Wednesday, December 24, 2025

ಮೈಕೆಲ್

 ಯಾರೋ ಕೇಳಿದರು: ಒಲಂಪಿಕ್ಸ್‌ನಲ್ಲಿ ಇಷ್ಟೆಲ್ಲ ಪದಕ ಗೆದ್ದಿದ್ದೀರಿ ಹೇಗೆ? 

ಮೈಕೆಲ್‌ ಹೇಳಿದರು: ದಿನವೂ ಪ್ರ್ಯಾಕ್ಟೀಸ್‌ ಮಾಡುವುದರಿಂದ.  

ಪ್ರಶ್ನೆ ಕೇಳಿದವರು ಕೇಳಿದರು : ದಿನವೂ ಪ್ರಾಕ್ಟೀಸ್‌ ಮಾಡುವುದರಿಂದ ಅಂದರೆ?

ಮೈಕೆಲ್‌ ಫೆಲ್ಫ್ಸ್‌: ಅಂದರೆ ದಿನವೂ ಪ್ರ್ಯಾಕ್ಟೀಸ್‌ ಮಾಡುವುದರಿಂದ. 

ಸಂದರ್ಶಕ ಮತ್ತೆ ಕೇಳಿದ: ಅಂದರೆ ಬರೀ ದಿನವೂ ಪ್ರ್ಯಾಕ್ಟೀಸ್‌ ಮಾಡುವುದರಿಂದ? 

ಆಗ ಮೈಕೆಲ್‌ ಫೆಲ್ಫ್ಸ್‌ ಹೇಳುತ್ತಾರೆ: ನಾನು ಹೇಳುವುದು ನಿಮಗೆ ಅರ್ಥವಾಗುತ್ತಿಲ್ಲ. ಏಳುವರ್ಷಗಳ ಕಾಲ ದಿನವೂ ಪ್ರ್ಯಾಕ್ಟೀಸ್‌ ಮಾಡುವುದು. ಪ್ರತೀ ದಿನ, ಕ್ರಿಸ್‌ಮಸ್‌ ಇರಲಿ, ಥ್ಯಾಂಕ್ಸ್‌ ಗಿವಿಂಗ್‌ ಇರಲಿ, ಕಾರ್ಯಕ್ರಮ ಇರಲಿ, ಹೊಸ ವರ್ಷವಿರಲಿ ಪ್ರತೀ ದಿನ ಪ್ರ್ಯಾಕ್ಟೀಸ್.‌ ಚಳಿ, ಮಳೆ, ಸೆಕೆ, ಬಿಸಿಲು, ಪ್ರವಾಹ ಮತ್ತೊಂದು ಮಗದೊಂದು ಏನೇ ಇದ್ದರೂ ಪ್ರತೀ ದಿನ ಒಂದು ದಿನವೂ ಬಿಡದೇ ಪ್ರ್ಯಾಕ್ಟೀಸ್‌ . ಜ್ವರ ಬರಲಿ, ಶೀತವಾಗಲೀ ಪ್ರ್ಯಾಕ್ಟೀಸ್‌! ನನ್ನ ಬದುಕಿನ ಏಳು ವರ್ಷ ರೆಸ್ಟ್‌ ತಗೊಂಡಿದ್ದು ನೆನಪಿಲ್ಲ, ರಿಕವರಿ ಮಾಡಿಕೊಳ್ಳಲು ಆರಾಮಾಗಿ ಇದ್ದದ್ದು ನೆನಪಿಲ್ಲ, ಬರೀ ಪ್ರ್ಯಾಕ್ಟೀಸ್‌ ಅಷ್ಟೇ. 

ಎಂಟು ಗಂಟೆ ಈಜು, ಆಮೇಲೆ ವರ್ಕ್‌ ಔಟ್‌, ಆಮೇಲೆ ವೇಟ್‌ ಟ್ರೈನಿಂಗ್‌. ವರ್ಷವರ್ಷಗಳ ಕಾಲ ಈಜು, ತರಬೇತಿ, ಆಹಾರ, ನಿದ್ದೆ.  ಈಜು ತರಬೇತಿ ಆಹಾರ ನಿದ್ದೆ ಅಷ್ಟೇ."

ಅದಕ್ಕೇ ತಾನೇ ಮೈಕೆಲ್ 23 ಚಿನ್ನ  3 ಬೆಳ್ಳಿ  2 ಕಂಚು ಒಟ್ಟು 28 ಒಲಿಂಪಿಕ್ ಪದಕ ಗೆದ್ದಿದ್ದು. Not a joke. 

ಅಷ್ಟೇ. ಹೆಚ್ಚೇನು ಹೇಳುವ ಅಗತ್ಯವೂ ಇಲ್ಲ.  

ದೀಪಾ ಹಿರೇಗುತ್ತಿ


Thursday, December 11, 2025

ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರ ಸಂಕ್ಷಿಪ್ತ ಪರಿಚಯ

 ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರ ಸಂಕ್ಷಿಪ್ತ ಪರಿಚಯ 


    ಸಿ.ಎಸ್. ಕುಮಾರಸ್ವಾಮಿ ಮತ್ತು ರೂಪ ಇವರು ವಚನಗಳ ಬಗ್ಗೆ ಹೊಂದಿರುವ ಪ್ರೀತಿ ಹಾಗೂ ವಚನ ಪ್ರಸಾರಕ್ಕೆ ಕೈಗೊಂಡಿರುವ ಚಟುವಟಿಕೆಗಳಿಂದ ವಚನ ಕುಮಾರಸ್ವಾಮಿ ಮತ್ತು ವಚನ ರೂಪ ಎಂದೇ ಚಿರಪರಿಚಿತರಾಗಿದ್ದಾರೆ.

     

    ೨೦೧೬ರಲ್ಲಿ ವಚನ ಪ್ರಸಾರಕ್ಕೆ ಶರಣು ವಿಶ್ವವಚನ ಫೌಂಡೇಷನ್ ಎಂಬ ಅಂತರರಾಷ್ಟಿçÃಯ ಸಂಸ್ಥೆ ಸ್ಥಾಪಿಸಿ ಅದರ ಮುಖಾಂತರ ೧೫ ದೇಶ ಮತ್ತು ೧೦ ರಾಜ್ಯಗಳಿಗೆ ಅಂತರ್ಜಾಲದ ಮುಖಾಂತರ ೧ ಲಕ್ಷಕ್ಕೂ ಹೆಚ್ಚು ಜನರಿಗೆ ವಚನ ಪ್ರಸಾರ ಮಾಡುತ್ತಿದ್ದಾರೆ. 

    ವಚನ ಸಾಹಿತ್ಯ ಪ್ರಸಾರಕ್ಕಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟಿರುವ ಇವರು ಇದುವರೆಗೆ ೧೨೩ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ,  ಎಲ್ಲಾ ಮನೆಗಳಿಗೆ ಉಚಿತವಾಗಿ ವಚನ ಪುಸ್ತಕ ನೀಡಿ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಉಂಟು ಮಾಡುವ  ೨೮ ವಚನಗ್ರಾಮ ಕಾರ್ಯಕ್ರಮ ನಡೆ¸ಸಿದ್ದಾರೆ.

   ವಚನ ಸಾಹಿತ್ಯದ ಬಗ್ಗೆ ಪ್ರತೀ ವಾರ ಪ್ರಶ್ನೆಗಳನ್ನು ಕೇಳುವ ೧೬೧ ಥಟ್ ಅಂತ ಉತ್ತರಿಸಿ ಕಾರ್ಯಕ್ರಮ ನಡೆಸಲಾಗಿದೆ.

   ಸರ್ಕಾರಿ ಶಾಲೆಗಳ ಬಲವರ್ಧನೆಗೆ ಅಗತ್ಯ ಸೌಲಭ್ಯ ವಿತರಣೆ ಎಂಬ ಕಾರ್ಯಕ್ರಮ ಕೈಗೊಂಡು ಅಲ್ಲಿನ ವಿದ್ಯಾರ್ಥಿಗಳಿಗೆ ಸಮವಸ್ತç, ನೋಟ್‌ಬುಕ್, ಬ್ಯಾಗ್, ಎಕ್ಸಾಂ ಪ್ಯಾಡ್ ಮುಂತಾದವುಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಇದುವರೆಗೆ ೩೫ ಕಾರ್ಯಕ್ರಮ ನಡೆಸಲಾಗಿದೆ.

   ಇದಲ್ಲದೇ ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ, ಕಾಲೇಜಿನೆಡೆಗೆ ವಚನಗಳ ನಡಿಗೆ, ವಿಶ್ವವಿದ್ಯಾನಿಲಯಗಳೆಡೆಗೆ,  ಅನಾಥಾಶ್ರಮಗಳೆಡೆಗೆ ವಚನಗಳ ನಡಿಗೆ, ವೃದ್ಧಾಶ್ರಮಗಳೆಡೆಗೆ ವಚನಗಳ ನಡಿಗೆ, ಹಸಿವು ಮುಕ್ತ ಸಮಾಜಕ್ಕಾಗಿ ನಮ್ಮ ಚಿತ್ತ, ಸಸ್ಯೋತ್ಸವ, ವಿದೇಶಗಳಲ್ಲಿ ವಚನ ಮಾಧುರ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರ ಜೊತೆಗೆ ಸಿದ್ಧಗಂಗಾ ದಿವ್ಯ ತಪೋನಿಧಿ, ವಿಶ್ವವಚನ ಆ್ಯಪ್, ಶ್ರೀ ಗುರುಮಲ್ಲೇಶ್ವರರ ಜೀವನ ದರ್ಶನ, ಗದ್ಧಿಗೆಯ ಸದ್ಗುರು ಶ್ರೀ ಕೆಂಡಗಣ್ಣಸ್ವಾಮಿ, ಯುಗಪ್ರವರ್ತಕ ಬಸವಣ್ಣ ಆಂಗ್ಲ ಭಾಷೆಯಲ್ಲಿ (ಖಿಊಇ PIಔಓಇಇಖ ಔಈ ಖಿಊಇ ಇಖಂ - ಃಂSAಗಿAಓಓA), ಶ್ರೀ ಮಲೆ ಮಹದೇಶ್ವರ ಸಾಕ್ಷö್ಯಚಿತ್ರ ನಿರ್ಮಾಣ ಮಾಡಿ ವಚನಪ್ರಸಾರ ಮಾಡಲಾಗುತ್ತಿದೆ.  ವಚನಗಳ ಆಧಾರದ ಮೇಲೆ ವಚನ ಕಲ್ಯಾಣ ಮಹೋತ್ಸವ, ಗೃಹ ಪ್ರವೇಶ, ನಾಮಕರಣ ಕಾರ್ಯಕ್ರಗಳನ್ನು ನಡೆಸಿಕೊಡುತ್ತಿರುವ ಇವರು ಇದುವರೆಗೆ ೧೦೦ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿಕೊಟ್ಟಿರುತ್ತಾರೆ.


  ವಚನ ಕುಮಾರಸ್ವಾಮಿ ಅವರು ಇದುವರೆಗೆ ೨೬ ಕೃತಿ ರಚಿಸಿದ್ದರೆ ರೂಪ ಕುಮಾರಸ್ವಾಮಿ ಅವರು ೧೬ ಕೃತಿಗಳನ್ನು ರಚಿಸಿದ್ದಾರೆ. ಒಟ್ಟಾರೆ ಸಂಸ್ಥೆ ವತಿಯಿಂದ ಶರಣು ದಿನಚರಿ, ಬಸವಭಾನು ಸಂಚಿಕೆ, ಶರಣರ ಜೀವನ ಚರಿತ್ರೆ ಮತ್ತು ವಚನಗಳನ್ನು ಒಳಗೊಂಡ ೬೦ಕ್ಕೂ ಕೃತಿಗಳನ್ನು  ಶರಣ ಸಾಹಿತ್ಯಕ್ಕೆ ಸಂಬAಧಿಸಿದAತೆ ಹೊರತರಲಾಗಿದೆ.

       ವಚನ ಸಾಹಿತ್ಯಕ್ಕೆ ಸಂಬAಧಿಸಿದAತೆ ಚಂದನವಾಹಿನಿಯಲ್ಲಿ ಜೀವನ ದರ್ಶನ ಎಂಬ ಲೈವ್ ಪ್ರೋಗ್ರಾಂ, ನಿವ್ಸ್ ೧ ಕನ್ನಡವಾಹಿನಿಯಲ್ಲಿ ಪ್ರತಿದಿನ ವಚನಸಾರ ಕಾರ್ಯಕ್ರಮ ಬಿತ್ತರ, ಯಶ್‌ಟೆಲ್ ಟಿವಿ ಯಲ್ಲಿ ಸಂದರ್ಶನದಲ್ಲಿ ಭಾಗವಹಿಸುವಿಕೆ, ಸಿರಿ ಟಿವಿಯಲ್ಲಿ ಸಾಧಕರ ಹೆಜ್ಜೆ ಎಂಬ ಕಾರ್ಯಕ್ರಮದಲ್ಲಿ ಸಾಧಕರಾಗಿ ಭಾಗವಹಿಸುವಿಕೆ, ಬಸವ ಟಿ ವಿಯಲ್ಲಿ ಉಪನ್ಯಾಸ, ಮಂಡ್ಯದ ಡೈಮಂಡ್ ಕನ್ನಡ ವಾಹಿನಿಯಲ್ಲಿ ಸಾಧಕರ ಸಿಪಾಯಿಯಾಗಿ ಭಾಗವಹಿಸುವಿಕೆ, ೯೩.೫ ಎಫ್.ಎಂ ಚಾನಲ್‌ನಲ್ಲಿ ರೆಡ್ ರಿವೈಂಡ್ ಪ್ರೋಗ್ರಾಂನಲ್ಲಿ ಲೈಪ್ ರಿವೈಂಡ್ ಮಾಡಿರುತ್ತಾರೆ. ಸರಗೂರಿನ ಜನಧ್ವನಿ ಎಫ್ ಎಂ ಚಾನಲ್‌ನಲ್ಲಿ ಜನಧ್ವನಿ ಇಲ್ಲಿ ೧೦೦೦ ಕ್ಕೂ ಹೆಚ್ಚು ವಚನಾಮೃತ ಕಾರ್ಯಕ್ರಮವನ್ನು ನೀಡಿರುತ್ತಾರೆ. ಅಲ್ಲದೇ ೨೦೦ಕ್ಕೂ ಹೆಚ್ಚು ಶರಣರ ಪರಿಚಯವನ್ನು ಮಾಡಿರುತ್ತಾರೆ.

     ವಚನ ಸಾಹಿತ್ಯ ಮತ್ತು ಇತರೆ ವಿಷಯಗಳಿಗೆ ಸಂಬAಧಿಸಿದAತೆ ನಾಡಿನ ಮತ್ತು ಹೊರ ರಾಜ್ಯಗಳಲ್ಲಿ ಸಂಚರಿಸಿ ಪತಿ ಪತ್ನಿ ಇಬ್ಬರೂ ೧೦೦೦ ಕ್ಕೂ ಹೆಚ್ಚು ಉಪನ್ಯಾಸ ನೀಡಿರುತ್ತಾರೆ.

    

    ಶರಣ ದಂಪತಿಗಳ ಸೇವೆಯನ್ನು ಗುರುತಿಸಿ ವಿವಿಧ ಪ್ರಶಸ್ತಿಗಳು ಹರಸಿ ಮತ್ತು ಅರಸಿ ಬಂದಿರುತ್ತವೆ. ಅವುಗಳೆಂದರೆ 

ಶ್ರೀ ಸಿದ್ಧಗಂಗಾ ಮಠ, ತುಮಕೂರು ವತಿಯಿಂದ ಸಂಘಸಿರಿ ಪ್ರಶಸ್ತಿ, ಬೆಂಗಳೂರು ಬಸವ ಸಮಿತಿ ವತಿಯಿಂದ ಬಸವ ಭೂಷಣ ಪ್ರಶಸ್ತಿ ರಾಷ್ಟ್ರೀಯ ಬಸವದಳ, ಬೆಂಗಳೂರು ವತಿಯಿಂದ ಶರಣ ಜ್ಞಾನರತ್ನ ಮತ್ತು ಶರಣ ಸೇವಾರತ್ನ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಜರಗನಹಳ್ಳಿ ಸಿದ್ಧಮ್ಮ ನಂಜುAಡಪ್ಪ ಶರಣ ದತ್ತಿ ಪ್ರಶಸ್ತಿ’, ಚಾಮರಾಜನಗರ ಜಿಲ್ಲೆ ಶ್ರೀ ಮುರುಘಾ ರಾಜೇಂದ್ರ ಮಹಾಸಂಸ್ಥಾನ ಶ್ರೀಮಠ, ಮರಿಯಾಲ ವತಿಯಿಂದ ಮುರುಘಾ ಚೇತನ, ಮೈಸೂರು ಬಸವಸಮಿತಿ ವತಿಯಿಂದ ಬಸವಶ್ರೀ ಪ್ರಶಸ್ತಿ, ಮಂಡ್ಯದ ಹಲ್ಲೇಗೆರೆ ಅಮ್ಮಯ್ಯಮ್ಮ ದುರ್ಗೇಗೌಡ ಪ್ರತಿಷ್ಠಾನ ವತಿಯಿಂದ ಹತ್ತು ಸಾವಿರ ನಗದು ಬಹುಮಾನ ಒಳಗೊಂಡ ವಚನರತ್ನ ಪ್ರಶಸ್ತಿ, ಮಂಡ್ಯ ಜಿಲ್ಲೆಯ ಶ್ರೀ ಹೊಸಮಠ, ಸರಗೂರು ವತಿಯಿಂದ ಕಾಯಕಯೋಗಿ ಪ್ರಶಸ್ತಿ, ಶಿವಮೊಗ್ಗ ಜಿಲ್ಲೆ ಹರಮಘಟ್ಟ ಶ್ರೀ ಬಸವೇಶ್ವರ ಬಳಗದಿಂದ ಅಲ್ಲಮಶ್ರೀ ಪ್ರಶಸ್ತಿ, ಮಂಡ್ಯದ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ವಿವೇಕಶ್ರೀ ಪ್ರಶಸ್ತಿ, ಜಮಖಂಡಿಯ ಬಸವಜ್ಞಾನ ಗುರುಕುಲದ ವತಿಯಿಂದ ಬಸವಚೇತನ ಪ್ರಶಸ್ತಿ, ಚಿಕ್ಕಮಗಳೂರಿನ ಶ್ರೀ ಜಯಬಸವ ತಪೋವನ ವತಿಯಿಂದ ಬಸವಭೂಷಣ ಪ್ರಶಸ್ತಿ, ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ವಚನ ಸಿರಿ ಮುಕುಟ, ಪಿರಿಯಾಪಟ್ಟಣದ ದಾರಿದೀಪ ಪತ್ರಿಕೆ ವತಿಯಿಂದ ಕಾಯಕರತ್ನ, ಬಹರೈನ್ ಬಸವಸಮಿತಿಯಿಂದ ಅಭಿನಂದನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಭಿನಂದನೆ ಹೆಗ್ಗಡದೇವನಕೋಟೆ ಲಯನ್ಸ್ ಸಂಸ್ಥೆಯಿAದ ಅಭಿನಂದನೆ ಬೆಮೆಲ್ ಬಸವಸಮಿತಿ, ಬೆಂಗಳೂರು ಇವರಿಂದ ಅಭಿನಂದನೆ ೫೦೦ಕ್ಕೂ ಹೆಚ್ಚು ಸಂಘಸAಸ್ಥೆಗಳಿAದ ಗೌರವ ಸನ್ಮಾನ ಸ್ವೀಕರಿಸಿರುತ್ತಾರೆ.

ವಿಶ್ವಮಟ್ಟದಲ್ಲಿ ವಚನ ಸಾಹಿತ್ಯವನ್ನು ಪಸರಿಸುತ್ತಿರುವ ಇವರ ಸೇವಾ ಕೈಂಕರ್ಯ ಹೀಗೆ ಸಾಗಲಿ ಎಂದು ಮನತುಂಬಿ ಹಾರೈಸುತ್ತೇವೆ.


Wednesday, October 15, 2025

ಥಾಮಸ್ ಆಲ್ವಾ ಎಡಿಸನ್

 ಒಂದು ದಿನ ಮಗು 

ಥಾಮಸ್ ಆಲ್ವಾ ಎಡಿಸನ್ ಮನೆಗೆ ಬಂದು 

ತನ್ನ ತಾಯಿಯ ಕೈಗೆ 

ಒಂದು ಪತ್ರ ಕೊಡುತ್ತಾನೆ, ಅಮ್ಮಾ,

 ನಮ್ಮ ಟೀಚರ್ ಈ ಪತ್ರವನ್ನು ನಿನಗೆ ಮಾತ್ರ ಕೊಡಲು ಹೇಳಿದ್ದಾರೆ ಎನ್ನುತ್ತಾನೆ


ಅದನ್ನು

 ಮಗನಿಗಾಗಿ ಗಟ್ಟಿಯಾಗಿ  ಓದುತ್ತಾ 

ಆ ತಾಯಿಯ ಕಣ್ಣು ಒದ್ದೆಯಾಯಿತು :


"ನಿಮ್ಮ ಮಗ ತುಂಬ ಬುದ್ಧಿವಂತನಿದ್ದಾನೆ. 

ನಮ್ಮ ಶಾಲೆ 

ಅವನ ಬುದ್ಧಿಮತ್ತೆಗೆ 

ತುಂಬಾ ಸಣ್ಣದು 

ಹಾಗೂ

 ಅವನಿಗೆ ಕಲಿಸಬಲ್ಲ

 ಅರ್ಹತೆ ನಮ್ಮ 

ಯಾವ ಉಪಾಧ್ಯಾಯರಿಗೂ ಇಲ್ಲ. 

ಆದುದರಿಂದ

 ಅವನ ವಿದ್ಯಾಭ್ಯಾಸವನ್ನು ನೀವೇ

 ಮನೆಯಲ್ಲಿ ಕಲಿಸುವುದು ಒಳಿತು."


ತುಂಬಾ ವರ್ಷಗಳ ನಂತರ ಎಡಿಸನ್ ರ ತಾಯಿ ಮರಣಿಸುತ್ತಾರೆ,

 ಆಗ ಎಡಿಸನ್ 

ಪ್ರಪಂಚದ ಅಗ್ರಮಾನ್ಯ ವಿಜ್ಞಾನಿಗಳಲ್ಲಿ ಮೊದಲಿಗರಾಗಿರುತ್ತಾರೆ.

ಆ ಸಂದರ್ಭದಲ್ಲಿ 

ತನ್ನ ತಾಯಿಯ ಪೆಟ್ಟಿಗೆಯಲ್ಲಿನ ಹಳೆಯ ವಸ್ತು ವಿಚಾರಗಳನ್ನು ಪರಿಶೀಲಿಸುತ್ತಿರುವಾಗ 

ಕಣ್ಣಿಗೆ ಬಿದ್ದ ಮಡುಚಿದ ಕಾಗದವೊಂದನ್ನು 

ಬಿಡಿಸಿ ನೋಡಿದರೆ 

ಅದರಲ್ಲಿ ಹೀಗೆ ಬರೆದಿರುತ್ತದೆ. : 


"ನಿನ್ನ ಮಗ 

ಒಬ್ಬ ಬುದ್ಧಿಮಾಂದ್ಯ, 

ಅವನನ್ನು ನಾವು 

ಇನ್ನು ಮುಂದೆ ಶಾಲೆಗೆ ಬರಗೊಡುವುದಿಲ್ಲ," 


ತನ್ನ ಮಗುವಿನ

 ಮೃದು ಮನಸ್ಸನ್ನು ನೋಯಿಸದಿರಲು

 ಅಂದು ವಿರುದ್ಧವಾಗಿ 

ಓದಿದ

 ತಾಯಿಯನ್ನು ನೆನೆದು ಎಡಿಸನ್ ರು ಗದ್ಗದಿತರಾಗುತ್ತಾರೆ,


 ಗಂಟೆಗಟ್ಟಲೆ ಬಿಕ್ಕಿ ಬಿಕ್ಕಿ ಅಳುತ್ತಾರೆ

 ಮತ್ತು 

ತಮ್ಮ ದಿನಚರಿಯಲ್ಲಿ 

ಹೀಗೆ ಬರೆಯುತ್ತಾರೆ:


" ಥಾಮಸ್ ಅಲ್ವಾ ಎಡಿಸನ್ ಒಬ್ಬ ಬುದ್ಧಿಮಾಂದ್ಯ ಮಗು, ಆದರೆ

 ಅವನ ಶ್ರೇಷ್ಠ ಮಾತೆಯ ದೆಸೆಯಿಂದ

 ಅವನು ಶತಮಾನದ ಬುದ್ಧಿವಂತನಾಗುತ್ತಾನೆ."    


"ಸಂಸ್ಕಾರವಂತ ತಾಯಿಯೇ  ದೇವರು"

"ಆಚಾರವಂತ ಮನೆಯೇ ದೇವಾಲಯ":


Mother is the First Teacher in our Life

Tuesday, September 23, 2025

ವಚನ ಕುಮಾರಸ್ವಾಮಿ ಪರಿಚಯ

 



ವಚನ ಕುಮಾರಸ್ವಾಮಿ

ವಚನ ಕುಮಾರಸ್ವಾಮಿ (ಜನನ: 27 ಆಗಸ್ಟ್ 1978) ಅವರು ಕನ್ನಡದ ವಚನ ಸಾಹಿತ್ಯದ ಪ್ರಸಾರಕರಾಗಿದ್ದು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರು. ವಚನಗಳ ಬಗ್ಗೆ ಹೊಂದಿರುವ ಅಭಿಮಾನ ಮತ್ತು ಅವುಗಳ ಪ್ರಚಾರಕ್ಕಾಗಿ ಕೈಗೊಂಡ ಚಟುವಟಿಕೆಗಳಿಂದಾಗಿ “ವಚನ ಕುಮಾರಸ್ವಾಮಿ” ಎಂದು ಜನಪ್ರಿಯರಾಗಿದ್ದಾರೆ.

ಜೀವನ

ವಚನ ಕುಮಾರಸ್ವಾಮಿ 1978ರ ಆಗಸ್ಟ್ 27ರಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಜನಿಸಿದರು. ತಂದೆ ಸಿ.ಪಿ. ಸಿದ್ದಲಿಂಗಪ್ಪ, ತಾಯಿ ದೇವಮ್ಮ. ಪತ್ನಿ ರೂಪ ಕುಮಾರಸ್ವಾಮಿ; ಇವರಿಗೆ ಇಬ್ಬರು ಮಕ್ಕಳು — ಸಿ.ಕೆ. ಗಿರಿಜೇಶ್ ಮತ್ತು ಸಿ.ಕೆ. ವಚನ.

ವಿದ್ಯಾಭ್ಯಾಸ

ಪ್ರಾಥಮಿಕ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಾಮನಹಳ್ಳಿಹುಂಡಿ

ಮಾಧ್ಯಮಿಕ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕೆರೆಯೂರು

ಪ್ರೌಢಶಾಲೆ: ಸೇಂಟ್ ಮೇರಿಸ್ ಪ್ರೌಢಶಾಲೆ, ಮೈಸೂರು

ಪಿಯುಸಿ: ಮರಿಮಲ್ಲಪ್ಪ ಕಾಲೇಜು, ಮೈಸೂರು

ಪದವಿ: ವಿಶ್ವವಿದ್ಯಾನಿಲಯ ಸಂಜೆ ಕಾಲೇಜು, ಮೈಸೂರು

ಟಿ.ಸಿ.ಎಚ್: ವಸಂತಮಹಲ್, ಮೈಸೂರು

ಬಿ.ಎಡ್, ಸ್ನಾತಕೋತ್ತರ ಪದವಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು

ಕನ್ನಡ ವಿಷಯದಲ್ಲಿ ಎನ್‌ಇಟಿ ಪರೀಕ್ಷೆಯಲ್ಲಿ ತೇರ್ಗಡೆ

ವೃತ್ತಿ

ಕುಮಾರಸ್ವಾಮಿ ತಮ್ಮ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಚಿಕ್ಕರೆಯೂರಿನ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಮೈಸೂರು ಉತ್ತರವಲಯದ ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದರು. ಪ್ರಸ್ತುತ ಮೈಸೂರು ತಾಲ್ಲೂಕಿನ ಕೆ. ಹೆಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ಸಾಹಿತ್ಯ ಮತ್ತು ಪ್ರವೃತ್ತಿ

ವಚನಗಳ ವಾಚನ, ತಾತ್ಪರ್ಯ ನಿರೂಪಣೆ, ಉಪನ್ಯಾಸ

ಕವಿತೆ, ಪ್ರಬಂಧ, ಶರಣ ಸಾಹಿತ್ಯ ಪುಸ್ತಕಗಳ ರಚನೆ

ಶರಣರ ಸಾಕ್ಷ್ಯಚಿತ್ರ ನಿರ್ಮಾಣ

ಶರಣ ಕ್ಷೇತ್ರಗಳ ಭೇಟಿ ಮತ್ತು ಸಂಶೋಧನೆ

2016ರಲ್ಲಿ ಪತ್ನಿಯೊಂದಿಗೆ ಶರಣು ವಿಶ್ವವಚನ ಫೌಂಡೇಷನ್ ಸ್ಥಾಪಿಸಿ ವಚನಗಳ ಅಂತರರಾಷ್ಟ್ರೀಯ ಪ್ರಸಾರಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಸಂಸ್ಥೆಯ ಮೂಲಕ:

15 ದೇಶ ಮತ್ತು 10 ರಾಜ್ಯಗಳಲ್ಲಿನ 1 ಲಕ್ಷಕ್ಕೂ ಹೆಚ್ಚು ಜನರಿಗೆ ವಾಟ್ಸಾಪ್ ಮುಖಾಂತರ ವಚನಗಳ ಪ್ರಸಾರ

ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ವಚನ ನಡಿಗೆ ಕಾರ್ಯಕ್ರಮ

“ವಚನಗ್ರಾಮ” ಯೋಜನೆಗಳ ಮೂಲಕ ವಚನಪರ ಚಟುವಟಿಕೆ

ಪ್ರಮುಖ ಕೃತಿಗಳು

ನೂರೊಂದು ವಚನಕಾರರ ನೂರೊಂದು ವಚನಗಳು

ಬಸವಣ್ಣನವರ ನೂರೊಂದು ವಚನಗಳು

ವಚನ ಕಲ್ಯಾಣ

ವಚನಸಾರ

ವಚನಾಮೃತ

ನಿಜಸುಖಿ ಹಡಪದ ಅಪ್ಪಣ್ಣ

ವಚನಭಾರತ

ಗುರುಕರುಣ ತ್ರಿವಿಧಿ ಮತ್ತು ವಚನಗಳು

ಶರಣ ಸೌರಭ (ಬಸವಯುಗದ ವಚನಕಾರರ ಪರಿಚಯ)

ಕೋಟಿಗೊಬ್ಬ ಶರಣ (ಕವನ ಸಂಕಲನ)

ವಚನ ಕಥಾ ಪ್ರಪಂಚ

ವಿಜಯ ದೀಪ

ವಚನ ಶಾಲೆ

ವಚನ ದೀಪ

ದಿವ್ಯ ಪ್ರಸಾದ

ಬಸವ ವಚನಾಮೃತ

ಅಕ್ಕನ ವಚನಾಮೃತ

ಬಸವಭಾನು ಸಂಚಿಕೆ

ಶರಣು ದಿನಚರಿ (2016ರಿಂದ 2026ರವರೆಗೆ 11 ಸಂಪುಟಗಳು)

ಪ್ರಶಸ್ತಿ ಮತ್ತು ಗೌರವಗಳು

ಗೌರವ ಡಾಕ್ಟರೇಟ್ – ಗ್ಲೋಬಲ್ ಪೀಸ್ ಯುನಿವರ್ಸಿಟಿ

ಸಂಘಸಿರಿ ಪ್ರಶಸ್ತಿ – ಸಿದ್ಧಗಂಗಾ ಮಠ

ಬಸವಭೂಷಣ ಪ್ರಶಸ್ತಿ – ಬೆಂಗಳೂರು ಬಸವ ಸಮಿತಿ

ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳು

ವಚನ ಸಿರಿ ಮುಕುಟ, ಶರಣ ಜ್ಞಾನರತ್ನ, ಬಸವಶ್ರೀ, ವಚನರತ್ನ, ಕಾಯಕಯೋಗಿ, ಅಲ್ಲಮಶ್ರೀ ಮುಂತಾದ ಬಹುಮಾನಗಳು

100ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಂದ ಅಭಿನಂದನೆಗಳು ಮತ್ತು ಸನ್ಮಾನಗಳು

Monday, September 15, 2025

ಧರ್ಮಪೀಠವನ್ನು ಜ್ಞಾನಪೀಠವನ್ನಾಗಿಸಿದ ಮಹಾತ್ಮರು ಸುತ್ತೂರು ಜಗದ್ಗುರು ರಾಜೇಂದ್ರಶ್ರೀಗಳು : ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ

 



ಮೈಸೂರು : ಧರ್ಮಪೀಠವನ್ನು ಜ್ಞಾನಪೀಠವನ್ನಾಗಿಸಿದ ಮಹಾತ್ಮರು ಸುತ್ತೂರು ಜಗದ್ಗುರು ರಾಜೇಂದ್ರಶ್ರೀಗಳು ಎಂದು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ 


ನಗರದ ಮೇಟಗಳ್ಳಿ ಜೆ.ಎಸ್.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ೧೧೦ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಅವರು ರಾಜೇಂದ್ರ ಶ್ರೀಗಳು ವಿಶಾಲವಾದ ಹಣೆಯ ತುಂಬಾ ಭಕ್ತಿ, ಜ್ಞಾನ ಮತ್ತು ವೈರಾಗ್ಯದ ಸಂಕೇತದAತೆ ಸದಾ ಶೋಭಿಸುವ ಬೆಳ್ಳಂಬೆಳಗಿನ ಭಸ್ಮಧಾರಣೆ ಮಾಡಿಕೊಂಡು ದರ್ಶನಕ್ಕೆ ಬಂದವರನ್ನು ಇವನಾರವನೆನ್ನದೆ ಇವನಮ್ಮವ ಎಂದು ಎಲ್ಲರನ್ನೂ ತಮ್ಮಲ್ಲಿಗೆ ಬರಮಾಡಿಕೊಳ್ಳುವ ವಿಶಾಲ ಬಾವನೆಯ ಮಾತೃ ಹೃದಯಿಗಳು. ಸಾವಿರಾರು ಮಕ್ಕಳಿಗೆ ವಸತಿ ಕಲ್ಪಿಸಿ ಅನ್ನದಾಸೋಹ ನೀಡಿ ಅನ್ನ ಬ್ರಹ್ಮ ಎನಿಸಿಕೊಂಡರು. ಜಗವೆಲ್ಲ ನಗುತಿರಲಿ, ಜಗದಳುವು ನನಗಿರಲಿ ಎಂಬ ಕವಿ ಈಶ್ವರ ಸಣಕಲ್ಲ ಅವರ ಕವಿತೆ ಅಕ್ಷರಶಃ ರಾಜೇಂದ್ರ ಶ್ರೀಗಳ ಜೀವನಕ್ಕೆ ಹೊಂದುತ್ತದೆ. ಶ್ರೀಗಳ ಸೇವೆಯನ್ನು ಕಣ್ಣಾರೆ ಕಂಡಿದ್ದ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು ರಾಜಗುರುತಿಲಕ ಎಂಬ ಬಿರುದು ನೀಡಿ ಅರಮನೆಗೆ ರಾಜಗುರುವನ್ನಾಗಿ ಸ್ವೀಕರಿಸಿದರು ಎಂದರು.


ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಶಿಕ್ಷಕರ ದಿನಾಚರಣೆ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ ಇಂದು ಕೃತಕ ಬುದ್ಧಿಮತ್ತೆಯನ್ನು ಅನೇಕರು ಗುರು ಎಂದು ಸಂಬೋಧಿಸುತ್ತಿದ್ದರೂ ಸಹಾ ಭೌತಿಕ ಗುರುಗಳು ಕೊಡುವ ಪ್ರೀತಿ, ಮಮತೆ, ಮೌಲ್ಯ, ಆತ್ಮವಿಶ್ವಾಸ, ಮತ್ತು ಸ್ಫೂರ್ತಿಯನ್ನು ನೀಡಲು ಸಾಧ್ಯವಿಲ್ಲ. ಬದಲಾದ ವಿದ್ಯಾರ್ಥಿಗಳ ಮನೋಭಾವ ಅರಿತು ಅವರನ್ನು ನಾಗರೀಕರನ್ನಾಗಿ ಮಾಡುತ್ತಿರುವ ಅನೇಕ ಪ್ರಾಮಾಣಿಕ ಶಿಕ್ಷಕರು ಭರವಸೆಯ ಸಾಕಾರಮೂರ್ತಿಗಳಾಗಿ ಕಂಗೊಳಿಸುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ದಿನ ನಾವು ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಸ್ಮರಿಸುವುದರ ಜೊತೆಗೆ ಮಹಿಳೆಯರಿಗೆ ಶಿಕ್ಷಣ ನಿಷೇಧ ಏರಿದ್ದ ಕಾಲಘಟ್ಟದಲ್ಲಿ ಸಂಪ್ರದಾಯವಾದಿಗಳಿAದ ಅನೇಕ ಪೆಟ್ಟು ತಿಂದು ಮಹಿಳೆಯರಿಗೆ ಶಿಕ್ಷಣ ನೀಡಿ ಅವರು ಮುಖ್ಯವಾಹಿನಿಗೆ ಬರಲು ಕಾರಣೀಭೂತರಾದ ಆಧುನಿಕ ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರನ್ನೂ ಕೂಡಾ ಸ್ಮರಿಸಬೇಕು ಎಂದರು.

ಶಿರಮಳ್ಳಿ ವಿರಕ್ತಮಠದ ಶ್ರೀ ಇಮ್ಮಡಿ ಮುರಘಿ ಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ ಸ್ವಾರ್ಥವನ್ನು ಮೈಗೂಡಿಸಿಕೊಳ್ಳದೆ ರಾಜೇಂದ್ರ ಶ್ರೀಗಳಂತೆ ನಿಸ್ವಾರ್ಥವನ್ನು ರೂಢಿಸಿಕೊಂಡು ಸಮಾಜಕ್ಕೆ ಉಪಕಾರಿಯಾಗಿ ಬಾಳಬೇಕು. ಪ್ಲಾಸ್ಟಿಕ್ ಮತ್ತು ಇತರೆ ವಸ್ತುಗಳಿಂದ ವಿಧವಿಧದ ಹೂಗಳನ್ನು ಮಾಡಿ ಅಲಂಕಾರಕ್ಕೆ ಬಳಸಲಾಗುತ್ತದೆ. ಆದರೆ ನೈಜ ಹೂಗಳು ಕೊಡುವ ಸೌಂದÀರ್ಯ, ನೈಜತೆ ಮತ್ತು ಪರಿಮಳವನ್ನು ಕೃತಕ ಹೂಗಳು ನೀಡಲು ಸಾಧ್ಯವಿಲ್ಲ. ನಾವು ನೈಜ ಜೀವನಕ್ಕೆ ಬೆಲೆ ಕೊಟ್ಟು ವಿಶಾಲ ಹೃದಯಿಗಳಾಗಿ ರೂಪುಗೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ಶೇ ೧೦೦ ಫಲಿತಾಂಶ ನೀಡಿದ ವಿಷಯ ಶಿಕ್ಷಕರಾದ ದೀಪ ಪ್ರಶಾಂತ್ ಮತ್ತು ದೀಪ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಸತೀಶ್ ಸ್ವಾಗತಿಸಿದರು. ಸಂಗೀತ ಶಿಕ್ಷಕಿ ಸುಮಂಗಲ ಜಂಗಮಶೆಟ್ಟಿ ಪ್ರಾರ್ಥಿಸಿದರು. ಶಿಕ್ಷಕಿ ಎಂ.ವಿ ಅಮೃತವಾಣಿ ವಂದಿಸಿದರು.  ಶಿಕ್ಷಕ ಬಿ.ಆರ್‌ ಸುನೇಶ್‌ ಕುಮಾರ್‌ ನಿರೂಪಿಸಿದರು. ಶಾಲೆಯ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Sunday, August 31, 2025

ಎಂ ಎಂ ಕಲಬುರ್ಗಿ

 *"ಡಾ|| ಎಂ ಎಂ ಕಲಬುರ್ಗಿ ಎಂಬ ಬಯಲ ಬೆಳಕು"*

 - ಡಾ|| ಮೀನಾಕ್ಷಿ ಬಾಳಿ


ನಾಡು ಕಂಡ ಜೀವಪರ ಚಿಂತಕ ಡಾ| ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ ಹುತಾತ್ಮರಾಗಿ ಇಂದಿಗೆ 10 ವರ್ಷ..


ಮತೀಯವಾದಿಗಳು ಯಾವತ್ತೂ ವಿಚಾರಗಳಿಗೆ ಮಾತ್ರ ಹೆದರುತ್ತಾರೆ. ಹೌದು, ಕಲಬುರ್ಗಿಯವರ ಸತ್ಯದ ನಿಲುವುಗಳಿಂದ ವಿಚಲಿತರಾದ ಹೆಂಬೇಡಿಗಳು ವಿದ್ಯಾರ್ಥಿಗಳ ವೇಷದಲ್ಲಿ ಬಂದು ಗುಂಡಿಟ್ಟು ಕೊಂದರು. ಅವರು ವಿಚಾರ ಮಾಡುವ ಮೆದುಳಿಗೆ ಹೆದರಿಯೇ ಸರಿಯಾಗಿ ಹಣೆಗೆ ಹೊಡೆದರು . ಬಸವ ನಾಡಿನ ಕಪ್ಪು ಮಸಾರಿ ಮಣ್ಣಿನ ಬೆಳಕನ್ನು ಕೆಂಪು ಮಣ್ಣಿನ ಹೂ ಬನದಲ್ಲಿ ನಂದಿಸಲಾಯಿತು. ಧಾರವಾಡದ ಕೆಂಪು ಮಣ್ಣು ಎಂ ಎಂ ಕಲಬುರ್ಗಿಯವರ ರುಧಿರ ಧಾರೆಯಿಂದ ಇನ್ನಷ್ಟು ಕೆಂಪಾಗಿದೆಯೇ? ಕೆಂಪು ಜೀವಪರ ಹೋರಾಟದ ಸಂಕೇತವಲ್ಲವೇ.?

