ಬೇಗೂರು:- ಮನದಲ್ಲಿನ ಮಲಿನತೆ ತೊಳೆಯಲು ಶರಣರ ವಚನಗಳು ಸಹಕಾರಿ ಎಂದು ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಗುಂಡ್ಲುಪೇಟೆ ತಾಲ್ಲೂಕು ಬೇಗೂರಿನ ಬಳಿಯ ಬೆಳಚಲವಾಡಿ ಗ್ರಾಮದಲ್ಲಿ ಮನೆಮನೆಗೆ ಮನಮನಗಳಿಗೆ ವಚನಸಂದೇಶ ಕಾರ್ಯಕ್ರಮ ಕುರಿತು ಮಾತನಾಡಿ ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ಕಸತುಂಬಿ, ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿದಾಗ ಮನೆಯಲ್ಲಿ ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ ಎಂಬ ಸಂದೇಹ ಬರುತ್ತದೆ ನಮ್ಮ ಮನೆ ಶುದ್ಧವಾಗಿದ್ದರೆ ಅಲ್ಲಿ ಮನೆಯೊಡೆಯನಿದ್ದಾನೆ ಎಂಬುದು ತಿಳಿಯುತ್ತದೆ ಹಾಗೆಯೇ ಮನಶುದ್ಧವಾಗಿದ್ದರೆ ಅಲ್ಲಿ ಪರಮಾತ್ಮ ನೆಲೆಗೊಳ್ಳುತ್ತಾನೆ ಆದುದರಿಂದ ಪ್ರತಿಯೊಬ್ಬರೂ ಕೂಡ ವಚನಗಳನ್ನು ಒಪ್ಪಿ ಅಪ್ಪಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಮನಶುದ್ಧವಾಗುತ್ತದೆ ಆದುದರಿಂದಲೇ ಪ್ರಸ್ತುತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾವು ಯಾವುದೇ ಕೆಲಸವನ್ನು ವಾರ, ದಿನವೆಂದು ಪರಿಗಣನೆಗೆ ತೆಗೆದುಕೊಳ್ಳದೆ ಕಾಯಕದ ಬಗ್ಗೆ ಗೌರವ ನೀಡಿ ಅದರಲ್ಲಿ ನಿರತರಾದರೆ ನಾವು ಅಬಿವೃದ್ಧಿ ಹೊಂದಲು ಸಾಧ್ಯ ಆದುದರಿಂದ ನಾವು ದಿನಶ್ರೇಷ್ಠವೆಂಬ ದುರಾಚಾರಿಯ ಮುಖವ ನೋಡಲಾಗದು ಎಂಬ ಬಸವಣ್ಣನವರ ವಚನದ ಆಶಯದಂತೆ ನಡೆದುಕೊಂಡಾಗ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಚಾಮರಾಜನಗರ ಜಿಲ್ಲಾಧ್ಯಕ್ಷ ರಾಜಶೇಖರಮೂರ್ತಿ, ಬೇಗೂರು ಹೋಬಳಿ ಘಟಕದ ಅಧ್ಯಕ್ಷ ರವಿನಟೇಶ್, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಗೌರವ ಕಾರ್ಯದರ್ಶಿ ಪಂಪಾಪತಿ, ಪ್ರಚಾರ ಸಮಿತಿ ಅಧ್ಯಕ್ಷ ಪ್ರಭುಸ್ವಾಮಿ, ಗೌಡಿಕೆ ರಾಜಪ್ಪನ ಮಹದೇವಪ್ಪ, ಪಟೇಲ್ ಮಹದೇವಪ್ಪ, ಬಿ.ಕೆ.ಪರಶಿವಮೂರ್ತಿ, ಮಂಜುನಾಥ್, ಪುರುಷೋತ್ತಮ್, ರಾಜೇಶ್, ಸಂತೋಷ್‍ಕುಮಾರ್, ಅಭಿಷೇಕ್, ಶಿವಾರ್ಚಕ ಚಂದ್ರಪ್ಪ ಉಪಸ್ಥಿತರಿದ್ದರು.
