Friday, December 17, 2021

ಸದಸ್ಯತ್ವ ವಿವರ 2023

 ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವ ಪಡೆದರೆ ಪ್ರತೀ ವರ್ಷ ವಚನಾಧಾರಿತ ಶರಣು ದಿನಚರಿ ಹಾಗೂ ಬಸವಭಾನು ಸಂಚಿಕೆ  ಹಾಗೂ ವಚನ ಸಾಹಿತ್ಯ  ಪುಸ್ತಕಗಳನ್ನು   ರಿಜಿಸ್ಟರ್ ಪಾರ್ಸಲ್ ಮೂಲಕ ತಮ್ಮ ವಿಳಾಸಕ್ಕೆ ಕಳಿಸಲಾಗುತ್ತದೆ.

                               ಶರಣು ದಿನಚರಿ - 2023

ಶರಣು ವಿಶ್ವವಚನ ಫೌಂಡೇಷನ್ ೨೦೧೬ ರಿಂದ ವಚನಾಧಾರಿತ ಶರಣು ದಿನಚರಿಯನ್ನು ಹೊರತರುತ್ತಿದ್ದು, ಇದುವರೆಗೆ ಸಿದ್ಧಗಂಗೆ ಶ್ರೀಗಳು, ಸುತ್ತೂರು ಶ್ರೀಗಳು, ದೇವನೂರು ಶ್ರೀಗಳು, ಸಂಗಮ ತಾತ, ಶ್ರೀ ಕೆಂಡಗಣ್ಣೇಶ್ವರಸ್ವಾಮಿ, ಎಡೆಯೂರು ತೋಂಟದ ಸಿದ್ಧಲಿಂಗೇಶ್ವರು, ಶ್ರೀ ಮಲೆ ಮಹದೇಶ್ವರರಿಗೆ ಅರ್ಪಣೆ ಮಾಡಲಾಗಿದ್ದು ಈ ವರ್ಷ ಜಗನ್ಮಾತೆ ಅಕ್ಕಮಹಾದೇವಿಯವರಿಗೆ ಅರ್ಪಣೆ ಮಾಡಲಾಗಿದೆ. ೨೦೨೩ರ ಶರಣು ದಿನಚರಿಯಲ್ಲಿ ಬಸವೋತ್ತರ ಯುಗದ ೧೩ ವಚನಕಾರರ ಪರಿಚಯ ಹಾಗೂ ಅವರ ವಚನಗಳು, ಶರಣರ ದಿನಾಚರಣೆ ಮತ್ತು ಸಂಸ್ಮರಣೋತ್ಸವ ಹಾಗೂ ದತ್ತಿ, ಆಜೀವ ಸದಸ್ಯರ ವಿವರವನ್ನು ಅಡಕಗೊಳಿಸಲಾಗಿದ್ದು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿರವರು ಸಂಪಾದಿಸಿದ್ದಾರೆ.  ಬೆಲೆ ರೂ 200






                      ಬಸವಭಾನು ವಾರ್ಷಿಕ ಸಂಚಿಕೆ

ಬಸವಭಾನು ವಾರ್ಷಿಕ ಸಂಚಿಕೆಯನ್ನು ೨೦೨೦ ರಿಂದ ಹೊರತರುತ್ತಿದ್ದು, ಶರಣ ಸಾಹಿತ್ಯಕ್ಕೆ ಸಂಬಂಧಿಸಿದಂತೆ  ಶರಣ ಸಾಹಿತ್ಯ ಚಿಂತಕರು ಮತ್ತು ಆರಾಧಕರ ಲೇಖನ   ಒಳಗೊಂಡಿದೆ. ವಾರ್ಷಿಕ ಕಾರ್ಯಚಟುವಟಿಕೆಗಳ ವರದಿ ಮತ್ತು ಛಾಯ ಚಿತ್ರಗಳ ಸಂಚಿಕೆಯನ್ನು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ರೂಪ ಕುಮಾರಸ್ವಾಮಿಯವರು ಸಂಪಾದಿಸಿದ್ದಾರೆ. ಬೆಲೆ ರೂ 200




