ಬಸವತತ್ವ
ಬಸವನ ಬೆಳಕೆ ಎಲ್ಲಾಡಿ ಬಂದೆ
ಭಾರತವೆಲ್ಲಾ ಸುತ್ತಾಡಿ ಬಂದೆ.
ನಿಟ್ಟುಸಿರೆದೆಯನು ಬೆಳಗಿಸಿ ಬಂದೆ
ನಿರಾಸೆಯದೆಯನು ತೊಳಗಿಸಿ ಬಂದೆ
ಹೆಣ್ಣಿನ ಕಂಬನಿ ಬತ್ತಿಸ ಬಂದೆ
ಆಶಾ ಜ್ಯೋತಿಯ ಹೊತ್ತಿಸ ಬಂದೆ
ದೀನರ ಬಾಳನು ಮುಸುಕಿದ ಕಾಲವ
ಕಬಳಿಸಿ ಬಂದೆ ಧವಳಿಸಿ ಬಂದೆ
ಕನ್ನಡ ವನದಲ್ಲಿ ಕುಣಿದಾಡಿ ಬಂದೆ.
ಎಂಬ ಸಿದ್ದಯ್ಯ ಪುರಾಣಿಕ ಅವರ ಕವಿತೆ ಕೇಳುತ್ತಿದ್ದರೆ ಬಸವ ತತ್ವದ ಪರಿಚಯವಾಗುತ್ತದೆ.
12 ನೇ ಶತಮಾನದ ವರೆಗೆ ಎಲ್ಲಾ ಧಾರ್ಮಿಕ ನಾಯಕರು ಕೇವಲ ದೇವರ ಬಗ್ಗೆ ಮಾತ್ರ ಮಾತನಾಡುತ್ತಿದ್ದರು. ಆದರೆ ಬಸವಣ್ಣನವರು ಮಾನವರ ಬಗ್ಗೆ ಮಾತನಾಡಿ ಮಾನವನು ಮಹಾದೇವನಾಗಬಹುದು ಎಂಬುದನ್ನು ತೋರಿಸಿಕೊಟ್ಟರು.
ಒಬ್ಬನೇ ದೇವರು, ಒಂದೇ ವಿಶ್ವ, ಒಂದೇ ಮಾನವಕುಲ ಎಂದು ಘೋಷಣೆ ಮಾಡಿದಂತಹ ಧರ್ಮ ಯಾವುದಾದರೂ ವಿಶ್ವದಲ್ಲಿ ಇದ್ದರೆ ಅದು ಬಸವಧರ್ಮ.
ಇವನಾರವ, ಇವನಾರವ,
ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ,
ಇವನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
ಎಂಬ ವಚನದಂತೆ ಜಗತ್ತಿನ ಎಲ್ಲಾ ದೇಶಗಳ ಎಲ್ಲಾ ಜನಾಂಗಗಳನ್ನು ಎಲ್ಲಾ ವರ್ಗಗಳ ಜನರನ್ನು ಸ್ವೀಕರಿಸುವ ಅಪ್ಪಿಕೊಳ್ಳುವ ಧರ್ಮ ಅದು ಬಸವಧರ್ಮ.
ಬಸವತತ್ವದಲ್ಲಿ ಕಾಯಕ ಮತ್ತು ದಾಸೋಹ ಎರಡು ಪ್ರಮುಖ ತತ್ವಗಳು.
ಬಸವಣ್ಣನವರ ಈ ಎರಡು ತತ್ವಗಳಿಂದ ಕರ್ನಾಟಕದ ಕಲ್ಯಾಣ ವಿಶ್ವದಾದ್ಯಂತ ಪರಿಚಯವಾಯಿತು. ಈ ತತ್ವಗಳಿಂದ ಆಕರ್ಷಿತರಾಗಿ ಆಫ್ಘಾನಿಸ್ತಾನದಿಂದ ಮರುಳಶಂಕರದೇವ, ತಮಿಳುನಾಡಿನಿಂದ ಮಾದಾರ ಚೆನ್ನಯ್ಯ, ಗುಜರಾತ್ ನಿಂದ ಆದಯ್ಯ, ಮಧ್ಯಪ್ರದೇಶದಿಂದ ಡೋಹರ ಕಕ್ಕಯ್ಯ ಬಂದು ಕಲ್ಯಾಣದಲ್ಲಿ ನೆಲೆಸಿದರು.
ಬಸವತತ್ವವು ಬಸವಣ್ಣನವರು ಸ್ಥಾಪಿಸಿದ ಅನುಭವಮಂಟಪದ ಮೂಲಕ ವಿಶೇಷವಾಗಿ ಪ್ರತಿಪಾದಿಸಲ್ಪಟ್ಟಿತು. ಅಲ್ಲಮಪ್ರಭು ಅಧ್ಯಕ್ಷರಾದ ಅನುಭವಮಂಟಪದಲ್ಲಿ 770 ಅಮರಗಣಂಗಳು ಚರ್ಚೆಯಲ್ಲಿ ಭಾಗವಹಿಸಿರುವುದಕ್ಕೆ ಹಾಗೂ 1 ಲಕ್ಷದ 96 ಸಾವಿರ ಜನರು ಏಕಕಾಲದಲ್ಲಿ ದಾಸೋಹ ಮಾಡುತ್ತಿದ್ದರೆಂಬುದಕ್ಕೆ ವಚನಗಳ ಆಧಾರವಿದೆ.
ಬಸವತತ್ವದಲ್ಲಿ ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದಗಳು ಅಂಗವಾದರೆ, ಪಂಚಾರಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರಗಳು ಪ್ರಾಣವಾಗಿದ್ದು, ಷಟ್ಸ್ಥಲಗಳಾದ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಗಳು ಆತ್ಮವಾಗಿವೆ.
ಬಸವತತ್ವವನ್ನು ಆಚರಿಸುವುದರಿಂದ ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಹೆಚ್ಚು. ಎಲ್ಲರೂ ಬಸವತತ್ವವನ್ನು ಒಪ್ಪಿ ಅಪ್ಪಿಕೊಳ್ಳೋಣ ಬನ್ನಿ.
Until 12th century no religious leader spoke about human being . They only spoke about God . The only person in the world who spoke about human being and said Human being can become God was Vishwaguru Basavanna. Basava philosophy led by Basavanna and other sharanas changed the environment of the society .
Why do youths need Basava philosophy? Now both men and women have equal rights.
What is the essential of this philosophy?
If we grow tree today atleast it will longlast for 60 to 80 years and give fruits till end. Similarly following Basava philosophy will give us fruits in the form of moral values which makes us a good citizen and successful person for the society for many years and if this is followed by next generation they also get the benefit.
Basava philosophy inculcated in correct age gives us a foundation for our future . We can build a building of our wish. Mainly youths are tomorrow’s citizen and Basava philosophy followed by them make them more strong, brighter with spiritual knowledge , scientific and creative skill with mainly moral values which is essential for leading a good life.

No comments:
Post a Comment