==============================================
ಮೈಸೂರು :- ವಚನಗಳಿಗೆ ಅಯಸ್ಕಾಂತೀಯ ಗುಣ ಇದೆ ಎಂದು ಕಲಬುರಗಿಯ ಸಹಾಯಕ ಪ್ರಾಧ್ಯಾಪಕ ಡಾ.ನಾಗಪ್ಪ ಗೋಗಿ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಮೈಸೂರಿನ ರಾಮಾನುಜ ರಸ್ತೆಯ ವೈಸರಾಯ್ ಕಂಫರ್ಟ್‍ನಲ್ಲಿ ಏರ್ಪಡಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಶರಣರ ವಿಚಾರಧಾರೆ ಎಂಬ ವಿಷಯದ ಬಗ್ಗೆ ಮಾತನಾಡಿ ಚಿತ್ರದಂತೆ ಚಾರಿತ್ರ್ಯ ಇರಬೇಕಾದರೆ ವಚನಗಳನ್ನು ಆಧ್ಯಯನ ಮಾಡಬೇಕು, ಬಸವಣ್ಣನವರು ದನಗಾಹಿ ರಾಮಣ್ಣ ಮತ್ತು ಕುರುಬ ಗೊಲ್ಲಾಳ ಎಂಬ ವ್ಯಕ್ತಿಗಳಿಗೂ ಕೂಡ ಶಿಕ್ಷಣವನ್ನು ನೀಡಿ ಅವರು ಜ್ಞಾನವನ್ನು ಪಡೆಯುವಂತೆ ಸಾಕ್ಷರರನ್ನಾಗಿ ಮಾಡಿ ಅನೇಕ ವಚನಗಳನ್ನು ರಚಿಸಲು ಕಾರಣರಾದರು. 12 ನೇ ಶತಮಾನದ ವಚನಕಾರರಲ್ಲಿದ್ದ ಸಾಮಾಜಿಕ ಪ್ರಜ್ಞೆ ಇಂದಿನ ಅಕ್ಷರಸ್ಥರಲ್ಲಿ ಮನೆಮಾಡಿದ್ದೇ ಆದರೆ ಇಡೀ ದೇಶವೇ ನೂರಕ್ಕೆ ನೂರರಷ್ಟು ಸಾಕ್ಷರ ದೇಶವಾಗಬಹುದು. ವಚನಗಳ ನಾಡಿನ ಹೆಬ್ಬಾಗಿಲಾದ ಕಲಬುರಗಿಯಿಂದ ಮೈಸೂರಿಗೆ ಬರಬೇಕಾದರೆ ವಚನ ಸಂಬಂಧವೇ ಕಾರಣ. ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಸರ್ವರ ಸಮಾನತೆಗಾಗಿ ಶ್ರಮಿಸುತ್ತಿರುವ ಶರಣು ವಿಶ್ವವಚನ ಫೌಂಡೇಷನ್ ಚಟುವಟಿಗೆಗಳು ಅನುಕರಣೀಯ ಎಂದರು. ಡಾ.ಗವಿಸಿದ್ದಪ್ಪ ಎಚ್ ಪಾಟೀಲ ಮಾತನಾಡಿ ಮೌಡ್ಯತೆಯ ನಿವಾರಣೆಗೆ ಹಾಗೂ ಸಂಸ್ಕಾರಯುತ ಜೀವನಕ್ಕೆ ವಚನಗಳು ಸಹಕಾರಿ ಎಂದರು. ಡಾ.ಜಯದೇವಿ ಗಾಯಕವಾಡ ಮಾತನಾಡಿ ಅಜಾÐನದ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ದೀವಿಗೆಯನ್ನು ಹಚ್ಚಿ ತಮ್ಮನ್ನು ತಾವು ಅರಿತುಕೊಳ್ಳಲು ಶರಣರ ವಚನಗಳು ಸಹಾಯಕವಾಗುತ್ತವೆ ಎಂದರು. ಡಾ.