ಭಾರತವೆಂಬ ಭವ್ಯದೇಶದಲ್ಲಿ ಸತ್ಯ ಪ್ರತಿಪಾದನೆ ಮಾಡಿದ್ದಕ್ಕಾಗಿಯೇ ಪ್ರಾಣ ಕಳೆದುಕೊಂಡವರ ಪಟ್ಟಿಯೂ ದೊಡ್ಡದೆ ಇದೆ. ಪ್ರಾಚೀನ ಕಾಲದ ಮಾತಂತಿರಲಿ. ಸಂಪೂರ್ಣ ನಾಗರಿಕರಾಗಿದ್ದೇವೆ ಎಂಬ ಆಧುನಿಕ ಕಾಲಘಟ್ಟದ ಒಂದೇ ಶತಮಾನದ ಅವಧಿಯಲ್ಲಿ ಮಹಾತ್ಮಾ ಗಾಂಧಿಯಿಂದ ಆರಂಭಗೊಂಡು ಹಲವು ವಿಚಾರವಾದಿಗಳನ್ನು ದೇಶ ಬಲಿ ತೆಗೆದುಕೊಂಡಾಗಿದೆ. ಇವರನ್ನೆಲ್ಲ ಗಾಂಧಿಯನ್ನು ಕೊಲೆಗೈದ ಮೂಲಭೂತವಾದಿ ಕರ್ಮಠರೇ ಹುತಾತ್ಮರಾಗಿಸಿದ್ದು ಕಾಕತಾಳೀಯವೇನಲ್ಲ. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ನರಭಕ್ಷಕ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾಗಿ ಜೀವತೆತ್ತ ಅಮಾಯಕರಿಗಂತೂ ಲೆಕ್ಕವೇ ಇಲ್ಲ. ಆದರೂ ಈ ದೇಶ ಮಹಾನ್ ಎಂದು ಗುಡುಗಲಾಗುತ್ತಿದೆ. ಈ ದೇಶದಲ್ಲಿ ತಮ್ಮ ವಿಚಾರಗಳನ್ನು ಒಪ್ಪದವರ ಬಲಿ ಪಡೆಯುವುದನ್ನು ದೇಶಭಕ್ತಿ, ಧರ್ಮಬೀರುತ್ವ ಎಂದು ಕರೆಯಲಾಗುತ್ತಿದೆ.

'ಬಾಗಿದ ತಲೆ ಮುಗಿದ ಕೈಯಾಗಿರಿಸಯ್ಯಾ' ಎಂಬಂತೆ ಸರಳ ಸಜ್ಜನಿಕೆಯ ಮನುಷ್ಯರಾಗಿದ್ದ ಕಲಬುರ್ಗಿಯವರನ್ನು ಪಿಸ್ತೂಲು ಹಣೆಗೆ ಹಚ್ಚಿ ಭ್ರೂಮಧ್ಯಕ್ಕೆ ಗುರಿಯಿಟ್ಟು ಹೊಡೆಯುವಷ್ಟು ಕ್ರೌರ್ಯವನ್ನು ಮೆರೆದದ್ದಾರೂ ಏಕೆ? ಕಲಬುರ್ಗಿ ಉಗ್ರವಾದಿ ಹೋರಾಟಗಾರರಾಗಿದ್ದರೇ? ಅಥವಾ ಅಧಿಕಾರಕ್ಕಾಗಿ ಕುತಂತ್ರ ನಡೆಸಿದ ರಾಜಕಾರಣಿಯಾಗಿದ್ದರೇ? ಇಲ್ಲ. ಧನ ಸಂಪತ್ತು ಇತ್ಯಾದಿ ಭೌತಿಕ ದಾಹಕ್ಕಾಗಿ ಯಾರನ್ನಾದರೂ ಪೀಡಿಸಿದವರಾಗಿದ್ದರೇ? ಇಲ್ಲ. ಶಾಸನಗಳು, ಹಸ್ತಪ್ರತಿಗಳು, ಪುಸ್ತಕ, ಪೆನ್ನು, ವ್ಯಾಸಂಗ ಬಿಟ್ಟು ಒಂದಿಂಚೂ ಆಚೆ ಈಚೆ ಸುಳಿದಾಡಿರದ ಉದ್ದ ಮೂಗಿನ, ಸಪೂರ ದೇಹದ, ಹಿಡಿಯಷ್ಟು ಮಾಂಸ ಖಂಡ ಹೊಂದಿದ ಈ ಮನುಷ್ಯನನ್ನು ಬೆಳ್ಳಂಬೆಳಗಿನ ಜಾವದಲ್ಲಿ ಹಾಗೇ ಸುಮ್ಮನೆ ಪಿಕ್ನಿಕ್‌ಗೆ ಬಂದಷ್ಟು ಸರಳವಾಗಿ ಬಂದು ಹೊಡೆದು ಹೋದರಲ್ಲ! ಅದು ಹೇಗೆ ಸಾಧ್ಯವಾಯಿತು? ಅಷ್ಟಕ್ಕೂ ಜೀವಮಾನದುದ್ದಕ್ಕೂ ಈ ಮನುಷ್ಯ ಮಾಡಿದ್ದಾದರೂ ಏನು? ಸಕಲ ಜೀವಾತ್ಮರಿಗೆ ಲೇಸು ಬಯಸುವ ಕೂಡಲಸಂಗನ ಶರಣರ ಕುಲಜರಾಗಿದ್ದ ಕಲಬುರ್ಗಿಯವರು ಅಖಂಡ ಜೀವಪರ ಚಿಂತಕರಾಗಿದ್ದರು. ಮಾನವ ವಿರೋಧಿ ಎನಿಸುವ ಸ್ವಾರ್ಥ, ಕುತಂತ್ರ ಮೆರೆಯುವ ಎಲ್ಲ ಬಗೆಯ ಸಿದ್ಧಾಂತ ಮತ್ತು ನಡೆಗಳನ್ನು ಅವರು ವೈಚಾರಿಕ ಹತ್ಯಾರುಗಳಿಂದಲೇ ಖಂಡಿಸಿದ್ದರು.


*ಮಲ್ಲಪ್ಪ ಕಲಬುರ್ಗಿಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಪುಟ್ಟ ಹಳ್ಳಿ ಯರಗಲ್ ಎಂಬಲ್ಲಿ. ತಂದೆ ಮಡಿವಾಳಪ್ಪ, ತಾಯಿ ಗುರಮ್ಮ ದಿನಾಂಕ 28-11-1938* ರಂದು ತಾಯಿಯ ತವರು ಮನೆಯಾದ ಗುಬ್ಬೇವಾಡದಲ್ಲಿ ಹುಟ್ಟಿದ ಇವರು 1 ರಿಂದ 4 ನೇ ಇಯತ್ತೆವರೆಗೆ ಯರಗಲ್‌ದಲ್ಲಿ ಓದಿದ ಅಪ್ಪಟ ದೇಶಿ ಪ್ರತಿಭೆ. ಪ್ರೌಢ ವಿದ್ಯಾಭ್ಯಾಸವನ್ನು ಸಿಂದಗಿಯಲ್ಲಿ ಮುಗಿಸಿದರೆ ವಿಜಾಪುರದ ವಿಜಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದು ಕೊಂಡರು.

ಹೆಚ್ಚಿನ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ತೆರಳಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ 1962ರಲ್ಲಿ ಕನ್ನಡ ಸಾಹಿತ್ಯದಲ್ಲಿ 'ಜಯಚಾಮರಾಜ ಒಡೆಯರ್ ಸ್ಮಾರಕ ಸುವರ್ಣ ಪದಕದೊಂದಿಗೆ' ಸ್ನಾತಕೋತ್ತರ ಪದವಿ ಪಡೆದುಕೊಂಡರು. ಎಂಎ ಪದವಿ ಪಡೆದ ದಿನದಿಂದಲೇ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಆ‌ರ್ ಸಿ ಹಿರೇಮಠರ ಗರಡಿಯಲ್ಲಿ ಸೇರಿಕೊಂಡರು. ಕನಡ ಅಧ್ಯಯನ ಪೀಠದ ಸಮಗ್ರ ವಚನ ವ್ಮಾಯ ಸಂಶೋಧನೆ, ಸಂಸ್ಕರಣ ಮತ್ತು ಪ್ರಕಟಣ ಯೋಜನೆಯಲ್ಲಿ ಸಹಾಯಕ ಸಂಶೋಧಕರಾಗಿ ಅಕ್ಷರದ ನೊಗ ಹೊತ್ತವರು ಕೊನೆ ಉಸಿರಿನವರೆಗೂ ನೊಗ ಬಿಚ್ಚಿರಲೇ ಇಲ್ಲ.

1962 ರಿಂದ 1966 ರವರೆಗೆ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಮುಂದೆ ಇವರ ಅಧ್ಯಯನ ಮತ್ತು ಅಧ್ಯಾಪನಾ ಆಸಕ್ತಿಯನ್ನು ಮನಗಂಡು 1966 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ ನೇಮಿಸಿಕೊಳ್ಳಲಾಯಿತು.

1968 ರಲ್ಲಿ ತಮ್ಮ ಮೆಚ್ಚಿನ ಗುರುಗಳಾದ ಆರ್ ಸಿ ಹಿರೇಮಠರ ಮಾರ್ಗದರ್ಶನದಲ್ಲಿ *'ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ' ಎಂಬ ವಿಷಯ ಕುರಿತು ಸಂಶೋಧನೆಗೈಯ್ದು ಮಹಾಪ್ರಬಂಧವನ್ನು ಮಂಡಿಸಿದರು. ಇವತ್ತಿಗೂ ಸಂಶೋಧನಾ ವ್ಯಾಸಂಗದಲ್ಲಿ ಅದೊಂದು ಮೈಲಿಗಲ್ಲಾಗಿದೆ*. ಸಂಶೋಧನೆಯ ಶಿಸ್ತು ವಿಚಕ್ಷಣ ದೃಷ್ಟಿಕೋನ, ವಸ್ತುನಿಷ್ಠತೆ, ನಿಖರತೆ ಮುಂತಾದ ಅಂಶಗಳಿಗೆ ಕಲಬುರ್ಗಿಯವರ ಈ ಕೃತಿಯು ಮಾದರಿಯಾಗಿದ್ದನ್ನು ವಿದ್ವಾಂಸರಾರೂ ಅಲ್ಲಗೆಳೆಯಲಾರರು.

ನಿರಂತರ ಓದು ಮತ್ತು ಅದಮ್ಯ ಉತ್ಸಾಹ ಇವೆರಡೂ ಇವರ ಚಹರೆಗಳಾಗಿದ್ದವು. ಓದಲು ಮತ್ತು ಬರೆಯಲೆಂದೇ ಹುಟ್ಟಿದ ಮನುಷ್ಯನೇನೋ ಎಂಬಷ್ಟು ಹಟದಲ್ಲಿ ಮುಂದುವರಿದ ಇವರು *ಬರೆದ ಪುಸ್ತಕಗಳ ಸಂಖ್ಯೆ 115*. ಸುಮಾರು *700ಕ್ಕೂ ಹೆಚ್ಚು ಬಿಡಿಬರಹಗಳನ್ನು ಪ್ರಕಟಿಸಿದ್ದಾರೆ*. ಇನ್ನೂ ಬರೆಯಬಹುದಾಗಿದ್ದ ಅವೆಷ್ಟು ಕೃತಿಗಳು ಅಂತರ್‌ಧ್ಯಾನದಲ್ಲಿ ಲೀನವಾದವೊ? ಗೊತ್ತಿಲ್ಲ.


ಇವರ ಪ್ರಮುಖ ಆಸಕ್ತಿ *ವಚನ ಸಾಹಿತ್ಯ ಮತ್ತು ಶಾಸನ ಸಾಹಿತ್ಯ* ತುಂಬು ಹರೆಯದಲ್ಲಿಯೇ

* 1968ರಲ್ಲಿ 'ಶಾಸನಗಳಲ್ಲಿ ಶಿವಶರಣರು' ಎಂಬ ಕೃತಿಯನ್ನು ಹೊರ ತಂದರು. ಇದು ಇವತ್ತಿಗೂ ಶಾಸನಗಳ ಮೂಲಕ ಐತಿಹಾಸಿಕ ತಥ್ಯಗಳನ್ನು ಅನ್ವೇಷಣೆ ಮಾಡುವ ವಿಧಾನಕ್ಕೆ ಮಾದರಿಯಾಗಿದೆ. ಅದೇ ಹೊತ್ತಿಗೆ 12 ನೇ ಶತಮಾನದ ಶಿವಶರಣರ ಕುರಿತು ಚಾರಿತ್ರಿಕ ಸಂಗತಿಗಳನ್ನು ಕಂಡುಕೊಳ್ಳುವವರಿಗೆ ಆಕರವಾಗಿದೆ. ಆದ್ದರಿಂದ ಇದು ಶೋಧ ಮಾರ್ಗದ ಆಚಾರ ಕೃತಿಯಾಗಿದೆ.

* 1974ರಲ್ಲಿ 'ಶಾಸನ ವ್ಯಾಸಂಗ' ಕೃತಿ ಪ್ರಕಟಿಸಿ ಮುಂದೆ ಶಾಸನಗಳಲ್ಲಿ ಅಧ್ಯಯನ ಮಾಡುವವರಿಗೆ ಒಂದು ರಹದಾರಿಯನ್ನು ತೆರೆದು ತೋರಿಸಿದರು. ಈ ಕೃತಿಗೆ *'ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ'* ಯು ದಕ್ಕಿತು.


ಸಂಪಾದನೆ ಇವರ ಇನ್ನೊಂದು ಆಸಕ್ತಿ ಕ್ಷೇತ್ರ. ದಣಿವರಿಯದ ಈ ಸಂಪಾದಕ

* ಪ್ರಾಚೀನ ಸಾಹಿತ್ಯದ 34 ಕೃತಿಗಳನ್ನು ಸಂಪಾದಿಸಿದರೆ,

* ಆಧುನಿಕ ಸಾಹಿತ್ಯದ 10 ಕೃತಿಗಳನ್ನು ಸಂಪಾದಿಸಿದ್ದಾರೆ.

ಕನ್ನಡ ಗ್ರಂಥ ಸಂಪಾದನೆಯನ್ನು ಒಂದು ಅಧ್ಯಯನ ಶಿಸ್ತಾಗಿ ಅಭಿವೃದ್ಧಿಪಡಿಸುವಲ್ಲಿ ಕಲಬುರ್ಗಿ ವಹಿಸಿದ ಶ್ರಮ ಮತ್ತು ಎಚ್ಚರ ಇವೆರಡೂ ಚರಿತಾರ್ಹ, *1972 ರಲ್ಲಿ ಬರೆದ ಕನ್ನಡ ಗ್ರಂಥ ಸಂಪಾದನ ಶಾಸ್ತ್ರ ಕೃತಿಯು ಸಂಪಾದನಕಾರರ ಕೈಪಿಡಿಯೇ ಆಗಿದೆ*. ನಾಮವಿಜ್ಞಾನವು ಅವರ ಇನ್ನೊಂದು ಕುತೂಹಲದ ಕ್ಷೇತ್ರ, ಕನ್ನಡದಲ್ಲಿ ನಾಮವಿಜ್ಞಾನ ಕುರಿತು ಅವರಷ್ಟು ಸ್ವಾರಸ್ಯಪೂರ್ಣವಾಗಿ ಅಧ್ಯಯನ ಮಾಡಿದವರಿಲ್ಲ. ಅದರಲ್ಲೂ ಉತ್ತರ ಕರ್ನಾಟಕದ ಮನೆಯ ಹೆಸರುಗಳ (ಅಡ್ಡಹೆಸರು) ಬಗೆಗೆ ಪ್ರಥಮ ಬಾರಿಗೆ ತುಂಬಾ ಕುತೂಹಲವಾದ ಅಂಶಗಳನ್ನು ನಮೂದಿಸಿದ್ದಾರೆ. ಇದರ ಪ್ರತಿಫಲವೆಂಬಂತೆ ಅವರು ತಮಿಳುನಾಡಿನ ತಂಜಾವೂರಿನಲ್ಲಿ ನಡೆದ *ಅಖಿಲ ಭಾರತ ನಾಮವಿಜ್ಞಾನ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು*. ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲ ಜ್ಞಾನಶಾಖೆಗಳನ್ನು ಇವರು ಮುಟ್ಟಿ ಮೌಲಿಕ ಕೊಡುಗೆ ಇತ್ತಿದ್ದಾರೆ. *ವ್ಯಾಕರಣ, ಛಂದಸ್ಸು, ಭಾಷಾಶಾಸ್ತ್ರ ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ರ ಅಲಂಕಾರ ಶಾಸ್ತ್ರ ಮೀಮಾಂಸೆ, ವಿಮರ್ಶೆ* ಮುಂತಾದ ಹಲವು ಕ್ಷೇತ್ರಗಳ ಹರಹಿನಲ್ಲಿ ಈಜಾಡಿ ಜಯಿಸಬಲ್ಲವರಾಗಿದ್ದರು.


ಸಾಹಿತ್ಯ ಮತ್ತು ಇತಿಹಾಸದ ಅಂತರ್‌ಸಂಬಂಧವನ್ನು ಮೂರ್ತರೂಪದಲ್ಲಿ ಸಾಕಾರಗೊಳಿಸಿದ ಇವರು ಸಾಂಸ್ಕೃತಿಕ ಶೋಧವು ಜನಾಂಗ ಬದುಕಿನ ಭಾವಕೋಶದ ಶೋಧವೇ ಆಗಿರುತ್ತವೆ ಎಂಬುದನ್ನು ಎತ್ತಿ ತೋರಿಸಿದರು.

*"ಕಲಬುರ್ಗಿ ಅವರ ಶೋಧಗಳು ಕನ್ನಡ ಸಾಹಿತ್ಯಕಷ್ಟೇ ಅಲ್ಲ ಕನ್ನಡ ನಾಡು, ನುಡಿ, ಸಂಸ್ಕೃತಿಯ ಶೋಧಗಳಿಗೂ ಮಾದರಿಯಾಗಿವೆ"*.

ಹೀಗೆಂದೇ *1991 ರಲ್ಲಿ ಬಳ್ಳಾರಿಯ ಸೊಂಡೂರಿನಲ್ಲಿ ನಡೆದ ಇತಿಹಾಸ ಸಮ್ಮೇಳನದ ಅಧ್ಯಕ್ಷತೆಗೂ ಭಾಜನರಾಗಿದ್ದರು*.


ಇವರು 

* ಶಾಸನ ಕುರಿತು 10 ಕೃತಿಗಳು.

* ಸಂಶೋಧನೆಗೆ ಸಂಬಂಧಪಟ್ಟಂತೆ 17 ಕೃತಿಗಳು.

* ಶಾಸ್ತ್ರ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ 6 ಕೃತಿಗಳು.

* 50 ಸಂಪಾದಿತ ಕೃತಿಗಳು.

* 4 ಅಭಿನಂದನಾ ಗ್ರಂಥಗಳ ಸಂಪಾದನೆ.

* 14 ವಿವಿಧ ಸ್ಮರಣಿಕೆ, ಪತ್ರಿಕೆ, ವಾಚಿಕೆ, ವಿಚಾರ ಸಂಕಿರಣಗಳ ಸಂಪಾದಿತ ಕೃತಿಗಳನ್ನು ಹೊರ ತಂದಿದ್ದಾರೆ.

* 2 ಜಾನಪದ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ.

ಅಪಾರ ವಿದ್ವತ್ತು ಮತ್ತು ದಣಿವರಿಯದ ಶ್ರಮವನ್ನು ಬಯಸುವ ಸಂಶೋಧನೆ, ಸಂಪಾದನೆ ಮುಂತಾದ ಶಾಸ್ತ್ರ ಶೋಧದಲ್ಲಿ ಇವರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡದ್ದರಿಂದ ಸೃಜನ ಸಾಹಿತ್ಯದತ್ತ ಹೊರಳಲು ಅವಕಾಶವೇ ಸಿಗಲಿಲ್ಲವೇನೊ? ಆದರೆ ಸಂಶೋಧನೆಯು ಸೃಜನದ ಆತ್ಯಂತಿಕ ಸ್ಥಿತಿಯೆಂಬುದನ್ನು ಕಲಬುರ್ಗಿ ಮಾಸ್ತರ್ ವಿದ್ವತ್‌ ಲೋಕಕ್ಕೆ ತೆರೆದು ತೋರಿಸಿದರು. ಆದರೂ ಕಲಬುರ್ಗಿಯೊಳಗಿನ ಕವಿಮನ 'ಕೆಟ್ಟಿತ್ತು ಕಲ್ಯಾಣ'' ಖರೇ ಖರೇ ಸಂಗ್ಯಾಬಾಳ್ಯಾ ಎಂಬ ಎರಡು ನಾಟಕಗಳನ್ನು, 'ನೀರು ನೀರಡಿಸಿತ್ತು' ಎಂಬ ಕವನ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿತು. ಈ ಮೂಲಕ ಕಲಬುರ್ಗಿ ತಾವೊಬ್ಬ ಸವ್ಯಸಾಚಿ ಎಂಬುದನ್ನು ಸಾಬೀತು ಪಡಿಸಿದರು. ಪ್ರಾಯಶಃ ವ್ಯಕ್ತಿಯೊಬ್ಬರ ಬದುಕಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಬರೆಯಬಹುದಾದದ್ದನ್ನು ಕಲಬುರ್ಗಿ ಬರೆದರು. ಆದರೆ ಅವರ ಕೃತಿಗಳು ಸಂಖ್ಯಾತ್ಮಕವಾಗಿ ಗಮನ ಸೆಳೆಯದೆ ಅವುಗಳ ಒಳಗಿನ ತಿರುಳು ಮತ್ತು ಸಾಹಿತ್ಯಕ ಮೌಲ್ಯದಿಂದಾಗಿ ಗಮನ ಸೆಳೆಯುತ್ತವೆ. ಹಲವು ಕೃತಿಗಳು ಬರೆದ ತೂಕದ ಸಾಹಿತಿಗಳು ಹಲವರಿರಬಹುದು. ಆದರೆ ಗಂಭೀರ ಶಾಸ್ತ್ರೀಯ ಅಧ್ಯಯನ ಕೈಕೊಂಡು ಕರಾರುವಾಕ್ಕಾದ ಫಲಿತಗಳನ್ನು ಕೊಡುವುದಿದೆಯಲ್ಲ ಅದಕ್ಕೆ ಕನ್ನಡದ ಮಹಾಕವಿ 'ರನ್ನ' ಹೇಳುವಂತೆ ಎಂಟೆದೈರ್ಯ ಬೇಕು. ಈ ಎದೆಗಾರಿಕೆಯಿಂದಾಗಿಯೇ ಕಲಬುರ್ಗಿಯವರು ಧರ್ಮಾಂಧರ ಮತ್ತು ಶಾಸ್ತ್ರಜ್ಞರ ವಿರೋಧವನ್ನು, ಮಾರಣಾಂತಿಕ ಹಲ್ಲೆಗಳನ್ನು ಎದುರಿಸಬೇಕಾಯಿತು. ಎಂತಲೇ ಅವರು ತಮ್ಮ ಕೃತಿಯೊಂದರ ಪ್ರಸ್ತಾವನೆಯಲ್ಲಿ *"ಭಾರತದಂಥ ಭಾವನಿಷ್ಟ ರಾಷ್ಟ್ರದಲ್ಲಿ ಸಂಶೋಧನೆ ಸರಳ ಹಾದಿಯಲ್ಲ. ಈ ರಾಷ್ಟ್ರದಲ್ಲಿ ಸಂಶೋಧಕ ಆಗಾಗ ಸಣ್ಣ ಸಣ್ಣ ಶಿಲುಬೆಗಳನ್ನು ಏರಬೇಕಾಗುತ್ತದೆ. ಭಾರತೀಯ ಸಂಶೋಧಕ ಅನೇಕ ಅಗ್ನಿ ಕುಂಡಗಳನ್ನು ದಾಟಬೇಕಾಗುತ್ತದೆ"* ಎಂದು ಬರೆದರು. ಕಾರಣ ಕಲಬುರ್ಗಿಯವರು ವಚನಕಾರರಾದ 'ನೀಲಾಂಬಿಕೆ, 'ಚೆನ್ನಬಸವಣ್ಣ' ಬಸವಾದಿಗಳ ಕುರಿತು ಅನ್ವೇಷಿಸಿ ಬರೆದ ಕೆಲವು ಲೇಖನಗಳಿಂದಾಗಿ ವಿವಾದಕ್ಕೆ ಸಿಲುಕಿದ್ದರು. ಕರ್ಮಠ ಮಠೀಯವಾದಿಗಳಿಂದ ಕ್ರೂರ ದಬ್ಬಾಳಿಕೆ, ಪತಿರೋಧಕ್ಕೂ ಒಳಗಾಗಿದ್ದರು. ಆ ಸಂದರ್ಭದಲ್ಲಿ  ಅವರು ಅನುಭವಿಸಿದ ನೋವು, ಆಘಾತಗಳು ಅಸದಳವಾಗಿದ್ದವು.


