*ಷಣ್ಮುಖ ಸ್ವಾಮಿಗಳ ವಚನ*
ಅಡವಿಯಲ್ಲಿದ್ದ ಗೋವು, ಮನೆಯಲ್ಲಿರ್ದ ಕರುವಿಂಗೆ ಚಿಂತಿಸಿ, ಬಂದು ಹಾಲೂಡಿಸಿ ಮೋಹ ಮಾಡುವುದಲ್ಲದೆ, ಆ ಕರುವೆತ್ತ ಬಲ್ಲುದಯ್ಯ? ನಾನು ಕರ್ಮದೇಹವಿಡಿದು ಪರಿಭವದಲ್ಲಿ ತೊಳಲುತ್ತಿರಲು, ನೀನು ದಯಹುಟ್ಟಿ ಎನ್ನಮರವೆಯ ಸಂಸಾರ ತೊಲಗಿಸಿ ಕರುಣದಿಂದ ಸಲುಹಬೇಕೆಂಬ, ಚಿಂತೆ ನಿನಗಲ್ಲದೆ ನಾನೇನ ಬಲ್ಲನೆಯ್ಯ ಅಖಂಡೇಶ್ವರಾ?
ಶರಣಾಗತಿಯ ವಚನ, ಹಸು ಕಾಡಿನಲ್ಲಿ ಮೇಯುತ್ತಿದ್ದರೂ,ಹಸುವಿಗೆ ಕರುವಿನ ಯೋಗಕ್ಷೇಮದ, ಕರುವನ್ನು ಉಪಚರಿಸುವ, ಕಾಪಾಡುವ ಚಿಂತೆ. ಆ ಚಿಂತೆಯ ಅನುಭವ ಕರುವಿಗೆ ಬಾರದು. ಅದೇ ರೀತಿಯಲ್ಲಿ ಸಂಸಾರದ ಕಷ್ಟ ದುಃಖ ಜಂಜಡಗಳಲ್ಲಿ ಮುಳುಗಿರುವ ನಮ್ಮನ್ನು ಆ ದೇವರೇ, ಹಸು ಕರುವನ್ನು ಪಾಲಿಸಿದಂತೆ ಪಾಲಿಸಬೇಕೆಂದು ಷಣ್ಮುಖಸ್ವಾಮಿಗಳು ಮೊರೆಯಿಡುತ್ತಾರೆ.
..................................................................
No comments:
Post a Comment