ವಿವಿಧ ಕೃತಿಗಳು
ಮೈಸೂರಿನ ಕಲಾಮಂದಿರದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಪ್ರಕಾಶನದ ನಗರ್ಲೆ ಶಿವಕುಮಾರರವರ ಕೃತಿ ಯುಗಪ್ರವರ್ತಕ ಬಸವಣ್ಣ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಕೊಲ್ಲಾಪುರ ಅದೃಶ್ಯಕಾಡಸಿದ್ಧೇಶ್ವರಮಹಾಸ್ವಾಮಿಗಳು, ಮಾಜಿ ಸಚಿವ ವಿ.ಸೋಮಣ್ಣ, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹಿನ್ಕಲ್ ಬಸವರಾಜು, ಬಸವಬಳಗ ಒಕ್ಕೂಟ ಅಧ್ಯಕ್ಷ ಲೋಕೇಶ್, ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ತೋಂಟದಾರ್ಯ, ಪುಟ್ಟಬುದ್ಧಿ, ಬಿ.ವಿ.ವಸಂತಕುಮಾರ್, ಪ್ರಶಾಂತ್, ಮಧುಮಲೇಶ್, ನಿಖಿಲೇಶ್ ಮಲ್ಲಿಕಾರ್ಜುನ,ಡಾ.ಮಂಜಪ್ಪ ಮಹದೇವಪ್ಪ, , ಜಯಗೌಡ ಮತ್ತು ರೂಪ ಕುಮಾರಸ್ವಾಮಿ ಇದ್ದರು.
=======================================================================
ಸರಗೂರು: ಸತ್ಯ,ಶಿವ,ಸುಂದರ ಸಮಾಜದ ನಿರ್ಮಾಣಕ್ಕೆ ವಚನಸಾಹಿತ್ಯ ಅವಶ್ಯಕ ಎಂದು ನಾಡಿನ ಹಿರಿಯ ಸಾಹಿತಿಗಳಾದ ಡಾ.ಸಿ.ಪಿ.ಕೃಷ್ಣಕುಮಾರ್‍ರವರು ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮೈಸೂರು ರಾಜೇಂದ್ರಭವನದಲ್ಲಿ ಶರಣ ಸಾಹಿತ್ಯದ ಹಾವಿನಹಾಳ ಕಲ್ಲಯ್ಯ, ಜಗನ್ಮಾತೆ ಅಕ್ಕಮಹಾದೇವಿ ಮತ್ತು ವಚನ ಜ್ಞಾನೋದಯ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ವಚನಗಳು ಅಚ್ಚಗನ್ನಡದ ಉದಯಕ್ಕೆ ಕಾರಣವಾದಂತಹ ಸಾಹಿತ್ಯ, ಇದು ಜನರ ಭಾವನೆಗಳಿಗೆ ಸ್ಪಂದಿಸುವ ಹಾಗೂ ಜೀವನ ವಿಧಾನವನ್ನು ಸರಿಪಡಿಸಿಕೊಳ್ಳುವಲ್ಲಿ ಸಹಕಾರಿಯಾಗಿವೆ. ಬಸವಣ್ಣ ಆಚಾರವೇ ಸ್ವರ್ಗ ಎಂದರು ಆದರೆ ಇಂದು ಅತ್ಯಾಚಾರ ಮತ್ತು ಅನಾಚಾರಗಳು ತಲೆ ಎತ್ತಿರುವುದು ವಿಷಾದನೀಯ ಸಂಗತಿ. ವಚನಗಳನ್ನು ಸಮಾಜದ ಎಲ್ಲಾ ಜನರಿಗೆ ಮನದಟ್ಟು ಮಾಡಿಸಿದರೆ ಸುಂದರ ಸಮಾಜದ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಇಂದಿನ ಧರ್ಮ ಜಿಜ್ಞಾಸೆಯ ಕಾಲಘಟ್ಟದಲ್ಲಿ ಎಲ್ಲವನ್ನೂ ಮೀರಿ ‘ವಚನಧರ್ಮ’ ಎಂದು ಕರೆಯುವುದು ಸೂಕ್ತವಾಗಿದೆ. ವಚನಗಳು ವಿಶ್ವದ ಗಮನವನ್ನು ಸೆಳೆಯುವ ಆಕರ್ಷಣೀಯ ಗುಣ ಹೊಂದಿದೆ ಎಂದರು. ತದನಂತರ ಕೃತಿಗಳ ಪರಿಚಯವನ್ನು ಮಾಡಿ ಮಾತನಾಡಿದ ಪ್ರೊ. ಮೊರಬದ ಮಲ್ಲಿಕಾರ್ಜುನರವರು ವಚನಕಾರರಲ್ಲಿ ಅಜ್ಞಾತರಾಗಿದ್ದ ಹಾವಿನಹಾಳ ಕಲ್ಲಯ್ಯರವರ ಜೀವನ ಚರಿತ್ರೆಯನ್ನು ಹೊರತಂದು ವಚನಾಸಕ್ತರ ಮನವನ್ನು ಪ್ರದೀಪ್ ಹೆಬ್ರಿರವರು ಗೆದ್ದಿದ್ದಾರೆ. ಅನೇಕ ಮಹಿಳೆಯರಿಗೆ ಸ್ಪೂರ್ತಿಯ ಚಿಲುಮೆಯಾಗಿ ಬದುಕಿನಲ್ಲಿ ಎದುರಾಗುವ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಅಕ್ಕಮಹಾದೇವಿಯವರು ವಚನಗಳ ಮೂಲಕ ತಿಳಿಹೇಳಿದ್ದಾರೆ. ಅಂತಹ ಅಕ್ಕನ ಸಂಪೂರ್ಣ ವ್ಯಕ್ತಿತ್ತವನ್ನು ಕಟ್ಟಿಕೊಡಲು ನಗರ್ಲೆ ಶಿವಕುಮಾರರವರು ರಚಿಸಿರುವ ಜಗನ್ಮಾತೆ ಅಕ್ಕಮಹಾದೇವಿ ಕೃತಿ ಒಳಗೊಂಡಿದೆ. ಆಂಗ್ಲವ್ಯಾಮೋಹ ಹೆಚ್ಚಾಗುತ್ತಿರುವಂತಹ ಇತ್ತೀಚಿನ ದಿನಗಳಲ್ಲಿ ಇನ್ನೂರು ವಚನಗಳನ್ನು ಕನ್ನಡದಿಂದ ಆಂಗ್ಲಭಾಷೆಗೆ ಅನುವಾದ ಮಾಡಿ ಶಾಲಾ ಮಕ್ಕಳು ವಚನಾಸಕ್ತಿಯನ್ನು ಬೆಳೆಸಿಕೊಳ್ಳಲು ರೂಪ ಕುಮಾರಸ್ವಾಮಿರವರ ವಚನ ಜ್ಞಾನೋದಯ ಕೃತಿ ಸಹಾಯಕವಾಗಿದೆ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಧ್ಯೇಯ ಮತ್ತು ಉದ್ದೇಶವನ್ನು ಮನದಟ್ಟು ಮಾಡಿಸಿದರು. ಲೇಖಕರಾದ ಡಾ.ಪ್ರದೀಪ್‍ಕುಮಾರ್ ಹೆಬ್ರಿ, ನಗರ್ಲೆ ಶಿವಕುಮಾರ, ರೂಪ ಕುಮಾರಸ್ವಾಮಿ ತಮ್ಮ ಕೃತಿಗಳ ರಚನೆಯ ಉದ್ದೇಶ ಮತ್ತು ಅದರ ತಿರುಳಿನ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದರು. ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಕಂಠೇಶ್ವರ ಟಿ.ವಿ.ಸೆಂಟರ್ ಮಾಲೀಕರಾದ ಉಮೇಶ್‍ಶರ್ಮರವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಗೌರಾವಾಧ್ಯಕ್ಷ ಎನ್.ಶ್ರೀಕಂಠಮೂರ್ತಿ, ಅಧ್ಯಕ್ಷ ಅನಿಲ್‍ಕುಮಾರ್ ವಾಜಂತ್ರಿ, ಬಿ.ಪಂಪಾಪತಿ, ಲಿಂಗಣ್ಣ, ಪುಟ್ಟಪ್ಪ, ರತ್ನಮ್ಮ, ಪೂರ್ಣಿಮ, ಪ್ರೇಮಪ್ರಭುಸ್ವಾಮಿ, ಶ್ರೀಕಂಠಸ್ವಾಮಿ, ಮಹದೇವಪ್ಪ, ಗೀತಾ, ಕಾವೇರಿ, ಅಂಬಿಕಾ, ಗೊ.ರು.ಪರಮೇಶ್ವರಪ್ಪ, ಚಂದ್ರಶೇಖರ್,ಜಯಗೌಡ,ಶಾರದಾಶಿವಲಿಂಗಸ್ವಾಮಿ,ರಾಜೇಶ್ವರಿಮಹೇಶ್,ಧನ್ಯಸತ್ಯೇಂದ್ರಮೂರ್ತಿ,ಕಾತ್ಯಾಯಿನಿ,ಚಂಚಲ,ಗೀತರಾಜಶೇಖರ್,ವಿಜಯಚಿನ್ನಸ್ವಾಮಿ,ಲಲಿತ,ರಾಜುಗೌಡ,ದೊಡ್ಡಸ್ವಾಮಿ,ಗಂಗಾಧರಸ್ವಾಮಿ,ರಾಜಶೇಖರಮೂರ್ತಿ,ಶಶಿಕಲಾ ಗಿರೀಶ್, ನಾಗೇಂದ್ರ, ಸಂತೋóóóಷ, ಮಹೇಶ್, ವೃಷಬೇಂದ್ರ ಉಪಸ್ಥಿತರಿದ್ದರು.
