Saturday, January 23, 2021

ಶರಣ ಸ್ಮಾರಕ ಹಾಗೂ ಬಸವ ಭವನ ನಿರ್ಮಾಣಕ್ಕೆ ಪ್ರಶಂಸೆ

 ಶರಣ ಸ್ಮಾರಕ ಹಾಗೂ ಬಸವ ಭವನ ನಿರ್ಮಾಣಕ್ಕೆ ಪ್ರಶಂಸೆ




ಮೈಸೂರಿನ ದಕ್ಷಿಣ ಭಾಗವಾದ ಜೆ.ಪಿ.ನಗರದಲ್ಲಿ ಕನ್ನಡದ ಮೊಟ್ಟಮೊದಲ ಮಹಿಳಾ ಕವಯತ್ರಿ ಉಡುತಡಿಯ ಕಿಡಿ ಅಕ್ಕಮಹಾದೇವಿಯವರ ಪ್ರತಿಮೆಯನ್ನು ಸ್ಥಾಪಿಸಿ ಲೋಕಾರ್ಪಣೆ ಮಾಡಿರುವುದು ಅರಮನೆಯ ನಗರಿ ಮೈಸೂರಿಗೆ ಶರಣ ಸಂಸ್ಕøತಿಯ ಕಿರೀಟ ತೊಡಿಸಿದಂತಾಗಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಹೇಳಿದ್ದಾರೆ. ಜೆ.ಪಿ.ನಗರ ಶರಣ ವೇದಿಕೆಯು ಸ್ವಾಭಿಮಾನದ ಪ್ರತೀಕ, ಸ್ತ್ರೀವಾದಿ ಚಳುವಳಿಯ ನಿಜವಾದ ಪ್ರತಿಪಾದಕಿ, ಅಕ್ಕಮಹಾದೇವಿಯವರ ಪ್ರತಿಮೆಯನ್ನು ಸ್ಥಾಪಿಸುವುದರ ಮುಖಾಂತರ ಮೈಸೂರಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸಿ ಅಕ್ಕನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಹಾಗೆಯೇ ಮೈಸೂರಿನ ಮತ್ತೊಂದು ಭಾಗದಲ್ಲಿ ಹೆಬ್ಬಾಳು ಬಸವ ಸಮಿತಿಯು ಬಸವ ಭವನ ನಿರ್ಮಾಣ ಮಾಡುವುದರ ಮುಖಾಂತರ ಶರಣ ಸಂಗಮ ಕಾರ್ಯಕ್ರಮಗಳನ್ನು  ವಿಸ್ತರಿಸಿ ಸಾಂಸ್ಕøತಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳು ಹೆಚ್ಚಾಗಲು ಇದು ಸಹಾಯಕವಾಗಿದ್ದು, ಇದಕ್ಕೆ ಕಾರಣೀಭೂತರಾದ ಜೆ.ಪಿ.ನಗರ ಶರಣ ವೇದಿಕೆ ಹಾಗೂ ಹೆಬ್ಬಾಳು,ವಿಜಯನಗರದ ಬಸವ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್‌, ಮೈಸೂರು

ಪೋನ್‌ ನಂ. 9901137948




1 comment:

  1. ಶರಣ ಸಂಸ್ಕೃತಿಯ ಸ್ಮಾರಕ ಆಶಾದಾಯಕ ಬೆಳವಣಿಗೆ

    ReplyDelete