ಕಲಬುರ್ಗಿ ಅಧ್ಯಯನಶೀಲರಷ್ಟೇ ಅಲ್ಲ ಅವರೊಬ್ಬ ಸಮರ್ಥ ಸಂಘಟಕರೂ ಆಗಿದ್ದರೆಂಬುದಕ್ಕೆ ಅವರು ಕಟ್ಟಿ ಬೆಳೆಸಿದ ಸಾಹಿತ್ಯಕ, ಸಾಂಸ್ಕೃತಿಕ ಸಂಘಟನೆಗಳೇ ಸಾಕ್ಷಿಯಾಗಿವೆ.

* 1975ರಲ್ಲಿ ಗದಗ ತೋಂಟದಾರ್ಯ ಮಠದಲ್ಲಿ 'ವೀರಶೈವ ಅಧ್ಯಯನ ಸಂಸ್ಥೆ'.

* 1991ರಲ್ಲಿ ನಾಗನೂರ ಮಠದಿಂದ 'ವೀರಶೈವ ಅಧ್ಯಯನ ಅಕಾಡಮಿ'.

* 1991 ರಲ್ಲಿ ಶಿವಮೊಗ್ಗದ ಆನಂದ ಮಠದಿಂದ 'ಮಲೆನಾಡ ವೀರಶೈವ ಅಧ್ಯಯನ ಸಂಸ್ಥೆ'.

* 1993ರಲ್ಲಿ ನಿಡಸೋಸಿ ಶಿವಲಿಂಗೇಶ್ವರ ಮಠದಿಂದ 'ಶರಣ ಸಂಸ್ಕೃತಿ ಅಕಾಡಮಿ'.

* 1994ರಲ್ಲಿ ಸಿಂದಗಿ ಸಾರಂಗ ಮಠದಿಂದ 'ಪೂಜ್ಯ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ'.

* 1996ರಲ್ಲಿ ಕೊಡೆಕಲ್ ಮಠದಿಂದ 'ಬಸವೇಶ್ವರ ಅಧ್ಯಯನ ಸಂಸ್ಥೆ'.

ಹೀಗೆ ಪುಂಖಾನುಪುಂಖವಾಗಿ ಸಂಸ್ಥೆಗಳನ್ನು ಸ್ಥಾಪಿಸಿ ಮಠಗಳಿಗೆ ಸಾಹಿತ್ಯಕ ಮೌಲ್ಯವನ್ನು ತಂದುಕೊಟ್ಟರು.


ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಅವರು ಮಾಡಿದ ಪುಸ್ತಕ ವ್ಯವಸಾಯವಂತೂ ಚರಿತ್ರಾರ್ಹವೇ ಹೌದು. ಕಾಲಗರ್ಭದಲ್ಲಿ ಹೂತು ಹೋಗಬಹುದಾಗಿದ್ದ ಹಲವು ಅಮೂಲ್ಯ ಕೃತಿಗಳನ್ನು ಹುಡುಕಿಸಿ ಪ್ರಕಟಿಸಿ ಕ"ನ್ನಡ ವಿಶ್ವವಿದ್ಯಾನಿಲಯವೊಂದು ಮಾಡಬೇಕಾದ ಕೆಲಸಗಳಿಗೆ ದಿಕ್ಕೂಚಿ ಒದಗಿಸಿದರು".

ದೇಶಿ ಸಮ್ಮೇಳನಗಳನ್ನು ನಡೆಸಿ ಜಾನಪದಕ್ಕೆ ವಿಶಾಲ ನೆಲೆ ಒದಗಿಸಿದರು. ಅವರ ಸಾಹಿತ್ಯ ಕೈಂಕರ್ಯವನ್ನು ಅಲಕ್ಷಿಸುವುದು ಸಾಧ್ಯವೇ ಇರಲಿಲ್ಲ. ಹೀಗಾಗಿಯೇ ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳಿಗೂ ಲೆಕ್ಕವಿಲ್ಲ. *ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಪಂಪ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ನಾಡೋಜ ಪ್ರಶಸ್ತಿ, ರಾಷ್ಟ್ರೀಯ ಬಸವ ಪುರಸ್ಕಾರ* ಹೀಗೆ ಅವುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಕಲಬುರ್ಗಿಯವರು ಮಾತ್ರ ಈ ಎಲ್ಲ ಪುರಸ್ಕಾರ ಪ್ರಶಸ್ತಿಗಳನ್ನು ಮೀರಿ ಶುದ್ಧ ಅಧ್ಯಯನ ದಾಹಿಯಾಗಿಯೇ ಮುಂದುವರಿದಿದ್ದರು.

ಶರಣರ ಕಾಯಕ ಪ್ರಜ್ಞೆಯೇ ಅವರಲ್ಲಿ ಘನೀಕೃತವಾಗಿತ್ತು..


ಸಮಕಾಲೀನ ಕನ್ನಡದ ಸಂದರ್ಭದಲ್ಲಿ ಅವರಷ್ಟು ಜ್ಞಾನದಾಹಿಗಳಾಗಿದ್ದವರನ್ನು ಕಾಣಲಾರೆವು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡಿಗರ ಕುರಿತು ಅವರು ಹೇಳಿದ ಕೆಲವು ಸತ್ಯಗಳನ್ನು ಸಂಪ್ರದಾಯವಾದಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿರಲೇ ಇಲ್ಲ. ವೈದಿಕ ಸಾಹಿತ್ಯ ತತ್ವಸಿದ್ಧಾಂತಗಳ ಮನುಷ್ಯ ವಿರೋಧಿ ನಿಲುವು ಮತ್ತು ತತ್ವಸಿದ್ಧಾಂತಗಳ ಮನುಷ್ಯ ವಿರೋಧಿ ನಿಲುವು ನೆಲೆಗಳನ್ನು ಅವರು ಯಾವ ಎಗ್ಗಿಲ್ಲದೆ ಬಟಾಬಯಲುಗೊಳಿಸಿದ್ದರು. ಇದು ವರ್ತಮಾನದ ಸಾಂಸ್ಕೃತಿಕ ರಾಜಕಾರಣಕ್ಕೆ ಅರಗದ ತುತ್ತಾಗಿತ್ತು..!


ಮತೀಯವಾದಿಗಳು ಯಾವತ್ತೂ ವಿಚಾರಗಳಿಗೆ ಮಾತ್ರ ಹೆದರುತ್ತಾರೆ. ಹೌದು, ಕಲಬುರ್ಗಿಯವರ ಸತ್ಯದ ನಿಲುವುಗಳಿಂದ ವಿಚಲಿತರಾದ ಹೆಂಬೇಡಿಗಳು ವಿದ್ಯಾರ್ಥಿಗಳ ವೇಷದಲ್ಲಿ ಬಂದು ಗುಂಡಿಟ್ಟು ಕೊಂದರು.! ಅವರು ವಿಚಾರ ಮಾಡುವ ಮೆದುಳಿಗೆ ಹೆದರಿಯೇ ಸರಿಯಾಗಿ ಹಣೆಗೆ ಹೊಡೆದರು. ಬಸವ ನಾಡಿನ ಕಪ್ಪು ಮಸಾರಿ ಮಣ್ಣಿನ ಬೆಳಕನ್ನು ಕೆಂಪು ಮಣ್ಣಿನ ಹೂ ಬನದಲ್ಲಿ ನಂದಿಸಲಾಯಿತು. ಧಾರವಾಡದ ಕೆಂಪು ಮಣ್ಣು ಎಂ ಎಂ ಕಲಬುರ್ಗಿಯವರ ರುಧಿರ ಧಾರೆಯಿಂದ ಇನ್ನಷ್ಟು ಕೆಂಪಾಗಿದೆಯೇ.? ಕೆಂಪು ಜೀವಪರ ಹೋರಾಟದ ಸಂಕೇತವಲ್ಲವೇ.?


ದೇಹಗಳನ್ನು ನಾಶ ಮಾಡುವುದರಿಂದ ವಿಚಾರಗಳನ್ನು ಕೊಲ್ಲಲಾಗದು ಎಂಬ ಸತ್ಯವು ಇತಿಹಾಸದಲ್ಲಿ ಮತ್ತೆ ಮತ್ತೆ ಸ್ಥಾಪಿತವಾಗುತ್ತಿದೆಯಾದರೂ ಸಂಪ್ರದಾಯವಾದಿಗಳು ಮಾತ್ರ ತಮ್ಮ ದುಷ್ಟ ಕಾರ್ಯಾಚರಣೆಯನ್ನು ನಿಲ್ಲಿಸುವುದೇ ಇಲ್ಲ. ವರ್ತಮಾನದ ಈ ಕ್ಷಣದ ಸಂಕಟವೇನೆಂದರೆ ಪ್ರಭುತ್ವವೇ ಹಿಂಸೆಯನ್ನು ತಾತ್ವಿಕಗೊಳಿಸುತ್ತಿರುವುದು. ಕಲಬುರ್ಗಿಯಂತಹ ಚಿಂತಕರ ಹತ್ಯೆಗಳು ನಾಗರಿಕತೆಯ ಬಗೆಗೆ ದೊಡ್ಡ ಪ್ರಶ್ನೆಗಳನ್ನು ಇದಿರು ನಿಲ್ಲಿಸುತ್ತಿವೆ..!???


(ಡಾ|| ರಾಜೇಂದ್ರ ಚೆನ್ನಿ, ಡಾ|| ರಹಮತ್ ತರೀಕೆರೆ, ಡಾ|| ಮೀನಾಕ್ಷಿ ಬಾಳಿ ಸಂಪಾದಿಸಿದ 'ನಾನು ಕಲಬುರ್ಗಿ' ಕೃತಿಯಲ್ಲಿನ ಆಯ್ದ ಭಾಗ)

ಹೊಸ ಕಥೆಗಳು 2025

 ಟಾಲ್‌ಸ್ಟಾಯ್‌ನ 'ಮನುಷ್ಯನಿಗೆಷ್ಟು ಭೂಮಿ ಬೇಕು' ಎಂಬ ಕಥೆ ಸಾಕಷ್ಟು ಜನಪ್ರಿಯ. ಈ ಕಥೆಯ ಹಂದರವೂ ಸರಳವಾಗಿದೆ.


ಒಂದೂರಿನಲ್ಲಿ ತನ್ನ ಮಿತಿಯಲ್ಲೇ ನೆಮ್ಮದಿಯಾಗಿರುವ ಒಂದು ರೈತ ಕುಟುಂಬ. ಅಲ್ಲೆಲ್ಲೋ ದೂರದ ಇನ್ನೊಂದು ಊರಿನಲ್ಲಿ ಎಷ್ಟು ಬೇಕಾದರೂ ಜಮೀನು ಕೊಡುತ್ತಾರೆ. ಅದೂ ಪುಕ್ಕಟೆ ಎಂದು ಕಿವಿಗೆ ಬಿದ್ದಾಗ, ರೈತನ ಆಸೆ ಗರಿಗೆದರುತ್ತದೆ. ಆತ ಬುತ್ತಿ ಕಟ್ಟಿಕೊಂಡು ಪ್ರಯಾಣ ಹೊರಟೇ ಬಿಡುತ್ತಾನೆ. ಅಲ್ಲಿ ಹೋದರೆ, ಅವನ ಕಿವಿಗೆ ಬಿದ್ದಿದ್ದಷ್ಟೂ ನಿಜ! ಎಷ್ಟು ಬೇಕಾದರೂ ಭೂಮಿ ಸಿಗುತ್ತೆ. ಆದರೆ ಒಂದು ಷರತ್ತು. ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಆತ ನಡೆಯಲು, ಓಡಲು ಆರಂಭಿಸಬೇಕು. ಸಂಜೆಯೊಳಗೆ ನಡಿಗೆಯಲ್ಲೇ ವಾಪಸ್‌ ಬಂದು ತಾನು ಹೊರಟ ತಾಣವನ್ನೇ ಮುಟ್ಟಬೇಕು. ಹಾಗಾದಾಗ ಅವನು ನಡಿಗೆಯಲ್ಲಿ ಕ್ರಮಿಸಿದ ಅಷ್ಟೂ ಭೂಮಿ ಅವನದೇ.


ಸರಿ, ಮಾರನೇ ಬೆಳಿಗ್ಗೆ ರೈತ ನಡೆಯತೊಡಗುತ್ತಾನೆ. ನಡಿಗೆ ಸಾಲದೆಂದು ಓಡತೊಡಗುತ್ತಾನೆ. ಊಟ, ತಿಂಡಿಗೆ ನಿಂತರೆ ಕಾಲಹರಣವೆಂದು ಎಲ್ಲೂ ವಿರಮಿಸದೆ ಸಾಧ್ಯವಾದಷ್ಟೂ ವೇಗವಾಗಿ ಗರಿಷ್ಠ ದೂರ ಕ್ರಮಿಸಲು ಉಧ್ಯುಕ್ತನಾಗುತ್ತಾನೆ. ಹಾಗೇ ನಡೆಯುತ್ತ, ಓಡುತ್ತ ಮಧ್ಯಾಹ್ನ ಕಳೆಯಿತು. ಸಂಜೆ ಸಮೀಪಿಸಿತು. ಈಗ ತಡವಾಗಿಹೋಯಿತೆಂಬ ಆತಂಕದಲ್ಲಿ, ಆರಂಭದ ಬಿಂದು ಮುಟ್ಟಲು ಶಕ್ತಿ ಮೀರಿ ಓಡುತ್ತಾನೆ.


ಕೊನೆಗೆ ಕರಾರುವಕ್ಕಾಗಿ ಸೂರ್ಯಾಸ್ತದ ಸಮಯಕ್ಕೆ ತಾನು ಹೊರಟಿದ್ದ ಜಾಗವನ್ನೇ ಬಂದು ತಲುಪುತ್ತಾನೆ. ಆದರೆ, ಅಲ್ಲಿ ಮುಟ್ಟಿದೊಡನೆ, ಆಯಾಸಕ್ಕೆ ಕುಸಿದು ಬಿದ್ದು ಸತ್ತೇ ಹೋಗುತ್ತಾನೆ. ಈಗ ಅವನನ್ನು ಆರಡಿ ಮೂರಡಿ ಗುಂಡಿಯಲ್ಲಿ ಹೂಳುತ್ತಾರೆ. ಕಡೆಗೆ ಅವನಿಗೆ ತನ್ನದಾಗಿ ದಕ್ಕಿದ ಭೂಮಿ ಅಷ್ಟೇ.


ಇದು ಕಥೆ. ಈ ಕಥೆಯನ್ನು ಲಂಕೇಶರು ಹಲವಾರು ಬಾರಿ ಉಲ್ಲೇಖಿಸಿ ಪತ್ರಿಕೆಯಲ್ಲಿ ಬರೆದರು. ಲಂಕೇಶ್ ಬೆಳೆಯುವ ಹಂತದಲ್ಲಿ, ಅದೂ ಅವರ ವ್ಯಕ್ತಿತ್ವ ರೂಪುಗೊಳ್ಳುವ ಘಟ್ಟದಲ್ಲಿ ಅವರ ಕೈಗೆ ಸಿಕ್ಕಿದ ಈ ಕಥೆ, ಸಾಹಿತ್ಯ ಲೋಕಕ್ಕೆ ಅವರ ಕಣ್ಣು ತೆರೆಯಿಸಿತು. ಅವರೊಳಗಿನ ಬರಹಗಾರನನ್ನೇ ಎಚ್ಚರಿಸಿತು. ತಮ್ಮ ಆತ್ಮಕಥೆ 'ಹುಳಿಮಾವಿನ ಮರ'ದಲ್ಲಿಯೂ ಲಂಕೇಶ್ ಈ ಕಥೆಯ ಪ್ರಸ್ತಾಪ ಮಾಡುವುದು ಹೀಗೆ:


"...ನಮ್ಮೂರ ವಯಸ್ಕರ ಶಿಕ್ಷಣದ ಪುಸ್ತಕ ಭಂಡಾರ ಉಪಯೋಗವಾದದ್ದು ನನಗೊಬ್ಬನಿಗೇ ಎಂದು ಕಾಣುತ್ತದೆ. ಆ ಲೈಬ್ರರಿಯಲ್ಲಿನ ಶಾಲು ಸಾಬಿ, ನಮಗೆಷ್ಟು ಭೂಮಿ ಬೇಕು, ಧ್ರುವ ಚರಿತ್ರೆ, ಚಂದ್ರಹಾಸ, ಗರುಡಗಂಬದ ದಾಸಯ್ಯ, ಮಂಕುತಿಮ್ಮನ ಕಗ್ಗ ಮುಂತಾದ ಪುಸ್ತಕಗಳು ನನಗೆ ಕೊಟ್ಟ ಕಾವು ಅಮೂಲ್ಯವಾದದ್ದು. ಇವತ್ತಿಗೂ ನನ್ನ ವ್ಯಕ್ತಿತ್ವದ ಭಾಗವಾಗಿರುವಂಥಾದ್ದು’.


ನನಗೆ ಕಥೆ ಎಂದರೆ ಏನು ಎಂದು ಗೊತ್ತಾದದ್ದೇ ಟಾಲ್‌ಸ್ಟಾಯ್‌ನ ನಮಗೆಷ್ಟು ಭೂಮಿ ಬೇಕು ಎಂಬುದನ್ನು ಓದಿದಾಗ. ಇದರ ಪ್ರಭಾವವನ್ನು ನೀವು ಇವತ್ತಿಗೂ ನನ್ನ ಬರಹಗಳಲ್ಲಿ ಕಾಣಬಹುದು. ಭೂಮಿಯ ಆಸೆಯಿಂದ ಮಾಯಾವಿಯೊಬ್ಬನ ಭರವಸೆಯನ್ನು ನೆಚ್ಚಿ ಹೋಗಿ ಅಸು ನೀಗಿದವನ ಕಥೆ ಇದು. ನೆಮ್ಮದಿಯ ಮಾತುಕತೆಯೊಂದಿಗೆ ಈ ಕಥೆ ಶುರುವಾಗುತ್ತದೆ. ಊಟ, ತಿಂಡಿ, ಪ್ರೀತಿ, ಸ್ನೇಹ ಇವೇ ಮುಖ್ಯ ಎಂಬಂತೆ ಶುರುವಾದ ಕಥೆ ದುರಾಶೆಯಿಂದಾದ ವಿನಾಶವನ್ನು ತೋರಿ ಮುಗಿಯುತ್ತದೆ. ಈ ಕಥೆ ನಿಜಕ್ಕೂ ಸಾಹಿತ್ಯಿಕ ಕೃತಿಯಲ್ಲ. ಬರೀ ತಾತ್ವಿಕ ಕಗ್ಗವೂ ಅಲ್ಲ. ಕಥೆ ಬರೆಯುವ ಗೀಳಿನಿಂದ ಬಂದದ್ದಲ್ಲ. ಈ ಬದುಕಿನಲ್ಲಿ ನೆಮ್ಮದಿ, ಶಾಂತಿ, ಪ್ರೇಮ, ಆಸ್ತಿ ಇವೆಲ್ಲವುಗಳ ಸ್ಥಾನವೇನು ಎಂದು ಕೇಳುತ್ತಲೇ ಈ ಬದುಕಿನ ಉದ್ದೇಶವೇನು? ಎಂದು ಈ ಕಥೆ ಪ್ರಶ್ನಿಸುತ್ತದೆ.


