Wednesday, March 10, 2021

ಪ್ರಚಾರೋಪನ್ಯಾಸ ಮತ್ತು ಮಹಿಳಾ ದಿನಾಚರಣೆ

         ಕರ್ನಾಟಕ ರಾಜ್ಯ ಮುಕ್ತ ವಿವಿಯ ಅಕ್ಕಮಹಾದೇವಿ ಅಧ್ಯಯನ ಮತ್ತು ಸಂಶೋಧನಾ ಪೀಠ ಮತ್ತು ಶರಣು ವಿಶ್ವವಚನ ಫೌಂಡೇಷನ್ ಸಹಯೋಗದೊಂದಿಗೆ ನಡೆದ ‌ಪ್ರಚಾರೋಪನ್ಯಾಸ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮ     

ಮೈಸೂರು : ಕರ್ನಾಟಕದ ಸಂಕ್ರಮಣ ಕಾಲ ಹನ್ನೆರಡನೆಯ ಶತಮಾನ ಎಂದು ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಿ. ಮಾಲತಿ ಹೇಳಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು ಇಲ್ಲಿನ ಅಕ್ಕಮಹಾದೇವಿ ಅಧ್ಯಯನ ಮತ್ತು ಸಂಶೋಧನಾ ಪೀಠ ಹಾಗೂ ಶರಣು ವಿಶ್ವವಚನ ಫೌಂಡೇಷನ್, ಮೈಸೂರು ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕಾವೇರಿ ಸಭಾಂಗಣದಲ್ಲಿ ಪ್ರಚಾರೋಪನ್ಯಾಸ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳಾ ದಿನಾಚರಣೆ ಎಂದರೆ ನಮಗೆ ನೆನಪಾಗುವುದು ಅಕ್ಕಮಹಾದೇವಿ. ಆಕೆ ರಾಜನನ್ನು ಎದುರಿಸಿ ಆಧ್ಯಾತ್ಮಿಕತೆಯ ಕಡೆಗೆ ಒಲವನ್ನು ಇಟ್ಟುಕೊಂಡು ಯಾವುದೇ ಸ್ತುತಿಗೆ ಹಿಗ್ಗದೆ, ನಿಂದನೆಗಳಿಗೆ ಕುಗ್ಗದೆ ಎಲ್ಲಾ ಕಾಲದ ಮಹಿಳೆಯರಿಗೆ ಆತ್ಮಸ್ಥೆöÊರ್ಯ ತುಂಬುವ ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ಹೆಣ್ಣನ್ನು ಗೌರವಯುತವಾಗಿ ಕಂಡ ಶರಣರು ಕಂದಾಚಾರ ಮೂಢನಂಬಿಕೆಗಳನ್ನು ಆಚರಿಸದಂತೆ ಕ್ರಾಂತಿಕಾರಿ ನಡೆಗಳನ್ನು ಇಟ್ಟು ವಚನದಂತೆ ಬದುಕಿದರು. ನಂತರ ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನತೆಯ ಅವಕಾಶವನ್ನು ಕೊಡುವುದರ ಮುಖಾಂತರ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಬಲರಾಗಲು ಕಾರಣೀಭೂತರಾದರು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಲಿಂಗರಾಜ ಗಾಂಧಿ ಜಗತ್ತಿನಲ್ಲಿ ಅಂಧಕಾರ ಕವಿದಿದ್ದಾಗ ವಚನ ಚಳುವಳಿ ವಚನಗಳ ಮೂಲಕ ಬೆಳಕು ನೀಡಿತು. ಮಹಿಳೆ ಯಾವುದೇ ಸಮಾಜದ, ದೇಶದ, ಸಂಸಾರದ ಕೇಂದ್ರಬಿAದು. ಮಹಿಳೆ ಮತ್ತು ಪುರುಷ ಎಂಬ ಭೇದವಿಲ್ಲದಿದ್ದಾಗ ಮಾತ್ರ ಸಮಾಜದ ಸಾಮರಸ್ಯದ ಬದುಕು ಸಾಧ್ಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಕಮಹಾದೇವಿ ಅಧ್ಯಯನ ಮತ್ತು ಸಂಶೋಧನಾ ಪೀಠದ ಸಂಯೋಜಕರಾದ ಡಾ. ಹೆಚ್. ರಾಜೇಶ್ವರಿ ೨೦೧೨ ರಿಂದ ಮುಕ್ತ ವಿ.