ಶ್ರೀ. ಬೀ.ಚಿ.ಯವರ ಶುಚಿ
ಯಾದ ನುಡಿಗಳು.
1. ದುಡಿಯದೇ ಇರುವ ಪ್ರತಿಯೊಬ್ಬ
ಶ್ರೀಮಂತನೂ ಭಿಕ್ಷುಕನೆ....
2. ಗೆಳೆಯನನ್ನು ಉಪ್ಪಿನಂತೆ
ಬಳಸಬೇಕೇ ವಿನಃ ಸಕ್ಕರೆಯಂತೆ
ಸುರಿದುಕೂಳ್ಳಬಾರದು
3. ಶ್ರೀ ಮಂತನ "ಕ್ಷಯ"ವೇ
ಡಾಕ್ಟರ್ ನ "ಆಕ್ಷಯ" ಪಾತ್ರೆ.
4. ವಷ೯ಕ್ಕೊಮ್ಮೆ ಸಾವಿನ ಬಗ್ಗೆ
ಎಚ್ಚರಿಸಲು ಕಾಲರಾಯನು
ಗಂಟೆ ಬಾರಿಸುವ ದಿನವೇ
ಜನ್ಮ ದಿನ.
5. ಬಾಳಿನ ವ್ಯಾಕರಣ.
ಹೆಣ್ಣು--ಪದ್ಯ
ಗಂಡು--ಗದ್ಯ.
ಮಕ್ಕಳು--ವ್ಯಾಕರಣ.
6. ತಾಳಿ ಕದ್ದವನಿಗೆ ಕಠಿಣ ಶಿಕ್ಷೆ,
ತಾಳಿ ಕಟ್ಟಿದವನಿಗೆ ಜೀವಾವಧಿ
ಶಿಕ್ಷೆ.
7. ಮನೆ ನಿಂತಿರುವುದು
ಮಡದಿಯಿಂದ. ಅದು ಬಿದ್ದರೆ
ಗಂಡನ ತಲೆಮೇಲೆ.
8.ವಾರದಲ್ಲಿ ಮೂರು ದಿನ-
ವಾದರೂ ನಗುತ್ತಿರಬೇಕು..
ನಿನ್ನೆ, ಇಂದು, ನಾಳೆ
🌹🙏😜😲🫡
No comments:
Post a Comment