-------------------------------------------------------------------------------------------------------------------------
ಮೈಸೂರು: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ವಚನಸಾಹಿತ್ಯ ಪ್ರಮುಖ ಕಾರಣ ಎಂದು ಹಿರಿಯ ಪತ್ರಕರ್ತ ಈಚನೂರು ಕುಮಾರ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ವಚನ ಕುಮಾರಸ್ವಾಮಿ ಸಂಪಾದನೆಯ ವಚನಸಾರ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಜಗತ್ತಿನ ಅನೇಕ ರಾಷ್ಟ್ರಗಳು ವಚನಗಳ ಸಾರವನ್ನು ಅರಿತು ವಚನಗಳ ಕಡೆ ಮುಖಮಾಡಿರುವಾಗ ಅನೇಕ ಕನ್ನಡಿಗರು ವಚನಗಳ ಪ್ರಾಮುಖ್ಯತೆಯ ಅರಿಯದೇ ಮರೆಯುತ್ತಿರುವುದು ವಿಷಾದನೀಯ. ಯಾವುದೇ ವಾದ ವಿವಾದಗಳು ಉಂಟಾದರೂ ಅದಕ್ಕೆ ವಚನಸಾಹಿತ್ಯದಲ್ಲಿ ಉತ್ತರವಿದೆ. ಕೆಲವು ವಚನಗಳು ಅರ್ಥವಾಗದೇ ಇದ್ದಾಗ ಅದಕ್ಕೆ ಭಾವಾರ್ಥ ಅಗತ್ಯವಿರುವುತ್ತದೆ. ಕೆಲವು ವಚನಗಳು ಒಗಟಿನ ರೀತಿ ಇರುತ್ತವೆ. ಅಂತಹ ಒಗಟನ್ನು ಬಿಡಿಸುವ ಕೆಲಸವನ್ನು ವಚನಕುಮಾರಸ್ವಾಮಿ ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು. ವಚನಸಾರ ಪುಸ್ತಕ ಕುರಿತು ಮಾತನಾಡಿದ ಲೇಖಕ ನಗರ್ಲೆ ಶಿವಕುಮಾರ ಈ ಪುಸ್ತಕದಲ್ಲಿ ಬಸವಣ್ಣನವರಿಂದ ಪ್ರಾರಂಭವಾಗಿ ಅಲ್ಲಮಪ್ರಭು ಅಕ್ಕಮಹಾದೇವಿ, ಚೆನ್ನಬಸವಣ್ಣ, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಆಯ್ದಕ್ಕಿ ಲಕ್ಕಮ್ಮ ಮುಂತಾದ ಇಪ್ಪತ್ತೈದು ವಚನಕಾರರ ಭಾವಾರ್ಥವಿದ್ದು, ವಚನಗಳಿಗೆ ಸರಳವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಯಶಸ್ಸನ್ನೂ ಕಾಣುತ್ತಿರುವ ಇವರು ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದರು. ನಂತರ ಮಾತನಾಡಿದ ವಚನಸಾರ ಪುಸ್ತಕ ಸಂಪಾದಕ ವಚನ ಕುಮಾರಸ್ವಾಮಿ ಇಂದು ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದ ಇದಕ್ಕೆ ಕಾರಣವನ್ನು ಹುಡುಕಲು ಹೋದಾಗ ಅನೇಕ ಪುಸ್ತಕಗಳು ಗಾತ್ರದಲ್ಲಿ ದೊಡ್ಡದಾಗಿದ್ದು ಅದನ್ನು ನೋಡಿದ ಕೂಡಲೇ ನಂತರ ಓದಿದರಾಯಿತು ಎಂದು ಹಾಗೇ ಇಡುತ್ತಿರುವುದನ್ನು ಕಾಣಬಹುದು. ಕೆಲವೇ ನಿಮಿಷಗಳಲ್ಲಿ ಓದಲು ಸಹಾಯಕವಾಗಿ ಪುಸ್ತಕಪ್ರೇಮಿಗಳನ್ನು ಹೆಚ್ಚಿಸುವ ಉದ್ದೇಶದಿಂದ ಕಿರುಕೃತಿಯನ್ನು ಸಂಪಾದಿಸಿದ್ದೇನೆ. ಆದುದರಿಂದ ಪುಸ್ತಕದ ಲೇಖಕರು ಮತ್ತು ಸಂಪಾದಕರು ಗಾತ್ರಕ್ಕೆ ಆಧ್ಯತೆ ನೀಡದೆ ವಿಷಯಕ್ಕೆ ಆಧ್ಯತೆ ನೀಡಿ ಕಿರುಪುಸ್ತಕಗಳನ್ನು ತರಲು ಪ್ರಯತ್ನ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಮೈಸೂರು ಆರ್ಟ್ ಗ್ಯಾಲರಿಯ ಶಿವಲಿಂಗಪ್ಪ, ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಶ್ರೀಕಂಠಮೂರ್ತಿ, ಕಾರ್ಯದರ್ಶಿ ಪಂಪಾಪತಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ರತ್ನಮ್ಮಜಯಣ್ಣ, ಅನಿಲ್ ವಜಂತ್ರಿ, ಪ್ರೇಮಪ್ರಭುಸ್ವಾಮಿ, ಪೂರ್ಣಿಮಾ, ಲೋಕೇಶಪ್ಪ, ವಚನ ಚೂಡಾಮಣಿ,ಶ್ರೀಕಂಠಸ್ವಾ,ಮಿ, ವೃಷಬೇಂದ್ರ, ನಾಗೇಂದ್ರ, ಪುಟ್ಟಪ್ಪ, ಅಂಬಿಕಾ ಪ್ರಭುಶಂಕರ, ಕಾವೇರಿ, ಉಪಸ್ಥಿತರಿದ್ದರು.