ರವೀಂದ್ರ ಕುಂಬಾರ ಮಾತನಾಡಿ ಪ್ರಜಾÐ ಜಾಗೃತಿಯ ಬೆಳಕೇ ವಚನಗಳು ಎಂದರು. ಡಾ.ಬಿ.ನಿರ್ಮಲ ಮಾತನಾಡಿ ಶೋಷಣೆಗೆ ಒಳಗಾಗಿದ್ದ ಸ್ತ್ರೀಯರನ್ನು ಪುಣ್ಯ ಸ್ತ್ರೀಯರನ್ನಾಗಿ ರೂಪಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ ಎಂದರು. ಡಾ.ರೂಪ ತಾಳಮಡಗಿ ಮಾತನಾಡಿ ಸಮಾಜದಿಂದ ತಿರಸ್ಕರಿಸಲ್ಪಟ್ಟವರೆಲ್ಲರಿಗೂ ವೇದಿಕೆ ಕಲ್ಪಿಸಿ ಅವರಿಗೆ ಆತ್ಮವಿಶ್ವಾಸ ತುಂಬಿ ಅವರ ಪ್ರತಿಭೆ ಅನಾವರಣಗೊಳಿಸಲು ವಚನಯುಗ ಸಹಾಯಕವಾಯಿತು ಎಂದರು. ಡಾ. ಜಿ ಕಾವ್ಯಶ್ರೀ ಮಾತನಾಡಿ ವಚನಗಳ ಅಧ್ಯಯನದಿಂದ ಅರಿವಿನ ಶಿಕ್ಷಣ ದೊರೆಯುತ್ತದೆ ಎಂದರು. ಡಾ.ಬಸಮ್ಮ ಎಸ್ ಗಂಗನಳ್ಳಿ ಮಾತನಾಡಿ ಶರಣರು ಅನುಭವಮಂಟಪದ ಮೂಲಕ ಜಾತಿ, ಮತ, ಪಂಥ, ಧರ್ಮ ಮುಂತಾದ ಭೇದ ಭಾವಗಳನ್ನು ಮೀರಿದಂತೆ ಸಮಾನತೆಯ ಶಿಕ್ಷಣ ನೀಡಿದರು ಎಂದರು. ಎಸ್.ಆರ್.ಹೇಮಾವತಿ ಮಾತನಾಡಿ ನಡೆ ನುಡಿಗಳಲ್ಲಿನ ಅಂತರವನ್ನು ನೀಗಿಸಿ ಉತ್ತಮ ವ್ಯಕ್ತಿತ್ವ ಕಟ್ಟಿಕೊಳ್ಳಲು ವಚನಗಳು ಸಹಾಯಕ ಎಂದರು. ನಾಗಮ್ಮ ಎಚ್.ಭಂಗರಗಿ ಮಾತನಾಡಿ ಶರಣರ ಲೋಕದೃಷ್ಟಿ ವಿಶಾಲವಾದದ್ದು ಈ ಲೋಕದಲ್ಲಿಯೇ ಸ್ವರ್ಗ ನರಕಗಳನ್ನು ಕಂಡವರು ಶರಣರು ಎಂದು ಹೇಳಿದರು. ಎಸ್.ಪಿ.ಯಶೋಧ ಮಾತನಾಡಿ ಶರಣರದು ವಾಸ್ತವ ಮತ್ತು ವೈಚಾರಿಕ ದೃಷ್ಟಿಕೋನ, ಶರಣರು ದೇಹವನ್ನೇ ದೇವಾಲಯವನ್ನಾಗಿಸಿಕೊಂಡು ದೇಹಕ್ಕೆ ಮಹತ್ವ ಕೊಟ್ಟರು ಎಂದರು. ಅಂತಿಮವಾಗಿ ಖಾಜಾವಲಿ ಈಚನಾಳ ಮಾತನಾಡಿ ವ್ಯಕ್ತಿಗೆ ದೈಹಿಕ ವಯಸ್ಸಿಗಿಂತ ಮಾನಸಿಕ ಪ್ರಬುದ್ಧತೆ ಮುಖ್ಯ ಅದಕ್ಕೆ ವಚನಗಳು ಸಹಕಾರಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕಿ ಕಾವೇರಿ, ಮಾಧ್ಯಮ ಸಂಚಾಲಕ ನಾಗೇಂದ್ರ, ಆರ್ ಗುರುಸ್ವಾಮಿ, ಭಾಸ್ಕರ್, ಗಿರಿಜೇಶ್, ವಚನ, ನಿಜಗುಣ ಉಪಸ್ಥಿತರಿದ್ದರು.
