Tuesday, September 22, 2020

ಚನ್ನಬಸವಣ್ಣನವರ ವಚನ ವ್ಯಾಖ್ಯಾನ

 


ಚನ್ನಬಸವಣ್ಣನವರ ವಚನ ವ್ಯಾಖ್ಯಾನ

ಚನಗಳು ಮಹಾಲಿಂಗದ ಬೆಳಕಾಗಿವೆ. ಮಾನವನನ್ನು ಮಹಾದೇವನಲ್ಲಿ ಬೆರೆಸುವ ಮಾರ್ಗದರ್ಶಕವಾಗಿವೆ. ಶಿವಯೋಗಕ್ಕೆ ಸಾಧನಾವಾಗಿವೆ.

ವಿಶ್ವಗುರು ಬಸವಣ್ಣನವರ ಸೋದರಳಿಯ ಚನ್ನಬಸವಣ್ಣನವರ 320 ವಚನಗಳನ್ನು ಡಾ.ಜಿ.ಎಸ್. ಕಾಪಸೆ ಸಂಪಾದಿಸಿದ್ದಾರೆ. ಶ್ರೀ ಸಿದ್ಧರಾಮೇಶ್ವರ ಶರಣರು ಬೆಲ್ದಾಳ ವ್ಯಾಖ್ಯಾನ ಮಾಡಿದ್ದಾರೆ.

 

ಒಂದು ವಚನದ ತಾತ್ಪರ್ಯ ಇಂತಿದೆ.

 

ಲಿಂಗಕ್ಕೆ ಕೊಟ್ಟುಕೊಂಡಡೆ ಪ್ರಸಾದಿ

ಜಂಗಮವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದ

ಇದೇ ಪ್ರಸಾದದಾದಿ ಕಂಡಯ್ಯಾ.

ಆದಿಯ ಪ್ರಸಾದದಾದಿ ವೇದಿಸಬಲ್ಲಡೆ ಇದೆ ಕಂಡಯ್ಯಾ

ಜಂಗಮಕ್ಕೆ ನೀಡದೆ, ಲಿಂಗಕ್ಕೆ ಕೊಡದೆ ಕೊಂಡಡೆ

ಹುಳುಗೊಂಡದಲ್ಲಿಕ್ಕುವ ಕೂಡಲಚನ್ನಸಂಗಮದೇವ.

 

ಭಾವ : ಇಲ್ಲಿ ಭಕ್ತನು ಸಹಜವಾಗಿ ಪಡೆವ ಲಿಂಗ ಜಂಗಮ ಪ್ರಸಾದದ ವಿಧಾನವನರುಹಲಾಗಿದೆ. ಇಷ್ಟ ಪ್ರಾಣ ಭಾವಲಿಂಗಕ್ಕರ್ಪಿಸಿ ಸವಿದುದು ಲಿಂಗಪ್ರಸಾದ. ಚೇತನರೂಪಿ ಜಂಗಮಕ್ಕೆ ನೀಡಿ ತೃಪ್ತಿಗೊಳಿಸಿದ ಬಳಿಕ ುಳಿದುದು ಜಂಗಮಪ್ರಸಾದ. ಇದು ಪ್ರಸಾದದ ಮೂಲ. ಮೂಲಲಿಂಗದ ಮಹಾಪ್ರಸಾದದಲ್ಲಿ ಪ್ರವೇಶಿಸಬೇಕಾದರೆ ಇದು ಸುಲಭ ಸುಮಾರ್ಗ. ತಾನು ಸಂಪಾದಿಸಿದ್ದವರಲ್ಲಿ ಜಂಗಮ ಚೇತನಕ್ಕೆ ನೀಡದೆ ಲಿಂಗಾರ್ಪಿತ ಮಾಡದೆ ಅಶನ ವ್ಯಸನದಾಸೆಗೆ ಸವಿದರೆ ಅವಗುಣವೆಂಬ ಹುಳಗುಂಡದಲ್ಲಿ ದೇವನಿರಿಸುವನು.

 

ಈ ರೀತಿ ತಾತ್ಪರ್ಯ ಮಾಡಿದ್ದಾರೆ. ಮತ್ತೆ ಪ್ರತೀ ಸಾಲಿಗೂ ಭಾಷ್ಯ ಬರೆದಿದ್ದಾರೆ.

 

ಒಟ್ಟು 512 ಪುಟಗಳನ್ನು ಹೊಂದಿರುವ ಈ ಕೃತಿಯನ್ನು ಮೈಸೂರಿನ ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಹೊರತಂದಿದ್ದು ಇದರ ಮುಖಬೆಲೆ ರೂ 300. ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ.

 

9980393469

 

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು



 

 

1 comment: