*ಸ್ವಚ್ಛ ಕನ್ನಡ ಭಾಷಾ ಅಭಿಯಾನ*
ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಎಲ್ಲರೂ ಕನ್ನಡವನ್ನು ಸರಿಯಾಗಿ ಬಳಕೆ ಮಾಡುವ ಸುದುದ್ದೇಶದಿಂದ ಸ್ವಚ್ಛ ಕನ್ನಡ ಭಾಷಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ವಿವಿಧ ವಾಹನ, ಅಂಗಡಿ, ಮನೆ, ಆಸ್ಪತ್ರೆ, ಕಛೇರಿ, ಮಾಲ್ ಮುಂತಾದ ಕಡೆ ಕನ್ನಡದಲ್ಲಿ ನಾಮಫಲಕ ಹಾಕುವಾಗ ಕನ್ನಡ ಬರೆವಣಿಗೆಗೆ ಸಂಬಂಧಿಸಿದಂತೆ ಅನೇಕ ತಪ್ಪುಗಳಾಗುತ್ತಿದ್ದು, ಇತರರು ಅದನ್ನು ನೋಡಿ ಅನುಕರಣೆ ಮಾಡುತ್ತಿರುವುದರಿಂದ ಕನ್ನಡ ಪದ ಬಳಕೆಯಲ್ಲಿ ಲೋಪವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಸದುದ್ದೇಶದಿಂದ ಅನೇಕ ಸಮಾನ ಮನಸ್ಕರ ಸಹಯೋಗದೊಂದಿಗೆ ಸ್ವಚ್ಛ ಕನ್ನಡ ಭಾಷಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ವಿಶ್ವದಾದ್ಯಂತ ಕನ್ನಡವನ್ನು ಬರೆವಣಿಗೆಯಲ್ಲಿ ಬಳಕೆ ಮಾಡುವವರು ಸರಿಯಾದ ಕನ್ನಡದ ಬರೆವಣಿಗೆಗೆ ಸಂಬಂಧಿಸಿದಂತೆ 9901137948 ಮೊಬೈಲ್ ನಂಬರನ್ನು ಸಂಪರ್ಕಿಸಬಹುದು. ಯಾವುದೇ ರೀತಿಯ ನಾಮಫಲಕ, ಆಹ್ವಾನ ಪತ್ರಿಕೆ ಮತ್ತು ವಿವಿಧ ಪುಸ್ತಕಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಉಚಿತವಾಗಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ತಿಳಿಸಿದ್ದಾರೆ.
No comments:
Post a Comment