ಕರ್ನಾಟಕದ ಸಂಗೀತ ಪಿತಾಮಹ?
ಇಲ್ಲಿಯವರೆಗೆ #ಪುರಂದರದಾಸರೆ ಇದಕ್ಕೆ ಉತ್ತರ ಅಂತ ಅನೇಕರು, ಸರ್ಕಾರವು ಮತ್ತು ಇತಿಹಾಸಕಾರರು ಒಪ್ಪಿಕೊಂಡಿರುವುದು ದುರಂತ!.
ಖಂಡಿತ ಇದು ದಾರಿ ತಪ್ಪಿಸಿದ ಬಹುದೊಡ್ಡ ಸುಳ್ಳೆಂದೆ ಇಂದಿನ ಪೀಳಿಗೆ ಮನಗಾಣಬೇಕು!.
ಕಾರಣ ಕರ್ನಾಟಕ ಸಂಗೀತದ ನಿಜವಾದ ಜನಕರು, ಉದಕರು ಎಲ್ಲವೂ ಬಸವಾದಿ ಶರಣರೆ ಎನ್ನುವುದು ನನ್ನ ಮತ್ತು ಹಲವರ ಬಹುದೊಡ್ಡ ವಾದ.
ಕಾರಣ ದಾಸ ಸಾಹಿತ್ಯದ ೫೦% ಭಾಗ ವಚನಗಳ ಕಾಫಿಪೇಸ್ಟೆ ಆಗಿದೆ!.
ಉದಾ:
ವಚನ
ನಾಳೆ ಬಪ್ಪುದು ನಮಗಿಂದೆ ಬರಲಿ,
ಇಂದು ಬಪ್ಪುದು ನಮಗೀಗಲೆ ಬರಲಿ,
ಇದಕಾರಂಜುವರು, ಇದಕಾರಳುಕುವರು
`ಜಾತಸ್ಯ ಮರಣಂ ಧ್ರುವಂ' ಎಂದುದಾಗಿ
ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ
ಹರಿಬ್ರಹ್ಮಾದಿಗಳಿಗಳವಲ್ಲ.
#ಬಸವಣ್ಣನವರು.
ಉಗಾಭೋಗ
ಇದಕಾರಂಜುವರೋ ಗೋಪಾಲ?
ಇದಕಾರಂಜುವರೋ, ನಾಳೆ ಬಾಹೋದು
ಎಮಗಿಂದೆ ಬರಲಿ, ಇಂದೆ ಬಾಹೋದು
ನಾಳೆ ಬರಲಿ, ಆಗ ಬಾಹೋದು
ಎಮಗೀಕ್ಷಣ ಬರಲಿ ಯಾತರ ಭಯವು,
ಅಚಲಾನಂದವಿಠಲ. - ಪುರಂದರದಾಸ.
ಇನ್ನೊಂದು ಉದಾಹರಣೆಯನ್ನು ನೋಡಿ:
#ವಚನ
ಹರಿವ ಹಾವಿಂಗಂಜೆ, ಉರಿಯ ನಾಲಿಗೆಗಂಜೆ,
ಸುರಗಿಯ ಮೊನೆಗಂಜೆ,
ಒಂದಕ್ಕಂಜುವೆ, ಒಂದಕ್ಕಳುಕುವೆ
ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ.
ಮುನ್ನಂಜದ ರಾವಣನೇ ವಿಧಿಯಾದ !
ಅಂಜುವೆನಯ್ಯಾ, ಕೂಡಲಸಂಗಮದೇವಾ.
#ಬಸವಣ್ಣನವರು.
ಉಗಾಭೋಗ
ಉರಿಗಂಜೆ, ಸಿರಿಗಂಜೆ
ಶರೀರದ ಭಯಕಂಜೆ
ಪರಧನ ಪರಸತಿ ಎರಡಕ್ಕಂಜುವೆನಯ್ಯ
ಹಿಂದೆ ಮಾಡಿದ ರಾವಣನೇನಾಗಿ ಪೋದನು
ಮುಂದೆನ್ನ ಸಲಹಯ್ಯ ಪುರಂದರವಿಠಲ. - ಪುರಂದರದಾಸ.
ಈ ಮೇಲ್ಕಂಡ ಉದಾಹರಣೆಗಳನ್ನು ಗಮನಿಸಿದಾಗ ದಾಸರ ಮೇಲೆ ಶರಣರ ವಚನಗಳ ಪ್ರಭಾವ ಗಾಢವಾಗಿಯೇ ಆಗಿದೆ ಎಂಬುದನ್ನು ನೋಡಬಹುದು, ಮತ್ತು ಈತರ ಹುಡುಕುತ್ತಾ ಹೋದರೆ ೭೦%-೮೦% ದಾಸ ಸಾಹಿತ್ಯ ವಚನಗಳಿಂದಲೆ ಮರುನಿರ್ಮಿತವಾಗಿದೆ ಎಂಬುದು ನಾವಿಲ್ಲಿ ಕಾಣಬಹುದು.