--------------------------------------------------------------------------------------------------------------------------
ಚಿತ್ರ 1- ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಮೈಸೂರು ಮನೇಶ್ವರನಗರದ ಬಸವಜ್ಞಾನಮಂದಿರದಲ್ಲಿ ಆಯೋಜಿಸಿದ್ದ ವಚನ ಕುಮಾರಸ್ವಾಮಿ ಸಂಪಾದನೆಯ “ ಬಸವಣ್ಣನವರ ನೂರೊಂದು ವಚನಗಳು” ಕೃತಿಯನ್ನು ಮಾತೆ ಬಸವಾಂಜಲಿ ಬಿಡುಗಡೆ ಮಾಡಿದರು. ಸಾಹಿತಿ ನಗರ್ಲೆ ಶಿವಕುಮಾರ್, ವಚನ ಕುಮಾರಸ್ವಾಮಿ ಉಪಸ್ಥಿತರಿದ್ದರು.
ಮೈಸೂರು:- ಬಸವಣ್ಣನವರ ವಚನಗಳು ಸರಳ, ಸುಂದರ ಹಾಗೂ ವೈಜ್ಞಾನಿಕವಾಗಿವೆ ಎಂದು ಸಾಹಿತಿ ನಗರ್ಲೆ ಶಿವಕುಮಾರ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ಮೈಸೂರು ಮನೇಶ್ವರನಗರದ ಬಸವಜ್ಞಾನಮಂದಿರದಲ್ಲಿ ಆಯೋಜಿಸಿದ್ದ ವಚನ ಕುಮಾರಸ್ವಾಮಿ ಸಂಪಾದನೆಯ “ ಬಸವಣ್ಣನವರ ನೂರೊಂದು ವಚನಗಳು” ಕೃತಿ ಪರಿಚಯ ಮಾಡಿ ಮಾತನಾಡಿದ ಅವರು ಬಸವಣ್ಣನವರು ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಮೂಲಕ ಜಗಜ್ಯೋತಿಯಾದರು.ಇಡೀ ಮಾನವ ಸಮಾಜವನ್ನು ಏಕದೇವೋಪಾಸನೆಯ ಮೂಲಕ ಒಂದುಗೂಡಿಸಿ, ಸಮಾಜದ ಮೇಲು ಕೀಳುಗಳನ್ನು ನಿವಾರಿಸಿ ಸಮಾನ ಹಾಗೂ ಗೌರವಾನ್ವಿತ ನೆಲೆಯ ಮೇಲೆ ನಿಲ್ಲಿಸುವುದು ಅವರ ಮಹೋದ್ದೇಶವಾಗಿತ್ತು. ಬಸವಣ್ಣನವರ ಕಾಲದಲ್ಲಿ ಕ್ರಾಂತಿಕಾರಿ ಘಟನೆಗಳು ಹಾಗೂ ಅವರ ಬಗ್ಗೆ ನಡೆಸಿರುವ ಸಂಶೋಧನೆ, ಜಿಜ್ಞಾಸೆ, ವೈಚಾರಿಕ ನೆಲೆಗಟ್ಟು, ಸಮಾಜದ ಸಮಾನತೆಗೆ ಮಾಡಿದ ಹೋರಾಟ ಅನನ್ಯವಾದವುಗಳು. 18 ನೇ ಶತಮಾನದಲ್ಲಿ ಇಂಗ್ಲೆಂಡಿಗೆ ಪ್ರಜಾಪ್ರಭುತ್ವ ಬಂತು ಆದರೆ ಕರ್ನಾಟಕದಲ್ಲಿ 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವವಿತ್ತು. ಮಹಿಳೆಯರಿಗೆ ಸ್ವಾತಂತ್ರ್ಯವಿತ್ತು. 32 ಶರಣೆಯರು ವಚನಗಳನ್ನು ರಚಿಸಿದ್ದಾರೆ. ಕೆಲವು ಶರಣ ದಂಪತಿಗಳು ವಚನಗಳನ್ನು ರಚಿಸಿದ್ದಾರೆ ಎಂದು ಹೇಳಿದರು. ಬಸವಜ್ಞಾನಮಂದಿರದ ಮಾತೆ ಬಸವಾಂಜಲಿರವರು ಮಾತನಾಡಿ ಬಸವಣ್ಣನವರು ಮಡಿವಂತ ಸಮಾಜವನ್ನಾಗಲಿ, ಕೊಳಕು ಸಮಾಜವನ್ನಾಗಲಿ ನಿರ್ಮಾಣ ಮಾಡದೆ ಮನಸ್ಸಿನಲ್ಲಿರುವ ಮನದ ಮೈಲಿಗೆಯನ್ನು ಹೋಗಲಾಡಿಸುವ ಸಮಾಜವನ್ನು ನಿರ್ಮಾಣ ಮಾಡಿದರು. ವಚನಗಳನ್ನು ಅಧ್ಯಯನ ಮಾಡಿ ಅವುಗಳನ್ನು ಜೀವನದಲ್ಲಿ ಅಳವಿಸಿಕೊಂಡಿದ್ದೇ ಆದರೆ ಕಲ್ಯಾಣ ರಾಜ್ಯ ಸ್ಥಾಪನೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು. ಎಲ್ಲಾ ಜನರಿಗೂ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಮಾನತೆಗಾಗಿ ಪರಿಶ್ರಮಪಟ್ಟವರು ವಚನಕಾರರು ಎಂದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಶ್ರೀಕಂಠಮೂರ್ತಿ, ಗೀತಾ, ಸಿ.ಬಿ.ರಾಜಶೇಖರ್, ಶರಣಪ್ಪ, ಬಿ.ಪಂಪಾಪತಿ, ಪೂರ್ಣಿಮಾ ನಾಗೇಂದ್ರ, ವಿಜಯಶ್ರೀ ಪಂಪಾಪತಿ, ಸುಜಾತ ದುರ್ಗೇಶ್, ನಾಗೇಂದ್ರಸ್ವಾಮಿ ಉಪಸ್ಥಿತರಿದ್ದರು.