ವಚನ ಸೌರಭ 
ವಿವಿಧ ವಚನಕಾರರ  ೧೦೮ ವಚನ ಮತ್ತು ತಾತ್ಪರ್ಯವನ್ನು ಶರಣ ಸಂಸ್ಕೃತಿಯ ಆರಾಧಕರಾದ ಶ್ರೀಮತಿ ಮಂಗಳ ಮುದ್ದುಮಾದಪ್ಪರವರು ಸಂಪಾದಿಸಿದ್ದಾರೆ. ಬೆಲೆ ರೂ 100




ವಚನ ವೈಭವ

ಬಸವಣ್ಣ, ಅಲ್ಲಮಪ್ರಭು ಮತ್ತು ಚೆನ್ನಬಸವಣ್ಣನವರ 50 ವಚನ ಮತ್ತು ತಾತ್ಪರ್ಯ ಒಳಗೊಂಡಿದ್ದು, ವಚನ ಸಾಹಿತ್ಯ ಆರಾಧಕರು ಮತ್ತು ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಮಂಜುಳ ಶಿವಪ್ರಸಾದ್ ರವರು ಸಂಪಾದಿಸಿದ್ದಾರೆ. ಬೆಲೆ ರೂ 75



*ನಿಜಸುಖಿ ಹಡಪದ ಅಪ್ಪಣ್ಣ ಪುಸ್ತಕ*

*ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪರಾದ ಡಾ. ವಚನ ಕುಮಾರಸ್ವಾಮಿಯವರ ವಿರಚಿತ ನಿಜಸುಖಿ ಹಡಪದ ಅಪ್ಪಣ್ಣ ಕೃತಿ ಅಪ್ಪಣ್ಣನವರ ಸಂಪೂರ್ಣ ಜೀವನ ಚರಿತ್ರೆಯನ್ನು ತಿಳಿಸಿಕೊಡುವಲ್ಲಿ ಸಫಲವಾಗಿದೆ.*
*ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮೈಸೂರಿನ ಹಿರಿಯ ಸಾಹಿತಿ ಕೆ. ಅನಂತರಾಮುರವರು ಪ್ರಪಂಚದಲ್ಲಿ ಎರಡು ರೀತಿಯ ಪುಸ್ತಕಗಳು ಇರುತ್ತವೆ. ಒಂದು ಕೈ ತೊಳೆದು ಮುಟ್ಟುವ ಪುಸ್ತಕ. ಎರಡು ಪುಸ್ತಕ ಓದಿದ ನಂತರ ಕೈ ತೊಳೆಯುವುದು. ನಿಜಸುಖಿ ಹಡಪದ ಅಪ್ಪಣ್ಣ ಕೃತಿ ಕೈತೊಳೆದು ಮುಟ್ಟುವ ಪುಸ್ತಕವಾಗಿದೆ ಎಂದರು.*
*ನಿಜಸುಖಿ ಹಡಪದ ಅಪ್ಪಣ್ಣ ಕೃತಿ ಒಟ್ಟು 14 ಅಧ್ಯಾಯಗಳಿಂದ ಕೂಡಿದೆ.*
೧. ಅಪ್ಪಣ್ಣನವರ ಬಾಲ್ಯ
೨.ಕಲ್ಯಾಣದೆಡೆಗೆ ಅಪ್ಪಣ್ಣ
೩.ಅಪ್ಪಣ್ಣನವರ ಕಾಯಕ
೪.ಬಸವಣ್ಣನವರ ಆಪ್ತನಾಗಿ ಅಪ್ಪಣ್ಣ
೫.ಅಲ್ಲಮರ ಆಗಮನದ ಸನ್ನಿವೇಶ
೬.ಅನುಭವಮಂಟಪ
೭.ಕಲ್ಯಾಣಕ್ರಾಂತಿ
೮.ಅಪ್ಪಣ್ಣನವರ ಕಡೆಯ ದಿನಗಳು
೯.ವಚನ ರಚನೆ
೧೦. ವಚನ - ನಿರ್ವಚನ
೧೧. ಶರಣರ ವಚನಗಳಲ್ಲಿ ಹಡಪದ ಅಪ್ಪಣ್ಣ
೧೨. ನಿಜಮುಕ್ತೆ ಲಿಂಗಮ್ಮ
೧೩. ಅಪ್ಪಣ್ಣನವರ ಕ್ಷೇತ್ರಗಳ ಕಿರು ಪರಿಚಯ
೧೪. ಅಪ್ಪಣ್ಣನವರಿಗೆ ಸಂಬಂಧಿಸಿದ ಕ್ಷೇತ್ರಗಳ ಚಿತ್ರಗಳು
*ಒಟ್ಟು 152 ಪುಟ ಹೊಂದಿರುವ ಕೃತಿಗೆ ಹೆಸರಾಂತ ಸಾಹಿತಿಗಳಾದ ಶ್ರೀ ರಂಜಾನ್ ದರ್ಗಾರವರು ಮುನ್ನುಡಿ ಬರೆದಿದ್ದು, ಖ್ಯಾತ ಅಂಕಣಕಾರ ಡಾ. ಗುಬ್ಬಿಗೂಡು ರಮೇಶ್ ರವರು ಬೆನ್ನುಡಿ ಬರೆದಿದ್ದಾರೆ.*
*ಶ್ರೀ ರಂಜಾನ್ ದರ್ಗಾರವರು ನಿಜಸುಖಿ ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರದ ಅಪ್ಪಣ್ಣರವರು ಒಂದೇ ಎಂಬ ಲೇಖನ ಬರೆದಿದ್ದು, ಇದನ್ನು ಓದುಗರಿಗೆ ಅನುಕೂಲವಾಗಲು ಪುಸ್ತಕದ ಕೊನೆಯಲ್ಲಿ ಕೊಡಲಾಗಿದೆ.*
ಕೃತಿಯ ಬೆಲೆ ರೂ 200




