ಯಾರೋ ಕೇಳಿದರು: ಒಲಂಪಿಕ್ಸ್ನಲ್ಲಿ ಇಷ್ಟೆಲ್ಲ ಪದಕ ಗೆದ್ದಿದ್ದೀರಿ ಹೇಗೆ?
ಮೈಕೆಲ್ ಹೇಳಿದರು: ದಿನವೂ ಪ್ರ್ಯಾಕ್ಟೀಸ್ ಮಾಡುವುದರಿಂದ.
ಪ್ರಶ್ನೆ ಕೇಳಿದವರು ಕೇಳಿದರು : ದಿನವೂ ಪ್ರಾಕ್ಟೀಸ್ ಮಾಡುವುದರಿಂದ ಅಂದರೆ?
ಮೈಕೆಲ್ ಫೆಲ್ಫ್ಸ್: ಅಂದರೆ ದಿನವೂ ಪ್ರ್ಯಾಕ್ಟೀಸ್ ಮಾಡುವುದರಿಂದ.
ಸಂದರ್ಶಕ ಮತ್ತೆ ಕೇಳಿದ: ಅಂದರೆ ಬರೀ ದಿನವೂ ಪ್ರ್ಯಾಕ್ಟೀಸ್ ಮಾಡುವುದರಿಂದ?
ಆಗ ಮೈಕೆಲ್ ಫೆಲ್ಫ್ಸ್ ಹೇಳುತ್ತಾರೆ: ನಾನು ಹೇಳುವುದು ನಿಮಗೆ ಅರ್ಥವಾಗುತ್ತಿಲ್ಲ. ಏಳುವರ್ಷಗಳ ಕಾಲ ದಿನವೂ ಪ್ರ್ಯಾಕ್ಟೀಸ್ ಮಾಡುವುದು. ಪ್ರತೀ ದಿನ, ಕ್ರಿಸ್ಮಸ್ ಇರಲಿ, ಥ್ಯಾಂಕ್ಸ್ ಗಿವಿಂಗ್ ಇರಲಿ, ಕಾರ್ಯಕ್ರಮ ಇರಲಿ, ಹೊಸ ವರ್ಷವಿರಲಿ ಪ್ರತೀ ದಿನ ಪ್ರ್ಯಾಕ್ಟೀಸ್. ಚಳಿ, ಮಳೆ, ಸೆಕೆ, ಬಿಸಿಲು, ಪ್ರವಾಹ ಮತ್ತೊಂದು ಮಗದೊಂದು ಏನೇ ಇದ್ದರೂ ಪ್ರತೀ ದಿನ ಒಂದು ದಿನವೂ ಬಿಡದೇ ಪ್ರ್ಯಾಕ್ಟೀಸ್ . ಜ್ವರ ಬರಲಿ, ಶೀತವಾಗಲೀ ಪ್ರ್ಯಾಕ್ಟೀಸ್! ನನ್ನ ಬದುಕಿನ ಏಳು ವರ್ಷ ರೆಸ್ಟ್ ತಗೊಂಡಿದ್ದು ನೆನಪಿಲ್ಲ, ರಿಕವರಿ ಮಾಡಿಕೊಳ್ಳಲು ಆರಾಮಾಗಿ ಇದ್ದದ್ದು ನೆನಪಿಲ್ಲ, ಬರೀ ಪ್ರ್ಯಾಕ್ಟೀಸ್ ಅಷ್ಟೇ.
ಎಂಟು ಗಂಟೆ ಈಜು, ಆಮೇಲೆ ವರ್ಕ್ ಔಟ್, ಆಮೇಲೆ ವೇಟ್ ಟ್ರೈನಿಂಗ್. ವರ್ಷವರ್ಷಗಳ ಕಾಲ ಈಜು, ತರಬೇತಿ, ಆಹಾರ, ನಿದ್ದೆ. ಈಜು ತರಬೇತಿ ಆಹಾರ ನಿದ್ದೆ ಅಷ್ಟೇ."
ಅದಕ್ಕೇ ತಾನೇ ಮೈಕೆಲ್ 23 ಚಿನ್ನ 3 ಬೆಳ್ಳಿ 2 ಕಂಚು ಒಟ್ಟು 28 ಒಲಿಂಪಿಕ್ ಪದಕ ಗೆದ್ದಿದ್ದು. Not a joke.
ಅಷ್ಟೇ. ಹೆಚ್ಚೇನು ಹೇಳುವ ಅಗತ್ಯವೂ ಇಲ್ಲ.
ದೀಪಾ ಹಿರೇಗುತ್ತಿ
No comments:
Post a Comment