ಡಾ. ಎಂ. ಚಿದಾನಂದಮೂರ್ತಿಯವರು "ಉಗಾಭೋಗಗಳಂ ಮತ್ತು
ವಚನೆಗಳು' ಎಂಬ ತಮ್ಮ ಪ್ರಬಂಧವೊಂದರಲ್ಲಿ ದಾಸಸಾಹಿತ್ಯದ ಮೇಲೆ
ವಚನಸಾಹಿತ್ಯದ ಪ್ರಭಾವವಿರುವುದನ್ನು ಹೇಳಂತ್ತ ಉಗಾಭೋಗಗಳ ಬಂಧ
ವಚನಗಳ ಬಂಧವನ್ನು ಬಹುಮಟ್ಟಿಗೆ Copy-Paste ಎನ್ನುವುದನ್ನು ಅನೇಕ ನಿದರ್ಶನಗಳೊಂದಿಗೆ ತೋರಿಸಿಕೊಟ್ಟಿದ್ದಾರೆ.
ವಚನ ಹಾಗೂ ಕೀರ್ತನೆಗಳಲ್ಲಿರಂವ
ವೃತ್ಯಾಸಕ್ಕೂ ಈ ನಿದರ್ಶನವನ್ನು ಗಮನಿಸಬಹುದು -
“ಎದೆ ಬಿರಿವನ್ನಕ ಮನ ದಣಿವನ್ನಕ
ನಾಲಗೆ ನಲಿನಲಿದೋಲಾಡುವನ್ನಕ
ನಿಮ್ಮ ನಾವಕಾಮೃತವ ಶಂದಿರಿಸು ಕಂಡ .
ಬಿರಿಮುಗುಳಂತೆ ಎನ್ನ ಹೃದಯಂ
ನಿಮ್ಮ ಶ್ರೀ ಚರಣದ ಮೇಲೆ ಬಿದ್ದರಳುಗೆ
ಕೂಡಲಸಂಗಮದೇವ-
ಈ ವಚನವನ್ನು
ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ನಾಲಿಗ್ಗೆ ಬರಲಿ
ಎಂಬ ಕೀರ್ತನೆಯೊಡನೆ ಹೋಲಿಸಿ ನೋಡಿದರೆ ಸ್ಪಷ್ಟವಾಗುತ್ತಾ ಹೋಗುತ್ತದೆ!.
ಬಸವಣ್ಣನವರು "ಎನಗಿಂತ ಕಿರಿಯರಿಲ್ಲ ಶಿವಭಕ್ತರಿ
ಗಿಂತ ಹಿರಿಯರಿಲ್ಲ' ಎಂದಂತೆ ಪುರಂದರರೂ "ಬಡವರೊಳಗೆ ಎನ್ನಿಂದಾರಂ
ಬಡವರಿಲ್ಲ ಕೊಡಂವರೊಳಗೆ ನಿನ್ನಿಂದಾರು ಕೊಡಂವರಿಲ್ಲ' ಎನ್ನುತ್ತಾರೆ.
ಬಸವಣ್ಣನವರು
ತಂದೆ ನೀನು ತಾಯಿ ನೀನು ಬಂಧು
ಬಂಧು ಬಳೆಗೃನೀನಿ ತಂದೆ ತಾಯಿಯು
ಪುರಂದರದಾಸರು
ನೀನು ನೀನೆ ಎಂದೆಂದಿಗೂ ನಿನ್ನ ನೆಂಬಿದೆನೊ
ಬಳಗ ನೀನು ನೀನಲ್ಲದೆ ಮತ್ತಾರು ಕೃಷ್ಣ
ಇಲ್ಲವಯ್ಯ
ಬ: ಸಾರಸಜ್ಜನರ ಸಂಗವೇ ಲೇಸು
ಪು: ದುಷ್ಟರ ಸಂಗವ ಬಿಡುವದೆ ಸ್ನಾನ
ಕಂಡಯ್ಯ
ಬ: ದೂರ ದಂರ್ಜನರ ಸಂಗವದು
ಪು: ಭಂಗ ಶಿಷ್ಟರ ಸಹವಾಸ ವಣಡುವದೆ ಸ್ನಾನ
` ವಯ್ಯ
ಬ: ನುಡಿದರೆ. ಮುತ್ತಿನ ಹಾರದಂತಿರ
ಪು: ಆಚಾರವಿಲ್ಲದ ನಾಲಗೆ ನಿನ್ನ
ಭೇಕು -
ಬ: ನುಡಿದರೆ ಲಿಂಗಮೆಚ್ಚಿ ಅಹುದೇನ
ಪು: ನೀಚ ಬುದ್ಧಿಯ ಬಿಡು ನಾಲಗೆ
ಬೇಕು .