*ವಚನ ಭಾರತ*

*ಪ್ರತಿಯೊಬ್ಬರೂ ಜೇಬಿನಲ್ಲಿ ಇಟ್ಟುಕೊಳ್ಳುವಂತಹ ವಚನ ಪುಸ್ತಕ ವಚನ ಭಾರತ. ಡಾ. ವಚನ ಕುಮಾರಸ್ವಾಮಿ ಸಂಪಾದನೆಯ 39 ವಚನಗಳನ್ನು ನೀಡಲಾಗಿದ್ದು, ಯಾವ ಸಂದರ್ಭದಲ್ಲಿ ಯಾವ ವಚನ ಸ್ಮರಿಸಬೇಕು ಎಂಬುದನ್ನು ನೀಡಲಾಗಿದೆ*




  ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವದ ವಿವರ 
ಮೂರು ವರ್ಷ ರೂ 1000 
ಆರು ವರ್ಷ ರೂ 2000 
ಆಜೀವ ಸದಸ್ಯತ್ವ ರೂ 5000 
ಶಾಲೆಗಳೆಡೆಗೆ ವಚನಗಳೆಡೆಗೆ ದತ್ತಿ ರೂ 10000 
ವಚನಗ್ರಾಮ ದತ್ತಿ ರೂ 25000 
ಮಹಾಪೋಷಕರು ರೂ 1 ಲಕ್ಷ ಮೇಲ್ಪಟ್ಟು

*ಸಂಸ್ಥೆಯ ಸದಸ್ಯತ್ವ ಪಡೆದರೆ 80 G ಅಡಿಯಲ್ಲಿ ತೆರಿಗೆ ವಿನಾಯಿತಿ ದೊರೆಯುತ್ತದೆ*

         ಮೂರು ವರ್ಷದ ಸದಸ್ಯತ್ವ ಮೂರು ವರ್ಷ ಸದಸ್ಯರಾದರೆ ಮೂರು ವರ್ಷಗಳವರೆಗೆ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಆ ವರ್ಷ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ.

