ವಿಶ್ವಕ್ಕೆ ವಚನಗಳ ಮೂಲಕ ಮಾನವ ಧರ್ಮ ನೀಡಿದವರು ಬಸವಣ್ಣ ಎಂದು ಬೆಂಗಳೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಅಂತರ್ಜಾಲದಲ್ಲಿ ನಡೆದ ಶಿಕ್ಷಕರಿಗಾಗಿ ವಚನ ಮಾಧುರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಸವಣ್ಣನವರು ನೀಡಿದ ಕಾಯಕವೇ ಕೈಲಾಸ ಎಂಬ ಸಂದೇಶ ಇಡೀ ವಿಶ್ವವೇ ಒಪ್ಪಿಕೊಳ್ಳುವ ಚುಂಬನಾ ಶಕ್ತಿಯನ್ನು ಹೊಂದಿದೆ. ವಚನ ಸಾಹಿತ್ಯದ ಮೂಲಕ ್ಲ ಕನ್ನಡ ಸಾಹಿತ್ಯ ವಿಶ್ವ ಸಾಹಿತ್ಯದಲಿ ಪ್ರಬುದ್ಧತೆ ಸಾಧಿಸಲು ಸಾಧ್ಯವಾಯಿತು. ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ವಚನಗಳನ್ನು ಪ್ರಸ್ತಾಪ ಮಾಡುತ್ತಾರೆ ಎಂದರೆ ಅದು ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ವಿಷಯ. ಇಂದು ಜನಮಾನಸದಲ್ಲಿ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಶಿವಶರಣರ ವಚನಗಳನ್ನು ಶಿಕ್ಷಣದಲ್ಲಿ ಹೆಚ್ಚು ಬಳಕೆ ಮಾಡಿಕೊಳ್ಳುವುದರ ಮೂಲಕ ಮೌಲ್ಯಾಧಾರಿತ ಶಿಕ್ಷಣವನ್ನು ಮಕ್ಕಳಿಗೆ ಕೊಟ್ಟು ಸುಸಂಸ್ಕøತ ಸಮಾಜ ನಿರ್ಮಾಣ ಮಾಡಬಹುದು. ಶರಣು ವಿಶ್ವವಚನ ಫೌಂಡೇಷನ್ ಶಿಕ್ಷರಿಗಾಗಿಯೇ ವಚನ ಮಾಧುರ್ಯ ಏರ್ಪಡಿಸಿ ಅವರೂ ಕೂಡಾ ವಚನ ಅಧ್ಯಯನದಲ್ಲಿ ತೊಡಗಿಸಿಕೊಂಡು ಪ್ರಬುದ್ಧತೆಯನ್ನು ಸಾಧಿಸಲು ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಡಾ. ವಚನ ಕುಮಾರಸ್ವಾಮಿ ಬಸವಣ್ಣನವರನ್ನು ಕುರಿತು ರಚಿತವಾದಷ್ಟು ಸಾಹಿತ್ಯ ಯಾರನ್ನು ಕುರಿತು ಹುಟ್ಟಿಲ್ಲ. ಇವರಷ್ಟು ಪ್ರಭಾವ ಬೀರಿದ ಧಾರ್ಮಿಕ ಪುರುಷರನ್ನು ಯಾರನ್ನೂ ಕಾಣಲು ಸಾಧ್ಯವಿಲ್ಲ. ಇವರು ಜಗತ್ತು ಕಂಡ ಸಮಗ್ರ ಯುಗಪುರುಷ ಇವರ ಪ್ರಭಾವದಿಂದ ಕನ್ನಡ ನೆಲದ ಮೇಲೆ ಪ್ರಥಮ ಸಮಾಜ ಮತ್ತು ಧಾರ್ಮಿಕ ಆಂದೋಲನ ಹನ್ನೆರಡನೆಯ ಶತಮಾನದಲ್ಲಿ ಜರುಗಿತು ಎಂದರು. ನಂತರ ನಡೆದ ವಚನ ಮಾಧುರ್ಯ ಕಾರ್ಯಕ್ರಮದಲ್ಲಿ ಕಿರಣ್ ಎಚ್.