ಬ:ವಿಚಾರವಿಲ್ಲದೆ ಪರದ ದೂಸಿಸುವುದಕ್ಕೆ
ಮೃದುವಚನವೇ ಸಕಲ ಜಪಂಗಳಯ್ಯ
ಪು: ಚಾಚಿಕೊಂಡಿಯವಂಥ ನಾಲಗೆ
ಮೃದುವಚನವೇ ಸಕಲ ತಪಂಗಳಯ್ಯ.
ಬ:ಹೊಯ್ದವರೆನ್ನೆ ಹೊರೆದವರೆಂಬೆ.
ಪು: ನಿಂದಕರಿರಬೇಕು ಹಂದಿಯಿದ್ದರೆ ಕೇರಿ
ನಿಂದಿಸಿದರೆನ್ನ ತಂದೆ ತಾಯಿಗಳೆಂಬೆ ಹ್ಯಾಂಗೆ ಶುದ್ಧವೊ ಹಾಂಗೆ
ಇತ್ಯಾದಿ ಇತ್ಯಾದಿ ಇತ್ಯಾದಿಗಳು
ಮತ್ತು ಶರಣರು ರಚಿಸಿರುವ ಸ್ವರವಚನಗಳ ಸ್ವರೂಪ ಸ್ಥೂಲವಾಗಿ ಹೀಗಿದೆ: ಮೊದಲು ಪಲ್ಲವಿ ಬಳಿಕ ಮೂರು ಅಥವಾ ಐದು ಚರಣಗಳು. ಸ್ವರವಚನಗಳಿಗೆ ಅವರು ಬಳಸಿರುವ ರಾಗಗಳ ಹೆಸರು ಹೀಗಿವೆ: ಆಹಿರಿ, ಆರಭಿ, ಕಾಂಬೋಧಿ, ಕೈಶಿಕಿಮಂಗಳ, ದೇವಗಾಂಧಾರಿ, ಘೊರ್ಜರಿ, ಗುಂಡಕ್ರಿಯ, ಗೌಳ, ಕನ್ನಡಗೌಳ, ನಾರಾಯಣಿ, ಮಾಳವಿ, ಗೌಳಿಪಂತು, ಜಂಝಾಟಿ, ಪುನ್ನಾಗವರಾಳಿ, ಫಲಮಂಜರಿ, ಭೌಳಿ, ದೇಶಾಕ್ಷಿ, ದೇಶಿ, ಧನ್ಯಾಸಿ, ನಾಟಿ, ನಾದನಾಮಕ್ರಿಯೆ, ಪಹಾಡಿ, ಪಂತುವರಾಳಿ, ಭೂಪಾಳಿ, ಭೈರವಿ, ಸಾರಂಗ, ಮಲಹರಿ, ಮಾಧುಮಾದವಿ, ರಾಮಕ್ರಿಯ, ಲಲಿತ, ವರಾಳಿ, ವಸಂತ, ಮಾಳವಗೌಳ, ಹಿಂದೋಳ, ಶಂಕರಾಭರಣ, ಶ್ರೀರಾಗ, ಸೌರಾಷ್ಟ್ರ - ಹೀಗೆ ಇಂದು ನಮ್ಮ ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧವಾಗಿರುವ ಎಲ್ಲ ರಾಗಗಳನ್ನೂ ಬಳಸಿಕೊಂಡು ’ಸ್ವರವಚನ’ಗಳನ್ನು ರಚಿಸಲಾಗಿದೆ. ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಮೇಲ್ಕಂಡ ರಾಗಗಳನ್ನು ’ಬತ್ತೀಸ ರಾಗಗಳು’ ಎಂದು ಬಣ್ಣಿಸಿದ್ದಾರೆ. ತಾಳಗಳಲ್ಲಿ ಆದಿತಾಳ, ರೂಪಕತಾಳ, ಆಟತಾಳ ಮತ್ತು ಝಂಪೆ ತಾಳಗಳನ್ನು ೧೨ ನೇ ಶತಮಾನದಲ್ಲಿಯೇ ಬಳಸಲಾಗಿದೆ.