           ಆರು ವರ್ಷದ ಸದಸ್ಯತ್ವ ಆರು ವರ್ಷ ಸದಸ್ಯತ್ವ ಪಡೆದರೆ ಆರು ವರ್ಷಗಳವರೆಗೆ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಆ ವರ್ಷ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ. 

       ಆಜೀವ ಸದಸ್ಯತ್ವ ಆಜೀವ ಸದಸ್ಯತ್ವ ಪಡೆದರೆ ಜೀವನ ಪರ್ಯಂತ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಸಂಸ್ಥೆಯಿಂದ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ ಹಾಗೂ ಶರಣು ದಿನಚರಿ ಅಥವಾ ಬಸವಭಾನು ಸಂಚಿಕೆಯಲ್ಲಿ ಆಜೀವ ಸದಸ್ಯರ ಭಾವಚಿತ್ರವನ್ನು ಹಾಕಲಾಗುತ್ತದೆ. ಶರಣು ದಿನಚರಿ ಮತ್ತು ಬಸವಭಾನು ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಅಭಿನಂದಿಸಲಾಗುತ್ತದೆ.

                 ಶಾಲೆಗಳೆಡೆಗೆ ವಚನಗಳ ನಡಿಗೆ ದತ್ತಿ
 ಶಾಲೆಗಳೆಡೆಗೆ ವಚನಗಳ ನಡಿಗೆ ದತ್ತಿ ನೀಡಿದರೆ ಪ್ರತೀ ವರ್ಷ ದತ್ತಿ ಸದಸ್ಯರು ತಿಳಿಸುವ ಶಾಲೆಗಳಲ್ಲಿ ಅವರ ಹೆಸರಿನಲ್ಲಿ ವಚನ ಕಾರ್ಯಕ್ರಮ ಹಮ್ಮಿಕೊಂಡು ಶಾಲೆಗಳಲ್ಲಿ ವಚನ ಹೇಳುವ ಎಲ್ಲಾ ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣ ಪತ್ರ ಮತ್ತು ವಚನ ಪುಸ್ತಕಗಳನ್ನು ನೀಡಲಾಗುತ್ತದೆ.ಹಾಗೂ ಪ್ರತೀ ವರ್ಷ ನಡೆಯುವ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ದತ್ತಿ ನೀಡಿದ ದಂಪತಿಗಳನ್ನು ಸನ್ಮಾನಿಸಲಾಗುತ್ತದೆ.


          ವಚನಗ್ರಾಮ ದತ್ತಿ
 ವಚನಗ್ರಾಮ ದತ್ತಿ ನೀಡಿದರೆ ಜೀವನ ಪರ್ಯಂತ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಸಂಸ್ಥೆಯಿಂದ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ ಹಾಗೂ ಶರಣು ದಿನಚರಿ ಅಥವಾ ಬಸವಭಾನು ಸಂಚಿಕೆಯಲ್ಲಿ ದಂಪತಿಗಳ ಭಾವಚಿತ್ರವನ್ನು ಹಾಕಲಾಗುತ್ತದೆ. ಶರಣು ದಿನಚರಿ ಮತ್ತು ಬಸವಭಾನು ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಅಭಿನಂದಿಸಲಾಗುತ್ತದೆ. ಹಾಗೂ ಪ್ರತೀ ವರ್ಷ ದತ್ತಿ ನೀಡಿದವರು ಹೇಳುವ ಗ್ರಾಮಗಳಲ್ಲಿ ವಚನಗ್ರಾಮ ಕಾರ್ಯಕ್ರಮ ಏರ್ಪಡಿಸಿ ಗ್ರಾಮದ ಪ್ರತೀ ಮನೆಗೆ ವಚನ ಪುಸ್ತಕ ನೀಡಿ ಆ ಗ್ರಾಮದ ಮಠ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಕಾರ್ಯಕ್ರಮ ಏರ್ಪಡಿಸಿ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಏರ್ಪಡಿಸಿ ನಂತರ ಆ ಗ್ರಾಮವನ್ನು ವಚನಗ್ರಾಮ ಎಂದು ಘೋಷಿಸಲಾಗುತ್ತದೆ ನಂತರ ದತ್ತಿ ನೀಡಿದ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ.
ಸಂಸ್ಥೆಯ ಸದಸ್ಯರಾಗ ಬಯಸುವವರು ಕೆಳಗಿನ ಖಾತೆಗೆ ಹಣ ಜಮಾ ಮಾಡಿ ತಮ್ಮ ವಿಳಾಸ ಕಳಿಸಿದರೆ ವಚನ ಪುಸ್ತಕಗಳನ್ನು ಕಳಿಸಲಾಗುತ್ತದೆ. 