--------------------------------------------------------------------------------------------------------------------
ಶ್ರೀ ಮಲೆಮಹದೇಶ್ವರ ಕೃತಿ ಬಿಡುಗಡೆ ಸಮಾರಂಭ
--------------------------------------------------------------------------------------------------------------------------
ಚಿತ್ರ 1:- ಕಡೂರು ತಾಲ್ಲೂಕು ಬೀರೂರು ತರಳಬಾಳು ಜಗದ್ಗುರು ಕಲ್ಯಾಣಮಂಟಪದಲ್ಲಿ ಓಂಕಾರಯ್ಯನವರ ಪುತ್ರಿ ಶೃತಿ ಮತ್ತು ಜಿತೇಂದ್ರರ ವಿವಾಹದ ಆರತಕ್ಷತೆಯಲ್ಲಿ ಶರಣು ವಿಶ್ವವಚನ ಫೌಂಡೇಶನ್ ಹೊರತಂದಿರುವ ವಚನ ಕುಮಾರಸ್ವಾಮಿ ಸಂಪಾದನೆಯ ವಚನಕಲ್ಯಾಣ ಕೃತಿ ಬಿಡುಗಡೆಯನ್ನು ಮಾಡಾಳುವಿನ ನಿರಂಜನ ಪೀಠದ ಶ್ರೀ ರುದ್ರಮುನಿಸ್ವಾಮಿಗಳು ಮಾಡಿದರು. ಈ ಸಂದರ್ಭದಲ್ಲಿ ಕೆ.ಆರ್.ನಗರ ತಾಲ್ಲೂಕು ಲಾಳನಹಳ್ಳಿ ಗುರುಮಲ್ಲೇಶ್ವರ ಮಠದ ಮಾತೆ ಜಯದೇವಿತಾಯಿ ಉಪಸ್ಥಿತರಿದ್ದರು.
ಸುದ್ಧಿ:- ವಿವಾಹದಲ್ಲಿಯೂ ಆಧ್ಯಾತ್ಮಿಕಗೆ ನಾಂದಿ ಹಾಡಿರುವುದು ಉತ್ತಮ ಬೆಳವಣಿಗೆ ಎಂದು ಅರಸೀಕೆರೆ ತಾಲ್ಲೂಕು ಮಾಡಾಳುವಿನ ನಿರಂಜನ ಪೀಠದ ಶ್ರೀ ರುದ್ರಮುನಿಸ್ವಾಮಿಗಳು ಹೇಳಿದರು. ಕಡೂರು ತಾಲ್ಲೂಕು ಬೀರೂರು ತರಳಬಾಳು ಜಗದ್ಗುರು ಕಲ್ಯಾಣಮಂಟಪದಲ್ಲಿ ಓಂಕಾರಯ್ಯನವರ ಪುತ್ರಿ ಶೃತಿ ಮತ್ತು ಜಿತೇಂದ್ರರ ವಿವಾಹದ ಆರತಕ್ಷತೆಯಲ್ಲಿ ಶರಣು ವಿಶ್ವವಚನ ಫೌಂಡೇಶನ್ ಹೊರತಂದಿರುವ ವಚನ ಕುಮಾರಸ್ವಾಮಿ ಸಂಪಾದನೆಯ ವಚನಕಲ್ಯಾಣ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು ವ್ಯಕ್ತಿ ಹಂತ ಹಂತವಾಗಿ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕಾಗುತ್ತದೆ. ವಿವಾಹ ಎಂದ ತಕ್ಷಣ ಸಂತೋಷ, ಸಡಗರ ನೆನಪಾಗುತ್ತದೆ ಆದರೆ ಇಂತಹ ಸಂದರ್ಭದಲ್ಲೂ ಕಾರ್ಯಕ್ರಮ ರೂಪಿಸಿ ಜೀವನಮೌಲ್ಯಗಳನ್ನು ರೂಢಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆ.ಆರ್.