ಪಿ, ರಶ್ಮಿ ಬಿ.ವಿ, ಶುಭ ಬಿ.ವಿ, ಶಾರದಾ. ಕೆ, ಫಾತಿಮಾ, ಎನ್. ಅಶ್ವಿನಿ, ಕೆ.ಇಂದಿರಾ, ಸುನಿತಾ ಅಂಗಡಿ ಕೊಡೇಕಲ್, ವೀಣಾಶ್ರೀ ಎಸ್, ಹೇಮಲತಾ ಪಿ. ಶಾರದಾ ಕಣಗೊಟಗಿ, ಶಿವಕುಮಾರ್ ಎಂ.ಎನ್, ಮಾಲಾ ಶ್ರೀಧರ್ ವಚನ ಗಾಯನ ಮಾಡಿದರು. ಕಾರ್ಯಕ್ರಮವನ್ನು ಸುಮಂಗಳ ಆರ್ ಮತ್ತು ಆರ್ ನರೇಂದ್ರ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಜಯದೇವಿತಾಯಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಅಮೇರಿಕಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಮೂರ್ತಿ ಹುಲ್ಲೆಕೆರೆ, ಮಸ್ಕತ್ ಬಸವಬಳಗದ ನೀಲಕಂಠರಾವ್ ಹಂಗರ್ಗೆ, ನಂದೀಶ್ವರ ನಂದು, ಮಾಲಂಗಿ ಸುರೇಶ್, ಶಿವಪುತ್ರಪ್ಪ, ಪುಟ್ಟಪ್ಪ, ನೀಲಾಂಬಿಕೆ ನಾಗರಾಜು, ಸರಸ್ವತಿ ರಾಮಣ್ಣ, ದೀಪಾ ತೊಲಗಿ, ಅನಿತಾ ನಾಗರಾಜ್, ಉಷಾ ನಾಗೇಶ್ ಉಪಸ್ಥಿತರಿದ್ದರು.

ಓಂ ಶ್ರೀ ಗುರುಬಸವಲಿಂಗಾಯ ನಮ:
ReplyDeleteವಿಶ್ವಗುರು ಬಸವಣ್ಣನವರ ಕಾಯಕವೇ ಕೈಲಾಸ ತತ್ವ ಸಕಲರಿಗೂ ಆದರ್ಶವಾಗಲಿ.
ಕಾಯಕವೇ ಕೈಲಾಸ
ReplyDeleteಲೇಖನ ಓದಿದ ಎಲ್ಲರಿಗೂ ಧನ್ಯವಾದಗಳು
ReplyDeleteವಚನಗಳು ಸಾಹಿತ್ಯ ಸಂಗೀತಕ್ಕೆ ಸೀಮಿತಗೊಳಿಸಿ ನೋಡುವದಕ್ಕಿಂತ ಕನ್ನಡ ನೆಲದ ಮೂಲಕ ಜರುಗಿದ ಜಗತ್ತಿನ ವಿಶಿಷ್ಟ ಚಳುವಳಿ.. ಶಿವಾನಂದ ಸ್ಥಾವರಮಠ
ReplyDeleteಬಸವೇಶ್ವರರ ಭೋಧನೆ, ಸಾಧನೆ, ಜೀವನ ಮಾರ್ಗ ಕಾಲಾತೀತ!
ReplyDeleteಮೌಢ್ಯದ ವಿರುದ್ಧ ಸತತ ಹೋರಾಟ ಮಾಡಿ ದೇವರ ಬಗ್ಗೆ ಹೆದರಿಕೆ ಹೋಗಲಾಡಿಸಿದ ಅಣ್ಣನವರ ಪ್ರಚಾರ ಮಾಡುತ್ತಿರುವುದು ಸ್ವಾಗತಾರ್ಹ
ReplyDelete