SHARANU VISHWA VACHANA FOUNDATION 
A/C NO. 5192000100032101 
IFSC CODE KARB0000519 
KARNATAKA BANK 
BOGADI BRANCH, MYSORE 

ಗೂಗಲ್ ಪೇ ಅಥವಾ ಪೋನ್ ಪೇ ಮತ್ತು ಪೇಟಿಎಂ ನಂ 
8217081644 

ಹೆಚ್ಚಿನ ಮಾಹಿತಿಗಾಗಿ ಶರಣು ವಿಶ್ವವಚನ ಫೌಂಡೇಷನ್ 
ನಂ. 431, 7ನೇ ಮುಖ್ಯರಸ್ತೆ, 14 ನೇ ಅಡ್ಡರಸ್ತೆ 
ಶಾರದಾನಗರ ರೈಲ್ವೆ ಬಡಾವಣೆ
ಬೋಗಾದಿ ಮೈಸೂರು – 570026 
ಮೊಬೈಲ್ ನಂಬರ್ 8217081644 



5 comments:

  1. Gurubadapps M Nalawadad Sajjaldhree lingyts kanavale Bagalkot

    ReplyDelete
  2. ಪ್ರಸ್ತುತ ದಿನಮಾನಗಳಲ್ಲಿ ಯುವಶಕ್ತಿಯನ್ನು ಬಲಿಷ್ಠಗೊಳಿಸಲು ವಚನ ಸಾಹಿತ್ಯ ಅವಶ್ಯಕವಾಗಿ ಬೇಕಾಗಿರುವುದು ಸತ್ಯವಾದ ಮಾತು ಆಗಿದೆ. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಾದ ವಿಶ್ವ ವಚನ ಫೌಂಡೇಶನ್ ಮೈಸೂರು ನೀವು ಮಾಡುತ್ತಿರುವ ಸೇವೆ ಅಗಾಧವಾದದ್ದು. ಪ್ರತಿ ವರ್ಷವೂ ಸಹ ವೃದ್ಧಾಶ್ರಮಕ್ಕೆ ಅಷ್ಟೇ ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ಸಹ ವಚನದ ನಡೆಗೆ ಕಾರ್ಯಕ್ರಮವು ಸುಂದರವಾಗಿ ಮೂಡಿಬರುತ್ತಿರುವುದು ತುಂಬಾ ಸಂತೋಷಕರವಾದ ಸಂಗತಿಯಾಗಿದೆ. ಅಷ್ಟೇ ಅಲ್ಲದೆ ಎಲ್ಲಾ ಶರಣರ ಜೀವನಚರಿತ್ರೆ ಪುಸ್ತಕಗಳನ್ನು ಸಮಾಜಕ್ಕೆ ಅರ್ಪಿಸುವುದು ಬಹಳ ಶ್ರೇಷ್ಠ ವಾದಂತಹ ಕಾರ್ಯವಾಗಿದೆ. ಹೀಗೆ ನಿಮ್ಮ ಕಾರ್ಯಕ್ಕೆ ಬಸವಾದಿ ಶಿವಶರಣರ ಆಶೀರ್ವಾದ ಸದಾ ಇರಲಿ ಎಂದು ಕೇಳಿ ಕೊಳ್ಳುತ್ತಿದ್ದೇವೆ.

    ReplyDelete
  3. ಸರ್ವರಿಗೂ ಶರಣು ಶರಣಾರ್ಥಿ 🙏🏻

    ReplyDelete
  4. ಶರಣು ಶರಣಾರ್ಥಿಗಳು ಸರ್

    ReplyDelete