ನಗರ ತಾಲ್ಲೂಕು ಲಾಳನಹಳ್ಳಿ ಗುರುಮಲ್ಲೇಶ್ವರ ಮಠದ ಮಾತೆ ಜಯದೇವಿತಾಯಿ ಮಾತನಾಡಿ ವಿವಾಹದಲ್ಲಿ ಬೇರೆ ಬೇರೆ ಕಾಣಿಕೆ ನೀಡುವುದರ ಬದಲು ವಚನ ಪುಸ್ತಕಗಳನ್ನು ವಚನ ತಾಂಬೂಲವನ್ನಾಗಿ ನೀಡಿ ಜ್ಷಾನದಾಸೋಹ ಮಾಡಿರುವುದು ನಿಜವಾಗಿಯೂ ಕೂಡ ಸ್ತುತ್ಯಾರ್ಹವಾದುದು. ಇಂತಹ ಆಧುನಿಕ ಯುಗದಲ್ಲಿಯೂ ಕೂಡ ಧಾರ್ಮಿಕತೆಗೆ ಒತ್ತು ನೀಡುತ್ತಿರುವುದನ್ನು ನೋಡಿದರೆ ಭಾರತ ದೇಶದಲ್ಲಿ ಹುಟ್ಟಿದ್ದೂ ಕೂಡ ಸಾರ್ಥಕವೆನಿಸಿತು ಎಂದರು. ಕಾರ್ಯಕ್ರಮ ಕುರಿತು ಮಾತನಾಡಿದ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ತಲೆಯಲ್ಲಿ ಸದ್ವಿಚಾರ, ಮನಸ್ಸಿನಲ್ಲಿ ಸದ್ಭಾವನೆ, ಕೈಯಲ್ಲಿ ಸತ್ಕಾರ ಮಾಡಿಸಲು ವಚನಗಳು ಪ್ರೇರಣೆಯಾಗಿದ್ದು ಪ್ರತಿಯೊಬ್ಬರೂ ಕೂಡ ವಚನಗಳನ್ನು ಅಧ್ಯಯನ ಮಾಡಬೇಕು ಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದು ಸಾಧ್ಯವಾಗಬೇಕಾದರೆ ವಿವಾಹದಿಂದಲೇ ಪ್ರತಿಯೊಬ್ಬರ ಬದುಕು ವಿಸ್ತಾರವಾಗುವುದರಿಂದ ಸತಿಪತಿಗಳು ಹೊಂದಾಣಿಕೆಯಿಂದ ನಡೆಯಲು ನೆರವಾಗುವಂತಹ ವಚನಗಳನ್ನು ವಚನಕಲ್ಯಾಣದಲ್ಲಿ ನಿರ್ವಚನ ಮಾಡಲಾಗಿದೆ. ಪ್ರತಿಯೊಬ್ಬರೂ ಇದನ್ನು ಅದ್ಯಯನ ಮಾಡಿದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಧು ಶೃತಿ, ವರ ಜಿತೇಂದ್ರ, ಓಂಕಾರಯ್ಯ, ಗೀತಾ,ಕುಮಾರಪ್ಪ, ಗೀತಾ, ಬಸವಣ್ಣ, ಗುರುಸಿದ್ಧಮ್ಮ ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪಕುಮಾರಸ್ವಾಮಿ ಉಪಸ್ಥಿತರಿದ್ದರು.
-------------------------------------------------------------------
ಅರಸೀಕೆರೆ : ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹ ನೀಡುವಲ್ಲಿ ಬೀಗರ ಔತಣ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಮಾಡಾಳು ನಿರಂಜನ ಪೀಠದ ರುದ್ರಮುನಿಸ್ವಾಮೀಜಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಕೋಡಮ್ಮದೇವಿ ಸಮುದಾಯಭವನದಲ್ಲಿ ಬೀಗರ ಔತಣ ಕಾರ್ಯಕ್ರಮದಲ್ಲಿ ವಚನ ಕುಮಾರಸ್ವಾಮಿ ಸಂಪಾದನೆಯ ವಚನಾಮೃತ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಕುಟುಂಬ ಸಮಾಜದ ಬಹು ಮುಖ್ಯ ಘಟಕ, ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಬೇಕಾದರೆ ಕೌಂಟುಬಿಕ ಬದುಕು ಅನನ್ಯತೆಯಿಂದ ಕೂಡಿರಬೇಕು. ಸುಂದರವಾದ ಜೀವನವನ್ನು ಸಾಗಿಸಲು ವಚನ ನುಡಿಗಳನ್ನು ಅಳವಡಿಸಿಕೊಂಡು ಅದರಂತೆ ನಡೆಯಬೇಕು. ಮಾನವನ ಬದುಕಿಗೆ ಬೇಕಾದ ಎಲ್ಲಾ ಅಗತ್ಯಗಳನ್ನು ಶರಣರು ವಚನಗಳ ಮೂಲಕ ಅನಾವರಣಗೊಳಿಸಿದ್ದಾರೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ಪ್ರತಿಯೊಬ್ಬರ ಕೈಯಲ್ಲಿ ಹಾಗೂ ಪ್ರತಿಯೊಂದು ಮನೆಯಲ್ಲಿ ವಚನ ಪುಸ್ತಕ ಇರಬೇಕೆಂಬುದು ಸಂಸ್ಥೆಯ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ವಚನಗ್ರಾಮ ಕಾರ್ಯಕ್ರಮವನ್ನು ರಾಜ್ಯಾಧ್ಯಂತ ಹಮ್ಮಿಕೊಳ್ಳಲಾಗಿದೆ. ಮದುವೆ, ಬೀಗರ ಔತಣ, ಸಂಸ್ಮರಣ ಸಮಾರಂಭಗಳನ್ನು ಆಯೋಜಿಸುವವರು ನಮ್ಮ ಜೊತೆ ಸಹಕರಿಸಿದೆ ಸರ್ವರಲ್ಲೂ ಉತ್ತಮ ಮೌಲ್ಯ ಅಳವಡಿಕೆ ಮಾಡಲು ಸಾಧ್ಯವಾಗುತ್ತದೆ ಎಂದರು. ಅಂದು ಅತ್ತಿಮಬ್ಬೆ ಪೊನ್ನನ ಶಾಂತಿಪುರಾಣದ ಒಂದು ಸಾವಿರ ಪ್ರತಿಗಳನ್ನು ಓಲೆಗರಿಗಳಲ್ಲಿ ಬರೆಯಿಸಿ ಓದುಗರಿಗೆ ಹಂಚಿದಳು ಅದೇ ರೀತಿ ಶರಣ ಓಂಕಾರಯ್ಯನವರು 1000 ಪುಸ್ತಕಗಳನ್ನು ಮುದ್ರಿಸಿ ಬೀಗರ ಔತಣ ಕಾರ್ಯಕ್ರಮಕ್ಕೆ ಬಂದಿರುವ ಎಲ್ಲರಿಗೂ ಹಂಚುತ್ತಿರುವುದು ಸ್ತುತ್ಯಾರ್ಹವಾದ ಕೆಲಸ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥಾಪಕ ನಿರ್ದೇಶಕಿ ರೂಪಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ದೇವರಮುದ್ದನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹೆಚ್ ಬಿ ಓಂಕಾರಯ್ಯ, ಗೀತಾ ಓಂಕಾರಯ್ಯ, ಹೆಚ್ ಕೆ ಮಾದಪ್ಪ, ಹೆಚ್ ಪಿ ಬಸವಲಿಂಗಪ್ಪ, ವಧು ಸ್ಪೂರ್ತಿ, ವರ ವಸಂತಕುಮಾರ್, ಸಿದ್ಧರಾಜು, ರೇಣುಕಮ್ಮ, ಶಿವಸ್ವಾಮಿ, ವೀಣಾ, ಬಸವಣ್ಣ, ಪತ್ರಕರ್ತ ನಾಗೇಂದ್ರ ಉಪಸ್ಥಿತರಿದ್ದರು
----------------------------------------
ಮೈಸೂರು: ಶರಣರ ವಚನಗಳ ಅಧ್ಯಯನದಿಂದ ಅನೇಕರು ಆಧ್ಯಾತ್ಮದ ಬೆಳಕನ್ನು ಕಂಡುಕೊಂಡಿದ್ದಾರೆ ಎಂದು ಟಿ ನರಸೀಪುರ ವಿದ್ಯೋದಯ ಕಾಲೇಜಿನಿ ವಿಶ್ರಾಂತ ಪ್ರಾಧ್ಯಾಪಕಿ ಡಾ ಸಿ ಜಿ ಉಷಾದೇವಿ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶರಣು ವಿಶ್ವವಚನ ಫೌಂಡೇಷನ್ ಸಹಯೋಗದೊಂದಿಗೆ ವಿಜಯನಗರದ ಒಂದನೇ ಹಂತದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎತ್ತಣ ಅಲ್ಲಮ ಎತ್ತಣ ರಮಣ ಕೃತಿಯನ್ನು ಕುರಿತು ಮಾತನಾಡಿದ ಅವರು ಲೇಖಕ ಡಾ ಪ್ರಸನ್ನ ಸಂತೇಕಡೂರು ಅಲ್ಲಮ ಮತ್ತು ರಮಣ ಮಹರ್ಷಿಗಳ ಸಿದ್ಧಾಂತದಲ್ಲಿ ಕಂಡು ಬರುವ ಸಾಮ್ಯತೆಗಳ ಬಗ್ಗೆ ತಿಳಿಸುವುದರ ಜೊತೆಗೆ ಅಲ್ಲಮನ ವಚನಗಳು ರಮಣನಿಗೆ ದಾರಿ ತೋರಲು