ಮೈಸೂರು :ಮಹಿಳೆಯರ ಸ್ಥಿತಿ ಶೋಚನೀಯವಾಗಿದ್ದ ಸಂದರ್ಭದಲ್ಲಿ ಧ್ವನಿ ನೀಡಿ ಆಕೆ ಕೂಡಾ ಸಬಲೆ ಎಂದವರು ಬಸವಣ್ಣ ಎಂದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕು ನಾಗನೂರ ಗುರುಬಸವಮಠದ ಬಸವಗೀತಾತಾಯಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ ಹದಿಮೂರನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ಬಸವಣ್ಣನವರು ಕೊಟ್ಟ ಮಹಿಳಾ ಸ್ವಾತಂತ್ರ್ಯ ಎಂಬ ವಿಷಯ ಕುರಿತು ಪ್ರವಚನ ನೀಡಿದ ಅವರು ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ, ಮೋಕ್ಷಕ್ಕೆ ಅರ್ಹಳಲ್ಲ ಎಂದು ತಿರಸ್ಕಾರದಿಂದ ಕಾಣುತ್ತಿದ್ದ ಸಂದರ್ಭದಲ್ಲಿ ಅನುಭವ ಮಂಟಪ ರಚಿಸಿ ನೂರಾರು ಮಹಿಳೆಯರು ಚರ್ಚಾಗೋಷ್ಠಿಯಲ್ಲಿ ಭಾಗವಹಿಸಲು ಪ್ರೇರಣೆ ನೀಡಿದುದರ ನಿಮಿತ್ತ ಮೂವತ್ತಕ್ಕೂ ಹೆಚ್ಚು ಮಹಿಳೆಯರು ಒಂದು ಸಾವಿರಕ್ಕೂ ಹೆಚ್ಚು ವಚನಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಲು ಸಾಧ್ಯವಾಗಿ ಅಕ್ಕಮಹಾದೇವಿ ಪ್ರಥಮ ಮಹಿಳಾ ಕವಯತ್ರಿಯಾಗಿ ಇತರೆ ಮಹಿಳೆಯರಿಗೆ ಮಾದರಿಯಾದಳು. ಲೌಕಿಕವಾಗಿ ಮಾತ್ರವಲ್ಲದೇ ಪಾರಮಾರ್ಥಿಕವಾಗಿಯೂ ಸಾಧನೆ ಮಾಡಬಹುದು ಎಂಬುದನ್ನು ಶರಣರು ಉತ್ತಮ ಮುನ್ನುಡಿ ಹಾಕಿಕೊಟ್ಟರು ಎಂದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಕನ್ನಡ ನಾಡಿನ ಪ್ರಥಮ ಪ್ರಜಾ ಸಾಹಿತ್ಯ ವಚನ ಸಾಹಿತ್ಯ. ಮತ್ರ್ಯಲೋಕವೆಂಬ ಮಹಾಮನೆ ಹಾಳಾಗಬಾರದೆಂದು ಹುಟ್ಟಿಬಂದ ಶರಣರು ಆದರ್ಶವಾಗಿ ಬದುಕಿ ಅನುಭಾವಿಕ ನೆಲೆಗಟ್ಟಿನ ವಚನ ಸಾಹಿತ್ಯ ನೀಡಿ ಜನಮಾನಸವನ್ನು ಬೆಳಕಿನೆಡೆಗೆ ಕೊಂಡೊಯ್ದರು ಎಂದರು. ಕಾರ್ಯಕ್ರಮದಲ್ಲಿ ಪಡುವಲು ಮಠದ ಮಹದೇವಸ್ವಾಮೀಜಿ, ಲಾಳನಹಳ್ಳಿ ಮಠದ ಮಾತೆ ಜಯದೇವಿತಾಯಿ, ದೇವಲಾಪುರ ಮಠದ ಜಡೇಸ್ವಾಮಿಗಳು, ಗುರುಬಸವ ಮಠದ ಬಸವಪ್ರಕಾಶಸ್ವಾಮೀಜಿ, ಗದ್ದಿಗೆಯ ಕರಿಬಸವಶಾಸ್ತ್ರಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾವೇರಿ ವಾಜಂತ್ರಿ, ವಿ. ಲಿಂಗಣ್ಣ, ಬಹ್ರೈನ್ ಶಿವಾನಂದ ಪಾಟೀಲ್, ಮಸ್ಕತ್ ನಂದೀಶ್ವರ್ ನಂದು, ಕಣ್ಣೂರು ಕುಮಾರಸ್ವಾಮಿ, ಕೆ. ಗಣೇಶ್, ಎಚ್. ಕೆ. ಚನ್ನಪ್ಪ, ಸುಮಂಗಳ ಆರ್, ವೀರೇಶಮೂರ್ತಿ, ಸುನಿತಾ ಅಂಗಡಿ ಕೊಡೇಕಲ್, ಮಹಂತೇಶ್, ಸರಸ್ವತಿ ರಾಮಣ್ಣ, ನೀಲಾಂಬಿಕಾ ದೇವಿ ನಾಗರಾಜು, ಮಾರುತೇಶ್, ಮಲ್ಲಿಕಾರ್ಜುನಸ್ವಾಮಿ, ಜಯಾನಂದ ಟೋಪುಗೋಳ, ದೀಪ ತೊಲಗಿ, ಭಾಗ್ಯ ತೆಗ್ಗಳ್ಳಿ, ಶಿವಪುತ್ರಪ್ಪ, ನಾಗನಗೌಡಪಾಟೀಲ್, ಉಪಸ್ಥಿತರಿದ್ದರು.

No comments:
Post a Comment