ವಿ ಯಲ್ಲಿ ಪ್ರಾರಂಭವಾದ ಅಕ್ಕಮಹಾದೇವಿ ಅಧ್ಯಯನ ಪೀಠ ಅಂದಿನಿAದ ಇಂದಿನವರೆಗೆ ೬ ವಿಚಾರ ಸಂಕಿರಣ ಹಾಗೂ ಅನೇಕ ಪ್ರಚಾರೋಪನ್ಯಾಸವನ್ನು ನಡೆಸಿಕೊಂಡು ಬಂದಿದ್ದು, ೨೦೨೦ರಿಂದ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಚೇತನದ ಸಂಕೇತವಾಗಿರುವ ಅಕ್ಕಮಹಾದೇವಿಯವರ ಬಗ್ಗೆ ಪ್ರಚಾರೋಪನ್ಯಾಸವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಅಕ್ಕಮಹಾದೇವಿಯ ಬಗ್ಗೆ ಪ್ರಚಾರೋಪನ್ಯಾಸ ನೀಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಅಕ್ಕನ ಜೀವನ ಚರಿತ್ರೆಯನ್ನು ಬಾಲ್ಯ ಜೀವನ, ಉಡುತಡಿಯಿಂದ ಕಲ್ಯಾಣದೆಡೆಗೆ, ಕಲ್ಯಾಣದಿಂದ ಕದಳಿ ಬನದ ಕಡೆಗೆ ಎಂಬ ಮೂರು ವಿಭಾಗಗಳನ್ನಾಗಿ ವಿಂಗಡಿಸಿ ಅಕ್ಕನ ರೋಚಕ ಘಟನೆಗಳು ಮತ್ತು ವಚನಗಳನ್ನು ಸೋದಾಹರಣವಾಗಿ ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಡೀನ್ ಶೈಕಣಿಕ ಅಶೋಕ್ ಕಾಂಬ್ಳೆ, ಡಾ. ಷಣ್ಮುಖ ಡಾ. ಶರಣಮ್ಮ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಅಂತರರಾಷ್ಟಿçÃಯ ಅಂತರ್ಜಾಲ ಸಂಚಾಲಕ ಪಿ.ವಿ. ರುದ್ರೇಶ್, ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಉಪಾಧ್ಯಕ್ಷ ಉಮಾಪತಿ, ಕಾರ್ಯದರ್ಶಿ ಅನಿತಾ ನಾಗರಾಜು, ಸಂಗೀತ ಶಿಕ್ಷಕ ಕಿರಣ್, ಉಷಾ ನಾಗೇಶ್, ಅನ್ನಪೂರ್ಣ, ಪಾರ್ವತಮ್ಮ, ಮೀನಾಕ್ಷಿ, ಇಂದ್ರಾಣಿ, ಲತಾ ಉಮಾಪತಿ ಉಪಸ್ಥಿತರಿದ್ದರು.

































                 ಹಲೋ ಮೈಸೂರು ಪತ್ರಿಕೆಯಲ್ಲಿ


                        ಪ್ರಜಾನುಡಿ ಪತ್ರಿಕೆಯಲ್ಲಿ


                       ವಿಜಯಕರ್ನಾಟಕ ಪತ್ರಿಕೆಯಲ್ಲಿ

                         ಮೈಸೂರು ಮಿತ್ರ ಪತ್ರಿಕೆಯಲ್ಲಿ


                      ಆಂದೋಲನ ಪತ್ರಿಕೆಯಲ್ಲಿ

ಕನ್ನಡಪ್ರಭ     ಪತ್ರಿಕೆಯಲ್ಲಿ





No comments:

Post a Comment