ಮೈಸೂರು : ವಿದ್ಯಾರ್ಥಿಗಳು ವಿದ್ಯಾವಂತರಾಗುವುದರ ಜೊತೆಗೆ ವಿನಯವಂತರಾಗಲು ಶಿಕ್ಷಕರು ಮತ್ತು ಪೋಷಕರು ಹೆಚ್ಚು ಆಸಕ್ತಿ ವಹಿಸಬೇಕು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಕುಂಬಾರಕೊಪ್ಪಲಿನ ವೈಶಾಲಿ ವಿದ್ಯಾಸಂಸ್ಥೆ ಮೈಸೂರಿನ ಪುರಭವನದಲ್ಲಿ ಏರ್ಪಡಿಸಿದ್ದ ೪೨ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಬಸವಣ್ಣನವರ ವಚನವಾದ ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲಸಂಗಮದೇವನ ಎಂಬAತೆ ನಾವು ವಯಸ್ಸಾದ ಮೇಲೆ ದೇವರನ್ನು ನೂರು ಸಲ ನೆನೆಯುವುದಕ್ಕಿಂತ ವಯಸ್ಸಿರುವಾಗ ಕೇವಲ ಮೂರು ಸಲ ನೆನೆಯುವುದಕ್ಕೆ ಸಮ. ಆರೋಗ್ಯದ ಬಗ್ಗೆ ಹಿಂದಿಗಿAತಲೂ ಇಂದು ಕಾಳಜಿ ಹೆಚ್ಚಾಗಿದ್ದು, ದೇಹವನ್ನು ರೋಗ ಬಾರದಂತೆ ತಡೆಗಟ್ಟುವುದು ಮಾತ್ರ ಆರೋಗ್ಯವಲ್ಲ. ಪ್ರತಿಯೊಬ್ಬರೂ ಸಾಮಾಜಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಪರಿಪೂರ್ಣ ಆರೋಗ್ಯವಂತ ವ್ಯಕ್ತಿಯಾಗಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ನಾಡು ಮತ್ತು ದೇಶವನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮೈಸೂರು ಮಾನಸ ಗಂಗೋತ್ರಿಯ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎನ್.ಹೆಗಡೆ, ಉದ್ಯಮಿ ಬಿ.ಸುರೇಶ್, ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ವಿ.ಯಶೋಧಮ್ಮ, ಮುಖ್ಯಶಿಕ್ಷಕ ಈರೇಗೌಡ ಉಪಸ್ಥಿತರಿದ್ದರು.

No comments:
Post a Comment