ರುದ್ರಾಕ್ಷಿ
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಾಧನವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾಪಕ್ಷಯವು. ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ ಪಂಚಮುಖದ ರುದ್ರಾಕ್ಷಿಗಳಾದವಾಗಿ
ಅಯ್ಯಾ ಕೂಡಲಸಂಗಮದೇವಯ್ಯಾ
ಎನ್ನ ಮುಕ್ತಿಪಥಕ್ಕೆ ಶ್ರೀಮಹಾರುದ್ರಾಕ್ಷಿಯೆ ಸಾಧನವಯ್ಯಾ.
ಎಂಬಂತೆ ರುದ್ರಾಕ್ಷಿಯ ಮಹತ್ವ ಕುರಿತು ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ತಮ್ಮ ವಚನದಲ್ಲಿ ತಿಳಿಸಿದ್ದಾರೆ.
ರುದ್ರಾಕ್ಷಿ ಧಾರಣೆಯಿಂದ ಆಧ್ಯಾತ್ಮಿಕತೆ ಹೆಚ್ಚಾಗುತ್ತದೆ. ಜಪ ಮಾಡಲು ರುದ್ರಾಕ್ಷಿಯನ್ನು ಬಳಸಲಾಗುತ್ತದೆ.
What is this Rudrakshi ?
Rudrakshi is one among Ashtavarna . It is a seed of the Elaeocarpus ganitrus tree and has various benefits likely in performing pooja and also medically proved with various research that it is very helpful to cure heart diseases and mental illness. People wear this on neck and also as a bracelet which gives supernatural energy to them.
ರುದ್ರಾಕ್ಷಿಯನ್ನು ಧರಿಸುವುದರಿಂದ ಹೃದ್ರೋಗಗಳು ಮತ್ತು ಮಾನಸಿಕ ರೋಗಗಳು ಬರುವುದಿಲ್ಲವೆಂದು ಅನೇಕ ವಿಜ್ಞಾನಿಗಳು ಸಂಶೋಧನೆಯ ಮೂಲಕ ದೃಢಪಡಿಸಿದ್ದಾರೆ.
ರುದ್ರಾಕ್ಷಿಯನ್ನು ರಾತ್ರಿ ವೇಳೆ ಒಂದು ಕಪ್ಪು ನೀರಿನಲ್ಲಿ ನೆನೆಯಿಟ್ಟು ಬೆಳಗ್ಗೆ ಹೊಟ್ಟೆಗೆ ಏನು ತೆಗೆದುಕೊಳ್ಳದೆ ರುದ್ರಾಕ್ಷಿ ನೆನೆಯಿಸಿದ ನೀರನ್ನು ಕುಡಿದು ಒಂದು ಗಂಟೆ ಏನನ್ನು ತೆಗೆದುಕೊಳ್ಳದೆ ಇರಬೇಕು. ಹೀಗೆ 41 ದಿನ ತೆಗೆದುಕೊಳ್ಳುವ ಪರಿಪಾಠವಿದೆ. ಈ ಕ್ರಮ ಅನುಸರಿಸುವುದರಿಂದ ಹೃದಯಾಘಾತದಿಂದ ದೂರವಿರಲು ಸಾಧ್ಯ ಎಂದು ಅನುಭಾವಿಗಳು ಹೇಳಿದ್ದಾರೆ.
ಸಾಮಾನ್ಯವಾಗಿ ಐದು ಮುಖದ ರುದ್ರಾಕ್ಷಿಯನ್ನು ಧರಿಸಲಾಗುತ್ತದೆ. ಅದು ಪರಮಾತ್ಮನ ಸತ್, ಚಿತ್, ಆನಂದ, ನಿತ್ಯ ಮತ್ತು ಪರಿಪೂರ್ಣ ಎಂಬ ಐದು ತತ್ವಗಳನ್ನು ಸಂಕೇತಿಸುತ್ತದೆ.
ಬಸವಣ್ಣನವರು ತಮ್ಮ ಮತ್ತೊಂದು ವಚನದಲ್ಲಿ
ಅಯ್ಯಾ, ರುದ್ರಾಕ್ಷಿಯಿಂದ ಹರಿದೆನು ಭವಪಾಶಂಗಳ,
ಅಯ್ಯಾ, ರುದ್ರಾಕ್ಷಿಯಿಂದ ಮುರಿದೆನು ತನುಗುಣಾದಿಗಳ,
ಅಯ್ಯಾ, ರುದ್ರಾಕ್ಷಿಯಿಂದ ಒರೆಸಿದೆನು ಮಹಾಮಾಯೆಯ,
ಅಯ್ಯಾ, ರುದ್ರಾಕ್ಷಿಯಿಂದ ಕಳೆದೆನು ಪಂಚಮಹಾಪಾತಕವ.
ಅಯ್ಯಾ ಕೂಡಲಸಂಗಮದೇವಾ,
ಶ್ರೀಮಹಾರುದ್ರಾಕ್ಷಿಯಿಂದ ಗೆಲಿದೆನಯ್ಯಾ ಸಕಲದುರಿತಂಗಳನು.
ಎಂದು ಹೇಳಿದ್ದಾರೆ.
ಆದುದರಿಂದ ಎಲ್ಲರೂ ಎದೆಯ ಮೇಲೆ ರುದ್ರಾಕ್ಷಿಯನ್ನು ಸದಾಕಾಲ ಧರಿಸಿಕೊಂಡು ಆರೋಗ್ಯದಿಂದ ಇರೋಣ.

No comments:
Post a Comment