Sunday, August 22, 2021

ತುಲನೆ

 ತುಲನೆ...(comparison)


ರಾಮ ಒಂದು ತಾಸಿನಲ್ಲಿ  10km ದೂರದ ದಾರಿ ನಡೆದನು..

ಭೀಮನು ಆದೆ 10km ದಾರಿಯನ್ನು ಒಂದೂವರೆ ಗಂಟೆಯಲ್ಲಿ ನಡೆಯುತ್ತಾನೆ..


ಹಾಗಾದರೆ ಈ ಇಬ್ಬರಲ್ಲಿ ಯಾರು ಹೆಚ್ಚು ಆರೋಗ್ಯವಂತರು...?ಯಾರು ಜಾಸ್ತಿ fit....?

ಎಲ್ಲರ ಉತ್ತರ... ರಾಮನೇ ...

ಅಲ್ವಾ...?


ಈಗ...ರಾಮನು ಆ 10km ನಡೆದ ದಾರಿ ಒಂದು ಸಪಾ ಟಾ ದ smooth road..

ಭೀಮನು ನಡೆದ ಆ 10km ದಾರಿ ,ಕಲ್ಲು ಬಂಡೆಗಳ ನಡುವೆ, ಮುಳ್ಳು ಕಲ್ಲು ಗಳ ... ತಗ್ಗು ದಿಣ್ಣೆ ಗಳಿಂದ ಕೂಡಿದ ದಾರಿ..

ಈಗ..ಎಲ್ಲರ ಉತ್ತರ..

Bheem is more fit...


ಈಗ ನೋಡಿ..

ರಾಮನ ವಯಸ್ಸು 50ದಾಟಿದೆ ಮತ್ತು ಭೀಮನ ವಯಸ್ಸು 25ವರ್ಷ ಇದೆ..

ಈಗ ಹೇಳಿ... ಯಾರು ಜಾಸ್ತಿ fit...?

ಎಲ್ಲರೂ ರಾಮನ ಕಡೆ ಕೈ ಮಾಡಿ ತೋರಿಸುವರು..

ಮತ್ತೆ...ನೋಡಿ..

ರಾಮನ ತೂಕ 45ಕೆಜಿ ಆದರೆ ಭೀಮನ ತೂಕ 140ಕೆಜಿ..

ಈಗ ಎಲ್ಲರ ಉತ್ತರ..

ಭೀಮ..ಏಕೆಂದರೆ 140ಕೆಜಿ ಭಾರ ತೂಕ ಇದ್ದರೂ ಕೇವಲ ಒಂದೂವರೆ ಗಂಟೆಯಲ್ಲಿ 10km ದಾರಿ ನಡೆಯುವದು.. ಸರಳ ವೆ..?

So.. Bheem is more fit..

ಇದು ಎಲ್ಲರ ಮತ..

ಅಲ್ವೇ..?


ಮಿತ್ರರೇ...ಜೀವನವೂ ಹೀಗೆಯೇ..

ನಾವು ಹೇಗೆ ಒಬ್ಬರ ಬಗ್ಗೆ ಹೆಚ್ಚು ಹೆಚ್ಚಿನ ಮಾಹಿತಿ ಪಡೆಯುತ್ತೇವೆ ಯೊ.. ಹಾಗೆ ಅವರ ಗುಣ ದೋಷಗಳನ್ನೂ ಕೂಡ.. ಆಗ ಅವರ ಬಗ್ಗೆ ನಮ್ಮ ಅಭಿಪ್ರಾಯ change ಆಗ್ತಾನೆ ಹೋಗುತ್ತದೆ..

So.. ಯಾರನ್ನೂ ನಂಬುವ ಮೊದಲು , ಯಾರ ಬಗ್ಗೆಯೂ comment ಮಾಡುವ ಮೊದಲು , ಸ್ಪಲ್ಪ ವಿಚಾರ ಮಾಡಿ ಕಮೆಂಟ್ಸ್ ಪಾಸ ಮಾಡಿದರೆ ಒಳಿತು..ವಾಸ್ತವಿಕತೆಯ ಅರಿವಿನೊಂದಿಗೆ comments ಮಾಡಿದರೆ ಒಳ್ಳೆಯದು..

ಏಕೆಂದರೆ..

ಪ್ರತಿಯೊಬ್ಬರ ಜೀವನದಲ್ಲಿ ಸಿಗುವ ಅವಕಾಶಗಳು ಬೇರೆ ಬೇರೆ..

ಪ್ರತಿಯೊಬ್ಬರ ಆಯುಷ್ಯ ಕೂಡ ಬೇರೆ..

ಪ್ರತಿಯೊಬ್ಬರ ಸಾಧನೆ.../ಸಂಪತ್ತು ಕೂಡ ಭಿನ್ನ..

ಪ್ರತಿಯೊಬ್ಬರ ಸಮಸ್ಯೆ/ ಉಪಾಯ ಗಳೂ ಬೇರೆ ಬೇರೆ..

ಪ್ರತಿಯೊಬ್ಬರ ವಿಚಾರಗಳೂ ಭಿನ್ನ.. ಭಿನ್ನ..

So.. ನಮ್ಮ ಆರೋಗ್ಯದ, ಸಂಪತ್ತಿಯ, ಪರಿಸ್ಥಿತಿಯ ಅಥವಾ ಜೀವನದ ಶ್ರೇಷ್ಟತೆಯ ತುಲನೆ..(comparison) ಮಾಡುವದು ಬೇಡ..

ನೀವು ಸರ್ವೋತ್ತಮ ರಾಗಿದ್ದೀರಿ,

ನೀವು ಹೇಗೆ ಜೀವಿಸಿತ್ತಿರೋ, ಹಾಗೆಯೇ ಜೀವಿಸಿ, ಅದರಲ್ಲೇ ಉತ್ತಮರಾಗಿರಿ..

ನಿರೋಗಿ ಆಗಿ ಜೀವಿಸಿ..

ಸಮಾಧಾನ ಆಗಿ ಜೀವಿಸಿ.,

ನಗುತ್ತಾ ಇರಿ..

At least ಪ್ರಯತ್ನ ಆದರೂ ಮಾಡಿ..

ಆದರೆನಿಮ್ಮ ಜೀವನ ಇನ್ನೊಬ್ಬರ ಜೀವನದ ಜೊತೆ ತುಲನೆ ಮಾಡಬೇಡಿ..


ಇದುವೇ ಜೀವನ.. ಇದು ಜೀವನ..


ಕೃಪೆ:

Dr. ಉದಯ ಪಾಟೀಲ,

ನೇತ್ರ ತಜ್ಞ ರು,

ಕಲಬುರ್ಗಿ..

mobile..9342018762...

No comments:

Post a Comment