========================================================================
ಮೈಸೂರು:- ಸರ್ವಸಮಾನತೆ, ಸರ್ವೋದಯ ಹಾಗೂ ಅಸ್ಪøಶ್ಯತೆ ನಿವಾರಣೆ ಮಾಡುವುದೇ ವಚನಕಾರರ ಆಶಯವಾಗಿತ್ತು ಎಂದು ಸಾಹಿತಿ ನಗರ್ಲೆ ಶಿವಕುಮಾರ್ ತಿಳಿಸಿದರು. ಮೈಸೂರಿನ ಆರ್ಟ್‍ಗ್ಯಾಲರಿಯಲ್ಲಿ ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಮತ್ತು ಶರಣು ವಿಶ್ವವಚನ ಫೌಂಡೇಶನ್ ಆಯೋಜಿಸಿದ್ದ ಶ್ರಾವಣ ಶರಣ ಸಂಜೆ ಕಾರ್ಯಕ್ರಮದಲ್ಲಿ ಬುದ್ಧಿಜೀವಿ ಉರಿಲಿಂಗಪೆದ್ಧಿ ಎಂಬ ವಚನಕಾರರ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು ಕಳ್ಳನಾಗಿದ್ದ ಪೆದ್ದಣ್ಣ ಎಂಬ ಅಸ್ಪøಶ್ಯನನ್ನು ಶರಣ ಉರಿಲಿಂಗಪೆದ್ದಿಯಾಗಿ ರೂಪಿಸಿ ತಮ್ಮ ಉತ್ತಾರಾಧಿಕಾರಿಯನ್ನಾಗಿ ನೇಮಿಸಿದವರು ಉರಿಲಿಂಗದೇವರು. ಚೋರತನ ಬಿಟ್ಟು ಶರಣನಾದ ಮೇಲೆ ಉರಿಲಿಂಗಪೆದ್ದಿ ಕನ್ನಡ ಮತ್ತು ಸಂಸ್ಕøತದಲ್ಲಿ ಅಗಾಧ ಪಾಂಡಿತ್ಯ ಪಡೆದು 366 ವಚನಗಳನ್ನು ರಚಿಸಿದರು. ಶರಣರು ತಮ್ಮ ಗಳಿಕೆಯನ್ನು ಇಂದ್ರಿಯ ಸುಖಕ್ಕಾಗಿ ವಿನಿಯೋಗಿಸದೆ ಪಾರಾರ್ಥಕ್ಕಾಗಿ ಉಪಯೋಗಿಸಬೇಕು ಇದರಿಂದ ಸಮಾಜದ ಸಂಪರ್ಕ ಹೆಚ್ಚಾಗಿ ವ್ಯಕ್ತಿಯ ವಿಕಾಸವಾಗುವುದರ ಜೊತೆಗೆ ಅತ್ಮೋದ್ಧಾರಕವಾಗುವುದು ಹಾಗೂ ಧರ್ಮೋನ್ನತಿಯಾಗುವುದು ಎಂದರು. ಬಸವಣ್ಣನವರ ನೂತನ ವಿಚಾರಕ್ರಾಂತಿಯಿಂದ ಪ್ರಭಾವಿತನಾಗಿ ಜಾತಿಮತಗಳನ್ನು ಲೆಕ್ಕಿಸದೆ ಲಿಂಗಸಂಸ್ಕಾರಿಗಳಾದ ಎಲ್ಲರಿಗೂ ಶರಣ ಧರ್ಮ ಸಂದೇಶ ನೀಡಿದರು. ಉರಿಲಿಂಗಪೆದ್ದಿಯ ಸಮಾಧಿ ಬಸವಕಲ್ಯಾಣದಲ್ಲಿದ್ದು ಅವರ ಮಠಗಳು ಕಲ್ಯಾಣ, ಕೊರಳಿ, ಭಾಲ್ಕಿ, ಬೇವಿನಚಿಂಚೋಳಿ, ಮೈಸೂರು ಹೀಗೆ ಹಲವಾರು ಕಡೆ ಕಾಣಬಹುದು ಎಂದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನಕುಮಾರಸ್ವಾಮಿ ಮಾತನಾಡಿ ದಲಿತರು, ಮಹಿಳೆಯರು, ದುರ್ಬಲರನ್ನು ಒಳಗೊಂಡಂತೆ ಎಲ್ಲರನ್ನು ಗೌರವದಿಂದ ಕಂಡ ಸಾಹಿತ್ಯವನ್ನು ವಿಶ್ವದಲ್ಲಿ ಹೆಸರಿಸುವುದಾದರೆ ಅದು ವಚನಸಾಹಿತ್ಯ ಮಾತ್ರ, ಅಂತಹ ವಚನಸಾಹಿತ್ಯವನ್ನು ವಿಶ್ವಕ್ಕೆ ಕಾಣಿಕೆಯಾಗಿ ನೀಡಿ ಬೆಳಕಿಗೆ ಬಾರದ ವಚನಕಾರರನ್ನು ಸ್ಮರಿಸಲು ಶ್ರಾವಣ ಶರಣ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಜಾÐನಪ್ರಕರತೆ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ಆರ್ಟ್‍ಗ್ಯಾಲರಿಯ ಎಲ್.ಶಿವಲಿಂಗಪ್ಪ, ಜಿಲ್ಲಾ ಶರಣು ವಿಶ್ವವಚನ ಫೌಂಡೇಶನ ಅಧ್ಯಕ್ಷ ಶ್ರೀಕಂಠಮೂರ್ತಿ, ಕಾರ್ಯಾಧ್ಯಕ್ಷೆ ಸುಜಾತಪ್ರಭುಸ್ವಾಮಿ, ಕಾರ್ಯದರ್ಶಿ ದಿವ್ಯಚೇತನ, ಉಪಾಧ್ಯಕ್ಷೆ ಪೂರ್ಣಿಮಾ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಮಹದೇವಪ್ಪ, ಅಕ್ಕನೀಲಾಂಬಿಕ,ಶ್ರೀಕಂಠಸ್ವಾಮಿ, ಸುಜಾತದುರ್ಗೇಶ್, ರಾಜೇಶ್ವರಿ, ಕಾಂತಾ,ಪ್ರಭುಸ್ವಾಮಿ, ನಾಗಭೂಷಣ ಉಪಸ್ಥಿತರಿದ್ದರು,
