Monday, September 7, 2020

ಹದಿನೈದನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ


ಶರಣರ ಜೀವನವೇ ಮೌಲ್ಯಾಧಾರಿತವಾದದ್ದು ಎಂದು ಸರಗೂರು ತಾಲ್ಲೂಕು ಬಿಡಗಲು ಪಡವಲು ವಿರಕ್ತ ಮಠದ ಶ್ರೀ ಮಹದೇವಸ್ವಾಮಿಗಳು ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ ಹದಿನೈದನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ಶರಣರ ಜೀವನ ಮೌಲ್ಯಗಳು ಎಂಬ ವಿಷಯ ಕುರಿತು ಪ್ರವಚನ ನೀಡಿ ಮಾತನಾಡಿದ ಅವರು ಶರಣರ ವಚನಗಳಲ್ಲಿ ಇರುವ ಸೌಜನ್ಯ, ವಿನಯ ಮತ್ತು ಕರುಣೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದ್ವೇಷ ಅಸೂಹೆ ಹೋಗಿ ಪ್ರೀತಿ ವಿಶ್ವಾಸವನ್ನು ಮೈಗೂಡಿಸಿಕೊಂಡು ಸಹಬಾಳ್ವೆ ನಡೆಸಲು ಸಹಾಯಕವಾಗುತ್ತದೆ. ಇಂದು ಮಾನವ ಹಣ ಮತ್ತು ಅಧಿಕಾರಕ್ಕಾಗಿ ಅಹಂಕಾರದಿಂದ ಮಾನವೀಯ ಮೌಲ್ಯಗಳನ್ನು ಮರೆತು ಅಮಾನವೀಯವಾಗಿ ವರ್ತಿಸುತ್ತಿರುವುದನ್ನು ಕಾಣಬಹುದು. ಶರಣರು ಸೂಚಿಸಿದ ಸದುವಿನಯವನ್ನು ಅಳವಡಿಸಿಕೊಂಡರೆ ಮನದಲ್ಲಿ ಪರಶಿವನ ಸಾಕ್ಷಾತ್ಕಾರವಾಗುತ್ತದೆ. ಪರಧನ, ಪರಸತಿ, ಪರದೈವವನ್ನು ತಿರಸ್ಕರಿಸುವ ಛಲವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಯಾರೂ ಸದಾಚಾರದಿಂದ ನಡೆಯುವುದಿಲ್ಲವೋ ಅಂತಹವರು ಜ್ಞಾನಿಗಳಾಗಿದ್ದರೂ ಸಮಾಜದ ದೃಷ್ಟಿಯಲ್ಲಿ ಅಜ್ಞಾನಿಗಳಾಗುತ್ತಾರೆ. ಮಾನವೀಯ ಮೌಲ್ಯಗಳಿಗೆ ಬಸವಾದಿ ಪ್ರಮಥರು ಮಹತ್ವ ನೀಡಿದ್ದು ಅವುಗಳನ್ನು ಅನೇಕ ಕವಿಗಳು ಕೂಡಾ ಉಲ್ಲೇಖಿಸಿದ್ದಾರೆ. ಕುವೆಂಪುರವರು ಏನಾದರೂ ಆಗು ಮೊದಲು ಮಾನವನಾಗು ಎಂದು ಹೇಳಿದ್ದು ಅದನ್ನು ನಾವು ಅಕ್ಷರಶಃ ಪಾಲಿಸಬೇಕಾಗುತ್ತದೆ ಎಂದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ವಿಶ್ವದಲ್ಲಿ ಮೊದಲ ಬಾರಿಗೆ ಸ್ವಂತಿಕೆಯಿಂದ ರಚಿತವಾದ ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ. ಇದು ಆತ್ಮ ವಿಮರ್ಶೆಯ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ವಿಶ್ವ ಸಾಹಿತ್ಯದ ಅವಿಭಾಜ್ಯ ಅಂಗವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮರಿಯಾಲ ಮುರುಘ ರಾಜೇಂದ್ರ ಮಹಾಸಂಸ್ಥಾನ ಮಠದ ಶ್ರೀ ಇಮ್ಮಡಿ ಮುರುಘ ರಾಜೇಂದ್ರಸ್ವಾಮಿಗಳು, ದಂಡಿಕೆರೆ ಬಸವಲಿಂಗಸ್ವಾಮೀಜಿ, ಮಹಾರಾಷ್ಟ್ರದ ಡಾ. ಶಾಂತಲಿಂಗಮಹಾಸ್ವಾಮೀಜಿ, ಮಾತೆ ಜಯದೇವಿತಾಯಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾವೇರಿ ವಾಜಂತ್ರಿ, ಕೇಂದ್ರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ,  ಬಹ್ರೈನ್ ಶಿವಾನಂದ ಪಾಟೀಲ್, ಮಸ್ಕತ್ ನಂದೀಶ್ವರ್ ನಂದು, ಕಣ್ಣೂರು ಕುಮಾರಸ್ವಾಮಿ, ವೀರಭದ್ರಸ್ವಾಮಿ, ವಚನ ಚೂಡಾಮಣಿ ಎಚ್. ಕೆ. ಚನ್ನಪ್ಪ, ಸುಮಂಗಳ ಆರ್, ಮೃಣಾಲಿನಿ ಆರಾಧ್ಯ, ಅನಿತಾ ನಾಗರಾಜ್, ಕವಿತ. ಜೆ, ಎಸ್.ಎಸ್.ಪಾಟೀಲ್,   ವೀರೇಶಮೂರ್ತಿ, ಸುನಿತಾ ಅಂಗಡಿ ಕೊಡೇಕಲ್, ಮಹಂತೇಶ್, ನೀಲಾಂಬಿಕಾ ದೇವಿ ನಾಗರಾಜು, ಮಾರುತೇಶ್, ಮಲ್ಲಿಕಾರ್ಜುನಸ್ವಾಮಿ, ಜಯಾನಂದ ಟೋಪುಗೋಳ, ದೀಪ ತೊಲಗಿ, ಭಾಗ್ಯ ತೆಗ್ಗಳ್ಳಿ, ಶಿವಪುತ್ರಪ್ಪ, ನಾಗನಗೌಡಪಾಟೀಲ್,  ಉಪಸ್ಥಿತರಿದ್ದರು.


No comments:

Post a Comment