ಈ ಕಥೆ ನನ್ನಲ್ಲಿ ಬಿತ್ತಿದ ಬೀಜ ಮೊಳೆಯುತ್ತಲೇ ಹೋಯಿತು. ಇದರಿಂದಾಗಿ ನಾನು ಕಲಾವಿದನೆಂದುಕೊಂಡಾಗ ಆ ಬಗ್ಗೆ ಅಸಹ್ಯಪಡುವುದು, ತತ್ವಜ್ಞಾನಿಯೆಂದುಕೊಂಡಾಗ ಆ ಬಗ್ಗೆ ಗೇಲಿ ಮಾಡಿಕೊಳ್ಳುವುದು ಸಾಧ್ಯವಾಯಿತು. ಆಮೇಲೆ ಈ ಕಥೆಯ ಮೂಲಕ ಕ್ರಿಯಾಶೀಲ ಬರವಣಿಗೆ ಅತ್ಯಂತ ನೇರ, ಸರಳ ಎಂಬುದು ತಿಳಿಯಿತು. ನಾನು ಈ ಕಥೆಯಿಂದಾಗಿಯೇ ಇವತ್ತಿಗೂ ಅಮೂರ್ತದಲ್ಲಿ ಮುಳುಗಬಲ್ಲ ಬುದ್ಧಿಜೀವಿಯಲ್ಲ, ನನ್ನ ಮನಸ್ಸು ನಾನು ಕಂಡದ್ದನ್ನು ಅನುಸರಿಸಿ ಎಲ್ಲ ತಾಪ ಮತ್ತು ತಪವನ್ನು ಮುಟ್ಟಲು ಯತ್ನಿಸುತ್ತದೆ ಮತ್ತು ಈ ಕಥೆಯಿಂದಾಗಿ ಬರೆಯುವುದರ, ಬದುಕುವುದರ ಘನತೆ ತಿಳಿಯಿತು. ನನ್ನ ಒಳತೋಟಿಯನ್ನು ಒಳಗೊಳ್ಳದ ಘನತೆ ನಿಷ್ಪ್ರಯೋಜಕ. ಹಾಗೆಯೇ ಒಳತೋಟಿಯನ್ನೇ ನೆಚ್ಚಿ ಬಾಹ್ಯದ ಬಗ್ಗೆ ಕಾಳಜಿ ವಹಿಸದಿರುವುದೂ ಒಳ್ಳೆಯದಲ್ಲ. ಇಷ್ಟೆಲ್ಲ ಆಗ ಆಯಿತೆಂದು ನಾನು ಹೇಳುತ್ತಿಲ್ಲ. ಸಾಹಿತ್ಯದ ಯಕ್ಷಿಣಿ ಮತ್ತು ಲೌಕಿಕತೆ ನನ್ನನ್ನು ಮುಟ್ಟಿತ್ತು. ಮನುಷ್ಯರ ಕ್ರಿಯೆಗಳ ಸ್ವಾರಸ್ಯವನ್ನು ಅರಿಯುವುದರ ಬಗ್ಗೆ ಗಮನ ಹರಿಯಿತು..."


ಇದನ್ನು ಬರೆಯುತ್ತಿರುವ ಲಂಕೇಶ್, ಮುಕ್ಕಾಲು ಜೀವನವನ್ನು ಪೂರೈಸಿದ, ಮಾಗಿದ ಲಂಕೇಶ್ ಎಂಬುದನ್ನು ಮರೆಯದಿರೋಣ. ಇರಲಿ. ಈ ಕಥೆಗೆ ಸಂಬಂಧಿಸಿ ಇಲ್ಲಿ ಇನ್ನೊಂದು ಕುತೂಹಲದ ಅಡಿಟಿಪ್ಪಣಿಯಿದೆ.


"ಇಡೀ ವಿಶ್ವವನ್ನು ಜಯಿಸಿದ" ಅಲೆಕ್ಸಾಂಡರ್ ಭಾರತದ ಮೇಲೆ (ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ) ದಂಡೆತ್ತಿ ಬಂದಾಗಿನ ಸಂದರ್ಭ. ಇಲ್ಲಿ ತಾನು ಹೋದ ಬಂದ ಕಡೆ ಸ್ಥಳೀಯ ತತ್ವಜ್ಞಾನಿಗಳು, ಪಂಡಿತರನ್ನು ಕರೆಯಿಸಿ ಅವರೊಂದಿಗೆ ಜೀವನದ ಗಹನ ವಿಚಾರಗಳನ್ನು ಚರ್ಚಿಸುವುದು ಅವನ ಅಭ್ಯಾಸ. ಈ ಪ್ರಸಂಗವನ್ನು ಅಮರ್ತ್ಯ ಸೇನ್ ತಮ್ಮ 'ದಿ ಆರ್ಗ್ಯುಮೆಂಟೆಟೀವ್ ಇಂಡಿಯನ್' ಕೃತಿಯಲ್ಲಿ ನಿರೂಪಿಸಿದ್ದಾರೆ.


ಹಾಗೊಮ್ಮೆ ಅಲೆಕ್ಸಾಂಡರ್ ವಾಯವ್ಯ ಭಾರತದ ಜೈನ ಪಂಡಿತರನ್ನು ಭೇಟಿ ಮಾಡುವಾಗ ಅವರು ತನ್ನಂಥ ಮಹಾಯೋಧನಿಗೆ ತೋರುವ ನಿರ್ಲಕ್ಷ್ಯಕ್ಕೆ ಕಸಿವಿಸಿಗೊಂಡು ಅವರನ್ನು ಪ್ರಶ್ನಿಸುತ್ತಾನೆ. ಅದಕ್ಕೆ ಜೈನ ತತ್ವವೇತ್ತರು ನೀಡಿದ ಉತ್ತರ ಕೌತುಕಮಯವಾಗಿದೆ.


ಅವರು ಹೇಳುತ್ತಾರೆ: "ಅಲೆಕ್ಸಾಂಡರ್ ದೊರೆಯೇ, ಪ್ರತಿಯೊಬ್ಬ ಮನುಷ್ಯನಿಗೂ ತಾನು ನಿಂತ ಜಾಗದಷ್ಟು ಭೂಮಿ ಮಾತ್ರ ಲಭ್ಯ. ನೀನೂ ನಮ್ಮಂತೆಯೇ ನರಮನುಷ್ಯ. ಏನೆಂದರೆ ನೀನು ಸದಾ ಗಡಿಬಿಡಿಯಲ್ಲಿರುತ್ತೀ. ಅದರಿಂದ ಏನೂ ಉಪಯೋಗವಿಲ್ಲ. ನಿನ್ನ ಊರಿನಿಂದ ಇಷ್ಟೊಂದು ದೂರ ಬಂದು ನಿನಗೂ ಹಿಂಸೆ, ಬೇರೆಯವರಿಗೂ ತೊಂದರೆ... ಶೀಘ್ರದಲ್ಲೇ ನೀನು ಮೃತನಾಗುತ್ತೀ. ಆಮೇಲೆ ನಿನ್ನನ್ನು ಹೂಳಲು ಎಷ್ಟು ಜಾಗ ಬೇಕೋ, ಅಷ್ಟು ಭೂಮಿಗೆ ಮಾತ್ರ ನೀನು ಒಡೆಯ..!"


ಎಂಥ ಆಶ್ಚರ್ಯವಿದು! ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಜೈನ ತತ್ವಜ್ಞಾನಿಗಳು ಬೋಧಿಸಿದ್ದೂ ಅದೇ, ಎರಡು ಶತಮಾನಗಳ ಹಿಂದೆ ಟಾಲ್‌ಸ್ಟಾಯ್ ಬರೆದ ಕಥೆಯ ಸಾರವೂ ಅದೇ. ಜೀವಪೋಷಕ ಜಿಜ್ಞಾಸೆಯೊಂದು ಹೀಗೆ ಶತಮಾನಗಳನ್ನು ಹಾಯ್ದು, ಖಂಡಾಂತರ ದಾಟಿ ಮತ್ತೆ ಪ್ರತಿಧ್ವನಿ ಪಡೆದದ್ದು ಎಂಥ ಸೋಜಿಗ!


-ಎನ್.ಎಸ್. ಶಂಕರ್

(ಪ್ರಜಾವಾಣಿ ಭಾನುವಾರದ ಪುರವಣಿ,

ಜನವರಿ 20, 2019)


ಕೃಪೆ: -'ಉಸಾಬರಿ: ಮತ್ತಷ್ಟು ಸಮಕಾಲೀನ ಬರಹಗಳು' (ಪುಟ: 155-157, 2019)

 

Shankar N Sondur

Tuesday, August 19, 2025

ದೇವಲಾಪುರ ಶ್ರೀ ಗುರುಮಲ್ಲೇಶ್ವರ ಮಠದಲ್ಲಿ ವಚನ ಪಾಠಶಾಲೆ ಉದ್ಘಾಟನೆ

 



ನಂಬಿ ಕರೆದಡೆ ಶಿವನು ಓಗೊಡುತ್ತಾನೆ ಎಂದು ದೇವನೂರು ಶ್ರೀ ಗುರುಮಲ್ಲೇಶ್ವರ ತ್ರಿವಿಧ ದಾಸೋಹ ಮಠದ ಶ್ರೀ ಮಹಾಂತಸ್ವಾಮಿಗಳು ಹೇಳಿದರು. ದೇವಲಾಪುರ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಮೈಸೂರು ಜಿಲ್ಲೆಯಲ್ಲಿಯೇ ಪ್ರಥಮ ವಚನ ಪಾಠಶಾಲೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು



 ವಚನ ಸಾಹಿತ್ಯ ಅನುಭಾವಿಕ ಸಾಹಿತ್ಯವಾಗಿದ್ದು, ಶರಣರು ಮೇಲಾಗಲೊಲ್ಲದೆ ಕೀಳಾಗಿರುವೆನು ಎಂದು ಹೇಳಿ ಎಲ್ಲರಿಗಿಂತ ತಾನು ಮೇಲೆಂದು ಮೆರೆಯುವ ಅಹಂಕಾರವನ್ನು ಹತ್ತಿರ ಸುಳಿಯದಂತೆ ನೋಡಿಕೊಂಡು ಜನಸೇವೆ ಮಾಡುತ್ತಾ ಹಿಂದೆ ನಿಲ್ಲಬಯಸಿದುದರಿಂದ ೯೦೦ ವರ್ಷ ಕಳೆದರೂ ಅವರು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ಎಂದರು.



ಬರಡನಪುರ ಶ್ರೀ ಮಹಾಂತೇಶ್ವರ ಮಠದ ಶ್ರೀ ಪರಶಿವಮೂರ್ತಿಸ್ವಾಮಿಗಳು ಮಾತನಾಡಿ ಮನದ ಮೈಲಿಗೆಯನ್ನು ಕಳೆಯಲು ಶರಣರ ವಚನಗಳು ಸಹಕಾರಿಯಾಗಿದ್ದು, ಇಂತಹ ವಚನ ಸಾಹಿತ್ಯದ ಅಭಿರುಚಿ ಬಾಲ್ಯದಲ್ಲಿಯೇ ಚಿಗುರೊಡೆದಾಗ ಸುಸಂಸ್ಕೃತ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಹಾಯಕವಾಗುತ್ತದೆ ಎಂದರು.



ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಡಿ.ಎಸ್ ಗುರು ಇಂದಿನ ಕಾಲಘಟ್ಟದಲ್ಲಿ ಮನುಷ್ಯ ತಾನು ಮಾತ್ರ ಬದುಕಬೇಕು ಎಂಬ ಸ್ವಾರ್ಥ ಹೆಚ್ಚಾಗಿ ಸಮಾಜ ನೈತಿಕ ಅಧಃಪತನತ್ತ ವಾಲುತ್ತಿರುವುದು ನೋವಿನ ಸಂಗತಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೈತಿಕ ಮೌಲ್ಯಗಳನ್ನು ಗಟ್ಟಿಗೊಳಿಸಲು ದೇವಲಾಪುರ ಮಠದಲ್ಲಿ ವಚನ ಪಾಠಶಾಲೆ ಪ್ರಾರಂಭವಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.



ಶರಣರ ವಿಚಾರಧಾರೆ ವಿಷಯದ ಬಗ್ಗೆ ಪ್ರವಚನ ನೀಡಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಕಣ್ಮರೆಯಾಗುತ್ತಿದ್ದ ವಚನ ಸಾಹಿತ್ಯವನ್ನು ಗುರು ರೂಪದಲ್ಲಿ ಬೆಳಕಿಗೆ ತಂದ ಡಾ. ಫ.ಗು ಹಳಕಟ್ಟಿ, ಲಿಂಗ ಸ್ವರೂಪದಲ್ಲಿ ಸಂಶೋಧಿಸಿದ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ಮತ್ತು ಜಂಗಮ ಸ್ವರೂಪವಾಗಿ ಪ್ರಚುರಪಡಿಸಿದ ಉತ್ತಂಗಿ ಚೆನ್ನಪ್ಪನವರನ್ನು ಪ್ರತಿಯೊಬ್ಬ ಸಾಹಿತ್ಯಾಭಿಮಾನಿಯೂ ಸ್ಮರಿಸಬೇಕು ಎಂದರು.



ವಚನ ಪಾಠಶಾಲೆ ಉದ್ಘಾಟಿಸಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಉಚ್ಛಾರ ಮಾಡಿದಾಗ ಒಂದೊAದು ಅಕ್ಷರದಲ್ಲಿಯೂ ವಚನಕಾರರು ಮತ್ತು ವಚನಗಳನ್ನು ಕಾಣಬೇಕು. ಅ ಎಂದರೆ ಅಲ್ಲಮಪ್ರಭು, ಆ ಎಂದರೆ ಆಯ್ದಕ್ಕಿ ಮಾರಯ್ಯ, ಇ ಎಂದರೆ ಇಮ್ಮಡಿ ಮುರಿಘಾ ಗುರುಸಿದ್ಧಸ್ವಾಮಿಗಳು ನೆನಪಾಗಬೇಕು ಎಂದು ವಚನ ವರ್ಣಮಾಲೆಯನ್ನು ಪರಿಚಯಿಸಿದರು.



ದೇವಲಾಪುರ ಶ್ರೀ ಗುರುಮಲ್ಲೇಶ್ವರಮಠದ ಶ್ರೀ ಜಡೇಸ್ವಾಮಿಗಳು ಮಾತನಾಡಿ ಶ್ರೀಮಠಕ್ಕೆ ಭಕ್ತರೇ ಆಸ್ತಿ. ಸಮಾಜಕ್ಕೆ ಶರಣರು ನೀಡಿರುವ ಅಮೂಲ್ಯವಾದ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆಯ ಸಹಕಾರದೊಂದಿಗೆ ವಚನಪಾಠಶಾಲೆ ಪ್ರಾರಂಭಿಸುತ್ತಿದ್ದೇವೆ. ಭಕ್ತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ನಿವೃತ್ತ ಗ್ರಾಮಲೆಕ್ಕಾಧಿಕಾರಿ ನಾಗರಾಜು ನಿರೂಪಿಸಿದರು.

 ದೇವಿಕಾ  ಪ್ರಾರ್ಥಿಸಿದರು. ವಿವಿಧ ಮಠಗಳ ಮಠಾಧೀಶರು ಮತ್ತು ಗ್ರಾಮಸ್ಥರು, ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.



Saturday, August 16, 2025

ಪ್ರಥಮ ವಚನ ಪಾಠಶಾಲೆ ಉದ್ಘಾಟನೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ

 ದೇವಲಾಪುರ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಮೈಸೂರು ಜಿಲ್ಲೆಯಲ್ಲಿಯೇ ಪ್ರಥಮ ವಚನ ಪಾಠಶಾಲೆ ಉದ್ಘಾಟನೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ




ಮೈಸೂರು ಜಿಲ್ಲೆ ದೇವಲಾಪುರ ಶ್ರೀ ಗುರುಮಲ್ಲೇಶ್ವರ ಮಠದಲ್ಲಿ ೧೮ ಆಗಸ್ಟ್ ೨೦೨೫ರಂದು ಸಂಜೆ ೬.೩೦ಕ್ಕೆ ಮೈಸೂರು ಜಿಲ್ಲೆಯಲ್ಲಿ ಪ್ರಥಮ ವಚನ ಪಾಠಶಾಲೆ ಉದ್ಘಾಟನೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ದೇವನೂರು ಶ್ರೀ ಗುರುಮಲ್ಲೇಶ್ವರ ತ್ರಿವಿಧ ದಾಸೋಹ ಮಠಾಧ್ಯಕ್ಷರಾದ ಶ್ರೀ ಮಹಾಂತಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದು, ಬರಡನಪುರ ಶ್ರೀ ಮಹಾಂತೇಶ್ವರ ಮಠದ ಶ್ರೀ ಪರಶಿವಮೂರ್ತಿಸ್ವಾಮಿಗಳು ದಿವ್ಯಸಮ್ಮುಖ ವಹಿಸಲಿದ್ದಾರೆ. ಮೈಸೂರು ವಿ.ವಿ ಗಣಕ ವಿಜ್ಞಾನ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಡಿ.ಎಸ್ ಗುರು ಪ್ರವಚನ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಶರಣರ ವಿಚಾರ ಧಾರೆ ಬಗ್ಗೆ ಪ್ರವಚನ ನೀಡಲಿದ್ದಾರೆ. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ವಚನ ಪಾಠಶಾಲೆ ಉದ್ಘಾಟಿಸಲಿದ್ದಾರೆ. ೧೮ ಆಗಸ್ಟ್ ೨೦೨೫ರಿಂದ ೨೨ ಆಗಸ್ಟ್ ೨೦೨೫ರವರೆಗೆ ಪ್ರತಿದಿನ ಸಂಜೆ ೬.೩೦ಕ್ಕೆ ಪ್ರವಚನ ಕಾರ್ಯಕ್ರಮ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಭಕ್ತರು ಆಗಮಿಸಿ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕೆಂದು ದೇವಲಾಪುರ ಶ್ರೀ ಗುರುಮಲ್ಲೇಶ್ವರ ಮಠದ ಶ್ರೀ ಜಡೇಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Thursday, August 7, 2025

ಕುಂತೂರಿನಲ್ಲಿ ನಡೆದ ಮಲೆ ಮಹದೇಶ್ವರರ ಜಯಂತಿ


 

ಮೈಸೂರು : ಕತ್ತಲೆ ರಾಜ್ಯದ ಮೌಢ್ಯವನ್ನು ಅಳಿಸಿ ಕೋಟ್ಯಂತರ ಜನರ ಆರಾಧ್ಯದೈವ ಆದವರು ಶ್ರೀ ಮಲೆ ಮಹದೇಶ್ವರರು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಕುಂತೂರು ಶ್ರೀ ವೀರಸಿಂಹಾಸನ ಮಠದಲ್ಲಿ ನಡೆದ ಶ್ರೀ ಮಲೆ ಮಹದೇಶ್ವರ ಜಯಂತಿ, ಗುರುಗಳ ಪುಣ್ಯಸ್ಮರಣೆ, ಶ್ರಾವಣಮಾಸದ ಪೂಜಾನುಷ್ಠಾನ ಮತ್ತು ಗಡಿನಾಡ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಶ್ರೀಶೈಲದ ಚಂದ್ರಶೇಖರಮೂರ್ತಿ ಮತ್ತು ಉತ್ತರಾಜಮ್ಮರವರ ಸುಪುತ್ರರಾಗಿ ಜನಿಸಿದ ಮಹದೇಶ್ವರರು ನಂತರ ಭೀಮನಕೊಲ್ಲಿ, ಸುತ್ತೂರು, ವಾಟಾಳು ಮುಂತಾದ ಕಡೆ ಸಂಚರಿಸಿ ಅಂತಿಮವಾಗಿ ಇಂದಿನ ಮಹದೇಶ್ವರ ಬೆಟ್ಟದಲ್ಲಿ ಐಕ್ಯರಾಗುತ್ತಾರೆ. ಅಂದು ಹದಿನಾಲ್ಕನೇ ಶತಮಾನದಲ್ಲಿಯೇ ಸಾಲೂರು ಮಠದ ಶ್ರೀ ಮುಪ್ಪಿನ ಸ್ವಾಮಿಗಳು, ಕುಂತೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳೊಡನೆ ಮಹದೇಶ್ವರರು ಸಾಲೂರು ಮಠದಲ್ಲಿ ಸ್ಥಾಪಿಸಿದ ಮುಹೂರ್ತ ಕಂಬವನ್ನು ಇಂದಿಗೂ ಕಾಣಬಹುದು. ಸುತ್ತೂರಿನಲ್ಲಿ ಅಂದಿನ ಜಗದ್ಗುರುಗಳಾದ ಶ್ರೀ ಸಿದ್ಧನಂಜದೇಶಿಕೇಂದ್ರಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ರಾಗಿ ಕಲ್ಲನ್ನು ಬೀಸುವ ಮೂಲಕ ಕಾಯಕ ತತ್ವವನ್ನು ಎತ್ತಿಹಿಡಿದು, ಸುತ್ತೂರು ಮಠ ಸುಖ ಅಂತ ಬಂದ್ರೆ ಬೀಸೋಕೆ ಕುಕ್ಕೇಲಿ ರಾಗಿ ತುಂಬಿಟ್ರು ಎಂಬ ಗಾದೆ ಹುಟ್ಟುಕೊಳ್ಳಲು ಕಾರಣರಾದರು ಎಂದರು.


ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ ಮಹದೇಶ್ವರರು ಜಂಗಮಮೂರ್ತಿಯಾಗಿ ಕರ್ನಾಟಕದಾದ್ಯಂತ ಎಲ್ಲೆಡೆ ಸಂಚರಿಸಿ ಭಕ್ತರ ಮನ ಮತ್ತು ಮನೆದೈವವಾದುದರಿಂದ ಕೋಟ್ಯಂತರ ಭಕ್ತರನ್ನು ಹೊಂದಿದ್ದಾರೆ. ಮಹದೇಶ್ವರರು ಎಲ್ಲಿ ಕಾಲಿಟ್ಟರೋ ಅಲ್ಲೆಲ್ಲಾ ಇಂದು ಮಹದೇಶ್ವರರ ದೇವಸ್ಥಾನ ನಿರ್ಮಾಣವಾಗಿರುವುದನ್ನು ಕಾಣಬಹುದು. ಕೆಳವರ್ಗದ ಜನರನ್ನು ಅತ್ಯಂತ ಪ್ರೀತಿಯಿಂದ ಕಂಡು ಅವರ ಹೃದಯದಲ್ಲಿ ಭಕ್ತಿಯ ಬೀಜವನ್ನು ಬಿತ್ತಿದುದರಿಂದ ಇಂದು ಶಿವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಾವಿರಾರು ಜನರು ಕಾಲ್ನಡಿಗೆಯಲ್ಲಿ ಅವರ ದರ್ಶನ ಮಾಡಲು ಬರುವುದನ್ನು ಕಾಣಬಹುದು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಟ್ಟದಪುರ ಸಲೀಲಾಖ್ಯ ಮಠದ ಶ್ರೀ ಚನ್ನಬಸವದೇಶಿಕೇಂದ್ರಸ್ವಾಮೀಜಿ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅರಿಷಡ್ವರ್ಗಗಳಿರುತ್ತವೆ. ಅವುಗಳನ್ನು ಗೆದ್ದಾಗ ಮಾನವ ಮಹಾದೇವನಾಗುತ್ತಾನೆ ಎಂದರು.


ನಂತರ ಮಲೆ ಮಹದೇವ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿ ಮಹದೇಶ್ವರರ ಬಗ್ಗೆ ಬೆಳಕು ಚೆಲ್ಲಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಪತ್ರಕರ್ತ ರಾಜಣ್ಣ ಮತ್ತು ಸಾವಯವ ಕೃಷಿಕ ಮಹೇಂದ್ರಕುಮಾರ್ ಅವರನ್ನು ಅಭಿನಂದಿಸಲಾಯಿತು.



ಕಾರ್ಯಕ್ರಮದಲ್ಲಿ ಕುಂತೂರು ಮಠದ ಶ್ರೀ ಶಿವಪ್ರಭುಸ್ವಾಮಿಗಳು, ಚಿಲಕವಾಡಿ ಮಠದ ಶ್ರೀ ಇಮ್ಮಡಿ ಗುರುಲಿಂಗಸ್ವಾಮಿಗಳು, ಮಡಿವಾಳಸ್ವಾಮಿ ಮಠದ ಅಡವಿಸ್ವಾಮಿಗಳು, ನರಗ್ಯಾತನಹಳ್ಳಿ ಮಠದ ಶಿವಕುಮಾರಸ್ವಾಮೀಜಿ, ದಂಡಿಕೆರೆ ಮಠದ ಶ್ರೀ ಬಸವಲಿಂಗಸ್ವಾಮಿಗಳು, ಗೌಡಳ್ಳಿ ಮಠದ ಶ್ರೀಗಳು, ಬಸಳ್ಳಿಹುಂಡಿ ಮಠದ ಶ್ರೀ ಬಸವರಾಜಸ್ವಾಮಿಗಳು, ಕುರಿಹುಂಡಿ ಮಠದ ಶ್ರೀಗಳು, ಶಿಕ್ಷಕ ತೋಂಟದಾರ್ಯ, ಜಯಶಂಕರ್, ವಿನೋದ್ ಕುಮಾರ್, ನಾಗರಾಜಪ್ಪ, ವಿ, ಲಿಂಗಣ್ಣ,  ಉಪಸ್ಥಿತರಿದ್ದರು.

Monday, July 21, 2025

ಬಸವಜಯಂತಿ-2025

 


ಮೈಸೂರು : ಬಸವಣ್ಣನವರು ಅರ್ಥಶಾಸ್ತ್ರದ ನಿಜವಾದ ಪಿತಾಮಹ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಬಸವ ಬಳಗ ಸೇವಾಟ್ರಸ್ಟ್ ಬೋಗಾದಿಯ ಬಸವೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಬಸವಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ೧೮ನೇ ಶತಮಾನದಲ್ಲಿ ಅರ್ಥಶಾಸ್ತ್ರ ಪಿತಾಮಹ ಎಂದು ಕರೆಯಲ್ಪಡುವ ಆಡಂಸ್ಮಿತ್ ಅರ್ಥಶಾಸ್ತ್ರ ಎಂದರೆ ಸಂಪತ್ತನ್ನು ಅರಿಯುವ ಶಾಸ್ತ್ರ ಎಂದನು. ೧೯ನೇ ಶತಮಾನದಲ್ಲಿ ಪ್ರೊ. ಮಾರ್ಷಲ್ ಅರ್ಥಶಾಸ್ತ್ರ ಕೇವಲ ಸಂಪತ್ತು ತಿಳಿಯುವುದು ಮಾತ್ರವಲ್ಲದೇ, ಗಳಿಸಿದ ಸಂಪತ್ತು ಮಾನವ ಕಲ್ಯಾಣಕ್ಕೆ ಉಪಯೋಗವಾಗಬೇಕು ಎಂದನು. ಆದರೆ ಈ ಅರ್ಥಶಾಸ್ತ್ರಜ್ಞರಿಗಿಂತ ೭೦೦ ವರ್ಷಗಳ ಹಿಂದೆಯೇ ಬಸವಣ್ಣನವರು ದುಡಿದು ಉಣ್ರೀ, ಉಳಿದಿದ್ದರಲ್ಲಿ ಸ್ವಲ್ಪ ಸಮಾಜಕ್ಕೆ ಹಂಚ್ರಿ ಎಂದರು. ಕಾಯಕ ಮತ್ತು ದಾಸೋಹ ತತ್ವವನ್ನು ವಿಶ್ವಕ್ಕೆ ಪ್ರಥಮ ಬಾರಿಗೆ ಕೊಡುಗೆಯಾಗಿ ನೀಡಿದ ಬಸವಣ್ಣನವರು ಶ್ರೇಷ್ಠ ಅರ್ಥಶಾಸ್ತçಜ್ಞರಲ್ಲಿ ಮೊದಲಿಗರು. ಮನುಷ್ಯ ತನು, ಮನ ಮತ್ತು ಭಾವ ಶುದ್ಧಿಯಿಂದ ಮಾತ್ರ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯ. ಅದಕ್ಕಾಗಿ ಬಸವಣ್ಣನವರು ತನು ಶುದ್ಧಿಗಾಗಿ ಕಾಯಕ, ಮನಶುದ್ಧಿಗಾಗಿ ಇಷ್ಟಲಿಂಗ ಮತ್ತು ಭಾವ ಶುದ್ಧಿಗಾಗಿ ದಾಸೋಹವನ್ನು ಸ್ವತಃ ತಾವು ಅನುಷ್ಟಾನ ಮಾಡಿ ನಂತರ ಇತರರಿಗೆ ಆಚರಿಸಲು ಕರೆ ನೀಡಿದರು ಎಂದರು.




ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಜಯಶಂಕರ್ ಬದನಗುಪ್ಪೆ ಮಾತನಾಡಿ ೧೨ನೇ ಶತಮಾನದ ದಾಸೋಹ ಪರಿಕಲ್ಪನೆ, ಸಮಾನತೆ, ಸೌಹಾರ್ಧತೆ, ಸ್ತ್ರೀ ಸ್ವಾತಂತ್ರ್ಯ, ಸರ್ವರಿಗೂ ಶಿಕ್ಷಣ ಎಂಬ ಪರಿಕಲ್ಪನೆ ಒಳಗೊಂಡ ವಚನ ಚಳುವಳಿ ಸಂವಿಧಾನಕ್ಕೆ ಭದ್ರ ತಳಹದಿ ಹಾಕಿಕೊಟ್ಟಿತು ಎಂದರು.

ಇದೇ ಸಂದರ್ಭದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೨೬೩ನೇ ರ‍್ಯಾಂಕ್ ಪಡೆದ ಸಾಲಿಗ್ರಾಮ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ರೈತ ಕುಟುಂಬದ ಎ.ಸಿ ಪ್ರೀತಿ ಹಾಗೂ ಸಂಗೀತದಲ್ಲಿ ಚಿನ್ನದ ಪದಕ ಪಡೆದ ಜೆ ಆರ್ ಅನುಷಾ ನಟೇಶ್ ಅವರನ್ನು ಅಭಿನಂದಿಸಲಾಯಿತು.

ನಂತರ ೨೦೨೪-೨೫ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ೨೧ ವಿದ್ಯಾರ್ಥಿಗಳಿಗೆ ಪಾರಿತೋಷಕ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಿ. ನರಸೀಪುರ ತಾ. ವಾಟಾಳು ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಬಳಗ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜು ಅಧ್ಯಕ್ಷತೆ ವಹಿಸಿದ್ದರು.  ಪ್ರಧಾನ ಕಾರ್ಯದರ್ಶಿ ಬ್ಯಾಂಕ್ ಬಸವರಾಜು, ಖಜಾಂಚಿ ಪ್ರೊ. ವಿಶ್ವನಾಥ್, ಉಪನ್ಯಾಸಕ ಮೂಗೂರು ನಟರಾಜ್, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.


Sunday, April 27, 2025

ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ

 



ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರನ್ನು ಶರಣ ಬಹುರೂಪಿ ಚೌಡಯ್ಯನವರು  ತಮ್ಮ ಅನೇಕ ವಚನಗಳಲ್ಲಿ ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ”  ಎಂದು ಕೊಂಡಾಡಿದ್ದಾರೆ. ಈ ವಾಕ್ಯ ಅಕ್ಷರಶಃ ಸತ್ಯವಾದದ್ದು ಏಕೆಂದರೆ ಅದುವರೆಗೆ “ಸರ್ವೇ ಜನಾಃ ಸುಖಿನೋ ಭವಂತು” ಎಂಬ ವಾಕ್ಯ ಎಲ್ಲರನ್ನೂ ಆಶೀರ್ವದಿಸುವ ವಾಕ್ಯವಾಗಿ ಜನಮನ್ನಣೆ ಪಡೆದಿತ್ತು . ಆದರೆ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು “ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೆ ಕುಲಜರು” ಎಂಬ ವಾಕ್ಯವನ್ನು ಪ್ರಯೋಗ ಮಾಡುವುದರ ಮೂಲಕ ವಿಶ್ವದ ಭೂಪಟದಲ್ಲಿ ಶಾಶ್ವತವಾದ ಸ್ಥಾನ ಪಡೆದರು. ಬಸವಣ್ಣನವರು ಜೀವವಿರುವ ಪ್ರತಿಯೊಂದು ಜೀವಿಗೂ ಲೇಸನ್ನು ಬಯಸಿದುದರ ಪರಿಣಾಮ ಬಹುರೂಪಿ ಚೌಡಯ್ಯನವರು ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ”  ಎಂದು ತಮ್ಮ ವಚನಗಳಲ್ಲಿ ಉಲ್ಲೇಖಿಸಿರುವುದು ಸಮಂಜಸವಾಗಿದೆ. ಬಸವಣ್ಣನವರು ಏನಿ ಬಂದಿರಿ, ಹದುಳಿದ್ದಿರೆ ಎಂದಡೆ ನಿಮ್ಮೈಸಿರಿ ಹಾರಿ ಹೋಹುದೆ? ಕುಳ್ಳಿರೆಂದಡೆ ನೆಲ ಕುಳಿಹೋಹುದೆ? ಎಂದು ಹೇಳುವುದರ ಮೂಲಕ ಹಾಗೂ “ಎನ್ನ ತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ, ಇನ್ನು ತಪ್ಪಿದೆನಾದಡೆ ನಿಮ್ಮ ಪಾದವೆ ದಿಬ್ಯ” ಎಂಬ ವಚನದ ಮೂಲಕ ಅವರು ತಮ್ಮನ್ನೇ ತಾವು ಪಾಠವಾಗಿಸಿಕೊಂಡು, ಪಠ್ಯವಾಗಿಸಿಕೊಂಡು, ಪ್ರಯೋಗಶಾಲೆಯನ್ನಾಗಿಸಿಕೊಂಡು ನಮಗೆಲ್ಲ ಬದುಕಲು ಕಲಿಸಿಕೊಟ್ಟರು.

     ಕಲ್ಯಾಣದಲ್ಲಿ ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಭಂಡಾರ ಮಂತ್ರಿಯಾಗಿದ್ದರೂ ಕೂಡಾ “ಬಾಗಿದ ತಲೆ ಮುಗಿದ ಕೈಯಾಗಿರಿಸು ಕೂಡಲಸಂಗಮದೇವಾಎಂದು ಹೇಳುವುದರ ಮೂಲಕ “ಗೊನೆ ಹೊತ್ತ ಬಾಳೆ ಬಾಗುತ್ತದೆ, ತೆನೆ ಹೊತ್ತ ದಂಟು ಬಾಗುತ್ತದೆ, ಏನೇನೂ ಇಲ್ಲದುದು ಬೀಗುತ್ತದೆ ಎಂಬ ಕವಿ ಸಿದ್ಧಯ್ಯ ಪುರಾಣಿಕರವರ ಕವಿತೆಯ ಸಾಲಿನಂತೆ ನಾನು ಬೀಗುವುದಿಲ್ಲ ಬಾಗುತ್ತೇನೆ ಎಂಬ ಆದರ್ಶವನ್ನು ನಮಗೆ ಮಾದರಿಯಾಗಿ ಬಿಟ್ಟು ಹೋಗಿದ್ದಾರೆ.

ಕವಿತ್ವ ಸಾಧಕರೆಲ್ಲ ಕಳವಳಿಸಿ ಹೋದರು

ವಿದ್ಯಾಸಾಧಕರೆಲ್ಲ ಬುದ್ಧಿಗೆಟ್ಟರು

ತತ್ವಸಾಧಕರೆಲ್ಲ ಭಕ್ತಿಹೀನರಾದರು.

ಲಿಂಗಸಾಧಕರೆಲ್ಲ ಭೂಭಾರಕರಾದರು.

ಕೂಡಲಚೆನ್ನಸಂಗಮದೇವಾ ನಿಮ್ಮ ಬಸವಣ್ಣ

ಜಂಗಮಸಾಧಕನಾಗಿ ಸ್ವಯಂಲಿಂಗವಾದನು

ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಈ ವಚನ ಬಸವಣ್ಣನವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಬಸವಣ್ಣನವರು ದೇಶ, ಕಾಲ ಮೀರಿ ಅದು ಹೇಗೆ ಜಗಜ್ಯೋತಿಯಾದರು ಎಂಬುದನ್ನು ಸೂಚಿಸುತ್ತದೆ.

      ಅಸಮಾನತೆಯ ವಿರುದ್ಧ ಶಾಲೆಯಲ್ಲಿ, ಕಛೇರಿಗಳಲ್ಲಿ, ಸಮಾಜದ ವಿವಿಧ ಸಂಸ್ಥೆಗಳಲ್ಲಿ ಧ್ವನಿ ಎತ್ತಿರುವ ಸಮಾಜ ಸುಧಾರಕರನ್ನು ನೋಡಿದ್ದೇವೆ ಹಾಗೂ ಅವರ ಬಗ್ಗೆ ಇದುವರೆಗೆ ಕೇಳಿದ್ದೇವೆ. ತಮ್ಮ ಮನೆಯಲ್ಲಿಯೇ ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ ಎಂದು ತಿರಸ್ಕರಿಸಿ ಮನೆಯನ್ನು ತ್ಯಜಿಸಿದ ಬಸವಣ್ಣನವರು ಸಮಾಜ ಸುಧಾರಕರ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ.

      ವಿಶ್ವದ ಅನೇಕ ಧರ್ಮಗಳನ್ನು ಅಧ್ಯಯನ ಮಾಡಿದಾಗ ಹಿಂದಿನಿಂದಲೂ ಹೆಣ್ಣು ಅನಾದರಣೆಗೆ, ಅನೇಕ ಪುರುಷರ ಅವಕೃಪೆಗೆ ಒಳಗಾಗಿರುವುದನ್ನು ನೋಡಿದ್ದೇವೆ. ಬಹುತೇಕ ಧರ್ಮಗಳು ಸ್ತ್ರೀಗೆ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ರಾಜಕೀಯ ಹೀಗೆ ಯಾವುದೇ ರಂಗದಲ್ಲೂ ಗುರುತರವಾದ ಸ್ಥಾನಮಾನ ನೀಡಿರುವುದು ವಿರಳ. ಹನ್ನೆರಡನೇ ಶತಮಾನದವರೆಗೂ ಭಾರತದಲ್ಲಂತೂ ಹೆಣ್ಣು ಶೂದ್ರಳು, ಯಾವುದೇ ಸಂಸ್ಕಾರಕ್ಕೆ ಅನರ್ಹಳು ಎಂದು ಅತ್ಯಂತ ಶೋಚನೀಯವಾಗಿ ನಡೆಸಿಕೊಂಡು ಬರಲಾಗುತ್ತಿತ್ತು.  ಇದಕ್ಕೆ ಅಪವಾದವೆಂಬಂತೆ ಹನ್ನೆರಡನೇ ಶತಮಾನದಲ್ಲಿ ಕನ್ನಡನಾಡಿನಲ್ಲಿ ಗುರು ಬಸವಣ್ಣನವರು ತಮ್ಮ ಅಕ್ಕನಿಗೆ ಇಷ್ಟಲಿಂಗ ದೀಕ್ಷೆ ನೀಡುವುದರ ಮೂಲಕ ಲಿಂಗತಾರತಮ್ಯವನ್ನು ಸಂಪೂರ್ಣ ಕಿತ್ತೆಸೆಯುವುದರ ಜೊತೆಗೆ ಸ್ತ್ರೀಯರಿಗೆ ಹಿಂದೆಂದೂ ಸಿಗದಂಥಾ ಅಭೂತಪೂರ್ವ ಸ್ಥಾನಮಾನ ಕಲ್ಪಿಸಿಕೊಟ್ಟರು. ಇದರ ಪರಿಣಾಮವೇ ಅಕ್ಕ ನಾಗಮ್ಮ, ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ, ಮುಕ್ತಾಯಕ್ಕ, ಲಿಂಗಮ್ಮ, ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ವೆ ಮೊದಲುಗೊಂಡು 33 ಸ್ತ್ರೀಯರು ಶರಣೆಯರಾಗಿ ರೂಪುಗೊಂಡು ಅನುಭಾವಿಕ ವಚನಗಳನ್ನು ರಚಿಸಿದರು.

   ಬಸವಣ್ಣನವರು ಕಲ್ಯಾಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿದುದರ ಪರಿಣಾಮ ಕಲ್ಯಾಣ ಇಂದು ಬಸವಕಲ್ಯಾಣವಾಗಿರುವುದನ್ನು ನಾವು ಕಾಣಬಹುದು. ಬಸವಣ್ಣನವರು ಇಷ್ಟಲಿಂಗ ದೀಕ್ಷ, ಕಾಯಕ ಮತ್ತು ದಾಸೋಹ ತತ್ವದ ಮೂಲಕ ಸಮಾನತೆಯ ತತ್ವಕ್ಕೆ ಭದ್ರ ಬುನಾದಿಯನ್ನು ಹಾಕಿದರು. ಬಸವಣ್ಣನವರಿಗಿಂತ ಮುಂಚೆಯೇ ಇಷ್ಟಲಿಂಗ ಇತ್ತು ಎಂದು ಅಂತೆ ಕಂತೆ ಎಂಬ ತರ್ಕವಾದವನ್ನು ಇಂದಿಗೂ ಮಾಡುತ್ತಿರುವುದನ್ನು ನಾವು ಕಾಣಬಹುದು. ಬಸವಣ್ಣನವರ ಸಮಕಾಲೀನರ ವಚನಗಳನ್ನು ಅಧ್ಯಯನ ಮಾಡಿದಾಗ ಅದಕ್ಕೆ ಸ್ಪಷ್ಟ ಉತ್ತರ ಸಿಗುತ್ತದೆ. ಅನುಭವಮಂಟಪದ ದ್ವೀತಿಯ ಅಧ್ಯಕ್ಷರಾದ ಚೆನ್ನಬಸವಣ್ಣನವರ ಒಂದು ವಚನ ಇಂತಿದೆ.

ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,

ಹುಸಿ ಹುಸಿ ನುಡಿಯ ಕೇಳಲಾಗದು.

ಆದಿ ಲಿಂಗ, ಅನಾದಿ ಬಸವಣ್ಣನು!

ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,

ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,

ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.

ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ

ಕೂಡಲಚೆನ್ನಸಂಗಮದೇವಾ.

