Wednesday, May 1, 2024

ಶರಣರ ಕುರಿತ ಕವಿತೆ

 ಅಥಣಿ ಅಪ್ಪಗಳು  ರಚಿಸಿದ  ಈ ಪದ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಶಿವಯೋಗಿಗಳವರು ತುಂಬಾ ಭಕ್ತಿ ಭಾವದಿಂದ ಬಸವಜಯಂತಿ ಕಾರ್ಯಕ್ರಮಗಳ ತಮ್ಮ ಆಶೀರ್ವಚನದಲ್ಲಿ  ಸದಾ ಹೃದಯ ತುಂಬಿ ಹಾಡುತ್ತಿದ್ದರು.

ಅಥಣಿ ಅಪ್ಪಗಳ  ಶಿವಯೋಗ  ಶಕ್ತಿಯು ಶಿವಯೋಗ ಪರಂಪರೆಗೆ ಮಾದರಿ  ಆಗಿತ್ತು.

-ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಶ್ರೀ ಹೊನ್ನಮ್ಮಗವಿ ಮಠ ಶಿವಗಂಗೆ. 🙏🏻🙏🏻


ಮಡಿವಾಳ ತಂದೆಗಳ ಬಟ್ಟೆಗಳ ನಾನೊಗೆವೆ,

ಹಡಪದಪ್ಪಣ್ಣಗಳ ಕ್ಷೌರವನು ನಾಮಾಳ್ಪೆ,

ಡೋಹರ ಕಕ್ಕಯ್ಯಂಗೆ ತೊಗಲ ಹದ ಮಾಡಿಡುವೆ,

ವೀರ ಹರಳೇಶಂಗೆ ಜೋಡನ್ನು ಮಾಡಿಡುವೆ,

ಮಾರಯ್ಯ ತಂದೆಗಳ ಕಟ್ಟಿಗೆಯ ನಾ ಹೊರುವೆ,

ಧೀರ ಕೇತಯ್ಯಗಳ ಬುಟ್ಟಿಯನು ನಾ ಮಾಳ್ಪೆ,

ಅಮುಗಿ ಸಿದ್ಧೇಶ್ವರಗೆ ಕಂಬಳಿಯ ನಾ ನೆಯ್ವೆ,

ನಮಿಸಿ ಮರುಳೇಶನಿಗೆ ಪಾಕವನು ನಾ ಮಾಳ್ಪೆ,

ಶಿವ ದಾಸಿಮಯ್ಯಗಳ ಬಟ್ಟೆಯನು ನಾ ನೆಯ್ವೆ,

ತವೆ ಶಂಕರಯ್ಯಗಳ ಕಪನಿಯನು ನಾ ಹೊಲಿವೆ,

ನುಲಿಯ ಚಂದಯ್ಯಗಳ ಹಗ್ಗ ಕಣ್ಣಿಯ ಮಾಳ್ಪೆ,

ಸಲೆ ಮಾದಾರ ಚನ್ನಯ್ಯಗೆ ಅಂಬಲಿಯ ಮಾಡಿಡುವೆ,

ಕುಂಬಾರ ಗುಂಡಯ್ಯಗೆ  ಮಡಕೆಯನು ನಾ ಮಾಳ್ಪೆ,

ಸಂಭ್ರಮದಿ ಪ್ರಭುವಿಂಗೆ ಮದ್ದಳೆಯ ಬಾರಿಸುವೆ,

ಆವಾವ ಕಾಯಕವ ಮಾಡಿದರು ಬಸವೇಶ

ಆವಗಂ ಶರಣರನು ಸೇವಿಪೆನು ಬಸವೇಶ

🙏✍🏻 -: #ಅಥಣಿ_ಶಿವಯೋಗಿಗಳು.🙏

No comments:

Post a Comment