ಜಯ ಮಂಗಳ ಗುರುವೇ ಶುಭ ಮಂಗಳ ಪ್ರಭುವೇ ಮಹಾಮಂಗಳ ಶಿವನೇ ಜಗದಗುರುವೆ ನೀ ಅಲ್ಲಮಪ್ರಭುವೇ !!೧!!
ನೀನೇ ಶಿವನಾಗಿ ಬಂದೇ ಈ ಧರೆಗೆ ಶಿವ ಭಕ್ತರ ಹೃದಯವನು ಬೆಳಗಿದ ಬೆಳಗೆ
ಅನುಭಾವದಡುಗೆಯನು ಉಣಿಸಿದೆ ಎಲ್ಲರಿಗೆ
ಕಲ್ಲು ಹೃದಯದಲ್ಲಿ ಪ್ರೇಮ ಬರಿಸಿದೆ !!೧!!
ಬಸವಣ್ಣನ ಭಕ್ತಿಗೇ ನೀ ಒಲಿದು ಬಂದೆ.
ಚೆನ್ನಬಸವನ ಜ್ಞಾನ ನೀ ನೋಡಿ ನಿಂದೆ.
ಮಡಿವಾಳ ಮಾಚಯ್ಯನ ನೀನಪ್ಪಿಕೊಂಡೆ.
ಕಿನ್ನರ ಬೊಮ್ಮಯ್ಯನ ನೀ ಮೆಚ್ಚಿಕೊಂಡೆ !!೨!!
ಆಯ್ದಕ್ಕಿ ಮಾರಯ್ಯನ ನೀನೆಚ್ಚರಗೊಳಿಸಿದೆ.
ಅಂಬಿಗರ ಚೌಡಯ್ಯನ ಕಂಡು ನೀನಹುದೆಂದೆ.
ಮುಕ್ತಾಯಿ ಅಕ್ಕಳ ದುಃಖವನು ಪರಿಹರಿಸಿದೆ.
ಗೋರಕ್ಷನ ಗರ್ವವನು ನೀ ಮುರಿದು ಸಲಹಿದೆ !!೩!!
ಬಸವಾದಿ ಪ್ರಮಥರನು ಮುನ್ನಡೆಸಿದ ಮಹಾದೇವ.
ಮಹಾದೇವಿಯಕ್ಕಂಗೆ ಒಲಿದ ಆಧ್ಯಾತ್ಮದೇವ.
ಸಿದ್ಧರಾಮಯ್ಯನ ತಿದ್ದಿ ಸಲಹಿದೆ ನೀನು.
ಸಕಲ ಶರಣ ಶರಣೆಯರ ಹೃದಯಜಂಗಮ. !!೪!!
ಶ್ರೀ ಮಲ್ಲಿಕಾರ್ಜುನಸ್ವಾಮಿಗಳು
ಜನವಾಡ, ಅಥಣಿ ತಾ.