Tuesday, August 30, 2022

ಗಣಪತಿ ಮತ್ತು ಅಕ್ಕಮಹಾದೇವಿ

 ಮಾತೃತ್ವ


ಮಣ್ಣಿನ ಗೊಂಬೆ ಮಾಡಿ ಅದಕ್ಕೆ ಜೀವತುಂಬಿ ಅದನ್ನು ಕಾವಲು ಇಟ್ಟ ಪಾರ್ವತಿಯನ್ನ ನಾವು ಜಗಜ್ಜನನಿ ಎಂದೇ ಕರೆಯುತ್ತೇವೆ

ಶಿವ ಬಂದು ಆ ಮಣ್ಣಿನ ಗೊಂಬೆಯನ್ನು ಕತ್ತರಿಸಿದಾಗ ಮಣ್ಣಿನಿಂದ ಸೃಷ್ಠಿಸಿದ ಜಗನ್ಮಾತೃಯಾದ ಪಾರ್ವತಿ ಅಥವಾ ಗೌರಿಗೆ ದುಖಃ ಆಗುತ್ತದೆ

ಹೆಂಡತಿಯ ದುಖಃ ಶಮನ ಮಾಡಲು ಶಿವ ಆನೆಯ ಮರಿಯ ತಲೆ ಕಡಿದು ಆ ಮಣ್ಣಿನ ಗೊಂಬೆಯ ದೇಹಕ್ಕೆ ಜೋಡಿಸಿ ಜೀವ ತುಂಬಿದಾಗ ಗೌರಿಗೆ ಸಂತೋಷ ಉಂಟಾಗುತ್ತದೆ 


ಇಲ್ಲಿ ಒಂದು ಪ್ರಶ್ನೆ ಜಗಜ್ಜನನಿ ಆದ ಗೌರಿಗೆ ಮಣ್ಣಿನ ಗೊಂಬೆ ಸತ್ತದಕ್ಕೆ ದುಖಃ ಆಗುತ್ತದೆ 

ಆದರೆ ಇನ್ನೊಂದು ಆನೆಯ ಮರಿ ಸತ್ತರೆ ದುಖಃ ಆಗಲಿಲ್ಲ ಸಂತೋಷ ಆಯಿತು ಹಾಗಾದರೆ ಪಾರ್ವತಿ ಅಥವಾ ಗೌರಿಯ ಹೃದಯ ಮಾತೃ ಹೃದಯವೇ


ಈ ಕೆಳಗಿನ ವಚನವನ್ನು ಓದಿ


ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ, ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ. ತನ್ನ ಮನೆಯಲೊಂದು ಶಿಶು ಸತ್ತಡೆ ಅದಕ್ಕೆ ಮರುಗುವಂತೆ ಅವಕೇಕೆ ಮರುಗ ? ಅದೆಂತೆಂದಡೆ 'ಸ್ವಾತ್ಮಾನಮಿತರಂ ಚೇತಿ ಭಿನ್ನತಾ ನೈವ ದೃಶ್ಯತಾಂ ಸರ್ವಂ ಚಿಜ್ಜ್ಯೋತಿರೇವೇತಿ ಯಃ ಪಶ್ಯತಿ ಸ ಪಶ್ಯತಿ' ಎಂದುದಾಗಿ, ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ. ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು ಜೀವಹಿಂಸೆ ಮಾಡುವ ಮಾದಿಗರನೇನೆಂಬೆನಯ್ಯಾ ?

-

ಅಕ್ಕಮಹಾದೇವಿ


ತಾಯಿ ಅಕ್ಕ ಮಹಾದೇವಿ ಅವರ ಹೃದಯ ಹೇಗೆ ಮಮ್ಮಲ ಮರುಗುತ್ತದೆ ಎಂದು 


ಜಾಲಗಾರನು ನೀರಿನಲ್ಲಿ ಹುಡುಕಾಡಿ ಹಲವು ಮೀನುಗಳನ್ನು ಹಿಡಿದು ಸಾಯಿಸಿ ಸಂತೋಷ ಪಡುತ್ತಾನೆ ಆದರೆ ತನ್ನ ಮನೆಯಲ್ಲಿ ಒಂದು ಶಿಸು ಸತ್ತರೂ ಸಹ ಗೋಳಾಡುತ್ತಾನೆ 

ಅವನ ದುಖಃ ಜಗಕ್ಕೆಲ್ಲ ನಗೆತರುವುದು ಎಂದಿದ್ದಾರೆ

ಹಾಗದರೆ ಪಾರ್ವತಿಯ ದುಖಃ ನಗೆಗೆಡೆ ಅಲ್ಲವೇ


ಶರಣು ಶರಣಾರ್ಥಿ


9945439171

No comments:

Post a Comment