ಸಹಾಯಕವಾಗಿ ಆತ್ಮೋದ್ಧಾರದ ದಾರಿಯಲ್ಲಿ ನಡೆಸಿವೆ. ಪ್ರಸ್ತುತ ಕೃತಿಯನ್ನು ಸ್ವತಂತ್ರವಾಗಿ ರಚಿಸುವುದರ ಜೊತೆಗೆ ಸಂಶೋಧನೆಯನ್ನು ಮಾಡಿ ಅನೇಕ ಕೃತಿಗಳಿಂದ ಉತ್ತಮ ಅಂಶಗಳನ್ನು ಹೆಕ್ಕಿ ತೆಗೆದು ಎರಡು ವ್ಯಕ್ತಿತ್ವಗಳ ಬಗ್ಗೆ ಸರಳವಾಗಿ ಓದುಗರಿಗೆ ನೀಡಿರುವುದು ತುಂಬಾ ಸಂತಸದ ವಿಷಯ. ಅಮೇರಿಕಾಕ್ಕೆ ಹೋದರೆ ತಾಯ್ನಾಡನ್ನೇ ಮರೆತುಬಿಡುತ್ತಾರೆ ಎಂದು ಹೇಳುವ ಇತ್ತೀಚಿನ ದಿನಮಾನಗಳಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಕನ್ನಡ ನಾಡಿನ ಸಾಹಿತ್ಯದ ಬಗ್ಗೆ ಅಲ್ಲೇ ಅಧ್ಯಯನ ಮಾಡಿ ಕೃತಿ ರಚಿಸಿರುವುದು ಕನ್ನಡಿಗರಾದ ನಾವು ಹೆಮ್ಮೆಪಡಬೇಕಾದ ವಿಷಯ ಎಂದರು. ಕೃತಿ ಬಿಡುಗಡೆ ಮಾಡಿ ಮಾತನಾಡಿದ ಹೆಸರಾಂತ ಸಾಹಿತಿ ಡಾ ಮಳಲಿ ವಸಂತಕುಮಾರ್ ಬಸವಣ್ಣ ವಚನ ಚಳುವಳಿ ಮೂಲಕ ಸಮಸಮಾಜ ಕಟ್ಟಲು ಪ್ರಯತ್ನಿಸಿದರು. ಅಲ್ಲಮನ ಘನ ವ್ಯಕ್ತಿತ್ವವನ್ನು ಗಮನಿಸಿ ಅವರನ್ನು ಅನುಭವ ಮಂಟಪದ ಅಧ್ಯಕ್ಷರನ್ನಾಗಿ ಮಾಡಿ ಜಾತಿ, ಧರ್ಮ, ಲಿಂಗರಹಿತವಾಗಿ ಎಲ್ಲರೂ ಚರ್ಚಿಸಲು ಅವಕಾಶ ಮಾಡಿಕೊಟ್ಟಿದ್ದು ಧ್ವನಿ ಇಲ್ಲದವರಿಗೆ ಮಾತನಾಡಲು ಸಹಾಯಕವಾಯಿತು ಎಂದರು. ಕೃತಿ ಲೇಖಕ ಡಾ ಪ್ರಸನ್ನ ಸಂತೇಕಡೂರು ಮಾತನಾಡಿ ನಾನು ಅಮೇರಿಕಾದಲ್ಲಿರುವಾಗ ಅನೇಕ ಕೃತಿಗಳನ್ನು ಅಧ್ಯಯನ ಮಾಡುತ್ತಿದ್ದೆ ಆ ಸಂದರ್ಭದಲ್ಲಿ ರಮಣ ಮಹರ್ಷಿಗಳ ಬಗ್ಗೆ ಓದುತ್ತಾ ಹೋದಂತೆ ಅಲ್ಲಮರ ಪ್ರಭಾವ ಇರಬಹುದು ಎಂದು ಗಮನಿಸಿ ಅವರಿಗೆ ಸಂಬಂಧಿಸಿದ ಪುಸ್ತಕಗಳನ್ನು ಸಂಶೋಧನೆ ಮಾಡಿದಾಗ ಈ ಕೃತಿ ಹೊರಬರಲು ಸಹಾಯಕವಾಯಿತು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ವಚನ ಚೂಡಾಮಣ , ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಗೌರವಾಧ್ಯಕ್ಷ ಶ್ರೀಕಂಠಮೂರ್ತಿ, ಗೀತಾ, ಕಾವೇರಿ, ಪ್ರಭುಸ್ವಾಮಿ, ಅನಿತಾ ನಾಗರಾಜ್, ರಾಜೇಶ್ವರಿ, ದೇವರಾಜು, ವಿಜಯಕುಮಾರ್ ಉಪಸ್ಥಿತರಿದ್ದರು.

2020ರ ಬಸವಭಾನು ಸಂಚಿಕೆ ಬಿಡುಗಡೆ
ನಗರ್ಲೆ ಶಿವಕುಮಾರ ಸಂಪಾದನೆಯ ನುಡಿಗಡಣ ಕೃತಿ ಬಿಡುಗಡೆ
2021ರ ಬಸವಭಾನು ಸಂಚಿಕೆ ಬಿಡುಗಡೆ
ಶಿವಪುರ ಉಮಾಪತಿ ಸಂಪಾದನೆಯ ವಚನ ದರ್ಶನ ಕೃತಿ ಬಿಡುಗಡೆ
ಅಕ್ಕಮಹಾದೇವಿ ಮರಮ್ಕಲ್ ಸಂಪಾದನೆಯ ಅಕ್ಕನ ನೂರೆಂಟು ವಚನಗಳು ಕೃತಿ ಬಿಡುಗಡೆ

No comments:
Post a Comment