವಾದರೂ ನಗುತ್ತಿರಬೇಕು.. 

    ನಿನ್ನೆ, ಇಂದು, ನಾಳೆ

🌹🙏😜😲🫡

No comments:

Post a Comment