======================================================================
ಮೈಸೂರು :- ವಚನ ಪಠನದೊಂದಿಗೆ ದಿನವನ್ನು ಆರಂಭಿಸಿ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮತ್ತು ಬಸವಬಳಗ ಮಹಿಳಾ ವೇದಿಕೆ ಸಹಯೋಗದೊಂದಿಗೆ ಮೈಸೂರಿನ ಶಕ್ತಿನಗರದ ಶಕ್ತಿಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶರಣಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ ವಚನಗಳು ಶರಣರ ಅಂತರಂಗದ ನುಡಿಗಳಾಗಿದ್ದು ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಿ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಯೋಚಿಸುವ ಆಲೋಚನೆ ಬೆಳೆಸುತ್ತದೆ. ಕವಿಗಳು ಕಲ್ಪನೆಯಿಂದ ಬರೆದ ನೂರಾರು ಕವನಗಳನ್ನು ಓದುವುದರ ಬದಲಾಗಿ ಶರಣರು ಅನುಭವದ ನುಡಿಗಳಾದ ಒಂದು ವಚನ ಅಧ್ಯಯನ ಮಾಡಿದರೆ ಸಾಕು ಎಂಬುದನ್ನು ಬಸವಣ್ಣನವರು ಎಮ್ಮ ನಡಾವಳಿಗೆ ನಮ್ಮ ಪುರಾತನರ ನುಡಿಯೇ ಇಷ್ಟವಯ್ಯ ಎಂಬ ವಚನದ ಮೂಲಕ ಅರಿಯಬಹುದು ಎಂದರು. ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಮಾತನಾಡಿ ವಚನಗಳು ವಿದ್ಯೆಯ ಜೊತೆಗೆ ವಿನಯವನ್ನು ಕಲಿಸಿ ಸಂಸ್ಕಾರಯುತ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೌಲ್ಯಗಳಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಮಕ್ಕಳಿಗೆ ಪ್ರತಿದಿನ ವಚನಗಳನ್ನು ಕಲಿಸುವುದರಿಂದ ಆ ಕೊರಗನ್ನು ಹೋಗಲಾಡಿಸಬಹುದು ನಮ್ಮ ನಡೆ, ನುಡಿ, ತನು, ಮನ ಮತ್ತು ಭಾವ ಎಲ್ಲವೂ ಶುದ್ಧಿಯಾಗಲು ವಚನಗಳು ನೆರವಾಗುವವು ಎಂದರು. ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಪಿಪಿಟಿ ಮೂಲಕ ಶರಣರ ವಚನಗಳು ಮತ್ತು ಅದರ ತಾತ್ಪರ್ಯಗಳ ಬಗ್ಗೆ ವಿವರಿಸಿದರು. ವಚನ ವಾಚನ ಮಾಡಿದ ಮಹಿಳೆಯರಿಗೆ ವಚನದೀವಿಗೆ ಅಭಿನಂದನಾಪತ್ರ ಮತ್ತು ವಚನ ಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಬಸವಬಳಗ ಮಹಿಳಾ ವೇದಿಕೆ ಅಧ್ಯಕ್ಷೆ ಅನಿತಾ ನಾಗರಾಜ್, ಗೌರವಾಧ್ಯಕ್ಷೆ ಉಷಾ ಮಹೇಶ್, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ಚನ್ನಬಸಪ್ಪ ಉಪಸ್ಥಿತರಿದ್ದರು.
---------------------------------------

No comments:
Post a Comment