ಪ್ರಜಾಪ್ರಭುತ್ವದ ಬೀಜ ಬಿತ್ತಿದ ಶರಣರ ಸಂಸ್ಕøತಿ ವಿಶ್ವದಲ್ಲಿಯೇ ಶ್ರೀಮಂತವಾದದ್ದು ಎಂದು ಕಿಂಗ್‍ಡಮ್ ಆಫ್ ಬಹ್ರೈನ್ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಶಿವಾನಂದಪಾಟೀಲ್ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಅಂತರ್ಜಾಲದಲ್ಲಿ ನಡೆದ ವಿದೇಶದಲ್ಲಿರುವ ಕನ್ನಡಿಗರಿಂದ ವಚನ ಮಾಧುರ್ಯ ಒಂಭತ್ತನೆಯ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಲು ವಚನಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆ ನೀಡುವುದರ ಮುಖಾಂತರ ಹೆಣ್ಣು, ಗಂಡು, ಮೇಲು ಮತ್ತು ಕೀಳು ಎಂಬ ಭೇದವಿಲ್ಲದೇ ಸರ್ವರೂ ಸರಿ ಸಮಾನರು ಎಂಬ ಸಮಾನತೆಯ ಅಡಿಪಾಯ ಹಾಕುವುದರ ಮೂಲಕ ಮಾದರಿಯಾಗಿದ್ದಾರೆ. ಶರಣರು ಆಧ್ಯಾತ್ಮಿಕ ವೀರರಾಗದೆ ಆಚಾರ ವೀರರಾಗುವುದರ ಮೂಲಕ ನುಡಿದಂತೆ ನಡೆದು ಸುಸಂಸ್ಕøತ ಸಮಾಜದ ಉದಯಕ್ಕೆ ಕಾರಣರಾದರು. ಮತ್ತೆ ಕಲ್ಯಾಣ ಎಂಬ ಚಳುವಳಿಯನ್ನು ಮತ್ತಷ್ಟು ತೀವ್ರಗೊಳಿಸುವುದರ ಮೂಲಕ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ಶರಣರ ತತ್ವವನ್ನು ಪ್ರತಿಯೊಬ್ಬರಿಗೂ ಮನದಟ್ಟು ಮಾಡಿಸಬೇಕು. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಷಟ್ಸ್ಥಲಗಳ ಒಂದೊಂದೇ ಮೆಟ್ಟಿಲನ್ನು ಹತ್ತುವುದರ ಮೂಲಕ ಸಾರ್ಥಕ ಬದುಕನ್ನು ರೂಪಿಸಿಕೊಳ್ಳೋಣ. ಇಂದು ಏಳು ದೇಶಗಳಲ್ಲಿರುವ ಕನ್ನಡಿಗರನ್ನು ಶರಣು ವಿಶ್ವವಚನ ಫೌಂಡೇಷನ್ ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ ಅವರಿಂದ ಶರಣರ ನುಡಿಗಳನ್ನು ಸ್ತುತಿಸುವಂತೆ ಮಾಡಿರುವುದು ನಿಜಕ್ಕೂ ಪ್ರಶಂಸನೀಯ ಕಾರ್ಯಕ್ರಮ ಎಂದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ ಕನ್ನಡ ನಾಡು ಸಂಸ್ಕøತಿಯ ನೆಲೆವೀಡು. ಈ ದಿನ ಹತ್ತಕ್ಕೂ ಹೆಚ್ಚು ಜನರು ವಿದೇಶದಲ್ಲಿದ್ದರೂ ಕೂಡಾ ಶರಣ ಸಂಸ್ಕøತಿಯನ್ನು ಮರೆಯದೆ ಮೆರೆಯುತ್ತಿರುವುದು ಕನ್ನಡಾಭಿಮಾನದ ದ್ಯೋತಕವಾಗಿದೆ. ಶರಣರು ವಚನಗಳ ಮೂಲಕ ನೀಡಿದ ಭಕ್ತಿ, ದಾಸೋಹ, ಅನುಭಾವ, ಪಂಚಾಚಾರ, ಅಷ್ಟಾವರಣ, ಷಟ್ಸ್ಥಲ ಸಿದ್ಧಾಂತಗಳು ಮನುಜರನ್ನು ಹೊಸಚಿಂತನೆಗೆ ಎಡೆಮಾಡಿಕೊಡುತ್ತದೆ. ವಚನಗಳಲ್ಲಿರುವ ಮೌಲ್ಯಗಳನ್ನು ಅಳವಡಿಸಿಕೊಂಡು ಮೌಲ್ಯಯುತವಾದ ಬದುಕನ್ನು ಕಟ್ಟಿಕೊಳ್ಳೋಣ ಎಂದರು. ನಂತರ ನಡೆದ ವಚನ ಮಾಧುರ್ಯ ಕಾರ್ಯಕ್ರಮದಲ್ಲಿ ದುಬೈನ ಲಕ್ಷ್ಮಿ ಚಂದ್ರಶೇಖರ್ ಲಿಂಗದಹಳ್ಳಿ, ಚೈನಾದ ರೇಣುಕಾಪ್ರಸಾದ್ ಎಂ. ಕಿಂಗ್‍ಡಮ್ ಆಫ್ ಬಹ್ರೈನ್‍ನ ಬಸವರಾಜ್ ದುಲೆಹೊಲಿ, ರಾಹುಲ್ ಅಕ್ಕಿಹಾಳ್, ಅನುಷಾ ಪಾಟೀಲ್, ಹೇಮ ಎಸ್ ಪಾಟೀಲ್, ಜಪಾನ್‍ನ ಸಂಜಯ್‍ಕುಮಾರ್ ಎಲ್.ಎಸ್, ಇಟಲಿಯ ಜಯಾಮೂರ್ತಿ ಪಿಸಾ, ಲಂಡನ್‍ನ ಎ.ಬಿ ಲಾಸ್ಯ, ಆಸ್ಟ್ರೇಲಿಯಾದ ಸುಷ್ಮ ದಯಾನಂದ್ ಹುಳಿಯಾಪ್ಲಾರ್ ಭಾಗವಹಿಸಿ ವಚನವಾಚನ, ಗಾಯನ ಮತ್ತು ತಾತ್ಪರ್ಯ ಮಾಡಿದರು. ಕಾರ್ಯಕ್ರಮದಲ್ಲಿ ಲಾಳನಹಳ್ಳಿ ಮಠದ ಜಯದೇವಿ ತಾಯಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಅಂತರ್ಜಾಲ ಸಂಚಾಲಕ ಪಿ.ವಿ. ರುದ್ರೇಶ್, ಕೇಂದ್ರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ, ಗಾಯಕಿ ಸುಗಂಧಮ್ಮ ಜಯಪ್ಪ, ಚಿಕ್ಕಮಗಳೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷೆ ಪುಷ್ಪ ಶಿವಕುಮಾರ್ ಲಿಂಗದಹಳ್ಳಿ, ಬೆಂಗಳೂರಿನ ಕವಯತ್ರಿ ಮಂಜುಶ್ರೀ ಎಸ್. ಕಾರ್ಯದರ್ಶಿ ಅನಿತಾ ನಾಗರಾಜ್, ಮಸ್ಕತ್‍ನ ಭೀಮ ನೀಲಕಂಠರಾವ್ ಹಂಗರಗೆ, ನಂದೀಶ್ವರ ದಾವಣಗೆರೆ, ಬಹ್ರೈನ್‍ನ ಕಿರಣ್ ಗಿರೀಶ್, ಸ್ವಪ್ನ, ಸುಮಂಗಳ ಆರ್, ಮೇಘ ರೇಣುಕಾಪ್ರಸಾದ್, ದಾವಣಗೆರೆ ಶರಣು ವಿಶ್ವವಚನ ಫೌಂಡೇಷನ್ ಗೌರವಾಧ್ಯಕ್ಷ ನಾಗಭೂಷಣಗೌಡ ಪಿ. ಬಸವರಾಜ್ ಎಸ್ ಗವಾತಿ, ಬೆಂಗಳೂರಿನ ಇಂದಿರಾ ಬಸವರಾಜು, ಸುನಿತಾ ಅಂಗಡಿ ಕೊಡೇಕಲ್, ಯು.ಎಂ. ಉಮಾದೇವಿ, ಪೂರ್ಣಿಮಾ, ಸರಸ್ವತಿ ರಾಮಣ್ಣ, ನರೇಂದ್ರ ಆರ್, ಉಮಾಪತಿ, ವೀರೇಶಮೂರ್ತಿ, ಡಾ. ಶಿವಮೂರ್ತಿ, ನೀಲಾಂಬಿಕಾ ದೇವಿ ನಾಗರಾಜು, ಚಂಚಲ ಜಯದೇವ್, ಗಿರಿಜಾಂಬ ಡಿ.ಬಿ, ಚನ್ನಪ್ಪ ಎಚ್.ಕೆ, ಉಮಾಪತಿ, ಎಸ್.ಎಸ್.ಪಾಟೀಲ್, ದೀಪ ತೊಲಗಿ ಉಪಸ್ಥಿತರಿದ್ದರು.

No comments:
Post a Comment