 

ಎಂದು ಹೇಳುವುದರ ಮೂಲಕ ವಿಶ್ವಗುರು ಬಸವಣ್ಣನವರೇ ಇಷ್ಟಲಿಂಗ ಜನಕ ಎಂದು ಹೇಳುವುದರ ಮೂಲಕ ಆ ಕಾಲಘಟ್ಟದಲ್ಲಿಯೇ ಚೆನ್ನಬಸವಣ್ಣನವರು ಸಂದೇಹ ವ್ಯಕ್ತಪಡಿಸಿರುವವರ ಬಾಯಿ ಮುಚ್ಚಿಸಿರುವುದನ್ನು ನಾವು ಕಾಣಬಹುದು. ತುಳಿತಕ್ಕೊಳಗಾದ ಜನರಿಗೆ ದೇವರು ಆ ಸಂದರ್ಭದಲ್ಲಿ ಗಗನ ಕುಸುಮವಾಗಿತ್ತು. ಆಗ ಬಸವಣ್ಣನವರು ಅವರಿಗೆ ಇಷ್ಟಲಿಂಗ ದೀಕ್ಷೆ ನೀಡುವುವುದರ ಮೂಲಕ ಮುಖ್ಯವಾಹಿನಿಗೆ ತಂದರು. ಜನಸಾಮಾನ್ಯರೊಡನೆ ಅದರಲ್ಲೂ ಅತ್ಯಂತ ಕೆಳಸ್ಥರದಲ್ಲಿದ್ದು ತುಳಿತಕ್ಕೊಳಗಾದ ಜನರೊಡನೆ ತಮ್ಮನ್ನು ಏಕೀಭವಿಸಿಕೊಳ್ಳುವುದರಲ್ಲಿ ಬಸವಣ್ಣನವರ ಅಸಾಧಾರಣ ಮಾನವೀಯ ಅನುಕಂಪ ಅಸದೃಶವಾದುದು.

 

ಚೆನ್ನಯ್ಯನ ಮನೆಯ ದಾಸನ ಮಗನು,

ಕಕ್ಕಯ್ಯನ ಮನೆಯ ದಾಸಿಯ ಮಗಳು,

ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.

ಇವರಿಬ್ಬರಿಗೆ ಹುಟ್ಟಿದ ಮಗ ನಾನು,

ಕೂಡಲಸಂಗಮದೇವ ಸಾಕ್ಷಿಯಾಗಿ.

 

ಎಂದು ಹೇಳಿಕೊಳ್ಳುವುದರ ಮೂಲಕ ಹುಟ್ಟಿನ ಅಹಂಕಾರವನ್ನು ನಿರಾಕರಿಸಿಕೊಳ್ಳುವುದರಲ್ಲಿ ಯಾವ ಮಟ್ಟಕ್ಕೆ ಹೋಗಿದ್ದಾರೆ ಎಂಬುದನ್ನು ಕಾಣಬಹುದು.ಈ ಸಂದರ್ಭದಲ್ಲಿ ಅವರು ಚೆನ್ನಯ್ಯ ಕಕ್ಕಯ್ಯ ಮುಂತಾದ ಕೆಳವರ್ಗದ ಜನರಿಗೆ ಇಷ್ಟಲಿಂಗ ದೀಕ್ಷೆ ನೀಡುವುದರ ಮೂಲಕ ಅವರನ್ನು ಶರಣರನ್ನಾಗಿ ರೂಪಿಸಿದರು. ಬಸವಣ್ಣನವರು ಕೆಳವರ್ಗದವರಿಂದಲೂ ಸಲಹೆಗಳನ್ನು ಸ್ವೀಕರಿಸುವ ಮನೋಭಾವವಿತ್ತು. ಅವರು ಶಂಕರ ಪದವಿಗೇರಿದರೂ ತಮ್ಮನ್ನು ತಾವು ಕಿಂಕರರೆಂದೇ ಗುರುತಿಸಿಕೊಳ್ಳುವುದನ್ನು ಮತ್ತೊಂದು ವಚನದಲ್ಲಿ ಕಾಣಬಹುದು.

 

ಭಕ್ತಿಯಿಲ್ಲದ ಬಡವ ನಾನಯ್ಯಾ: ಕಕ್ಕಯ್ಯನ ಮನೆಯಲ್ಲೂ ಬೇಡಿದೆ,

ಚೆನ್ನಯ್ಯನ ಮನೆಯಲ್ಲೂ ಬೇಡಿದೆ. ದಾಸಯ್ಯನ ಮನೆಯಲ್ಲೂ ಬೇಡಿದೆ.

ಎಲ್ಲಾ ಪುರಾತನರು ನೆನೆದು ಭಕ್ತಿಭಿಕ್ಷವನಿಕ್ಕಿದಡೆ

ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.

 

ಈ ವಚನದಲ್ಲಿ ಬಸವಣ್ಣನವರ ಭಕ್ತಿ ರಹಸ್ಯ ಅಡಗಿದ್ದು ಅಹಂಕಾರವನ್ನು ಅಳಿದು ಸಮಷ್ಟಿಗೆ ತಮ್ಮನ್ನು ಅರ್ಪಿಸಿಕೊಳ್ಳುವ ಭೃತ್ಯಾಚಾರ ಮನೋಭಾವವನ್ನು ಕಾಣಬಹುದು. ಮರ್ತ್ಯಲೋಕದಲ್ಲಿ ಭಕ್ತರುಂಟೆ ಎಂದು ಯಾರಾದರೂ ಪ್ರಶ್ನಿಸಿದರೆ ನಾನೊಬ್ಬನೇ ಭಕ್ತ ಉಳಿದವರೆಲ್ಲ ಲಿಂಗ ಜಂಗಮ ಸ್ವರೂಪ ಎಂದು ಹೇಳಿದ ಬಸವಣ್ಣನವರ ಭಕ್ತಿ ಶ್ರೀಮಂತಿಕೆ ಎಂತಹದು ಎಂಬುದು ತಿಳಿಯುತ್ತದೆ. ತನ್ನ ಭಕ್ತಿಯಲ್ಲಿ ಪರಿಪಕ್ವತೆಯನ್ನು ರೂಢಿಸಿಕೊಳ್ಳಲು ತಮ್ಮ ಸಮಕಾಲೀನರಾದ ಕಕ್ಕಯ್ಯ, ಚೆನ್ನಯ್ಯ ಮತ್ತು ದಾಸಯ್ಯನ ಮನೆಯಲ್ಲಿ ಕೂಡಾ ಬೇಡಲು ಸಿದ್ಧ ಎನ್ನುವ ಅವರು ಎಲ್ಲಾ ಪುರಾತನರು ಪಾತ್ರೆಗೆ ಭಕ್ತಿಯನ್ನು ತುಂಬಿದರೆ ನಾನು ಪರಿಪೂರ್ಣ ಭಕ್ತನಾಗಬಹುದೆಂಬ ಆಶಯ ಮನೋಭಾವವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಸವಣ್ಣನವರು ಕಾಯಕ ಮತ್ತು ದಾಸೋಹ ವ್ಯವಸ್ಥೆಯನ್ನು ಜಾರಿಗೆ ತಂದುದರಿಂದ ಕಲ್ಯಾಣದಲ್ಲಿ ಕೊಡುವವರುಂಟು ಬೇಡುವವರಿಲ್ಲ ಎಂಬಂತೆ ಅಲ್ಲಿನ ಪ್ರಜೆಗಳು ಆರ್ಥಿಕವಾಗಿ ಸ್ವಾವಲಂಬಿಯಾದರು. ಜನಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ವಚನ ಸಾಹಿತ್ಯವನ್ನು ರಚನೆ ಮಾಡುವುದರ ಮೂಲಕ ತುರುಗಾಹಿ ರಾಮಣ್ಣನಂತಹವರೂ ಕೂಡಾ ವಚನ ರಚಿಸಲು ಪ್ರೇರಣೆಯಾಗಿ ಸಾಕ್ಷರತೆಯ ಬೀಜ ನೆಟ್ಟರು. ದೇಹವೇ ದೇವಾಲಯ ಎಂಬ ತತ್ವದ ಮೂಲಕ ಮಾನವನು ಮಹಾದೇವನಾಗಬಹುದು ಎಂಬುದನ್ನು ಸ್ವತಃ ಆಚರಿಸಿ ಇತರರಿಗೆ ಬೋಧಿಸಿದರು.

ಬಸವಣ್ಣನವರು ಸ್ಥಾಪಿಸಿದ ಅನುಭವಮಂಟಪ ವಿಶ್ವದಲ್ಲಿಯೇ ಪ್ರಥಮ ಸಂಸತ್ತು ಎಂದೇ ಬಿಂಬಿತವಾಗಿದೆ. ಅನುಭವಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆ ವಿಭಿನ್ನವಾದದ್ದು. ಅನುಭಾವಿಕ ಹಿನ್ನೆಲೆಯಲ್ಲಿ ಶರಣರು ಆಡುತ್ತಿದ್ದ ಮಾತುಗಳೇ ವಚನಗಳಾದವು. ಅಂದಿನ ಅನುಭವಮಂಟಪದ ಪ್ರಭಾವ ಎಷ್ಟಿತ್ತೆಂದರೆ ಅಂದು ಯಾವುದೇ ಪತ್ರಿಕಾ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳಿಲ್ಲದಿದ್ದರೂ ಅದರ ಕೀರ್ತಿ ದೇಶ ವಿದೇಶಗಳಿಗೆ ಹರಡಿತ್ತು. ಅನುಭವ ಮಂಟಪದ ಕೀರ್ತಿ ವಾರ್ತೆ ಕೇಳಿ ಆಫ್ಘಾನಿಸ್ಥಾನದಿಂದ ಮರುಳ ಶಂಕರದೇವರು, ಕಾಶ್ಮೀರದಿಂದ ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹಾದೇವಿ, ತಮಿಳುನಾಡಿನಿಂದ ಮಾದಾರ ಚೆನ್ನಯ್ಯ, ಉತ್ತರಪ್ರದೇಶದಿಂದ ಶಿವಲೆಂಕ ಮಂಚಣ್ಣ, ಮಹಾರಾಷ್ಟ್ರದಿಂದ ಸಿದ್ಧರಾಮೇಶ್ವರ, ಆಂಧ್ರಪ್ರದೇಶದಿಂದ ಉರಿಲಿಂಗದೇವ ಮತ್ತು ಉರಿಲಿಂಗಪೆದ್ದಿ, ಗುಜರಾತ್‌ನಿಂದ ಆದಯ್ಯ ಕಲ್ಯಾಣದಲ್ಲಿ ನೆಲೆನಿಂತು ಶರಣರಾಗಿ ರೂಪುಗೊಂಡರು. ಅನುಭವಮಂಟಪದಲ್ಲಿ 770 ಅಮರಗಣಂಗಳು ಚರ್ಚೆ ಮಾಡುತ್ತಿದ್ದರು ಮತ್ತು ಏಕಕಾಲದಲ್ಲಿ 196000 ಶರಣರು ದಾಸೋಹ ಮಾಡುತ್ತಿದ್ದರು ಎಂಬುದನ್ನು ಅನೇಕ ವಚನಗಳು ಉಲ್ಲೇಖಿಸುತ್ತವೆ.

ಬಸವಣ್ಣನವರು ಪ್ರತಿಪಾದಿಸಿದ ಜಾತಿ ಮತ್ತು ವರ್ಗರಹಿತ ಸಮಾಜ, ಕಾಯಕ ತತ್ವ, ಮಾನವ ಕುಲದ ಕಲ್ಯಾಣಕ್ಕೆ ನೀಡಿರುವ ಸಂದೇಶಗಳು ಸರ್ವಕಾಲಕ್ಕೂ ದಾರಿದೀಪವಾಗಿರುವುದನ್ನು ಮನಗಂಡು ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸಮಾನತೆಯ ತತ್ವಕ್ಕೆ ಮುನ್ನುಡಿ ಬರೆದಂತಾಗಿದೆ.

ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್

#೪೩೧, ೭ನೇ ಮುಖ್ಯರಸ್ತೆ, ೧೪ ನೇ ಅಡ್ಡರಸ್ತೆ

ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - 570026

ಮೊ. 9901137948

vachanakumaraswamy@gmail.com

 

ಬಸವತತ್ವ





 ಬಸವತತ್ವ


ಬಸವನ ಬೆಳಕೆ ಎಲ್ಲಾಡಿ ಬಂದೆ

ಭಾರತವೆಲ್ಲಾ ಸುತ್ತಾಡಿ ಬಂದೆ.


ನಿಟ್ಟುಸಿರೆದೆಯನು ಬೆಳಗಿಸಿ ಬಂದೆ

ನಿರಾಸೆಯದೆಯನು ತೊಳಗಿಸಿ ಬಂದೆ

ಹೆಣ್ಣಿನ ಕಂಬನಿ ಬತ್ತಿಸ ಬಂದೆ

ಆಶಾ ಜ್ಯೋತಿಯ ಹೊತ್ತಿಸ ಬಂದೆ

ದೀನರ ಬಾಳನು ಮುಸುಕಿದ ಕಾಲವ

ಕಬಳಿಸಿ ಬಂದೆ ಧವಳಿಸಿ ಬಂದೆ

ಕನ್ನಡ ವನದಲ್ಲಿ ಕುಣಿದಾಡಿ ಬಂದೆ.


ಎಂಬ ಸಿದ್ದಯ್ಯ ಪುರಾಣಿಕ ಅವರ ಕವಿತೆ ಕೇಳುತ್ತಿದ್ದರೆ ಬಸವ ತತ್ವದ ಪರಿಚಯವಾಗುತ್ತದೆ.


12 ನೇ ಶತಮಾನದ ವರೆಗೆ ಎಲ್ಲಾ ಧಾರ್ಮಿಕ ನಾಯಕರು ಕೇವಲ ದೇವರ ಬಗ್ಗೆ ಮಾತ್ರ ಮಾತನಾಡುತ್ತಿದ್ದರು. ಆದರೆ ಬಸವಣ್ಣನವರು ಮಾನವರ ಬಗ್ಗೆ ಮಾತನಾಡಿ ಮಾನವನು ಮಹಾದೇವನಾಗಬಹುದು ಎಂಬುದನ್ನು ತೋರಿಸಿಕೊಟ್ಟರು.


ಒಬ್ಬನೇ ದೇವರು, ಒಂದೇ ವಿಶ್ವ, ಒಂದೇ ಮಾನವಕುಲ ಎಂದು ಘೋಷಣೆ ಮಾಡಿದಂತಹ ಧರ್ಮ ಯಾವುದಾದರೂ ವಿಶ್ವದಲ್ಲಿ ಇದ್ದರೆ ಅದು ಬಸವಧರ್ಮ.


ಇವನಾರವ, ಇವನಾರವ,

ಇವನಾರವನೆಂದೆನಿಸದಿರಯ್ಯಾ.

ಇವ ನಮ್ಮವ, ಇವ ನಮ್ಮವ,

ಇವನಮ್ಮವನೆಂದೆನಿಸಯ್ಯಾ.

ಕೂಡಲಸಂಗಮದೇವಾ

ನಿಮ್ಮ ಮನೆಯ ಮಗನೆಂದೆನಿಸಯ್ಯಾ.


ಎಂಬ ವಚನದಂತೆ ಜಗತ್ತಿನ ಎಲ್ಲಾ ದೇಶಗಳ ಎಲ್ಲಾ ಜನಾಂಗಗಳನ್ನು ಎಲ್ಲಾ ವರ್ಗಗಳ ಜನರನ್ನು ಸ್ವೀಕರಿಸುವ ಅಪ್ಪಿಕೊಳ್ಳುವ ಧರ್ಮ ಅದು ಬಸವಧರ್ಮ.


ಬಸವತತ್ವದಲ್ಲಿ ಕಾಯಕ ಮತ್ತು ದಾಸೋಹ ಎರಡು ಪ್ರಮುಖ ತತ್ವಗಳು.


ಬಸವಣ್ಣನವರ ಈ ಎರಡು ತತ್ವಗಳಿಂದ ಕರ್ನಾಟಕದ ಕಲ್ಯಾಣ ವಿಶ್ವದಾದ್ಯಂತ ಪರಿಚಯವಾಯಿತು. ಈ ತತ್ವಗಳಿಂದ ಆಕರ್ಷಿತರಾಗಿ ಆಫ್ಘಾನಿಸ್ತಾನದಿಂದ ಮರುಳಶಂಕರದೇವ, ತಮಿಳುನಾಡಿನಿಂದ ಮಾದಾರ ಚೆನ್ನಯ್ಯ, ಗುಜರಾತ್ ನಿಂದ ಆದಯ್ಯ, ಮಧ್ಯಪ್ರದೇಶದಿಂದ ಡೋಹರ ಕಕ್ಕಯ್ಯ ಬಂದು ಕಲ್ಯಾಣದಲ್ಲಿ ನೆಲೆಸಿದರು.


ಬಸವತತ್ವವು ಬಸವಣ್ಣನವರು ಸ್ಥಾಪಿಸಿದ ಅನುಭವಮಂಟಪದ ಮೂಲಕ  ವಿಶೇಷವಾಗಿ ಪ್ರತಿಪಾದಿಸಲ್ಪಟ್ಟಿತು‌. ಅಲ್ಲಮಪ್ರಭು ಅಧ್ಯಕ್ಷರಾದ ಅನುಭವಮಂಟಪದಲ್ಲಿ 770 ಅಮರಗಣಂಗಳು ಚರ್ಚೆಯಲ್ಲಿ ಭಾಗವಹಿಸಿರುವುದಕ್ಕೆ ಹಾಗೂ 1 ಲಕ್ಷದ 96 ಸಾವಿರ ಜನರು ಏಕಕಾಲದಲ್ಲಿ ದಾಸೋಹ ಮಾಡುತ್ತಿದ್ದರೆಂಬುದಕ್ಕೆ ವಚನಗಳ ಆಧಾರವಿದೆ.


ಬಸವತತ್ವದಲ್ಲಿ ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದಗಳು ಅಂಗವಾದರೆ, ಪಂಚಾರಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರಗಳು ಪ್ರಾಣವಾಗಿದ್ದು,  ಷಟ್ಸ್ಥಲಗಳಾದ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ  ಮತ್ತು ಐಕ್ಯಗಳು ಆತ್ಮವಾಗಿವೆ.


ಬಸವತತ್ವವನ್ನು ಆಚರಿಸುವುದರಿಂದ ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಹೆಚ್ಚು. ಎಲ್ಲರೂ ಬಸವತತ್ವವನ್ನು ಒಪ್ಪಿ ಅಪ್ಪಿಕೊಳ್ಳೋಣ ಬನ್ನಿ.



Until 12th century no religious leader spoke about human being . They only spoke about God . The only person in the world who spoke about human being and said Human being can become God was Vishwaguru Basavanna. Basava philosophy led by Basavanna and other sharanas changed the environment of the society .


Why do youths need Basava philosophy? Now both men and women have equal rights. 

What is the essential of this philosophy?  

If we grow tree today atleast it will longlast for 60 to 80 years and give  fruits till end. Similarly following Basava philosophy will give us fruits in the form of moral values which makes us a good citizen and successful person for the society for many years and if this is followed by next generation they also get the benefit. 


Basava philosophy inculcated in correct age gives us a foundation for our future . We can build a building of our wish. Mainly youths are tomorrow’s citizen and Basava philosophy followed by them make them more strong, brighter with spiritual knowledge , scientific and creative skill with mainly moral values which is essential for leading a good life.

ಇಷ್ಟಲಿಂಗ

 



ಇಷ್ಟಲಿಂಗ


ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ

ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ

ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ

ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ

ಕೂಡಲಸಂಗಮದೇವಯ್ಯಾ

ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.


ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಈ ವಚನ ಇಷ್ಡಲಿಂಗದ ವ್ಯಾಪ್ತಿಯನ್ನು ತಿಳಿಸುತ್ತದೆ.


ವ್ಯಕ್ತಿಯು ಜಾತಿಯಿಂದ ದೊಡ್ಡವನಾಗದೆ ಆತ್ಮಜ್ಯೋತಿಯಿಂದ ಮಾತ್ರ ದೊಡ್ಡವನಾಗುತ್ತಾನೆ. ಅಂತಹ‌ ಆತ್ಮಜ್ಯೋತಿಯನ್ನು ಸಂಕೇತಿಸುವ ಕುರುಹು ಇಷ್ಟಲಿಂಗ.


ಭಾರತದ ರಾಷ್ಟ್ರಧ್ವಜವು ಹೇಗೆ ಯಾವುದೇ ಜಾತಿಮತದ ಕುರುಹಾಗದೆ, ಸ್ವತಂತ್ರ ಪ್ರಜಾಪ್ರಭುತ್ವವಾದಿ ರಾಷ್ಟ್ರದ ಸಾರ್ವಭೌಮತ್ವವನ್ನು ಸಾರುವ ಪ್ರತೀಕವೋ ಹಾಗೆ ಇಷ್ಟಲಿಂಗವು ಜಾತ್ಯಾತೀತ, ಧರ್ಮಸಹಿತ, ಸಮಾಜವಾದಿ ದೇಶವನ್ನು ಕಟ್ಟುವುದರ ಸಂಕೇತವಾಗಿದೆ.


ಧಾರ್ಮಿಕ ಚಟುವಟಿಕೆಗಳು ಸ್ತ್ರೀಯರಿಗೆ ನಿಷಿದ್ಧವಾಗಿದ್ದ ಕಾಲದಲ್ಲಿ ವಿಶ್ವಗುರು ಬಸವಣ್ಣನವರು 12 ನೇ ಶತಮಾನದಲ್ಲಿ ತಮ್ಮ ಸಹೋದರಿ ನಾಗಲಾಂಬಿಕೆಯವರಿಗೆ ಇಷ್ಟಲಿಂಗ ದೀಕ್ಷೆ ನೀಡುವುದರ ಮೂಲಕ ಮಹಿಳೆಯರು ಕೂಡಾ ಧಾರ್ಮಿಕ ಸ್ವಾತಂತ್ರ್ಯ ನೀಡಿದುದರ ಫಲವಾಗಿ ಅಕ್ಕ ನಾಗಲಾಂಬಿಕೆ ವಿಶ್ವದ ಪ್ರಥಮ ಲಿಂಗಾಯತ ಮಹಿಳೆಯಾದರು.


