Monday, August 24, 2020

ಕ್ರಾಂತಿಕಲ್ಯಾಣ - ಬಿ.ಪುಟ್ಟಸ್ವಾಮಯ್ಯ

 ಕ್ರಾಂತಿಕಲ್ಯಾಣ


ಬಿ.ಪುಟ್ಟಸ್ವಾಮಯ್ಯರವರ ವಿರಚಿತ ಕ್ರಾಂತಿಕಲ್ಯಾಣ ಪುಸ್ತಕ ಸುವರ್ಣ ಕರ್ನಾಟಕ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿಶೇಷ ಯೋಜನೆಯಡಿಯಲ್ಲಿ ಖರೀದಿಸಿದ ಪುಸ್ತಕ

ಇದು ಮಹಾಮಾನವತಾವಾದಿ ಶ್ರೀ ಬಸವೇಶ್ವರರ ಜೀವನ ಸಾಧನೆಗಳನ್ನು ಪರಿಚಯಿಸುವ ಕಾದಂಬರಿ ಮಾಲಿಕೆಯಲ್ಲಿ ಆರನೆಯದು.

ಮುನ್ನುಡಿಯನ್ನು ಖ್ಯಾತ ಸಾಹಿತಿ ಮತ್ತು ವಿಮರ್ಶಕ ಎಸ್. ವಿದ್ಯಾಶಂಕರ್ ರವರು ಬರೆದಿದ್ದರೆ ಬೆನ್ನುಡಿಯನ್ನು ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪುರವರು ಬರೆದಿದ್ದಾರೆ.

1965ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿ ರಾಜಗೃಹದ ರಹಸ್ಯ, ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ, ಮಂಗಳವೇಡೆಯ ಅಗ್ನಿದಾಹ, ಮಾನವನು ದಾನವನಾದಾಗ, ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ, ಮಹಾಪ್ರಸ್ಥಾನ ಎಂಬ ಆರು ಅಧ್ಯಾಯಗಳನ್ನು ಒಳಗೊಂಡಿದ್ದು, ಅಂತಿಮವಾಗಿ ಉಪಸಂಹಾರ ಹೊಂದಿರುತ್ತದೆ.

ಕಾದಂಬರಿಯಲ್ಲಿ ಬರುವ ಎರಡು ಸಾಲು ಉಲ್ಲೇಖ

“ಜೀವಾತ್ಮ ಪರಮಾತ್ಮರು ಒಂದೇ ಎಂಬ ಭಾವದಿಂದ ನೆನಪು ಅಳಿದಾಗ ನೆನೆ ಎಂದರೆ ನಾನು ಯಾರನ್ನು ನೆನೆಯಲಿ, ಅರಿಯಬೇಕಾದ ವಸ್ತುವಾಗಲಿ, ಅರಿಯುವವನಾಗಲಿ ಇಲ್ಲದ್ದರಿಂದ ಈಗ ನನ್ನ ಕಾಯವೇ ಕೈಲಾಸ, ಮನಸ್ಸೇ ಲಿಂಗ, ತನುವೇ ಸಜ್ಜೆ, ನೆನೆಯುವ ವಸ್ತುವಿಲ್ಲ, ನೆನೆಯುವ ಭಕ್ತನಿಲ್ಲ, ಆತ್ಮನಲ್ಲಿ ಬ್ರಹ್ಮವು, ಬ್ರಹ್ಮನಲ್ಲಿ ಆತ್ಮವು ಬೆರೆತು, ಎರಡಾಗಿದ್ದು ಒಂದೇ ಆಯಿತು.

ಬೆಂಗಳೂರಿನ ಪ್ರಿಯದರ್ಶಿನಿ ಪ್ರಕಾಶನ ಹೊರತಂದಿರುವ ಈ ಪುಸ್ತಕದ ಬೆಲೆ ರೂ. 450 ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ ಪುಸ್ತಕ ತರಿಸಿಕೊಳ್ಳಬಹುದು

9901137948

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ, ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು


 

 

No comments:

Post a Comment