ಅನಂತರ ೧೬ನೇ ಶತಮಾನದಲ್ಲಿ ಬಂದ ದಾಸರು ಇದೇ ’ಬತ್ತೀಸ’ ರಾಗ-ತಾಳಗಳನ್ನು ಬಳಸಿಕೊಂಡು ’ಪದ’ಗಳನ್ನು ರಚಿಸಿರುವುದನ್ನು ತಾವು ಮೆಲ್ಕಾಣಿಸಿದ ವಚನಗಳಿಂದ ಗಮನಿಸಬಹುದು.
ಮತ್ತು
ಎನ್ನ ಕಾಯವ ದಂಡಿಗೆಯ ಮಾಡಯ್ಯ
ಎನ್ನ ಶಿರವ ಸೋರೆಯ ಮಾಡಯ್ಯ
ಎನ್ನ ನರವ ತಂತಿಯ ಮಾಡಯ್ಯ
ಬತ್ತಿಸರಾಗವ ಹಾಡಯ್ಯ ; ಉರದಲೊತ್ತಿ ಬಾರಿಸು
ಕೂಡಲಸಂಗಮದೇವಾ “
ಈ ವಚನದಲ್ಲಿ ಬಸವಾದಿ ಶರಣರಿಗೆ ಎಷ್ಟೊಂದು ಸಂಗೀತದ ಮೇಲೆ ಪ್ರೇಮ ಮತ್ತು ಪ್ರಭಾವವನ್ನು ಕಾಣಬಹುದು.
ಅನೇಕ ವಚನಗಳಲ್ಲಿ ಹಾಡಿನ ತಾಳತಂಬೂರಿಗಳ ಉಲ್ಲೇಖವಿದೆ. ಏಳುತಾಳಗಳ ಬಗೆಗೆ, ಶಾಸ್ತ್ರೀಯ ಸಂಗೀತ ವಾದ್ಯ, ಜಾನಪದರು ಬಳಸುವ ವಾದ್ಯಗಳು ಹೀಗೆ ಅನೇಕ ವಾದ್ಯಗಳ ಉಲ್ಲೇಖವಿದೆ. ಕೆಲವು ಸ್ವರವಚನಕಾರರಾದರೋ ರಾಗವನ್ನು ರಚನೆಗೆ ಸೂಚಿಸಿ, ರಾಗ ಸಂಚಾರವನ್ನೂ ರಚನೆಯ ಸಾಹಿತ್ಯದಲ್ಲೇ ಸೇರಿಸಿ ತಿಳಿಸಿದ್ದಾರೆ. ಬಹುತೇಕ ಸ್ವರವಚನಕಾರರು ಗಾನವ, ಹಾಡಿರಿ, ಪಾಡಿರಿ, ಭಜಿಸಿರಿ ಮುಂತಾದ ಪದಗಳನ್ನು ಬಳಸಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಿರ್ವಿವಾದವಾಗಿ ಬಸವಾದಿ ಶರಣರೆ ಕರ್ನಾಟಕ ಸಂಗೀತದ ಉದಕರು ಎಂದು ನಾವು ತಿಳಿಯಬಹುದು.
ಮತ್ತು ಸರ್ಕಾರ ಇನ್ನೂ ಮೇಲಾದರು ಬೇಕಾದರೆ ಇನ್ನಷ್ಟು ಇದರ ಮೇಲೆ ಸಂಶೋಧನೆ ಮಾಡಿ ಇದಕ್ಕೆ ಸರಿಯಾದ ನ್ಯಾಯ ಕೊಡಿಸಬೇಕು! ಬಸವಾದಿ ಶರಣರೆ ಕರ್ನಾಟಕ ಸಂಗೀತದ ಪಿತಾಮಹರೆಂದು ಮತ್ತು ದಾಸ ಪರಂಪರೆ ಇದನ್ನ ಅಭಿವೃದ್ಧಿ ಪಡಿಸಿದರೆಂದು ಸ್ಪಯ ಸಮಾಜಕ್ಕೆ ಅರುಹಬೇಕಾಗಿ ನಮ್ರ ವಿನಂತಿ!
ರಾತ್ರಿ ಆದರೂ ಇದಕ್ಕೆ ತಲೆ ಕೆಡೆಸಿ ಬರೆಯುವ ಹಾಗೇ ಮಾಡಿದ ಮಾಚಿದೇವ ಭೋಸಲೆ ಬೆಳಗಾವಿ ರಾಯಣ್ಣ. ಶರಣರಿಗೆ 🙏
ಶರಣು ಶರಣಾರ್ತಿಗಳ
ಶಿವಾನಂದ ಗುಂಡಾನವರ
Facebook massage
No comments:
Post a Comment