ಇಷ್ಟಲಿಂಗ ದೀಕ್ಷೆ ಮೂಲಕ ಲಿಂಗಾಯತ ಧರ್ಮವು ಎಲ್ಲಾ ಜಾತಿಗಳ ಮತ್ತು ಎಲ್ಲಾ ಉದ್ಯೋಗಗಳ ಜನರನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ವಿಶ್ವದಲ್ಲಿಯೇ ವಿಶಿಷ್ಟ ಧರ್ಮವಾಗಿ ರೂಪುಗೊಂಡಿದೆ.


ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ

ಸಕಲವಿಸ್ತಾರದ ರೂಹು ನೀನೇ ದೇವಾ

`ವಿಶ್ವತಶ್ಚಕ್ಷು' ನೀನೆ ದೇವಾ

`ವಿಶ್ವತೋಮುಖ' ನೀನೆ ದೇವಾ

`ವಿಶ್ವತೋಬಾಹು' ನೀನೇ ದೇವಾ

`ವಿಶ್ವತಃಪಾದ' ನೀನೆ ದೇವಾ

ಕೂಡಲಸಂಗಮದೇವಾ.


ಎಂಬ ವಿಶ್ವಗುರು ಬಸವಣ್ಣನವರ ವಚನದಂತೆ ಪರಶಿವನನ್ನು ಇಷ್ಟಲಿಂಗ ರೂಪದಲ್ಲಿ ಕಂಡು ದೇಹವನ್ನೇ ದೇವಾಲಯವನ್ನಾಗಿ ರೂಪಿಸುವ ಇಷ್ಟಲಿಂಗವನ್ನು ಪ್ರತಿಯೊಬ್ಬರೂ ಧರಿಸೋಣ. ಇಷ್ಟಲಿಂಗ ತತ್ವವನ್ನು ಎತ್ತಿ ಹಿಡಿಯೋಣ.


Ishtalinga  takes second place in Astavarna. Mainly  Lingayath devotee consider Ishtalinga as a " living, moving " divinity.


Every day, the devotee removes the ishtalinga from its box, which they tie on their chest and  places it the in left palm, offers puja with shiva mantra and then meditates about becoming one with the linga, i.e., the person who perform Ishtalinga pooja considered as sharana sati and lshtalinga as Linga pathi.


This is one of the mighty and spiritual journey a person who performs Ishtalinga Pooja undergoes. He/ she gets supernatural energy with positive potentialities which reaches them to a peak.


No religion gets the opportunities to carry God along with them. But Lingayath community gets this. When a person dies he cannot  take money or wealth along with him, but has the opportunity of taking linga with him it means get united with Shiva after the death.

ರುದ್ರಾಕ್ಷಿ

 



ರುದ್ರಾಕ್ಷಿ


ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು 

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಾಧನವು 

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ 

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾಪಕ್ಷಯವು. ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ ಪಂಚಮುಖದ ರುದ್ರಾಕ್ಷಿಗಳಾದವಾಗಿ 

ಅಯ್ಯಾ ಕೂಡಲಸಂಗಮದೇವಯ್ಯಾ 

ಎನ್ನ ಮುಕ್ತಿಪಥಕ್ಕೆ ಶ್ರೀಮಹಾರುದ್ರಾಕ್ಷಿಯೆ ಸಾಧನವಯ್ಯಾ.


ಎಂಬಂತೆ ರುದ್ರಾಕ್ಷಿಯ ಮಹತ್ವ ಕುರಿತು ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ತಮ್ಮ ವಚನದಲ್ಲಿ ತಿಳಿಸಿದ್ದಾರೆ.


ರುದ್ರಾಕ್ಷಿ ಧಾರಣೆಯಿಂದ ಆಧ್ಯಾತ್ಮಿಕತೆ ಹೆಚ್ಚಾಗುತ್ತದೆ. ಜಪ ಮಾಡಲು ರುದ್ರಾಕ್ಷಿಯನ್ನು ಬಳಸಲಾಗುತ್ತದೆ.


What is this Rudrakshi ? 

Rudrakshi is one among Ashtavarna . It is a seed of the Elaeocarpus ganitrus tree and has various benefits likely in performing pooja and also medically proved with various research that it is very helpful to cure heart diseases and mental illness. People wear this on neck and also as a bracelet which gives supernatural energy to them.


ರುದ್ರಾಕ್ಷಿಯನ್ನು ಧರಿಸುವುದರಿಂದ ಹೃದ್ರೋಗಗಳು ಮತ್ತು ಮಾನಸಿಕ ರೋಗಗಳು ಬರುವುದಿಲ್ಲವೆಂದು ಅನೇಕ ವಿಜ್ಞಾನಿಗಳು ಸಂಶೋಧನೆಯ ಮೂಲಕ ದೃಢಪಡಿಸಿದ್ದಾರೆ.


ರುದ್ರಾಕ್ಷಿಯನ್ನು ರಾತ್ರಿ ವೇಳೆ ಒಂದು ಕಪ್ಪು ನೀರಿನಲ್ಲಿ ನೆನೆಯಿಟ್ಟು ಬೆಳಗ್ಗೆ ಹೊಟ್ಟೆಗೆ ಏನು ತೆಗೆದುಕೊಳ್ಳದೆ ರುದ್ರಾಕ್ಷಿ ನೆನೆಯಿಸಿದ ನೀರನ್ನು ಕುಡಿದು ಒಂದು ಗಂಟೆ ಏನನ್ನು ತೆಗೆದುಕೊಳ್ಳದೆ ಇರಬೇಕು. ಹೀಗೆ 41 ದಿನ ತೆಗೆದುಕೊಳ್ಳುವ ಪರಿಪಾಠವಿದೆ. ಈ ಕ್ರಮ ಅನುಸರಿಸುವುದರಿಂದ ಹೃದಯಾಘಾತದಿಂದ ದೂರವಿರಲು ಸಾಧ್ಯ ಎಂದು‌ ಅನುಭಾವಿಗಳು ಹೇಳಿದ್ದಾರೆ.


ಸಾಮಾನ್ಯವಾಗಿ ಐದು ಮುಖದ  ರುದ್ರಾಕ್ಷಿಯನ್ನು ಧರಿಸಲಾಗುತ್ತದೆ. ಅದು ಪರಮಾತ್ಮನ ಸತ್, ಚಿತ್, ಆನಂದ, ನಿತ್ಯ ಮತ್ತು ಪರಿಪೂರ್ಣ ಎಂಬ ಐದು ತತ್ವಗಳನ್ನು ಸಂಕೇತಿಸುತ್ತದೆ.


ಬಸವಣ್ಣನವರು ತಮ್ಮ ಮತ್ತೊಂದು ವಚನದಲ್ಲಿ 


ಅಯ್ಯಾ, ರುದ್ರಾಕ್ಷಿಯಿಂದ ಹರಿದೆನು ಭವಪಾಶಂಗಳ,

ಅಯ್ಯಾ, ರುದ್ರಾಕ್ಷಿಯಿಂದ ಮುರಿದೆನು ತನುಗುಣಾದಿಗಳ,

ಅಯ್ಯಾ, ರುದ್ರಾಕ್ಷಿಯಿಂದ ಒರೆಸಿದೆನು ಮಹಾಮಾಯೆಯ,

ಅಯ್ಯಾ, ರುದ್ರಾಕ್ಷಿಯಿಂದ ಕಳೆದೆನು ಪಂಚಮಹಾಪಾತಕವ.

ಅಯ್ಯಾ ಕೂಡಲಸಂಗಮದೇವಾ,

ಶ್ರೀಮಹಾರುದ್ರಾಕ್ಷಿಯಿಂದ ಗೆಲಿದೆನಯ್ಯಾ ಸಕಲದುರಿತಂಗಳನು.

ಎಂದು ಹೇಳಿದ್ದಾರೆ.


ಆದುದರಿಂದ ಎಲ್ಲರೂ ಎದೆಯ ಮೇಲೆ ರುದ್ರಾಕ್ಷಿಯನ್ನು ಸದಾಕಾಲ ಧರಿಸಿಕೊಂಡು ಆರೋಗ್ಯದಿಂದ ಇರೋಣ.

ವಿಭೂತಿ

 



ವಿಭೂತಿ ಮಹಿಮೆ


ಅಯ್ಯಾ ಎನಗೆ ವಿಭೂತಿಯೆ ಕುಲದೈವ; ಅಯ್ಯಾ ಎನಗೆ ವಿಭೂತಿಯೆ ಮನೆದೈವ; ಅಯ್ಯಾ ಎನಗೆ ವಿಭೂತಿಯೆ ಸರ್ವಕಾರಣ; ಅಯ್ಯಾ ಎನಗೆ ವಿಭೂತಿಯೆ ಸರ್ವಸಿದ್ಧಿ; ಅಯ್ಯಾ ಎನಗೆ ವಿಭೂತಿಯೆ ಸರ್ವವಶ್ಯ; ಅಯ್ಯಾ ಕೂಡಲಚೆನ್ನಸಂಗಮದೇವಾ ಶ್ರೀಮಹಾಭೂತಿಯೆಂಬ ಪರಂಜ್ಯೋತಿ ನೀವಾದಿರಾಗಿ

ಎನಗೆ ವಿಭೂತಿಯೆ ಸರ್ವಸಾಧನ


ಎಂಬಂತೆ ವಿಭೂತಿಯ ಮಹಿಮೆಯ ಬಗ್ಗೆ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಹೇಳಿದ್ದಾರೆ.


ವಿಭೂತಿ ಧಾರಣೆಯು ಪ್ರತಿಯೊಬ್ಬ ಲಿಂಗವಂತರ ಲಕ್ಷಣ. ವಿಭೂತಿಯನ್ನು ಆಕಳ ಸಗಣಿಯಿಂದ ತಯಾರಿಸಲಾಗುತ್ತದೆ. ಏಕೆಂದರೆ ಅದಕ್ಕೆ ಕ್ರಿಮಿನಾಶಕ ಶಕ್ತಿ ಅಂದರೆ ರೋಗಾಣವನ್ನು ಕೊಲ್ಲುವಂತಹ ಶಕ್ತಿ ಇರುವುದನ್ನು ಸಂಶೋಧನೆಯ ಮೂಲಕ ಕಂಡುಕೊಂಡಿದ್ದಾರೆ. ವಿಭೂತಿಯು ದೇಹದ ಉಷ್ಣಾಂಶವನ್ನು ಹೊರಕ್ಕೆ ಬಿಡದೆ ಹಾಗೆಯೇ ಹೊರಗಿನ ತೇವಾಂಶ ದೇಹದೊಳಕ್ಕೆ ಪ್ರವೇಶಿಸದಂತೆ ತಡೆಗಟ್ಟುತ್ತದೆ. ವಿಭೂತಿ ಧರಿಸಲು ಗಂಡು ಹೆಣ್ಣು ಎಂಬ ಭೇದವಿಲ್ಲ. ಎಲ್ಲರೂ ಧರಿಸಬಾಹುದು.

Does Vibhuti holds such an importance in Astavarna.

Yes, 

Vibhuti, or sacred ash, holds profound spiritual significance  symbolizing purity, divine energy, and a reminder of mortality, often applied to the forehead or other parts of the body as a mark of devotion and spiritual protection. Everyone can apply this on their forehead ,regardless of gender.


ಬಸವ ಬಸವಾ ಎಂದು ಭಸಿತಮಂ ಧರಿಸಿದರೆ 

ಬಸವಾದಿ ಪ್ರಮಥರಿಗೆ ಪ್ರೀತಿಯಯ್ಯಾ

ಬಸವ ಷಟಸ್ಥಲ‌ ಚನ್ನಬಸವ ಪ್ರಭು ಮುಖ್ಯರು

ಭಸಿತಮಂ ಧರಿಸಿ ಬಯಲಾದರಯ್ಯ


ಎಂಬ ಬಾಲಲೀಲ ಮಹಾಂತ ಶಿವಯೋಗಿಗಳ ಭಸಿತ ಗೀತೆ ವಿಭೂತಿಯ ಮಹತ್ವವನ್ನು ಬಿಂಬಿಸುತ್ತದೆ.


ವಿಭೂತಿಯ ಉಪಯೋಗಗಳು

1. ಸಾತ್ವಿಕ ಕಳೆ ವೃದ್ಧಿಯಾಗುತ್ತದೆ.

2. ಮನೆಯಲ್ಲಿ ಪ್ರಶಾಂತ ವಾತಾವರಣ ಇರುತ್ತದೆ.

3. ಆಧ್ಯಾತ್ಮಿಕ ಸಾಧಕನಿಗೆ ವಿಭೂತಿ ಧಾರಣೆಯು ಮುಖ್ಯವಾದದ್ದು.

4. ವಿಭೂತಿಯನ್ನು 24*7 ಯಾವಾಗಲೂ ಧರಿಸಬಹುದು.

5. ಗೌರವ ಭಾವನೆ ತಂದುಕೊಡುತ್ತದೆ.

6. ಮುಖದಲ್ಲಿ ಚಿತ್ಕಳೆ ವೃದ್ಧಿಯಾಗುತ್ತದೆ.

7. ವಿಭೂತಿ ಅಷ್ಟಾವರಣಗಳಲ್ಲಿ ಒಂದು ಪ್ರಮುಖ ಸಾಧನ

8. ವಿಭೂತಿ ಧಾರಣದಿಂದ ಜ್ಞಾನ ನೇತ್ರ ಪಡೆಯಲು ಸಾಧ್ಯ


*ಬನ್ನಿ ಪ್ರತಿನಿತ್ಯ ವಿಭೂತಿಯನ್ನು ಧರಿಸಿ ಪರಶಿವನ ಕೃಪೆಗೆ ಪಾತ್ರರಾಗೋಣ*

Saturday, March 22, 2025

ಕಾಗಲವಾಡಿ ಧಾರ್ಮಿಕ ಕಾರ್ಯಕ್ರಮ

 ಧಾರ್ಮಿಕ ಇತಿಹಾಸದಲ್ಲಿಯೇ ಹೊಸ ಮನ್ವಂತರಕ್ಕೆ ಕಾರಣರಾದವರು ಬಸವಣ್ಣನವರು : ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು


ಚಾ.ನಗರ : ಧಾರ್ಮಿಕ ಇತಿಹಾಸದಲ್ಲಿಯೇ ಹೊಸ ಮನ್ವಂತರಕ್ಕೆ ಕಾರಣರಾದವರು ಬಸವಣ್ಣನವರು ಎಂದು ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು. ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯ ಶ್ರೀ ಬಸವನಗುಡಿಯ ಸಂಪ್ರೋಕ್ಷಣ, ನೂತನ ಗೋಪುರದ ಕಳಸಾರೋಹಣದ   ಧಾರ್ಮಿಕ ಸಭೆಯ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು 

ಬಸವಣ್ಣನವರು ತಮ್ಮ ಮನೆಯಲ್ಲಿ ಇದ್ದ ಕರ್ಮಠತನ ಮತ್ತು ಅಸಮಾನತೆ ವಿರುದ್ಧ ಧ್ವನಿ ಎತ್ತಿ ಮನೆಯಿಂದ ಹೊರನಡೆದು ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು.  ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ ಅಲ್ಲಮಪ್ರಭುಗಳನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಎಲ್ಲರಿಗೂ ಅವಕಾಶ ನೀಡಿದುದರ ಫಲವಾಗಿ ಅವರು ಜಗಜ್ಯೋತಿ ಆದರು ಎಂದರು. 

ತುಮಕೂರು ಶ್ರೀ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರಮಹಾಸ್ವಾಮಿಗಳು ಮಾತನಾಡಿ ಜಗತ್ತನ್ನು ನಡೆಸುತ್ತಿರುವ ಮಹಾಶಕ್ತಿಯಾದ ಭಗವಂತನ ದರ್ಶನಕ್ಕೆ ಶರಣ ಸಿದ್ಧಾಂತ ಸುಲಭ ಮಾರ್ಗ. ಹಣ ಸಂಪಾದನೆ ಮುಖ್ಯವಾಗದೆ ಗುಣ ಸಂಪಾದನೆ ಮುಖ್ಯವಾಗಬೇಕು. ಧಾರ್ಮಿಕ ಸಭೆಗಳು ಆಧ್ಯಾತ್ಮಿಕ ಜ್ಞಾನವನ್ನು ಉಂಟು ಮಾಡಿ ನಮ್ಮಲ್ಲಿರುವ ದುರ್ಗುಣಗಳನ್ನು ಕಳೆದು ಸುಜ್ಞಾನವನ್ನು ಉಂಟುಮಾಡಿ ನಮ್ಮ ಜೀವನವನ್ನು ಪಾವನ ಮಾಡುತ್ತವೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಉಪನ್ಯಾಸ ನೀಡಿ ಮನದ ಮೈಲಿಗೆಯನ್ನು ತೊಳೆದುಕೊಳ್ಳಲು ಶರಣರ ವಚನಗಳು ಸಹಕಾರಿಯಾಗಿದ್ದು, ಜೀವಿತದ ಅವಧಿಯಲ್ಲಿಯೇ ನಾವು ಕಳೆಯುವ ಸಂತಸದ ಕ್ಷಣಗಳೇ ಸ್ವರ್ಗ, ದುಃಖದ ಸಂದರ್ಭಗಳೇ ನರಕ. ಲೇಸೆನಿಸಿಕೊಂಡು ಎಷ್ಟು ವರ್ಷ ಬದುಕುತ್ತೇವೆಯೋ ಅದೇ ಮನುಷ್ಯನ ನಿಜವಾದ ವಯಸ್ಸು ಎಂಬುದನ್ನು ಅನೇಕ ದೃಷ್ಟಾಂತಗಳ ಮೂಲಕ ಮನದಟ್ಟು ಮಾಡಿಸಿದರು. ಜಗತ್ತು ಎಂಬುದು ದೇವನ ಜಾತ್ರೆಯಾಗಿದ್ದು, ದೇವರು ನಮಗೆ ಇಲ್ಲಿ ಆಮಂತ್ರಣವನ್ನು ನೀಡಿದ್ದು, ನಾವು ಅತಿಥಿಯಾಗಿ ಬಂದು ಅತಿಥಿಯಾಗಿ ಹೋದಾಗ ಮಾತ್ರ ನಮ್ಮ ಜೀವಕ್ಕೆ ಬೆಲೆ ಬರುತ್ತದೆ ಎಂದರು. ಯಾರ ಹೃದಯದಲ್ಲಿ ಪ್ರೇಮ ತುಂಬಿದೆಯೋ, ಯಾರ ಸನಿಹ ಬಂದಾಗ ಪ್ರೇಮದ ತರಂಗಗಳು ಏಳುತ್ತವೆಯೋ ಅವರೇ ಸದ್ಗುರು. ಅಂತಹ ಸದ್ಗುರುಗಳ ದರ್ಶನವನ್ನು ಸಾವಿರಾರು ಮಂದಿಗೆ ಮಾಡಿಸಿದಂತಹ ಕಾಗಲವಾಡಿ ಗ್ರಾಮಸ್ಥರ ಆದರ್ಶ ಇತರ ಗ್ರಾಮಗಳಿಗೆ ಅನುಕರಣೀಯ ಎಂದರು.

ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ಧಲಿಂಗಶಿವಾಚಾರ್ಯಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಶ್ರೀ ಇಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಕಾರಾಪುರ ಮಠದ ಶ್ರೀ ಬಸವರಾಜಸ್ವಾಮಿಗಳು, ಹರವೆ ಮಠದ ಶ್ರೀ ಸರ್ಪಭೂಷಣಸ್ವಾಮಿಗಳು, ಮುಡಕನಪುರ ಮಠದ ಶ್ರೀ ಷಡಕ್ಷರಿ ದೇಶಿಕೇಂದ್ರಸ್ವಾಮಿಗಳು, ಮುಡಿಗುಂಡ ಮಠದ ಶ್ರೀ ಶ್ರೀಕಂಠಸ್ವಾಮಿಗಳು, ಚಾಮರಾಜನಗರ ಮಠದ ಶ್ರೀ ಚನ್ನಬಸವಸ್ವಾಮಿಗಳು, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮಿಗಳು, ಹಂಡ್ರಕಳ್ಳಿ ಮಠದ  ಶ್ರೀ ಪಂಚಾಕ್ಷರಿಸ್ವಾಮಿಗಳು, ಆಲಹಳ್ಳಿ ಮಠದ ಶ್ರೀ ಇಮ್ಮಡಿ ಬಸಪ್ಪ ಸ್ವಾಮಿಗಳು,  ಅರಕಲವಾಡಿ ಮಠದ ಶ್ರೀ ಬಸವಣ್ಣಸ್ವಾಮಿಗಳು, ಕೆಸ್ತೂರು ಮಠದ ತೋಂಟದಾರ್ಯಸ್ವಾಮಿಗಳು, ಕಿರಾಳು ಮಠದ ಶ್ರೀ ಚನ್ನಬಸವಸ್ವಾಮಿಗಳು, ನಾಗವಳ್ಳಿ ಮಠದ ಶ್ರೀ ಬಸವರಾಜಸ್ವಾಮಿಗಳು, ಕಾಗಲವಾಡಿಯ ಶ್ರೀ ವೀರಭದ್ರಸ್ವಾಮಿಗಳು ಉಪಸ್ಥಿತರಿದ್ದರು. 

ಕಾರ್ಯಕ್ರಮದ ನಿರೂಪಣೆಯನ್ನು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಸ್ವಾಗತವನ್ನು ಕೆ.ವಿ ಶಿವಸ್ವಾಮಿ, ಪ್ರಾರ್ಥನೆಯನ್ನು ಮೀನಾ ಮಹದೇವಪ್ಪ, ವಂದನಾರ್ಪಣೆಯನ್ನು ಕೆ.ಬಿ ಸ್ವಾಮಿ ನಡೆಸಿಕೊಟ್ಟರು.